Mrugavadhe Rajanikanth
Publisher - ಐಬಿಹೆಚ್ ಪ್ರಕಾಶನ
Regular price
Rs. 140.00
Regular price
Rs. 140.00
Sale price
Rs. 140.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
“ರಸಯಾನ” ಹೆಸರಿನ ಇಲ್ಲಿಯ ಕತೆಗಳನ್ನು ಪ್ರಥಮ ಪುರುಷ ನಿರೂಪಣೆಯಲ್ಲಿ ಬರೆದಿದ್ದೇನೆ. ಈ ಕತೆಗಳು ನನ್ನ ಆತ್ಮ ಚರಿತ್ರೆ ಅಲ್ಲ. ಆತ್ಮ ನಿವೇದನೆಯೂ ಅಲ್ಲ. ಬರಿಯ ಚರಿತ್ರೆಯೂ ಅಲ್ಲ. ಅವುಗಳು ಶುದ್ಧ ಕತೆಗಳು, ನಿರೂಪಣೆ ಪ್ರಥಮ ಪುರುಷದಲ್ಲಿ ಇರುವುದರಿಂದ ಅಲ್ಲಿನ ಸನ್ನಿವೇಶಗಳು ನನಗೆ ನಾಯಕನ ಪಾತ್ರ ನೀಡಿವೆ. ಅಷ್ಟೇ. ಈ ಕಥೆಗಳ ಹಿಂದಿನ ಸಾಹಿತ್ಯಕ ಪ್ರಜ್ಞಾ ಪ್ರವಾಹ ತಂತ್ರ” ದಲ್ಲಿ ಸಮಾಜದ ಚಲನಶೀಲತೆಯ ಅಂಶಗಳನ್ನು ಜೀವನ ಪ್ರೀತಿಯ ತತ್ತ್ವದಡಿ ಹೆಣೆಯುವ ಯತ್ನ ಮಾಡಿದ್ದೇನೆ. ಕತೆಗಳಲ್ಲಿ ಅನುಭವ, ಅನುಭಾವ, ಘಟನೆ, ಕಲ್ಪನೆ, ಮೆಲುಕು, ವಿವೇಚನೆ, ವಿಮರ್ಶೆ, ಹಾಸ್ಯ, ವ್ಯಂಗ್ಯ, (satire), ಗದ್ಯದಲ್ಲಿ ಕಾವ್ಯ ಭಾಷೆಯ ಪ್ರಯೋಗ, ಆಪ್ತ ನಿರೂಪಣೆ, ಮಲೆನಾಡಿನ ಗ್ರಾಮ್ಯ ಭಾಷೆ, ಶೈಲಿ, ಮಹಾನಗರದ ಭಾಷೆ, ಕಳೆದ 50 ವರ್ಷಗಳಲ್ಲಿ ನಡೆದ ಸ್ಥಿತ್ಯಂತರಗಳು, ಬದುಕು ಚಲಿಸಿದ ರೀತಿ.... ಹೀಗೆ ಹಲವು ಅಂಶಗಳ ರಸ ಸೃಷ್ಟಿಯ ಕ್ರಿಯೆಯಲ್ಲಿ ರಸ ಘಟ್ಟಿಯ ನಿರ್ಮಾಣ ನನ್ನ ಉದ್ದೇಶವಾಗಿತ್ತು. ನಿಮ್ಮ ಅಪಾರ ಪ್ರಮಾಣದ ಮೆಚ್ಚುಗೆಗೆ ನಾನು ಕೃತಜ್ಞ.
