{"title":"Veeraloka","description":"","products":[{"product_id":"art-of-success-kannada-book","title":"ಆರ್ಟ್ ಆಫ್ ಸಕ್ಸಸ್","description":"\u003cp\u003eನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ದಿ ಇಷ್ಟ ಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು ಇಷ್ಟ ಪಡುವ ಪುಸ್ತಕಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿ ಇನ್ಮುಂದೆ 'ವೀರಲೋಕ ಬುಕ್ಸ್' ಹೊರಲಿದೆ. ನಿಶ್ಚಿಂತೆಯಿಂದ ಓದುವ ಸುಖ ನಿಮ್ಮದಾಗಲಿ.\u003c\/p\u003e\n\u003cp\u003eಯುವ ಜನತೆ ಪುಸ್ತಕ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅವರನ್ನು ಓದಿಸಬೇಕಾದ ಜವಾಬ್ದಾರಿ ಕೂಡ ನಮ್ಮದು ಎನ್ನುವುದು ಅಷ್ಟೇ ಸತ್ಯ. ಅವರಿಗೆ ಓದಿನ ರುಚಿ ಹಚ್ಚಿ, ಪುಸ್ತಕಗಳ ಮಹತ್ವ ತಿಳಿಸುವ ಉದ್ದೇಶ ವೀರಲೋಕ ಬುಕ್ಸ್ ಹಿಂದಿದೆ.\u003c\/p\u003e\n\u003cp\u003eಪ್ರಾಮೀಸ್, ನಾವು ರಾಜ್ಯದ ಕಟ್ಟ ಕಡೆಯ ಓದುಗನಿಗೆ ಪುಸ್ತಕ ತಲುಪಿಸುವ ಬಹು ದೊಡ್ಡ ನೆಟ್ ವರ್ಕ್ ಹೊಂದಿದ್ದೇವೆ. ನಿಮ್ಮೂರು ಯಾವುದೇ ಆಗಿರಲಿ, ಅಲ್ಲಿಗೆ ಪುಸ್ತಕ ಮುಟ್ಟಿಸುತ್ತೇವೆ. ಈ ಕಾರ್ಯದಲ್ಲಿ ನಮ್ಮ ಬೆನ್ನಹಿಂದೆ ಈ ನಾಡಿನ ಅಸಂಖ್ಯಾತ ಲೇಖಕರ ಬಳಗವೇ ಇದೆ.\u003c\/p\u003e\n\u003cp\u003eನಮ್ಮದು ಉದ್ಯಮವಲ್ಲ, ಇದೊಂದು ಅಕ್ಷರ ಕ್ರಾಂತಿ ಹಂಚುವ ಕಾಯಕ. ಸದಭಿರುಚಿ ಪುಸ್ತಕಗಳ ತಲುಪಿಸುವ ಅಭಿಯಾನ. ಈ ಕೆಲಸದಲ್ಲಿ ನಮ್ಮೊಂದಿಗೆ ನೀವೂ ಕೈಜೋಡಿಸಿ, ಹೆಚ್ಚಿನ ಮಾಹಿತಿ ಮತ್ತು ನಮ್ಮ ಉದ್ದೇಶವನ್ನು ಇತರರಿಗೆ ತಲುಪಿಸಲು ವೀರಲೋಕ ಬುಕ್ಸ್.ಕಾಮ್ಗೆ ಭೇಟಿ ನೀಡಿ. ಪುಸ್ತಕ ಖರೀದಿಸಿ, ಕೊಂಡುಕೊಳ್ಳುವಂತೆ ಪ್ರೋತ್ಸಾಹಿಸಿ.\u003c\/p\u003e\n\u003cp\u003e-ವೀರಕಪುತ್ರ ಶ್ರೀನಿವಾಸ ವೀರಲೋಕ ಬುಕ್ಸ್, ಬೆಂಗಳೂರು\u003c\/p\u003e","brand":"Ramesh Aravind","offers":[{"title":"Default Title","offer_id":43041795670275,"sku":"HB00003144","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9fb06a66-3c73-4504-9df1-3e4e7648354a.jpg?v=1657884971"},{"product_id":"solemba-geluvu-kannada-book","title":"ಸೋಲೆಂಬ ಗೆಲುವು","description":"","brand":"Deepa Heeregutti","offers":[{"title":"Default Title","offer_id":43050631921923,"sku":"HB00003197","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6d20ff97-a25d-4938-aa67-0ac93283b697.jpg?v=1658138784"},{"product_id":"kaihididu-neenadesu-tande-kannada-book","title":"ಕೈಹಿಡಿದು ನೀನಡೆಸು ತಂದೆ","description":"ಒಂದು ಹಂತ ಮೀರಿದ ಬಳಿಕ, ಅಪ್ಪ ಮಗನಿಗೆ ಏನೇ ಹೇಳಿದರೂ, ಬಹಳ ಕೊರೆಯುತ್ತಾನೆ ಎಂದು ಬಹಿರಂಗವಾಗಿಯೇ ಅಸಹನೆ ತೋರುತ್ತಾನೆ. ಆದರೆ ಅಪ್ಪನ ಪಾಲಿಗೆ ಆತ ಎಷ್ಟೆಂದರೂ ಮಗ, ಲೋಕದ ಅನುಭವ ಇಲ್ಲದವನು, ಹೀಗಾಗಿ ತನ್ನ ಉಪದೇಶವನ್ನು ಮುಂದುವರಿಸುತ್ತಾನೆ. ಆದರೆ ಮಗನಿಗೆ ಅವು ಬೇಕಾಗುವುದಿಲ್ಲ. ಮಗನಿಗೆ ತನಗೆ ಗೊತ್ತಿರುವುದನ್ನೆಲ್ಲ ಹೇಳಬೇಕು ಎಂದು ಎನಿಸಿದರೂ ಅವನ್ನೆಲ್ಲ ಕೇಳುವ ಮನಸ್ಥಿತಿಯಲ್ಲಿ ಮಗ ಇರುವುದಿಲ್ಲ. ಹೀಗಾಗಿ ಮಗನಿಗೆ ಹೇಳಬೇಕೆನಿಸಿದ ಎಷ್ಟೋ ಮಾತುಗಳು ಅಪ್ಪನ ಗಂಟಲಲ್ಲೇ ಉಳಿದುಬಿಡುತ್ತವೆ. ಅಷ್ಟೇ ಅಲ್ಲ, ಆ ಮಾತುಗಳನ್ನು ಮುಂದೆಂದೂ ಹೇಳಲು ಆಗುವುದೇ ಇಲ್ಲ. ಈ ಮಾತುಗಳನ್ನು ಮಗನಿಗೆ ಹೇಳಬೇಕಿತ್ತು ಎಂದು ತಂದೆಗೆ ಆಗಾಗ ಅನಿಸುತ್ತದೆ. ಆದರೆ ಆತ ಕೇಳಬೇಕಲ್ಲ? ಇನ್ನು ಶಾಲೆ, ಕಾಲೇಜುಗಳಲ್ಲಿ ಈ ವಿಷಯವನ್ನು ಹೇಳಿಕೊಡುತ್ತಾರಾ? ಉಹುಂ.. ಅದೂ ಇಲ್ಲ. ಪಠ್ಯ – ಪುಸ್ತಕಗಳಲ್ಲೂ ಇವನ್ನು ಸೇರಿಸುವುದಿಲ್ಲ. ಇನ್ನು ಒಳ್ಳೆಯ ಸ್ಕೂಲುಗಳಿಗೆ ಸೇರಿಸಿದರೆ, ಅಲ್ಲಿಯೂ ಹೇಳಿಕೊಡುವುದಿಲ್ಲ, ಹಾರ್ವರ್ಡ್, ಯೇಲ್, ಆಕ್ಸ್‌ಫರ್ಡ್, ಸ್ಟಾನ್ ಫೋರ್ಡ್, ಜೆಎನ್ಯುನಲ್ಲೂ ಈ ವಿಷಯಗಳನ್ನು ಹೇಳಿಕೊಡುವುದಿಲ್ಲ. ಇದು ಹೇಗೆ ಅಂದ್ರೆ ಮನೆಯಲ್ಲಿ ತಂದೆ-ತಾಯಿ ಹೇಳೊಲ್ಲ, ಶಾಲೆಯಲ್ಲಿ ಗುರುಗಳು ಕಲಿಸೊಲ್ಲ, ಪಠ್ಯದಲ್ಲಿ ಸೇರಿಸೊಲ್ಲ, ಸ್ನೇಹಿತರೂ ತಿಳಿಸೊಲ್ಲ. ಇವು ಅವನ್ನೆಲ್ಲಾ ಮಗನಿಗೆ ಹೇಳಲೇಬೇಕು ಎಂಬ ಒತ್ತಾಸೆಯಿಂದ ಬರೆದ ಲೈಫ್ ಟಿಪ್ಸ್ ! ಇದು ಅಪ್ಪನ ಆಪ್ತ ಸಲಹೆಗಳು ಅಥವಾ ತಂದೆ ಮಗನಿಗೆ ಬರೆದ ಲವ್ ಲೆಟರ್ 1\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಶ್ವೇಶ್ವರ ಭಟ್\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಧಾನ ಸಂಪಾದಕ, ವಿಶ್ವವಾಣಿ\n\u003cdiv id=\"gtx-trans\" style=\"position: absolute; left: 450px; top: 218px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Vishweswara Bhat","offers":[{"title":"2nd Edition","offer_id":48253081747715,"sku":"HB00003200","price":250.0,"currency_code":"INR","in_stock":true},{"title":"1st Edition","offer_id":48253090529539,"sku":"HB00007141","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KaihididuNeeNadesuTande_4157a309-f14a-467e-a690-a49ab6a3c33e.jpg?v=1774596594"},{"product_id":"thyagakilla-nookunuggalu-kannada-book","title":"ತ್ಯಾಗಕ್ಕಿಲ್ಲ ನೂಕುನುಗ್ಗಲು","description":"ಡಾ. ಗವಿಸ್ವಾಮಿಯವರು ವೃತ್ತಿಯಲ್ಲಿ ಪಶು ವೈದ್ಯರು, ಪ್ರವೃತ್ತಿಯಲ್ಲಿ ಕತೆಗಾರರು. ಈಗಾಗಲೇ “ಚಕ್ರ” ಮತ್ತು “ಪ್ರಾಣಿಗಳೇ ಗುಣದಲಿ ಮೇಲು!” ಎಂಬೆರಡು ಕೃತಿಗಳನ್ನು ಪ್ರಕಟಿಸಿ ಸಹೃದಯರ ಮನವನ್ನು ಸೂರೆಗೊಂಡಿದ್ದಾರೆ. ಈ ಎರಡು ಕೃತಿಗಳು ಮರು ಮುದ್ರಣವಾಗುವುದರ ಮೂಲಕ ತಮ್ಮ ಮಹತ್ವವನ್ನು ಸಾರಿವೆ. ಸೌಜನ್ಯದ ಗಣಿಯಂತಿರುವ ಗವಿಸ್ವಾಮಿಯವರು ಅಷ್ಟೇನೂ ದೊಡ್ಡ ಮಾತುಗಾರರಲ್ಲ; ಆದರೆ ಅವರ ಒಳಗಡೆ ಅದ್ಭುತ ಕತೆಗಾರ ಮನೆಮಾಡಿದ್ದಾನೆ. ಗ್ರಾಮೀಣ ನೆಲೆಯಲ್ಲಿಯೇ ವಾಸವಿರುವ ಕತೆಗಾರರಿಗೆ ಅನುಭವಗಳಿಗೇನು ಕೊರತೆಯಿಲ್ಲ.","brand":"Dr. Gaviswami N.","offers":[{"title":"Default Title","offer_id":43366972719363,"sku":"HB00003550","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_bc0efa99-859e-447a-9dd1-0b1226e82f2b.jpg?v=1664632290"},{"product_id":"baduke-bhagavanta-kannada-book","title":"ಬದುಕೇ ಭಗವಂತ","description":"'ಬದುಕೇ ಭಗವ೦ತ \" ಎಂಬ ಶೀರ್ಷಿಕೆ ಬಹಳ ಚೆನ್ನಾಗಿದೆ. ನಮ್ಮ ನಮ್ಮ ಬದುಕಿನಲ್ಲೇ ಭಗವಂತನನ್ನು ನೋಡಲು ಸಾಧ್ಯ ಇದೆ. ಪ್ರತಿದಿನ ಪ್ರತಿಕ್ಷಣ ಬದುಕು ನಮಗೆ ಹೊಸ ಹೊಸ ಪಾಠ ಸಂದೇಶಗಳನ್ನು ಕಲಿಸುತ್ತಲೇ ಇರುತ್ತದೆ. ಆದ್ದರಿಂದ ಬದುಕೇ ಭಗವ೦ತ, ಭಗವಂತನೇ ಬದುಕು ಎಂಬ ಚಿಂತನೆ ನನಗೆ ಬಹಳ ಇಷ್ಟವಾಯಿತು. ಭಾಷೆ, ಕುಲ ಧರ್ಮ ಎಲ್ಲವನ್ನೂ ಮೀರಿರುವ ಬದುಕು ನಿಜವಾಗಲೂ ಪರಮಾತ್ಮಸ್ವರೂಪವೇ. ಈ ಕೃತಿಗೆ ಶುಭವಾಗಲಿ. ಲೇಖಕರೂ, ನನ್ನ ಹೃದಯ ಮಿತ್ರರೂ ಆದ ಡಾ. ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರಿಗೂ ಒಳ್ಳೆಯದಾಗಲಿ. ಬದುಕೇ ಭಗವಂತ ಕೃತಿ ಹೆಚ್ಚು ಓದುಗರನ್ನು ತಲುಪಿ ಹೆಸರಾಗಲಿ ಎಂದು ಬಯಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಪ್ರಣಯರಾಜ ಡಾ. ಶ್ರೀನಾಥ್ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು.","brand":"Dr. D. S. Shrinivasa Prasad","offers":[{"title":"Default Title","offer_id":43366993887491,"sku":"HB00003551","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3f996e98-7437-4f75-a579-d233a027acb4.jpg?v=1664632998"},{"product_id":"mandya-ramesh-natana-kate-biography-kannada-book","title":"ಮಂಡ್ಯ ರಮೇಶ್ ನಟನ ಕಥೆ","description":"ಇದು ಮಂಡ್ಯ ರಮೇಶ್ ಎಂಬ ಮಾಯಕಾರನ ಬದುಕಿನ ಕತೆ. ಬದುಕೂ ನಾಟಕವೇ: ನಾಟಕವೂ ಬದುಕೇ!' ಎಂಬುದು ಅವರ ಟ್ಯಾಗ್‌ಲೈನ್, ಯಯಾತಿ ನಾಟಕದಲ್ಲೊಂದು ಮಾತು ಬರುತ್ತದಲ್ಲ. “ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ?'-ಅದೇ ಮಾತುಗಳನ್ನು ಬೆಂಬತ್ತಿ ಬದುಕಿದವರು, ಬದುಕುವವರು ರಮೇಶ್.","brand":"N. Dhananjay","offers":[{"title":"Default Title","offer_id":43369200582915,"sku":"HB00003553","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_378f574d-8bd9-4ec9-bca5-b2987a96ff8a.jpg?v=1664693493"},{"product_id":"maadaka-dore-novel-kannada-book","title":"ಮಾದಕ ದೊರೆ","description":"","brand":"Santoshakumara Mehendale","offers":[{"title":"Default Title","offer_id":43369204613379,"sku":"HB00003554","price":375.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2bd605da-df00-4f46-befb-cd9dd6a8680c.jpg?v=1664693909"},{"product_id":"some-darshana-kannada-book","title":"SOMEದರ್ಶನ","description":"ವಸಂತ ಅವರ ಬರವಣಿಗೆ ಮತ್ತು ಭಾಷಾ ಬಳಕೆ ಹಲವು ಕಡೆ ನಮ್ಮ ಗಮನ ಸೆಳೆಯುತ್ತದೆ. ಟಾಟಾ ಅವರನ್ನು ಜನರನ್ನು ಒಯ್ಯುವ ಸಾಮಾನ್ಯ ಲಿಫ್ಟ್ನಲ್ಲಿ ಕರದೊಯ್ಯಲು ಸಾಧ್ಯವಾಗದೆ ಭಾರಿ ಮಷೀನುಗಳನ್ನು ಮೇಲಕ್ಕೊಯ್ಯುವ ಬೃಹತ್ ಶಿಪ್‌ನಲ್ಲಿ ಕರೆದೊಯ್ಯುವಾಗ ಅವರ ಮನಸ್ಸಿನಲ್ಲಿ ಮೂಡುವ ಭಾವನೆ ಹೀಗಿದೆ. ನೂರು ಸಂಸ್ಥೆಗಳನ್ನು ಹುಟ್ಟುಹಾಕಿದ ಇಂತಹಾ ತೂಕದ ವ್ಯಕ್ತಿತ್ವದ ಧುರೀಣನನ್ನು ಕರತರಲು ವಿಶಾಲವಾದ ಭಾರದ ಲಿಫ್ಟ್ ಅಗತ್ಯ ಎನಿಸಿತು. ಇವರ ಕವಿತಗಳನ್ನು ಮೆಚ್ಚಿ ಜಿ.ಎಸ್ ಶಿವರುದ್ರಪ್ಪನವರು ಬರೆದ ಪತ್ರ ಓದಿ, \"ನಾನು ಹೇಳವನಾಗಿಬಿಟ್ಟೆ\" ಎಂದು, ನಿಸಾರ್ ಅವರ ಬೆನ್ನುಡಿ ಕಂಡು, 'ಈ ಭಾರವನ್ನು ಹೊತ್ತ ಹೊತ್ತಿಗೆ ನನ್ನನ್ನು ಹೊತ್ತೊತ್ತಿಗೆ ಕುಬ್ಜವಾಗಿಸಿತು' ಎಂದು ಬರೆಯುತ್ತಾರೆ. ವಿಮಾನದಲ್ಲಿ ಕಮಲ್ ಹಾಸನ್ ತನ್ನ ಪಕ್ಕದ ಸೀಟಿನಲ್ಲೇ ಕುಳಿತುಕೊಳ್ಳಿ ಅಂದಾಗ ಇವರ ಮುಖ, ವಸ್ತು ಪ್ರದರ್ಶನದಲ್ಲಿ ಸಿಗುವ ದೆಹಲಿ ಹಪ್ಪಳದಂತೆ ದೊಡ್ಡದಾಗಿ ಅರಳಿತು',\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಮಾರು ನಲವತ್ತು ವರ್ಷಗಳ ಹಿಂದೆ ನಾನು ರೇಡಿಯೋ ಸ್ಟೇಷನ್ನಿನಲ್ಲಿ ಯುವವಾಣಿ ವಿಭಾಗದ ಉಸ್ತುವಾರಿಯಾಗಿದ್ದಾಗ ಕವಿತೆ ಓದಲು ಬಂದಿದ್ದ ವಸಂತ ಕಲ್‌ಬಾಗಲ್‌ ಅವರನ್ನು ನಾನು ಮೊದಲು ನೋಡಿದ್ದು ಆಗ ಕಲ್‌ಬಾಗಲ್‌ ಅಂದರೇನು ಅಂತ ಕೇಳಿದಾಗ ಕಲ್ಲು ಬಾಗಿಲು ಅಷ್ಟೇ ಅಂದಿದ್ದರು! ಆಮೇಲೆ ಒಮ್ಮೆ ತಮ್ಮ ಕವಿತಾ ಸಂಕಲನ ಕೊಟ್ಟು ಕಣ್ಮರೆಯಾದವರು ಎತ್ತ ಹೋದರೊ ತಿಳಿಯದಾಗಿತ್ತು! ಈಚೆಗೆ ಒಂದೆರಡು ವಾರಗಳ ಹಿಂದೆ, ಡಾ. ಮನುಘಟಿಕೇಶ್ ಜೊತೆ ಮನೆಗೆ ಬಂದು Someದರ್ಶನಗಳ ಕಟ್ಟನ್ನು ಕೊಟ್ಟರು. ಓದುತ್ತ ಹೋದಂತೆ ನಲವತ್ತು ವರ್ಷಗಳ ವೃತ್ತಿ ಪ್ರವೃತ್ತಿಗಳ ಸಾಹಸದಲ್ಲಿ ಅವರು ಏರಿದ ಎತ್ತರವನ್ನು ಅರಿತು ಅಚ್ಚರಿ ಮತ್ತು ಸಂತೋಷ ಉಂಟಾಯಿತು, ದೇಶ ವಿದೇಶದ ಇನ್ನೂ ಹಲವು ದಿಗ್ಗಜರನ್ನು ಭೇಟಿಯಾಗಿರುವ ಸೂಚನೆಯನ್ನು ಅವರು ನೀಡಿದ್ದಾರೆ. ತಮ್ಮ ನೆನಪಿನ ಕಣಜದ ಬಾಗಿಲನ್ನು ಆದಷ್ಟು ಬೇಗ ತೆರೆದು ಓದುಗರಿಗೆ ಇನ್ನಷ್ಟು ಸಂತಸ ನೀಡಲಿ ಎಂದು ಅವರ ಕುಟುಂಬದ ಸದಸ್ಯರ ಒತ್ತಾಯದ ಜೊತೆಗೆ ಕನ್ನಡ ಓದುಗರ ಪರವಾದ ನನ್ನ ದನಿಯನ್ನೂ ಸೇರಿಸಲು ಬಯಸುತ್ತಾ ವಿರಮಿಸುವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಅಗ್ರಹಾರ ಕೃಷ್ಣಮೂರ್ತಿ\u003cbr data-mce-fragment=\"1\"\u003eಮುನ್ನುಡಿಯಿಂದ","brand":"Vasantha Kalbagal","offers":[{"title":"Default Title","offer_id":43369345646851,"sku":"HB00003555","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/SOME__1.jpg?v=1664702681"},{"product_id":"kunigal-to-kandahar-experiences-kannada-books","title":"ಕುಣಿಗಲ್ to ಕಂದಹಾರ್","description":"ಮಂಜುನಾಥ ಕುಣಿಗಲ್ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ 1982ರಂದು ಜನನ, ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ.\u003cbr\u003e\u003cbr\u003eವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಗಿದೆ. 2001ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್, ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (ಜೆಎಸ್‌ಡಬ್ಲ್ಯೂ) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರ್ಪಡೆ, ಅದಾದ ಐದು ವರ್ಷಗಳ ನಂತರ ಎಲ್\u0026amp;ಟಿ ಕಂಪನಿಗೆ ಸೇರಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಎರಡು ವರ್ಷ ಇಂಜಿನಿಯರಾಗಿ ಕೆಲಸ. ಆ ನಂತರ ದುಬೈನಲ್ಲಿ ಕೆಲಸ ಮಾಡುವ ಅವಕಾಶ ಮತ್ತು ಅಲ್ಲಿ ಸುದೀರ್ಘ 10 ವರ್ಷಗಳ ಜೀವನ, ಯುದ್ಧಪೀಡಿತ ದೇಶಗಳಲ್ಲಿ ನ್ಯಾಟೋ ಮತ್ತು ವಿಶ್ವಸಂಸ್ಥೆಗೆ ನೆರವಾಗುತ್ತಿದ್ದ ಜರ್ಮನ್ ಮೂಲದ ಕಂಪನಿಯೊಂದರಲ್ಲಿ ಇಂಜಿನಿಯರಿಂಗ್ ವಿಭಾಗದ ಉಪ-ಮುಖ್ಯಸ್ಥನಾಗಿ ಕೆಲಸ, ನಂತರ ಸ್ವಲ್ಪ ಕಾಲ ನೆಲೆಸಿದ್ದು ಉತ್ತರ ಮೆಸಿಡೋನಿಯಾದಲ್ಲಿ. 2018ರಿಂದ ಈಚೆಗೆ ಮೈಸೂರಿನಲ್ಲಿ ನೆಲೆಸಿ ಸದ್ಯಕ್ಕೆ ಮನೆಯಿಂದಲೇ ಸಿಂಗಾಪುರಿನ ಕಂಪನಿಯೊಂದಕ್ಕೆ ಕನ್ಸಲ್ಟೆಂಟ್ ಇಂಜಿನಿಯರಾಗಿ ವೃತ್ತಿ, ಕೆಲಸದ ಸಲುವಾಗಿ ಯುದ್ಧಪೀಡಿತವಾಗಿದ್ದ ಆಫ್ಘಾನಿಸ್ತಾನ್ ಮತ್ತು ಇರಾಕ್ ಸೇರಿದಂತೆ, ಇತರೆ ಗಲ್ಫ್ ರಾಷ್ಟ್ರಗಳು, ಯುರೋಪ್ ಮತ್ತು ಅಮೇರಿಕ ದೇಶಗಳನ್ನು ಹಲವಾರು ಬಾರಿ ಸುತ್ತಿದ ಅನುಭವವಿದೆ.","brand":"Manunatha Kunigal","offers":[{"title":"Default Title","offer_id":43760618766595,"sku":"HB00004024","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1b8e15e6-4b32-4a18-9513-7d650639d08c.jpg?v=1676979616"},{"product_id":"lets-make-a-short-film-handbook-jayaramachari-kannada-books","title":"ಲೆಟ್ಸ್‌ ಮೇಕ್ ಎ ಶಾರ್ಟ್ ಫಿಲಂ","description":"ಜಯರಾಮಾಚಾರಿ\u003cbr\u003e\u003cbr\u003eಮೈಸೂರಿನಲ್ಲಿ 1987ರಲ್ಲಿ ಜನನ. ಬೆಳೆದದ್ದು ಬೆಂಗಳೂರಿನಲ್ಲಿಯಾದರೂ ಸಾಹಿತ್ಯ ಕಲೆಯ ಬಗೆಗೆ ಅಪಾರವಾದ ಆಸಕ್ತಿಯುಳ್ಳವರು. ಎಲೆಕ್ತ್ರಿಕಲ್ ವಿಭಾಗದಲ್ಲಿ ಎಸ್. ಜೆ. ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಡಿಪ್ಲೊಮಾ ಪದವೀಧರರಾದ ಮೇಲೆ (2007). ಯು.ವಿ.ಸಿ.ಇ. ಸಂಸ್ಥೆಯಲ್ಲಿ ಎಂಜಿನಿಯರಿಂಗ್‌ (2012) ಓದಿ ಮುಗಿಸಿದ್ದಾರೆ. 2013ರಿಂದ ನಮ್ಮ ಮೆಟ್ರೊದಲ್ಲಿ ಉದ್ಯೋಗವನ್ನು ಪಡೆದು ಸದ್ಯ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ.\u003cbr\u003e\u003cbr\u003eಓದು, ಬರಹ ಮತ್ತು ಸಿನಿಮಾ ಇವರ ನೆಚ್ಚಿನ ಹವ್ಯಾಸಗಳು, ಶ್ರೀಯುತ ನಾಗತಿಹಳ್ಳಿ ಚಂದ್ರಶೇಖರ್‌ರವರ “ಟೆಂಟ್ ಶಾಲೆ”ಯಲ್ಲಿ ಡಿಪ್ಲೊಮಾ ಇನ್ ಫಿಲ್ಮ ಮೇಕಿಂಗ್ ತರಬೇತಿಯನ್ನು ಪಡೆದ ಲೇಖಕರು ಕೆಲವು ಕಿರುಚಿತ್ರಗಳನ್ನೂ ನಿರ್ದೇಶಿಸಿದ್ದು, ಸಿನಿಮಾಕ್ಕೆ ಸಂಭಾಷಣೆ ಮತ್ತು ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುತ್ತಾರೆ. “ಸುಯ್ ಟಪಕ್” ಎಂಬ, ಸಾಹಿತ್ಯ ಸಿನಿಮಾ ಹಾಸ್ಯ ಕಿರುಚಿತ್ರ ಮತ್ತಿತರ ಕಂಟೆಂಟ್ ಉಳ್ಳ ಯೂಟ್ಯೂಬ್ ಚಾನೆಲ್, http:\/\/neenirabekkittu.blogspot.com\/ ಎಂಬ ಬ್ಲಾಗ್ ಜನಮೆಚ್ಚುಗೆಯನ್ನು ಗಳಿಸಿದೆ. ಕ್ಲಬ್‌ ಹೌಸಿನಲ್ಲಿ ನಿತ್ಯ ಓದಿನ ಜಾತ್ರೆಯಾದ ಓದು ಜನಮೇಜಯ ಕಾರ್ಯಕ್ರಮ ಮತ್ತು ಅಡಕಸಬಿ ಅಡ್ಡ ಶುರುಮಾಡಿ ಅನೇಕ ಸದ್ವಿಚಾರಗಳ ಚರ್ಚೆಗೆ ದಾರಿಯಾಗಿದ್ದಾರೆ.\u003cbr\u003e\u003cbr\u003eಕರಿಮುಗಿಲ ಕಾಡಿನಲಿ (ಕತಾ ಸಂಕಲನ) ಇವರ ಮೊದಲ ಪುಸ್ತಕವಾದರೆ (2015), ಅವ್ವನ ಬಯೋಗ್ರಫಿ (2022) ಹೆಚ್ಚು ಪ್ರಕಟಣೆಗಳನ್ನು ಕಂಡ ಮಸ್ತಕವಾಗಿದೆ.\u003cbr\u003e","brand":"Jayaramachari","offers":[{"title":"Default Title","offer_id":43760696525059,"sku":"HB00004025","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_426570f8-2d97-4534-8b54-0a35d9ec6f73.jpg?v=1676980506"},{"product_id":"merunata-biography-dr-sharanu-hulluru-kannada-books","title":"ಮೇರುನಟ","description":"'ಒಬ್ಬ ತಾರೆಯ ಎಂಟ್ರಿ ಮತ್ತು ಎಗ್ಸಿಟ್ ಅದ್ಭುತವಾಗಿರಬೇಕು; ನೆನಪಿನಲ್ಲಿಡುವಂತಿರಬೇಕು' ಎಂದು ಚಿತ್ರರಸಿಕರ ಮನದ ಅನಭಿಷಿಕ್ತ ದೊರೆಯಾಗಿ ಮೆರೆದ ವಿಷ್ಣುವರ್ಧನ್ ಯಾವಾಗಲೂ ಹೇಳುತ್ತಿದ್ದರು. ಆದರೆ, ಅವರ ಜೀವನದಲ್ಲೇ ಅದು ಅರ್ಧಂಬರ್ಧ ರೀತಿಯಲ್ಲಿ ನಡೆದು ಹೋಯಿತು. 'ನಾಗರಹಾವು' ರಾಮಾಚಾರಿಯ ಎಂಟ್ರಿ ಅದ್ಭುತವಾಗಿಯೇ ಇತ್ತು. ನಂತರದ ದಿನಗಳಲ್ಲಿ ಆ ರೋಚಕ ಗೆಲುವೇ ಅವರಿಗೆ ಶಾಪವಾಯಿತು. ಬಂದಿದ್ದ ಆ ಯಶಸ್ಸನ್ನು ಸಂಭ್ರಮಿಸುವುದಕ್ಕೆ ಹಿತಶತ್ರುಗಳು ಬಿಡಲೇ ಇಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಮರೆಯಲಾಗದ ಎರಡು ನಕ್ಷತ್ರಗಳು. ಉತ್ತಮ ಚಾರಿತ್ರ್ಯ ಹೊಂದಿದ್ದ, ಅತ್ಯಂತ ಸಜ್ಜನ ಸ್ವಭಾವವಿದ್ದ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ, ನಟನೆಯ ಜೊತೆ ಜೊತೆಗೆ ಸಮಾಜದ ಬಗ್ಗೆ ಅತ್ಯಂತ ಪ್ರಾಮಾಣಿಕ ಕಾಳಜಿ ಇಟ್ಟುಕೊಂಡಿದ್ದ ಮಹಿನೀಯರಲ್ಲಿ ಇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಇಂತಹ ಅನೇಕ ಹೋಲಿಕೆ ಗುಣಗಳೇ ವಿಷ್ಣುವರ್ಧನ್ ಅವರನ್ನು ಬೆನ್ನುಬಿದ್ದು ಕಾಡಿದ್ದು ಸುಳ್ಳಲ್ಲ.","brand":"Dr. Sharanu Hulluru","offers":[{"title":"Default Title","offer_id":44550759055619,"sku":"HB00004029","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_070a9057-3c8b-441d-a3cc-f3fe0d5a584f.jpg?v=1704524591"},{"product_id":"forester-ponnappa-novel-noushad-jannatt-kannada-books","title":"ಫಾರೆಸ್ಟರ್ ಪೊನ್ನಪ್ಪ","description":"ನೌಶಾದ್ ಜನ್ನತ್\u003cbr data-mce-fragment=\"1\"\u003e\u003cbr data-mce-fragment=\"1\"\u003eಕೊಡಗಿನ ಮಡಿಕೇರಿ ಬಳಿಯ ಬೋಯಿಕೇರಿ, ನೌಶಾದ್ ಜನ್ನತ್‌ ಹುಟ್ಟೂರು. ಸುಂಟಿಕೊಪ್ಪ ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಇವರು ಸದ್ಯ ಕುಶಾಲನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಜೀವನೋಪಾಯಕ್ಕಾಗಿ ಕೊಡಗಿನ ಗಡಿಯಂಚಿನಲ್ಲಿ ಪಿಠೋಪಕರಣಗಳ ಉದ್ಯಮವನ್ನು ನಡೆಸುತ್ತಿರುವ ನೌಶಾದ್‌ರವರು, 'ನಮ್ಮ ಕೊಡಗು ತಂಡ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸಂತ್ರಸ್ತರು ಮತ್ತು ಆದಿವಾಸಿಗಳ ಮೂಲಭೂತ ಹಕ್ಕುಗಳಿಗೆ ಹೋರಾಟ ಮಾಡುವುದರ ಜೊತೆಗೆ ಸರಕಾರಿ ಶಾಲೆ ಉಳಿಸಿ ಅಭಿಯಾನವನ್ನು ಕೂಡ ಕೊಡಗಿನಲ್ಲಿ ಪರಿಣಾಮಕಾರಿಯಾಗಿ ಮಾಡುತ್ತಾ ಬಂದಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕಾಲೇಜು ದಿನಗಳಿಂದಲೂ ಸಾಹಿತ್ಯದ ಮೇಲೆ ಅಪಾರ ಒಲವಿದ್ದ ನೌಶಾದ್‌ ಜನ್ನತ್‌ರ ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 2020ರಲ್ಲಿ 'ಕಡಮ್ಮಕಲ್ಲು ಎಸ್ಟೇಟ್\" ಎಂಬ ಕಿರುಕಾದಂಬರಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅನುದಾನದಡಿಯಲ್ಲಿ ಬರೆದಿದ್ದು, ಈ ಕೃತಿ ಕೊಡಗು ಸಾಹಿತ್ಯವಲಯದಲ್ಲಿ ಹೆಚ್ಚು ಚರ್ಚಿತವಾಗಿ ಬಿಡುಗಡೆಯಾದ ಎರಡು ದಿನದಲ್ಲಿ ಮರುಮುದ್ರಣವಾಗಿತ್ತು. ಕೊಡಗಿನ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಪಟ್ಟಂತೆ ಇವರು 2021ರಲ್ಲಿ ಬರೆದ “ಜಲಪ್ರಳಯ' ಕೃತಿ ಕೂಡ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿತ್ತು.\u003cbr data-mce-fragment=\"1\"\u003e","brand":"Noushad Jannatt","offers":[{"title":"Default Title","offer_id":43766827843843,"sku":"HB00004031","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_15828ff2-0a27-4b40-9f2d-dfa4ff22a450.jpg?v=1677161370"},{"product_id":"troy-novel-gayathri-raj-kannada-blooks","title":"ಟ್ರಾಯ್","description":"ಗಾಯತ್ರಿ ರಾಜ್\u003cbr\u003e\u003cbr\u003eಅಂಕಣಕಾರರು ಮತ್ತು ಕಾದಂಬರಿಗಾರ್ತಿಯಾದ ಗಾಯತ್ರಿ ರಾಜ್, ಸಧ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.\u003cbr\u003e\u003cbr\u003eಇವರ ಕಥೆ, ಕವನ ಹಾಗೂ ಪ್ರವಾಸ ಕಥನಗಳು, ತರಂಗ, ಸುಧಾ, ಕರ್ಮವೀರ, ಓ ಮನಸೇ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಹೊಸ ದಿಗಂತ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.\u003cbr\u003e\u003cbr\u003eಇವರು ಸಾಕಷ್ಟು ಕೃತಿಗಳು ರಚಿಸಿದ್ದು, ಅವುಗಳಲ್ಲಿ “ಬಣ್ಣದ ಜೋಳಿಗೆ” (ಕಥಾಸಂಕಲನ), “ಆಮ್ರಪಾಲಿ” (ಐತಿಹಾಸಿಕ ಕಾದಂಬರಿ), ಬ್ಯೂಟಿಫುಲ್ ಲೈಫ್ (ಅಂಕಣ ಬರಹಗಳ ಸಂಕಲನ), 15 ಸಣ್ಣಕಥೆಗಳು (ಕಥಾಸಂಕಲನ), 3 ನೀಳ್ಗತೆಗಳು (ಕಥಾಸಂಕಲನ), ಹೊಸಕತೆಗಳು (ಕಥಾಸಂಕಲನ) ಎಂಬ ಕೃತಿಗಳು ಈಗಾಗಲೇ ಅಪಾರ ಜನರ ಮೆಚ್ಚುಗೆಯನ್ನು ಪಡೆದಿದ್ದಾವೆ.\u003cbr\u003e\u003cbr\u003eಇವರು ಬರೆದ “ಆಮ್ರಪಾಲಿ” ಕಾದಂಬರಿಗೆ ಈ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ “ಶ್ರೀಮತಿ ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ ಪ್ರಶಸ್ತಿ”, ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಯಾದ ಅಡ್ವೈಸರ್ “ಪುಸ್ತಕ ಸಾಹಿತ್ಯ' ಪ್ರಶಸ್ತಿ, 2022 ಸಾಲಿನ ಅವ್ವ ಸೃಜನಶೀಲ ಸಾಹಿತ್ಯ ಪ್ರಸಸ್ತಿಯ ಮೆಚ್ಚುಗೆಯನ್ನು ಪಡೆದಿದೆ. ಶೀಘ್ರದಲ್ಲಿಯೇ ಇವರ ಇನ್ನೂ ಎರಡು ಕಾದಂಬರಿಗಳು ಬಿಡುಗಡೆಯಾಗಲಿವೆ.","brand":"Gayathri Raj","offers":[{"title":"Default Title","offer_id":43768414339331,"sku":"HB00004032","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_554ab4ff-f259-483c-b40f-29ed9fc5e2de.jpg?v=1677224978"},{"product_id":"naa-sere-hidida-kanyastree-essays-shashidhara-halady-kannada-books","title":"ನಾ ಸೆರೆ ಹಿಡಿದ ಕನ್ಯಾಸ್ತ್ರೀ","description":"ಶಶಿಧರ ಹಾಲಾಡಿ\u003cbr\u003e\u003cbr\u003eಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಜನಿಸಿದ ಶಶಿಧರ ಹಾಲಾಡಿಯವರು, ಒಂದು ಚಿನ್ನದ ಪದಕ ಮತ್ತು ಮೊದಲನೆಯ ರ್ಯಾಂಕ್‌ನೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಸಾಹಿತ್ಯದಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿರುವ ಶಶಿಧರ ಹಾಲಾಡಿಯವರು ಕಾದಂಬರಿ, ಸಣ್ಣ ಕಥೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣ ಬರಹ ಮತ್ತು ಲೇಖನಗಳನ್ನು ಬರೆದಿದ್ದು, ಇವರ ಸಾವಿರಕ್ಕೂ ಹೆಚ್ಚಿನ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಚಾರಣ, ಪರಿಸರ ಅಧ್ಯಯನ ಮತ್ತು ಛಾಯಾಚಿತ್ರಗ್ರಹಣ ಇವರ ಆಸಕ್ತಿ ಕ್ಷೇತ್ರಗಳು.\u003cbr\u003e\u003cbr\u003eಕಾಲಕೋಶ (ಕಾದಂಬರಿ), ಅಬ್ಬೆ (ಕಾದಂಬರಿ), ಚಿತ್ತ ಹರಿದತ್ತ (ಅಂಕಣ ಬರಹ), ಮನದ ಹಾಯಿದೋಣಿ (ಅಂಕಣ ಬರಹ), ಬೆನಗಲ್ ನರಸಿಂಹ ರಾವ್ (ವ್ಯಕ್ತಿ ಪರಿಚಯ), ಅಮ್ಮಮ್ಮನ ದೀಪಾವಳಿ (ಪ್ರಬಂಧಗಳು), ಓಲಿ ಕೊಡೆ (ಅಂಕಣ ಬರಹಗಳು), ಟುವ್ವಿ ಹಕ್ಕಿಯ ಗೂಡು (ಪರಿಸರ ಸಂಬಂಧಿ ಬರಹಗಳು), ಪ್ರಕೃತಿ ಪ್ರಪಂಚ (ಅಂಕಣ ಬರಹ), ದೇವರು ಎಚ್ಚರಗೊಂಡಾಗ (ಪ್ರವಾಸ ಕಥನ), ಹಿತ್ತಲಿನಿಂದ ಹಿಮಾಲಯಕ್ಕೆ (ಚಾರಣ ಬರಹಗಳು) ಮುಂತಾದ ಕೃತಿಗಳು ಈಗಾಗಲೇ ಪ್ರಕಟಗೊಂಡಿವೆ. ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತು ನೀಡುವ 'ಕನ್ನಡ ಸೇವಾ ರತ್ನ' ಮತ್ತು ಜ್ಞಾನಗಂಗಾ ಸಾಹಿತ್ಯ ರಂಗ ನೀಡುವ 'ಕರುನಾಡು ಸೇವಾ ರತ್ನ' ಪ್ರಶಸ್ತಿಗಳಿಗೆ ಶಶಿಧರ ಹಾಲಾಡಿಯವರು ಭಾಜನರಾಗಿದ್ದಾರೆ.","brand":"Shashidhara Haladi","offers":[{"title":"Default Title","offer_id":43768421941507,"sku":"HB00004033","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ab775797-d1c3-4c49-8bfc-92c54e8d725f.jpg?v=1677225513"},{"product_id":"hitler-love-politics-biography-sathisha-balegara-kannada-book","title":"ಹಿಟ್ಲರ್ ಲವ್ ಪಾಲಿಟಿಕ್ಸ್","description":"ಅಸಲು ಹಿಟ್ಲರ್ ಜರ್ಮನಿಯವನೇ ಅಲ್ಲ, ಹಿಟ್ಲರ್ ಹುಟ್ಟಿದ್ದು ಆಸ್ಟ್ರಿಯಾದಲ್ಲಿ! ಆದರೆ ನಂಬರ್ ಒನ್ ದೇಶವನ್ನಾಗಿ ಮಾಡಲು ಹೊರಟಿದ್ದು ಜರ್ಮನಿಯನ್ನು!! ಮಹಾಯುದ್ಧ ಮಾಡುವ ಬದಲು ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ್ದರೆ ಜರ್ಮನಿ ಇವತ್ತಿಗೆ ಅಮೇರಿಕವನ್ನುಕಾಲಕೆಳಗೆ ಕೆಡವಿಕೊಂಡಿರುತ್ತಿತ್ತು.\u003cbr\u003e\u003cbr\u003eಹಿಟ್ಲರ್ ಒಬ್ಬ ದಾರಿ ತಪ್ಪಿದ ದೇಶ ಭಕ್ತ ನಾಜಿ ಕ್ಯಾಂಪಿನಲ್ಲಿ ಆರು ಮಿಲಿಯನ್ನಿಗೂ ಹೆಚ್ಚು ಜನರನ್ನು ಹತ್ಯೆಗೈದ ಪಾತಕಿ, ಪುರಾಣದಲ್ಲಿ ಕಂಡು ಬರುವ ರಾಕ್ಷಸರನ್ನೂ ಕ್ರೂರತನದಲ್ಲಿ ನಾಚಿಸುವ, ಮನುಷ್ಯರಲ್ಲೇ ಕಾಣಿಸಿಕೊಂಡ ನಂಬರ್ ಒನ್ ಸೈಕ್ ಅಂದರೆ ಅದು ಹಿಟ್ಲರ್. ಆತನಿಂದಾಗಿ ಯುದ್ಧದ ನೆಪದಲ್ಲಿ ಲಕ್ಷಾಂತರ ಜನರು ಸತ್ತು ಹೋದರು. ಈ ಜಗತ್ತು ಕಂಡ ಅತ್ಯಂತ ದುಷ್ಟ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಕೊನೆಗೆ ಸತ್ತು ಹೋಗಿದ್ದು ಮಾತ್ರ ಆತ್ಮಹತ್ಯೆ ಮಾಡಿಕೊಂಡು!!\u003cbr\u003e\u003cbr\u003eಹಿಟ್ಲ‌ರ್ ನಾಯಕನಾಗಿ ಬೆಳೆದದ್ದು ಹೇಗೆ? ಸರ್ವಾಧಿಕಾರಿಯಾಗಿ ಯಶಸ್ಸು ಗಳಿಸಿದ್ದು ಹೇಗೆ? ನಾಜಿಸಂ ಎಲ್ಲಿಂದ, ಯಾವಾಗ ಪ್ರಾರಂಭವಾಯಿತು? ಹಿಟ್ಲರ್ ಬದುಕಿನಲ್ಲಿ ಬಂದು ಹೋದ ಮಹಿಳೆಯರು ಎಷ್ಟು? ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.","brand":"Sathisha Balegara","offers":[{"title":"Default Title","offer_id":44040646590723,"sku":"HB00004162","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_62a0ae40-eab1-4336-8358-8c9cb3e67c7a.jpg?v=1688026802"},{"product_id":"eagles-line-novel-rajesh-kumar-kalya-veeraloka-publications-kannada-books","title":"ಈಗಲ್ಸ್ ಲೈನ್","description":"ತನ್ನ ಹಿರಿಯರು ಬಾಳಿ ಬದುಕಿದ ಊರಿಗೆ, ನಾಯಕ ಅಧ್ಯಯನದ ನೆಪದಲ್ಲಿ ಬರುತ್ತಾನೆ. ಮಾಹಿತಿ ಸಂಗ್ರಹದ ನೆಪದಲ್ಲಿ ಊರಿನವರೊಂದಿಗೆ ಒಡನಾಟ ಬೆಳೆಸಿಕೊಳ್ಳುತ್ತಾನೆ. ಅನಂತರದಲ್ಲಿ ಅವನೆದುರಿಗೆ ಒಂದು ಅನೂಹ್ಯ ಲೋಕವೇ ತೆರೆದುಕೊಳ್ಳುತ್ತದೆ. ಕುತೂಹಲದಿಂದಲೇ ಪ್ರತಿಯೊಂದಕ್ಕೂ ಮುಖಾಮುಖಿಯಾಗುತ್ತಾನೆ. ಮುಗ್ಧತೆ, ಸ್ವಾರ್ಥ, ಈರ್ಷ್ಯೆ, ದ್ವೇಷ, ಧೈರ್ಯ, ಉಡಾಫೆ, ಪೆದ್ದುತನ, ಸಿಟ್ಟು, ಸೆಡವು ಮುಂತಾದ ಗುಣಾವಗುಣಗಳನ್ನು ಹೊಂದಿದ ಜನರು ಒಂದೊಂದು ಪಾತ್ರಗಳ ರೂಪದಲ್ಲಿಪರಿಚಯವಾಗುತ್ತಾ ಹೋಗುತ್ತಾರೆ.\u003cbr\u003e\u003cbr\u003eಈ ಕೃತಿಯ ಹಲವು ಅಧ್ಯಾಯಗಳಲ್ಲಿ ಒಂದೊಂದು ಕಥೆಗೆ ವಸ್ತುವಾಗುವಂಥ ಬೆರಗಿನ ವಿವರಗಳಿವೆ.ಸ್ವಾರಸ್ಯಕರ ಮಾಹಿತಿಗಳಿವೆ. ಹಾಗಂತ ಇದು ಅಜ್ಜಿಕಥೆಯಲ್ಲ, ಕುತೂಹಲ, ಪದೇಪದೇ ಕೈಜಗ್ಗುತ್ತದೆ; ಆದರೆ ಇದು ಸಸ್ಪೆನ್ಸ್‌ ಡ್ರಿಲ್ಲರ್ ಅಲ್ಲ, ಕಾಡಿನ ಹತ್ತಾರು ಜೀವಿಗಳ ಬದುಕಿನ ವಿವರವಿದ್ದರೂ ಇದು ಪರಿಸರದ ಕಥೆಯಷ್ಟೇ ಅಲ್ಲ, ಹಲವು ನಂಬಿಕೆ, ಆಚರಣೆಗಳ ಮೆರವಣಿಗೆಯಿದೆ. ಆದರೆ ಇದು ಕಾಡಂಚಿನ ಮಲೆನಾಡಿನ ಹಳ್ಳಿಯೊಂದರ ಕಥೆಯಷ್ಟೇ ಆಗಿ ಉಳಿಯುವುದಿಲ್ಲ. ಬದಲಿಗೆ, ಈ ಎಲ್ಲಾ ಅಂಶಗಳನ್ನೂ ಇಷ್ಟಿಷ್ಟೇ ಸೇರಿಸಿ ಹೆಣಿಗೆ ಹಾಕಿದ ಕಾದಂಬರಿ ಎಂಬ ಕುಲಾದವಿ.\u003cbr\u003e\u003cbr\u003eಕಾಡು, ಕಣಿವೆ, ಸಂಶೋಧನೆ, ಪರಿಸರ ಎನ್ನುವಾಗ, ಒಂದಿಡೀ ತಲೆಮಾರನ್ನು ಸೂಜಿಗಲ್ಲಿನಂತೆ ಸೆಳೆದ ಪೂರ್ಣಚಂದ್ರ ತೇಜಸ್ವಿಯವರನ್ನು ನೆನೆಯದೇ ಇರಲು ಸಾಧ್ಯವೇ ಇಲ್ಲ, ತೇಜಸ್ವಿಯವರ ಪರಮ ಅಭಿಮಾನಿಯಾದ ರಾಜೇಶ್ ಕುಮಾರ್, ಅವರನ್ನು ಧ್ಯಾನಿಸುತ್ತಲೇ ಕೃತಿ ರಚನೆಗೆ ಮುಂದಾದರೇನೋ, ಹಾಗಾಗಿಯೇ ಕಾದಂಬರಿಯ ಉದ್ದಕ್ಕೂ ಅದೆಷ್ಟೋ ಸಂದರ್ಭಗಳಲ್ಲಿ ತೇಜಸ್ವಿಯವರ 'ನೆರಳು ಪದೇಪದೇ ಸುಳಿದುಹೋಗುತ್ತದೆ. ಈ ಕಾದಂಬರಿಯಲ್ಲಿ ಬರುವ ಹಲವು ಸಂದರ್ಭಗಳನ್ನು ನಾವೂ ಕಂಡಿದ್ದೇವೆ, ಅನುಭವಿಸಿದ್ದೇವೆ ಅನ್ನಿಸಿದ ಸಂದರ್ಭದಲ್ಲಿಯೇ, ನಮಗೆ ಗೊತ್ತಿಲ್ಲದ ಎಷ್ಟೊಂದು ಸಂಗತಿಗಳು ಇವೆಯಲ್ಲ ಅನ್ನಿಸಿ ಸೋಜಿಗವೂ ಆಗುತ್ತದೆ. ಇಲ್ಲಿನ ಪ್ರತಿಯೊಂದು ಪಾತ್ರದ ಸನ್ನಿವೇಶದ ಮಾತುಕತೆಯ ವಿವರಗಳು ದೀರ್ಘವಾಗಿವೆ. ಅದೇ ಈ ಕಾದಂಬರಿಯ ಶಕ್ತಿ ಮತ್ತು ಮಿತ ಆಗಿರುವುದು ವಿಶೇಷ,","brand":"Rajesh Kumar Kalya","offers":[{"title":"Default Title","offer_id":44040736375043,"sku":"HB00004163","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_4_45964168-ab39-4c39-9cba-56e141e24d0e.jpg?v=1688027666"},{"product_id":"bhanumatiya-parivaara-novel-kumaraswamy-tekkunja-veeraloka-publications-kannada-books","title":"ಭಾನುಮತಿಯ ಪರಿವಾರ","description":"ರಾವಣ ಪತ್ನಿಯ ಕುರಿತಾದ \"ಮುಂಡೋದರಿ\" ಕಾದಂಬರಿಯನ್ನು ಬರೆದ ನನಗೆ ದುರ್ಯೋಧನ ಪತ್ನಿ ಭಾನುಮುತಿಯ ಕುರಿತು ಬರೆಯಬೇಕೆಂಬ ಯೋಚನೆ ಸಹಜವಾಗಿಯೇ ಉಂಟಾಗಿತ್ತು, ಅದರ ಪರಿಣಾದುದೇ ಈ ಕೃತಿ \"ಭಾನುಮತಿಯ ಪರಿವಾರ'. ಮಹಾಭಾರತ ಕೃತಿಯಲ್ಲಿ ಎಲ್ಲಿಯೂ ಭಾನುಮತಿ ಪ್ರಸ್ತಾಪ ಬಂದಂತೆ ಕಾಣುವುದಿಲ್ಲ, ಪಂಪ ಭಾರತದ \"ಭಾನುಮತಿಯ ನೆತ್ತ\" ಪ್ರಸಂಗವು ತುಂಬ ವಿಮರ್ಶೆಗೊಳಪಟ್ಟ ಪದ್ಯ. ಕಡೆಂಗೋಡ್ಳು ಶಂಕರ ಭಟ್ಟರ ಘೋಷಯಾತ್ರೆಯಲ್ಲಿಯೂ ಭಾನುದುತಿಯ ಚಿತ್ರಣ ಸಿಗುತ್ತದೆ. ಭಾನುಮತಿ ಸ್ವಯಂವರ ಎಂಬ ಯಕ್ಷಗಾನ ಪ್ರಸಂಗ ಇದೆಯಾದರೂ ಅದು ಅಷ್ಟು ಪ್ರಚಾರಕ್ಕೆ ಬರಲಿಲ್ಲ. ಕೆಲವು ಬಿಡಿ ಲೇಖನಗಳು ಅಪರೂಪಕ್ಕೊಮ್ಮೆ ಪ್ರಕಟವಾದದ್ದಿದೆ. ಇವಿಷ್ಟು ಹೊರತು ಪಡಿಸಿದರೆ ಕನ್ನಡದಲ್ಲಿ ಭಾನುಮತಿಯ ಕುರಿತಾದ ಸಾಹಿತ್ಯ ವಿರಳವೆಂದೇ ಹೇಳಬಹುದು. ಹಾಗಾಗಿ \"ಭಾನುಮತಿ ಪರಿವಾರ\" ಕಾದಂಬರಿ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಒಂದು ಅಪರೂಪದ ಕೃತಿಯೆಂದೇ ಹೇಳಬಹುದು.\u003cbr\u003e\u003cbr\u003eಭಾನುಮತಿಯ ಪರಿವಾರ ಎಂಬುದು ಹಿಂದಿ ನಾಣ್ಣುಡಿ \"ಭಾನುಮತಿ ಕಾ ಕುನ್‌ಬಾ\" ಅನುವಾದ. ಪ್ರಸ್ತಾವನೆಯಲ್ಲಿ ತಿಳಿಸಿದಂತೆ ವಿಲೋಮ ವಸ್ತುಗಳ ಜೋಡಣೆಯಿಂದ ಕಟ್ಟಿಕೊಂಡ ಸಂಯುಕ್ತ ರೂಪವನ್ನು ವಿವರಿಸಲು ಈ ನಾಣ್ಣುಡಿಯ ಬಳಕೆಯಾಗುತ್ತದೆ. ಭಾನುಮತಿಯ ಸಂಸಾರವೂ ವಿಲೋಮ ಮನಸ್ಸುಗಳ ಕೂಟವೇ ಆಗಿದೆ. ಅದರ ಚಿತ್ರಣವೇ ಈ ಕಾದಂಬರಿಯ ಮುಖ್ಯ ಹೂರಣ. ಸ್ವಯಂವರದಿಂದ ತೊಡಗಿ ಮಹಾಭಾರತ ಯುದ್ಧಾ ನಂತರವೂ ಭಾನುಮತಿಯ ಬಾಳುವೆ ಆಕೆಯ ಇಚ್ಛೆಯಂತೆ ನಡೆಯಲಿಲ್ಲ. ದುರ್ಯೋಧನ ಮತ್ತವನ ಕೂಟದವರೊಂದಿಗಿನ ನಂಟು, ದುರ್ಯೋಧನನ ಆತ್ಮಸಖ ಕರ್ಣನ ಪತ್ನಿಯೊಂದಿಗಿನ ಆಕೆಯ ಸಂಬಂಧ, ದ್ರೌಪದಿಯೊಂದಿಗಿನ ಮುಖಾಮುಖಿ, ಅರಮನೆಯ ಬದುಕು, ಗಾಂಧಾರಿಯ ವ್ಯಕ್ತಿತ್ವ ಇವೆಲ್ಲವೂ ಸಾಕಷ್ಟು ವಿವರಗಳೊಂದಿಗೆ ಈ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟಿದೆ. ವಿಶಿಷ್ಟ ನಿರೂಪಣಾ ಓದುಗರಿಗೆ ಮೆಚ್ಚುಗೆಯಾದೀತೆಂಬ ಭರವಸೆಯಿಂದ ಈ ಕೃತಿಯನ್ನು ಕನ್ನಡಮ್ಮನ ಮಡಿಲಿಗೆ ಸಮರ್ಪಿಸುತ್ತಿದ್ದೇನೆ.\u003cbr\u003e\u003cbr\u003e-ಕುಮಾರಸ್ವಾಮಿ ತೆಕ್ಕುಂಜ\u003cbr\u003e","brand":"Kumaraswamy Tekkunja","offers":[{"title":"Default Title","offer_id":44040929804547,"sku":"HB00004164","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_bb8866ee-6317-44db-8512-9130de5a603d.jpg?v=1688030165"},{"product_id":"nee-doora-hodaaga-novel-fouzia-saleem","title":"ನೀ ದೂರ ಹೋದಾಗ","description":"ಫೌಝಿಯವರ 'ನೀ ದೂರ ಹೋದಾಗ' ಕಾದಂಬರಿಯು ಮಂಗಳೂರಿನಲ್ಲಿರುವ ಮುಸ್ಲಿಂ ಸಮುದಾಯದ ಕಷ್ಟಗಳ ಬಗ್ಗೆ, ಸುಲಭ ಮತ್ತು ಆಸಕ್ತಿದಾಯಕವಾಗಿ ಓದಿಸುವಂತೆ ಮಾಡುತ್ತದೆ, ಮಧ್ಯಮ ಮತ್ತು ಕೆಳ ವರ್ಗದ ದೊಡ್ಡ ಮುಸ್ಲಿಂ ಕುಟುಂಬಗಳ ದೈನಂದಿನ ಹೋರಾಟದ ಸುತ್ತ ಕಥೆ ಸುತ್ತುತ್ತದೆ. ಕಥಾವಸ್ತುವು ಸಾಂಪ್ರದಾಯಿಕ ಅವಿಭಕ್ತ ಕುಟುಂಬದಲ್ಲಿನ ವಿಶಿಷ್ಟ ಸಮಸ್ಯೆಗಳನ್ನು ಮತ್ತು ಮುಸ್ಲಿಂ ಸಮುದಾಯದ ರಚನೆಯೊಳಗಿನ ಸೂಕ್ಷ್ಮ ಲಿಂಗ ಮಾತುಕತೆಗಳನ್ನು ಬಿಚ್ಚಿಡುತ್ತದೆ.\u003cbr\u003e\u003cbr\u003eಪೌಝಿಯ ಸಲೀಂ\u003cbr\u003e\u003cbr\u003eವಿವಿಧ ತಲೆಮಾರುಗಳ ಮಹಿಳೆಯರ ಜೀವನದಲ್ಲಿ ನಾವು ಇಣುಕಿ ನೋಡುವುದು ಅಪರೂಪ. ತನ್ನ ಸಂಸಾರವನ್ನಷ್ಟೇ ಅಲ್ಲ ತನ್ನ ಮುಂದಿನ ಪೀಳಿಗೆಯ ಸಂಸಾರವನ್ನೂ ಹಿಡಿತದಲ್ಲಿಟ್ಟುಕೊಂಡಿರುವ ಅಜ್ಜಿಯಿಂದ! ಮತ್ತು ಆಧುನಿಕ ದಿನದ ವಿದ್ಯಾವಂತ ಮಹಿಳೆಯರ ನಿರೀಕ್ಷೆಗಳನ್ನು ತಲುಪಲು ಎದುರಿಸಬೇಕಾದ ಸಮಸ್ಯೆಗಳ ಕುರಿತು ಈ ಕೃತಿಯು ವಿವರಿಸುತ್ತದೆ. ನಿರೂಪಣೆಯು ಸಂತೋಷಕರ, ತಮಾಷೆ ಮತ್ತು ದೃಶ್ಯವಾಗಿದೆ.\u003cbr\u003e\u003cbr\u003eಈ ಕಥೆಯನ್ನು ಅನನ್ಯವಾಗಿಸುವುದು ಮಂಗಳೂರಿನ ವಿವಿಧ ಸಂಸ್ಕೃತಿಗಳು, ಧರ್ಮಗಳು, ಭಾಷೆಗಳು ಮತ್ತು ಪಾಕಪದ್ಧತಿಗಳ ಸಮ್ಮಿಳನದ ನಗರವಾಗಿದ್ದು, ಹಠಾತ್ತನೆ ಕೆಟ್ಟ ಪ್ರಪಂಚಕ್ಕೆ ವಿಶಾಲವಾಗಿ ಎಸೆಯಲ್ಪಟ್ಟ ಮಹತ್ವಾಕಾಂಕ್ಷೆಯ ಯುವತಿಯ ಹಿನ್ನೆಲೆಯೊಂದಿಗೆ ಒಟ್ಟಿಗೆ ಜೋಡಿಸಲಾಗಿದೆ.\u003cbr\u003e\u003cbr\u003eಲೇಖಕರು ಈ ಪ್ರದೇಶದಲ್ಲಿ ಉದಯೋನ್ಮುಖ ಕೋಮು ಉದ್ವಿಗ್ನತೆಯ ಒಳಪ್ರವಾಹಗಳನ್ನು ಪಕ್ಷಗಳನ್ನು ತೆಗೆದುಕೊಳ್ಳದೆ ಬಿಂಬಿಸುವ ಹುಮ್ಮಸ್ಸನ್ನು ತೋರಿಸಿದ್ದಾರೆ. ಆದರೆ ಸಂಘರ್ಷವನ್ನು ಪ್ರಸ್ತುತಪಡಿಸಿದ್ದಾರೆ.\u003cbr\u003e\u003cbr\u003eಮಂಗಳೂರಿನಿಂದ ದುಬೈಗೆ ಅವಿವಾಹಿತ ಮುಸ್ಲಿಂ ಮಹಿಳೆಯೊಬ್ಬಳು ತನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಡೆಸಿದ ಹೋರಾಟ ಮತ್ತು ವದಂತಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಏಕಾಂಗಿ ಹೋರಾಟ, ತನ್ನದೇ ಸಮುದಾಯದ ಅಂಚಿನ ಬಣಗಳ ಬೆದರಿಕೆಗಳು ಮತ್ತು ಸಣ್ಣಪುಟ್ಟ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಮೀರಿ ಮಾನವೀಯತೆಯ ಆಚರಣೆ.\u003cbr\u003e\u003cbr\u003eಒಬ್ಬಸಾಮಾನ್ಯ ವ್ಯಕ್ತಿಯ ನೈಜ ಜೀವನವು ಜಗತ್ತಿಗೆ ಪ್ರಸ್ತುತಪಡಿಸಲಾದ ಹ೦ತ ಹ೦ತದ ಕೋಮು ಬಿರುಕುಗಳಿಗಿಂತ ಮೇಲಿರುತ್ತದೆ. ನಿಜವಾದ ಪ್ರಪಂಚವು ಧರ್ಮಗಳು ಮತ್ತು ಸಮುದಾಯಗಳ ಹೆಣೆದ ಬಟ್ಟೆಯಾಗಿದ್ದು ಅಲ್ಲಿ ವೈಯಕ್ತಿಕ ಎಳೆಯನ್ನು ಬಲವಂತವಾಗಿ ಹೊರತೆಗೆಯಲಾಗುತ್ತದೆ. ಯಾವುದೇ ಬೆಂಬಲವಿಲ್ಲದ ಮುಸ್ಲಿಂ ಯುವತಿಗೆ ಹಿಂದೂ ದೇವಾಲಯದ ದೇವರಬಾಧ್ಯತೆಯನ್ನು ಪೂರೈಸಲು ಧೈರ್ಯ ಬೇಕು!\u003cbr\u003e\u003cbr\u003eನಾನು ಫೌಜಿಯವರಿಗೆ ಶುಭ ಹಾರೈಸುತ್ತೇನೆ ಮತ್ತು ಮುಂಬರುವ ವರ್ಷಗಳಲ್ಲಿ ಆಕೆಯಿಂದ ಇನ್ನೂ ಅನೇಕ ಸಮೃದ್ಧವಾದ ಕೆಲಸಗಳು ಹೊರಬರಲಿ.\u003cbr\u003e\u003cbr\u003e-ಡಾ. ಕುಸುಮ್ ತಾಂಟ್ರೀ\u003cbr\u003eಶಿಕ್ಷಣ ಸಲಹೆಗಾರ, ಸಂಶೋಧನಾ ಮಾರ್ಗದರ್ಶಿ","brand":"Fouzia Saleem","offers":[{"title":"Default Title","offer_id":44041066184963,"sku":"HB00004165","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_fde2bfc8-4c00-4404-8ca2-16374b4d915a.jpg?v=1688032434"},{"product_id":"haavina-mane-detective-novel-anu-belle-veeraloka-publications-kannada-book","title":"ಹಾವಿನ ಮನೆ","description":"ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಿಸಬೇಕನ್ನುವುದು ಅದರ ಅರ್ಧ ಆಯಸ್ಸು ಕಳೆದೇಹೋಯಿತು! ಇನ್ನು ಉಳಿದ ಆಯಸ್ಸಿನಲ್ಲಿ ತನ್ನ ಕನಸು ನನಸಾಗುವುದಿಲ್ಲವೆನ್ನುವುದು ಖಾತ್ರಿಯಾಗುತ್ತಲೇ ಒಂದು ಯೋಜನೆ ಹಾಕಿಕೊಂಡ, 'ತಾನು ಯಾರಿಗಾಗಿ ಇಷ್ಟು ವರ್ಷ ದುಡಿದನೋ ಅವರಿಂದಲೇ ಸುಲಭದಲ್ಲಿ ಹಣ ಲಪಟಾಯಿಸ ಹೊರಟ. ಯಶಸ್ವಿಯೂ ಆದ ಮುಂದೆ…..!?\u003cbr\u003eಮಾಫಿಯಾ ಅವನ ಹಿಂದೆ ಬಿತ್ತು. ಅವನು ಓಟಕ್ಕಿತ್ತ ಓಡುತ್ತಲೇ ಇದ್ದ.... ಅಚಾನಕ್ಕಾಗಿ ಹೆಣ್ಣೂಬ್ಬಳ ಪ್ರೀತಿಗೆ ಬಿದ್ಧ.\u003cbr\u003eಮುಂದೇನಾಯ್ತು.... ಮಾಫಿಯಾ ಕೈಗೆ ಸಿಕ್ಕನೇ. ತಪ್ಪಿಸಿಕೊಂಡನೇ 'ಹಾವಿನ ಮನೆ' ಹೊಕ್ಕು ನೀವೇ ಓದಿ ನೋಡಿ...\u003cbr\u003eಕುತೂಹಲಭಲಿತ ಕಾದಂಬರಿ ಹಾವಿನಮನೆ","brand":"Anu Belle","offers":[{"title":"Default Title","offer_id":44041528475907,"sku":"HB00004166","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_9ce40dad-3371-4441-9e83-42c028738e1c.jpg?v=1688039877"},{"product_id":"gowda-parampare-history-putturu-anantarjagowda-kannada-book","title":"ಗೌಡ ಪರಂಪರೆ","description":"ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನ ವಿಟ್ಲ ಪಾಣೆ ಮಂಗಳೂರು ಹಾಗೂ ಕೊಡಗಿನಲ್ಲಿ ಬಹುಸಂಖ್ಯಾತರಾಗಿ, ಸಾಕಷ್ಟು ಭೂ ಹಿಡುವಳಿ ಹೊಂದಿ ಜೀವಿಸುತ್ತಬಂದಿದ್ದಾರೆ.ಇವರು ಮೂಲತಃ ಕೃಷಿಕರು ಆದರೆ ಈ ಸಮುದಾಯದ ಬೇರುಗಳನ್ನು ಹುಡುಕುತ್ತಾ ಹೋದರೆ ಇವರ ಮೂಲವನ್ನು ಸುಮಾರು ಸಾವಿರದ ಐದುನೂರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇವರ ಮೂಲದ ಬಗ್ಗೆ ಅನೇಕ ಚರ್ಚೆ, ವಾದಗಳಿದ್ದರೂ ಪ್ರಸ್ತುತ ಕೃತಿಯಲ್ಲಿ ಈ ಸಮುದಾಯದ ಮೂಲವನ್ನು ಗಂಗವಂಶದಲ್ಲಿಗುರುತಿಸಲಾಗಿದೆ.\u003cbr\u003e\u003cbr\u003eಕಾಲಗರ್ಭದಲ್ಲಿ ಅಡಗಿರುವ, ಸಾಂಕೇತಿಕ ರೂಪದಲ್ಲಿರುವ ಒಂದು ಸಮುದಾಯದ ಮೂಲ ಚರಿತ್ರೆ, ಸಂಸ್ಕೃತಿ, ಪರಂಪರೆಯನ್ನು ಉತ್ಪನನ ಮಾಡುತ್ತ, ಈಗಿರುವ ಸ೦ಗತಿಗಳೊಂದಿಗೆ ತಳುಕು ಹಾಕುತ್ತ ಸಂಶೋಧನಾತ್ಮಕವಾಗಿ ನಿರೂಪಿತವಾಗಿರುವ ಈ ಕೃತಿ ಸಂಸ್ಕೃತಿ ಅಧ್ಯಯನದ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಸತ್ಯಾನ್ವೇಷಣೆಯೇ ಮೂಲಧಾತುವಾಗಿರುವ ಇಲ್ಲಿನ ಬರೆವಣಿಗೆ ಹೊಸ ಹೊಸ ಅಂಶಗಳನ್ನು ತುಂಬಿಕೊಂಡಿದ್ದು, ಕುತೂಹಲಕಾರಿಯಾಗಿದ್ದು, ಚರಿತ್ರೆ ಪ್ರಿಯರನ್ನೂ ಸಂಸ್ಕೃತಿ ಪ್ರಿಯರನ್ನೂ ಏಕಕಾಲಕ್ಕೆ ಆಕರ್ಷಿಸುತ್ತದೆ. ಅನಂತರಾಜಗೌಡರು ತಾವು ಆಯ್ಕೆಮಾಡಿಕೊಂಡ ವಿಷಯದ ಮಂಡನೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾನು ತಿಳಿದಿದ್ದೇನೆ. ಇಂಥ ವಿಚಾರಗಳ ಬರೆವಣಿಗೆಯನ್ನು ಅವರು ಮುಂದುವರೆಸಲಿ ಎಂದು ಆರೈಸುತ್ತೇನೆ.\u003cbr\u003e\u003cbr\u003e-ಡಾ. ಹಾ.ತಿ. ಕೃಷ್ಣೇಗೌಡ,\u003cbr\u003eಸಂಶೋಧಕರು","brand":"Putturu Anantarajagowda","offers":[{"title":"Default Title","offer_id":44041547743491,"sku":"HB00004167","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_97696f09-24c0-4383-9e42-d6e07e3e7add.jpg?v=1688040667"},{"product_id":"anaatha-preetiya-anubandha-novel-b-manjunatha-kamat-haaladi-kannada-book","title":"ಅನಾಥ ಪ್ರೀತಿಯ ಅನುಬಂಧ","description":"'ಪ್ರೀತಿ' ಎರಡೇ ಅಕ್ಷರದ ಒಂದು ಚಿಕ್ಕ ಪದವಾದರೂ ಎಲ್ಲಾ ಜೀವ ಚೇತನದಲ್ಲೂ ಸುಪ್ತವಾಗಿರುವ ಒಂದು ಅಪೂರ್ವ ಅನಂತ ಅನುಭೂತಿ. ಅದರಲ್ಲೂ ಮಾನವನಲ್ಲಿ ಹದಿ ಹರೆಯ ಅರಳುವ ಕಾಲಘಟ್ಟದಲ್ಲಿ ಪರಸ್ಪರ ಆಕರ್ಷಣೆಯ ರೆಕ್ಕೆ ಕಟ್ಟಿಕೊಂಡೇ ಹೃದಯಕ್ಕೆ ಲಗ್ಗೆ ಇಡುತ್ತದೆ. ಆಗ ಅದು ಯಾವ ಪ್ರತಿಬ೦ಧಕ್ಕೂ ಒಳ ಪಡುವುದು ಕಷ್ಟ' ಅನಾಥ ಪ್ರೀತಿಯ ಅನುಬಂಧ' ಕೃತಿಯು ಎರಡು ವಿಭಿನ್ನ ಧರ್ಮದ ಎಳೆಯ ಪ್ರೇಮಿಗಳ ಕಾಲೇಜು ವ್ಯಾಸ೦ಗದ ಕಿರು ಅವಧಿಯಲ್ಲಿ ಅಂಕುರಿಸಿದ ಪ್ರೀತಿಯು ವಿವಿಧ ಆಕಸ್ಮಿಕ ತಿರುವುಗಳನ್ನು ಪಡೆಯುವ ಮತ್ತು ಜಾತಿ, ಮತ, ಕುಲ ಗೋತ್ರದ ಎಲ್ಲೆಕಟ್ಟನ್ನು ಮೀರಿದ ಪ್ರೀತಿಯ ಶಕ್ತಿಯನ್ನು ಪ್ರತಿಬಿಂಬಿಸುವ ರೋಚಕ ಕಥಾನಕವನ್ನು ನಿರೂಪಿಸುತ್ತದೆ.","brand":"B. Manjunatha Kamat, Haaladi","offers":[{"title":"Default Title","offer_id":44041568551171,"sku":"HB00004168","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_a5318fb6-3f2e-4423-a105-16e7a5b76158.jpg?v=1688041423"},{"product_id":"vyagra-mattu-itara-kaadambarigalu-novel-kumara-bendre-kannada-book","title":"ವ್ಯಗ್ರ ಮತ್ತು ಇತರ ಕಾದಂಬರಿಗಳು","description":"'ವ್ಯಗ್ರ''ಅಳಿವು''ಅವಸಾನ ಈ ಮೂರೂ ಕಾದಂಬರಿಗಳು ಏನೋ ಒಂದು ಸಮಸ್ಯೆ, ಸವಾಲು, ಎದುರಿಸಲೇ ಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ ಅಮಾಯಕ ಜೀವಗಳ ಒಡಲ ಸತ್ಯವನ್ನು ಅಂತಃಕರಣದಿಂದ ಕಂಡು ಹೇಳಲು ಹೊರಟ ಕಥನಗಳಿವು. ಅಸಮಾನತೆ, ಅನ್ಯಾಯದಿಂದ ತುಳಿತಕ್ಕೊಳಗಾಗಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ವ್ಯಕ್ತಿಯೊಬ್ಬನ ಅಂತರಂಗದ ಕಿಡಿ ಪ್ರಜ್ವಲಿಸುವ ಕಥನ 'ವ್ಯಗ್ರ' ಕಾದಂಬರಿಯಲ್ಲಿದೆ. ಸಕಾರಾತ್ಮಕ ವ್ಯಕ್ತಿ ಮತ್ತು ಶಕ್ತಿಯೊಂದನ್ನು ಈ ವ್ಯವಸ್ಥೆ ಹೇಗೆ ನಕಾರಾತ್ಮಕವಾಗಿ ಬದಲಿಸಿ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂಬ ವಿಚಾರದ ಮೇಲೆ ಇದು ಬೆಳಕು ಚೆಲ್ಲುವಂತಹದು. ಒಟ್ಟಾರೆಯಾಗಿ ಕಥನವೆಂದರೆ ನನಗೆ ಆತ್ಮಾನುಸಂಧಾನಕ್ಕಾಗಿ ಧ್ಯಾನಕ್ಕಿಳಿವಷ್ಟೇ ಸಂತೋಷ ತರುವ ಕ್ರಿಯೆ! ಹಾಗಾಗಿ ಅದನ್ನು ನಾನು ಪ್ರತಿಸಾರಿಯೂ ನನ್ನಿಂದ ಸಾಧ್ಯವಿರುವಷ್ಟು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮಾಡಲು ಪ್ರಯತ್ನಿಸುತ್ತಿರುತ್ತೇನೆ.\u003cbr\u003e\u003cbr\u003eವಿಶೇಷವೇನೆಂದರೆ ಈ ಮೂರೂ ಕಾದಂಬರಿಗಳನ್ನು ಬರೆಯುವಾಗ ಈ ಕಥನಗಳು ಚಲನಚಿತ್ರದ ವ್ಯಾಕರಣಕ್ಕೆ ಹತ್ತಿರವಾಗಿರಬೇಕು ಎಂಬುದು ನನ್ನ ಪೂರ್ವಾಗ್ರಹವಾಗಿತ್ತು. ಯಾಕೆಂದರೆ ಈ ಕಾಲಘಟ್ಟದಲ್ಲಿ ಪರ್ಯಾಯ ಮಾರ್ಗದ ಪ್ರಯೋಗಳ ಚಲನಚಿತ್ರಗಳು ನನ್ನನ್ನು ಗಾಢವಾಗಿ ಆವರಿಸಿಕೊಂಡಿದ್ದೇ ಇದಕ್ಕೆ ಕಾರಣ. ಆದರೆ ಸೃಜನಶೀಲ ಸಾಹಿತ್ಯ ಕೃತಿಯ ಎಲ್ಲ ಗುಣ-ಲಕ್ಷಣಗಳನ್ನೂ ಒಳಗೊಂಡಿರಬೇಕು ಎಂಬುದು ಕೂಡ ಅರಿಕೆಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಈ ಕೃತಿಗಳನ್ನು ರಚಿಸಿದೆ. ಹೀಗೆ ನಿರ್ದಿಷ್ಟ ಚೌಕಟ್ಟಿಗೆ ಒಳಪಟ್ಟು ಬರೆಯುವಾಗ ಎದುರಾಗುವ ಸವಾಲು, ತಾಂತ್ರಿಕ ಸಮಸ್ಯೆಗಳನ್ನು ನಾನು ಅವಕಾಶಗಳನ್ನಾಗಿ ಬಳಸಿಕೊಂಡು ಸಾಗಿದೆ, ಇದೇ ಕಾರಣಕ್ಕೆ ಈ ಕಥನಗಳಿಗೆ ವಿಭಿನ್ನವಾದ ಶಕ್ತಿ ಮತ್ತು ಕುತೂಹಲಕಾರಿಯಾಗಿ ಓದಿಸಿಕೊಳ್ಳುವ ಗುಣ ದಕ್ಕಿದೆ ಎಂಬ ಪ್ರತಿಕ್ರಿಯೆ ಮೊದಲ ಓದುಗರಿಂದ ಬಂದಿರಬಹುದು! ಹಾಗಾಗಿ ಇದೊಂದು ರೀತಿಯ ವಿಭಿನ್ನ ಅನುಭವ ನನಗೆ.\u003cbr\u003e\u003cbr\u003e(ಕಾದಂಬರಿಕಾರರ ಮಾತಿನಿಂದ)","brand":"Kumara Bendre","offers":[{"title":"Default Title","offer_id":44041584115971,"sku":"HB00004169","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_6a4e3c30-ced5-4204-895d-740dd79c0ec7.jpg?v=1688042325"},{"product_id":"satyada-anaavarana-novel-k-s-ramasundari-veeraloka-publications-kannada-book","title":"ಸತ್ಯದ ಅನಾವರಣ","description":"ಇಡೀ ಬ್ರಹ್ಮಾಂಡದ ಅಸ್ತಿತ್ವವಿರುವುದೇ ಸಕಲ ಜೀವರಾಶಿಗಳ ಸೃಷ್ಟಿಯ ಮೇಲೆ, ಸೃಷ್ಟಿಕಾರ್ಯ ನಿ೦ತುಬಿಟ್ಟರೆ ಈ ಬ್ರಹ್ಮಾಂಡವೇ ಇರುವುದಿಲ್ಲ. ಬ್ರಹ್ಮಾಂಡದ ನಿಯಮಾನುಸಾರ ಜೀವ ಸೃಷ್ಟಿ ನಡೆಯುವುದು ಪ್ರಕೃತಿ ಪುರುಷನ ಸಮಾಗಮದಿಂದ, ಆ ನಿಯಮದ೦ತೆ ಜನಿಸಿದ ಮಾನವ ಇಂದು ಅ ನಿಯಮಕ್ಕೆ ವಿರುದ್ಧವಾಗಿ ಪ್ರಕೃತಿ ಪುರುಷರ ಸಮಾಗಮ ಇಲ್ಲದೇನೇ ಜೀವಿಯನ್ನು ಹುಟ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾನೆ. ಶತಕದ ಹಿಂದೆ ಕಲ್ಪನೆಯಲ್ಲೂ ಸಾಧ್ಯವಿಲ್ಲದಿದ್ದ ಈ ಕಾರ್ಯವು ಇಂದು ಪ್ರಪಂಚದಾದ್ಯಂತ ಲೀಲಾಜಾಲವಾಗಿ ನಡೆಯುತ್ತಿದೆ. 19768ರಲ್ಲಿ ಜನಿಸಿದ ಪ್ರಪಂಚದ ಮೊದಲ ಪ್ರಣಾಳ ಶಿಶುವಿನಿಂದ ಹಿಡಿದು 1996ರಲ್ಲಿ ಕ್ಲೋನಿಂಗ್ ಮೂಲಕ ಜನಿಸಿದ ಕುರಿಯ ತನಕ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇದೆ. ಅವುಗಳಲ್ಲಿ ಬಾಡಿಗೆ ತಾಯಿಯ ಪ್ರಯೋಗವು ಒಂದು.\u003cbr\u003e\u003cbr\u003eಒಂದು ಹೆಣ್ಣು ಬಾಡಿಗೆ ತಾಯಿಯಾಗಲು ಸಮ್ಮತಿಸಿದ್ದು ಯಾಕೆ ಎಂಬುದೇ ಈ ಕೃತಿಯ ಕಥಾವಸ್ತು. ಈ ಕೃತಿಯಲ್ಲಿ ವೈಜ್ಞಾನಿಕ ಅಂಶಗಳಿಗಿಂತ ಹೆಚ್ಚಾಗಿ ಮಾನವನ ಮನಸ್ಥಿತಿಯ ಮೇಲೆ, ಮನುಷ್ಯ- ಮನುಷ್ಯ ಸಂಬಂಧಗಳ ಮೇಲೆ ಹಾಗೂ ಸಮಾಜದ ಮೇಲೆ ಆ ಅಂಶಗಳು ಬೀರುವ ಪರಿಣಾಮಗಳಿಗೆ ಹೆಚ್ಚು ಒತ್ತುನೀಡಲಾಗಿದೆ.\u003cbr\u003e\u003cbr\u003eಪ್ರಪಂಚ ವೈಜ್ಞಾನಿಕವಾಗಿ ಮುಂದುವರೆಯುವುದು ಎಷ್ಟು ಮುಖ್ಯವೋ ಅದರಿಂದ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ. ಕೃತಿಯ ಅಂತ್ಯದಲ್ಲಿ ಅದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.\u003cbr\u003e\u003cbr\u003eಕಥಾವಸ್ತುಸುಮಾರು ಮೂರು ದಶಕಗಳ ಹಿಂದೆ ತೀರಾ ಹೊಸದೆನಿಸುವಹಾಗೆ ಇತ್ತು.ಹೀಗಾಗಿ ಅಂದು ಲಭ್ಯವಿಲ್ಲದ ಆಧುನಿಕ ಸಲಕರಣೆಗಳಾದ ಮೊಬೈಲ್, ಇಂಟರ್ನೆಟ್ ಮೊದಲಾದುವುಗಳ ಉಪಯೋಗ ಹಾಗೂ ಪ್ರಸ್ತಾಪ ಕೃತಿಯಲ್ಲಿ ಇಲ್ಲ. ಅಂದಿನ ಬದುಕಿನ ಶೈಲಿಗನುಗುಣವಾಗಿ ಆ ಕಥೆಯನ್ನು ಹಣೆಯಲಾಗಿದೆ.","brand":"K. S. Ramasundari","offers":[{"title":"Default Title","offer_id":44041710928131,"sku":"HB00004170","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_4_0c8dd6bf-ebf0-4251-a112-3238577d35d1.jpg?v=1688045692"},{"product_id":"nambikeyemba-gaalikode-stories-dr-premalatha-b-kannada-books","title":"ನಂಬಿಕೆಯೆಂಬ ಗಾಳಿಕೊಡೆ","description":"“ಎಲ್ಲ ಹೇಳಿದ್ರೆ... ನಾನಾದ್ರು ಡಿಸೈಡ್ ಮಾಡ್ತೀನಿ. ನೀನು ಈಗ್ಲೂ ಒಂತರ ಶಾಕ್ನನಲ್ಲಿದ್ದೀಯ. ನಿಂಗೆ\u003cbr data-mce-fragment=\"1\"\u003eನಿರ್ಧಾರ ಮಾಡಕ್ಕೆ ಕಷ್ಟ ಆಗುತ್ತೆ\"\u003cbr data-mce-fragment=\"1\"\u003e\"ಸರಿ.. ಪ್ರಶ್ನೆಥರ ಕೇಳು, ನೆನಪು ಬಂದಿದ್ದು ಹೇಳ್ತೀನಿ\"\u003cbr data-mce-fragment=\"1\"\u003e\"ನೀನು ಮನೆಗೆ ಹೇಗೆ ಬಂದೆ?\" \"ಟ್ಯಾಕ್ಸಿನಲ್ಲಿ\"\u003cbr data-mce-fragment=\"1\"\u003e\"ಅಂದ್ರೆ..ಟ್ಯಾಕ್ಸಿ ಕಾಲ್ ಮಾಡೋಕೆ ನಂಬ‌ರ್ ನೆನಪಿತ್ತು, ವಿಳಾಸ ಹೇಳೋಷ್ಟು ಎಚ್ಚರಿದ್ದೆ?\"\u003cbr data-mce-fragment=\"1\"\u003e\"ಅಂದ್ರೆ.. ನೀನು ನನ್ನ ನಂಬ್ತಿಲ್ಲ\" ಲಕ್ಕಿ ಅಳತೊಡಗಿದಳು.\u003cbr data-mce-fragment=\"1\"\u003e\"ನಿನ್ನ ನಂಬ್ತೀನಿ, ಆದ್ರೆ ನೀನು ಹೇಳಿರೋದನ್ನ ನಂಬಕ್ಕಾಗ್ತಿಲ್ಲ\" ಅಭಿ ಅವಳ ಅಳುವನ್ನು ಕಡೆಗಣಿಸಿ ಹೇಳಿದ.\u003cbr data-mce-fragment=\"1\"\u003e\"ಆಗ್ಲಿ..ನಿಜ ಹೇಳ್ತಿನಿ... ಅವನೇ ಟ್ಯಾಕ್ಸಿಕರೆದಿದ್ದು\" \u003cbr data-mce-fragment=\"1\"\u003e\"ಆಂದ್ರೆ ರೇಪ್ ಮಾಡಿ.. ಆಮೇಲೆ ಸೇಫ್ ಆಗಿ ಮನೆ ಸೇರ್ಲಿ ಅಂತ ಅವನೇ\u003cbr data-mce-fragment=\"1\"\u003eವಿಳಾಸ ಹೇಳಿ, ನಿನ್ನಟ್ಯಾಕೀಲಿ ಕೂಡಿಸಿ ಮನೆಗೆ ಕಳಿಸಿದ್ನಾ? \"\u003cbr data-mce-fragment=\"1\"\u003e\"ಹೂಂ\"\u003cbr data-mce-fragment=\"1\"\u003e\u003cbr data-mce-fragment=\"1\"\u003eಯಾರ ರೇಪ್ ? ಹೇಗಾಯ್ತು? ಅವಳಿಗೆ ನ್ಯಾಯ ದೊರಕಿತೇ? ಇದನ್ನು ತಿಳಿಯಲು ಡಾ.ಪ್ರೇಮಲತ ಬಿ.ಇವರ ನಂಬಿಕೆಯಿಂದ ಗಾಳಿಕೊಡೆ ಕಥಾಸಂಕಲನವನ್ನು ಓದಿ ನೋಡಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e","brand":"Dr. Premalatha. B","offers":[{"title":"Default Title","offer_id":44041774301443,"sku":"HB00004171","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_08558a48-d4cb-4ba3-ac0c-298a3c01628a.jpg?v=1688047133"},{"product_id":"antarashtriya-kumbalakaayi-stories-abdul-rasheed-veeraloka-publications-kannada-book","title":"ಅಂತರಾಷ್ಟ್ರೀಯ ಕುಂಬಳಕಾಯಿ","description":"ಇಲ್ಲಿನ ಕತೆಗಳಲ್ಲಿ ಉಜ್ವಲ ಬದುಕು ಇರುವ ಹಾಗೆಯೇ ಪುಟಗಳಿಂದ ಹೊರಕ್ಕೆ ಜಿಗಿದು ಜೀವನದಲ್ಲಿ ಒಂದಾಗುವಂಥ ಪಾತ್ರಗಳೂ ಇವೆ. ಸಹಾನುಭೂತಿಯಿಂದ ಸೃಷ್ಟಿಸಲಾಗಿರುವ ಈ ಪಾತ್ರಗಳೋ, ತಮ್ಮ ಸಂಸ್ಕೃತಿಯ, ಚರಿತ್ರೆಯ, ಅಸ್ಮಿತೆಯ ಸರಹದ್ದುಗಳನ್ನು ಒಡೆದುಹಾಕುವಷ್ಟು ಶಕ್ತವಾಗಿವೆ. ನಮ್ಮ ಅನೇಕ ಕತೆಗಾರರು (ವಿಮರ್ಶಕರು ಕೂಡ) ನೇರವಾಗಿ ಕತೆ ಹೇಳುವುದನ್ನು ಸಂಶಯದಿಂದ ನೋಡುತ್ತಿರುವ ಈ ಕಾಲದಲ್ಲಿ ಏಕಕಾಲಕ್ಕೆ ನೇರವಾಗಿದ್ದೂ ಸಂಕೀರ್ಣತೆಯನ್ನು ಸಾಧಿಸುವ ಈ ಕತೆಗಳು ಗಾಢ ಅನುಭವವನ್ನು ಕೊಡುವ, ವಾಸ್ತವ ಮತ್ತು ಫ್ಯಾಂಟಸಿಯ ನಡುವಣ ಗೆರೆಯನ್ನು ಅಳಿಸಿಹಾಕುವ ಅಪ್ಪಟ ಕತೆಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003eತೀರ ಸಾಮಾನ್ಯರನ್ನು ಕುರಿತ ಕತೆಗಳಿವು, ನಿಜ. ಆದರೆ ಈ ಸಾಮಾನ್ಯರ ಕನಸುಗಳು, ತುಸು ನಿರಾಶಾದಾಯಕವಾಗಿದ್ದರೂ ಅವರ ದೈನಿಕದ ಸ್ಥಿತಿಗತಿಗಳನ್ನು ಮರೆಮಾಚುವುದಿಲ್ಲ. ಮತ್ತೆ ಈ ಕತೆಗಳಲ್ಲಿರುವ ಅರಿವಿನ ಆಳ ತಲ್ಲಣಗೊಳಿಸುವಂಥದು. ಆ ತಲ್ಲಣವನ್ನು ಉಪಶಮನಗೊಳಸುವಂತಿದೆ ಒಳಗೇ ಪ್ರವಹಿಸುವ ವಿನೋದಪಜ್ಙೆ ವಿವರಗಳಿಂದ ಪರಿಚಿತವಾಗಿದ್ದೂ ಗುರುತು ಹತ್ತದ ಪರಿಣಾಮ ಉಂಟುಮಾಡುವ ಈ ಕತೆಗಳಲ್ಲಿ ಕನಸುಗಳಿರುವ ಮನವೊಲಿಸುವ ಶಕ್ತಿಯಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eರಶೀದರ ಕತೆಗಳಲ್ಲಿರುವುದು ಅನುಭವಿಸಲಾದ ಅರ್ಥವಾಗಿರುವುದರಿಂದ ಇಲ್ಲಿನ ಯಾವ ಕತೆಯ ವಸ್ತುವನ್ನೂ ಪ್ರತ್ಯೇಕಿಸಿ ನೋಡಲಾಗದು. \u003cbr data-mce-fragment=\"1\"\u003e\u003cbr data-mce-fragment=\"1\"\u003eಸೃಜನಶೀಲ ಕಲ್ಪಕತೆಯೂ ಸೂಕ್ಷ್ಮಜ್ಞತೆಯೂ ಅನುಭವಿಸಲ್ಪಟ್ಟ ಬದುಕೂ ಧಾರಾಳವಾಗಿರುವ ಈ ಕತೆಗಳನ್ನು ಯಾರು ಓದಿದರೂ ಅವರ ಮನಷ್ಟು ಏನೋದಬಂದ, ಭಾವತೀವ್ರತೆಯಿಂದ, ಮಧುರ ಯಾತನೆಯಿಂದ, ಮೆಚ್ಚುಗೆಯಿಂದ ಅರಳುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಎಸ್ ದಿವಾಕರ್ (ಮುನ್ನುಡಿಯಿಂದ)","brand":"Abdul Rasheed","offers":[{"title":"Default Title","offer_id":44043574509827,"sku":"HB00004172","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_b5487de6-7cb7-42a0-a569-8849d106f589.jpg?v=1688133401"},{"product_id":"hakki-mattu-hudugi-poems-prajavani-balaga-veeraloka-publications-kannada-book","title":"ಹಕ್ಕಿ ಮತ್ತು ಹುಡುಗಿ","description":"ವೀರಲೋಕ ಮತ್ತು ಪ್ರಜಾವಾಣಿ ಸಹೋಯೋಗದ ಈ ಕಾವ್ಯಸಂಕ್ರಾಂತಿ ಸ್ಪರ್ಧೆಗೆ ಬಂದಿದ್ದ ಸಾವಿರಾರು ಕವಿತೆಗಳಲ್ಲಿ ಈ ಆಯ್ದ 50 ಕವಿತೆಗಳು ನಮ್ಮ ಮುಂದೆ ಇದ್ದವು. ಈ ಸಂಕಲನದ ಪ್ರತಿ ಕವಿತೆಯೂ ಓದಿದಾಗ ವಿಶೇಷ ಅನಿಸಿದೆ. ಅಂತಿಮವಾಗಿ ಆರು ಕವಿತೆಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಸವಾಅನದ್ದಾಗಿತ್ತು. ಯಾವುದೇ ಕವಿಯನ್ನು ತೂಕ ಮಾಡಲು ಸಾಧ್ಯವಿಲ್ಲ. ಇವತ್ತು ಕವಿತೆ ಹೆಚ್ಚು ಸೂಕ್ಷ್ಮ ಆಗುತ್ತಿದ್ದು, ಲಯಗಾರಿಕೆಯನ್ನು ಕಳೆದುಕೊಳ್ಳುತ್ತಿದೆ. ಓದುವ ಕವಿತೆಗಿಂತ ಓದಿಸಿಕೊಳ್ಳುವ ಕವಿತೆಗಳು ಬರುತ್ತಿವೆ. \u003cbr data-mce-fragment=\"1\"\u003e\u003cbr data-mce-fragment=\"1\"\u003e-ಎಚ್.ಎಸ್.ವೆಂಕಟೇಶಮೂರ್ತಿ\u003cbr data-mce-fragment=\"1\"\u003eತೀರ್ಪುಗಾರರು\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕವಿತ್ವ ಯಾರಲ್ಲಿ ಯಾವ ರೀತಿ ಹುಟ್ಟುತ್ತದೆ ಹೇಳಲು ಬರುವುದಿಲ್ಲ, ಇಲ್ಲಿನ ಕವಿತೆಗಳು ಕೇಳುಗರಿಗೆ ತಟ್ಟುವ ರೀತಿಯಲ್ಲಿ ಮತ್ತು ಮುಟ್ಟುವ ರೀತಿಯಲ್ಲಿವೆ. ಈ ಕವಿತೆಗಳನ್ನು ಓದುವಾಗ ಬಹಳಷ್ಟು ಖುಷಿಗೊಂಡಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಯೋಗರಾಜಭಟ್, ಖ್ಯಾತ ಚಲನಚಿತ್ರ ನಿರ್ದೇಶಕರು","brand":"Prajavani Balaga","offers":[{"title":"Default Title","offer_id":44043582800131,"sku":"HB00004173","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_4_263ddbb7-8106-45b7-86da-57758b7d223b.jpg?v=1688134315"},{"product_id":"sahabhashikara-kannada-prema-contribution-dr-d-s-shreenivasa-prasad-kannada-book","title":"ಸಹಭಾಷಿಕರ ಕನ್ನಡ ಪ್ರೇಮ","description":"ಡಾ.ಶ್ರೀನಿವಾಸ ಪ್ರಸಾದ್ ನನ್ನ ಪ್ರಿಯ ವಿದ್ಯಾರ್ಥಿ. ಸಾಹಿತ್ಯದಲ್ಲಿ ಈತ ತನ್ನನ್ನು ತೊಡಗಿಸಿಕೊಂಡಿರುವ ರೀತಿ ನನಗೆ ಬಹಳ ಹೆಮ್ಮೆಯ ಸಂಗತಿ. ಮನೆಯಲ್ಲಿ ಅಡುವ ತಾಯಿಭಾಷೆ ಬೇರೆಯಾದರೂ ಕನ್ನಡಕ್ಕೆ ಸೇವೆ ಸಲ್ಲಿಸಿರುವವರ ೧೦೧ ಮಹಾನುಭಾವರ ಬಗ್ಗೆ ಡಾ. ಶ್ರೀನಿವಾಸ ಪ್ರಸಾದ್ ರಚಿಸಿರುವ ಸಹಭಾಷಿಕರ ಕನ್ನಡ ಪ್ರೇಮ ಕನ್ನಡಕ್ಕೆ ಅಗತ್ಯವಾಗಿ ಬೇಕಾಗಿದ್ದ ಕೃತಿ. ಹಿಂದೆ ಈ ರೀತಿಯ ಬೃಹತ್‌ ಪ್ರಮಾಣದಲ್ಲಿ ಈ ಕೆಲಸ ಆಗಿರಲಿಲ್ಲ. ಇದನ್ನು ನನ್ನ ವಿದ್ಯಾರ್ಥಿ ಮಾಡಿರುವುದು ನನಗೆ ಅತೀವ ಸಂತೋಷವನ್ನು ನೀಡಿದೆ. ಇದು ಅತ್ಯಪರೂಪದ ಕೆಲಸ. ಇದಕ್ಕಾಗಿ ನಾನು ಡಾ. ಶ್ರೀನಿವಾಸ ಪ್ರಸಾದ್ ನನ್ನ ಶಿಷ್ಯ ಆಗಿದ್ದಕ್ಕೆ ಹರ್ಷ ಪಡುತ್ತಾ ಹೃದಯಪೂರ್ವಕವಾಗಿ ಆಶೀರ್ವದಿಸುತ್ತೇನೆ. \u003cbr\u003e\u003cbr\u003e- ಪ್ರೊ. ಅ. ರಾ. ಮಿತ್ರ. ಖ್ಯಾತ ಸಾಹಿತಿ, ನಿವೃತ್ತ ಪ್ರಾಧ್ಯಾಪಕರು,","brand":"Dr. D. S. Shreenivasa Prasad","offers":[{"title":"Default Title","offer_id":44370084004099,"sku":"HB00004375","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_f8e8b87d-a671-4946-9877-5004ff722d6b.jpg?v=1699188748"},{"product_id":"amoghavarsha-historical-novel-dr-lakshmana-kounte-kannada-book","title":"ಅಮೋಘವರ್ಷ","description":"\"ಎಲ್ಲರೂ ಋಜುಮಾರ್ಗದಲ್ಲಿಯೇ ಕ್ರಮಿಸಲಾರರು ಮಹಾರಾಜ, ನಿಮ್ಮ ಪುತ್ರರಾದರೂ ಸಾಮಾನ್ಯ ಜನರಲ್ಲಿ ಒಬ್ಬರು. ನೀವು ವಿಶೇಷ ವ್ಯಕ್ತಿಗಳು. ಆ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡವರು. ನಿಮ್ಮೊಂದಿಗೆ ಅವರ ವರ್ತನೆಗಳನ್ನು ಹೋಲಿಸುವುದು ಹೇಗೆ? ಸ್ವಾಮಾನ್ಯರು ಸ್ವಭಾವತಃ ಚಂಚಲಚಿತ್ತರು. ಅನುಕೂಲ ಸಿಂಧು ಪ್ರವೃತ್ತಿಯವರು. ಲೌಕಿಕ ಹಿತಾಸಕ್ತರು ಲಾಭ ನಷ್ಟಗಳ ಹಿನ್ನೆಲೆಯನ್ನಿಟ್ಟುಕೊಂಡು ವ್ಯವಹರಿಸುವರು. ಅಂತೆಯೇ ಅವರು ಹಿಡಿದ ಮಾರ್ಗವನ್ನು ಮತ್ತೆ ಮತ್ತೆ ಬದಲಿಸುತ್ತಲೇ ಇರುತ್ತಾರೆ. ಅವರಿಗೆ ಲೌಕಿಕ ಸುಖ ಬೇಕು, ಕೇವಲ ಆಧ್ಯಾತ್ಮ ಬೇಡ. ವೇದಾಂತ ಅವರಿಗೆ ಹಿಡಿಸುವುದಿಲ್ಲ. ವೇದನೆಯಲ್ಲಿಯೇ ಅವರು ಸುಖವನ್ನು ಅರಸುತ್ತಾರೆ. ಅದೆ ಷ್ಟೇ ದುಃಖದಲ್ಲಿ ಮುಳುಗಿದರೂ ಅವರು ಸುಖದ ನಿರೀಕ್ಷೆಯನ್ನು ಬಿಡಲಾರರು. ಜನರು ಆಧ್ಯಾತ್ಮವನ್ನು ಅವಲಂಬಿಸಿ ನಡೆದರೆ ಆಳುವ ದೊರೆಗಳು ಬಹುಪಾಲು ನಿಶ್ಚಿಂತೆಯಿಂದ ಇರಬಹುದು. ಆದರೆ..\"","brand":"Dr. Lakshmana Kounte","offers":[{"title":"Default Title","offer_id":44370189975811,"sku":"HB00004376","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AmoghaVarsha.jpg?v=1767882165"},{"product_id":"veera-sindhura-lakshmana-historical-novel-koundinya-kannada-book","title":"ವೀರ ಸಿಂಧೂರ ಲಕ್ಷ್ಮಣ","description":"ಫೈಜ್ ಅವರು ಕತೆ ಬರೆಯುವುದಿಲ್ಲ; ಅದನ್ನು ಸುಮ್ಮನೆ ಹರಿಯ ಬಿಡುತ್ತಾರೆ. ನದಿ ತನ್ನ ಜಾಡನ್ನು ತಾನು ಹಿಡಿದು ಹೊರಡುವಂತೆ ಕಥೆ ತನ್ನ ದಾರಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಡುತ್ತದೆ. ಕಥೆಗಾರ ಫೈಜ್ ಹೊರಗಿನಿಂದ ಅದನ್ನು ನೋಡುತ್ತಾ ನಿಲ್ಲುತ್ತಾರೆ. ಹರಿವ ಆ ನದಿಯಲ್ಲಿ ಮಣ್ಣಿನ ಸೊಗಡಿದೆ. ಬಡವರ ನಾಲ್ಕು ಹನಿ ಕಣ್ಣೀರಿದೆ. ನೋವಿದೆ. ದಡವು ನದಿಯನ್ನು ಸಮಾಧಾನಿಸುವಂತೆ ಕಥೆಗಾರ ಫೈಜ್ ನೋವಿಗೆ ಮಿಡಿಯುತ್ತಾರೆ. ನೋವಿಗೆ ಮಿಡಿಯದ ಕಥೆಯನ್ನು ಯಾಕಾದರೂ ಬರೆಯಬೇಕು? ಎಂಬುದು ಅವರ ಧೋರಣೆ. ಅವರೆಂದೂ ಬದುಕು ಮತ್ತು ಕಥೆ ಈ ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಅದು ನನಗಿಷ್ಟ.\u003cbr\u003e\u003cbr\u003eಇಲ್ಲಿನ ಕಥೆಗಳು ಮಧ್ಯಾಹ್ನ ಬಿಸಿಲಿನಂತೆ ಶುರುವಾಗುತ್ತವೆ. ಮುಗಿಯುವ ಹೊತ್ತಿಗೆ ನಿಮ್ಮ ಎದೆಯಲ್ಲಿ ಮೋಡ ಕಟ್ಟುತ್ತದೆ. ಕಥೆ ಮುಗಿಸಿ ಎದ್ದು ಹೊರಟ ನಿಮ್ಮೊಳಗೊಂದು ಮಳೆ ಸುರಿಯುತ್ತದೆ. ಕಥೆ ಓದಿದವ ಹದವಾಗುತ್ತಾನೆ. ಹದವಾದ ಎದೆಯಲ್ಲಿ ಒಂದು ಮಾನವೀಯ ಸಸಿ ಗರಿಬಿಚ್ಚಲಿ ಎಂಬ ಕಾಳಜಿ ಈ ಕಥೆಗಾರನದು.\u003cbr\u003e\u003cbr\u003eಇವರ ಕಥೆಗಳು ತಣ್ಣನೆಯ ಇಬ್ಬನಿಯ ಬಗ್ಗೆ ವ್ಯರ್ಥವಾಗಿ ಚರ್ಚಿಸುತ್ತಾ ಕೂರುವುದಿಲ್ಲ. ಮಧ್ಯಾಹ್ನದ ಸುಡು ಬಿಸಿಲಿನ ನೋವಿಗೆ ತಡಕಾಡುತ್ತವೆ. ಒಂದು ನೆರಳಿನಂಥಹ ಮದ್ದಿಗಾಗಿ ತಡಕಾಡುತ್ತವೆ.\u003cbr\u003e\u003cbr\u003eಕಥೆಗಳಲ್ಲಿ ಅಗ್ನಿ ಪ್ರಾಮಾಣಿಕತೆ ಕಾಣಿಸುತ್ತದೆ. ಕಣ್ಣಿಗೊಡೆದು ಸುಮ್ಮನೆ ಮೋಡಿ ಮಾಡುವ ತಂತ್ರಗಾರಿಕೆ ಅವರದಲ್ಲ. ಇಲ್ಲಿ ಅಧಿಕ ಪ್ರಸಂಗವಿಲ್ಲ. ಮೊದಲ ಬಾರಿ ನಗರಕ್ಕೆ ಬರುವ ಹಳ್ಳಿಯ ಹೈದನ ಮುಗ್ಧತೆಯಿದೆ. ಇವು ಅಸಲಿ ಜವಾರಿ ಕಥೆಗಳು, ನೆಲದ ಕಥೆಗಳು. ಇಲ್ಲಿನ ಕಥೆಗಳು ಖಂಡಿತ ನಿಮಗೆ ಮೋಸಮಾಡುವುದಿಲ್ಲ.\u003cbr\u003e\u003cbr\u003e-ಸದಾಶಿವ ಸೊರಟೂರು\u003cbr\u003eಕವಿ, ಹೊನ್ನಾಳಿ","brand":"Koundinya","offers":[{"title":"Default Title","offer_id":44370235719939,"sku":"HB00004377","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_4_015bf054-4f76-49b0-b430-0af119b040d0.jpg?v=1699190414"},{"product_id":"nadiyondu-kadala-hudukutta-collection-of-stories-santhebennuru-phaijnatraj-kannada-book","title":"ನದಿಯೊಂದು ಕಡಲ ಹುಡುಕುತ್ತಾ","description":"ಫೈಜ್ ಅವರು ಕತೆ ಬರೆಯುವುದಿಲ್ಲ; ಅದನ್ನು ಸುಮ್ಮನೆ ಹರಿಯ ಬಿಡುತ್ತಾರೆ. ನದಿ ತನ್ನ ಜಾಡನ್ನು ತಾನು ಹಿಡಿದು ಹೊರಡುವಂತೆ ಕಥೆ ತನ್ನ ದಾರಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಡುತ್ತದೆ. ಕಥೆಗಾರ ಫೈಜ್ ಹೊರಗಿನಿಂದ ಅದನ್ನು ನೋಡುತ್ತಾ ನಿಲ್ಲುತ್ತಾರೆ. ಹರಿವ ಆ ನದಿಯಲ್ಲಿ ಮಣ್ಣಿನ ಸೊಗಡಿದೆ. ಬಡವರ ನಾಲ್ಕು ಹನಿ ಕಣ್ಣೀರಿದೆ. ನೋವಿದೆ. ದಡವು ನದಿಯನ್ನು ಸಮಾಧಾನಿಸುವಂತೆ ಕಥೆಗಾರ ಫೈಜ್ ನೋವಿಗೆ ಮಿಡಿಯುತ್ತಾರೆ. ನೋವಿಗೆ ಮಿಡಿಯದ ಕಥೆಯನ್ನು ಯಾಕಾದರೂ ಬರೆಯಬೇಕು? ಎಂಬುದು ಅವರ ಧೋರಣೆ. ಅವರೆಂದೂ ಬದುಕು ಮತ್ತು ಕಥೆ ಈ ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಅದು ನನಗಿಷ್ಟ.\u003cbr\u003e\u003cbr\u003eಇಲ್ಲಿನ ಕಥೆಗಳು ಮಧ್ಯಾಹ್ನ ಬಿಸಿಲಿನಂತೆ ಶುರುವಾಗುತ್ತವೆ. ಮುಗಿಯುವ ಹೊತ್ತಿಗೆ ನಿಮ್ಮ ಎದೆಯಲ್ಲಿ ಮೋಡ ಕಟ್ಟುತ್ತದೆ. ಕಥೆ ಮುಗಿಸಿ ಎದ್ದು ಹೊರಟ ನಿಮ್ಮೊಳಗೊಂದು ಮಳೆ ಸುರಿಯುತ್ತದೆ. ಕಥೆ ಓದಿದವ ಹದವಾಗುತ್ತಾನೆ. ಹದವಾದ ಎದೆಯಲ್ಲಿ ಒಂದು ಮಾನವೀಯ ಸಸಿ ಗರಿಬಿಚ್ಚಲಿ ಎಂಬ ಕಾಳಜಿ ಈ ಕಥೆಗಾರನದು.\u003cbr\u003e\u003cbr\u003eಇವರ ಕಥೆಗಳು ತಣ್ಣನೆಯ ಇಬ್ಬನಿಯ ಬಗ್ಗೆ ವ್ಯರ್ಥವಾಗಿ ಚರ್ಚಿಸುತ್ತಾ ಕೂರುವುದಿಲ್ಲ. ಮಧ್ಯಾಹ್ನದ ಸುಡು ಬಿಸಿಲಿನ ನೋವಿಗೆ ತಡಕಾಡುತ್ತವೆ. ಒಂದು ನೆರಳಿನಂಥಹ ಮದ್ದಿಗಾಗಿ ತಡಕಾಡುತ್ತವೆ.\u003cbr\u003e\u003cbr\u003eಕಥೆಗಳಲ್ಲಿ ಅಗ್ನಿ ಪ್ರಾಮಾಣಿಕತೆ ಕಾಣಿಸುತ್ತದೆ. ಕಣ್ಣಿಗೊಡೆದು ಸುಮ್ಮನೆ ಮೋಡಿ ಮಾಡುವ ತಂತ್ರಗಾರಿಕೆ ಅವರದಲ್ಲ. ಇಲ್ಲಿ ಅಧಿಕ ಪ್ರಸಂಗವಿಲ್ಲ. ಮೊದಲ ಬಾರಿ ನಗರಕ್ಕೆ ಬರುವ ಹಳ್ಳಿಯ ಹೈದನ ಮುಗ್ಧತೆಯಿದೆ. ಇವು ಅಸಲಿ ಜವಾರಿ ಕಥೆಗಳು, ನೆಲದ ಕಥೆಗಳು. ಇಲ್ಲಿನ ಕಥೆಗಳು ಖಂಡಿತ ನಿಮಗೆ ಮೋಸಮಾಡುವುದಿಲ್ಲ.\u003cbr\u003e\u003cbr\u003e-ಸದಾಶಿವ ಸೊರಟೂರು\u003cbr\u003eಕವಿ, ಹೊನ್ನಾಳಿ","brand":"Santhebennuru Phaijnatraj","offers":[{"title":"Default Title","offer_id":44370302107907,"sku":"HB00004378","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_5_892482c9-6f1d-4e46-94fb-bbee39047e12.jpg?v=1699191738"},{"product_id":"neeli-mattu-sebu-collection-of-stories-sudha-adukala-kannada-book","title":"ನೀಲಿ ಮತ್ತು ಸೇಬು","description":"ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ ಕುರಿತಾದ ಅವರ ಬದ್ಧತೆ ಮತ್ತು ಬದುಕನ್ನು ರೂಪಕಗಳ ಮೂಲಕ ಹುಡುಕಹೊರಟಿರುವ ಕವಿಯ ಆದರ್ಶ ಬೇರೆಬೇರೆಯಾಗುವುದೇ ಇಲ್ಲ. ಇವೆರಡನ್ನೂ ಪಾಕಮಾಡುತ್ತ ಥಟ್ಟನೆ ಓದುಗರನ್ನು ಹೊಸ ದರ್ಶನಕ್ಕೆ ಒಡ್ಡುವ ಅವರ ನಾಟಕೀಯ ಸಮಯದ ಜಾಣ್ಮೆ ನನಗೆ ಅತಿ ಪ್ರಿಯವಾದದ್ದು. ಅವರ ಸಾಮಾಜಿಕ ಪ್ರಜ್ಜೆ ಮತ್ತು ಕಳಕಳಿ ಅವರನ್ನು ಅನೇಕ ಸೂಕ್ಷ್ಮ ಮತ್ತು ಹೆಚ್ಚಾಗಿ ಕನ್ನಡ ಸಾಹಿತ್ಯ ಪ್ರಜ್ಞೆಯ ಆಚೆಗೇ ಉಳಿದ ಸ್ತ್ರೀ ತಲ್ಲಣಗಳ ಅನ್ವೇಷಣೆಗೆ ಹಚ್ಚುತ್ತವೆ. ಕೆಳ-ಮಧ್ಯಮ ವರ್ಗದ ಹೆಣ್ಣಿನ ಸುತ್ತ ಹೆಣದಿರುವ 'ಒಂದು ಶೌಚಾಲಯದ ಕಥೆ' ಇದಕ್ಕೆ ಉದಾಹರಣಿ, ಈ ಕಥಾ ಸಂಕಲನದಲ್ಲಿ ಯಾವುದೂ ಕೇವಲ ಪ್ರೇಮ ಕಥನಗಳಲ್ಲದಿದ್ದರೂ, ಅವರ ಕವಿತೆಗಳಲ್ಲಿ ಕಂಡುಬರುವ ಪ್ರೀತಿಯ ಕುರಿತಾದ ಅವರ ಅಗಾಧ ಅಚ್ಚರಿ ಇಲ್ಲ ಹಲವು ಸಾಮಾಜಿಕ ಮತ್ತು ರಾಜಕೀಯ ಗೊಂದಲಗಳಿಗೆ ಸೃಜನಶೀಲ ಉತ್ತರಗಳನ್ನು ಹುಡುಕುವ ಮಾರ್ಗವೂ ಆಗಿದೆ.\u003cbr\u003e\u003cbr\u003e-ಡಾ। ಶೀತಲಾ ,\u003cbr\u003eಪ್ರಾಧ್ಯಾಪಕರು, ಯಾರ್ಕ ಬಿ. ಬಿ. ಕೆನಡಾ","brand":"Sudha Adukala","offers":[{"title":"Default Title","offer_id":44374193373443,"sku":"HB00004379","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_6_a0e60601-4d21-4de3-b7ec-3b55e6193d1f.jpg?v=1699269284"},{"product_id":"hoovina-kolli-novel-abdul-rasheed-kannad-book","title":"ಹೂವಿನ ಕೊಲ್ಲಿ","description":"\u003cp\u003eಕನಸಿನ ತೀವ್ರತೆಯಿಂದ ಇರವನ್ನು ಗ್ರಹಿಸುವ ಮತ್ತು ಕಂಡಿದ್ದನ್ನು ಸಕಲ ಸದ್ದು, ಪರಿಮಳಗಳೊಂದಿಗೆ, ಅದರ ಮೂಕ ಜೀವಾಳವನ್ನು ಕಿಂಚಿತ್ತೂ ಘಾಸಿಗೊಳಿಸದಂತೆ, ಅದೃಶ್ಯದೊಂದಿಗೇ, ಚಲನ ಚಿತ್ರದಂತೆ ಕಟ್ಟಿಕೊಡುವ ಅಬ್ದುಲ್ ರಶೀದನ ಬರವಣಿಗೆಯ ಸೆಳೆತವೇ ವಿಭಿನ್ನ. ಇವನ ಮೊದಲ ಕಾದಂಬರಿ 'ಹೂವಿನ ಕೊಲ್ಲಿ'ಯಲ್ಲಿ ಕಣ್ಣಿಗೆ ಕಾಣುವುದೂ ಮತ್ತು ಮನಗಾಣುವುದೂ ಒಟ್ಟಿಗೇ ಆಗುವ ನಮೂನೆ ವಿಶಿಷ್ಟವಾಗಿದೆ.\u003cbr\u003e\u003cbr\u003eಮಲೆಯ ಮಡಿಲಲ್ಲ ಉಳಿಗಕ್ಕಾಗಿ ವಲಸೆ ಬಂದವರ ಈ ಕಥನದಲ್ಲಿ \"ಪಾಲವಾನದ ಗೆಲ್ಲುಗಳು ಒಂದಕ್ಕೊಂದು ಉಜ್ಜುವ ಸದ್ದು\" ಮತ್ತು ಮಾಡಿನ ಗಾಜಿನಿಂದ ಕೋಣೆಯಲ್ಲಿ ತುಂಬಿಕೊಳ್ಳುವ ಬೆಳದಿಂಗಳು, ಮಕ್ಕಳು ಉಸಿರಾಡುವ ಸದ್ದು\". ಬೇರೆಯಲ್ಲ, ಗೇರು ಬೀಜ ಸುಡುವ ಪರಿಮಳ' ಮತ್ತು ಹಾಜಿರಾಳ ಮುದ್ದು ಮುಖದಲ್ಲಿ ಬೆವರೊಡೆಯುವ ಪರಿಮಳ, ಬೇರೆಯಲ್ಲ, 'ಮೀನು ಹಿಡಿಯುವ ಮರಕಾಲ ಹೆಂಗಸು\" ಮತ್ತು \"ಸುಮ್ಮನೆ ಹಟ ಮಾಡಿಕೊಂಡು, ಅಲಂಕಾರ ಮಾಡಿಕೊಂಡು ಇರುವ ಜುಲೈಕಾ\", ಬೇರೆಯಲ್ಲ. ಎಲ್ಲಂದಲೋ ಬಂದು ಬಣ್ಣ ಬಣ್ಣದ ಕನ್ನಡಿಗಳಿಗೆ ಮುತ್ತಿಡುವ ಜೇನು ಹುಳುಗಳು\" ಮತ್ತು \"ಶಾಲೆಯ ಮೈದಾನದಲ್ಲಿ ತಿರುಗುತ್ತಿರುವ ಚಿತ್ರದಂತೆ ಒಬ್ಬನೇ ಸೈಕಲ್ ಹೊಡೆಯುವ ಹಾರೂನ್\", ಬೇರೆಯಲ್ಲ. ಎಲ್ಲವೂ ಅನನ್ಯ, ಅಭಿನ್ನ. ಪರಿಪೂರಕ.\u003c\/p\u003e\n\u003cp\u003eಪೊದೆಯೊಳಗಿನ ಹಕ್ಕಿಗಳಂತೆ, ತಮ್ಮದೇ ಪಾಡಿನ ನಿತ್ಯದ ಮಾತುಕತೆಯಲ್ಲಿದ್ದ ಜನ. ಯಾರೋ ಬಂದದ್ದೇ ಏಕ್ ದಂ ಮೌನ ತಾಳುವಂಥ, ಒಂದು ಬಗೆಯ ನೀರವ, ಈ ಕಥನದುದ್ದಕ್ಕೂ ಹೊಮ್ಮಿದೆ. ಆದರೂ ಎಲ್ಲವೂ ತಿಯುವಂತಿದೆ. \"ಜೀವಗಳು ಬರುತ್ತವೆ. ಹೋಗುತ್ತವೆ. ಅದಕ್ಕೆಲ್ಲ ಕಾರಣ ಹುಡುಕಲು ಹೋದರೆ ಹುಚ್ಚು ಹಿಡಿಯುತ್ತದೆ ಎನ್ನುವ ಉಸ್ಮಾನ್ ರೈಟರ್ ಮತ್ತು ಹೆಂಗಸರು ಮರ ಹತ್ತಿ ಗಂಡಸರು ಒಲೆ ಊದಿ ಎಲ್ಲ ತಲೆಕೆಳಗಾಗಿ ಪ್ರಳಯವಾಗುವುದು\"- ಎನ್ನುವ ಹಾಜಮ್ಮರ ನಡುವೆ ನಿಂತು \"ಹೂವಿನ ಕೊಲ್ಲಿ\"ಯ ಜೀವ, ದೂರದ ಚಡಾವು ಹತ್ತಿ ಬರುವ ಲಾರಿಯ ಸದ್ದು ಆಲಿಸುತ್ತ, ಗಾಳಿಗೆ ಅಲ್ಲಾಡುವ ಗೋಡೆಯಲ್ಲಿನ ಬೆಕ್ಕಿನ ಚಿತ್ರವನ್ನು ನೋಡುತ್ತದೆ.\u003cbr\u003e\u003cbr\u003eಒಲೆಯ ಬೆಳಕಿನ ಕಾವಿನಲ್ಲಿ ಹೊಳೆವ ಅಪಾರ ಮುಖಗಳ ಲೋಕ ಇದು. ಮಳೆಯಲ್ಲಿ ನೆರಳಿನಂತೆ ನಡೆವ ಲೋಕ. \"ಸೂಫಿ ಸಂತನ ಬಳಿ ಹೋಗಿ, ಕನಸಿನಲ್ಲಿ ಕಾಯಿಲೆ ಗುಣಪಡಿಸಿಕೊಂಡು ಬರುವ \" - ಪ್ರಸ್ತಾಪ ಒಂದು ಕಡೆ ಬರುತ್ತದೆ. ಈ ಕಾದಂಬರಿಯ ಓದಿಗೂ ಅದೊಂದು ರೂಪಕವಾದೀತು! ಇದಕ್ಕಾಗಿ ರಶೀದನನ್ನು ಅಭಿಮಾನದಿಂದ ಅಭಿನಂದಿಸುತ್ತೇನೆ.\u003cbr\u003e\u003cbr\u003e- ಜಯಂತ ಕಾಯ್ಕಿಣಿ\u003c\/p\u003e","brand":"Abdul Rasheed","offers":[{"title":"Default Title","offer_id":44374257729795,"sku":"HB00004380","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_7_8604da20-0259-4897-aaa4-8275ec8a6311.jpg?v=1699271358"},{"product_id":"kaage-meshtru-collections-of-stories-vikrama-hatvara-kannada-book","title":"ಕಾಗೆ ಮೇಷ್ಟ್ರು","description":"\u003cp\u003eಈ ಕ್ಷಣದ ವಾಸ್ತವದಲ್ಲಿ ಅಸ್ತಿತ್ವದಲ್ಲಿರದ ನಕ್ಷತ್ರದ ಬೆಳಕಿನಲ್ಲಿ ಸಾವಿನ ನಿಗೂಢತೆಯನ್ನು ಅರಿಯಲು ಹೊರಟಿರುವ ಕಾಗೆ ಮೇಷ್ಟ್ರು, ಬೆಳದಿಂಗಳ ಮಳೆಯಲ್ಲಿ ಬೆತ್ತಲಾಗಿ ದಾಟದಿದ್ದರೆ ಸುಟ್ಟುಹೋಗುವ ಎಚ್ಚರಿಕೆ ನೀಡುತ್ತ ಕಾಮದ ಹೊಳೆಯೇ ಆಗಿಬಿಡುವ ಕತ್ತಲ ಕೆರೆಯ ಚೆಲುವೆ, ಅಪರಿಚಿತರ ಮೇಲೆ ಜನ್ಮಾಂತರ ದ್ವೇಷ ಕಾರುತ್ತಿರುವವರ ನಡುವೆ ವಿಧಿಯ ಆಜ್ಞೆಯಂತೆ ನರಳುತ್ತಿರುವ ವಾಚ್ ಮನ್ ಮುನಿರಾಜು, ಮಗು ಹೆರುವ ನೋವು ಮತ್ತು ಹೊರುವ ತಾಯ್ತನದ ಸಂತೋಷವನ್ನು ಆಸೆ ಪಡುವ ಸರಿತಾ, ಸಿನೆಮಾ ಶೂಟಿಂಗಿನಲ್ಲಿ ತನಗಿಟ್ಟ ಬಣ್ಣದ ಹೆಸರಿನಲ್ಲಿ ತನ್ನ identity ಕಳೆದುಕೊಂಡ ಮಂದಾರ, ಎಲ್ಲರೂ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಅಸಂಗತ ಸಮುದಾಯದಲ್ಲಿ. ದೈನಿಕ ಜಗತ್ತಿನ ವಿಸ್ಮಯಗಳಿಗೆ ಸ್ಪಂದಿಸುವುದನ್ನೇ ಕಳೆದುಕೊಂಡ, ಅನುಕಂಪವನ್ನು ನಟಿಸುವ ವರಸೆಯನ್ನು ರೂಢಿಸಿಕೊಳ್ಳುತ್ತ ಕಾಲಯಾಪನೆ ಮಾಡುತ್ತಿರುವ ಟೊಳ್ಳು ಮನುಷ್ಯ ಸಮುದಾಯದ ನಡುವೆ - ಒಂಟಿಯಾಗಿರುವ ಜೀವಪ್ರೇಮಿಗಳು ಸಂಸಾರದ ಸುಖ, ದುಃಖದಲ್ಲಿ ತೊಡಗಿಕೊಂಡು ಮಾನವೀಯ ಸಾಧ್ಯತೆಗೆ ತೆರೆದುಕೊಳ್ಳುವಂತೆ ಒತ್ತಾಯಿಸುವುದೇ ಇಲ್ಲಿನ ಕಥೆಗಳ ಮುಖ್ಯ ತಾತ್ವಿಕ ಕಾಳಜಿಯಾಗಿದೆ. ಇಂಥ ಅಪೂರ್ವ ಸಂಭಾವ್ಯತೆಯನ್ನು ಕಥೆಗಾರನೊಬ್ಬನ ಕಾವ್ಯಾತ್ಮಕತೆ ಸಾಧಿಸಿದ್ದು ವಿಶೇಷವಾಗಿದೆ.\u003cbr\u003e\u003cbr\u003e- ಶ್ರೀಧರ ಬಳಗಾರ\u003c\/p\u003e","brand":"Vikrama Hatvara","offers":[{"title":"Default Title","offer_id":44383650906371,"sku":"HB00004382","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_f874f47c-5b16-449b-9e42-1849a5ece517.jpg?v=1699525739"},{"product_id":"chitra-vichitra-cinema-raveendra-vemshi-kannada-book","title":"ಚಿತ್ರ-ವಿಚಿತ್ರ","description":"\u003cp\u003eಸಿನಿಮಾ ಎನ್ನುವುದು ಕಲೆ, ಉದ್ಯಮ, ಮನರಂಜನೆ... ಇವೆಲ್ಲಕ್ಕಿಂತ ಮೀರಿದ ಒ೦ದು ತುಡಿತ ಎನ್ನಬಹುದು. ಕಥೆ ಹೇಳುವ, ಕೇಳುವ ತೋರಿಸುವ ಆ ಹುರುಪು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಹಾಗೆ ನೋಡಿದರೆ ನನಗೆ ನನ್ನ ಸಂಸ್ಕೃತಿ ಕಲಿಸಿದರಲ್ಲಿ ಸಿನಿಮಾದ ಪಾಲು ಇದೆ. ಒಂದು ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿಸುವ ತಾಕತ್ತು ಸಶಕ್ತವಾಗಿರುವ ಕ್ಷೇತ್ರವಿದು. ನನ್ನೆಲ್ಲ ವಿದ್ಯಾಭ್ಯಾಸ ಮುಗಿದ ಮೇಲೆ ನನ್ನ ಮುಂದಿದ್ದ ಪ್ರಶ್ನೆ? ಬದುಕುವುದಕ್ಕಾಗಿ ಕೆಲಸ ಮಾಡುವುದಾ..? ಅಥವಾ ಕನಸನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದಾ..?\u003cbr\u003e\u003cbr\u003eಅಂತಿಮ ಆಯ್ಕೆ ಸಿನಿಮಾವೇ ? ಇವತ್ತಿಗೂ ತೆರೆಯ ಮೇಲೆ ಕಥೆ ನಿರೂಪಿಸುವ ಸಂಭ್ರಮಕ್ಕೆ ಮಿಗಿಲಿಲ್ಲ ಎನಿಸುತ್ತದೆ. ಜಾಗತಿಕ, ಭಾರತೀಯ ಸಿನಿಮಾಗಳು ಕಲಿಸಿದ್ದು ಬಹಳ. ಸಿನಿಮಾ ನೋಡುತ್ತಾ ನೋಡುತ್ತಾ ನನ್ನನ್ನೇ ಮರೆತಿದ್ದೇನೆ. ನನ್ನ ಎಷ್ಟೋ ಮನಸ್ಸಿನ ಬೇಸರಗಳನ್ನು ಮರೆತಿದ್ದೇನೆ. ನಾನು ನೋಡಿ ಮೆಚ್ಚಿದ, ಖುಷಿ ಪಟ್ಟ, ಅಚ್ಚರಿಗೊಂಡ ಸಿನಿಮಾ ಬಗೆಗೆ, ಸಿನಿ ಓದುಗರಿಗೆ ತಿಳಿಸುವ ಪ್ರಯತ್ನವಿದು... ಆಯಾ ಬಗೆಗೆ ತಿಳಿಸುವ ಪ್ರಯತ್ನವಿದು...\u003cbr\u003e\u003cbr\u003eಸಮಸ್ಯೆ ಸಿನಿಮಾರಂಗಕ್ಕೆ, ಸಿನಿಮಾ ಕರ್ಮಿಗಳಿಗೆ ನನ್ನ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.\u003c\/p\u003e","brand":"Raveendra Vemshi","offers":[{"title":"Default Title","offer_id":44384221331715,"sku":"HB00004387","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/4_9.jpg?v=1699537950"},{"product_id":"hamsakshara-biography-jayaramachari-kannada-book","title":"ಹಂಸಾಕ್ಷರ","description":"\u003cp\u003eಎಲ್ಲರ ನಾಲಗೆ ಮೇಲೆ ನಲಿದವುಗಳು ಏಕಕಾಲಕ್ಕೆ ಜನಪ್ರಿಯವೂ ಹೌದು, ನಿರ್ಲಕ್ಷಿತವೂ ಹೌದು, ಜನಪದ ಗೀತೆಗಳು ಎಲ್ಲರ ನಾಲಗೆ ಮೇಲೆ ನಲಿದಮೇಲೂ ಕೆಲವೇ ಉಳಿದಿವೆ ಸಾವಿರಾರು ಅಳಿದಿವೆ. ಏಕಕಾಲಕ್ಕೆ ಜನಪ್ರಿಯ ಹಾಗೂ ನಿರ್ಲಕ್ಷಿತ ಗೀತೆಗಳಿಗೆ ಎರಡನೇ ಉದಾಹರಣೆ ಚಿತ್ರಗೀತೆಗಳು, ಕೇಳುಗನ ಕಿವಿ ಎದೆಗಳ ಜೊತೆ ಮಾತ್ರ ಇವುಗಳ ಸಹವಾಸ ಆದರೆ ಅವಕ್ಕೆಪಾಂಡಿತ್ಯವಲಯದಲ್ಲಿ ಮನ್ನಣೆಯೂ ಇಲ್ಲ ಗಂಭೀರ ಚರ್ಚೆಗೆ ಯೋಗ್ಯವೂ ಅಲ್ಲ, ಗ್ರಂಥಗಳ ಆಚೆ ಸದಾ ಇಂಥ ಹಾಡುಗಳ ವಾಸ, ಸದಾ ಗುನುಗುತ್ತಿದ್ದ ಅವೆಷ್ಟೋ ಹಾಡುಗಳು ಯಾವಾಗ ಅಸುನೀಗಿದವು ಅಂತ ಸಹ ಗೊತ್ತಾಗುವುದಿಲ್ಲ. ಕೆಲವೇ ಕೆಲವು ಅಮರ ಗೀತೆಗಳು ಆ ಹಾಡು ಹುಟ್ಟಿದ ಸಮಯದ ಟ್ರಿವಿಯಾ ರೂಪದಲ್ಲಿ ಪುಸ್ತಕ ರೂಪದಲ್ಲಿ ಉಳಿದಿವೆ.\u003cbr\u003e\u003cbr\u003eಇಂಥ ಸಂದರ್ಭದಲ್ಲಿ ಕನ್ನಡ ಚಿತ್ರಗೀತೆ ಜಗತ್ತಿನ ವರಕವಿ ಎಂದೇ ಹೇಳಬಹುದಾದ ಹಂಸಲೇಖ ಅವರ ಗೀತೆಗಳ ಮೇಲೆ ಒಂದು ಅವಲೋಕನ ಕೃತಿ ಹೊರಬರುತ್ತಿದೆ. ಹಂಸಲೇಖ ಗೀತೆಗಳ ಭಕ್ತರಾದ ಜಯರಾಮಚಾರಿ, ಹಂಸಲೇಖ ಅವರ ಹಲವಾರು ಜನಪ್ರಿಯ ಗೀತೆಗಳನ್ನು ಇಲ್ಲಿ ವಿಶ್ಲೇಷಿಸಿದ್ದಾರೆ, ಅಪರೂಪದ ಹಾಡುಗಳನ್ನು ಪರಿಚಯಿಸಿದ್ದಾರೆ, ಈವರೆಗೆ ನಮ್ಮ ಕಿವಿ ಮಾತ್ರ ಕೇಳಿರುವ ಆದರೆ ಬುದ್ಧಿ ತಿಳಿದಿರದ ಹಲವಾರು ಕವಿಸೂಕ್ಷ್ಮಗಳಿರುವ ಹಂಸಲೇಖ ಅವರ ಅತ್ಯುತ್ತಮ ಚಿತ್ರಸಾಹಿತ್ಯವನ್ನು ಹೆಕ್ಕಿ ಅದ್ಭುತ ವಿವರಣೆ,ಹೊಳಹುಗಳೊಂದಿಗೆ ಇಲ್ಲಿ ಪ್ರಸ್ತುತಪಡಿಸಿದ್ದಾರೆ.\u003cbr\u003e\u003cbr\u003e'ಒಂದು ನೆಲ್ಲುಚೆಲ್ಲಿದರೆ ರಾಶಿ ಮಾಡುವ ಇವಳದೇನೂ ಕರುಣೆ ಪ್ರೀತಿಯೋ' ಅಂತ ಬರೆದ ಹಂಸಲೇಖ ಅವರ ಕವಿತ್ವ, ಆಳವಾದ ದೇಸಿಪ್ರಜ್ಞೆ, ರಸಿಕಪ್ರಜ್ಞೆ, ನಾಡು, ನುಡಿಯ ಆಳ ಸತ್ವವನ್ನು ಅರಿಯಲು ಈ ಕೃತಿ, ಕಿಟಕಿ.\u003cbr\u003e\u003cbr\u003e-ವಿಕಾಸ್ ನೇಗಿಲೋಣಿ\u003c\/p\u003e\n\u003cp\u003e \u003c\/p\u003e\n\u003cp\u003e \u003c\/p\u003e\n\u003cp\u003e\u003cspan data-mce-fragment=\"1\"\u003eAuthor's Interview\u003c\/span\u003e\u003cspan\u003e: \u003ca href=\"https:\/\/youtu.be\/jC36e04LCVo\"\u003ehttps:\/\/youtu.be\/jC36e04LCVo\u003c\/a\u003e\u003c\/span\u003e\u003c\/p\u003e","brand":"Jayaramachari","offers":[{"title":"Default Title","offer_id":44386529542403,"sku":"HB00004389","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_22c7b64f-0f06-4936-b02d-3eec85b24dd5.jpg?v=1699610397"},{"product_id":"kanasugala-shraadha-novel-uttam-kambale-dr-geetha-sunil-kashyap-kannada-book","title":"ಕನಸುಗಳ ಶ್ರಾದ್ಧ","description":"\u003cp\u003e'ಕನಸುಗಳ ಶ್ರಾದ್ಧ' -ಇದು ದಲಿತನೊಬ್ಬ ತನ್ನ ಜನರ ಉದ್ಧಾರಕ್ಕಾಗಿ ಕಂಡ ಕನಸುಗಳು ಹಾಗೂ ಅದರ ಪರಿಣಾಮವನ್ನು ಬಿಂಬಿಸುವ ಕಾದಂಬರಿ.ದಲಿತರು ಹೊರಗಿನವರಗಿಂತ ತಮ್ಮ ಆತಂರಿಕ ಒಳಜಗಳಗಳಿಂದಾಗಿ ಹಾಗೂ ಅಹಂಕಾರದಿಂದಾಗಿ ತುಳಿತಕ್ಕೆ ಒಳಪಟ್ಟಿದ್ದಾರೆಂಬ ಸತ್ಯವನ್ನು ಓದುಗರ ಮುಂದೆ ಈಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. 'ಉತ್ತಮ್ ಕಾಂಬಳೆ' ಮರಾಠಿ ದಲಿತ ಸಾಹಿತ್ಯದ ಮುಂಚೂಣಿಯಲ್ಲಿರುವ ಪ್ರಮುಖ ಲೇಖಕರು.ತಾವು ಕ೦ಡ,ಅನುಭವಿಸಿದ ವಾಸ್ತವಿಕ ತಳಹದಿಯ ಮೇಲೆ ಇವರು ಮರಾಠಿಯಲ್ಲಿ ಸಾಹಿತ್ಯ ರಚಿಸಿರುವ ಕಾರಣ ಅದು ಓದುಗರ ಹೃದಯಕ್ಕೆ ನಾಟಿ, ಮನವನ್ನು ಕಲುಕುತ್ತದೆ. ಈ ಕಾದಂಬರಿ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ. ಉತ್ತಮ್ ಕಾಂಬಳೆ ಅವರ ಅನೇಕ ಕೃತಿಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಡಾ.ಗೀತಾ ಕಶ್ಯಪ್ ಮಾಡುತ್ತ ಬಂದಿದ್ದಾರೆ. ಅವರು ತಮ್ಮ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದ್ದರಿಂದಾಗಿ ಇದು ಕನ್ನಡದಲ್ಲೇ ರಚಿಸಿರುವ ಸಾಹಿತ್ಯದಂತೆ ಭಾಸವಾಗುತ್ತದೆ.ಓದುಗರಿಗೆ ಇದು ರುಚಿಸಿದರೆ ಮೂಲ ಲೇಖಕರ ಹಾಗೂ ಅನುವಾದಕರ ಪ್ರಯತ್ನ ಹಾಗೂ ಆಶೇಯ ಸಾಕಾರಗೊಂಡಂತೆ.\u003c\/p\u003e","brand":"Marathi : Uttam Kambale, Kannada : Dr. Geetha Sunil Kahyap","offers":[{"title":"Default Title","offer_id":44386552774915,"sku":"HB00004390","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_ea111579-efb6-434e-9e1e-571997cd2250.jpg?v=1699611809"},{"product_id":"janamitra-arasu-play-d-s-chowgale-kannada-book","title":"ಜನಮಿತ್ರ ಅರಸು","description":"ಡಾ. ಡಿ. ಎಸ್‌. ಚೌಗಲೆಯವರ 'ಜನಮಿತ್ರ ಅರಸು' ನಾಟಕವು 'ಜೀತಪದ್ಧತಿ ಮುಕ್ತಿ, ತಲೆ ಮೇಲೆ ಮಲ ಹೊರುವ ಅನಿಷ್ಟ ಪದ್ಧತಿ, ಉಳುವವನೇ ಹೊಲದೊಡೆಯ ಮತ್ತು ಜನತಾ ವಸತಿ ಗೃಹ' ಈ ನಾಲ್ಕು ಮೂಲಭೂತ ವಿಷಯಗಳ ಕುರಿತು ಚರ್ಚಿಸುತ್ತದೆ. ನಾಗರಿಕತೆಯನ್ನೇ ನಾಚಿಸುವ ಅನಾಗರಿಕ ಸಂಸ್ಕೃತಿಯ ಅತ್ಯಂತ ಹೀನ ಪದ್ಧತಿ ತಲೆ ಮೇಲೆ ಮಲ ಹೊರುವ ಪದ್ಧತಿ'. ಇದು ಜಾತಿ ಮತ ಭೇದದಿಂದ ಉದ್ಭವಿಸಿದ ಒಂದು ಅನಿಷ್ಟ ಪದ್ಧತಿ. ಹಿಂದು ಧರ್ಮ ಒಂದು ಜನಾಂಗವನ್ನೇ ನಾಲ್ಕು ಚಾತುರ್ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರವರ್ಗದವರ ಸೇವೆ ಸಲ್ಲಿಸಲು, ಮೇಲ್ವರ್ಗದವರ ಹೇಸಿಗೆ ಸ್ವಚ್ಛಗೊಳಿಸುವುದು ದೇವ ನಿಯಮದ ಧರ್ಮವೆಂದು ನಂಬಿಸಿ ಗುಲಾಮರನ್ನಾಗಿಸಿತು. ವರ್ಣ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ ಇಲ್ಲಿನ ಮೂಲನಿವಾಸಿಗಳನ್ನ ಊಳಿಗಮಾನ್ಯ ವ್ಯವಸ್ಥೆ ಕೃಷಿಕ ಕೂಲಿಕಾರ್ಮಿಕರನ್ನಾಗಿ ಉತ್ಪಾದನೆ ಮಾಡುವ ಕಾಯಕದಲ್ಲಿ ತೊಡಗಿಸಿ ಹಸಿವಿನ ವಂಚನೆಯ ಸುಳಿಗೆ ಬಹುಸಂಖ್ಯಾತರನ್ನು ನೂಕಿತು. ಇಂದು ಸಹ ಜಾಗತಿಕ ಅಂಕಿ ಸಂಖ್ಯೆಯಲ್ಲಿ ಹಸಿವಿನಿಂದ ನರಳುವ ಯಾದಿಯಲ್ಲಿ ಭಾರತ ನೂರ ಆರನೇ ಸ್ಥಾನದಲ್ಲಿದೆ ಎಂಬ ಸುದ್ದಿ ಗೌರವ ತರುವ ಸಂಗತಿಯಾಗಿಲ್ಲ. ಈ ರೂಪಕವು ನಮ್ಮಲ್ಲಿ ಸಂಸ್ಕೃತಿ, ಪರ೦ಪರೆಯ ಹೆಸರಲ್ಲಿ ಜೀವಂತವಾಗಿರುವ ಅನಿಷ್ಟ ಪದ್ಧತಿಗಳ ಸಾರ್ವತ್ರಿಕವಾಗಿ ಇಂದಿಗೂ ಸತ್ಯವಾಗಿರುವುದನ್ನು ಗಮನಿಸುವಂತೆ ಪ್ರೇರೇಪಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಿ. ಬಸವಲಿಂಗಯ್ಯ (ಮುನ್ನುಡಿಯಿಂದ)","brand":"D. S. Chowgale","offers":[{"title":"Default Title","offer_id":44386559885571,"sku":"HB00004391","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_5d24052c-34df-4a42-9874-f88ab5771253.jpg?v=1699612988"},{"product_id":"cricketaayana","title":"ಕ್ರಿಕೆಟಾಯಣ","description":"ಕ್ರಿಕೆಟ್ ಅಂದರೆ ಕೇವಲ ರನ್ನು ವಿಕೆಟ್ಟು ಬಾಲ್‌ಗಳ ಆಟವಲ್ಲ, ಅಲ್ಲಿ ದೊಡ್ಡದೊಂದು ಇತಿಹಾಸ, ದಾಖಲೆ, ಕೌತುಕ, ಸ್ವಾರಸ್ಯ, ರೋಚಕ ಕಥನ, ವಿವಾದ, ಆಕ್ರೋಶ, ಸೇಡು, ಜೋಶ್, ತಮಾಷೆ, ಪರಿಶ್ರಮ... ಎಲ್ಲವೂ ಇದೆ. ಇದಕ್ಕೂ ಮಿಗಿಲಾದ ಕ್ರಿಕೆಟ್ ಕುಟುಂಬವೊಂದಿದೆ. ಇವೆಲ್ಲದರ ಹದವಾದ ಒಟ್ಟು ಹೂರಣವೇ “ಕ್ರಿಕೆಟಾಯಣ', ಭಾರತದ ಆತಿಥ್ಯದ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹವಾ ಬೀಸುತ್ತಿರುವ ಈ ಹೊತ್ತಿನಲ್ಲಿ, ಕಪಿಲ್‌ದೇವ್ ಬಳಗ ಭಾರತಕ್ಕೆ ಪ್ರಥಮ ವಿಶ್ವಕಪ್ ಕಿರೀಟವನ್ನು ತೊಡಿಸಿ 40 ವರ್ಷ ತುಂಬಿದ ಈ ಸುಂದರ ಹೊತ್ತಿನಲ್ಲಿ, ಕ್ರೀಡಾಪ್ರೀತಿ ಮತ್ತು ಕ್ರೀಡಾಸ್ಫೂರ್ತಿ ನಮ್ಮೆಲ್ಲರ ಮೂಲಮಂತ್ರವಾಗಿರಲಿ ಎಂಬ ಹಾರೈಕೆಗಳೊಂದಿಗೆ ಈ ಪುಸ್ತಕವನ್ನು ನಿಮ್ಮ ಕೈಗಿಡುತ್ತಿದ್ದೇವೆ. ಸ್ವೀಕರಿಸಿ.\u003cbr\u003e\u003cbr\u003e-ಎಚ್. ಪ್ರೇಮಾನಂದ ಕಾಮತ್","brand":"H. Premananda Kamat","offers":[{"title":"Default Title","offer_id":44386565390595,"sku":"HB00004392","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_4_cc58331d-04b6-4199-a97f-3e8f36370615.jpg?v=1699614083"},{"product_id":"dada-serada-donigalu-stories-beluru-ramamurthy-kannada-book","title":"ದಡ ಸೇರದ ದೋಣಿಗಳು","description":"ಕಥೆ ಅಂದರೆ ಕಟ್ಟು ಕಥೆಯಲ್ಲ, ಒಂದು ಅಳತೆಗೆ ಕಟ್ಟಿದ ಕಥೆ, ಸಹಜವಾಗಿ ಹೆಣೆದಾಗ ಅದು ಕಣ್ಣಿಗೆ ಕಟ್ಟುವಂಥಾ ಕಥೆಯಾಗುತ್ತದೆ. ಕಥೆಗಳ ಸ್ವರೂಪವೇ ಹಾಗಿರಬೇಕು. ಓದುತ್ತಾ ಇದ್ದ ಹಾಗೆ ಕಥೆಯ ಪಾತ್ರಗಳು ಕಣ್ಣು ಮುಂದೆ ಬಂದು ನಿಲ್ಲಬೇಕು. ಪಾತ್ರಗಳು ಆಡುವ ಮಾತುಗಳು ಯಾವುದೂ ನಾಟಕೀಯವಾಗಿರಬಾರದು. ಇಂಥಾ ಸಂದರ್ಭಗಳಲ್ಲಿ ನಾವು ಮಾತಾಡಿದರೂ ಹಾಗೇ ಮಾತಾಡುತ್ತೀವಿ ಎನ್ನುವಂತಿರಬೇಕು. ಇನ್ನು ಕಥೆಯಲ್ಲಿ ಬರುವ ಘಟನೆಗಳೂ ನೈಜತೆಗೆ ದೂರವಾಗಿರಬಾರದು. ಹೌದು ಇದು ಎಲ್ಲರ ಬದುಕಲ್ಲೂ ನಡೆಯುವಂಥದು, ಎಲ್ಲ ಪಾತ್ರಗಳೂ ಹೀಗೇ ನಡೆದುಕೊಳ್ಳುವಂಥವು ಎನಿಸಬೇಕು. ಆಗ ಮಾತ್ರ ಕಥೆ ಬರೆದವನಿಗೂ ಕಥೆ ಓದುವವನಿಗೂ ಒಂದು ಸಹೃದಯ ಸಂಪರ್ಕ ಬರುತ್ತದೆ. ಅಲ್ಲಿಗೆ ಕಥೆಯೂ ಗೆಲ್ಲುತ್ತದೆ, ಕಥೆಗಾರನೂ ಗೆಲ್ಲುತ್ತಾನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸ್ತುತ ನಿಮ್ಮ ಕೈಯಲ್ಲಿರುವ ದಡ ಸೇರದ ದೋಣಿಗಳು ಕಥೆಯಲ್ಲಿ ಇರುವ ಎಲ್ಲಾ ಇಪ್ಪತ್ತೈದು ಕಥೆಗಳ ಸ್ವರೂಪವೂ ಹೀಗೇ ಇದೆ. ಈ ಎಲ್ಲಾ ಕಥೆಗಳನ್ನು ಓದುವಾಗ ಲೇಖಕರ ಸುಮಾರು 50 ವರ್ಷಕ್ಕೂ ಹೆಚ್ಚಿನ ಸಾಹಿತ್ಯ ವ್ಯವಸಾಯದ ಅನುಭವದ ಸಾರ ಓದುಗರಿಗೆ ಅರಿವಾಗುತ್ತದೆ. ಪಾತ್ರಗಳು ಯಾವುದೂ ಸೃಷ್ಟಿಯಾಗಿಲ್ಲ, ಬದಲಿಗೆ ಅವುಗಳೇ ಬಂದು ಬೆಸೆದುಕೊಂಡಿವೆ. ಸೃಷ್ಟಿಕರ್ತ ಬ್ರಹ್ಮ ಒಬ್ಬನೇ ಆದರೂ ಅವನು ಸೃಷ್ಟಿಸಿರುವ ಪಾತ್ರಗಳೂ, ಅವುಗಳ ಸ್ವಭಾವಗಳೂ, ಮಾತುಗಳೂ, ನಡವಳಿಕೆಗಳೂ ಹೇಗೆ ಬೇರೆಬೇರೆ ಯಾಗಿರುವುವೋ ಹಾಗೆ ಕಥೆಗಾರ ಒಬ್ಬನೇ ಆದರೂ ಅವನು ತನ್ನ ಕಥೆಯಲ್ಲಿ ಸೃಷ್ಟಿಸಿರುವ ಪಾತ್ರಗಳು ಅವನ ಮೂಗಿನ ನೇರಕ್ಕೆ ನಡೆದುಕೊಂಡರೂ, ಮಾತಾಡಿದರೂ ಎಲ್ಲವೂ ಸಹಜವಾಗಿರುತ್ತವೆ. ಯಾವುದೂ ನಾಟಕೀಯ ಎನಿಸುವುದಿಲ್ಲ, ಬಲವಂತ ಎನಿಸುವುದಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಒಟ್ಟಿನಲ್ಲಿ ಕಥೆ ಅಂದರೆ ಅದು ಬರೀ ಕಥೆಯಲ್ಲ, ಅದು ನಮ್ಮ ಬದುಕಿನ ಅನೇಕ ಘಟನೆಗಳಿಗೆ ಹಿಡಿದ ಕನ್ನಡಿ ಎನ್ನುವಂತೆ ಈ ಸಂಗ್ರಹದ ಕಥೆಗಳೆಲ್ಲಾ ನಿಮ್ಮನ್ನು ಸೆರೆಹಿಡಿದು ಓದಿಸಿ ಕೊಳ್ಳುವುದರಲ್ಲಿ ಅನುಮಾನವಿಲ್ಲ. ನಿಮಗೆ ಈ ಎಲ್ಲಾ ಕಥೆಗಳ ಓದಿನ ಸುಖ ದೊರೆಯಲಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬೇಲೂರು ರಾಮಮೂರ್ತಿ","brand":"Beluru Ramamurthy","offers":[{"title":"Default Title","offer_id":44551103283459,"sku":"HB00004528","price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_27ee4cf5-1732-4684-929c-b0d8ad963db3.jpg?v=1704539152"},{"product_id":"malenaada-ajji-stories-shabaraj-kannada-book","title":"ಮಲೆನಾಡ ಅಜ್ಜಿ","description":"ಏನನ್ನೂ ಅಪೇಕ್ಷಿಸಿದ, ಯಾರನ್ನೂ ಉಪೇಕ್ಷಿಸದ ಈಕೆ ಅಪ್ಸರೆ. ಅಮರರಿಗೆ ಕಾಲದ ಹಂಗಿಲ್ಲ. ಹಾಗಾಗಿ ಭೂತ ಭವಿಷ್ಯತ್ತಿನ ಎಲ್ಲೆಗಳಿಲ್ಲ, ನಿರಂತರ ವರ್ತಮಾನ. ಕಾದದ್ದು ಊರ ಚೌಡಿಯಂತೆ, ಮುಟ್ಟಿದ್ದೆಲ್ಲಾ ಅಮೃತ, ಬೇಯಿಸಿದ ಅನ್ನ, ಕಾಯಿಸಿದ ಹಾಲು ಎಲ್ಲಾ ಹದ. ಕುದಿಯುತ್ತೆ; ಉಕ್ಕಲ್ಲ, ಕತ್ತಲ ಅಟ್ಟದ ಜಾಡಿಯ ಮಿಡಿ ಉಪ್ಪಿನಕಾಯಿಯೂ ವರ್ಷಗಳಾದರೂ ಕೆಡೊಲ್ಲ. ಉರಿಗಾರದ ಬಾಣಂತಿ ಲೇಹ್ಯ ಕೇವಲ ಅವಶ್ಯಕ ಕಾವನ್ನಷ್ಟೇ ಕೊಡುತ್ತೆ. ಆಷ್ಟ್ಯಾಕೆ ಸುತ್ತಲಿನ ನಿರ್ಲಿಪ್ತ ಗಾಳಿ ಕೂಡಾ ಅ೦ಟಿಕೊ೦ಡವರಿಗೆ ಉಸಿರಾಗುತ್ತೆ. ಓದಿ ಮುಗಿಸಿದೆ, ಮೈ ಮನ ತು೦ಬಿದೆ. ಭಾವೋದ್ವೇಗದಲ್ಲಿ ಅಲ್ಲಲ್ಲಿ ಉಕ್ಕಿದರೂ ಎಲ್ಲೆ ಮೀರಿ ಎಲ್ಲೂ ಚೆಲ್ಲಿಲ್ಲ. ಹಾಲು ಕುದ್ದು ನೀರು ಆವಿಯಾಗಿ ಅನುಭವದ ಸಾರ ಹೆಪ್ಪುಗಟ್ಟಿದಾಗ ಖಾಲಿತನ ಕಾಡಿದ್ದುಂಟು ಹೌದು ಆದರೆ ಅದನ್ನು ಮೀರಿದ ಪರಿಮಳ ಆವರಿಸಿದ್ದು ಸುಳ್ಳಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಸೇತುರಾಂ","brand":"Shobha Raj","offers":[{"title":"Default Title","offer_id":44551328497923,"sku":"HB00004529","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_8f5c3789-0782-4dae-bab0-08c44f527f20.jpg?v=1704541483"},{"product_id":"malli-malligi-novel-m-l-prasanna-kannada-book","title":"ಮಲ್ಲಿ ಮಲ್ಲಿಗಿ...","description":"ಆ ತಂಪಿರುಳಿನಲ್ಲಿ.. ಸುರಿವ ಬೆಳದಿಂಗಳ ಮಳೆಯಲ್ಲಿ... ಬಿಜಾಪುರದ ಬಾರಾಕಮಾನಿನ ಅಂಗಳದಲ್ಲಿ... ದನಿಯೆತ್ತಿ ಹಾಡಿಕೊಳ್ಳುತ್ತಾ ಮೈಮರೆತು ಇರುಳೆಲ್ಲ ಕಳೆಯಲು ಅವನು ಬಯಸಿದ್ದ. ಆದರೆ ಅವನಾಸೆಗೆ ಅಡ್ಡಿಯಾಗಿ ಬಂದಳು ಅವಳು...!\u003cbr data-mce-fragment=\"1\"\u003e\u003cbr data-mce-fragment=\"1\"\u003eಆ ಲೋಕನಿಂದಿತೆಯ ಎದೆಯಲ್ಲಿ ಅದೆಷ್ಟು ಪ್ರೀತಿ ಕನಸುಗಳ ಸಂಚಯವಿತ್ತು...! ಅದೆಷ್ಟು ನೋವುಗಳ ನಡುವೆ ಪುಟಿದೇಳುವ ಬದುಕಿನುತ್ಸಾಹವಿತ್ತು... ಆತ ಅವಳೆದುರು ಮನಸು ತೆರೆದುಕೊಂಡ... ಆಕೆ ಅವನೆದುರು ಹೊಸದೊಂದು ಲೋಕ ತೆರೆದಿಟ್ಟಳು...!\u003cbr data-mce-fragment=\"1\"\u003e\u003cbr data-mce-fragment=\"1\"\u003eಕಥೆಗಳಿಗೆ ಕಿವಿಯಾಗುವ ಅವನ ಹೃದಯಕ್ಕೆ... ಆಕೆ ದನಿಯಾದಳು..! ಇಬ್ಬರೂ ಕೂಡಿ... ನಕ್ಕರು ಅತ್ತರು... ಮತ್ತೆ ಮತ್ತೆ ನಕ್ಕರು. ಆ ರಾತ್ರಿ ಎಂದೂ ಮರೆಯಲಾಗದ ಅನುಭವಕ್ಕೆ ರಹದಾರಿಯಾಗಬೇಕೆಂದು ಬಯಸಿದರು... ಕೊನೆಗೊಮ್ಮಋಣಸಂದಾಯವಾಗಬೇಕಾದ ಕಾಲವೂ ಬಂದಿತ್ತು...!\u003cbr data-mce-fragment=\"1\"\u003e\u003cbr data-mce-fragment=\"1\"\u003eಆಗೊಂದು ನಿರ್ಧಾರ...\u003cbr data-mce-fragment=\"1\"\u003e\u003cbr data-mce-fragment=\"1\"\u003eಮತ್ತೊಂದು ಹೊಸಲೋಕವನ್ನೇ ಅಲ್ಲಿ ಅನಾವರಣಗೊಳಿಸಿತ್ತು..! ಅಲ್ಲಿಯವರೆಗೂ ಆತ ಕಂಡು ಕೇಳಿಲ್ಲದ.... ಕೋಟಿಗೊಬ್ಬರಿಗೂ ಸಿಗದ... ಅತ್ಯಂತ ಅಪರೂಪದ... ಒಂದು ಹೃದಯಂಗಮವಾದ... ಅನುಭವಕ್ಕೆ ಆತ ಸಾಕ್ಷಿಯಾಗಲಿದ್ದ... ಆದರೆ ಅದಕ್ಕಾಗಿ... ಅದಕ್ಕಾಗಿ ಆತ ತೆರಬೇಕಾದ ಬೆಲೆಯ ಬೆಲೆ ಅವನಿಗೆ ತಿಳಿದಿರಲಿಲ್ಲ !\u003cbr data-mce-fragment=\"1\"\u003e\u003cbr data-mce-fragment=\"1\"\u003eಮಲ್ಲಿ ಮಲ್ಲಿಗಿ...\u003cbr data-mce-fragment=\"1\"\u003e\u003cbr data-mce-fragment=\"1\"\u003eಹೃದಯಂಗಮವಾದ, ಅತ್ಯಂತ ಭಾವುಕವಾದ, ಅದ್ಭುತ ವ್ಯಕ್ತಿತ್ವಗಳ ರಸಪಾಕದಲಿ ಸೃಷ್ಟಿಯಾದ... ಮತ್ತೆ ಮತ್ತೆ ಹನಿವ ಮಳೆಯಾಗಿ ಕಾಡುವ... ಮನಮೋಹಕ ಕಥೆ !\u003cbr data-mce-fragment=\"1\"\u003e\u003cbr data-mce-fragment=\"1\"\u003eಭಾವನೆಗಳ ಮಳೆಯಲ್ಲಿ ಮಿಂದೇಳುವ, ನೋಯುವ, ನಗುವ, ಕಣ್ಣೀರಾಗುವ ಸುಖ... ನಿಮ್ಮದಾಗಲಿ !\u003cbr data-mce-fragment=\"1\"\u003e\u003cbr data-mce-fragment=\"1\"\u003e-ಎಂ ಎಲ್ ಪ್ರಸನ್ನ","brand":"M. L. Prasanna","offers":[{"title":"Default Title","offer_id":44551452819715,"sku":"HB00004530","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_c84121f2-a564-4f0a-8b50-5986630aa80d.jpg?v=1704542345"},{"product_id":"nishite-thriller-novel-preetini-dhananjaya-kannada-book","title":"ನಿಷಿತೆ","description":"\u003cp\u003eಪ್ರೀತಿನಿ ಧನಂಜಯ ಅವರ “ನಿಷಿತೆ”. ಈ ಕಾದಂಬರಿಯು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಪ್ರೀತಿನಿ ಅವರು ತಮ್ಮ ಮೊದಲ ಕೃತಿಯಲ್ಲೇ ಇಂಥದ್ದೊಂದು ಪ್ರಯೋಗಕ್ಕೆ ಅಣಿಯಾಗಿದ್ದು ಮೆಚ್ಚಬೇಕಾದ ಸಂಗತಿ. ದೆವ್ವ, ಭೂತ, ವಾಸ್ತವ, ಕಲ್ಪನೆ ಮತ್ತು ವೈಜ್ಞಾನಿಕ ವಿಷಯಗಳ ಸುತ್ತಲೇ ಸುತ್ತುವ ಈ ಕಾದಂಬರಿಯ ಮೂಲಕ ನಿಜಕ್ಕೂ ದೆವ್ವ ಭೂತಗಳಿಗೆ ಅಸ್ತಿತ್ವ ಇದೆಯೋ? ಇಲ್ಲವೋ? ಎನ್ನುವ ವೈಚಾರಿಕತೆಯ ಬೆಳಕು ಚೆಲ್ಲಲು ಲೇಖಕಿ ಪ್ರಯತ್ನಿಸಿದ್ದಾರೆ. ಎಷ್ಟೊಂದು ಸಿನೆಮಾಗಳನ್ನು ನೋಡಿದರೂ ದೆವ್ವ ಭೂತಗಳ ಬಗೆಗಿನ ಕುತೂಹಲ ತಣಿಯದವರಿಗೆ ಈ ಕೃತಿ ರಸಾನುಭವ ನೀಡಬಲ್ಲುದು ಮತ್ತು ಒಂದೊಳ್ಳೆ ಎಂಟರ್‌ಟ್ರೈನರ್ ಆಗಬಲ್ಲುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ನಿಮ್ಮ\u003cbr data-mce-fragment=\"1\"\u003eವೀರಕಪುತ್ರ ಶ್ರೀನಿವಾಸ\u003cbr data-mce-fragment=\"1\"\u003eಪ್ರಕಾಶಕ, ವೀರಲೋಕ ಬುಕ್ಸ್\u003c\/p\u003e","brand":"Preetini Dhananjaya","offers":[{"title":"Default Title","offer_id":44551729938691,"sku":"HB00004531","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_e74ecfcb-3ddb-4220-b6c1-b53bd433ceb3.jpg?v=1704543724"},{"product_id":"arohana-novel-vivekananda-kamat-kannada-book","title":"ಆರೋಹಣ","description":"ತಂದೆ ನಿವೃತ್ತ ಆದರ್ಶ ಶಿಕ್ಷಕ. ನೈತಿಕ ಮೌಲ್ಯಗಳಿಗೆ ಸದಾ ಬೆಲೆ ಕೊಟ್ಟು ಬದುಕುತ್ತಾ ಬಂದವನು. ಬದುಕಿನುದ್ದಕ್ಕೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಿ ಕೊಡುವಲ್ಲಿ, ಶಿಕ್ಷಣದ ಜೊತೆ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತರಿಸಿ, ಸದಾ ಅವರ ಶ್ರೇಯಸ್ಸಿಗಾಗಿ ಬದುಕಿದವನು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈತನ ಮಗ, ತಂದೆಯ ಹಾದಿಯಲ್ಲೇ ನಡೆದವನು. ಮುಂದೆ ಅದೇ ಶಿಕ್ಷಣವನ್ನು ವಾಣಿಜೀಕರಿಸಿ ಬಿಕರಿಗಿಡುತ್ತಾನೆ. ಅವನಿಗೆ ಶಿಕ್ಷಣ ವ್ಯಾಪಾರ. ವಿದ್ಯಾರ್ಥಿಗಳು ಗ್ರಾಹಕರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಲ್ಲಿ ಮೌಲ್ಯಗಳ ಮುಂದೆ ವ್ಯಾಪಾರ, ಸ್ವಾರ್ಥ, ಆಮಿಷ, ಪ್ರತಿಷ್ಠೆ ಎಲ್ಲವೂ ಮುಖಾಮುಖಿಯಾಗಿದೆ. ಪುತ್ರ ಮೋಹದ ಮುಂದೆ ನೈತಿಕತೆ ಸೋಲುವುದೋ? ಗೆಲ್ಲುವುದೋ? ಎನ್ನುವುದೇ ಕಥೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಹತ್ವಕಾಂಕ್ಷೆಗಳ ರೆಕ್ಕೆ ಕಟ್ಟಿಕೊಂಡು ಕಲುಷಿತ ಗಾಳಿಯೊಳಗೆ ಇಳಿದ ಬಳಿಕ ಅದು ನಿರಾಯಸವಾಗಿ ನಮ್ಮನ್ನು ಆವರಿಸಿ ಬಿಡುತ್ತದೆ. ಇಲ್ಲಿ ಮಗನಿಗಾದದ್ದು ಇದೇ.. ಇದು ಗುರು ಶಿಷ್ಯನ, ತಂದೆ ಮಗನ, ಎರಡು ತಲೆಮಾರಿನ ನಡುವೆ ಬದಲಾದ ಮನಸ್ಥಿತಿಗಳ ಅಂತರದ ಕಥೆ. ಒಳ ಲೋಕದ ಆರೋಹಣದ ಕಥೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ವಿವೇಕಾನಂದ ಕಾಮತ್","brand":"Vivekananda Kamat","offers":[{"title":"Default Title","offer_id":44552275951875,"sku":"HB00004532","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_db7969e9-0efd-4ce7-8fbe-21a1d37eb545.jpg?v=1704548646"},{"product_id":"ಗೃಹನ್ಯಾಯ","title":"ಗೃಹನ್ಯಾಯ","description":"ಇಲ್ಲಿರುವ ಎಲ್ಲ ಕತೆಗಳು ತೀರಾ ಈಚೆಗೆ ಬರೆದಂಥವು. ಒಂದೆರಡು ಕತೆಗಳು ತೀರಾ ನಿನ್ನೆ ಮೊನ್ನೆ ನಡೆದಂಥವು. ಒಂದು ಕತೆಯಂತೂ ಇನ್ನೂ ನಡೆಯುತ್ತಿದೆ.. ಕತೆಗಳನ್ನು ಕತೆಗಾರನಾದವನು ಯಾವಾಗ ಬರೆಯಬೇಕು ಅಥವಾ ಕತೆ ಯಾವಾಗ ಬರೆಸಿಕೊಳ್ಳುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಕತೆ ಬರೆಯುವವನಿಗೂ ಉತ್ತರ ಗೊತ್ತಿರುವುದಿಲ್ಲ!\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರತಿಯೊಂದು ಕತೆಗೂ ತನ್ನದೇ ಆದ ಹದ ಮತ್ತು ಧ್ವನಿ ಇರುತ್ತದೆ. ಕತೆಯೇನೋ ಕಾಣಿಸಿಕೊಳ್ಳುತ್ತದೆ, ಸಿಕ್ಕಿಬಿಡುತ್ತದೆ. ಆದರೆ, ಕತೆಯ ಹದ ಮತ್ತು ಧ್ವನಿ ಬರೆಯುವವನ ಕೈ ಹತ್ತುವುದು ಅಷ್ಟು ಸುಲಭವಲ್ಲ. ಕಾಯಬೇಕು, ಕಾಯಬಹುದು. ಆದರೆ ಹದ-ಧ್ವನಿಯೆಲ್ಲ ಕೈಗೂಡಿತೆ? ಎಂದು ತಿಳಿಯಬೇಕಾದರೆ, ಲೇಖನಿ ಹಿಡಿದು ಬರೆಯಲೇಬೇಕು. ಬರೆದೇ ಪರೀಕ್ಷೆ ಪಾಸು ಮಾಡಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಲ್ಲಿಯ ಕಥಾ ಜಗತ್ತಿನ ಹಿಂದೆ ಇರುವ ಇನ್ನೊಂದು ಜಗತ್ತು ತನಗೆ ಸಿಕ್ಕಿದೆಯೆನಿಸಿದಾಗ ಬರವಣಿಗೆ ತಾನೇ ತಾನಾಗಿ ರೂಪುಗೊಳ್ಳುತ್ತದೆ..\u003cbr data-mce-fragment=\"1\"\u003e\u003cbr data-mce-fragment=\"1\"\u003e- ಕೆ. ಸತ್ಯನಾರಾಯಣ","brand":"K. Satyanarayana","offers":[{"title":"Default Title","offer_id":44552372748547,"sku":"HB00004533","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_5fa38fdf-dbf8-4ba6-bf33-eea69b4b3679.jpg?v=1704549258"},{"product_id":"e-hottina-kategalu-stories-sudarshana-channangihalli-veerakaputra-shreenivasa-kannada-book","title":"ಈ ಹೊತ್ತಿನ ಕಥೆಗಳು","description":"ನಮ್ಮ ಕಾಲದ ತಲ್ಲಣಗಳಿಗೆ ಮತ್ತು ಸ್ಥಿತ್ಯಂತರಗಳಿಗೆ ಮಾತು ಕೊಡಲಿಕ್ಕೆ ಕಥೆ ಹೇಳಿಮಾಡಿಸಿದ ಪ್ರಕಾರ. ಇದರ ಸಾಧ್ಯತೆಗಳನ್ನು ಕಾಲದಿಂದ ಕಾಲಕ್ಕೆ ಎಲ್ಲ ಕಥೆಗಾರರೂ ಹುಡುಕುತ್ತಲೇ ಬಂದಿದ್ದಾರೆ. ಕಥೆ ಬರೆಯುವ ಜರೂರತ್ತು ಏನಿದೆ ಎನ್ನುವುದನ್ನು ಪುನರ್ ಸ್ಥಾಪಿಸುತ್ತಲೂ ಇದ್ದಾರೆ - ಇದು ಬರಿಯ ಒಳಗಿನ ತಳಮಳವಲ್ಲ ಒಂದು ಸಾಮಾಜಿಕ ಜವಾಬ್ದಾರಿ ಎನ್ನುವಂತೆ.\u003cbr\u003e\u003cbr\u003eಸಾಮಾಜಿಕ ಜಾಲತಾಣಗಳು ಬರೆಯುವ ತೀವ್ರತೆಯನ್ನು ಹೆಚ್ಚಿಸುತ್ತಿರುವ ಹಾಗೆಯೇ ಬರವಣಿಗೆಯಲ್ಲಿ ಕಾವು ಕೂರುವ ತಾಳ್ಮೆಯನ್ನು ಕಳೆಯುತ್ತಿವೆ. ತಕ್ಷಣದ ಪ್ರತಿಕ್ರಿಯೆಗಳಿಗೆ ಮನಸೋತಾಗ ಆಳಕ್ಕಿಳಿವ, ಸಾಂದ್ರವಾಗುವ ಕಥನಗಳು ಹುಟ್ಟುವುದು ಕಷ್ಟವಾಗುತ್ತದೆ. ಇಂಥದ್ದರ ನಡುವೆ ಕಥೆಗಾರರು ತಮಗೆ ಬೇಕಾದ ಅವಕಾಶವನ್ನು ಅಲ್ಲಲ್ಲಿ ಹುಡುಕುತ್ತಾ ತಮ್ಮದನ್ನಾಗಿಸಿಕೊಳ್ಳುವತ್ತ ತುಡಿಯುತ್ತಲೇ ಇದ್ದಾರೆ.\u003cbr\u003e\u003cbr\u003eಕಥನ ಕಾರಣಗಳು ಅವಸ್ಥಾಂತರವನ್ನು ಹೊಂದುತ್ತಿರುವ ಇವತ್ತಿನ ಸಂಧಿಕಾಲ ನಮ್ಮ ಮಟ್ಟಿಗೆ ಪರೀಕ್ಷಾ ಸಮಯವೂ ಹೌದು. ಇಂಥಾ ಹೊತ್ತಲ್ಲಿ ನಿಜವಾದ ಕಥೆಗಾರನಿಗೆ ಒಂದಿಷ್ಟು ಒತ್ತಾಸೆಗಳು ಬೇಕಾಗುತ್ತವೆ. ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ತನ್ನೊಳಗಿನ ಕಥೆಗಾರನನ್ನು ಕಾಪಿಟ್ಟುಕೊಳ್ಳುವ ಜರೂರು ಇರುತ್ತದೆ. ಇಂಥಾ ಪ್ರಕ್ರಿಯೆಗೆ ಸಾಂಸ್ಕೃತಿಕ ಜವಾಬ್ದಾರಿ ಎನ್ನುವಂತೆ ವೀರಲೋಕ ಮತ್ತು ವಿಜಯ ಕರ್ನಾಟಕ ನಡೆಸುತ್ತಿರುವ ಕಥಾಸ್ಪರ್ಧೆ ವರ್ತಿಸುತ್ತಿದೆ ಎನ್ನುವುದು ಮಹತ್ವದ ಸಂಗತಿ.\u003cbr\u003e\u003cbr\u003eಕಥನದ ರೋಚಕತೆಯಲ್ಲಿ ನಮ್ಮನ್ನು ಮಂತ್ರಮುಗ್ಧಗೊಳಿಸುವ ಕಥೆಗಾರರು ಇದ್ದಾರೆ ಎನ್ನುವುದನ್ನು ಈ ಸ್ಪರ್ಧೆಯಲ್ಲಿ ಬಂದ ಅನೇಕ ಕಥೆಗಳು ನಿರೂಪಿಸುತ್ತಿವೆ. ನಮ್ಮ ಭವಿಷ್ಯಕ್ಕೆ ಯಾವ ಕುಂದೂ ಇಲ್ಲ, ಆತಂಕವೂ ಸಹಾ ಎನ್ನುವುದನ್ನು ಈ ಪಯಣ ಪ್ರಮಾಣೀಕರಿಸಿದೆ. ಅಂಥಾ ಕಥೆಗಳು ಮನಸ್ಸಿಗೆ ಮುದಕೊಟ್ಟಿವೆ, ನೋವುಗಳಿಗೆ ಮಾತಾಗಿವೆ, ಒಳಗಿನ ತಲ್ಲಣಗಳಿಗೆ ಧ್ವನಿಯಾಗಿವೆ. ಈ ಪ್ರಯತ್ನ ಓದುಗರಿಗೆ ತಲುಪುತ್ತಿರುವುದು, ಪುಸ್ತಕವಾಗಿ ಪ್ರಕಟಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಕಥನದ ಜೊತೆಗೆ ಜಗತ್ತಿನ ಒಳಿತನ್ನು ಕನಿಸೋಣ- ಭರವಸೆಯಾಗಿ ಅದು ನಮ್ಮೊಂದಿಗೆ ಉಳಿಯುತ್ತದೆ.\u003cbr\u003e\u003cbr\u003e-ಪಿ. ಚಂದ್ರಿಕಾ\u003cbr\u003eತೀರ್ಪುಗಾರರ ಪರವಾಗಿ","brand":"Sudarshana Channangihalli, Veerakaputra Shreenivasa","offers":[{"title":"Default Title","offer_id":44675676471555,"sku":"HB00004622","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/8ae9c29ee7caa3883ecb8cd32bc62da1.jpg?v=1706953988"},{"product_id":"hindina-nildaana-essays-shubhashree-bhat-kannada-book","title":"ಹಿಂದಿನ ನಿಲ್ದಾಣ","description":"ಕರಾವಳಿಯ ಪುಟ್ಟ ಊರಿಗೆ ಮಾತ್ರ ಲಗತ್ತಾಗುವ ಈ ಬಿಡಿಬಿಡಿ ನೋಟಗಳು, ಜೀವಗಳು ಈಗ ಅಲ್ಲಿಯೂ ಅಪರೂಪವಾಗುತ್ತಿರುವ ಈ ಕಾಲದಲ್ಲಿ ಈ ನೆನಪಿನ ಹೆಣಿಗೆಗಳು `ಮುಂದೊಮ್ಮೆ ಹೊಸಕಾಲದ ಹೊಸಪೀಳಿಗೆಯ ಕುತೂಹಲದ ಚಳಿಗೆ ಬೆಚ್ಚನೆಯ ಹೊದಿಕೆಯಾಗಿ ಒದಗಬಹುದು. ಕಥೆಗಾತಿಯಾಗಬೇಕೆನ್ನುವ ಹಂಬಲದ ಶುಭಶ್ರೀಯ ಅನುಭವದ ಬುತ್ತಿಯಲ್ಲಿ ಸಾಕಷ್ಟು ಕಥಾಬೀಜಗಳಿವೆ. ಭಾಷೆಯನ್ನು ಇನ್ನಷ್ಟು ಚೆನ್ನಾಗಿ ಮತ್ತು ಈಗಿನ ಕಾಲಮಾನಕ್ಕೆ ತಕ್ಕಂತೆ ಹದಗೊಳಿಸಿದ ಭಿತ್ತಿಯಲ್ಲಿ ಭಾವಸಂಯಮದಿಂದ ಬರೆದರೆ ಕನ್ನಡಕ್ಕೆ ಭರವಸೆಯ ಕಥೆಗಾತಿ ಸಿಗಬಹುದು. ಕೆಲಸಗಿತ್ತಿ, ಛಲಗಾತಿ, ಮತ್ತು ಆರ್ದ ಮನಸ್ಸಿನ ಈ ಪುಟ್ಟಮ್ಮ ಕನ್ನಡ ಸಾಹಿತ್ಯದ ವೇದಿಕೆಯಲ್ಲಿ ಮುಂದೆ ತಕ್ಕ ತಯಾರಿಯಲ್ಲಿ ಬಂದು ಭರ್ಜರಿ ಪ್ರದರ್ಶನ ನೀಡಬೇಕು ಎಂಬ ಹಾರೈಕೆ ನನ್ನದು.\u003cbr\u003e\u003cbr\u003e-ಸಿಂಧೂ ರಾವ್","brand":"Shubhashree Bhat","offers":[{"title":"Default Title","offer_id":44696141791491,"sku":"HB00004623","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-02-08at10.59.49_2.jpg?v=1707370894"},{"product_id":"himalayada-narabhakshakagalu-adventures-dr-t-s-vivekananda-kannada-book","title":"ಹಿಮಾಲಯದ ನರಭಕ್ಷಕಗಳು","description":"\u003cp\u003e...ಬೇಟೆಯನ್ನು ಒಂದು ಕಾಯಕ ಪ್ರಜ್ಞೆಯಲ್ಲಿ ಬಾಳಿದ ಕಾರ್ಬೆಟ್ ನ ಅರಣ್ಯ ಪ್ರೀತಿ ಇರುವೆಂಭತ್ತು ಕೋಟಿ ಜೀವರಾಶಿಗಳನ್ನೂ ಅವುಗಳ ಬದುಕುವ ಹಕ್ಕನ್ನೂ ಮಾನ್ಯ ಮಾಡುವ ಗುಣಗೌರವದಿಂದ ಕೂಡಿದ್ದು....\u003cbr\u003e\u003cbr\u003eಪ್ರತಿಯೊಂದು ನರಭಕ್ಷಕ ಹುಲಿಯನ್ನು ಬೇಟೆಯಾಡಿದಾಗಲೂ ಆದ ಅನುಭವ ವಿವರಗಳನ್ನು ಕಟ್ಟಿಕೊಡುವಾಗ ಅವರು ವಿವರಿಸುವ ಕಾಡಿನ ಬಗೆ ವಿನ್ಯಾಸ ಅವರ ನೆನಪಿನ ತೀಕ್ಷ್ಣತೆಗೆ ಗ್ರಹಿಕೆಯ ಸೂಕ್ಷ್ಮತೆಗೆ ಕನ್ನಡಿ ಹಿಡಿದಂತಿದೆ. ಮೃತ್ಯು ಎದುರಿಗೇ ನಿಂತಾಗಲೂ ಧೃತಿಗೆಡದ ಅವರ ಆತ್ಮವಿಶ್ವಾಸದ ನಿಲುಮೆ ಅನನ್ಯವಾದುದು. ಇದೆಲ್ಲವನ್ನೂ ಅವರ ಬರಹ ತನ್ನ ಎದೆಯಲ್ಲಿ ತುಂಬಿಕೊಂಡಿದೆ. ಯಾವ ಜೀವ ವಿಜ್ಞಾನವೂ ತಿಳಿಸಲಾರದ ಎಷ್ಟೋ ಸೂಕ್ಷ್ಮಾತಿ ಸೂಕ್ಷ್ಮ ವಿಷಯಜ್ಞಾನವನ್ನು ಅನುಭವ ಮಾತ್ರದಿಂದ ಪಡೆದವರಾದ ಕಾರ್ಬೆಟ್ ಒಂದು ಅದ್ಭುತ, ಬೇಟೆಯನ್ನು ನಿಸರ್ಗಧರ್ಮಕ್ಕೆ ಎರವಾಗದ ನಡೆಯಲ್ಲಿ ಜೀವ ಸಂರಕ್ಷಕ ವಿಧಿಯಂತೆ ಪರಿಪಾಲಿಸಿದ ಮಹಾನುಭಾವ ಕಾರ್ಬೆಟ್.\u003cbr\u003e\u003cbr\u003e...ಇಂಥ ಬೇಟೆಯ ಸಂತನ ಅನುಭವ ಕಥನವನ್ನು ಓದಿದ್ದೇ ನನ್ನ ಅಕ್ಷರಜ್ಞಾನದ ಅದೃಷ್ಟಭಾಗ್ಯವೆಂದು ನನ್ನ ತಿಳಿವು ಹೇಳುತ್ತಿದೆ.\u003cbr\u003eಹಿಮಾಲಯದ ನರಭಕ್ಷಕಗಳು\u003cbr\u003e...ಗೆಳೆಯ ವಿವೇಕಾನಂದನಿಗೆ ಆತ್ಮೀಯ ಕೃತಜ್ಞತೆಗಳು, ಕಾರಣ ಇಷ್ಟು ವಿಸ್ತಾರವಾದ ಈ ಬರಹವನ್ನು ಧ್ಯಾನಸ್ಥಿತಿಯ ಬದ್ಧತೆಯಲ್ಲಿ ಒಳಕ್ಕೆ ತಗೆದುಕೊಂಡು ಅದನ್ನು ಕನ್ನಡೀಕರಿಸಿದ್ದಕ್ಕೆ. ಇದನ್ನು ಕೇವಲ ಅನುವಾದ ಎಂದು ಹೇಳಿದರೆ ಅಪಚಾರವಾಗುತ್ತದೆ. ಕನ್ನಡ ಭಾಷೆಯ ಜಾಯಮಾನಕ್ಕೆ ಕಿಂಚಿತ್ತೂ ಊನವಾಗದ ಪ್ರಜ್ಞೆಯಲ್ಲಿ ಕಾರ್ಬೆಟ್‌ನ ಅನುಭವವನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿರುವ ಈ ಕಾರ್ಯ ಗುರುತರವಾದ ಹೊಣೆಗಾರಿಕೆಯಿಂದ ಮಾಡಿದ ಫಲವೇ ಸರಿ. ಈ ಜೀವಲೋಕದ ಬಗೆಗೆ ಕಾರ್ಬೆಟ್ ಪ್ರಜ್ಞೆಯನ್ನು ಬೆಳೆಸಿಕೊಂಡ ಮನಸ್ಸು ಮಾತ್ರ ಇಂಥ ಸಾಹಸಕ್ಕೆ ಶ್ರದ್ದೆ ಗೌರವಗಳಿಂದ ತೊಡಗುತ್ತದೆ.\u003cbr\u003e\u003cbr\u003e(ಮುನ್ನುಡಿಯಿಂದ)\u003c\/p\u003e","brand":"Dr. T. S. Vivekananda","offers":[{"title":"Default Title","offer_id":44707002581251,"sku":"HB00004629","price":675.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_777dc858-4487-4b63-85b8-9f2c4c44bc4f.jpg?v=1707832354"},{"product_id":"vyagrahatyeya-nigudahgalu-adventures-dr-t-s-vivekanada-kannada-book","title":"ವ್ಯಾಘ್ರಹತ್ಯೆಯ ನಿಗೂಢಗಳು","description":"ಡಾ. ಟಿಸ್ವಿ ಪರಿಸರವನ್ನು ಕುರಿತು ತಮ್ಮ ಅಧ್ಯಯನಗಳಿಂದಾಗಿ ಕನ್ನಡ ಸಂವೇದನಾಶೀಲ ಮನಸ್ಸುಗಳಿಗೆ ಪರಿಚಿತರು. ಬಹುತೇಕರ ಹಾಗೆ ಪರಿಸರ ಅಧ್ಯಯನವೆಂದರೆ ಜೀವವೈವಿಧ್ಯ ಕುರಿತ ವಿಸ್ಮಯಕಾರಿಯಾದ ಶುಪ್ಕ ಮಾಹಿತಿಗಳನ್ನು ಒದಗಿಸುವುದು ಎನ್ನುವ ಕ್ರಮ ಇವರದ್ದಲ್ಲ, ಬದಲಾಗಿ ಇದು ಸಾಮಾಜಿಕ, ಧಾರ್ಮಿಕ, ಆರ್ಥಿಕ, ನೈತಿಕತೆಗಳ ಸಂಕಥನವೆಂದು ಇವರು ಪರಿಭಾವಿಸುವುದರಿಂದಾಗಿ ಇವರ ಪರಿಸರ ಅಧ್ಯಯನ ಜೀವಪರ ನೆಲೆಗಳ ಹುಡುಕಾಟದ ವೇದಿಕೆಯಾಗಿ ರೂಪಗೊಂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪಶ್ಚಿಮದ ಚಿಂತನೆಗಳ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ, ಹಣದ ಒತ್ತಾಸೆಗಳಿಂದ ಪ್ರೇರಿತವಾದ ಪರಿಸರವಾದ ಮತ್ತು ಧೋರಣೆಗಳು ಜೀವಸಂಕುಲದ ಭವಿಷ್ಯಕ್ಕೆ ಭಾಷ್ಯ ಬರೆಯುತ್ತಿರುವ ತಣ್ಣನೆಯ ಕ್ರೌರ್ಯದ ಭೀಭತ್ಸತೆಯನ್ನು ಇವರು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಧ್ಯಯನದ ಶಿಸ್ತೂಂದು ಶೋಕಿಯಾದಾಗ ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಳಿಂದ ದೂರ ಸರಿದು ಮೌಡ್ಯದ ಪೋಷಣೆಯ ಕೇಂದ್ರವಾಗಿ ಮಾರುಕಟ್ಟೆ ಸಂಸ್ಕೃತಿಯ ವಿಸ್ತರಣೆಯಾಗುವುದು ಬದುಕಿನ ಮಹಾ ದುರಂತ. ಈ ಪ್ರವೃತ್ತಿ ತನ್ನೆಲ್ಲಾ ಪಾಪಗಳನ್ನು ಶತಮಾನಗಳಿಂದ ಪರಿಸರ ಸ್ನೇಹಿ ಸಂಸ್ಕೃತಿಯನ್ನು ಬದುಕುತ್ತಾ ಬಂದಿರುವ ಶಾಪಗ್ರಸ್ಥ ಸಮುದಾಯಗಳ ತಲೆಗಳಿಗೆ ಕಟ್ಟುವ ಯೋಜಿತ ವ್ಯವಸ್ಥೆಯಲ್ಲಿ ಸಫಲವಾಗುತ್ತಾ ಈ ಸಮುದಾಯಗಳು ವಿನಾಕಾರಣ ಯಾತನಾಮಯ ಬದುಕನ್ನು ನಡೆಸಬೇಕಾದ ಅನಿವಾರ್ಯವಾದ ಅಸಹಾಯಕ ಸ್ಥಿತಿಗೆ ದೂಡಲ್ಪಟ್ಟಿರುವುದನ್ನು ಮಾರ್ಮಿಕವಾಗಿ ನಿರೂಪಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅರಣ್ಯ ಪರಿಸರ ವಿಧ್ವಂಸದ ನೈಜತೆ ಅರಿಯದ ಲೋಕ ಮಹಾ ಮೈಮರೆವಿನಲ್ಲಿ, ಭ್ರಮೆಯಲ್ಲಿ ಕೊಲೆಗಡುಕರ ಸಂಮೋಹನಕ್ಕೆ ಒಳಗಾಗಿ, ನುಡಿವುದನ್ನು, ನಡೆವುದನ್ನು, ಭಾವಾವೇಶಕ್ಕೆ ಒಳಗಾಗುವುದನ್ನು ದಿಟ್ಟ ತಾಯ್ತನದಿಂದ ಎದುರಾಗುವ ಡಾ. ಟಿಎಸ್ವಿ ಪಟ್ಟಭದ್ರರ ಸಂಮ್ಮೋಹದಿಂದ ಲೋಕವನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕೊನೆಗೆ, ವಾಸ್ತವ ಸಂಗತಿಗಳಿಂದ ಎಚ್ಚರಗೊಂಡ ಜನರನ್ನು ಕುರಿತು \"ನ್ಯಾಯ ನಿರ್ಣಯವನ್ನು ನಿಮಗೇ ಬಿಟ್ಟುಬಿಡುತ್ತೇನೆ'' ಎನ್ನುವಲ್ಲಿಗೆ ಇವರ ಬರವಣಿಗೆಯಲ್ಲಿರುವ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಸಂಕೀರ್ಣ ಹೆಣಿಗೆಯ ಕಲಾತ್ಮಕತೆ ಓದುಗನ ಅಂತಃಸಾಕ್ಷಿಯನ್ನು ಕಲಕಿಬಿಡುತ್ತದೆ. ಘೋಷಿತ ಪರಿಸರವಾದದ ಎಲ್ಲೆಕಟ್ಟುಗಳನ್ನು ಒಡೆದು ಸತ್ಯದ ಸಾಕ್ಷಾತ್ಕಾರದೆಡೆಗೆ ನಮ್ಮನ್ನು ಕೊ೦ಡೊಯ್ಯುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ. ಬಿ. ಗಂಗಾಧರ","brand":"Dr. T. S. Vivekananda","offers":[{"title":"Default Title","offer_id":44707010773251,"sku":"HB00004630","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/d9d4148cc3d6ef8040a3b570a0df50d1.jpg?v=1707833067"},{"product_id":"parisara-nighantu-dictionary-dr-t-s-vivekananda-sheshagiri-jodidaar-kannada-book","title":"ಪರಿಸರ ನಿಘಂಟು","description":"...ಒಂದು ಶಾಸ್ತ್ರನಿರ್ಮಾಣಕ್ಕೆ ನೆರವಾಗಬಲ್ಲ ಪದಗಳ ಪ್ರಪಂಚವನ್ನೇ ಪರಿಚಯ ಮಾಡಿಕೊಡುವ 'ಪರಿಸರ ನಿಘಂಟು' ಇದೀಗ ಇಬ್ಬರು ತರುಣ ಮಿತ್ರರ ಸಾಹಸದ ಪರಿಣಾಮವಾಗಿ ಕನ್ನಡದಲ್ಲಿ ಮೊಟ್ಟಮೊದಲಿಗೆ ಸಿದ್ಧವಾಗಿದೆ.\u003cbr\u003e...ಇದು ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಕೇವಲ ಪಾರಿಭಾಷಿಕ ಪದಗಳ ನಿಘಂಟಲ್ಲ; ಒಟ್ಟಾರೆಯಾಗಿ\u003cbr\u003eಪರಿಸರ ವಿಜ್ಞಾನದ 'ಭಾಷಿಕ ನಿಘಂಟು', ಕನ್ನಡದಲ್ಲಿ ಪರಿಸರ ವಿಜ್ಞಾನವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ,\u003cbr\u003eಬರೆಯಬೇಕೆನ್ನುವವರಿಗೆ ಈ ಕುರಿತ ಜಾಗತಿಕ ತಿಳುವಳಿಕೆಯನ್ನು ಹಿಡಿದಿರಿಸಿದ ಭಾಷೆಯನ್ನು ಪರಿಚಯ ಮಾಡಿಕೊಡುವ ನಿಘಂಟು. ಆದ ಕಾರಣವೇ ಈ ನಿಘಂಟುಕಾರರ ಉದ್ದೇಶ, ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ಪದಕ್ಕೆ ಇರಬಹುದಾದ ಅರ್ಥವನ್ನು ಸೂಚಿಸಿ ವಿರಮಿಸುವಷ್ಟಕ್ಕೆ ಸೀಮಿತವಾಗಿಲ್ಲ..\u003cbr\u003e\u003cbr\u003e-ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ\u003cbr\u003e\u003cbr\u003eಡಾ. ಟಿ.ಎಸ್. ವಿವೇಕಾನಂದ..\u003cbr\u003eಪರಿಸರವಾದವನ್ನು ಸೃಜನಾತ್ಮಕವಾಗಿ ಪುನರಾವಲೋಕನಕ್ಕೊಳಪಡಿಸಿದ ಮಹತ್ವದ ಕೃತಿ 'ಭೂಮಿಗೀತೆ',\u003cbr\u003eತೇಜಸ್ವಿಯವರೊಂದಿಗೆ ಕೂಡಿ ಮಾಡಿದ 'ಕಿರಿಯರಿಗಾಗಿ ಪರಿಸರ', ಭಾರತದ ವೃಕ್ಷಗಳನ್ನು ಕುರಿತು ನಿರ್ಮಿಸಿದ 'ಹಸಿರ ಕೊಳಲು', ಹಂಪಿ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯನ್ನು ದೊರಕಿಸಿಕೊಟ್ಟ ಅಧ್ಯಯನದ ಪುಸ್ತಕರೂಪ 'ಪರಿಸರ ಕಥನ' ಇವರ ಮಹತ್ವದ ಕೃತಿಗಳಲ್ಲಿ ಕೆಲವು. ಹಲವಾರು ಬಹುಮಾನಿತ ಕಥೆ, ಪದ್ಯಗಳೊಂದಿಗೆ ಜಿಮ್ ಕಾರ್ಬೆಟ್‌ರ ಇಡೀ ಶಿಕಾರಿ ಕಥೆಗಳ ಕನ್ನಡ ರೂಪಾಂತರ ಇವರ ಹೆಸರಿನಲ್ಲಿದೆ. ಭೂಮಿಗೀತೆ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರ ಮಹತ್ವಾಕಾಂಕ್ಷೆಯ ಪ್ರಯತ್ನ 'ಪರಿಸರ ನಿಘಂಟು' ಭಾರತೀಯ ಭಾಷೆಗಳಲ್ಲಿಯೇ ಮೊದಲ ಪ್ರಯತ್ನ. ಇದು ಕನ್ನಡದ ಪರಿಸರ ಸಾಹಿತ್ಯದಲ್ಲಿಯೇ ಒಂದು ನಿರ್ಣಾಯಕ ಮೈಲುಗಲ್ಲು ಸಹ ಸಂಪಾದಕರಾದ ಶೇಷಗಿರಿ ಜೋಡಿದಾ‌ರ್ ಈ ಪ್ರಯತ್ನದ ಜೊತೆಗಾರ.\u003cbr\u003e\u003cbr\u003e-ಪ್ರೊ. ಕಿ.ರಂ. ನಾಗರಾಜ,","brand":"Dr. T. S. Vivekananda, Sheshagiri Jodidaar","offers":[{"title":"Default Title","offer_id":44711943635203,"sku":"HB00004632","price":625.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/c9087ccce24fc60a422c742bcb13176a.jpg?v=1707988669"},{"product_id":"preetiyenuva-maaye-stories-b-r-lakshmanarao-kannada-book","title":"ಪ್ರೀತಿಯೆನುವ ಮಾಯೆ","description":"ಕಾವ್ಯದಂತೆ, ಸಣ್ಣಕಥೆಯಲ್ಲೂ ಲಕ್ಷ್ಮಣರಾವ್ ನವ್ಯ, ಬಂಡಾಯಗಳ ಹಣೆಪಟ್ಟಿಗೆ ದಕ್ಕುವವರಲ್ಲ, ನವ್ಯದ ಅಂತರ್ಮುಖತೆ, ಅಂತಃಪ್ರಜ್ಞೆ, ಪ್ರಜ್ಞಾಪ್ರವಾಹತಂತ್ರ - ಇವೇ ಮೊದಲಾದವು ಇವರ ಕಥೆಗಳಲ್ಲಿ ಕಾಣುವುದಿಲ್ಲ. ಸಾಮಾಜಿಕ ಕಳಕಳಿಗಿಂತ ಭಿನ್ನ, ಅಂದರೆ ಸಾಮಾಜಿಕ ಸಮಸ್ಯೆಗಳಿಂದ ವಿಮುಖರು ಎಂದಲ್ಲ. ಸಾಮಾಜಿಕ ಸಮಸ್ಯೆಗಳು, ಕ್ರೂರ ವ್ಯವಸ್ಥೆ ಇವುಗಳ ಒತ್ತಡದಲ್ಲಿ, ದಮನಕಾರಿ ನಿಲುವುಗಳಲ್ಲಿ ಮನುಷ್ಯ ಸಂಬಂಧಗಳು, ಪ್ರೀತಿ ವಿಶ್ವಾಸಗಳು ಹೇಗೆ ನಲುಗಿಹೋಗುತ್ತಿವೆ ಎಂಬುದು ಲಕ್ಷ್ಮಣರಾವ್ ಅವರ ಸೃಜನಶೀಲ ಮನಸ್ಸಿನ ಮುಖ್ಯ ಕಾಳಜಿಯಾಗಿದೆ. ಪ್ರೀತಿ, ಗಂಡು-ಹೆಣ್ಣಿನ ಪ್ರೀತಿ, ಜೀವನಪ್ರೀತಿ - ಇವು ವ್ಯವಸ್ಥೆಯ ಕ್ರೂರ ಹಿಡಿತದಲ್ಲಿ ನಲುಗಬಾರದು. ನಿಷೇಧ ಮೊದಲಾದ ನಕಾರಾತ್ಮಕ ಪ್ರವೃತ್ತಿಗಳಲ್ಲಿ ಪ್ರೀತಿ ಮುರುಟಿಹೋಗಬಾರದು ಎಂಬ ಆರೋಗ್ಯಕರ ಜೀವನದೃಷ್ಟಿ ಲಕ್ಷ್ಮಣರಾವ್ ಅವರ ಕಥೆಗಳ ಹಿಂದಿನ ಮುಖ್ಯ ಮಾನವೀಯ ದನಿಯಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಲಕ್ಷ್ಮಣರೊಳಗಿನ ಕವಿಯ ಆರೋಗ್ಯಕರ ಜೀವನದೃಷ್ಟಿ, ಸ್ಪಷ್ಟ ವಿಚಾರಗಳ ಜೊತೆಗೆ ಅವರ ಗದ್ಯವು ವಾಚ್ಯವಾಗದೆ ಧ್ವನಿಪೂರ್ಣವಾಗಿ ಕಾವ್ಯಕ್ಕೆ ಹತ್ತಿರವಾಗುತ್ತದೆ. ಜಿ.ಎಸ್.ಆಮೂರರು ಹೇಳಿರುವಂತೆ ಪ್ರಾಮಾಣಿಕತೆ, ತೀಕ್ಷ್ಣತೆ ಮತ್ತು ಹೊಸದೃಷ್ಟಿ ಲಕ್ಷ್ಮಣರಾವ್ ಅವರ ಕಾವ್ಯದ ಮುಖ್ಯ ಗುಣಗಳಾಗಿರುವಂತೆ ಕಥೆಗಳ ಮುಖ್ಯ ಗುಣವೂ ಆಗಿದೆ; ಶಕ್ತಿಯೂ ಆಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಜಿ.ಎನ್. ರಂಗನಾಥರಾವ್ (ಮುನ್ನುಡಿಯಿಂದ)","brand":"B. R. Lakshman Rao","offers":[{"title":"Default Title","offer_id":44711987478787,"sku":"HB00004633","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/2_71fcd0dd-53de-46c6-b365-31648c10ffb0.jpg?v=1707990042"}],"url":"https:\/\/harivubooks.com\/collections\/veeraloka.oembed?page=4","provider":"Harivu Books","version":"1.0","type":"link"}