Skip to product information
1 of 1

Sharada Gopal

ಮೂಕ ಸಹ್ಯಾದ್ರಿಗೆ ಮಾತು ಕೊಟ್ಟವಳು ಡಾ. ಕುಸುಮಾ ಸೊರಬ

ಮೂಕ ಸಹ್ಯಾದ್ರಿಗೆ ಮಾತು ಕೊಟ್ಟವಳು ಡಾ. ಕುಸುಮಾ ಸೊರಬ

Publisher -

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಜಗತ್ತಿನ ೧೮ ಮಹತ್ವದ ಜೀವಜಾಲ ತಾಣಗಳಲ್ಲಿ ಒಂದಾಗಿರುವ ಕರ್ನಾಟಕದ ಸಹ್ಯಾದ್ರಿಯನ್ನು ಉಳಿಸಿಕೊಳ್ಳುವಲ್ಲಿ ಸತತವಾಗಿ ಹೋರಾಡಿ ಜೀವ ಸವೆಸಿದ ಡಾ|| ಕುಸುಮಾ ಸೊರಬರವರ ಜೀವನಗಾಥೆ ಈ ಕೃತಿಯಲ್ಲಿದೆ. ಕನ್ನಡನಾಡು ಕಂಡ ಅಪರೂಪದ ಪರಿಸರ ಹೋರಾಟಗಾರ್ತಿ 'ಕುಸುಮಕ್ಕ', ನೈಸರ್ಗಿಕ ಕೃಷಿ, ಹಾಲಕ್ಕಿ ಜನಾಂಗದವರಿಗೆ ಶಿಕ್ಷಣ, ಸಂತ್ರಸ್ತರಿಗೆ ಪರಿಹಾರ, ಗಡಿ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಾಗಾರಗಳು, ಸಹ್ಯಾದ್ರಿ ರಕ್ಷಣೆಗಾಗಿ ಕೇರಳದಿಂದ ಮಹಾರಾಷ್ಟ್ರದವರೆಗೆ ಪಾದಯಾತ್ರೆ, ಕೈಗಾ ಅಣುಸ್ಥಾವರದ ಸುತ್ತಮುತ್ತಲ ಜನರ ಆರೋಗ್ಯ ಸಮೀಕ್ಷೆ ಮುಂತಾದ ಹಲವಾರು ಜನಾಂದೋಲನಗಳಲ್ಲಿ ಪಾಲ್ಗೊಂಡು ಕನ್ನಡದ ಜನಮಾನಸದಲ್ಲಿ ನೆಲೆಯಾದವರು ಕುಸುಮಾ ಸೊರಬ, ಪರಿಸರ ಮತ್ತು ಸಾಮಾಜಿಕ ಹೋರಾಟವನ್ನು ಜೀವನಧರ್ಮವೆಂದು ಬಾಳಿ ತೋರಿಸಿದವರು. ದಲಿತ ರೈತ, ಕನ್ನಡ, ಪರಿಸರ, ಬಳಕೆದಾರ ಚಳವಳಿಗಳಿಗೆ ಒಂದು ನೆಲೆ ಕಲ್ಪಿಸಿ ಒಗ್ಗೂಡಿಸಿದ್ದಲ್ಲದೇ, ಮಹಿಳಾ ಚಳವಳಿಯನ್ನು ಇಂತಹ ಎಲ್ಲ ಚಳವಳಿಗಳ ಭಿತ್ತಿಯನ್ನಾಗಿ ಮಾಡಿದವರು, ದಿಟ್ಟತನದ, ಅಂತಃಕರಣದ, ತಾಯಿ ಹೃದಯದ ಡಾ| ಕುಸುಮಾ ಸೊರಬರವರ ಕುರಿತು, ಲೇಖಕಿ ಮತ್ತು ಹೋರಾಟಗಾರ್ತಿ ಶಾರದಾ ಗೋಪಾಲರವರು ಮನಮುಟ್ಟುವಂತೆ 'ಮೂಕ ಸಹ್ಯಾದ್ರಿಗೆ ಮಾತು ಕೊಟ್ಟವಳು – ಡಾ|| ಕುಸುಮಾ ಸೊರಬ' ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

-ಡಾ|| ವಸುಂಧರಾ ಭೂಪತಿ
ಅಧ್ಯಕ್ಷರು
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)