Skip to product information
1 of 1

ಎಸ್. ಅರ್. ಗೌತಮ್

ನಿತ್ಯಜೀವನದಲ್ಲಿ ಕಾನೂನು ಪುಸ್ತಕ-1

ನಿತ್ಯಜೀವನದಲ್ಲಿ ಕಾನೂನು ಪುಸ್ತಕ-1

Publisher:

Regular price Rs. 125.00
Regular price Sale price Rs. 125.00
Sale Sold out
Shipping calculated at checkout.
ಮನುಷ್ಯ ಯಾವ ತಪ್ಪಿಸಿಕೊಂಡರೂ, ಕಾನೂನಿನ ಬಂಧನದಿಂದ ಬಂಧನದಿಂದ ತಪ್ಪಿಸಿಕೊಳ್ಳಲಾರ; ಕಾನೂನಿನ ತಿಳಿವಳಿಕೆಯಿಲ್ಲದೆ ಅವನು ತನ್ನ ಬದುಕು ಸಾಗಿಸಲಾರ | ಕಾನೂನು ತಿಳಿದಿಲ್ಲ ಎನ್ನುವುದು ಅಕ್ಷಮ್ಯವಾಗುತ್ತದೆ. ಆದ್ದರಿಂದ ಶ್ರೀಸಾಮಾನ್ಯನಿಗೂ ಕಾನೂನಿನ ಪರಿಚಯ ಮಾಡಿಕೊಡುವುದು ಸಮಾಜದ ಕರ್ತವ್ಯ ಕಾನೂನು ಬಲ್ಲವರ ಹೊಣೆ. ಈ ದಿಕ್ಕಿನಲ್ಲಿ ನಿತ್ಯ ಜೀವನದಲ್ಲಿ ಕಾನೂನು' ಒಂದು ಗಮನಾರ್ಹ ಪ್ರಯತ್ನ.

ಇದೊಂದು ಜನಪ್ರಿಯ ಪುಸ್ತಕ ಇದರಲ್ಲಿ ಪಾಂಡಿತ್ಯದ ಭಾರವಿಲ್ಲ: ತಾಂತ್ರಿಕತೆಯ ಗೊಂದಲವಿಲ್ಲ. ಕಥೆ ಹೇಳುವ ರೀತಿಯಲ್ಲಿ ಕಾನೂನನ್ನು ಇಲ್ಲಿ ಪರಿಚಯಿಸಲಾಗಿದೆ. ಮೂಲಭೂತ ಹಕ್ಕುಗಳು, ರಿಟ್ ಅರ್ಜಿ, ಉಯಿಲು, ಹೆಸರು ಬದಲಾವಣೆ, ಆಸ್ತಿ ಕೊಳ್ಳುವುದು, ದಾಖಲೆಗಳನ್ನು ನೋಂದಾಯಿಸುವುದು, ಕೇವಿಎಟ್ ಸಲ್ಲಿಸುವುದು, ಕರಾರುಗಳನ್ನು ಸಿದ್ಧಪಡಿಸುವುದು ಮುಂತಾದ ಹತ್ತು ಹಲವು ಸಂಗತಿಗಳಿಗೆ - ಸಂಬಂಧಿಸಿದ ಕಾನೂನಿನ ಸ್ವರೂಪವನ್ನು ಈ ಪುಸ್ತಕ ವರ್ಣಿಸುತ್ತದೆ. ಓದುಗರಲ್ಲಿ ಒಂದು ಎಚ್ಚರ ಮೂಡಿಸುತ್ತದೆ.

ನೇರವಾಗಿ, ಖಚಿತವಾಗಿ, ಸರಳವಾಗಿ ಓದುಗರ ಆಸಕ್ತಿ ಆರದಂತೆ, ಕುತೂಹಲ ಕೊನೆಗೊಳ್ಳದಂತೆ, ದೈನಂದಿನ ಬದುಕಿನ ತೀರ ಅಗತ್ಯವಾದ ಕೆಲವು ಕಾನೂನುಗಳನ್ನು ನಿರೂಪಿಸಿರುವುದು ಈ ಬರವಣಿಗೆಯ ಸ್ವಾರಸ್ಯವಾಗಿದೆ. ಲೇಖಕರಾದ ಶ್ರೀ ಎಸ್. ಆರ್. ಗೌತಮ್ ಅವರು ಕಾನೂನು ತಜ್ಞರು; ವೃತ್ತಿಯಲ್ಲಿ ಅಡ್ವಕೇಟರು. ವಿಷಯಗಳ ಬಗೆಗೆ ತಿಳಿವಳಿಕೆ ಹಾಗೂ ಅದನ್ನು ಅಭಿವ್ಯಕ್ತಿಸುವ ಕಲೆ ಅವರಲ್ಲಿ ಮೇಳವಿಸಿವೆ. ಇದರ ಫಲ ಪ್ರಸ್ತುತ ನಿತ್ಯ ಜೀವನದಲ್ಲಿ ಕಾನೂನು' ಪುಸ್ತಕ.

ಡಾ| ಹಾ. ಮಾ. ನಾಯಕ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)