Karki Krishnamurthy
Publisher - ಅಂಕಿತ ಪುಸ್ತಕ
Regular price
Rs. 175.00
Regular price
Rs. 175.00
Sale price
Rs. 175.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ದಿಬ್ಬದಿಂದ ಆಗಸ ಹತ್ತಿರವೇ? ದಿಬ್ಬದ ಮೇಲಿರುವವನು ಹಾಗೆಂದುಕೊಂಡು ಖುಷಿ ಪಡಬಹುದು, ಕೆಳಗಿರುವವನು ಅವನನ್ನು ನೋಡಿ ಅಸೂಯೆಯನ್ನೂ ಪಡಬಹುದು. ಬೃಹತ್ ಶಿಖರದ ಮೇಲೇರಿ ನೋಡಿದರೆ, ಪ್ರತಿ ದಿಬ್ಬವೂ ಇರುವೆ ಗೂಡಿನಂತೆ ಗೋಚರಿಸುತ್ತದೆ. ಆಕಾಶದಿಂದ ನೋಡಿದಾಗ ಅದೇ ಬೃಹತ್ ಶಿಖರ ಮಕ್ಕಳಾಟದ ಮರಳಗುಡ್ಡೆಯಂತೆ ಕಾಣುತ್ತದೆ. ಎಷ್ಟೇ ಎತ್ತರದ ದಿಬ್ಬವೇರಿದರೂ, ಆಕಾಶಕ್ಕೆ ಎಷ್ಟು ತಾನೇ ಹತ್ತಿರವಾದೇವು? ಹಾಗಂತ ನೆಲಕ್ಕೂ ದಿಬ್ಬಕ್ಕೂ ವ್ಯತ್ಯಾಸವೇ ಇಲ್ಲವೇ? ಇದೆಯೆಂದಾದರೆ ಆ ವ್ಯತ್ಯಾಸ ನಿಜಕ್ಕೂ ಗಣ್ಯವೇ? ಅದೆಲ್ಲ ಇರಲಿ, ನಾವು ಮುಟ್ಟಲು ಹೊರಟಿರುವ ಈ ಆಕಾಶವೆನ್ನುವುದು ಅಸಲಿಗೆ ಅಸ್ತಿತ್ವದಲ್ಲಿದೆಯೇ?
