Skip to product information
1 of 2

Nagesh Kumar. C. S.

ಕೊನೆಗಾಣದ ರಾತ್ರಿ

ಕೊನೆಗಾಣದ ರಾತ್ರಿ

Publisher -

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 208

Type - Paperback

ಬೇಸಿಗೆಯಲ್ಲಿ ಅಂಟಾರ್ಟಿಕಾ ಮೈಯನ್ನು ಮರಗಟ್ಟಿಸುತ್ತದೆ. ಚಳಿಗಾಲದಲ್ಲಿ ಮೂಗುಜ್ಜಿಕೊಂಡರೆ ಸುಲಿದಿರುವುದು ಕನ್ನಡಿಯನ್ನು ನೋಡಿಕೊಂಡಾಗಲೇ,. ಚಳಿಯ ಪರಮಾವಧಿಗೆ ಅಲ್ಲಿ ಸಿಲುಕಿದವರ ಮೈ ವೈಬ್ರೇಟರ್ ಮೋಡ್‌ನಲ್ಲಿರುವ ಮೊಬೈಲ್‌ನಂತೆ ನಡುಗುತ್ತಿರುತ್ತದೆ. ಹವಾಮಾನ ಹೀಗಿರುವಾಗ ಕೊಲೆಗಾರನೊಬ್ಬನು ಸನಿಹದಲ್ಲಿಯೇ ಇದ್ದಾನೆಂಬ ಭಯದಿಂದ ಮೂಡಿದ ಚಳಿಯೂ ಸೇರಿದರೆ... ಊಹೆಗೆ ನಿಲುಕದ ತನು-ಮನಥಂಡಿ!ಅಲಿಸ್ಟರ್ ಮ್ಯಾಕ್ಲೀನ್ ಆಂಗ್ಲದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರ ಪೈಕ ಅಗ್ರಪಂಕ್ತಿಯಲ್ಲಿರುವವನು. ಮ್ಯಾಕ್ಲೀನಿನ 'ಗನ್ಸ್ ಆಫ್ ನವರೋನ್”, 'ಫೋರ್ಸ್ ಟೆನ್ ಫ್ರಂ ನವರೋನ್' ಮುಂತಾದ ಕೃತಿಗಳು ಚಲನಚಿತ್ರಗಳಾಗಿಯೂ ವಿಶ್ವವಿಖ್ಯಾತವಾಗಿವೆ. ಆತನ ಇಂಗ್ಲಿಷ್ ಭಾಷಾ ಪ್ರಯೋಗದಲ್ಲಿ ಕ್ಲಿಷ್ಟತಮ ನಾವೀನ್ಯತೆ ಇರುತ್ತದೆ. ವಿಷಯಮಂಡಣೆಗೆ ಮುನ್ನ ಆಳವಾದ ಅಧ್ಯಯನವಿರುತ್ತದೆ. ಈ ಕೃತಿಯ ಅನುವಾದಕ್ಕೆ ವಸ್ತುವಾದ 'ನೈಟ್ ವಿತೌಟ್ ಎಂಡ್ ' ಚಳಿಗಾಲದ ಧ್ರುವಪ್ರದೇಶದ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತಲೇ ಹಲವಾರು ವೈಜ್ಞಾನಿಕ ಸತ್ಯಗಳನ್ನೂ, ಕಲ್ಪನೆಗಳನ್ನೂ ಹದವಾಗಿ ಹೆಣೆದು ಕೊಟ್ಟಿದೆ. ಈ ಪರಿಪಕ್ವ ಪಾಕವನ್ನು ಗೆಳೆಯ ನಾಗೇಶ್ ಕುಮಾರ್ 'ಕೊನೆಗಾಣದ ರಾತ್ರಿ' ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡಿಗರಿಗೆ ಸೊಗಸಾಗಿ ಉಣಬಡಿಸಿದ್ದಾರೆ. ಮೂಲ ಕೃತಿಗೆ ನಿಷ್ಠವಾಗಿರುವ ಈ ಕೃತಿಯು ಗೂಢಚರೆ, ನಿಗೂಢತೆಗಳನ್ನು ಇಷ್ಟಪಡುವ ಓದುಗರ ಮನೆಯ ಕಪಾಟಿಗೆ ಶೋಭೆ ತರುವುದು ಸುನಿಶ್ಚಿತ. 

– ಎನ್, ರಾಮನಾಥ್‌
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)