Dr. S. V. Chamu
Publisher - ಅಷ್ಟಾಂಗಯೋಗ ವಿಜ್ಞಾನ ಮಂದಿರ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಕೀರ್ತಿಶೇಷರಾದ ಡಾ. ಎಸ್. ವಿ. ಚಾಮು ಅವರ ನಿಜನಾಮಧೇಯ ಇಳಯವಲ್ಲೀ ವೇಂಕಟ ನರಸಿಂಹಾಚಾರ್ ಎಂದು. ಇವರು ಮೈಸೂರು ಮಹಾರಾಜ ಕಾಲೇಜಿನಲ್ಲಿ, ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ..ಪದವಿ ಪಡೆದು ಮಧ್ಯಪ್ರದೇಶದ ಸೌಗರ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್-ಸಾಹಿತ್ಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 'ತ್ರಿಗುಣ ಸಿದ್ಧಾಂತ'ದ ವಿಷಯವಾಗಿ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದರು.
ಶ್ರೀಮಂದಿರದ ವ್ಯವಸ್ಥಾಪಕರೂ, ಪ್ರಥಮಾಧ್ಯಕ್ಷರೂ ಆದ ಪರಮಪೂಜ್ಯ ಶ್ರೀರಂಗಮಹಾಗುರುಗಳ ಆಪ್ತಶಿಷ್ಯರಾಗಿದ್ದು, ಅವರ ವಿಚಾರಸರಣಿಯನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದವರಲ್ಲಿ ಚಾಮು ಅವರೂ ಒಬ್ಬರು. 1964ರ ಅವಧಿಯಲ್ಲಿ ಶ್ರೀಮಂದಿರದ ಕಾರ್ಯದರ್ಶಿಗಳಾಗಿ ಸೇವೆಸಲ್ಲಿಸಿದರು.
ಶ್ರೀಯುತರು ಬಾಲ್ಯದಿಂದಲೂ ಅಧ್ಯಯನಶೀಲರು, ಏಕಾಂತಪ್ರಿಯರು ಮತ್ತು ಅತ್ಯಂತ ಶಿಸ್ತಿನ ಸಿಪಾಯಿಯಾಗಿದ್ದರು.
ಶ್ರೀಗುರುವಿನ ವಿಚಾರಸರಣಿಯನ್ನು ಲೋಕದ ಮುಂದಿಡಬೇಕೆಂಬುದು ಅವರ ಒಂದು ಧೈಯವಾಗಿತ್ತು. 1972ರಲ್ಲಿ ಶ್ರೀರಂಗಮಹಾಗುರುಗಳ ಜೀವನ ಚರಿತ್ರೆಯನ್ನು ಲಿಖಿತಗೊಳಿಸಿದರು. ಆ ಕೃತಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಸಂದಿದೆ. ಶ್ರೀರಂಗಮಹಾಗುರುಗಳು ನಟರಾಜನ ಬಗ್ಗೆ ನಡೆಸಿದ ಮೌಲಿಕ ಸಂಶೋಧನೆಗಳನ್ನು ಆಧರಿಸಿ 'ನಟರಾಜ ಆ್ಯನ್ ಇಂಟರ್‌ಪ್ರಿಟೇಷನ್' (1963) ಮತ್ತು 'ದ ಡಿವೈನ್ ಡ್ಯಾನ್ಸರ್' (1982) ಎಂಬ ಎರಡು ಗ್ರಂಥಗಳನ್ನು ಇಂಗ್ಲೀಷಿನಲ್ಲಿ ರಚಿಸಿದರು. 'ಶ್ರೀರಂಗಸದ್ಗುರು' ಎಂಬ ಕಿರುಹೊತ್ತಗೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ರಚಿಸಿದ್ದಾರೆ. 1976ರಿಂದ ಶ್ರೀಮಂದಿರದ ದ್ವಾರಾ ಪ್ರಕಾಶನಗೊಳ್ಳುತ್ತಿರುವ 'ಆರ್ಯ ಸಂಸ್ಕೃತಿ' ಮಾಸ ಪತ್ರಿಕೆಗೆ ಸುದೀರ್ಘ ಇಪ್ಪತ್ತೊಂದು ವರ್ಷಗಳ ಕಾಲ ಸಂಪಾದಕರಾಗಿ ಅವಿಚ್ಛಿನ್ನ ಸೇವೆಸಲ್ಲಿಸಿದರು. ಆರ್ಷಸಾಹಿತ್ಯ ಸಾರಸಂಗ್ರಹ, ಭಾರತೀಯರ ಜ್ಞಾನೋಪಾಸನೆ, ಅಷ್ಟಾಂಗಯೋಗ, ಪ್ರಣವ-ಗಾಯತ್ರೀ, ಉಪನಿಷತ್ತುಗಳು, ರಾಮಾಯಣ, ಭಗವದ್ಗೀತೆ, ಉದ್ಧವ ಗೀತೆ ಮತ್ತು ಶ್ರೀಕೃಷ್ಣ ಇತ್ಯಾದಿ ಲೇಖನಗಳನ್ನು ಬರೆದು ಜಿಜ್ಜಾಸುಗಳ ಜ್ಞಾನವರ್ಧನೆಗೆ ಕಾರಣರಾಗಿದ್ದಾರೆ.