{"product_id":"avali-emba-maye-detective-novel-beluru-ramamurthy-kannada-book","title":"ಅವಳಿ ಎಂಬ ಮಾಯೆ","description":"\u003cp\u003eನಿರ್ಜನವಾದ ಬೀದಿ. ಸಂಜೆಗತ್ತಲು, ಒಬ್ಬ ವ್ಯಕ್ತಿ ಹಿಂದೆ ಹಿಂದೆ ತಿರುಗಿ ನೋಡುತ್ತಾ ಅನುಮಾನಾಸ್ಪದವಾಗಿ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಾನೆ.\u003c\/p\u003e\n\u003cp\u003eಅವನಿಗೆ ಗೊತ್ತಾಗದಂತೆ ಒಬ್ಬ ಹಿಂಬಾಲಿಸುತ್ತಿದ್ದಾನೆ. ಅವನ ಕೈಯಲ್ಲಿ ಪಿಸ್ತೂಲಿದೆ. ದೂರದಲ್ಲೆಲ್ಲೋ ನಾಯಿ ಬೊಗಳುತ್ತಿದೆ. ಸಣ್ಣದಾಗಿ ಮಳೆ ಬೀಳುತ್ತಿದೆ. ಮುಂದೆ ಹೋಗುತ್ತಿದ್ದ ವ್ಯಕ್ತಿ ಓಡಲು ಆರಂಭಿಸುತ್ತಾನೆ. ಹಿಂಬಾಲಿಸುತ್ತಿದ್ದವ ಕೂಡಲೇ ಗುರಿಯಿಟ್ಟು ಪಿಸ್ತೂಲಿನಿಂದ ಇನ್ನೇನು ಗುಂಡು ಹಾರಿಸಬೇಕು....\u003c\/p\u003e\n\u003cp\u003e.....ಇಲ್ಲ ಇಲ್ಲ. ಬೇಲೂರು ರಾಮಮೂರ್ತಿಯವರ ಪುಸ್ತಕದಲ್ಲಿ ಹೀಗೆಲ್ಲಾ ಆಗುವುದಿಲ್ಲ. ಕೊಲೆಯಾಗುತ್ತದೆ ನಿಜ. ಅದೂ ಹಾಡು ಹಗಲಲ್ಲೇ. ಆ ಕೊಲೆಗಾರನನ್ನು ಪತ್ತೆಹಚ್ಚಲು ಪೋಲಿಸರು ತಮ್ಮೆಲ್ಲಾ ಬುದ್ದಿ ಖರ್ಚು ಮಾಡುತ್ತಾರೆ. ಕಂಡ ಕಂಡವರ ಮೇಲೆಲ್ಲಾ ಅನುಮಾನ ಪಡುತ್ತಾರೆ. ಪ್ರತಿ ಅಧ್ಯಾಯವೂ ಆಕಸ್ಮಿಕ ತಿರುವುಗಳನ್ನು ಹೊಂದಿದೆ. ಓದುಗರು ಮುಂದಿನ ದೃಶ್ಯ ಊಹಿಸುವುದರಲ್ಲಿ ಮತ್ತೇನೋ ನಡೆದಿರುತ್ತದೆ.\u003c\/p\u003e\n\u003cp\u003eಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಈ ಮಾಯಾಜಾಲದ ಪತ್ತೇದಾರಿ ಕಾದಂಬರಿಯನ್ನು ನೀವು ಓದಿಯೇ ಸವಿಯಬೇಕು.\u003c\/p\u003e","brand":"Beluru Raamurthy","offers":[{"title":"Default Title","offer_id":47413379465475,"sku":"HB00005465","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AvaliEmbaMaye.jpg?v=1762778957","url":"https:\/\/harivubooks.com\/products\/avali-emba-maye-detective-novel-beluru-ramamurthy-kannada-book","provider":"Harivu Books","version":"1.0","type":"link"}