Skip to product information
1 of 1

Sharana Basaveshvara Angadi, T. R. Anantharam

ನಗ್ ನಗ್ತಾ ವಿಜ್ಞಾನ

ನಗ್ ನಗ್ತಾ ವಿಜ್ಞಾನ

Publisher - ಭೂಮಿ ಬುಕ್ಸ್

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಕುಡಿಯೆಣ್ಣೆಯಲ್ಲಿ ಪೂರಿ ಏಕೆ ಉಬ್ಬಿಕೊಳ್ಳುತ್ತದೆ? 'ಎಕ್ಸ್ ಕಿರಣವೇ ಏಕೆ? 'ವೈ' ಕಿರಣ ಯಾಕೆ ಅಲ್ಲ? ಚಂದ್ರ ನೀಲಿಯಾಗುವುದು ಯಾವಾಗ? ಭಾಷಣಕ್ಕೆ ನಿಂತಾಗ ಗಂಟಲು ಒಣಗುವುದು ಏಕೆ? ಗಾಯ ಮಾಯುವಾಗ ನವೆ-ತುರಿಕೆ ಏಕೆ? ಇಂದ್ರಜಾಲದಲ್ಲಿ ಇಂದ್ರ ಹೇಗೆ ಬಂದ? ಹಾರ್ಸ್‌ ಪವರ್‌ನಲ್ಲಿ ಕುದುರೆಗೇನು ಕೆಲಸ? ನಾಯಿ ಮಲಗುವ ಮುನ್ನ ಮೂರು ಸುತ್ತು ಹಾಕುವುದೇಕೆ?

-ಇಂಥ ಪ್ರಶ್ನೆಗಳಿಗೆ ವೈಜ್ಞಾನಿಕ ಹಿನ್ನೆಲೆ, ಚಾರಿತ್ರಿಕ ಕಾರಣಗಳನ್ನು ನೀಡಿದ ನಂತರ ಅದೇ ಪ್ರಶ್ನೆಗೆ ತುಂಟ, ವಿನೋದದ ಉತ್ತರಗಳೂ ಇಲ್ಲಿವೆ. ನಾಯಿ ಮಲಗುವ ಮುನ್ನ ಸುತ್ತು ಹಾಕುವುದೇಕೆಂದರೆ “ಮಲಗಿದ ನಂತರ ಹಾಕೋಕಾಗಲ್ವಲ್ಲ'' ಎಂಬ ಉತ್ತರವೂ ಸಿಗುತ್ತದೆ. ಗಂಭೀರ ಓದಿನ ಏಕತಾನತೆಯನ್ನು ಮುರಿಯುತ್ತಲೇ ನಗೆ ಚೆಲ್ಲಿ ಮುಂದಿನ ಪ್ರಶ್ನೆಗೆ ಹೋಗುವಂತೆ ಲವಲವಿಕೆಯ ಮಾಹಿತಿಗಳು ಇದರಲ್ಲಿವೆ. ನಮ್ಮ ಮುಂದೆಯೆ ನಿತ್ಯವೂ ನಡೆಯುವ, ಆದರೆ ನಾವು ಕ್ಷುಲ್ಲಕ ಎಂದು ಪರಿಗಣಿಸುವ ಹಲವು ಹತ್ತು ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಹಾಕಿ, ಕುತೂಹಲದ ಮತ್ತೇರಿಸಿ ಉತ್ತರ ಸಿಗುವವರೆಗೂ ತಲೆಕೆಟ್ಟು ಓಡುವಂತೆ ಮಾಡುತ್ತದೆ.

ವಿಸ್ತಾರವಾದ ವಿಷಯಗಳ ಬಗ್ಗೆ ಸಂಕೀರ್ಣ ವಿವರಗಳನ್ನು ಸರಳ ಭಾಷೆಯಲ್ಲಿ ತಮಾಷೆಯ ಧ್ವನಿಯಲ್ಲಿ ಕಟ್ಟಿಕೊಡುವ ಈ ಸಂಕಲನ ಒಮ್ಮೆ ಕೈಗೆ ಬಂದರೆ ಸಾಕು, ನಮಗರಿವಿಲ್ಲದೆಯೇ ಅರಿವಿನ ಧಾರೆ ಚಲಿಸುವುದು ಖಂಡಿತ.

ಇದು ಎಲ್ಲ ವಯಸ್ಸಿನವರಲ್ಲೂ ಎಲ್ಲ ಸ್ತರದಲ್ಲೂ ಪ್ರಜ್ಞೆ ಮೂಡಿಸುವ ನಗ್ ನಗ್ತಾ ವಿಜ್ಜಾನ!

- ಡಾ. ಕೆ.ಎನ್.ಗ‍ಣೇಶಯ್ಯ
ಹೆಸರಾಂತ ವಿಜ್ಞಾನಿ, 'ಕನಕ ಮುಸುಕು' ಖ್ಯಾತಿಯ ವಿಜ್ಞಾನ ಕತೆಗಾರ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)