{"product_id":"ammacchiyemba-nenapu-vaidehi-stories-kannada-book","title":"ಅಮ್ಮಚ್ಚಿಯೆಂಬ ನೆನಪು","description":"\u003cp\u003eವೈದೇಹಿಯವರ ಕಥೆ – `ಅಮ್ಮಚ್ಚಿಯೆಂಬ ನೆನಪು’ – ಒಬ್ಬ ತಂದೆಯಿಲ್ಲದ ಎಳೆಯ ಹುಡುಗಿ ಅಮ್ಮಚ್ಚಿಯ ಕುರಿತದ್ದು. ಆಕೆ ಬಂಡಾಯದ ಅರಿವನ್ನು ಒಳಗಿಟ್ಟುಕೊಂಡಿರುವವಳು; ಗಟ್ಟಿಯಾದ ವೈಯಕ್ತಿಕತೆಯಿರುವವಳು. ವೆಂಕಪ್ಪಯ್ಯನಿಂದ ಅತ್ಯಾಚಾರಕ್ಕೂ ದಮನಕ್ಕೂ ಒಳಗಾಗಿ ಆಕೆ ಆತನನ್ನು ಒತ್ತಾಯದಿಂದ ಮದುವೆಯಾಗಿದ್ದಾಳೆ. ಅಮ್ಮಚ್ಚಿಗಿಂತ ಕಿರಿಯಳಾದ ಮತ್ತು ಆಕೆಯ ಅಂತ:ಶಕ್ತಿಯನ್ನು ಮೆಚ್ಚುವ ಆಕೆಯ ಗೆಳತಿ ಇಲ್ಲಿ ಈ ಕಥೆಯನ್ನು ವಸ್ತುನಿಷ್ಠವಾಗಿ ಹೇಳತೊಡಗಿದ್ದಾಳೆ. ಈ ಕಥೆಯಲ್ಲಿ ಪ್ರೌಢವಾದೊಂದು ಕಾಲ್ಪನಿಕತೆಯಿದೆ. ಗಟ್ಟಿಯಾದ ಹಾಸ್ಯಪ್ರಜ್ಞೆ ಉದ್ದಕ್ಕೂ ಕೆಲಸ ಮಾಡಿದೆ. ಸ್ತ್ರೀವಾದೀ ಧೋರಣೆ ಎಂಬುದು ಇಲ್ಲಿ ಕಥನದ ನೇಯ್ಗೆಯಲ್ಲಿ ಮತ್ತು ಕೇಂದ್ರ ಪಾತ್ರದ ನಿರೂಪಣೆಯಲ್ಲೇ ಅಂತರ್ಗತವಾಗಿದ್ದು ಎಲ್ಲೂ ಅದು ಬುದ್ಧಿಪೂರ್ವಕವಾಗಿ ಮೇಲಿನಿಂದ ಸೇರಿಸಿದಂತೆ ಅನ್ನಿಸುವುದಿಲ್ಲ.\u003c\/p\u003e\n\u003cp\u003e\u003cstrong\u003eಶಾಂತಿನಾಥ ದೇಸಾಯಿ\u003c\/strong\u003e\u003c\/p\u003e","brand":"Vaidehi","offers":[{"title":"Default Title","offer_id":47823988588803,"sku":"HB00006703","price":245.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Ammacchiyemba-Nenapu-2024.jpg?v=1772874650","url":"https:\/\/harivubooks.com\/products\/ammacchiyemba-nenapu-vaidehi-stories-kannada-book","provider":"Harivu Books","version":"1.0","type":"link"}