Narendra Pai
ಸಾವಿರದ ಒಂದು ಪುಸ್ತಕ
ಸಾವಿರದ ಒಂದು ಪುಸ್ತಕ
Publisher -
- Free Shipping Above ₹350
- Cash on Delivery (COD) Available
Pages - 189
Type - Paperback
Couldn't load pickup availability
ಇಲ್ಲಿ ಕುಟ್ಸಿ, ಮಿಲನ್ ಕುಂದೇರಾ, ಇಕೊ ಉಂಬರ್ತೊ, ಓರಾನ್ ಪಮುಕ್, ಜೆನ್ನಿ ಎರ್ಪೆನ್‌ಬೆಕ್, ಓಲ್ಗಾ ತೊಗಾರ್ಝುಕ್, ಅದಾನಿಯಾ ಶಿಬ್ಲಿ, ಯೋನ ಫಾಸೆ, ಜಿಯಾ ಹೈದರ್ ರೆಹಮಾನ್, ಹನೀಫ್ ಬುರೇಶಿಯವರಂಥ ಪ್ರಸಿದ್ಧ ಲೇಖಕರು, ನೊಬೆಲ್ ಪುರಸ್ಕೃತರ ಕೃತಿಗಳ ಕುರಿತ ಲೇಖನಗಳಿರುವಂತೆಯೇ ಭಾರತೀಯರಾದ ಅಂಜುಂ ಹಸನ್, ಸೈರಸ್ ಮಿಸ್ತ್ರಿ. ಗೀತಾಂಜಲಿ ಶ್ರೀ, ಅಜಿತನ್ ಕುರುಪ್, ಹರೀಶ್ ಎಸ್ ಕೃತಿಗಳ ಕುರಿತ ಲೇಖನಗಳೂ ಇವೆ. ಇಬ್ಬರು ಮೂವರನ್ನು ಹೊರತು ಪಡಿಸಿದರೆ ಎಲ್ಲರೂ ಸಮಕಾಲೀನರೇ, ಈಗಲೂ ಬರೆಯುತ್ತಿರುವವರೇ. ಆಸ್ಟ್ರೇಲಿಯಾ, ಬಾಂಗ್ಲಾ, ಪ್ಯಾಲಸ್ತೇನ್, ಟರ್ಕಿ, ಫ್ರಾನ್ಸ್, ಜರ್ಮನಿ ಮುಂತಾಗಿ ವಿವಿಧ ದೇಶಗಳ ಲೇಖಕರು ಇರುವಂತೆಯೇ ಈಶಾನ್ಯ ಭಾರತ, ಮಹರಾಷ್ಟ್ರ, ಕೇರಳದ ಲೇಖಕರು ಇಲ್ಲಿದ್ದಾರೆ. ಇವೆಲ್ಲ ವಿವರಗಳಿಗಿಂತ ಮುಖ್ಯವಾದದ್ದು ಇಲ್ಲಿ ಉಲ್ಲೇಖಗೊಂಡಿರುವ ಕೃತಿಗಳೆಲ್ಲವೂ ಪ್ರತಿಯೊಬ್ಬರೂ ಓದಲೇ ಬೇಕಾದಂಥವು, ಬದುಕನ್ನು ಶ್ರೀಮಂತಗೊಳಿಸುವಂಥವು, ಸಾರ್ಥಕಗೊಳಿಸುವಂಥವು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ. ಹಾಗಾಗಿಯೇ ಇಂಥ ಅದ್ಭುತ ಕೃತಿಗಳ ಬಗ್ಗೆ ನಿಮ್ಮ ಗಮನ ಹರಿಯುವಂತೆ ಮಾಡುವ ಕಾರಣಕ್ಕೇ ಈ ನನ್ನ ಪುಸ್ತಕಕ್ಕೆ ಕೂಡ ಸಾವಿಲ್ಲದ ಅಮರತ್ವ ಪ್ರಾಪ್ತವಾಗುತ್ತದೆ ಎನ್ನುವ ವಿಶ್ವಾಸ ನನ್ನದು!
-ನರೇಂದ್ರ ಪೈ
Share


Subscribe to our emails
Subscribe to our mailing list for insider news, product launches, and more.