{"product_id":"aero-purana-articles-yogindra-maravanthe-kannada-book","title":"ಏರೋ ಪುರಾಣ","description":"\u003cp\u003eಒಂದು ಆಕಾಶ ಹಲವು ಏಣಿಗಳು\u003c\/p\u003e\n\u003cp\u003eಆಕಾಶದಲ್ಲಿ ಈಗಷ್ಟೇ ಹಾರುತ್ತಿರುವ ಹಕ್ಕಿಯನ್ನ ಕಂಡರೆ ಅದರ ಬಣ್ಣವೋ ವೇಗವೋ ಆಕಾರವೋ ಕೂಗೋ ಅಥವಾ ಬಾಯಲ್ಲಿ ಕಚ್ಚಿಗೊಂಡಿರುವ ಆಹಾರವೋ ಗಮನಕ್ಕೆ ಬರಬಹುದು. ಹಾಗಂತ ಹಕ್ಕಿ ಹೇಗೆ ಹಾರುತ್ತಿದೆ. ಬಾನಿನಲ್ಲಿ ಯಾಕೆ ತೇಲುತ್ತಿದೆ ಎನ್ನುವ ವಿಷಯಗಳು ಯಾವ ಹೊಸ ಕುತೂಹಲವನ್ನೂ ಹುಟ್ಟಿಸಲಿಕ್ಕಿಲ್ಲ. ಹಕ್ಕಿಗಳ ಹಾರಾಟ ಚೋದ್ಯ ಎನಿಸುವುದು ನಿಂತು ಹಲವು ವರುಷಗಳು ದಶಕಗಳು ಕಳೆದವು. ಯಾಕೆಂದರೆ ಈ ಕಾಲದಲ್ಲಿ ಹಾರುವ ಸಾಮರ್ಥ್ಯ ಇರುವುದು ಬರೇ ಹಕ್ಕಿಗಳಿಗೆ ಮಾತ್ರ ಅಲ್ಲ. ಈ ಹಾರಾಟ ಎನ್ನುವ ವಿಶಿಷ್ಟ ಮಾಯಾ ವಿದ್ಯೆಯನ್ನು ಇದೀಗ ನಾವೂ ಕರಗತಮಾಡಿಕೊಂಡಾಗಿದೆ...\u003c\/p\u003e\n\u003cp\u003eವಿಮಾನವೊಂದರ ಕೊನೆಯ ದಿನಗಳು\u003c\/p\u003e\n\u003cp\u003e... ವಿಮಾನವೊಂದು ಜಗತ್ತಿನ ಯಾವ ಮೂಲೆಯಲ್ಲೇ ಹಾರುತ್ತಿರಲಿ ಇಳಿಯುತ್ತಿರಲಿ ಮತ್ತೆ ಅದು ಯಾವುದೇ ದೇಶದ ವಿಮಾನವೇ ಆಗಿರಲಿ ಅದು ತನ್ನ ಕೊನೆಯ ಹಾರಾಟವನ್ನು ನಡೆಸುವುದು ತನ್ನ ನಿವೃತ್ತ ಬದುಕನ್ನು ಕಳೆಯಬೇಕಾದಲ್ಲಿಗೆ. ವಿಮಾನಗಳ ಈ ಅವಸ್ಥೆಗೆ ನೀವು ವಾನಪ್ರಸ್ಥ ಎಂದು ಬೇಕಾದರೂ ಕರೆಯಿರಿ ಅಥವಾ ವೃದ್ಧಾಶ್ರಮವಾಸ ಎಂದಾದರೂ ಹೆಸರಿಡಿ, ಅಡ್ಡಿ ಇಲ್ಲ. ಆದರೆ ವಿಮಾನಗಳು ನಿವೃತ್ತಿಯಾಗಿ ಕೊನೆಗೆ ಇಳಿದು ನಿಲ್ಲುವ ಜಾಗಕ್ಕೆ ಬ್ರಿಟಿಷರ ಇಂಗ್ಲಿಷಿನಲ್ಲಿ \"ವಿಮಾನ ಸ್ಮಶಾನ\" ಎಂದು ಕರೆಯುತ್ತಾರೆ (Aircraft Graveyard). ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ವಿಮಾನಗಳ ಸಣ್ಣ ಸಣ್ಣ ಸ್ಮಶಾನಗಳು ಇದ್ದರೂ, ಜಗತ್ತಿನ ಅತಿ ದೊಡ್ಡ \"ವಿಮಾನ ಮಸಣ\" ಇರುವುದು... \u003c\/p\u003e","brand":"Yogidra Maravanthe","offers":[{"title":"Default Title","offer_id":47684111106307,"sku":"HB00005503238","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AeroPurana.jpg?v=1769428470","url":"https:\/\/harivubooks.com\/products\/aero-purana-articles-yogindra-maravanthe-kannada-book","provider":"Harivu Books","version":"1.0","type":"link"}