Skip to product information
1 of 1

Gururaja Kodkani

ಅಂಕಣಕ್ಕೆ ಅನುವಾದಿತ ಕತೆಗಳು

ಅಂಕಣಕ್ಕೆ ಅನುವಾದಿತ ಕತೆಗಳು

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಈ ವಾರ ನಡೆದ ರಾಜಕೀಯ ವಿದ್ಯಮಾನವೋ, ಕ್ರೀಡಾ ಜಗದ ಸಂದರ್ಭಗಳೋ ಅಥವಾ ಸಾಹಿತ್ಯಲೋಕದ ಬೆಳವಣಿಗೆಗಳ ಕುರಿತು ತನ್ನದೇ ದೃಷ್ಟಿಕೋನವನ್ನು ಅಭಿವ್ಯಕ್ತಿಸುವುದು ಅಂಕಣಕಾರನ ಸಹಜ ಶೈಲಿ, ನಾನೂ ಸಹ ಆ ಧಾಟಿಗೆ ಹೊರತೇನೂ ಆಗಿರಲಿಲ್ಲ. ಆದರೆ ಇಲ್ಲೊಂದು ಸಮಸ್ಯೆಯಿತ್ತು. ಸಾಧಾರಣವಾಗಿ ವಾರದ ನಡುವೆ ಏನಾದರೂ ರಾಜಕೀಯ ವಿದ್ಯಮಾನಗಳು ನಡೆದೇ ಇರುತ್ತಿದ್ದವು. ಅದಿಲ್ಲವಾದರೆ ಕ್ರೀಡಾಲೋಕದಲ್ಲೊಂದು ಬೆಳವಣಿಗೆ, ಸಾಹಿತ್ಯಲೋಕದಲ್ಲೊಂದು ಹೊಸ ಪ್ರಕರಣ ಹೀಗೆ ಏನಾದರೊಂದು ವಿಷಯ ನನ್ನ ಅಂಕಣಕ್ಕೆ ವಸ್ತುವಾಗುತ್ತಿತ್ತು. ಆದರೆ ಅಪರೂಪಕ್ಕೊಮ್ಮೆ ವಾರವೆನ್ನುವ ಏಳು ದಿನಗಳ ಅವಧಿಯಲ್ಲಿ ಏನೆಂದರೆ ಏನೂ ಸಂಭವಿಸುತ್ತಿರಲಿಲ್ಲ. ಅಕ್ಷರಶಃ ಖಾಲಿ ಖಾಲಿ ಸ್ತಬ್ಧ ವಾರ ಆಗ ನನಗೆ ನಿಜಕ್ಕೂ ಗಲಿಬಿಲಿಯಾಗುತ್ತಿತ್ತು. ಏನು ಬರೆಯುವುದು ಎನ್ನುವುದೇ ಅರ್ಥವಾಗದ ಗೊಂದಲ, ಆ ಸಮಯಕ್ಕೆ ನನಗೆ ಆಧಾರವಾಗಿದ್ದು ಇಂಗ್ಲಿಷ್ ಸಣ್ಣ ಕಥೆಗಳು. ಮೇಲ್ನೋಟಕ್ಕೆ ತುಂಬಾ ಸುಲಭವೆನ್ನಿಸುವ, ಯಾರು ಬೇಕಾದರೂ ಮಾಡಿಬಿಡಬಹುದು ಎನ್ನುವ ಭ್ರಮೆ ಹುಟ್ಟಿಸುವ ಅನುವಾದವೆನ್ನುವ ಪ್ರಕ್ರಿಯೆ ಎಂಥ ಕ್ಲಿಷ್ಟಕರ ವಿಷಯ ಎನ್ನುವುದು ಅರ್ಥವಾಗಿದ್ದು ಆಗಲೇ, ಚಂದದ ಭಾವವಿರುವ ಅದೆಷ್ಟೋ ಸರಳಾತಿಸರಳ ಆಂಗ್ಲದ ಸಾಲುಗಳನ್ನು ನಾನು ಯಥಾವತ್ತಾಗಿ ಕನ್ನಡಕ್ಕೆ ತಂದಾಗ ಅವು ತೀರ ನೀರಸ, ಅರ್ಥವಿಲ್ಲದ ಸಾಲುಗಳಾಗಿ ಕಾಣುತಿದ್ದವು. ಮೊದಲ ಒಂದೆರಡು ಕತೆಗಳ ಅನುವಾದದ ಕಾಲಕ್ಕೆ ನಾನು ಹೆಣಗಾಡಿಹೋಗಿದ್ದೆ. ನಂತರದ ದಿನಗಳಲ್ಲಿ ಅನುವಾದದ ವ್ಯಾಕರಣ ನಿಧಾನಕ್ಕೆ ಅರಿವಾಗತೊಡಗಿತ್ತು. ಅನುವಾದದ ಭಾಷೆ ಅರ್ಥವಾದಂತೆಲ್ಲಾ ಅನುವಾದ ಸರಳವೆನ್ನಿಸತೊಡಗಿತ್ತು. ಈಗ ನನಗೆ ಅನುವಾದವೆಂದರೆ ಬಲು ಪ್ರಿಯ ಬರವಣಿಗೆಯ ಪ್ರಕಾರ.

'ಸರ್ ನಿಮ್ಮ ಕಥೆಗಳನ್ನು ನಮಗೆ ಕೊಡಿ, ಪ್ರಕಟಿಸುತ್ತೇವೆ' ಎಂದು ಸಾಧನಾ ಪ್ರಕಾಶನದ ಪ್ರಕಾಶಕರು ಕೇಳುವ ಹೊತ್ತಿಗೆ ಮೊದಲ ಬಾರಿಗೆ ಅನುವಾದಿತ ಕತೆಗಳ ಲೆಕ್ಕಕ್ಕಿಳಿದಿದ್ದೆ. ಮೊದಲಿಗೆ ನನ್ನ ಕತೆಗಳ ಬಗ್ಗೆ ಆಸಕ್ತಿ ತೋರಿಸುತ್ತಿರುವ ಅವರಿಗೆ ಮತ್ತು ಪುಸ್ತಕದ ಸೃಷ್ಟಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣೀಕರ್ತರಾದ ಎಲ್ಲರಿಗೂ ನನ್ನದೊಂದು ಹೃತ್ತೂರ್ವಕ ವಂದನೆಗಳು.

ಇಲ್ಲಿ ಒಟ್ಟು ಹದಿನೇಳು ಕತೆಗಳಿವೆ. ವಿಶ್ವಸಾಹಿತ್ಯದ ಸಾರ್ವಕಾಲಿಕ ಕತೆಗಾರರಾದ ಚೆಕಾಫ್, ಹೆಮ್ಮಿಂಗ್, ಓಹೆನ್ರಿಯ ಕತೆಗಳೂ ಸೇರಿದಂತೆ ಭಾರತೀಯ ಬರಹಗಾರರಾದ ರಸ್ಕಿನ್ ಬಾಂಡ್‌ ಕತೆಗಳೂ ಸೇರಿವೆ.ಕೆಲವು ಅಷ್ಟೇನೂ ಪ್ರಸಿದ್ಧರಲ್ಲದ ವಿದೇಶಿ ಕತೆಗಾರರ ಕತೆಯ ಅನುವಾದಗಳಿವೆ. ಸುಮ್ಮನೆ ಓದಿಕೊಳ್ಳಿ. ಓದಿದ ಕತೆ ನಿಮಗಿಷ್ಟವಾದರೆ, ಅದರಲ್ಲೊಂದು ಭಾವ ನಿಮಗೆ ಇಷ್ಟವಾದರೆ ಬರಹಗಾರನಾಗಿ ನನ್ನ ಬರವಣಿಗೆ ಸಾರ್ಥಕವಾದೀತು.

-ಗುರುರಾಜ ಕೊಡ್ಕಣಿ,ಯಲ್ಲಾಪುರ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)