Dr. Gururaja Poshettyhalli
ಸತ್ಸಂಗ ಸಂಪದ
ಸತ್ಸಂಗ ಸಂಪದ
Publisher - ಸ್ನೇಹ ಬುಕ್ ಹೌಸ್
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕನ್ನಡಿಗರ ಸಾಕ್ಷಿ ಪ್ರಜ್ಞೆಯಂತಿರುವ ವೈಚಾರಿಕತೆಯ ಬೀಡು ಆಚಾರವಂತಿಕೆಯ ಗೂಡು ನವದಶಕದ ನಂಟಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ 'ಅಧ್ಯಾತ್ಮ ಪ್ರಭೂಷಣ'-ಡಾ. ಗುರುರಾಜ ಪೋಶೆಟ್ಟಹಳ್ಳಿ ಅವರು ದಿನನಿತ್ಯ ಉಣಬಡಿಸುತ್ತಿರುವ "ಸತ್ಸಂಗ ಸಂಪದ”-ಸಂಸ್ಕೃತಿ ಪರಂಪರೆಯ ದರ್ಶನ ಅಂಕಣ ಓದುಗರಿಗೆ ಅರಿವಿನ ಸಂಜೀವಿನಿ.
ಸತ್ಸಂಗ ಎಂದರೆ ಸಜ್ಜನರ ಸಂಗ, ಉತ್ತಮರ ಸಹವಾಸ, ಸತ್ಸಂಗ ಲಭಿಸುವುದೂ ಭಾಗ್ಯವೇ ಸರಿ. ಅದಕ್ಕೂ ಪೂರ್ವ ಜನ್ಮದ ಪುಣ್ಯವಿರಬೇಕು. ಸಂಗವಾಗಲಿ ಸಾಧುಸಂಗವಾಗಲಿ, ಸಂಗದಿಂದ ಲಿಂಗ ದೇಹ ಭಂಗವಾಗಲಿ ಎಂದಿದ್ದಾರೆ ದಾಸರು. ವಚನಕಾರರು ಅಂದಂತೆ ಸಜ್ಜನರ ಸಂಗವು ಹೆಜ್ಜೇನು ಸವಿದಂತೆ.
ಪ್ರತಿದಿನವೂ ಒಂದೊಂದು ವಿಶೇಷ ವಸ್ತು. ಇದೇ ಅಂಕಣಾವತಾರ. ವೇದ-ಉಪನಿಷತ್ತು-ರಾಮಾಯಣ-ಮಹಾಭಾರತ-ಭಾಗವತ-ದಾಸರ ಶರಣರ-ಸಂತ-ಮಹಂತರ ಅನುಭವದ ಸವಿನುಡಿಗಳಿಂದ ಹೆಕ್ಕಿ ತೆಗೆದ ನೀತಿಬೋಧಕ ಕಥಾ ಪ್ರಸಂಗದ ಮೂಲಕ ಆಚಾರ-ವಿಚಾರಗಳ ತಾತ್ವಿಕ ಹಿನ್ನಲೆಯ ಸ್ಫೂರ್ತಿಯ ಹೊಂಬೆಳಕು. "ಸತ್ಸಂಗ-ಸಂಪದ"ದ ಆನಂದವನ್ನು ಮನದಣಿಯೆ ಉಣಿಸಿವೆ.
ಅಂಕಣ ಬರಹವೇ ಒಂದು ತಪಸ್ಸು. ಋಷಿ ಮನದವರಿಗೆ ಮಾತ್ರ ಅಂಕಣಕೃಷಿ ಮಾಡಲು ಸಾಧ್ಯ, ಜುಳುಜುಳು ಸಲಿಲಾನಂದ ಮೈದುಂಬಿ ಮೈಮರೆಸಿ ಅನಿವರ್ಚನೀಯ ತನ್ಮಯತೆಗೆ ಕಾರಣವಾಗಿರುವ ಶ್ರೀಯುತರ ಅಂಕಣ ಮುಂಜಾನೆಯ ಉದಯರವಿಗೆ ಸುಪ್ರಭಾತ.
ಈ ಅಂಕಣ ಬರಹಗಳು ತನ್ನಲ್ಲಿ ಅಂತರ್ಗತವಾಗಿಸಿಕೊಂಡಿರುವ ಶ್ರೇಷ್ಠ ಮೌಲ್ಯಗಳ ಮೂಲಕ ಸಹೃದಯರ ಅಂತರಂಗವನ್ನು ದೀಪ್ತಗೊಳಿಸುವಲ್ಲಿ ಸಾರ್ಥಕತೆ ಕಂಡುಕೊಂಡಿದೆಯೆಂಬ ನಂಬಿಕೆಯೊಡನೆ ನಿಲ್ಲದಿರಲಿ ಸಾತ್ವಿಕ ಸಾಹಿತ್ಯ ವಕ್ತಾರರ ಲೇಖನಿಯಿಂದ ಹರಿಯುತ್ತಿರುವ ಈ ಅರಿವಗಾಥೆ ಎಂಬುದೇ ನನ್ನಾಶಯ.
ಡಾ. ಪ್ರದೀಪ ಕುಮಾರ್ ಹೆಬ್ರಿ
ಹಿರಿಯ ಸಾಹಿತಿ, ಮಂಡ್ಯ.

Share
Subscribe to our emails
Subscribe to our mailing list for insider news, product launches, and more.