Skip to product information
1 of 1

ವಿರೂಪಾಕ್ಷ ಬೆಳವಾಡಿ

ಆತ್ಮದರ್ಶನ

ಆತ್ಮದರ್ಶನ

Publisher: ಸಾಹಿತ್ಯ ಲೋಕ ಪ್ರಕಾಶನ

Regular price Rs. 180.00
Regular price Sale price Rs. 180.00
Sale Sold out
Shipping calculated at checkout.
ಶ್ರೀ ವಿರೂಪಾಕ್ಷ ಬೆಳವಾಡಿಯವರು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯವರು ಸುಮಾರು 25 ವರ್ಷಗಳಿಂದ ಯೋಗಕ್ಷೇತ್ರದಲ್ಲಿದ್ದು ನಾಡಿನಾದ್ಯಂತ ಯೋಗದ ಮೂಲಕ ಆರೋಗ್ಯವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಪ್ರಸ್ತುತ ಇವರು ಯೋಗಕ್ಷೇಮ ಎಂಬ ಸಂಸ್ಥೆಯ ಮೂಲಕ ಯೋಗ ಶಿಬಿರಗಳನ್ನು ನಡೆಸುವುದಲ್ಲದೆ ಹಲವಾರು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. ಇವರು ವಿಜಯಕರ್ನಾಟಕ ಪತ್ರಿಕೆಯಲ್ಲಿ "ಡೈಲಿಯೋಗ" ಎಂಬ ಹೆಸರಿನಲ್ಲಿ ಯೋಗಕ್ಕೆ ಸಂಬಂಧಿಸಿದಂತೆ 650ಕ್ಕೂ ಹೆಚ್ಚು ಅಂಕಣಗಳನ್ನು ಬರೆದಿದ್ದಾರೆ. ಅಂಕಣಗಳು ವಿರೂಪಾಕ್ಷ ಬೆಳವಾಡಿಯವರಿಗೆ ಖ್ಯಾತಿ ತಂದುಕೊಟ್ಟಿವೆ. ಇವರ ಯೋಗಸಾಧನೆಯನ್ನು ಗುರುತಿಸಿ 2018ರಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಹಾಗೂ ನಾಡ ಭೂಷಣ ಪ್ರಶಸ್ತಿ ಲಭಿಸಿದೆ.

ವಿರೂಪಾಕ್ಷ ಬೆಳವಾಡಿಯವರು ಈವರೆಗೆ ಸೂರ್ಯೋಪಾಸನೆ, ಸಂಸ್ಕಾರ ಸಿಂಚನ, ಜನನಿ, ಸಾಧನಗಳೊಂದಿಗೆ ಯೋಗಸಾಧನೆ ಎಂಬ 7 ಕೃತಿಗಳನ್ನು ರಚಿಸಿದ್ದಾರೆ. ಈಗ ಸಾಹಿತ್ಯಲೋಕ ಪಬ್ಲಿಕೇಷನ್ಸ್ ನಿಂದ ಸಾವಿರದ ಸತ್ಯ, ಜನನಿ, ಆತ್ಮದರ್ಶನ ಎಂಬ 3 ಪುಸ್ತಕಗಳು ಪ್ರಕಟವಾಗುತ್ತಿದೆ. ಇನ್ನೂ ಇಂತಹ ಹಲವಾರು ಉಪಯುಕ್ತ ಕೃತಿಗಳು ವಿರೂಪಾಕ್ಷ ಬೆಳವಾಡಿಯವರಿಂದ ರಚನೆಯಾಗಲಿ ಎಂದು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮೂಲಕ ಹಾರೈಸುತ್ತೇವೆ. ಸರಳ ಸಜ್ಜನಿಕೆಯಿಂದ ಕೂಡಿರುವ ಇವರ ಪುಸ್ತಕಗಳು ಸಾಹಿತ್ಯಲೋಕ ಪಬ್ಲಿಕೇಷನ್ಸ್‌ನಿಂದ ಪ್ರಕಟವಾಗುತ್ತಿರುವುದು ನಮಗೆ ಹೆಮ್ಮೆಯ ಸಂಗತಿ.

-ಪ್ರಕಾಶಕರು (ಸಾಹಿತ್ಯಲೋಕ ಪಬ್ಲಿಕೇಷನ್ಸ್)
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)