Immadi Santosh
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
'ಅದ್ಕೆ ಈ ಇಂಡಿಯನ್ ಅತ್ತೆ ಸೊಸೇನ ತಾಲಿಬಾನ್ ಕ್ಯಾ೦ಪಿಗೆ ಕಲ್ಸಿ ಜಡೆ ಹಾಕೋದೆಂಗೆ, ಜತೆಗಿರೋದೆಂಗೆ ಅಂತ ಟ್ರೈನಿಂಗ್ ಕೊಡ್ಸುದ್ರೆ ಸರಿ ಹೋಗ್ತಾರೆ ಅಂತ ಅನ್ನೋಬೇಕಷ್ಟೇ, ಅವರಾಗಲ್ಲ. ಇರೋ ನೆಮ್ದಿ ಜೀವ್ನಾನ ಅತ್ತೆ ಸೊಸೇರ್ ಜಗಳ ಹಾಳ್ ಮಾಡಿದಂಗೆ ಇದುವರಗೂ ರಾಹು ಕೇತು ಕೈಲೂ ಹಾಳ್ ಮಾಡಕ್ಕಾಗಿಲ್ಲ. ಕತ್ತೆ ಕೆಲ್ಸಾ ಕತ್ತೆದು, ಕುದ್ರೆ ಕೆಲ್ಸಾ ಕುದ್ರೆದು, ಅವರವರ ಕೆಲ್ಸಾ, ಕರ್ತವ್ಯ, ಕಾರ್ಬಾರು ಅವರವರು ಮಾಡ್ಕೊಂಡು ಸುಮ್ನಿರ್ಬೇಕು, ಜಾಸ್ತಿ ಮಾತಾಡಿದ್ರೆ ಬಾಯಿ ಬಚ್ಲಾಗುತ್ತೆ. ಮನಸು ಹೊಲ್ಸಾಗುತ್ತೆ. ಅದ್ಕೆ ಸುಮ್ನೆ ಒಂದಾಗಿರಿ,
ಶಿಕ್ಷೆನೋ ಸತ್ವಪರೀಕ್ಷೆನೋ ಮುಗುಸ್ಕೊಂಡು ಧರ್ಮರಾಯ ಮತ್ತೆ ಸ್ವರ್ಗಕ್ ಎಂಟ್ರಿ ಆದ. ಅಲ್ಲಿಗೆ ಮತ್ತೆ ಶುಭಂ ದಿ ಎಂಡ್ ಅಂತ ಬರದ್ರ?, ಹ್ಮ್ ಹೂ.. ಅಲ್ಲಿಗೇ ನಿಲ್ಲಲಿಲ್ಲ. ಧರ್ಮರಾಯ ಇನ್ನೇನು ಸ್ವರ್ಗದ ಕರ್ಮಫಲದ ರುಚಿ ನೋಡಕ್ಕೆ ಅಂತ ರೆಡಿ ಆಗೋಕು ಅಲ್ಲಿ ಆಲ್ರೆಡಿ ಇನ್ನೊಬ್ಬ ಇದ್ದಾನೆ, ಯಾರಂತ ನೋಡಿದ್ರೆ ಆಶ್ಚರ್ಯ, ಕೌರವೇಶ ದುರ್ಯೋಧನ. ತನ್ನ ಪರಮ ವೈರಿ. ಇವನ್ಯಾಕೆ ಸರ್ಗಕ್ಕೆ ಬಂದ. ಧರ್ಮರಾಯಂಗೆ ಕಿರಿಕಿರಿ. ಕೃಷ್ಣನ್ ಸಪೋರ್ಟ್ ತಗಂಡ್ರು ಇವನೂ ನನಗಿಂತ ಲೇಟ್ ಅಂತ ಕೌರವಶಂಗೆ ಮಷ್ಕಿರಿ. ಅವರವರ ಮಷ್ಕಿರಿ ಏನೇ ಇರ್ಲಿ ಕತೆ ಎಲ್ಲಿಗೆ ಮುಗುಸ್ತೀವಿ ಅನ್ನೋದು ಇಂಪಾರ್ಟೆಂಟು.' ಎಂದು ಇಡೀ ಠಾಣೆಯೇ ನಡುಗುವಂತೆ ಗುಡುಗಿದ ಇನ್ನೆಕರ್ ಸರ್ದಾರ್ ಸಿಂಗ್.
