{"product_id":"adbhutaramayanam-religious-kannada-book","title":"ಅದ್ಭುತರಾಮಾಯಣಂ","description":"27 ನಕ್ಷತ್ರಗಳಂತೆ, ಶ್ರೀ ಕೃಷ್ಣನ ಗೀತೆಯಲ್ಲಿ ಅಭಿವ್ಯಕ್ತವಾಗಿರುವ 27 ನಾಮಗಳಂತೆ, ವಿವೇಕ ಚಿಂತಾಮಣಿಯಲ್ಲಿ ನಿರೂಪಿತವಾಗಿರುವ 27 ಯೋಗಗಳಂತೆ, 27 ಸರ್ಗಗಳಿಂದ ಕೂಡಿರುವ ಗ್ರಂಥವೇ ಅದ್ಭುತ ರಾಮಾಯಣ. ಈ ಅದ್ಭುತರಾಮಾಯಣದ ಕಥೆಯ ಸೂಕ್ಷ್ಮ ಪರಿಚಯದೊಂದಿಗೆ ಬೇಲದಕೆರೆ ಸೂರ್ಯನಾರಾಯಣಶಾಸ್ತ್ರಿಗಳು ಕನ್ನಡ ಮತ್ತು ಸಂಸ್ಕೃತ ಉಭಯ ಭಾಷಾ ಪಾಂಡಿತ್ಯದಿಂದ 1946ರಲ್ಲಿ ಸಮರ್ಥವಾಗಿ ಅನುವಾದ ಮಾಡಿದ್ದರು. ಈಗ ಅದು ಮರುಮುದ್ರಣವನ್ನು ಕಾಣುತ್ತಿರುವುದು ಸುತ್ಯರ್ಹ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಗ್ರಂಥವು ನಾರಾಯಣ ನಮಸ್ಕಾರ, ವಾಲ್ಮೀಕಿ ವಂದನೆ, ರಾಮ ವಂದನೆ ಎಂಬ ಮೂರು ಮಂಗಳ ಶ್ಲೋಕಗಳಿಂದ ಪ್ರಾರಂಭವಾಗುತ್ತದೆ. ಭಾರದ್ವಾಜ ಹಾಗೂ ವಾಲ್ಮೀಕಿ ಸಂವಾದ ರೂಪದಿಂದ ಈ ಕೃತಿ ಪ್ರಾರಂಭವಾಗುತ್ತದೆ. ಭಾರದ್ವಾಜರು ವಾಲ್ಮೀಕಿಯನ್ನು ಪ್ರಶ್ನಿಸುತ್ತಾರೆ, “ದೇವಲೋಕದಲ್ಲಿ ಶತಕೋಟಿ ರಾಮಾಯಣ ಇದೆಯೆಂದು ಕೇಳಲ್ಪಟ್ಟಿರುವೆ. ಈ ಶತಕೋಟಿ ರಾಮಾಯಣದಲ್ಲಿ ಏನಿದೆ?” ಅದಕ್ಕೆ ಉತ್ತರವಾಗಿ ವಾಲ್ಮೀಕಿಗಳು ಹೇಳುತ್ತಾರೆ, “ಮನುಷ್ಯ ಲೋಕದಲ್ಲಿರುವ ರಾಮಾಯಣದಲ್ಲಿ ಮನುಷ್ಯರಿಗೆ ರಾಮಚರಿತ್ರೆಯ ವರ್ಣನೆಯಿದೆ. ಅಲ್ಲಿ ಸೀತೆಯ ಅನುಗುಣವಾದ ಮಹಿಮಾಸಾರವನ್ನು ಅತಿಶಯವಾಗಿ ಹೇಳಿಲ್ಲ. ಆದರೆ ಇಲ್ಲಿ ಸೀತೆಯು ಕಾಳಿಯ ರೂಪವನ್ನು ಧರಿಸಿರುವುದೇ ಅತಿಶಯ.”\u003cbr data-mce-fragment=\"1\"\u003e\u003cbr data-mce-fragment=\"1\"\u003eಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್ (ಮುನ್ನುಡಿಯಿಂದ)","brand":"Beladakere Suryanarayanashastri","offers":[{"title":"Default Title","offer_id":43523125772547,"sku":"HB00003690","price":500.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_481bd71e-d92e-4f23-83af-b7510658ec2a.jpg?v=1668516068","url":"https:\/\/harivubooks.com\/products\/adbhutaramayanam-religious-kannada-book","provider":"Harivu Books","version":"1.0","type":"link"}