Skip to product information
1 of 1

Ismail Talakal

ಬೆತ್ತಲೆ ಸಂತ

ಬೆತ್ತಲೆ ಸಂತ

Publisher -

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಯುವ ಲೇಖಕನೊಬ್ಬನಿಂದ ನಾವು ಏನನ್ನು ಬಯಸುತ್ತೇವೆ? ಆರ್ದತೆ, ಅಂತಃಕರಣ ತುಂಬಿದ ಒಡಲು, ಕಣ್ಣು ತೇವವಾಗಿಸಬಲ್ಲ ಭಾವುಕತೆ ಮತ್ತು ಉಳಿದ ಮನುಷ್ಯರಿಗೆ ಸದಾ ದ್ರವಿಸುವ ಹೃದಯ? ಹಾಗಿದ್ದರೆ, ಇಸ್ಮಾಯಿಲ್ ತಳಕಲ್ ಅಂತಹ ಎಲ್ಲ ಗುಣಗಳನ್ನೂ ಪಡೆದ ಬರಹಗಾರ, ಅವರು ಬೆಳೆದು ಬಂದ ಪರಿಸರ, ಅವರನ್ನು ಆವರಿಸಿರುವ ಬದುಕಿನಲ್ಲಿ ಸುಖದುಃಖ, ಬಯಕೆ-ಭಯಗಳೆಲ್ಲವೂ ಯಥಾ ಪ್ರಮಾಣದಲ್ಲಿಯೇ ಇವೆ. ಹಾಗೆಂದೇ, ಅವು ಕಥೆಗಾರನ ಚಾಣದಲ್ಲಿ ಕೆತ್ತಿಸಿಕೊಂಡು ಜೀವವಿರುವ ಮೂರ್ತಿಯಾಗಲು ಬಯಸುತ್ತಿವೆ. ಇಲ್ಲಿನ 'ಗುಲಾಬಿ ಹೂವಿನ ಫ್ರಾಕು' 'ರೋಗಗ್ರಸ್ತ, 'ಜಸ್ಟೀಸ್ ಫಾರ್ ದುರುಗಿ', 'ಬೆತ್ತಲೆ ಸಂತ', 'ಮುರಿದ ಕೊಳಲಿನ ನಾದ' ಕಥೆಗಳಲ್ಲಿ ಆ ಬಗೆಯ ಮೂರ್ತರೂಪದ ಪಾತ್ರಗಳನ್ನು ಎದುರುಗೊಳ್ಳುವರು.

ಸ್ಥಳೀಯ ಭಾಷೆಯ ಸೊಗಡು, ಅಪ್ಪಟ ಪ್ರಾಮಾಣಿಕತೆ, ನೇರವಂತಿಕೆ ಈ ಕಥೆಗಳಲ್ಲಿ ಉಸಿರಿನಷ್ಟು ಸಹಜವಾಗಿ ಬೆರೆತಿವೆ, ಕರ್ಕಶ ಗದ್ದಲದ ಲೋಕದಲ್ಲಿ ಇಸ್ಮಾಯಿಲ್‌ ರಂಥ ಕಥೆಗಾರರ ಮೆದುದನಿ ಕೇಳಿಸಿಕೊಳ್ಳುವುದು ಬಹಳ ಮುಖ್ಯ. ಅದು ಕಥಾಲೋಕದ ಹೊಣೆಗಾರಿಕೆ ಕೂಡ.

-ಕೇಶವ ಮಳಗಿ

'ರೋಗಗ್ರಸ್ತ' ಕಥೆ ಕೊರೊನಾ ಕಾಲದ ಪ್ರಸ್ತುತ ವಿಷಯವಾಗಿದ್ದು ಕಥೆಗೆ ಬೇಕಾದ ಕೌಶಲವಿದ್ದು ಪ್ರತಿಮೆಯ ಮೂಲಕ ಕಥೆಗೆ ಚಲನೆಯಿದೆ ಮತ್ತು ಕಾವ್ಯದ ಲಯವಿದೆ. ಅತ್ಯಂತ ಪರಿಣಾಮಕಾರಿ ದೃಶ್ಯವನ್ನು ಕಟ್ಟಿಕೊಡುತ್ತ ಒಟ್ಟು ಸಮಾಜದ ಒಳಮನಸ್ಸುಗಳು, ದೋಷಗಳು ಮತ್ತು ಪೂರಕ ಗುಣಗಳನ್ನು ಬಿಚ್ಚಿಡುತ್ತದೆ.

- ಸಂಧ್ಯಾ ಹೊನಗುಂಟಿಕ‌ರ್

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)