{"product_id":"aaste-novel-vinod-k-l-kannada-book","title":"ಆಸ್ಥೆ","description":"\u003cp\u003e\"ತ್ಯಾಪೆ ಹಾಕಿರುವ ಸೀರೆಯೆ... ನನ್ನ ಮಾನ ಮುಚ್ಚಲು ಆಸರೆಯು. మాన మాదరు జింతేయిల్ల, ಕಣ್ಣಿಲ್ಲದ ಸಮಾಜದೆದುರು ಬೆತ್ತಲೆಯಾದರು ಪರವಾಗಿಲ್ಲ... ನಿನ್ನೊಲುಮೆಯನ್ನು ಹೊದಿಕೆಯನ್ನಾಗಿ ನೀಡೆನಗೆ.\"\u003c\/p\u003e\n\u003cp\u003eವಿನೋದ್ ಕೆ ಎಲ್.\u003c\/p\u003e\n\u003cp\u003eಅಪ್ಪಿದರೆ ಸುಖ ಕೊಡದ, ಮೆಲ್ಲಿದರೆ ಸವಿ ಇರದ, ಒಲವಿಲ್ಲದ ಸ್ಪರ್ಶ, ಪ್ರೀತಿ ಇಲ್ಲದ ನೋಟ, ಚಿತ್ರದಲ್ಲಿರುವ ರೂಪದಂತೆ ಈ ಕಾದಂಬರಿಯಲ್ಲಿ ಬರುವ ಪಾತ್ರದಾರಿ ಪ್ರೇಮಳ ಬದುಕು.\u003c\/p\u003e\n\u003cp\u003eನವ ಸಾಹಿತಿ ವಿನೋದ್ ಕೆ ಎಲ್ ಅವರ ಚೊಚ್ಚಲ ಕಾದಂಬರಿ ಆಯ್ಕೆಯ ವಸ್ತು ವಿಷಯವೆ ಹೆಣ್ಣು. ಹೆಣ್ಣಿನ ಮನಸ್ಸನ್ನು ತಟ್ಟಿ, ಅವಳೊಳಗಿನ ಮುಕ್ಕೋಟಿ ಭಾವನೆಗಳೊಂದಿಗೆ ಜೀವಿಸಿ ಅಕ್ಷರ ರೂಪಕ್ಕೆ ಇಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಲೇಖಕರು ಈ ಕಾದಂಬರಿಯಲ್ಲಿ ಅದನ್ನು ಸಾಧ್ಯವಾಗಿಸಿದ್ದಾರೆ ಎಂಬುದೇ ವಿಶೇಷ.\u003c\/p\u003e\n\u003cp\u003eಇಲ್ಲಿ ಹೆಣ್ಣಿನ ಬಯಕೆಗಳಿವೆ, ಪ್ರೇಮವಿದೆ, ಕಾಮವಿದೆ, ಅರ್ಥನಾದವಿದೆ, ಬೆತ್ತಲು ಮನಸ್ಸಿದೆ, ತೊಳಲಾಟವಿದೆ, ಖುಷಿಗಳ ಹಸಿವಿದೆ, ವಾಸ್ತವದ ಬದುಕಿದೆ, ತಾಯ್ತನದ ಕೊರಗಿದೆ- ಒಲವಿದೆ. ಹಾಗಾಗಿ \"ಆಸ್ಥೆ\" ಅತ್ಯಂತ ಆಪ್ತವಾಗುತ್ತದೆ. ಸೂಕ್ಷ್ಮ ವಿಚಾರಗಳನ್ನು ಅಷ್ಟೇ ನಾಜೂಕಾಗಿ ಬಿಡಿಬಿಡಿಯಾಗಿ ಓದುಗನ ಮುಂದೆ ಬಿಡಿಸಿಡುವ ಜಾಣ್ನೆಯ ಜೊತೆಗೆ ಬರವಣಿಗೆಯಲ್ಲಿ ಅವರಿಗೆ ಇರುವ ಹಿಡಿತ ಸೊಗಸಾಗಿದೆ.\u003c\/p\u003e\n\u003cp\u003eವಿನೋದ್ ಕೆ ಎಲ್ ಬರಹಗಾರನಾಗಿ ಅಲ್ಲದೆ ಕಲಾವಿದನಾಗಿಯೂ ಬೆಳೆಯಬೇಕೆಂದು ಕನಸ್ಸು ಕಾಣುತ್ತಿರುವ ಬೆರಗುಗಣ್ಣಿನ ಹುಡುಗ. ತಮ್ಮ ಮೊದಲ ಪ್ರಯತ್ನದಲ್ಲಿ ಓದುಗರ ಮನಸನ್ನು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಇನ್ನಷ್ಟು ಮತ್ತಷ್ಟು ಕನ್ನಡ ಸಾಹಿತ್ಯ ಕೃಷಿಯನ್ನು ಮಾಡುವಂತೆ ತಾಯಿ ಶಾರದಾಂಬೆ ಆಶೀರ್ವದಿಸಲಿ ಎಂಬ ಆಶಯದೊಂದಿಗೆ ಮೊದಲ ಕೃತಿಗೆ ಶುಭಾಶಯಗಳನ್ನು ಕೋರುತ್ತಾ ವಂದನೆಗಳೊಂದಿಗೆ...\u003c\/p\u003e\n\u003cp\u003eಶ್ರೀಕಾಂತ್ ಕನ್ನಲ್ಲಿ ಚಿತ್ರನಿರ್ದೇಶಕರು (ಜಲ್ಲಾ, ಇರುವುದೆಲ್ಲವ ಬಿಟ್ಟು)\u003c\/p\u003e","brand":"Vinod. K.L","offers":[{"title":"Default Title","offer_id":47678277189891,"sku":"HB00005503197","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/aastebackpage_2.jpg?v=1769332393","url":"https:\/\/harivubooks.com\/products\/aaste-novel-vinod-k-l-kannada-book","provider":"Harivu Books","version":"1.0","type":"link"}