{"product_id":"anudinavi-osho-meditation-osho-translated-by-be-ka-murthy-eswaraiah-kannada-book","title":"ಅನುದಿನವೂ ಓಶೋ","description":"\u003cp\u003eಈ ಕೃತಿಯು 365 ಧ್ಯಾನ ಚಿಂತನೆಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಚಿಂತನೆಯು ಬದುಕಿನ ಬಗೆಗಿನ ಒಳನೋಟವನ್ನು ನೀಡುವ ಕೃತಿ ಆಗಿರುತ್ತದೆ. ಪ್ರತಿ ಚಿಂತನೆಯೂ ಅರ್ಥಪೂರ್ಣ ಹಾಗೂ ಪರಿಪೂರ್ಣವಾಗಿದೆ. ಸ್ಫೂರ್ತಿದಾಯಕವಾಗಿದೆ. ಪ್ರತಿದಿನವೂ ಈ ಕೃತಿಯಲ್ಲಿನ ಒಂದು ಚಿಂತನೆಯನ್ನು ತೆಗೆದುಕೊಂಡು ಅಭ್ಯಾಸ ಮಾಡಬಹುದು ಮತ್ತು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುವ ಕೃತಿಯಾಗಿದೆ. ಈ ಕೃತಿಯಲ್ಲಿ ಕೃತಜ್ಞತೆ, ತತ್ವಶಾಸ್ತ್ರ, ಪ್ರೀತಿ-ಪ್ರೇಮ, ಬದುಕಿನ ವಿಸ್ಮಯ, ಅಸ್ತಿತ್ವ ಮೊದಲಾದ ಚಿಂತನೆಗಳಿದ್ದು, ಇಡೀ ವರ್ಷಕ್ಕೆ ಆಗುವಷ್ಟು ಧ್ಯಾನ ಚಿಂತನೆಗಳಿದ್ದು ವರ್ಷವಿಡೀ ದೈನಂದಿನ ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡರೆ ಬದುಕಿಗೆ ಸ್ಫೂರ್ತಿದಾಯಕವಾಗಿರುತ್ತವೆ.\u003c\/p\u003e\n\u003cp\u003eಹಲವಾರು ದಶಕಗಳ ಕಾಲ ಓಶೋರವರ ಚಿಂತನೆಗಳ ಒಳನೋಟವು ಅವರ ಉಪನ್ಯಾಸಗಳಿಗೆ ಬರುತ್ತಿದ್ದ ಸತ್ಯಾನ್ವೇಷಕರನ್ನು, ಆಧ್ಯಾತ್ಮ ಚಿಂತಕರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. \"ಅನುದಿನವೂ ಓಶೋ\" ಕೃತಿಯು ವ್ಯಕ್ತಿಯೊಬ್ಬನ ದೇಹ, ಮನಸ್ಸು, ಬುದ್ದಿಗಳೊಂದಿಗೆ ಪೂರ್ಣವಾಗಿ ಬೆಳೆಯಬೇಕೆಂಬುದನ್ನು ಸೂಚಿಸುತ್ತದೆ.\u003c\/p\u003e\n\u003cp\u003eಓಶೋರವರು 20ನೇ ಶತಮಾನದ ಶ್ರೇಷ್ಠ ತತ್ವಶಾಸ್ತ್ರದ ಉಪನ್ಯಾಸಕರಾಗಿದ್ದರು. ಹಾಗೂ ಸ್ಫೂರ್ತಿದಾಯಕ ಆಧ್ಯಾತ್ಮ ಚಿಂತಕರಲ್ಲಿ, ಒಬ್ಬರಾಗಿದ್ದರು. ಅವರು ಕ್ರಾಂತಿಕಾರಕ ಚಿಂತನೆಗಳೊಂದಿಗೆ ವ್ಯಕ್ತಿಯ-ವೈಜ್ಞಾನಿಕ ಆಂತರ್ಯದ ಬೆಳವಣಿಗೆ, ಪರಿವರ್ತನೆ, ಬದಲಾವಣೆ, ಪರಿಪೂರ್ಣ ವ್ಯಕ್ತಿತ್ವಕ್ಕೆ, ಸಂಬಂಧಿಸಿದಂತೆ \"ಅನುದಿನವೂ ಓಶೋ\" ಧ್ಯಾನ ಚಿಂತನಾ ಪ್ರಬಂಧಗಳಾಗಿರುತ್ತವೆ. ಅವರ ಉಪನ್ಯಾಸಗಳು, ಭೋದನೆಗಳು ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿನ ಆಧ್ಯಾತ್ಮಿಕ, ಆಸಕ್ತ ಸತ್ಯಾನ್ವೇಷಕರ ಮೇಲೆ ಇಂದಿಗೂ ಗಾಢ ಪ್ರಭಾವ ಬೀರುತ್ತಲೇ ಇವೆ. ವಿಶ್ವದಾದ್ಯಂತ 35 ಭಾಷೆಗಳಲ್ಲಿ ಸುಮಾರು 650 ಕೃತಿಗಳು ಪ್ರಕಟವಾಗಿರುವುದು ಓಶೋರವರ ವಿಚಾರಧಾರೆಗಳಿಗೆ, ಜನಪ್ರಿಯತೆಗೆ ಇಂದೂ ಸಹ ಸಾಕ್ಷಿಯಾಗಿದೆ.\u003c\/p\u003e","brand":"Osho Translated by Be Ka Murthy Eswaraiah","offers":[{"title":"Default Title","offer_id":47607588978947,"sku":"HB0000550281","price":650.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/anudinavuoshofp.jpg?v=1767808028","url":"https:\/\/harivubooks.com\/products\/anudinavi-osho-meditation-osho-translated-by-be-ka-murthy-eswaraiah-kannada-book","provider":"Harivu Books","version":"1.0","type":"link"}