Skip to product information
1 of 1

Rajashekara Kukkunda

ಪುಟಾಣಿ ಪ್ರಾಸಗಳು

ಪುಟಾಣಿ ಪ್ರಾಸಗಳು

Publisher -

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಪುಟಾಣಿಗಳದೇ ಒಂದು ಜಗತ್ತು, ಅದರೊಳಗೆ ಇಳಿಯುವುದು, ಇಳಿದು ಒಂದಾಗಿ ಹೋಗುವುದು ಒಂದು ಬಲು ಸೊಗಸಿನ ಸಂಗತಿಯೆ, ಅದರದೇ ಆದ ನವಿರುಂಟು ಅಲ್ಲಿ, ಅದರದೇ ಆದ ಬೆರಗುಂಟು ಅಲ್ಲಿ, ಅದರದೇ ಆದ ಚುರುಕು, ಚಟುವಟಿಕೆ ಉಂಟು ಅಲ್ಲಿ, ಅದೊಂದು ಗುಟ್ಟಿನ ಪೆಟ್ಟಿಗೆ, ಪ್ರತಿಸಲವೂ ಹೊಸ ಪ್ಯಾಕುಮಾಡಿಕೊಳ್ಳುವ ಗಿಫ್ಟು! ಇಂಥ ಗಿಗಿಫ್ಟಿನ ಪ್ಯಾಕೊಂದು ಬಿಡಿಸಿಕೊಳ್ಳಲು ಸಿದ್ಧವಾಗಿದೆ ಇಲ್ಲಿ!

ಬೆಂಗಳೂರಿನಲ್ಲಿ

ಮೆಜೆಸ್ಟಿಕ್ಕಿನಲಿ

ಸುಸುಮಾಡಲಿಕ್ಕೆ ಜಾಗ

ಹುಡುಕುತಿತ್ತು ಇಲಿ!

ಅಂಥ ಇಲಿಯನ್ನ ನೀವೂ ಭೇಟಿಯಾಗಲೇಬೇಕು. ಅದರ ಜೊತೆ ಮಾತಿಗಿಳಿಯಬೇಕು, ಹೂಂ ಹೂಂ, ಪುಟಾಣಿಗಳ ಬಳಗಕ್ಕೆ ಸೇರಬೇಕೆಂದರೆ ಹಾಗೆಲ್ಲ ಮಾಡಲೇಬೇಕು!

ಈ ಬಗೆಯ ಪ್ರೀತಿಯ ಒತ್ತಾಯ ತಂದಿರುವ ಕವಿ ರಾಜಶೇಖರ ಕುಕ್ಕುಂದಾ ಈಗಾಗಲೇ ಮಕ್ಕಳ ಲೋಕದಲ್ಲಿ ತಮ್ಮನ್ನು ಸಖತ್ತಾಗಿಯೇ ಗುರುತಿಸಿಕೊಂಡವರು, 'ಚೆಲುವ ಚಂದಿರ' ಮತ್ತು 'ಗೋಲ ಗುಮ್ಮಟ ' - ಮಕ್ಕಳ ಕವನ ಸಂಕಲನಗಳನ್ನ ತಂದು ಈಗ ಒಂದಿಷ್ಟು ಸಮಯ ಕಳೆದಿದ್ದರೂ ಹಾಲುಗಲ್ಲದ ಹುಡುಗರ ಗುಂಗಿನಲ್ಲಿ ತೇಲಿಕೊಂಡೇ ಇರುವವರು, ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿಯ ಬಿಡುವಿಲ್ಲದ ತೊಡಗುವಿಕೆಯಲ್ಲೂ ಮಕ್ಕಳೆಡೆಗೆ ಸದಾ ಮುಖ ಮಾಡಿಕೊಂಡಿರುವವರು. ಅದೊಂದು ಒಳಗಿನ ಬತ್ತದ ಹಂಬಲ, ಹಾಗಾಗಿಯೇ ಕಲಬುರ್ಗಿಯ ಬಿಸಿಲಿನೊಳಗಣ ನೆರಳ ಕನಸಿನಂತೆ ಅವರೊಳಗೆ ಮಕ್ಕಳ ಮಾತುಕತೆಗಳು ಹಬ್ಬಿ ಹಂದರವಾಗುತ್ತಲೇ ಇರುತ್ತವೆ, ಚಿಗುರಿ ಚಿಮ್ಮಿಕೊಳ್ಳಲು ಸದಾ ಕಾಯುತ್ತಲೇ ಇರುತ್ತವೆ. ಹೀಗೆ ಮೌನದೊಳಡಗಿದ ಕಟ್ಟಿನೊಳಗಿಂದ ಇದೊಂದು ಸಿವುಡು.
'ಬಾನ ಬಯಲ ಅಂಗಳ' ಕಂಡ ಈ ಕವಿ ಅದರಲ್ಲೀಗ
ಪುಟ್ಟ ಪುಟ್ಟ ಚುಕ್ಕೆಗಳನ್ನ ಇಟ್ಟಿದ್ದಾರೆ. ಆಡಲು ಚಿಣ್ಣರನ್ನ ಕರೆದಿದ್ದಾರೆ.

-ಆನಂದ ಪಾಟೀಲ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)