Shivanada Kalave
Publisher -
- Free Shipping
- Cash on Delivery (COD) Available
Couldn't load pickup availability
ಕಗ್ಗಾಡಿನ ನಡುವೆ ಒಂದು ಹಳ್ಳಿ ಬದುಕನ್ನು ಅರಸಿ ಹೋದಾಗ ಕಂಡ ನೋಟಗಳನ್ನು ಈ ಕಾದಂಬರಿಯಲ್ಲಿ ಸೆರೆಹಿಡಿದಿದ್ದಾರೆ ಶಿವಾನಂದ ಕಳವೆ. ಕೇರಳ ತುದಿಯಿಂದ ಮಧ್ಯ ಘಟ್ಟ ಕೆಳಗಿನ ಕೇರಿಗೆ ಹತ್ತು ದಿನಗಳ ಕಾಲ ಒಂಬತ್ತು ನದಿಗಳನ್ನು ದಾಟಿ ಪುಟ್ಟ ಮಕ್ಕಳ ಜೊತೆ ಬಂದವಳು ಭೂದೇವಿ. ಶಿರಸಿ ಕಡೆ ಮನುಷ್ಯರ ತಿನ್ನೋ ಜನ ಇದ್ದರೆಂಬ ಭಯದಲ್ಲಿ ಅಳುಕುತ್ತ ಬಂದವಳು, ಕಾಡಿನ ಕತ್ತಲಲ್ಲಿ ದಿನ ಕಳೆದ ಜೀವನ ವೃತ್ತಾಂತ ದೊಡ್ಡದು. ಪಶ್ಚಿಮ ಘಟ್ಟದ ಪರಿಸರವನ್ನು ತೆರೆದಿಡುವ ಕಥೆಯಿದು. ಇದರೊಂದಿಗೆ ಕಾಡಿನ ಪರಿಸರವನ್ನು ಬಿಂಬಿಸುವ ಕಥಾವಸ್ತುವನ್ನು ಹೊಂದಿದ್ದು, ಜೊತೆಗೆ, ಕಾಡಿನ ಮಧ್ಯೆ ನಡೆಯುವ ಅನಾಹುತಕಾರಿ ಘಟನೆಗಳ ಮೂಲಕ ಕಾಡನ್ನು ಹೇಗೆ ಹಾಳು ಮಾಡಲಾಗುತ್ತಿದೆ ಎಂಬ ವಸ್ತುವೂ ಇದರಲ್ಲಿದೆ. ಕಥಾವಸ್ತು, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿಯಿಂದ ಇಲ್ಲಿಯ ಕಥೆಯು ಓದುಗರ ಗಮನ ಸೆಳೆಯುತ್ತದೆ.
