{"product_id":"ಅಕ್ಬರ್-ಬೀರಬಲ್ಲನ-ಕಥೆಗಳು","title":"ಅಕ್ಬರ್ ಬೀರಬಲ್ಲನ ಕಥೆಗಳು","description":"\u003cp\u003eಆಕ್ಟರ್ ಮತ್ತು ಬೀರಬಲ್ಲನ ಕಥೆಗಳು ಭಾರತದಲ್ಲಿ ಬಹಳ ಪ್ರಚಲಿತ ಮತ್ತು ಜನಪ್ರಿಯವಾಗಿವೆ. ಮಹಾನ್ ಮೊಗಲ್ ಚಕ್ರವರ್ತಿ ಅಕ್ಟರನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಬೀರಬಲ್ ಒಬ್ಬನಾಗಿದ್ದ. ತನ್ನ ಹಾಸ್ಯಪ್ರಜ್ಞೆ, ಬುದ್ಧಿವಂತಿಕೆ, ಜಾಣೆಗಳಿಂದ ಬೀರಬಲ್ ಅಕ್ಟರನ ಆಸ್ಥಾನದಲ್ಲಿ ಅತ್ಯಂತ ನಿಷ್ಠಾವಂತ ವ್ಯಕ್ತಿಯಾಗಿದ್ದ. ಆದರೂ ನಕ್ಷತ್ರದಂತೆ ಬೀರಬಲ್ ಅಧಿಕಾರ ಮತ್ತು ಅದೃಷ್ಟದ ಉನ್ನತಿಗೇರಿದ್ದನ್ನು ಕಂಡು ಅನೇಕ ಆಸ್ಥಾನಿಕರು ಅಸೂಯೆಪಡುತ್ತಿದ್ದರು. ಅವನನ್ನು ಕೆಳಗಿಳಿಸಲು ಅವರು ಏನಾದರೊಂದು ಸಂಚು ಮಾಡುತ್ತಲೇ ಇದ್ದರು.\u003c\/p\u003e\n\u003cp\u003eಬೀರಬಲ್ಲನಲ್ಲಿ ಅಕ್ಟರ್ ಒಬ್ಬ ನಿಜವಾದ ಹಿತೈಷಿ ಮತ್ತು ಮಿತ್ರನನ್ನು ಕಂಡ. ಅವರಿಬ್ಬರ ನಡುವಿನ ಹಾಸ್ಯಮಯವಾದ ಚಾತುರ್ಯದ ಕ್ಷಣಗಳು ಭಾರತದ ಜನಪದ ಕಥೆಗಳ ಶ್ರೀಮಂತ ಪರಂಪರೆಯ ಒಂದು ಭಾಗವಾದವು. ಹಲವು ತಲೆಮಾರುಗಳಿಂದ ಅಕ್ಟರ್-ಬೀರಬಲ್ಲನ ಕಥೆಗಳು ಮಕ್ಕಳು ಮತ್ತು ಹಿರಿಯರನ್ನು ಸಮಾನವಾಗಿ ರಂಜಿಸಿವೆ. ಆ ಕೆಲವು ಕಥೆಗಳನ್ನು ಇಲ್ಲಿ ವರ್ಣಮಯ ಚಿತ್ರಗಳ ಸಹಿತ ಪ್ರಸ್ತುತಪಡಿಸಲಾಗಿದೆ. ಮಕ್ಕಳು ಈ ಸ್ವಾರಸ್ಯಕರ ಕಥೆಗಳನ್ನು ಓದಿ ಸಂತೋಷಪಡುವರೆಂದು ಭಾವಿಸುತ್ತೇವೆ.\u003c\/p\u003e","brand":"I B H Publication","offers":[{"title":"Default Title","offer_id":47900150890755,"sku":"HB00006964","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AkbarBeeraballanaKathegalu_31e6523e-61ae-4b99-a042-ffd42f89371f.jpg?v=1775137812","url":"https:\/\/harivubooks.com\/products\/%e0%b2%85%e0%b2%95%e0%b3%8d%e0%b2%ac%e0%b2%b0%e0%b3%8d-%e0%b2%ac%e0%b3%80%e0%b2%b0%e0%b2%ac%e0%b2%b2%e0%b3%8d%e0%b2%b2%e0%b2%a8-%e0%b2%95%e0%b2%a5%e0%b3%86%e0%b2%97%e0%b2%b3%e0%b3%81","provider":"Harivu Books","version":"1.0","type":"link"}