{"product_id":"6-pramukha-vratagalu-vrataratnam-kannada-book","title":"6 ಪ್ರಮುಖ ವ್ರತಗಳು - ವ್ರತರತ್ನಂ","description":"\u003cp\u003eವ್ರತ ವಿವೇಕ\u003c\/p\u003e\n\u003cp\u003eಕೆಲವು ಮುಖ್ಯ ಸೂಚನೆಗಳು\u003c\/p\u003e\n\u003cp\u003e* ವ್ರತಿಯು ವ್ರತವನ್ನು ಆಚರಿಸವಲ್ಲಿ ದೃಢ ಚಿತ್ತನಾಗಿರಬೇಕು.\u003c\/p\u003e\n\u003cp\u003e* ಪ್ರತಿದಿನದ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಪೂಜಾ ಮಂಟಪವನ್ನು ಏಕಚಿತ್ತದಿಂದ ರಚಿಸಬೇಕು.\u003c\/p\u003e\n\u003cp\u003e* ಪೂಜಾ ಮಂಟಪವನ್ನು ತಳಿರು ತೋರಣ, ಬಾಳೇಕಂಬ, ರಂಗವಲ್ಯಾದಿಗಳಿಂದ ಸಿಂಗರಿಸಿರಬೇಕು.\u003c\/p\u003e\n\u003cp\u003e* ತನ್ನ ಶಕ್ತಿಗೆ ಲೋಪಬರದಂತೆ ಸಿಹಿ ಭಕ್ಷ್ಯಗಳನ್ನೂ, ಆಯಾಕಾಲದಲ್ಲಿ ದೊರೆಯತಕ್ಕ ಹಣ್ಣುಗಳನ್ನು ನಿವೇದಿಸಬೇಕಲ್ಲದೆ ಪೂಜೆಗೆ ಆಯಾಕಾಲಕ್ಕೆ ದೊರೆಯತಕ್ಕ ಹೂಗಳನ್ನು ಸಿದ್ಧಪಡಿಸಿರಬೇಕು.\u003c\/p\u003e\n\u003cp\u003e* ಪೂಜಾ ಸಮಯದಲ್ಲಿ ಅಡ್ಡಿಗಳು ಬರದಂತೆ ಎಚ್ಚರವಹಿಸಿರಿ.\u003c\/p\u003e\n\u003cp\u003e* ಆವಾಹನಾ ಕಲಶಗಳನ್ನು ಸಾಕ್ಷಾತ್ ದೇವತಾಮುರ್ತಿಗಳೆಂದೇ ಭಾವಿಸಬೇಕು. ಯಾವುದೇ ಕಾರಣಕ್ಕೂ ಆವಾಹನೆಯ ನಂತರ ಪೂಜಾ ಸಮಾಪ್ತಿಗೆ ಮೊದಲು ಕಲಶ, ವಿಗ್ರಹ, ಚಿತ್ರಪಟಗಳನ್ನು ಕದಲಿಸಬಾರದು.\u003c\/p\u003e\n\u003cp\u003e* ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಒಂದು ದಿನ ಮುಂಚಿತವಾಗಿಯೇ ಸರಿಯಾದ ಕ್ರಮದಲ್ಲಿ ಹೊಂದಿಸಿಕೊಂಡು ಸಿದ್ಧವಾಗಿಟ್ಟುಕೊಂಡರೆ ವ್ರತವು ಸುಗಮವಾಗಿ ನೆರವೇರಲು ಸಹಕಾರಿಯಾಗಬಲ್ಲದು\u003c\/p\u003e\n\u003cp\u003e* ಪೂಜಾ ಮಂಟಪದಲ್ಲಿ ದೇವತಾಮೂರ್ತಿಯನ್ನು ಅಥವಾ ಆವಾಹನಾ ಕಲಶವನ್ನು ಪೂರ್ವಕ್ಕೆ ಅಭಿಮುಖವಾಗಿಡುವುದು ಉತ್ತಮ. ಉತ್ತರ ದಿಕ್ಕಿಗಿಡುವುದು ಮಧ್ಯಮ.\u003c\/p\u003e\n\u003cp\u003e* ಪೂಜಾ ಮಂಟಪದಲ್ಲಿ ಬೆಳ್ಳಿ ಅಥವಾ ತಾಮ್ರದ ಪೂಜಾ ಕಲಶವನ್ನು ಇರಿಸಬೇಕು. ಪೂಜಾ ಮೂರ್ತಿ (ಗಣಪತಿ, ಸ್ವರ್ಣಗೌರಿ, ಹನುಮಂತ) ಬಳಸುವ ವ್ರತಗಳಲ್ಲಿ ಕಲಶದಲ್ಲಿ ನೀರು ತುಂಬಿ, ತುಳಸಿ, ಬಟ್ಲಡಿಕೆ, ನಾಣ್ಯ, ಪಂಚಪಲ್ಲವ (ಅಶ್ವಥ, ಆಲ, ಮಾವು, ತುಳಸಿ, ಅತ್ತಿಗಿಡದ ಚಿಗುರು) ಹಾಕಿ ಕಲಶವನ್ನು ಅಲಂಕರಿಸಬೇಕು. ನಂತರ ಕಲಶದ ಮೇಲೆ ಅರಿಶಿನ, ಕುಂಕುಮ ಹಚ್ಚಿದ ಜುಟ್ಟಿರುವ ಒಳ್ಳೆಯ ತೆಂಗಿನಕಾಯಿಯನ್ನು ಕೂರಿಸಿ ನಂತರ ಕಲಶವನ್ನು ಆಭರಣ, ಮಂಗಳದ್ರವ್ಯಾದಿಗಳಿಂದ ಅಲಂಕರಿಸಬೇಕು.\u003c\/p\u003e\n\u003cul\u003e\n\u003cli\u003eಪ್ರತಿಯೊಂದು ವ್ರತಕ್ಕೂ ಗಣಪತಿ ಪೂಜೆಯು ಖಡ್ಡಾಯವಾಗಿರುತ್ತದೆ. (ಸಂಕಷ್ಟಹರ, ವರಸಿದ್ದಿವಿನಾಯಕ ವ್ರತ ಮೊದಲುಗೊಂಡು)\u003c\/li\u003e\n\u003cli\u003eಗಣಪತಿ ಪೂಜೆಗಾಗಿ ಗಣಪತಿಯ ವಿಗ್ರಹವನ್ನು (ಇಲ್ಲವೆ ಸಗಣಿ ಪಿಳ್ಳರಿಯನ್ನು) ಪ್ರತ್ಯೇಕ ತಟ್ಟೆಯಲ್ಲಿ ಮಂಟಪದ ಮುಂಭಾಗದಲ್ಲಿಟ್ಟುಕೊಳ್ಳಿ.\u003c\/li\u003e\n\u003c\/ul\u003e\n\u003cp\u003e6 ವ್ರತಗಳು \u0026gt;\u003c\/p\u003e\n\u003cp\u003e*ಪ್ರತಿಯೊಂದು ಸಲ ನೀರಾಜನ ಮಾಡುವಾಗಲೂ ಪ್ರತ್ಯೇಕ ಬತ್ತಿಗಳನ್ನೇ ಬಳಸಬೇಕು.\u003c\/p\u003e\n\u003cp\u003e*ಕಲಶೋಧಕವನ್ನು ಆಚಮನಕ್ಕಾಗಿ ಬಳಸಬಾರದು. ಅದನ್ನು ಪ್ರೋಕ್ಷಣೆಗೆ ಮಾತ್ರ ಬಳಸಬೇಕು.\u003c\/p\u003e\n\u003cp\u003e*ಪೂಜೆಗೆ ಕಾಯಿಸದ ಹಸುವಿನ ಹಾಲನ್ನೇ ಬಳಸಬೇಕು.\u003c\/p\u003e\n\u003cp\u003e* ಮನೆಹಿರಿಯರ ಆಶೀರ್ವಾದಗಳೊಂದಿಗೆ ಶಾಂತಚಿತ್ತದಿಂದ ವ್ರತವನ್ನು ಆರಂಭಿಸಬೇಕು.\u003c\/p\u003e\n\u003cp\u003e* ಮೊದಲಿಗೆ ಪೂರ್ವಪೂಜೆಯನ್ನು ಈ ಪುಸ್ತಕದಲ್ಲಿ ನೀಡಿರುವಂತೆ ಮಾಡಿ ನಂತರ ಉದ್ದಿಶ್ಯ ದೇವತಾ ವ್ರತಗಳನ್ನು ಮುಂದುವರೆಸಬೇಕು.\u003c\/p\u003e","brand":"G. Ramachandra Shastry","offers":[{"title":"Default Title","offer_id":47733203534083,"sku":"HB00006119","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/vratha1.jpg?v=1770810046","url":"https:\/\/harivubooks.com\/products\/6-pramukha-vratagalu-vrataratnam-kannada-book","provider":"Harivu Books","version":"1.0","type":"link"}