Dr. T. N. Vasudevamurthy
Publisher - ವಂಶಿ ಪಬ್ಲಿಕೇಷನ್ಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಕಾವ್ಯವೇ ಹೀಗೆ ಜಗದ ಎಲ್ಲ ಸಂಕಟ ಮತ್ತು ಸಂತಸಗಳನ್ನು ಅನಾಯಾಸವಾಗಿ ಹೊತ್ತು ತಿರುಗಬಲ್ಲ ಬಂಧ. ಅದೂ ಸೂಕ್ಷ್ಮ, ಭಾವ ಸಂವೇದಿ ಕವಿಯ ಕೈಗೆ ರೂಪಕವೊಂದರ ಎಳೆ ಸಿಕ್ಕಿ ಬಿಟ್ಟರೆ ಅದು ಜೀವನ ಮತ್ತು ಜೀವನದಾಚೆಗಿನ ತಂತುಗಳನ್ನು ಮೀಟ ನಾದವನ್ನು ಕಂಪಿಸುವಂತೆ ಮಾಡಬಲ್ಲದು.
ಪ್ರಕೃತಿಯ ಮೂಲಧಾತುಗಳು ಪುನೀತವಾಗುವುದೇ ಶ್ರೇಷ್ಟ ಕವಿಗಳ ಕಾವ್ಯದಲ್ಲಿ, ಗ್ರಹಿಸಿದ ಭಾವಗಳನ್ನು ಎದೆಯ ಕುಲುಮೆಯಲ್ಲಿ ಹಾಯಿಸಿದಾಗ ಈಚೆಗೆ ಹೊಳೆಯುವ ಕಾವ್ಯ ಲೋಹ ಅದು ಪರುಷಮಣಿಯೇ ಆಗಬಲ್ಲದು. ಜ಼ೆನ್ ಹಾಯ್ಕುಗಳು ಇಂಥ ಭಾವ ಕಣಿವೆಯಲ್ಲಿ ಹಾದು ಬಂದ ಝರಿಗಳು. ಬದುಕಿನ ಕೊರಕಲುಗಳನ್ನು ತಾಕೊಂಡು ಬಂದ ನವಿಯ ಹರಿವು.
ಓಶೋ ಅವರ ಓದಿಗೆ ದಕ್ಕಿದ ಜ಼ೆನ್ ಹಾಯ್ಕುಗಳು ಮತ್ತಷ್ಟು ಪ್ರಖರಗೊಳ್ಳುವುದು ಅವರ ವಿಶ್ಲೇಷಣೆಯ ಬೆಳಕಿನಿಂದ.
ಹಾಗೆ ನೋಡಿದರೆ ಓಶೋ ಅವರು ಈ ಹಾಯ್ಕುಗಳ ಅರ್ಥವನು ಇದಮಿತ್ಥಂ ಎಂದು ಅಂತಿಮ ಷರಾ ಬರೆಯುವುದಿಲ್ಲ. ಬದಅಗೆ ಎಂದಿನಂತೆ ತಮ್ಮ ತುಂಟ ಮತ್ತು ಮೊನಚಾದ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಬಗೆಯುತ್ತಾರೆ.
ಇಲ್ಲಿನ ಹಾಯ್ಕುಗಳಲ್ಲಿ ಹರಿದಾಡಿರುವುದು ಜೀವಂತ ಕಾವ್ಯ ಮತ್ತು ಹೇಳಿದ್ದಕಿಂತ ಹೇಳದೇ ಉಳಿವ ಮೌನದ ಶ್ರೇಷ್ಟತನ ಓಶೋ ಬಲ್ಲರು. ಮೌನದಾಚೆಯ ವಿಶ್ವಾತ್ಮಕ ತಥ್ಯವನ್ನು ಕಟ್ಟಿಕೊಡುವ ಹಾಯ್ಕು ಕವಿಗಳು ಆಯ್ಕೆ ಮಾಡಿಕೊಂಡಿರುವ ವಸ್ತುಗಳೇ ಇಲ್ಲಿ ಕುತೂಹಲಕರ, ಸಾಮಾನ್ಯರ ಕಣ್ಣಿಗೆ ಯಾವುದು ನಗಣ್ಯವೋ ಅದು ಈ ಕವಿಗಳಲ್ಲಿ ಜೀವಗಾಮಿನಿಯ ರೂಹಾಗಿ ಕಂಗೊಳಿಸಿದೆ. ಶಬ್ದಗಳ ಬಳಕೆಯ ವ್ಯಸನ ಮತ್ತು ಪದಗಳ ದುಂದುವೆಚ್ಚವನ್ನು ಈ ಹಾಯ್ಕುಗಳು ತಣ್ಣಗೆ ನಿರಾಕರಿಸುತ್ತವೆ.
ಗೆಳೆಯ ಟಿ ಎನ್ ವಾಸುದೇವಮೂರ್ತಿ ಅವರ ಓದು ಅಧ್ಯಯನ ಮತ್ತು ಚಿಂತನೆಯ ಪಲಕ್ರಮದ ಅನನ್ಯತೆಗಳ ಪಟ್ಟಿಗೆ ಈ ಕೃತಿ ಮತ್ತೆ ಸಾಕ್ಷಿ. ವಾಸುದೇವ್ ಕೇವಲ ಅನುವಾದಕರಾಗಿ ನಿಲ್ಲದೆ ಸ್ವತಃ ಒಂದು ಚಿಂತನೆಯ ಶೋಧದ ಮಾರ್ಗವಾಗಿ ಕಾಣುತ್ತಾರೆ. ಈ ಕೃತಿಯ ಮೂಲಕ ಅವರು ಕಾವ್ಯದ ಕಡು ಮೋಹಿಯಾಗಿಯೂ ನಿಲ್ಲುತ್ತಾರೆ.
ಕನ್ನಡ ಕಾವ್ಯದ ಈ ಹೊತ್ತಿನ ಅನೇಕ ಅಸಮಾಧಾನ ಮತ್ತು ತಕರಾರುಗಳ ಮಧ್ಯೆ ಈ ಕೃತಿ ಒಂದು ಪಠ್ಯ ಮಾರ್ಗವಾಗಿ ಗೋಚರಿಸುತ್ತದೆ.
- ವಾಸುದೇವ ನಾಡಿಗ್