{"product_id":"ಯೋಗಸ್ಥಃ-ಯೋಗಸ್ತಹ-ಸಂತೆಯಿಂದ-ಸಂತನೆದೆಗೆ","title":"ಯೋಗಸ್ಥಃ : ಸಂತೆಯಿಂದ ಸಂತನೆದೆಗೆ","description":"\u003cp\u003e\u003cspan\u003eಇವರೇನು ದೇವರೋ? ಗುರುಗಳೊ? ಸಂತರೊ? ಶರಣರೊ? ನನಗೆ ದೇವರ ಭಾಷೆ ಅರ್ಥವಾಗುವುದಿಲ್ಲ. ಅರ್ಥವಾಗದ ಮೇಲೆ ಭಾವ ದಕ್ಕುವುದು ಹೇಗೆ? ಆದರೆ ಸಂಶಯ ಬೇಡ. ಈ ನಾಲ್ಕೂ ಜನರನ್ನು ಹುಡುಕುತ್ತಾ ನನ್ನ ಬದುಕಿನ ನಾಲ್ಕು ದಶಕಗಳನ್ನು ಕಳೆದುಬಿಟ್ಟೆ. ಸಿಗುವುದಿಲ್ಲವೆಂದರೆ? ನನಗೆ ಬೇಕಿತ್ತು ಮನುಷ್ಯನಂತೆ ಮಾತನಾಡುವ ದೇವರು. ಬೇಕಿತ್ತು ನನಗೆ ನೂರು ತಪ್ಪುಗಳಾಚೆ ನೆರಳಾಗುವ ಗುರುಗಳು. ಹುಡುಕುತ್ತಲೇ ಇದ್ದೆ ಪಂಥಾತೀತ ಸಂತನನ್ನು, ಮರಣವೋ ಮಹಾನವಮಿ, ನಾಳೆ ಬರುವುದು ನಮಗೆ ಈಗಲೇ ಬರಲಿ ಎನ್ನುವ ಶರಣನನ್ನು ಆತ ಸಿಕ್ಕೇ ಬಿಟ್ಟ! ಎನ್ನುವುದು ತಪ್ಪು ವಾಕ್ಯ. ದಕ್ಕಿಬಿಟ್ಟ. ಮತ್ತಿನ್ನೆಂದೂ ಕಕ್ಕಲಾಗದಂತೆ ದಕ್ಕಿಬಿಟ್ಟ ಎನ್ನುವುದು ಸರಿ. ಹಾಗಿದ್ದರೆ, ಆತ ದಕ್ಕಿದ್ದು ಹೇಗೆ? ಅದು ನಿಮ್ಮ ಪ್ರಶ್ನೆ. ದೇವರೊ, ಗುರುವೊ, ಸಂತನೊ, ಶರಣನೊ ಅದೊಂದು ಪದವಷ್ಟೆ ?!! ಪದಕ್ಕೆ ಭಯಪಡಬಾರದು. ಅಧೀರರಾಗಬಾರದು. ಬದುಕು ಭವ್ಯ ದಿವ್ಯ, ಪದ ಮೀರುವುದೇ ಬದುಕೆಂಬ ಧರ್ಮದ ಗುರಿ. ಆ ಮೀರು ಮೇರೋ? ಅದು ಲೋಕದ ಲೆಕ್ಕ, ನಿನ್ನೊಳಗೆ ನೀನು ಮಾತ್ರ ಯೋಗಸ್ಥಃ. ಇನ್ನಷ್ಟೆ ಪ್ರಶ್ನೆ ಕೇಳುವುದಿತ್ತು. ಮುಗುಲ್ನಕ್ಕ ಮಾಹಾನುಭಾವ ಇಷ್ಟೇ, ಇಷ್ಟೇ ಹೇಳಿ ಹೋದ\u003c\/span\u003e\u003c\/p\u003e","brand":"Ragam","offers":[{"title":"Default Title","offer_id":47910341607683,"sku":"HB00006969","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/YogastahSanteyindaSantanedege_FP.jpg?v=1775369129","url":"https:\/\/harivubooks.com\/products\/%e0%b2%af%e0%b3%8b%e0%b2%97%e0%b2%b8%e0%b3%8d%e0%b2%a5%e0%b2%83-%e0%b2%af%e0%b3%8b%e0%b2%97%e0%b2%b8%e0%b3%8d%e0%b2%a4%e0%b2%b9-%e0%b2%b8%e0%b2%82%e0%b2%a4%e0%b3%86%e0%b2%af%e0%b2%bf%e0%b2%82%e0%b2%a6-%e0%b2%b8%e0%b2%82%e0%b2%a4%e0%b2%a8%e0%b3%86%e0%b2%a6%e0%b3%86%e0%b2%97%e0%b3%86","provider":"Harivu Books","version":"1.0","type":"link"}