ಈ ಬೇಸಿಗೆ ರಜೆಯಲ್ಲಿ ಮಕ್ಕಳ ಕೈ ಸೇರಲಿ ಬಣ್ಣ ಬಣ್ಣದ ಪುಸ್ತಕಗಳು!

ಈ ಬೇಸಿಗೆ ರಜೆಯಲ್ಲಿ ಮಕ್ಕಳ ಕೈ ಸೇರಲಿ ಬಣ್ಣ ಬಣ್ಣದ ಪುಸ್ತಕಗಳು!

ಮಾರ್ಚ್ ತಿಂಗಳು ಮುಗಿದು ಮಕ್ಕಳು ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆಯ ಖುಷಿಯಲ್ಲಿದ್ದರೆ ಅಪ್ಪ ಅಮ್ಮನಿಗೆ ಮಕ್ಕಳನ್ನು ಇಡೀ ದಿನ ಗಮನಿಸಿಕೊಳ್ಳಬೇಕಾದ ಚಿಂತೆ. ಅದರಲ್ಲೂ ಅಪ್ಪ ಅಮ್ಮನನ್ನು ಕಾಡುವ ಇನ್ನೊಂದು ಚಿಂತೆ ಎಂದರೆ ಅದು ಈ ಎರಡು ತಿಂಗಳಲ್ಲಿ ಬರೀ ಆಟದಲ್ಲೇ ತೊಡಗಿಕೊಳ್ಳುವ ಮಕ್ಕಳು  ಪುಸ್ತಕ ಓದುವುದನ್ನು ಎಲ್ಲಿ ಮರೆತುಬಿಡುತ್ತಾರೋ ಎನ್ನುವುದು. ಈ ಚಿಂತೆಯನ್ನು ಕಮ್ಮಿ ಮಾಡಿಕೊಳ್ಳಲು ಇರುವ ದಾರಿ ಎಂದರೆ ಅದು ಈ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಓದಲು ಬಣ್ಣ ಬಣ್ಣದ ಪುಸ್ತಕಗಳನ್ನು ಕೊಡಿ. ಹಾಗೇ ನೀವೂ ಅವರ ಜೊತೆ ಕುಳಿತು ಅವರಿಗೆ ಚಂದದ ಕತೆ ಪುಸ್ತಕಗಳನ್ನು ಓದಿ ಹೇಳಿ. ಇದರಿಂದ ಮಕ್ಕಳ ಬೇಸಿಗೆ ರಜೆಯ ಮೋಜಿನ ಜೊತೆಗೆ ಓದುವ ಅಭ್ಯಾಸವೂ ಹೆಚ್ಚುತ್ತದೆ.

ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಹೆಚ್ಚಿಸುವ ಉದ್ದೇಶದಿಂದಲೇ ಹರಿವು ಬುಕ್ಸ್‌ 5 ಬಣ್ಣ ಬಣ್ಣದ ಮಕ್ಕಳ ಪುಸ್ತಕವನ್ನು ಹೊರತಂದಿದೆ. ಈಗಾಗಲೇ ಈ ಐದೂ ಪುಸ್ತಕಗಳ ಹಲವಾರು ಪ್ರತಿಗಳು ಮಾರಾಟವಾಗಿದ್ದು, ನಿಮ್ಮ ಮಗುವಿನ ಈ ಬೇಸಿಗೆಯ ಓದಿಗೆ ಹೇಳಿಮಾಡಿಸಿದಂತಿದೆ.

ಚಿಣ್ಣರ ಗೋಲಿ ಆಟ

ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ. ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಮಗಳ “ಅಮ್ಮ, ಹೊಸ ಕತೆ” ಎಂಬ ಬೇಡಿಕೆಗೆ ‘ಚಿನ್ನಿಯ ರಜಾಯಿ’ ಹಾಗೂ ‘ಅಳಿಲು ಸೇವೆ’ ಎಂಬ ಎರಡು ಮುದ್ದಾದ ಮಕ್ಕಳ ಪುಸ್ತಕಗಳನ್ನು ಬರೆದ ಇವರು ಈಗ ಬಾಲ್ಯದ ದಿನಗಳಲ್ಲಿ ಎಲ್ಲರೂ ಆಡಿದ ಆಟವಾದ ಗೋಲಿ ಕುರಿತಾಗಿ ಬರೆದ ಮಕ್ಕಳ ಕತೆಯೇ ‘ಚಿಣ್ಣರ ಗೋಲಿ ಆಟ’. ಈ ಚಂದದ ಚಿಣ್ಣರ ಪುಸ್ತಕದ ಪ್ರತೀ ಪುಟದಲ್ಲೂ ಲಿಪ್ತಿ ರಾವ್ ಅವರು ಬಿಡಿಸಿದ ಬಣ್ಣಬಣ್ಣದ ಚಿತ್ರಗಳು ಮಕ್ಕಳನ್ನು ಮೋಡಿ ಮಾಡುವುದರಲ್ಲಿ ಎರಡು ಮಾತಿಲ್ಲ.

https://harivubooks.com/products/chinnara-goli-aata-yashaswini-s-n-kannada-children-books-harivu-books

ಚಿಕ್ಕು ಬುಕ್ಕು

ಜಿ.ಆನಂದ್‌ ಅವರು ಚಿಣ್ಣರಿಗೋಸ್ಕರ ಬರೆದ ಈ ಪುಸ್ತಕದಲ್ಲಿ ಬಣ್ಣ ಬಣ್ಣದ ಚಿತ್ರಗಳಿದ್ದು ಕನ್ನಡದ ಪ್ರತಿಯೊಂದು ಅಕ್ಷರವನ್ನೂ ಪದ್ಯದ ರೂಪದಲ್ಲಿ ಹೇಳಲಾಗಿದೆ. ಆಟವಾಡುತ್ತಾ ವರ್ಣಮಾಲೆಯನ್ನು ಮತ್ತು ಕನ್ನಡ ಪದಗಳನ್ನು ಮಕ್ಕಳಿಗೆ ಪರಿಚಿಸುವ ಉದ್ದೇಶದಿಂದಲೇ ಹರಿವು ಬುಕ್ಸ್‌ ಈ ಪುಸ್ತಕವನ್ನು ಪ್ರಕಾಶನ ಮಾಡಿದೆ. 3 ವರ್ಷದಿಂದ 8 ವರ್ಷದ ಮಕ್ಕಳಿಗೆ ಈ ಪುಸ್ತಕ ಬಹಳ ಉಪಯೋಗಕಾರಿ. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಇದೊಂದು ಒಳ್ಳೆಯ ಪುಸ್ತಕ. ಹಾಗೆಯೇ, ಒಳ್ಳೆಯ ಗುಣಮಟ್ಟದ ಮುದ್ರಣ ಮಾಡಿರುವುದರಿಂದ, ಹುಟ್ಟುಹಬ್ಬ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಉಡುಗೊರೆ ಕೊಡುವುದಕ್ಕೂ ಇದು ತಕ್ಕನಾದ ಪುಸ್ತಕವಾಗಿದೆ.  

https://harivubooks.com/products/chikku-bukku-kannada-childrens-book

ಚಿನ್ನಿಯ ರಜಾಯಿ

ಯಶಸ್ವಿನಿ ಎಸ್‌.ಎನ್. ಅವರು ಬರೆದ ಚಿನ್ನಿಯ ರಜಾಯಿ ಪುಸ್ತಕದಲ್ಲಿ ಚಿನ್ನಿ ಎಂಬ ಮುದ್ದಾದ ಹುಡುಗಿಯ ಕತೆಯಿದೆ. ಚಂದದ ಚಿತ್ರಗಳಿರುವ ಈ ಪುಸ್ತಕದಲ್ಲಿ ಮಕ್ಕಳಿಗೆ ಕೌದಿ ಕಲೆಯ ಬಗ್ಗೆ ತಿಳಿಸಿಕೊಡಲಾಗಿದೆ. ಪುಟಾಣಿ ಕತೆಯನ್ನು ಒಳಗೊಂಡಿರುವ ಈ ಪುಸ್ತಕ ಬರೀ ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಮುದನೀಡುತ್ತದೆ.

https://harivubooks.com/kn/products/chinniya-rajaayi-kids-book-kannada

ರಿಕ್ಕು ರಿಕ್ಷಣ್ಣ

ಪ್ರಾಣಿ-ಪಕ್ಷಿಗಳೊಂದಿಗೆ ಮಾತನಾಡುವ ರಿಕ್ಷಾ ಇದ್ದಿದ್ದರೆ ಹೇಗಿರುತ್ತಿತ್ತು? ಎಂಬ ಎಳೆಯನ್ನಿಟ್ಟುಕೊಂಡು ಹುಟ್ಟಿದ ಮಕ್ಕಳ ಕತೆಯೇ ರಿಕ್ಕು ರಿಕ್ಷಣ್ಣ. ಅನುಪಮಾ ಕೆ ಬೆಣಚಿನಮರಡಿ ಅವರು ಬರೆದ ಈ ಚಿಣ್ಣರ ಮುದ್ದಾದ ಪುಸ್ತಕದಲ್ಲಿ ಪ್ರಾಣಿಗಳೊಂದಿಗೆ ಮಾತನಾಡಬಲ್ಲ ರಿಕ್ಷಣ್ಣನ ಕತೆಯನ್ನು ಹೇಳಲಾಗಿದೆ. ಬಣ್ಣ ಬಣ್ಣದ ಚಿತ್ರಗಳಿರುವ ಈ ಪುಸ್ತಕ ಮಕ್ಕಳ ಅಚ್ಚು ಮೆಚ್ಚು ಎನ್ನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

https://harivubooks.com/kn/products/rikku-rikshanna-kids-book-kannada

ಅಳಿಲು ಸೇವೆ

ರಾಮಾಯಣ ಕತೆಯಲ್ಲಿ ಅಳಿಲು ತನ್ನ ಕೈಲಾದ ಸಹಾಯವನ್ನು ಮಾಡಿ ಎಲ್ಲರ ಮೆಚ್ಚುಗೆ ಘಳಿಸಿದ ಕತೆಯನ್ನು ನಾವೆಲ್ಲರೂ ಕೇಳಿಯೇ ಕೇಳಿರುತ್ತೇವೆ. ಯಶಸ್ವಿನಿ ಎಸ್.ಎನ್‌, ಅವರು ಬರೆದ ‘ಅಳಿಲು ಸೇವೆ’ ಪುಸ್ತಕವೂ ಸಹ ಇನ್ನೊಬ್ಬರಿಗೆ ನೆರವಾಗುವ ಗುಣದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುತ್ತದೆ. ಅಂದದ ಚಿತ್ರಗಳನ್ನು ಹೊಂದಿದ ಈ ಪುಸ್ತಕವನ್ನು ಮಕ್ಕಳು ಮತ್ತೆ ಮತ್ತೆ ಓದುವುದಂತು ಖಚಿತ.

https://harivubooks.com/kn/products/alilu-seeve-kids-book-kannada

 

ಈಗಿನ ಕಾಲದ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಬೇಕು ಎನ್ನುವುದು ಹರಿವು ಬುಕ್ಸ್‌ನ ಆಶಯ. ಇದೇ ಕಾರಣದಿಂದಾಗೇ ಮಕ್ಕಳನ್ನು ಓದಿನ ಕಡೆ ಸೆಳೆಯುವುದಕ್ಕೆ ಬಣ್ಣ ಬಣ್ಣದ ಚಿತ್ರಗಳಿರುವ ಪುಸ್ತಕಗಳನ್ನು ಹರಿವು ಬುಕ್ಸ್‌ ಹೊರತರುತ್ತಿದೆ. 

ಮಕ್ಕಳ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ - https://harivubooks.com/kn/collections/kids-books-kannada

ಬೇರೆ ಬೇರೆ ಬಗೆಯ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ - www.harivubooks.com

Back to blog

Leave a comment