Skip to product information
1 of 1

Balachandra Saayimane

ಬಿಂಗ್ ಲಾಂಗ್ ಮತ್ತು ಲಂಬನಾಗ್

ಬಿಂಗ್ ಲಾಂಗ್ ಮತ್ತು ಲಂಬನಾಗ್

Publisher - ಭೂಮಿ ಬುಕ್ಸ್

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ನುಂಗಲಾಗದ ಬಿಂಗಲಾಂಗ್, ನಂಬಲಾಗದ ಲಂಬನಾಗ್

ಚೀನಾ ದೇಶದಲ್ಲಿ ಎಳೆ ಅಡಿಕೆಯನ್ನು ಸಿಪ್ಪೆಯ ಸಮೇತ ಬೇಯಿಸುತ್ತಾರೆ. ಅದಕ್ಕೆ ಹೊಸ ರುಚಿ, ಹೊಸ ಗರಿಗಳ ಸೇರಿಸಿ 'ಬಿಂಗ್ ಲಾಂಗ್‌' ಹೆಸರಿನಲ್ಲಿ ಮಾರುತ್ತಾರೆ. ಅಲ್ಲಿ ಬಿದಿರನ್ನು ತೋಟಗಳಲ್ಲಿ ಬೆಳೆಸುತ್ತಾರೆ, ಬಿದಿರಿನಿಂದ ಬಟ್ಟೆ, ಫರ್ನಿಚರ್, ಬಿಯರ್, ಗಳನ್ನು ಉತ್ಪಾದಿಸಿ ಮಾರುವ ಕೃಷಿಕರು ತಮ್ಮ ಹಳ್ಳಿಗಳಲ್ಲೇ ನಾಲ್ಕಾರು ಅಂತಸ್ತುಗಳ ಮನೆ ಕಟ್ಟಿಸಿದ್ದಾರೆ.

ಫಿಲಿಪೈನ್ಸ್ ದೇಶದಲ್ಲಿ ಬೆತ್ತವನ್ನೂ ಭತ್ತದ ಹಾಗೆ ಗದ್ದೆಗಳಲ್ಲಿ ಬೆಳೆಸುತ್ತಾರೆ, ಅಲ್ಲಿ ಅಡಿಕೆಯನ್ನು ಕೆಸರಿನಲ್ಲಿ ಹೂತಿಟ್ಟು ಬೇಕೆಂದಾಗ ತೆಗೆದು ಮೆಲ್ಲುತ್ತಾರೆ, ಅಲ್ಲಿನ ಕಡಿದಾದ ಗುಡ್ಡಗಳಲ್ಲಿ ಭತ್ತ ಬೆಳೆಯುವ ವೈಖರಿಗೆ 'ವಿಶ್ವಪರಂಪರೆ'ಯ ಸಂಮಾನ ಸಿಕ್ಕಿದೆ. ಬಿದಿರಿನ ಬೊಂಬುಗಳಲ್ಲಿ ತೆಂಗಿನ 'ಲಂಬನಾಗ್' ನೀರಾ-ವೈನನ್ನು ಮಾರುತ್ತಾರೆ.

ಅಚ್ಚರಿಗಳ ಆಗರವೆನಿಸಿದ ಈ ದೂರಪೂರ್ವದ ಕೃಷಿ ಉದ್ಯಮವನ್ನು ನೋಡಿಬಂದ ಬಾಲಚಂದ್ರ ಸಾಯಿಮನೆ ಸ್ವತಃ ಕೃಷಿಕರಾಗಿದ್ದು, ಏಳು ದೇಶಗಳ ಎಂಟು ವಿಶ್ವವಿದ್ಯಾಲಯಗಳಲ್ಲಿ ಓದಿದವರು, ನಗರಮುಖಿಯಾಗಿರುವ ನಮ್ಮ ಕೃಷಿಕರು ಹಳ್ಳಿಗೆ ಹಿಂದಿರುಗಲು ಸಾಧ್ಯವಾಗಬಲ್ಲ ಹತ್ತಾರು ಮಾರ್ಗಗಳನ್ನು ಈ ಕೃತಿಯಲ್ಲಿ ತೋರಿಸಿದ್ದಾರೆ.

-ನಾಗೇಶ ಹೆಗಡ
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
B
B.H.

Excellent Reading. One of its first experience from China, a country not yet explored until now.