{"product_id":"ಅಭಿರುಚಿ-copy","title":"ಸಂಸ್ಕೃತದ  ಮೂರು ಪ್ರಹಸನಗಳು","description":"\u003cp\u003eಸಂಸ್ಕೃತದ ರೂಪಕಸಾಹಿತ್ಯವು ಜಗತ್ತಿನ ಎಲ್ಲ ಭಾಷೆಗಳ ದೃಶ್ಯಕಾವ್ಯ ಪ್ರಪಂಚದಲ್ಲಿಯೇ ಅನನ್ಯ ಸ್ಥಾನವನ್ನು ಗಳಿಸಿದೆ. ಈ ಪ್ರಕಾರದಲ್ಲಿ ಪ್ರಹಸನವೆಂಬ ಪ್ರಭೇದಕ್ಕೆ ತನ್ನದೇ ಆದ ಮಹತ್ವವಿದೆ. ಸಕಲಜನರಿಗೂ ಇಷ್ಟವಾಗುವ ಹಾಸ್ಯರಸವೇ ಇಲ್ಲಿ ತಾಂಡವಿಸುವ ಕಾರಣ ಇದಕ್ಕಿರುವ ಪ್ರಹಸನವೆಂಬ ಹೆಸರು ಅನ್ವರ್ಥವೇ ಆಗಿದೆ. ಅಲ್ಲದೆ ಇಲ್ಲಿಯ ಸಾಮಾಜಿಕಮೌಲ್ಯವೂ ಮಿಗಿಲು.\u003c\/p\u003e\n\u003cp\u003eಇಂಥ ವಿಶಿಷ್ಟವಾದ ಸಾಹಿತ್ಯ ಪ್ರಕಾರವು ಕನ್ನಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದವಾಗಿ ಬಂದಿಲ್ಲ. ಈ ಕೊರತೆಯನ್ನು ಕೆಲಮಟ್ಟಿಗೆ ತೀರಿಸುವಂತೆ ಪ್ರಕೃತ ಕನ್ನಡಿಸಲ್ಪಟ್ಟ ಮೂರು ಸಂಸ್ಕೃತ ಪ್ರಹನನಗಳು ಗಮನಾರ್ಹವೆನಿಸಿವೆ. ಮಾತ್ರವಲ್ಲ, ಇವೆಲ್ಲವೂ ಮೊತ್ತಮೊದಲಬಾರಿಗೆ ಕನ್ನಡಕ್ಕೆ ಬರುತ್ತಿರುವ ಕಾರಣ ಈ ಪ್ರಕಲ್ಪಕ್ಕೆ ಐತಿಹಾಸಿಕ ಮಹತ್ತ್ವವೂ ಇದೆ. ಅಲ್ಲದೆ ಇವುಗಳ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮಹತ್ತ್ವವೂ ಗಣನೀಯ. ಇದಕ್ಕೆಲ್ಲ ಶಿಖರಪ್ರಾಯವಾಗಿ ಅನುವಾದಕರು ಬರೆದ ವಿಸ್ತ್ರತವೂ ತಲಸ್ಪರ್ಶಿಯೂ ಆದ ಪ್ರಸ್ತಾವನೆಯು ಸ್ವತಂತ್ರ ಸಂಶೋಧನಪ್ರಬಂಧದ ಒಳನೋಟಗಳನ್ನು ಹೊಂದಿದ್ದು ಭಾರತೀಯರಂಗಭೂಮಿಯ, ನಾಟ್ಯ-ನೃತ್ಯಕಲೆಗಳ ಗಂಭೀರಾಸಕ್ತರಿಗೂ ಬೋಧಪ್ರದವೆನಿಸಿದೆ. ಜೊತೆಗೆ ಈ ಅನುವಾದಗಳ ಭಾಷಾಸ್ವಾರಸ್ಯವೂ ಮನನೀಯ.\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47708273836291,"sku":"HB00006014","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SamkrithadaMooruPrahasanagalu_FP.jpg?v=1770213981","url":"https:\/\/harivubooks.com\/products\/%e0%b2%85%e0%b2%ad%e0%b2%bf%e0%b2%b0%e0%b3%81%e0%b2%9a%e0%b2%bf-copy","provider":"Harivu Books","version":"1.0","type":"link"}