D. N. Shankara Batt
Publisher - ಡಿ. ಎನ್. ಶಂಕರ ಬಟ್
- Free Shipping
- Cash on Delivery (COD) Available
Pages -
Type -
Couldn't load pickup availability
ಕಣ್ಣುಗಳೆರಡು ನಮ್ಮ ಮೂಗಿನ ತುದಿಯಲ್ಲೇ ಇವೆಯಾದರೂ ಅವು ನೋಯತೊಡಗಿದುವೆಂದರೆ ನಾವು ಸೀದಾ ಡಾಕ್ಟರಲ್ಲಿಗೆ ಓಡುತ್ತೇವೆ. ನಮ್ಮ ವಶದಲ್ಲೇ ಇವೆಯಾದರೂ ಅವುಗಳ ಒಳಗುಟ್ಟು ನಮಗೆ ತಿಳಿದಿಲ್ಲ. ನಮ್ಮ ನಾಲಗೆಯ ತುದಿಯಲ್ಲೇ ಕುಣಿಯುವ ಭಾಷೆಯೂ ಇಂತಹದೇ. ಬೇಕಾದಂತೆ ಅದನ್ನು ನಾವು ಬಳಸಬಲ್ಲೆವು. ಆದರೆ ಅದರ ಒಳಗುಟ್ಟು ಮಾತ್ರ ನಮಗೆ ತಿಳಿಯದು.
ಆದರೆ, ಕಣ್ಣಿನ ನೋವಿನ ಹಾಗೆ ಭಾಷೆಯ ನೋವು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಹಿಂಸಿಸುವುದಿಲ್ಲ. ಅದರ ತೊಂದರೆಯನ್ನು ಇಡೀ ಸಮಾಜವೇ ಒಟ್ಟಾಗಿ ಅನುಭವಿಸುತ್ತದೆ. ಇದಕ್ಕಾಗಿಯೋ ಏನೋ, ಭಾಷಾ ಸಮಸ್ಯೆಯನ್ನು ಪರಿಹರಿಸಲು ಯಾರೂ ಭಾಷಾ ಪಂಡಿತರಲ್ಲಿಗೆ ಓಡುವುದಿಲ್ಲ. ಆದರೆ, ಇದರಿಂದಾಗುವ ಅನಾಹುತಗಳು ಮಾತ್ರ ಹಲವು. ಲಿಪಿಯ ಹೆಸರಿನಲ್ಲಿ (ಇತ್ತೀಚೆಗಿನ ಋಕಾರದ ಸಮಸ್ಯೆ), ಭಾಷಾ ಮಾಧ್ಯಮದ ವಿಷಯದಲ್ಲಿ, ವ್ಯಾಕರಣದ ವಿಷಯದಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಹಲವಿವೆ ಎಂಬುದನ್ನು ಈ ಪುಸ್ತಕ ತೋರಿಸಿ ಕೊಡುತ್ತದೆ. ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ ಬೇರೆ ಬೇರೆ ನಿರ್ಧಾರಗಳನ್ನು ಮಾಡುವವರು ಅವಶ್ಯವಾಗಿಯೂ ತಿಳಿದಿರಬೇಕಾದ ವಿಷಯಗಳಿವು.
