Prof. A. V. Navada
ಮುದ್ದಣ ಕೃತಿಕರಜನ
ಮುದ್ದಣ ಕೃತಿಕರಜನ
Publisher -
- Free Shipping Above ₹250
- Cash on Delivery (COD) Available
Pages - 640
Type - Hardcover
ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಮುದ್ದಣನ ಪ್ರತ್ಯೇಕತೆ - ವಿಶಿಷ್ಟತೆ – ಹೊಸದಾರಿ ಏನೆಂಬುದನ್ನು ಕನ್ನಡ ಸಾಹಿತ್ಯಜ್ಞರು ಬಲ್ಲರು. ಅವನ ಕೃತಿಗಳು ಪಠ್ಯವಾಗಿ ಕೂಡ ಜನಪ್ರಿಯತೆಯನ್ನು ಗಳಿಸಿವೆ. ಎಲ್ಲ ಕೃತಿಗಳೂ ಹಲವು ಬಾರಿ ಸಂಪಾದಿತವಾಗಿವೆ; ಮುದ್ರಿತವಾಗಿವೆ. ಆತನ ಎಲ್ಲ ಕೃತಿಗಳನ್ನು ಪೂರಕ ವಿಷಯಗಳೊಡನೆ ಪ್ರತ್ಯೇಕ ಪ್ರಸ್ತಾವನೆಗಳ ಸಹಿತವಾಗಿ ಸಂಪಾದಿಸಿ ಸಂಪುಟವಾಗಿಸಿ ಸಾಹಿತ್ಯಲೋಕಕ್ಕೆ ಪ್ರೊ. ಎ.ವಿ. ನಾವಡರು ಹೊಸದಾಗಿ ನೀಡಿದ್ದಾರೆ. ಅದೇ 'ಮುದ್ದಣ ಕೃತಿ ಕರಜನ'. ಒಬ್ಬ ಕವಿಯ ಕೃತಿಗಳು ಹೀಗೆ ಪುನಃ ಪುನಃ ಸಂಪಾದಿತವಾಗಿ ಹೊರಬರುತ್ತಿರುವುದು ಕವಿಯ ಕೃತಿಗಳ ಜನಪ್ರಿಯತೆಯನ್ನು ಮಾತ್ರವಲ್ಲ ಆ ಕೃತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಗಳಿಸಿರುವ ಸ್ಥಾನವನ್ನೂ ಬದಲಾದ ಕಾಲದಲ್ಲಿ ಆ ಕೃತಿಗಳ ಪ್ರಸ್ತುತತೆಯನ್ನೂ ತಿಳಿಸುತ್ತವೆ.
ಕನ್ನಡ ಭಾಷೆ ಹೊಸಹೊಸ ಮಜಲುಗಳನ್ನು ದಾಟುತ್ತಿರುವಾಗ ಮುದ್ದಣ ತನ್ನ ಕಾಲದಲ್ಲಿ ಮಾಡಿದ ಚಿಂತನೆಗಳು ಹೇಗೆ ಹೊಸ ದಾರಿಯನ್ನು ತೋರಿ ಕ್ಷೇತ್ರ ವಿಸ್ತರಣೆ ಮಾಡಿದುವೆಂಬುದನ್ನು ನಾವು ಚಿಂತಿಸಬೇಕಾಗಿದೆ. ಅದನ್ನೂ ಈ ಸಂಪುಟ ಸೂಚಿಸುತ್ತದೆ. ಪ್ರೊ. ಎ.ವಿ. ನಾವಡರ ಪರಿಶ್ರಮದಿಂದ ಕನ್ನಡ ಸಾಹಿತ್ಯಲೋಕ ಇನ್ನಷ್ಟು ಸುಪುಷ್ಟವಾಗಿದೆ. ಅವರಿಗೆ ಅಭಿನಂದನೆಗಳು.
-ಡಾ. ಪಾದೇಕಲ್ಲು ವಿಷ್ಣುಭಟ್ಟ
Share
Subscribe to our emails
Subscribe to our mailing list for insider news, product launches, and more.