{"product_id":"alemariya-antharanga-travelogue-shridhar-s-kannada-book","title":"ಅಲೆಮಾರಿಯ ಅಂತರಂಗ","description":"\u003cp\u003eಕೃತಕೃತ್ಯರು\u003c\/p\u003e\n\u003cp\u003eಶ್ರೀಮತಿ ರತ್ನರಾಮದಾಸ್ರವರು ಸಂಪ್ರದಾಯಸ್ಥ ಮನೆತನದಿಂದ ಬಂದ ಸದ್ಗ್ರಹಿಣಿ. ಇವರು ಈಗ 75 ಸಂವತ್ಸರಗಳನ್ನು ಕಂಡು, ಜೀವನದಲ್ಲಿ ಕಷ್ಟ-ಸುಖಗಳನ್ನು ಸರಿಸಮಾನವಾಗಿ ಅನುಭವಿಸಿ ಸಾರ್ಥಕ ಬದುಕನ್ನು ಕಂಡು ಕೊಂಡವರು.\u003c\/p\u003e\n\u003cp\u003eಪತಿಗೆ ತಕ್ಕ ಸದ್ಗ್ರಹಸ್ತ ಪತ್ನಿಯಾಗಿ, ಮಕ್ಕಳಿಗೆ ವಾತ್ಸಲ್ಯಮಯಿ ತಾಯಿಯಾಗಿ, ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾದ ಸಂಸ್ಕಾರಗಳನ್ನು ನೀಡಿ, ಅವರನ್ನು ತಿದ್ದಿ-ತೀಡಿ, ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಸುಸಂಸ್ಕೃತರನ್ನಾಗಿ ಮಾಡಿದ ಮೊದಲ ಗುರುವಾಗಿದ್ದಾರೆ.\u003c\/p\u003e\n\u003cp\u003eಎಷ್ಟೋ ವರ್ಷಗಳಿಂದ ಪರಿತಪಿಸುತ್ತಿದ್ದ ಸಾಹಿತ್ಯಾಭಿರುಚಿಯು ತಮ್ಮ 70ನೇ ವಯಸ್ಸಿನಲ್ಲಿ ಭುಗಿಲೆಬ್ಬಿದುದು ಕಾಕತಾಳೀಯ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡಿ ತಮ್ಮ ಅನುಭವ – ಸಂಗ್ರಹಗಳಿಂದ ಕ್ರೋಡೀಕರಿಸಿ ನಿತ್ಯ ಅಡುಗೆಗೆ ಸಂಬಂದಿತ \"ಪಾಕಶಾಸ್ತ್ರ\" ಎಂಬ ಕೃತಿಯನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸಿ ಅದರಲ್ಲಿ ಸಫಲರಾಗಿ-ಯಶಸ್ವಿಯಾಗಿದ್ದಾರೆ.\u003c\/p\u003e\n\u003cp\u003eಯಾವುದೇ ಕ್ಲಿಷ್ಟ ಪದಗಳನ್ನು-ಶಬ್ದಗಳನ್ನು ಎಲ್ಲಿಯೂ ಬಳಸದೇ ಅತ್ಯಂತ ಸರಳವಾಗಿ ನೇರವಾಗಿ ಎಲ್ಲರ ಮನಸ್ಸಿಗೆ ತಲುಪುವಂತೆ ಕೃತಿಯನ್ನು ರಚಿಸಿರುವ ಶ್ರೀಮತಿಯವರು ತಮ್ಮ ಮೊದಲನೇ ಪ್ರಯತ್ನದಲ್ಲಿಯೇ ಓದುಗರ ಮೆಚ್ಚುಗೆಗೆ ಪಾತ್ರರಾಗುವುದರಲ್ಲಿ ಸಂಶಯವೇ ಇಲ್ಲ.\u003c\/p\u003e\n\u003cp\u003e\"ಪಾಕಶಾಸ್ತ್ರ\"- ಪಾರಂಪರಿಕ ಸವಿರುಚಿಯ ಸಸ್ಯಹಾರಿ ಸಾಂಪ್ರದಾಯಿಕ ಸರಳ ಅಡುಗೆಗಳಿಂದ ಕೂಡಿರುವ ಈ ಕೃತಿಯಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಸಾಯಂಕಾಲದ ತಿಂಡಿ, ಪಾನೀಯಗಳು, ವಿಶೇಷ ಭಕ್ಷಗಳು ಹಾಗೂ ರಾತ್ರಿಯ ಭೋಜನಗಳಿಗನುಸಾರವಾಗಿ ವಿವಿಧ ರೀತಿಯ ಹತ್ತು-ಹಲವು ಬಗೆಗಳ ಅಡುಗೆಗಳ ವಿಧಾನಗಳನ್ನು ಪರಿಚಯಿಸಿ ಪಾಕಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ.\u003c\/p\u003e\n\u003cp\u003eಗೃಹಿಣಿಯಿಂದಾದಿಯಾಗಿ ಎಲ್ಲ ವಯೋಮಾನದವರಿಗೂ ಪಾಕ ಪ್ರವೀಣರಿಗೂ ಉಪಯುಕ್ತವಾಗಿರುವ ಈ ಪುಸ್ತಕವನ್ನು ಆಸಕ್ತರು ಕೊಂಡು ಅಕ್ಕರೆಯಿಂದ ಸ್ವೀಕರಿಸಿ ಪ್ರಯೋಜವನ್ನು ಪಡೆದಾಗ ಕೃತಿಕಾರರ ಶ್ರಮವು ಸಾರ್ಥಕಗೊಳ್ಳುತ್ತದೆ.\u003c\/p\u003e\n\u003cp\u003eಅತ್ಯಂತ ಅಚ್ಚುಕಟ್ಟಾಗಿ ಈ ಬೃಹತ್ ಕೃತಿಯನ್ನು ರಚಿಸಿ-ಪ್ರಕಾಶಿಸಿ ಲೋಕಾರ್ಪಣೆ ಮಾಡುತ್ತಿರುವ ಶ್ರೀಮತಿ ರತ್ನರಾಮದಾಸ್ರವರು ಅಭಿನಂದನಾರ್ಹರು.\u003c\/p\u003e\n\u003cp\u003e-ಕೆ.ಸಿ. ಪ್ರಭಾಕರ್\u003c\/p\u003e","brand":"Shridhar. S","offers":[{"title":"Default Title","offer_id":47400085684483,"sku":"HB00005450","price":165.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AlemariyaAntharanga_8808f92f-2427-48d1-a96f-b5f1eb0f65c0.jpg?v=1762419712","url":"https:\/\/harivubooks.com\/products\/alemariya-antharanga-travelogue-shridhar-s-kannada-book","provider":"Harivu Books","version":"1.0","type":"link"}