Skip to product information
1 of 2

Kiran Kumar

ಕಾಜೂ ಬಿಸ್ಕೆಟ್

ಕಾಜೂ ಬಿಸ್ಕೆಟ್

Publisher -

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 100

Type - Paperback

ಡೆಸ್ಕೊಂದರ ಡ್ರಾಯರಿನಲ್ಲಿ ಬಿಸ್ಕೆಟ್ ಪೊಟ್ಟಣವೊಂದು ಕಂಡಿತು ಒಂದೆರೆಡನ್ನು ತಿಂದು ಉಳಿದವನ್ನು ಬಿಟ್ಟು ಹೋಗಿದ್ದವರಿಗೆ ಮಧ್ಯರಾತ್ರಿ ಆಫೀಸು ಕ್ಲೀನ್ ಮಾಡಲು ಬರುವ ಸಿದ್ರಾಮನ ಮನಸಿನಲ್ಲಿ ಆ ಪೊಟ್ಟಣ ಉಂಟುಮಾಡಬಹುದಾದ ಕೋಲಾಹಲದ ಅರಿವಿರಲಿಲ್ಲ. ಸಿದ್ರಾಮ ಮತ್ತೊಮ್ಮೆ ನೀರು ಕುಡಿದು ಬಂದ ಆ ಡ್ರಾಯರಿನಿಂದ ದೂರಕ್ಕೆ ದೃಷ್ಟಿ ನೆಟ್ಟು ಅಲ್ಲಿ ಬಿಸ್ಕೆಟ್ ಇಲ್ಲವೇನೋ ಎಂಬಂತೆ ನಟಿಸಿದ, ಬೇಗಬೇಗ ಆ ಕೋಣೆಯ ಕೆಲಸ ಮುಗಿಸಿ ಬಾಗಿಲಿನತ್ತ ನಡೆದ.

ಬಾಗಿಲಿನ ಬಳಿಯಿದ್ದ ಸಿದ್ರಾಮನ ಮೂಗಿಗೆ ದೂರದ ಡ್ರಾಯರಿನಲ್ಲಿದ್ದ ಬಿಸ್ಕೆಟ್ಟಿನೊಳಗಿದ್ದಿರಬಹುದಾದ ಬೆಣ್ಣೆ ಮತ್ತು ಗೋಡಂಬಿಯ ಸುವಾಸನೆ ಬಡಿಯಲು ಸಾಧ್ಯವಿರಲಿಲ್ಲ ಆದರೂ ಅದು ಅವನನ್ನು ವಾಪಾಸು ಆ ಡೆಸ್ಕಿನ ಬಳಿ ಬರುವಂತೆ ಮಾಡಿತು...

ಪ್ರಪಂಚ ಈಗೀಗ ತೀರಾ ಕೆಡುತ್ತಲಿರುವುದು ನಿತ್ಯಾಳ ಗಮನಕ್ಕೆ ಬಂದಿತ್ತು. ಮನೆಗೆಲಸದವಳು ಮೂಲೆಗಳಿಗೆ ಪೊರಕೆ ಓಡಿಸುವುದಿಲ್ಲ.ತರಕಾರಿಯವನ ಲೆಕ್ಕ ಅವನಿಗೇ ಅರ್ಥವಾಗಬೇಕು, ಕೋಟಿಗಟ್ಟಲೆ ಸಾಲ ಮಾಡಿದವರು ದೇಶ ಬಿಟ್ಟು ಓಡಿ ಹೋಗುತ್ತಾರೆ. ಇದಕ್ಕೆಲ್ಲ ತನ್ನ ಕೈಲಾದದ್ದು ಏನಾದರೂ ಮಾಡಲೇಬೇಕು ಎಂದು ಅವಳು ತೀರ್ಮಾನಿಸಿದಳು. ಎಷ್ಟು ದೊಡ್ಡ ಬದಲಾವಣೆ ಕೂಡ ಒಂದು ಚಿಕ್ಕ ಹೆಜ್ಜೆಯಿಂದಲೇ ಶುರುವಾಗಬೇಕು, ಹಾಗೂ ಎಷ್ಟೇ ಕಷ್ಟವಾದರೂ ತಾನು ಆ ಹೆಜ್ಜೆ ಇಡಲೇಬೇಕು ಎಂದುಕೊಂಡವಳು ಅಡ್ಮಿನ್ ವಿಭಾಗಕ್ಕೆ ಕರೆ ಮಾಡಿ ತನ್ನ ಕಾಜೂ ಬಿಸ್ಕೆಟ್ ಕದ್ದು ಹೋದದ್ದರ ಬಗ್ಗೆ ದೂರು ದಾಖಲಿಸಿದಳು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)