ಸತೀಶ್ ಶೆಟ್ಟಿ ವಕ್ವಾಡಿ
Publisher:
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
Couldn't load pickup availability
ಕುಂದಾಪುರದ ಪ್ರಾಂತ್ಯದಿಂದ ಬಂದ, ಆ ಪರಿಸರದ ಕತೆಗಳನ್ನೇ ಹೆಚ್ಚು ಬರೆದಿರುವ, ಗ್ರಾಮೀಣ ಭಾಗವನ್ನು ಸೂಕ್ಷ್ಮವಾಗಿ ಹಿಡಿದಿಡುವ ಸತೀಶ್ ಶೆಟ್ಟಿ, ಸಂಕಲನದ ಒಂದಿಲ್ಲೊಂದು ಕತೆಯಲ್ಲಿ ಮನುಷ್ಯನ ಪಾಪಪ್ರಜ್ಞೆಯನ್ನು ತಂದಿರಿಸುತ್ತಾ ಹೋಗುತ್ತಾರೆ. ಭಿನ್ನಕೋಮಿನ ಕತೆಯನ್ನು ಸಾಮಾಜಿಕ ಪ್ಲಾಟ್‍ಫಾರ್ಮ್‌ನ ಮೇಲಿಡುವ ‘ಬಣ್ಣದ ನೆರಳು’, ಪರಂಪರೆಯನ್ನು ಬಿಗಿದಪ್ಪಿಕೊಂಡು ನಿಲ್ಲಬೇಕಾ, ಆಧುನಿಕತೆಯನ್ನು ಬರಮಾಡಿಕೊಳ್ಳಬೇಕಾ ಎನ್ನುವ ಅಭಿವೃದ್ಧಿ ಬಗೆಗಿನ ಪಾಪಪ್ರಜ್ಞೆಗೆ ಹಚ್ಚುವ ‘ಅಜ್ಜ ನೆಟ್ಟ ಹಲಸಿನ ಮರ’- ಕತೆಗಳು ‘ಗಿಲ್ಟ್’ ಅನ್ನುವ ಕುರಸಾವಾ ಮಾತುಗಳಿಗೆ ಪುರಾವೆಯೆನ್ನುವಂತೆ ಕೈಗೆ ಸಿಕ್ಕವು. ಕಥೆಗಾರರ ಒಟ್ಟು ಕಥಾಪ್ರಜ್ಞೆಯಲ್ಲಿ ಈ ಗಿಲ್ಟ್ ಒಂದಲ್ಲಾ ಒಂದು ಬಗೆಯಲ್ಲಿ ಸಿಗುತ್ತಲೇ ಹೋಗುತ್ತವೆ.
