C. P. Nagraj
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ನನ್ನ ನುಡಿ
ಈ ಮೊದಲು ಎರಡು ಚಿಕ್ಕ ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿದ್ದ ಸರ್ವಜ್ಞ ಮತ್ತು ಅಲ್ಲಮನ ವಚನಗಳನ್ನು ಜತೆಗೂಡಿಸಿ, ಈಗ ಒಂದು ದೊಡ್ಡ ಪುಸ್ತಕವಾಗಿ ಪ್ರಕಟಿಸಿದ್ದೇನೆ.
ವಚನಗಳನ್ನು ಓದುತ್ತಿದ್ದಾಗ ನನಗೆ ಮೆಚ್ಚುಗೆಯಾದ ಕೆಲವು ವಚನಗಳನ್ನು ಓದುಗರ ಗಮನಕ್ಕೆ ತರಬೇಕೆಂಬ ಆಸೆಯಾಯಿತು. ವಚನಗಳನ್ನು ಮೊದಲ ಬಾರಿ ಓದುವವರಿಗೆ ನೆರವಾಗಲೆಂಬ ಉದ್ದೇಶದಿಂದ ವಚನದಲ್ಲಿ ಜತೆಗೂಡಿರುವ ಪದಗಳನ್ನು ಬಿಡಿಸಿ ಬರೆದು, ಪದಗಳ ತಿರುಳನ್ನು ತಿಳಿಸಿ ಬರೆದ ಬರಹವನ್ನು ಗುರುಗಳಾದ ಕೆ.ವಿ.ನಾರಾಯಣ ಅವರಿಗೆ ತೋರಿಸಿದೆನು. ಅದನ್ನು ನೋಡಿದ ಅವರು 'ಹೊಸ ತಲೆಮಾರಿನ ಓದುಗರಿಗೆ ಈ ರೀತಿಯ ಬರಹ ಉಪಯೋಗಕ್ಕೆ ಬರಬಹುದು. ಪದಗಳ ತಿರುಳಿನ ಜತೆಗೆ ಪ್ರತಿಯೊಂದು ವಚನದಲ್ಲಿ ಕಂಡು ಬರುವ ಕವಿಯ ಇಂಗಿತವನ್ನು ಕೆಲವು ಸಾಲುಗಳಲ್ಲಿ ಬರೆಯುವುದು ಒಳ್ಳೆಯದು' ಎಂಬ ಸಲಹೆಯನ್ನು ನೀಡಿ, ನನ್ನ ಬರಹಕ್ಕೆ ಮಾರ್ಗದರ್ಶನವನ್ನು ಮಾಡಿದರು.
-ಸಿ. ಪಿ. ನಾಗರಾಜ
