ಹರಿವು ಪ್ರಕಾಶನದ ಮೊದಲ ಕವನ ಸಂಕಲನ ‘ಹೇಳದೇ ಉಳಿದದ್ದು!’

ಹರಿವು ಪ್ರಕಾಶನದ ಮೊದಲ ಕವನ ಸಂಕಲನ ‘ಹೇಳದೇ ಉಳಿದದ್ದು!’

ನೀವು ಮೂರನೇ ತರಗತಿಯಲ್ಲೋ ಐದನೇ ತರಗತಿಯಲ್ಲೋ ಕಲಿತ ಪಾಠವನ್ನು ಇವತ್ತು ನೆನಪಿಸಿಕೊಂಡು ಹೇಳೋಕೆ ಸಾಧ್ಯಾನಾ? ಈ ವಿಷಯದ ಕುರಿತಾಗಿ ಪಾಠವಿತ್ತು ಎಂದು ನೆನಪಿರುತ್ತದೆಯೇ ಹೊರತು, ಅದನ್ನು ನೋಡಿಕೊಳ್ಳದೇ ಹೇಳಲು ಸಾಧ್ಯವಿಲ್ಲ. ಅದೇ ನೀವು ಶಾಲೆಯಲ್ಲಿ ಓದಿದ ‘ಪುಣ್ಯಕೋಟಿ’, ‘ಸಂತಮಣ್ಣ’, ‘ಹೂವಾಡಗಿತ್ತಿ’, ‘ಕರಡಿಕುಣಿತ’, ಪದ್ಯಗಳು ನಿಮ್ಮ ನೆನಪಿನಲ್ಲಿ ಹಾಗೇ ಉಳಿದು ಹೋಗಿರುತ್ತದೆ. ಇದೇ ಕವನ. ಇಷ್ಟೇ ಯಾಕೆ ತಾಯಿ ಮಗುವನ್ನು ಮಲಗಿಸುವಾಗ ಕಟ್ಟಿಕೊಂಡು ಹಾಡುವುದೂ ಕೂಡಾ ಕವನ. ಪ್ರೇಮಿ ತಾನು ಪ್ರೀತಿಸುವವರಿಗೆ ಬರೆದ ಪತ್ರವೂ ಕವನ. ಆದಿ ಕವಿ ಪಂಪನಿಂದ ಹಿಡಿದು ಈ ತಲೆಮಾರಿನ ಹೊಸ ಬರಹಗಾರರವರೆಗೂ ತಮ್ಮ ಭಾವನೆಯನ್ನು ಹೇಳಿಕೊಳ್ಳಲು ಮೊದಲು ಆರಿಸಿಕೊಂಡ ದಾರಿಯೂ ಕವನವೇ.

ಈಗ ಇಂತದ್ದೇ ಒಂದು ಪ್ರಯತ್ನವನ್ನು ಹರಿವು ಬುಕ್ಸ್‌ ಮಾಡುತ್ತಿದೆ. ರೋಚಕ ಕತೆಗಳ ಪುಸ್ತಕವಾದ ‘ಪಾತಾಳಗರಡಿ’, ಸೈನ್ಸ್‌ ಫಿಕ್ಷನ್ ಕತೆಗಳ ಪುಸ್ತಕ ‘ಬಾನಂಚಿನ ಆಚೆ’, ಬಣ್ಣ ಬಣ್ಣದ ಮಕ್ಕಳ ಪುಸ್ತಕಗಳಾದ ‘ರಿಕ್ಕು ರಿಕ್ಷಣ್ಣ’, ‘ಚಿನ್ನಿಯ ರಜಾಯಿ’ ಮತ್ತು ‘ಅಳಿಲು ಸೇವೆ’, ಕ್ಯಾಪ್ಟನ್‌ ಜಿ.ಆರ್. ಗೋಪಿನಾಥ್ ಅವರ ‘ನಮ್ಮ ಭಾರತ’, 60ಕ್ಕೂ ಹೆಚ್ಚು ವೈದ್ಯ ಬರಹಗಾರರು ಬರೆದ ‘ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ’ ಹೀಗೇ ಹತ್ತು ಹಲವು ಪುಸ್ತಕಗಳನ್ನು ಪ್ರಕಟಿಸಿರುವ ನಾವು ಈಗ ಇದೇ ಫೆಬ್ರವರಿ 18ರಂದು ನಮ್ಮ ಮೊಟ್ಟ ಮೊದಲ ಕವನ ಸಂಕಲನವನ್ನು ಹೊರತರುತ್ತಿದ್ದೇವೆ.

ಸೌಮ್ಯಕಾಶಿ ಅವರು ಬರೆದ ‘ಹೇಳದೇ ಉಳಿದದ್ದು!’ ಎಂಬ ಒಲವ ಕವಿತೆಗಳ ಸಂಗ್ರಹವು ನಮ್ಮ ಪ್ರಕಾಶನದ ಮೊಟ್ಟ ಮೊದಲ ಕವನ ಸಂಕಲನ. ಒಲವ ಕವಿತೆಗಳು ಹಾಗು ಚಂದದ ಚಿತ್ರಗಳಿರುವ ಈ ಮುದ್ದಾದ ಪುಸ್ತಕವನ್ನು ಒಂದು ಕಪ್ ಕಾಫಿ ಹೀರುತ್ತಾ ಸವಿಯಬಹುದು ಅಥವಾ ನಿಮ್ಮ ಹುಡುಗನಿಗೋ/ಹುಡುಗಿಗೋ ಉಡುಗೊರೆಯಾಗಿ ಕೊಟ್ಟು ನಿಮ್ಮ ಭಾವನೆಗಳನ್ನು ಕವಿತೆಯ ರೂಪದಲ್ಲಿ ಹಂಚಿಕೊಳ್ಳಬಹುದು.

‘ಹೇಳದೇ ಉಳಿದದ್ದು!’ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼

https://harivubooks.com/products/helade-uliddaddu-harivu-publication

ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com

 

 

Back to blog

Leave a comment