{"title":"Sawanna Enterprises","description":"","products":[{"product_id":"aahaara-udyamadalli-gelluvudu-hege","title":"ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ?","description":"\u003cp\u003eಕನ್ನಡದ ಹೆಸರಾಂತ ಲೇಖಕ ಮತ್ತು ಪತ್ರಕರ್ತ ಜೋಗಿಯವರು ಶ್ರೀನಿವಾಸ ರಾವ್ ಬಗ್ಗೆ ಬರೆದಿರುವುದು ವಿಶೇಷ. ಪತ್ರಕರ್ತರ ಚಿಕಿತ್ಸಕ, ಸಂಶೋಧನೆಯ ನೋಟ ಮತ್ತು ಸಾಹಿತಿಯ ಲಾಲಿತ್ಯ, ಸೊಗಡು ಈ ಕೃತಿಯಲ್ಲಿ ಮೇಳೈಸಿವೆ. ಕತೆ, ಕಾದಂಬರಿ, ಅಂಕಣ, ಚಿತ್ರ ಸಂಭಾಷಣೆಗಳಲ್ಲಿ ಸಾಕಷ್ಟು ಕೃಷಿ ಮಾಡಿರುವ ಜೋಗಿ, ಜೀವನಕಥೆ ಪ್ರಕಾರಕ್ಕೆ ಈ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದು ಸ್ವಾಗತಾರ್ಹ. ಅದಕ್ಕೆ ಅವರಿಗೆ ಶ್ರೀನಿವಾಸ್ ರಾವ್ ಅವರ ವ್ಯಕ್ತಿತ್ವ ಪ್ರಭಾವ ಬೀರಿರಬಹುದು. ಸಾಧಕರೆಲ್ಲರ ಬಗ್ಗೆಯೂ ಇಂಥ ಕೃತಿಗಳನ್ನು ಬರೆಯಲಾಗುವುದಿಲ್ಲ. ನಮಗೆ ಆಪ್ತವಾಗುವ, ಪ್ರಭಾವ ಬೀರಿದ, ಹಿತವೆನಿಸುವ, ವಿಷಯಕ್ಕೆ ನ್ಯಾಯವೊದಗಿಸಬಲ್ಲೆ ಎಂಬ ವಿಶ್ವಾಸವಿರುವವರ ಬಗ್ಗೆ ಮಾತ್ರ ಇಂಥ ಪ್ರಯತ್ನಕ್ಕೆ ಮುಂದಾಗಬಹುದು. ಈ ಕೆಲಸವನ್ನು ಜೋಗಿಯವರು ಅತ್ಯಂತ ಸಮರ್ಥವಾಗಿ ಮಾಡಿದ್ದಾರೆ.\u003cbr\u003e\u003cbr\u003eಜೀವನಕಥೆಯೆಂದರೆ ವ್ಯಕ್ತಿಯೊಬ್ಬನ ವಿಸ್ತೃತ ಬಯೋಡಾಟ ಅಲ್ಲ. ಪ್ರತಿಯೊಬ್ಬರ ಜೀವನಕ್ಕೂ ಹಲವು ಆಯಾಮಗಳಿರುತ್ತವೆ. ಮುಖಗಳಿರುತ್ತವೆ. ಯಾವುದಾದರೂ ಒಂದು ತಪ್ಪಿಹೋದರೂ ವ್ಯಕ್ತಿಯ ಸಂಪೂರ್ಣ ಚಿತ್ರಣ ಕಟ್ಟಿಕೊಟ್ಟಂತಾಗುವುದಿಲ್ಲ. ಹಾಗೆಂದು ಗೊತ್ತಿದ್ದರೂ ಎಲ್ಲಾ ಮಾಹಿತಿಯನ್ನೂ ಬರೆಯಲಾಗುವುದಿಲ್ಲ. ಇವೆರಡರ ನಡುವೆ ಹದವಾದ, ಹಿತವಾದ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಇದು ಬಯೋಗ್ರಾಫರ್‌ನಿಗೆ ದೊಡ್ಡ ಸವಾಲು ಈ ಕೆಲಸವನ್ನು ಜೋಗಿ ಬಹಳ ಸಮರ್ಥವಾಗಿ ಮಾಡಿದ್ದಾರೆ. ಈ ಕೃತಿ ಶ್ರೀನಿವಾಸ್ ರಾವ್ ವ್ಯಕ್ತಿತ್ವದಂತೆ ಆಪ್ತ, ಸುಂದರ ಹಾಗೂ ಪ್ರೇರಣಾದಾಯಕ ಹಾಗೆಂದು ಶ್ರೀನಿವಾಸ್ ರಾವ್ ಅವರನ್ನು ಎಲ್ಲೂ ವೈಭವೀಕರಿಸಿಲ್ಲ. ವಿಶೇಷಗಣಗಳ ಒಗ್ಗರಣೆ, ಅತಿಯಾದ ಮಸಾಲೆ ಹಾಕಿ, ಅಡುಗೆ ಸ್ವಾದ ಕೆಡಿಸಿಲ್ಲ. ಇದೊಂದು ಅಚ್ಚುಕಟ್ಟಾದ, ರುಚಿಕಟ್ಟಾದ ಭೋಜನ ಸವಿದ ಅನುಭವ ಈ ಕೃತಿ ಮೂಲಕ ಜೋಗಿಯವರು ತಾವು ಸಹ ಉತ್ತಮ 'ಅಕ್ಷರಗಳ ಪಾಕ ಪ್ರವೀಣ' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಒಬ್ಬ ಅಪರೂಪದ ವ್ಯಕ್ತಿಯ ಪರಿಚಯ, ನಮಗೆ ಗೊತ್ತಿರುವ ಉದ್ಯಮದ ಒಳಸುಳಿ ಹಾಗೂ ಒಬ್ಬ ಸಾಧಕನ ಬದುಕಿನ ಅನಾವರಣ ಈ ಕೃತಿಯಲ್ಲಿ ಒಟ್ಟಿಗೇ ಸಿಗುತ್ತದೆ. ನಿಜಕ್ಕೂ ಜೋಗಿಯವರು ಅಭಿನಂದನಾರ್ಹರು.\u003cbr\u003e\u003cbr\u003eವಿಶ್ವೇಶ್ವರ ಭಟ್\u003cbr\u003e\u003c\/p\u003e\n\u003cdiv id=\"gtx-trans\" style=\"position: absolute; left: 220px; top: 223.938px;\"\u003e\n\u003cdiv class=\"gtx-trans-icon\"\u003e\u003cbr\u003e\u003c\/div\u003e\n\u003c\/div\u003e","brand":"Jogi","offers":[{"title":"Default Title","offer_id":42020634886403,"sku":"HB00001484","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3744.jpg?v=1636356928"},{"product_id":"vidhiya-benneri","title":"ವಿಧಿಯ ಬೆನ್ನೇರಿ","description":"\u003cp\u003eಜೀವನದ ಪಯಣದಲ್ಲಿ ಸೋಲುವುದು ಮತ್ತು ಗೆಲ್ಲುವುದು ನಿರಂತರವಾಗಿ ನಡೆದೇ ಇರುತ್ತದೆ. ಗೆದ್ದಾಗ ಬೀಗುವವ, ಸೋತಾಗ ಬಾಗುವುದೇನು? ಹೂತು ಹೋಗುತ್ತಾನೆ. ಆಗೆಲ್ಲಾ ಅವನಿಗೆ ಹೊರಗಿನಿಂದ ಒಂದಷ್ಟು ಶಕ್ತಿ ಪ್ರವಾಹ ಆಗಲೇಬೇಕು. ಪ್ರೇರಣೆ ಯಾರಿಗೆ ಬೇಡ ಹೇಳಿ? ಮೊಬೈಲ್ ಕೂಡ ದಿನಕ್ಕೊಮ್ಮೆ ರೀಚಾರ್ಜ್ ಮಾಡಿಸಿರೆಂದು ದುಂಬಾಲು ಬೀಳುತ್ತದೆ. ಬದುಕು ನೆಲ ಕಚ್ಚಿದಾಗ ಮೇಲೆತ್ತಲು ಪ್ರೇರಣೆ ಬೇಡವಾ? ಅನೇಕ ಬಾರಿ ಸೋಲು ಕಂಡ ನಂತರ, ಮುಂದಿನ ದಾರಿ ಕಾಣುವುದಿಲ್ಲ. ಎಂಥಾ ಅಂಧಕಾರ ತುಂಬಿದ್ದಾಗಲೂ ಬೆಳಕು ಹುಡುಕಿ ಗೆಲುವು ಕಂಡವರ ಬದುಕು, ಶಕ್ತಿ ತಂದುಕೊಡುತ್ತದೆ. ಅವುಗಳನ್ನು ಓದುವುದರಿಂದ, ಆ ಬದುಕಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದರಿಂದ ನಮ್ಮೊಳಗಿನ ಅಂತಃಶಕ್ತಿ ಜಾಗೃತವಾಗುತ್ತದೆ ಮತ್ತು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ.\u003c\/p\u003e\n\u003cp\u003eಈ ನಿಟ್ಟಿನಲ್ಲಿ ವಿಧಿಯ ಬೆನ್ನೇರಿ ಕೃತಿಯು ಪ್ರೇರಣೆ ಕೊಡುವಂತಹದ್ದು. ಇಲ್ಲಿನ ಒಬ್ಬೊಬ್ಬರನ್ನೇ ಓದುತ್ತಾ ಹೋದಂತೆ ಸ್ಫೂರ್ತಿಯ ಸೆಲೆ ಪುಟಿಯುವುದರಲ್ಲಿ ಅನುಮಾನವೇ ಇಲ್ಲ. ವಿಧಿಯ ಬೆನ್ನೇರಿ ಕೃತಿಯನ್ನು ಓದಿದ ಮೇಲೆ ಹೊಸದೊಂದು ಸಾಧನೆಗೆ ನಿಮ್ಮ ಮನಸ್ಸು ಅಣಿಯಾದರೆ, ಲೇಖಕರ ಬರಹದ ಶ್ರಮ ಸಾರ್ಥಕ.\u003c\/p\u003e","brand":"Srinivasa Murthy N. S.","offers":[{"title":"Default Title","offer_id":42020640129283,"sku":"HB00001419","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4080.jpg?v=1636357030"},{"product_id":"business-360","title":"ಬಿಸಿನೆಸ್ 360°","description":"\u003cp\u003e\u003c\/p\u003e","brand":"Suresh Padmanabhan","offers":[{"title":"Default Title","offer_id":42020640227587,"sku":"HB00001417","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/business-360007.jpg?v=1636357033"},{"product_id":"rajakumar-mattashtu-mukagalu","title":"ರಾಜ್‌ಕುಮಾರ್ ಮತ್ತಷ್ಟು ಮುಖಗಳು","description":"","brand":"Katte Gururaj","offers":[{"title":"Default Title","offer_id":42020645175555,"sku":"HB00001352","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4053.jpg?v=1636357138"},{"product_id":"idanna-odbedi-sawanna-enterprises","title":"ಇದನ್ನ ಓದ್ಬೇಡಿ","description":"\u003cp data-mce-fragment=\"1\"\u003e\u003cspan data-sheets-userformat='{\"2\":829,\"3\":{\"1\":0},\"5\":{\"1\":[{\"1\":2,\"2\":0,\"5\":{\"1\":2,\"2\":0}},{\"1\":0,\"2\":0,\"3\":3},{\"1\":1,\"2\":0,\"4\":1}]},\"6\":{\"1\":[{\"1\":2,\"2\":0,\"5\":{\"1\":2,\"2\":0}},{\"1\":0,\"2\":0,\"3\":3},{\"1\":1,\"2\":0,\"4\":1}]},\"7\":{\"1\":[{\"1\":2,\"2\":0,\"5\":{\"1\":2,\"2\":0}},{\"1\":0,\"2\":0,\"3\":3},{\"1\":1,\"2\":0,\"4\":1}]},\"8\":{\"1\":[{\"1\":2,\"2\":0,\"5\":{\"1\":2,\"2\":0}},{\"1\":0,\"2\":0,\"3\":3},{\"1\":1,\"2\":0,\"4\":1}]},\"11\":4,\"12\":0}' data-sheets-value='{\"1\":2,\"2\":\"ಬೆಚ್ಚನೆಯ ಮನೆಯಿರಲು ಇಚ್ಛೆಯನರಿತು ನಡೆಯುವ ಸತಿಯಿರಲು ವೆಚ್ಚಕ್ಕೆ ಹೊನ್ನಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಅನ್ನೋ ವಚನವನ್ನ ನಮ್ಮಜನ ಬಹಳ ತಪ್ಪಾಗಿ ಅರ್ಥ ಮಾಡಿಕೊಂಡು ತಮ್ಮ ಮನೆಯನ್ನು, ತಮ್ಮ ಫ್ಯಾಮಿಲಿಯನ್ನು ಚೆನ್ನಾಗಿಟ್ಟುಕೊಳ್ಳೋಕ್ಕೆ ಸುಂದರವಾಗಿ ಮನೆ ಕಟ್ಟಿಕೊಂಡು ಸಮಾಜ ಅನ್ನೋ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಾ ಇದ್ದಾರೆ. ಇದು ಸರೀನಾ?\\n\\nಒಳ್ಳೇ ಕೆಲಸ ಮಾಡಕ್ಕೆ ಹೊರಟಾಗ ಸೋಲಿನ ಭಯ ಇರಲ್ಲ. ಸೋಲಿನ ಭಯ ಇಲ್ಲದೇ ಯಾವ ಕೆಲಸ ಶುರು ಮಾಡಿದರೂ ಕೂಡ ಆ ಕೆಲಸಾನ ಸೋಲಿಸೋದಕ್ಕೆ ಆ ಬ್ರಹ್ಮನ ಕೈಲೂ ಆಗಲ್ಲ. ಆದರೂ ನೀವು ಸೋತರೆ ಏನ್ಮಾಡ್ತೀರಾ ಅಂತ ಕೇಳ್ತೀರಾ? ಸೋತರೆ ತಲೆ ಎತ್ತಿ ನಡೀತೀನಿ. ಗೆದ್ದರೆ ತಲೆ ಬಗ್ಗಿಸಿ ಕೆಲಸ ಮಾಡ್ತೀನಿ.\\n\"}' data-mce-fragment=\"1\"\u003eಬೆಚ್ಚನೆಯ ಮನೆಯಿರಲು ಇಚ್ಛೆಯನರಿತು ನಡೆಯುವ ಸತಿಯಿರಲು ವೆಚ್ಚಕ್ಕೆ ಹೊನ್ನಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಅನ್ನೋ ವಚನವನ್ನ ನಮ್ಮಜನ ಬಹಳ ತಪ್ಪಾಗಿ ಅರ್ಥ ಮಾಡಿಕೊಂಡು ತಮ್ಮ ಮನೆಯನ್ನು, ತಮ್ಮ ಫ್ಯಾಮಿಲಿಯನ್ನು ಚೆನ್ನಾಗಿಟ್ಟುಕೊಳ್ಳೋಕ್ಕೆ ಸುಂದರವಾಗಿ ಮನೆ ಕಟ್ಟಿಕೊಂಡು ಸಮಾಜ ಅನ್ನೋ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಾ ಇದ್ದಾರೆ. ಇದು ಸರೀನಾ?\u003cbr data-mce-fragment=\"1\"\u003eಒಳ್ಳೇ ಕೆಲಸ ಮಾಡಕ್ಕೆ ಹೊರಟಾಗ ಸೋಲಿನ ಭಯ ಇರಲ್ಲ. ಸೋಲಿನ ಭಯ ಇಲ್ಲದೇ ಯಾವ ಕೆಲಸ ಶುರು ಮಾಡಿದರೂ ಕೂಡ ಆ ಕೆಲಸಾನ ಸೋಲಿಸೋದಕ್ಕೆ ಆ ಬ್ರಹ್ಮನ ಕೈಲೂ ಆಗಲ್ಲ. ಆದರೂ ನೀವು ಸೋತರೆ ಏನ್ಮಾಡ್ತೀರಾ ಅಂತ ಕೇಳ್ತೀರಾ? ಸೋತರೆ ತಲೆ ಎತ್ತಿ ನಡೀತೀನಿ. ಗೆದ್ದರೆ ತಲೆ ಬಗ್ಗಿಸಿ ಕೆಲಸ ಮಾಡ್ತೀನಿ.\u003cbr data-mce-fragment=\"1\"\u003e\u003c\/span\u003e\u003c\/p\u003e\n\u003cp data-mce-fragment=\"1\"\u003e \u003c\/p\u003e","brand":"Upendra","offers":[{"title":"Default Title","offer_id":42115720347907,"sku":"HB00000726","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at11.27.44AM.jpg?v=1638079926"},{"product_id":"lifeis-beautiful-jogi","title":"ಲೈಫ್ ಈಸ್ ಬ್ಯೂಟಿಫುಲ್ ಕಣ್ಣ್ ಬಿಟ್ಟ್ ನೋಡ್ರೀ","description":"\u003cp\u003eಕಷ್ಟವೆನ್ನುವುದು ಜೀವನದ ಒಂದು ಭಾಗ. ಕಷ್ಟ ಬಂದಾಗ ನಮ್ಮ ಶಕ್ತಿಯ ಪರೀಕ್ಷೆ ನಡೆಯುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣ ರಾಗುವೆವೋ ಇಲ್ಲವೋ ಎನ್ನುವುದು ನಮ್ಮ ಮನೋಸ್ಥೆರ್ಯದ ಮೇಲೆ ಆಧಾರಗೊಂಡಿದೆ. ನಾವು ಇರುವುದು ಸಮಾಜದಲ್ಲಿ, ಇಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಸಮಾಜವು ದುರ್ಬೀನಿನಿಂದ ನೋಡುತ್ತಿರುತ್ತದೆ. ಕೆಲವೊಮ್ಮೆ ಅದಕ್ಕೆ ಉತ್ತರಿಸಬೇಕಾಗಬಹುದು. ಆದರೆ ನಮ್ಮ ಸಹಾಯಕ್ಕೆ ಸಮಾಜ ಪ್ರತಿಸಲ ಬರುವುದೇ? ಅಥವಾ ನಮ್ಮನ್ನು ಟೀಕೆ ಮಾಡುತ್ತಾ ಇರುವುದೇ? ಈ ತುಮುಲಗಳನ್ನು ಬಿಡಿಬಿಡಿಯಾಗಿ ಒಂದೊಂದೇ ಮೆಟ್ಟಿಲಿನಂತೆ ನೋಡಿದಾಗ ಅನೇಕ ಸತ್ಯಗಳು ಹೊಳೆಯುತ್ತವೆ. ಅದರಲ್ಲಿ ಕೆಲವು ಕಹಿಸತ್ಯಗಳೂ ಹೌದು.\u003c\/p\u003e\n\u003cp\u003e                                                                                                          -ಯತಿರಾಜ್ ವೀರಾಂಬುಧಿ\u003c\/p\u003e","brand":"Jogi","offers":[{"title":"Default Title","offer_id":42115721265411,"sku":"HB00000725","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at11.28.23AM.jpg?v=1638080065"},{"product_id":"jayanagarada-hudugi-kannada-book","title":"ಜಯನಗರದ ಹುಡುಗಿ","description":"\u003cp\u003eನನ್ನ ಹರೆಯದ ಓದಿನ ದಿನಗಳಲ್ಲಿ ನಾನು ಭೇಟಿ ಮಾಡಲಿಚ್ಛಿಸಿದ ಇಬ್ಬರು ತರುಣಿಯರೆಂದರೆ ಜಪಾನಿನ ಸೆಯಿ ಶಾನ್ಗಾನ್ ಮತ್ತು ಮೈಸೂರಿನ ನಿಮ್ಮಿ. ಅವರಿಬ್ಬರೂ ನನ್ನನ್ನು ಇನ್ನಿಲ್ಲದಂತೆ ಸೆಳೆದಿದ್ದರು. ಅವರು ಏನು ಯೋಚಿಸುತ್ತಾರೆ ಅನ್ನುವುದು ನನಗೆ ಗೊತ್ತಿತ್ತು. ಅವರ ಆಸಕ್ತಿಗಳೇನು ಅನ್ನುವುದನ್ನು ನಾನು ತಿಳಿದುಕೊಂಡಿದ್ದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇವರ ಪೈಕಿ ಸೆಯಿ ಸಾವಿರ ವರ್ಷ ಹಳಬಳು. ನಿಮ್ಮ ನನ್ನ ಕಾಲದ ಹುಡುಗಿ. ಇಬ್ಬರನ್ನೂ ನಾನು ಯಾವತ್ತೂ ನೋಡಿರಲಿಲ್ಲ. ಆಮೇಲೆ ಗೊತ್ತಾಗಿದ್ದೆಂದರೆ ನಿಮ್ಮಿ ಎನ್ನುವ ಹುಡುಗಿಯೇ ಇರಲಿಲ್ಲ. ಲಂಕೇಶರೇ ಆ ಹೆಸರಲ್ಲಿ ಬರೆಯುತ್ತಿದ್ದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಜಯನಗರದ ಹುಡುಗಿ ಕೂಡ ಆಕೆಯ ವಯೋಮಾನದ ಹುಡುಗರಲ್ಲಿ ಹುಟ್ಟಿಸಿರಬಹುದಾದ ಓದಿನ ಪ್ರೀತಿಯನ್ನು ನಾನು ಊಹಿಸಬಲ್ಲೆ. ಅಜ್ಞಾತದಲ್ಲೆಲ್ಲೋ ಕುಳಿತು ಬರೆಯುವ ತರುಣನೊಬ್ಬನ ಪಿಸುನುಡಿಗಳನ್ನು ಅವನದೇ ವಯಸ್ಸಿನ ಹುಡುಗ ಹುಡುಗಿಯರು ಕೇಳಿಸಿಕೊಳ್ಳುವ ಹಾಗೆಯೇ, ತರುಣಿಯೊಬ್ಬಳು ತನ್ನ ಕಾಲದ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತಾಳೆ ಎಂಬ ಕುತೂಹಲ ಆಕೆಯ ಓರಗೆಯ ಎಲ್ಲರನ್ನೂ ಕುತೂಹಲದಲ್ಲಿ ಇರಿಸುತ್ತದೆ. ಅದರಿಂದಾಗಿ ಆ ಬರಹಕ್ಕೆ ಬೇಲಿ ಬದಿಯಲ್ಲಿ ಅರಳಿದ ನೀಲಿ ಹೂವಿನ ಚೆಲುವು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಂಥ ತಾರುಣ್ಯ ಚಿಮ್ಮುವ ಬರಹಗಳನ್ನು ಮೇಘನಾ ಬರೆದಿದ್ದಾಳೆ. ಜಯನಗರದಿಂದ ಬಾರ್ಸೆಲೋನಾ ತನಕ ಹಬ್ಬಿರುವ ಮೇಘನಾಳ ಈ ಪ್ರಬಂಧಗಳ ಜೀವನೋತ್ಸಾಹ, ಆರೋಗ್ಯಪೂರ್ಣ ನಿಲುವು ಮತ್ತು ವಿನಾಕಾರಣ ಹುರುಪು ಇದನ್ನು ಓದುವ ನಿಮಗೂ ದಾಟಿಕೊಳ್ಳಲಿ ಎಂಬುದು ನನ್ನ ಹಾರೈಕೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನನ್ನದಲ್ಲದ ತಾರುಣ್ಯಪೂರ್ಣ ಕಾಲಮಾನವನ್ನು ಈ ಬರಹಗಳ ಮೂಲಕ ನನಗೆ ಒದಗಿಸಿದ ಮೇಘನಾಗೆ ಪ್ರೀತಿ ಮತ್ತು ಅಭಿನಂದನೆ.\u003cbr data-mce-fragment=\"1\"\u003e\u003c\/p\u003e\n\u003cp\u003e-ಜೋಗಿ\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Meghana Sudhindra","offers":[{"title":"Default Title","offer_id":42115723755779,"sku":"HB00000724","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Jayanagaradahudugi.jpg?v=1638080144"},{"product_id":"108-daily-money-kannada-book","title":"108 Daily ಮನಿ","description":"\u003cp\u003eನಿಮಗೆಲ್ಲಾ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಜಂಕ್ ಬಾಂಡ್ ಎಂದರೇನು? ಎನ್ನುವ ಪ್ರಶ್ನೆ ಬಂದಿರುತ್ತದೆ. ಮಸಾಲಾ ಬಾಂಡ್ ಎನ್ನುವ ಹೆಸರನ್ನ ಕೇಳಿರುತ್ತೀರಿ ಆದರೆ ಅದೇನು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿರುವುದಿಲ್ಲ. ಎಲ್ಲರ ಬಾಯಲ್ಲಿ 'ಎಕಾನಮಿ' ಬಿದ್ದೋಗಿದೆ ಅಥವಾ ಎಕಾನಮಿ ರಿಕವರಿ ಆಗಿದೆ ಎನ್ನುವ ಮಾತನ್ನ ಕೇಳಿರುತ್ತೀರಿ. ಆದರೆ ಯಾರಾದರೂ ವಾಟ್ ಇಸ್ ಎಕಾನಮಿ? ಎಂದಾಗ ತಬ್ಬಿಬ್ಬಾಗುತ್ತೇವೆ ಅಲ್ಲವೇ?\u003cbr data-mce-fragment=\"1\"\u003e\u003cbr data-mce-fragment=\"1\"\u003eಗ್ರೋಥ್ ರೇಟ್, ಬಯ್ ಬ್ಯಾಕ್ ಆಫ್ ಶೇರ್ಸ್, ಮ್ಯೂಚುಯಲ್ ಫಂಡ್, ನೆಗೆಟಿವ್ ರೇಟ್ ಆಫ್ ಇಂಟರೆಸ್ಟ್, ಮಾಡರ್ನ್ ಮನಿ ಥಿಯರಿಗಳು ಏನು ಹೇಳುತ್ತವೆ? ಯೂನಿವರ್ಸಲ್ ಬೇಸಿಕ್ ಇನ್ನಮ್ ಸಿದ್ಧಾಂತವೇನು? ಇವಕ್ಕೆಲ್ಲ ಚುಟುಕಾದ ಉತ್ತರಗಳು ಇಲ್ಲಿವೆ. ವುಕಾ ಎಕಾನಮಿ, ಗಿಗ್ ಎಕಾನಮಿ, ವಾರ್ ಎಕಾನಮಿ, ಜೊತೆಗೆ ಎಸ್ಬಿಐ, ಜಿಡಿಪಿ, ಎಫ್ ಆರ್ ಡಿ ಐಗಳ ಜೊತೆಗೆ ಕರೆನ್ಸಿ ವಾರ್, ಟ್ರೇಡ್ ವಾರ್, ಬಯೋ ವಾರ್ ಹೀಗೆ ಸಾಕಷ್ಟು ಪದಪುಂಜಗಳನ್ನ ಉಚ್ಚರಿಸುವುದ ಕೇಳುವುದು ಜೊತೆಗೆ ಕೆಲವೊಮ್ಮೆ ಮಾತಿನಲ್ಲಿ ಬಳಸಿರುತ್ತೇವೆ.\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Rangaswamy Mookanahalli","offers":[{"title":"Default Title","offer_id":42115733979395,"sku":"HB00000723","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/108DAILMONEY.jpg?v=1638080788"},{"product_id":"ihate-my-life-jogi-sawanna","title":"ಐ ಹೇಟ್ ಮೈ ವೈಫ್- ಪ್ರೀತಿಸದ ಹೊರತು ದ್ವೇಷಿಸಲಾರೆ","description":"There is nothing called happily married.\u003cbr data-mce-fragment=\"1\"\u003e\u003cbr data-mce-fragment=\"1\"\u003eEither you are happy or you are married ಅನ್ನುವುದು ಪಾರ್ಟಿಗಳಲ್ಲಿ ಬಹಳ ಪಾಪ್ಯುಲರ್ ಆದ ಜೋಕ್. ಈ ಒಂದು ಜೋಕಿನ ಹಿಂದೆ ಎಷ್ಟು ಆಳವಾದ ಸತ್ಯ ಇರುತ್ತೋ ಅಷ್ಟೇ ಜೋರಾದ ನಗು ಅದಕ್ಕೆ ಪ್ರತಿಕ್ರಿಯೆಯಾಗಿ ಸಿಗುತ್ತದೆ. ಎರಡು ಬೇರೆ ಬೇರೆ ಇಗೋಗಳು, ಎರಡು ಬೇರೆ ಬೇರೆ ವ್ಯಕ್ತಿತ್ವ ಹೊಂದಿರುವ ಇಬ್ಬರು, ಎರಡು ಬೇರೆ ಬೇರೆ ವಾತಾವರಣದಲ್ಲಿ ಬೆಳೆದಂತಹ ಇಬ್ಬರು ಒಂದೇ ಸೂರಿನ ಕೆಳಗೆ ಮದುವೆ ಅನ್ನುವ ಹೆಸರಿನಲ್ಲಿ ಜೊತೆಗೆ ಬದುಕುತ್ತೇವೆ ಅಂತ ತೆಗೆದುಕೊಳ್ಳುವ ನಿರ್ಧಾರ ಜೀವನದ one of the toughest contracts.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರಮೇಶ್ ಅರವಿಂದ್","brand":"Jogi","offers":[{"title":"Default Title","offer_id":42115742564611,"sku":"HB00000722","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at11.28.18AM.jpg?v=1638081323"},{"product_id":"baduku-badalisuva-kathegalu","title":"50 ಬದುಕು ಬದಲಿಸುವ ಕಥೆಗಳು","description":"\u003cp\u003eಹಸನಾದ ಬದುಕಿಗೆ, ಬದುಕು ಬದಲಿಸಿಕೊಳ್ಳುವ ದಿಕ್ಕಿನೆಡೆಗೆ ಬೇಕಾದ ಸ್ಫೂರ್ತಿಯನ್ನು ಪಡೆಯಲು ವಸ್ತು ಅಥವಾ ವಿಷಯ ಇಂತಹುದೇ ಆಗಿರಬೇಕೆಂಬ ಕಟ್ಟುಪಾಡೇನಿಲ್ಲ. ಮಹಾತ್ಮರ ಜೀವನದ ಸ್ಫೂರ್ತಿದಾಯಕ ಪ್ರಸಂಗಗಳು, ವಾಟ್ಸಾಪ್ ಸಂದೇಶಗಳು. ಆಡಿಯೋ ವಿಡಿಯೋ ತುಣುಕುಗಳು, ಕೇಳಿದ, ನೋಡಿದ ಘಟನೆಗಳು, ನಿತ್ಯ ಜೀವನದಲ್ಲಿ ನಡೆಯುವ ಆಗುಹೋಗುಗಳು, ಭೇಟಿಮಾಡುವ ವ್ಯಕ್ತಿಗಳು, ಭಾಗವಹಿಸುವ ಸಭೆ ಸಮಾರಂಭಗಳು, ಹಿರಿಯರ ಅನುಭವದ ನುಡಿಮುತ್ತುಗಳು ಹೀಗೆ ಯಾವುದೇ ಮೂಲಗಳಿಂದ ಹರಿದುಬರುವ ಒಳ್ಳೆಯ ವಿಚಾರಗಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಪ್ರೇರಣೆ ನೀಡಬಲ್ಲವು, ಹೊಸ ದಿಕ್ಕಿನೆಡೆಗೆ, ಹೊಸ ಹೊಸ ಸಾಧ್ಯತೆಗಳ ಕಡೆಗೆ ಯೋಚಿಸಲು. ಈಗಿರುವುದಕ್ಕಿಂತ ಇನ್ನೂ ಹೆಚ್ಚಿನದನ್ನು ಸಾಧಿಸಲು, ಕಠಿಣ ಪರಿಸ್ಥಿತಿಗಳಿಂದ ಹೊರಬರಲು, ಸವಾಲುಗಳನ್ನು ಎದುರಿಸಲು, ಅವಕಾಶಗಳನ್ನು ದುಡಿಸಿಕೊಳ್ಳಲು, ಅಂದು ಕೊಂಡ ಕಾರ್ಯವನ್ನು ಯಶಸ್ವಿ ಯಾಗಿ ನಿರ್ವಹಿಸಲು, ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು, ಬದುಕಿನ ಉದ್ದೇಶವನ್ನು ನೆನಪಿಸಿಕೊಳ್ಳಲು ಅವಶ್ಯಕವಾಗಿ ಬೇಕಾದ ಸಾಮಗ್ರಿಗಳಾಗಬಲ್ಲವು ಎಂಬುದನ್ನು ಇಲ್ಲಿರುವ ಕಥೆಗಳ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಈ ನನ್ನ ಪ್ರಯತ್ನ ನಿಮಗೂ ಮೆಚ್ಚಿಗೆಯಾಗಬಹುದೆಂಬ ವಿಶ್ವಾಸ ನನ್ನದು.\u003c\/p\u003e\n\u003cp\u003e                                                         -ರಾಜಮ್ಮ ಡಿ.ಕೆ.\u003c\/p\u003e","brand":"Rajamma D. K.","offers":[{"title":"Default Title","offer_id":42115752001795,"sku":"HB00000721","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at12.08.29PM.jpg?v=1638081954"},{"product_id":"kate-chitrakate-sambhaashane-jogi-kannada-book","title":"ಕಥೆ ಚಿತ್ರಕಥೆ ಸಂಭಾಷಣೆ ಜೋಗಿ","description":"\u003cp\u003eಹೂವು ಕಾಯಾಗುವ ಕ್ಷಣ, ಕಾಯಿ ಹಣ್ಣಾಗುವ ಕ್ಷಣ, ಕತೆ ಚಿತ್ರಕತೆ, ಚಿತ್ರಕತೆ ಸಿನಿಮಾ ಆಗುವ ಕ್ಷಣ- ಹೀಗೆಯೇ ಅಂತ ಹೇಳೋಕ್ಕಾಗಲ್ಲ. Films happen. ಅದೊಂದು ಕ್ರಿಯೇಟಿವ್ ಪ್ರಾಸೆಸ್, ಸಿನಿಮಾ ಅಂದಿನಿಂದ ಇಂದಿನ ತನಕ ಬೆಳೆಯುತ್ತಾ ಬದಲಾಗುತ್ತಾ ಬಂದಿದೆ. ಈಗ ಸಿನಿಮಾ ಮಾಡುತ್ತಿರುವ ಹೊಸ ನಿರ್ದೇಶಕರ ವಿಸ್ಮಯ, ಬೆರಗು ಮತ್ತು ಪ್ರತಿಭೆಯಿಂದ ಹೊಸ ಹಾದಿಗಳನ್ನು ಹುಡುಕಿಕೊಳ್ಳುತ್ತಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜೋಗಿಯವರ ಈ ಪುಸ್ತಕ ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ಆಸಕ್ತರಿಗೆ ಆ ಕಾರಣಕ್ಕೇ ಮುಖ್ಯ. ಇಲ್ಲಿ ಪ್ರವಚನ ಇಲ್ಲ. ಪ್ರತಿಯೊಬ್ಬರೂ ತಮ್ಮ ದಾರಿಯ ಹುಡುಕಾಟದ ಕುರಿತು ಬರೆದಿದ್ದಾರೆ. ತಮ್ಮ ಪ್ರಯಾಣವನ್ನು ದಾಖಲಿಸಿದ್ದಾರೆ. ಹೀಗಾಗಿ ಇದು ಪ್ರತಿಯೊಬ್ಬರೂ ತಮ್ಮನ್ನು ತಾವೇ ಹೇಳಿಕೊಳ್ಳುವ ಸ್ವಗತ. ಎಲ್ಲಾ ಹೊಸಪೀಳಿಗೆಯ ನಿರ್ದೇಶಕರ ಆಲೋಚಿಸುವ ಕ್ರಮದತ್ತ ಒಂದು ದಾರಿಯಂತಿದೆ. ಇಲ್ಲಿ ಯಾರೂ ಇದು ಸರಿ, ಇದು ತಪ್ಪು ಅಂತ ಹೇಳುತ್ತಿಲ್ಲ. ಇದು ಅರಳುವ ಕ್ರಿಯೆಯನ್ನು ಹಿಡಿಯುವ ಪರಿ. ಆಗಲೇ ನೋಡಿರುವುದನ್ನು ಬಿಟ್ಟು, ಇವತ್ತಿನ ಮನಸ್ಸು ಹೇಗೆ ಯೋಚಿಸುತ್ತದೆ, ಅದನ್ನು ದುಡಿಸಿಕೊಳ್ಳುವುದು ಹೇಗೆ ಅನ್ನುವುದನ್ನು ಗಮನಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಿನಿಮಾ ನೋಡುವ, ಮಾಡುವ ಮೂಲಕ ತಮ್ಮ ಐಡೆಂಟಿಟಿಯನ್ನು ಕಂಡುಕೊಳ್ಳುವ ಎಲ್ಲರಿಗೂ ಇದು ಬಹುಮುಖ್ಯ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜೋಗಿಯ ಈ ಪುಸ್ತಕದಲ್ಲಿ ಅವರ ಪ್ರಯಾಣ ಕಾಣುತ್ತದೆ. ಇಲ್ಲಿ ಯಾರು ಕೂಡ ತನಗೆ ಎಲ್ಲ ಗೊತ್ತಿದೆ ಎಂದು ಹೇಳಲು ಹೋಗಿಲ್ಲ. ತಮ್ಮ ತಮ್ಮ ಪಯಣವನ್ನು ಕಟ್ಟಿಕೊಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಥ್ಯಾಂಕ್ಯೂ ಜೋಗಿ, ಚೆಂದದ ಪುಸ್ತಕಕ್ಕೆ\u003cbr data-mce-fragment=\"1\"\u003e- ಪ್ರಕಾಶ್ ರೈ\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Jogi","offers":[{"title":"Default Title","offer_id":42115752329475,"sku":"HB00000720","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d42cff71-6da7-48bf-87be-c895e1cdf4db.jpg?v=1638081984"},{"product_id":"cocktail-teerthahalli-chethana","title":"ಕಾಕ್‌ಟೇಲ್","description":"ಇಲ್ಲಿ ಪ್ರೇಮವಿದೆ, ಅಧ್ಯಾತ್ಮವಿದೆ, ಪರಿಚಯ ಕಥನಗಳಿವೆ. ಶ್ಲೋಕಗಳಿವೆ, ದೋಹೆಗಳಿವೆ, ಪದ್ಯಗಳೂ ಇವೆ. ಬುದ್ಧ ಇದ್ದಾನೆ, ಸೂಫಿಗಳಿದ್ದಾರೆ, ಝನ್ ಇದೆ, ವೇದಗಳ ಉಲ್ಲೇಖವಂತೂ ಇದ್ದೇ ಇವೆ. ಇದರ ಉದ್ದೇಶ ಇಷ್ಟೇ, ಯಾರಿಗೆ ಏನು ಬೇಕೋ ಅದನ್ನು ಓದಬಹುದು. ಮತ್ತು ಈ ಪುಸ್ತಕದಲ್ಲಿ ಅವೆಲ್ಲದರ ಒಂದೊಂದು ಚಮಚೆ ರುಚಿ ನೋಡಿ ವಿಶಾಲ ಅಕ್ಷರ ಜಗತ್ತಿನಲ್ಲಿ ಹೆಚ್ಚಿನ ಓದಿಗೆ ಕೈಹಚ್ಚಬಹುದು. ಇಲ್ಲಿ ಏನನ್ನಾದರೂ ಓದಿ ''ಅರೆ, ಇದನ್ನು ಮತ್ತಷ್ಟು ತಿಳಿಯಬೇಕಲ್ಲ'' ಅನ್ನುತ್ತ ನೀವು ಹುಡುಕಾಟ ಹೊರಟರೆ ಈ ಪುಸ್ತಕ ಸಾರ್ಥಕ.\u003cbr data-mce-fragment=\"1\"\u003e\u003cbr data-mce-fragment=\"1\"\u003eಎಲ್ಲ ಯಾಕೆ ಗುಡ್ಡೆ ಹಾಕಿ ಚಿತ್ರಾನ್ನ ಮಾಡಿದ್ದಾರೆ, ಒಂದೋ ಕಥೆಗಳು, ಒಂದೋ ಲೇಖನಗಳು ಹೀಗೆ ಮಾಡಬಹುದಿತ್ತಲ್ಲ ಅಂತ ಯಾರಾದರೂ ಕೇಳಬಹುದು. ಕಾರಣ ಇಷ್ಟೇ, 'ಲೋಕೋ ಭಿನ್ನ ರುರ್ಚಿ'. ಎಲ್ಲರ ಓದಿನ ರುಚಿ ಮತ್ತು ಆಸಕ್ತಿಯೂ ಒಂದೇ ಥರ ಇರುವುದಿಲ್ಲ. ಒಂದೇ ವಿಷಯವನ್ನು ಕಥೆಯ ರೂಪದಲ್ಲೂ ಹೇಳಬಹುದು, ಪ್ರಬಂಧವಾಗಿಯೂ, ಲೇಖನವಾಗಿಯೂ. ಈ ಪುಸ್ತಕದ ಒಟ್ಟಾರೆ ಆಶಯ ಒಂದೇ, ಅದನ್ನು ಹೇಳಲು ಬಳಸಿದ ಬಗೆ ಬೇರೆ ಬೇರೆ ಅಷ್ಟೇ. ಆದ್ದರಿಂದಲೇ ಇದು ಹಲವು ಮಿಶ್ರಣಗಳ  ಕಾಕ್‌ಟೇಲ್\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr\u003e","brand":"Chethana Tirthahalli","offers":[{"title":"Default Title","offer_id":42115758719235,"sku":"HB00000719","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at12.18.55PM.jpg?v=1638082594"},{"product_id":"ardhasatya-vinay-madhav-sawanna","title":"ಅರ್ಧ ಸತ್ಯ","description":"ಹೌದು.\u003cbr data-mce-fragment=\"1\"\u003e\u003cbr data-mce-fragment=\"1\"\u003eನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್. ಯಾವ ಸುದ್ದಿಯ ಹಿಂದೆ ಬೇಕಾದರೂ ಹೋಗ್ತಿನಿ. ಯಾವ ಅಪರಾಧ ಸುದ್ದಿಯೂ ನನ್ನ ಕಣ್ಣಪ್ಪಿಸಿ ಹೋಗೋಕೆ ಸಾಧ್ಯನೇ ಇಲ್ಲ. ವೇಶ್ಯಾವಾಟಿಕೆ, ಡ್ರಗ್ಸ್, ಕೊಲೆ, ಅಂಡರ್‌ವರ್ಲ್ಡ್ ಯಾವುದಾದರೂ ಸರಿ. ಯಾವ ಪೋಲಿಸ್ ಅಧಿಕಾರಿಯ ಹತ್ತಿರ ಬೇಕಾದರೂ ಘಂಟೆಗಟ್ಟಲೆ ಕುಳಿತು ಮಾತನಾಡಿ, ನನಗೆ ಬೇಕಾದ ಸುದ್ದಿ ಹೊರ ತರಬಲ್ಲೆ, ಅಂಡರ್‌ವರ್ಲ್ಡ್ ಡಾನ್ ಎಂದು ಎನ್ನಿಸಿಕೊಂಡವರು ಸಹ ನನಗೇನೂ ದೂರವಲ್ಲ. ಆದರೆ, ಯಾವಾಗ ಬೇಕಾದರೂ, ಯಾರ ವಿರುದ್ಧ ಕೂಡ ತಿರುಗಿ ಬೀಳಬಲ್ಲೆ. ನನ್ನ ಕೈಯಲ್ಲಿ ಆಗದ ಕೆಲಸವಿಲ್ಲ ಎನ್ನುವ ಹಣ್ಣು ಬೇರೆ. ಯಾರ ಹಂಗಿನಲ್ಲೂ ನಾನಿಲ್ಲ ಎನ್ನುವ\u003cbr data-mce-fragment=\"1\"\u003e\u003cbr data-mce-fragment=\"1\"\u003eಆದರೆ, ತಾನು ಯಾವ ವೇಶ್ಯಾವಾಟಿಕೆ, ಡ್ರಗ್‌ಗಳ ವಿರುದ್ಧ ಪುಟಗಟ್ಟಲೆ ಬರೆದಿದ್ದೆನೋ, ಆದೇ ಆ ವೃತ್ತದೊಳಗೆ ಸ್ನೇಹಿತರ ಜೊತೆ ಪರೋಕ್ಷವಾಗಿ ಭಾಗಿಯಾದಾಗ? ತನಗೆ ಸುದ್ದಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೆಲವು ಅಧಿಕಾರಿಗಳನ್ನು ಹೀರೋಗಳಂತೆ ಪ್ರತಿಬಿಂಬಿಸಿ, ಕೊನೆಗೆ ಸತ್ಯ ತಿಳಿದಾಗ? ಇಷ್ಟೆಲ್ಲಾ ಅಧಿಕಾರದಲ್ಲಿರುವವರ ಸಂಪರ್ಕವಿದ್ದರೂ, ನಿಜವಾಗಿ ನೊಂದವರಿಗೆ ಸಾಂತನ ಹೇಳಲೂ ಆಗದಿದ್ದಾಗ?\u003cbr data-mce-fragment=\"1\"\u003e\u003cbr data-mce-fragment=\"1\"\u003eಇದೆಲ್ಲಾ ಇರಲಿ... ಇಡೀ ವ್ಯವಸ್ಥೆಯೇ ತನ್ನನ್ನು ಹೀರೋ ಎಂದು ಹೊಗಳುತ್ತಾ, ತಮಗೆ ಬೇಕಾದಂತೆ ಕಥೆಗಳನ್ನು ಕಟ್ಟುತ್ತಾ ಹೋದಾಗ? ತನ್ನನ್ನು ಟಾಯ್ಲೆಟ್‌ನಲ್ಲಿ ಟಿಶ್ಯೂ ಪೇಪರ್‌ನಂತೆ ಉಪಯೋಗಿಸಿ ಎಸೆದಂತೆ ಅನುಭವವಾಗುತ್ತದೆ. ಆಗ ಸಾಮಾನ್ಯ ಮನುಷ್ಯನಂತೆ ಯೋಚಿಸಲು ಆರಂಭಿಸುತ್ತೇನೆ. ಆದರೂ, ಪ್ರಪಂಚದ ಮಟ್ಟಿಗೆ ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್...\u003cbr data-mce-fragment=\"1\"\u003e\u003cbr data-mce-fragment=\"1\"\u003eಮಾಕೋನಹಳ್ಳಿ ವಿನಯ್ ಮಾಧವ್","brand":"Makonahalli Vinay Madhav","offers":[{"title":"Default Title","offer_id":42115765436675,"sku":"HB00000717","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at12.28.33PM.jpg?v=1638083094"},{"product_id":"avaravara-bhaavakke-prakash-sawanna","title":"ಅವರವರ ಭಾವಕ್ಕೆ","description":"\u003cp\u003eಪ್ರತಿಯೊಂದು ಕ್ಷಣವನ್ನು ತನ್ಮಯರಾಗಿ ಜೀವಿಸುವ ಪ್ರಕಾಶ್ ರೈ ನನ್ನ ಪಾಲಿಗೆ ನಿರಂತರ ಅಚ್ಚರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅವರ ಪ್ರತಿಭೆಯ ಅನಂತ ಆಯಾಮಗಳಲ್ಲಿ ಕೆಲವು ಮಾತ್ರ ಅನಾವರಣಗೊಂಡಿವೆ ಎಂದು ನನಗೆ ಎಷ್ಟೋ ಸಲ ಅನ್ನಿಸುತ್ತಿರುತ್ತದೆ. ರಂಗಭೂಮಿಯಿಂದ ಶುರು ಮಾಡಿ, ಸಿನಿಮಾ ಜಗತ್ತಿನಲ್ಲಿ ಸ್ಥಿರವಾಗಿ ನೆಲೆಸಿ, ನಾಲ್ಕಾರು ಭಾಷೆಗಳನ್ನು ಕಲಿತು, ಕೃಷಿಕನಾಗಿ, ಹೋರಾಟಗಾರನಾಗಿ, ನೊಂದವರ ಪಾಲಿಗೆ ತಾಯಿಯಾಗಿ, ಗೆಳೆಯರಿಗೆ ನಿರಂತರ ಭರವಸೆಯಾಗಿ, ಸ್ಪಷ್ಟವಾಗಿ ಯೋಚಿಸಬಲ್ಲ, ಟೀಕೆಗಳನ್ನು ತಾಳಿ ನಿಲ್ಲಬಲ್ಲ, ಮಾನವೀಯವಾಗಿರಲು ಸತತವಾಗಿ ಯತ್ನಿಸುತ್ತಲೇ ಇರುವ ಪ್ರಕಾಶ ರೈ ಅಸೀಮ ಪ್ರತಿಭೆಯ ಖನಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eತಮ್ಮ ಮಾತು, ಭಂಗಿ, ಭಾವ ಮತ್ತು ಅಭಿವ್ಯಕ್ತಿಯ ವಿಸ್ತಾರವೆಂಬಂತೆ ಅವರು ಬರಹಗಳ ಮೂಲಕ ತಮ್ಮನ್ನು ಪ್ರಕಟಪಡಿಸಿಕೊಳ್ಳುತ್ತಿದ್ದಾರೆ. ಎಂದೋ ಕೇಳಿದ ಕಥೆ, ಎಲ್ಲೋ ನೋಡಿದ ಮುಖ, ಕಡಿದು ಹೋದ ಪ್ರೇಮ, ಕದಡಿದ ಸಂಗತಿ, ಅಖಂಡ ನೆನಪು, ನಿರ್ಭೀತ ನಿಲುವು, ಸ್ಪುಟವಾದ ಗ್ರಹಿಕೆ, ತರ್ಕಬದ್ಧ ತೀವ್ರತೆ, ನಿಗರ್ವಿ ವಿನಯ-ಎಲ್ಲವೂ ಈ ಅಂಕಣ ಬರಹಗಳಲ್ಲಿ ಅಡಕಗೊಂಡು ಅವರ ವ್ಯಕ್ತಿತ್ವವನ್ನು ಬೆಳಗಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eತನ್ನ ಭಾವ-ಭಂಗಿ, ನಮ್ಮ ನಿಮ್ಮ ಭಾವಕ್ಕೂ ಒದಗುವಂತೆ ಬರೆಯಬಲ್ಲ ಪ್ರಕಾಶ ರೈ ಕನ್ನಡಕ್ಕೆ ವಿಶಿಷ್ಟವಾದದ್ದೇನೋ ಕೊಡುತ್ತಿದ್ದಾರೆ.\u003c\/p\u003e\n\u003cp\u003e\u003cbr data-mce-fragment=\"1\"\u003e                                                                                                              - ಜೋಗಿ\u003c\/p\u003e","brand":"Prakash Rai","offers":[{"title":"Default Title","offer_id":42115772350723,"sku":"HB00000716","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at12.37.07PM.jpg?v=1638083671"},{"product_id":"jaya-nishchaya-endendu-geluve-kannada-book","title":"ಜಯ ನಿಶ್ಚಯ-ಎಂದೆಂದೂ ಗೆಲುವೆ","description":"\u003cp\u003eಜಯ ನಿಶ್ಚಯ\u003cbr data-mce-fragment=\"1\"\u003e\u003cbr data-mce-fragment=\"1\"\u003eಬದುಕಿನಲ್ಲಿ ನಮಗೆ ಎದುರಾಗುವ ಅನೇಕ ನಕಾರಾತ್ಮಕ ಸಂಗತಿಗಳು ಸನ್ನಿವೇಶಗಳಿಂದ ಕೆಲವು, ಸ್ವಯಂಕೃತದಿಂದ ಮತ್ತೆ ಹಲವು ಉಂಟಾಗುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂತಹ ಮೈನಸ್ ಅಥವಾ ದೌರ್ಬಲ್ಯ ಅಂಶಗಳನ್ನು ಬದುಕಿನಿಂದ ಅಳಿಸಿ, ಅಲ್ಲಿ ಪ್ಲಸ್ ಅಥವಾ ಶಕ್ತಿಯುತ ಅಂಶಗಳನ್ನು ಬಳಸಿದರೆ ಜಯ ನಿಶ್ಚಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮಲ್ಲಿ ಅಡಗಿರುವ ಅನೇಕ ನಕಾರಾತ್ಮಕ ಅಂಶಗಳನ್ನು ಹುಡುಕಿ ಹೊರಹಾಕಿದರೆ ಜೀವನದಲ್ಲಿ ಗೆಲುವು ಖಂಡಿತ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಹೊತ್ತಗೆ ಓದಿದಾಗ, ಅಬ್ಬಾ! ಇಷ್ಟೊಂದು ನೆಗೆಟಿವ್ ಪಾಯಿಂಟುಗಳು ನಮ್ಮೊಳಗೆ ಇವೆಯಾ ಎನಿಸುತ್ತದೆ. ನಮ್ಮಲ್ಲಿನ ಪಾಜೆಟಿವ್ ಪಾಯಿಂಟುಗಳನ್ನು ಹೊರತಂದು ಗೆಲ್ಲಬಹುದು.\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Yatiraj Jayambudhi","offers":[{"title":"Default Title","offer_id":42115778707715,"sku":"HB00000715","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5f436959-b2ac-4f9f-9e00-d124e7a555ba.jpg?v=1638084228"},{"product_id":"bhishma-helida-management-kathegalu","title":"ಭೀಷ್ಮ ಹೇಳಿದ ಮ್ಯಾನೇಜ್‌ಮೆಂಟ್ ಕಥೆಗಳು","description":"\u003cp\u003eಅವನು ಎಂಟು ನೂರು ವರ್ಷಗಳ ಸುದೀರ್ಘ ಕಾಲ ಬದುಕಿದ್ದ. ಆರಕ್ಕೂ ಹೆಚ್ಚು ತಲೆಮಾರುಗಳನ್ನು ಕಂಡಿದ್ದ. ಅದಕ್ಕೂ ಹಿಂದೆ ಅವನದ್ದು ದೇವಮಾನದ ಆಯುಷ್ಯ. ಅದೂ ಮೇಲಿನ ಲೋಕದಲ್ಲಿ.\u003cbr data-mce-fragment=\"1\"\u003eಒಟ್ಟಿನಲ್ಲಿ ಅವನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಕಾಲ ಲೋಕಲೋಕಾಂತರದ ಬದುಕನ್ನು ಅನುಭವಿಸಿದ್ದ.\u003cbr data-mce-fragment=\"1\"\u003eಅವನು ಕಲಿತದ್ದಂತೂ ಯುಗಯುಗಗಳ ಕಾಲ ಜಗತ್ತಿಗೆ ಕಲಿಸಿದವರಲ್ಲಿ.\u003cbr data-mce-fragment=\"1\"\u003eಒಡನಾಡಿದ್ದು, ಗುದ್ದಾಡಿದ್ದು ಯಾವುದೂ ಸಾಮಾನ್ಯರ ಜೊತೆಯಲ್ಲಲ್ಲ. ಅಂತವನು ಕ್ಷಣಕ್ಷಣವೂ ಚುಚ್ಚುವ ಬಾಣಗಳ ಮೇಲೆ ಸಾವನ್ನು ಕಾಯುತ್ತಾ ಮಲಗಿದ್ದ. ಆಗ ಅವನಲ್ಲಿ ಮುಂದಿನ ಸಾರ್ವಭೌಮ ಆಡಳಿತದ ಮಾರ್ಗದರ್ಶನ ಕೇಳಿದ.\u003cbr data-mce-fragment=\"1\"\u003eಭೀಷ್ಮ ಹೇಳುತ್ತಾ ಹೋದ...\u003cbr data-mce-fragment=\"1\"\u003e\u003cbr data-mce-fragment=\"1\"\u003eಬನ್ನಿ, ಧರ್ಮರಾಜನೊ೦ದಿಗೆ ನಾವೂ ಅದನ್ನು ಕೇಳೋಣ.\u003c\/p\u003e\n\u003cp\u003e-ಜಗದೀಶಶರ್ಮಾ ಸಂಪ\u003c\/p\u003e","brand":"Jagadeeshasharma Sampa","offers":[{"title":"Default Title","offer_id":42115781099779,"sku":"HB00000714","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_298eb68b-89ab-47ac-bb7a-1984e1139e4f.jpg?v=1681134754"},{"product_id":"bengalurucolors-sawanna-meghana","title":"ಬೆಂಗಳೂರು ಕಲರ್ಸ್","description":"ಮೇಘನಾ ಸುಧೀಂದ್ರ\u003cbr data-mce-fragment=\"1\"\u003e\u003cbr data-mce-fragment=\"1\"\u003eಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘನಾ ಸುಧೀಂದ್ರರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾವಣ್ಣ ಪ್ರಕಾಶನದ ಜಯನಗರದ ಹುಡುಗಿ ಮೊದಲ ಪ್ರಕಟಿತ ಪುಸ್ತಕ, ಎರಡು ಆನ್ಸನ್ ಮ್ಯಾಗಝೀನುಗಳಿಗೆ ಅಂಕಣ ಬರೆಯುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಲಿಪಿಯ ಪತ್ರಗಳು ಇವರ ಎರಡನೇ ಪುಸ್ತಕ. #AI ಕಥೆಗಳು ಇವರ ಮೊದಲ ಕಥಾ ಸಂಕಲನ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮೇಘನಾರವರು ಈಗಿನ ಕಾಲದ ಮಿಲೇನಿಯಲ್ ಪೀಳಿಗೆಯ ಕಥಾ ವಸ್ತುಗಳನ್ನು, ಚರ್ಚೆ ಮತ್ತು ಸಂವಾದದ ಮೂಲಕ ಜನರಿಗೆ ಕನ್ನಡದ ಹೊಸ ಪುಸ್ತಕಗಳನ್ನು ತಲುಪಿಸುತ್ತಿದ್ದಾರೆ. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹೊಸ ಪೀಳಿಗೆಯ ಕಥೆಗಳು ಬರೆಯುವುದು ಇವರ ಅಭ್ಯಾಸ, ಚಾರಣ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಇವರ ಆಸಕ್ತಿ.","brand":"Meghana Sudhindra","offers":[{"title":"Default Title","offer_id":42115790897411,"sku":"HB00000712","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_23ff90e0-23f6-438f-a21c-da9af9c7fe99.jpg?v=1642660666"},{"product_id":"janamana-nayaka","title":"ಜನಮನ ನಾಯಕ","description":"ಪರಿಣಾಮಕಾರಿ, ವೃತ್ತಿಪರ ಆತ್ಮೀಯ ನಾಯಕತ್ವ ರೂಪುಗೊಳ್ಳುವ ಬಗೆಯನ್ನು ಪ್ರಕಾಶ್ ಅಯ್ಯರ್ ಜಗತ್ತಿನಾದ್ಯಂತದಿಂದ ಆಯ್ದು ತೆಗೆದ ಸ್ವಾರಸ್ಯಕರ ಆಖ್ಯಾನಗಳು ಹಾಗೂ ಸಾಮತಿಗಳ ಮೂಲಕ ಚೇತೋಹಾರಿಯಾಗಿ ನಿರೂಪಿಸಿದ್ದಾರೆ. ಚಾಲಕ, ತಾಯಿ ಜಿರಾಫೆ, ಅಬ್ರಹಾಂ ಲಿಂಕನ್, ಫುಟ್ಬಾಲ್ ಆಟಗಾರರು - ಹೀಗೆ ವೈವಿಧ್ಯಮಯವಾದ ಮೂಲಗಳಿಂದ ಅವರು ಪಾಠಗಳನ್ನು ಆಯ್ತು ಕೊಳ್ಳುತ್ತಾರೆ. ದಿಢೀರ್‌ ಆಹಾರದಂಗಡಿಯಲ್ಲಿ ಬರ್ಗರ್‌ಗಳನ್ನು ತಟ್ಟುತ್ತಾ ನಾಯಕತ್ವದ ಗುಣವನ್ನು ಸಂಪಾದಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ನಿಮ್ಮೊಳಗಿನ ನಾಯಕನನ್ನು ಪ್ರಕಾಶಕ್ಕೆ ತರಲು ಈ ಎಲ್ಲ ಕತೆಗಳು ಸ್ಫೋಟಕ ಕಾಕ್‌ಟೈಲ್‌ನ ರೀತಿ ಜೊತೆಗೂಡಿ ಬಂದಿವೆ.","brand":"Dr. Mahabaleshwar Rao","offers":[{"title":"Default Title","offer_id":42115791749379,"sku":"HB00000711","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at1.11.43PM.jpg?v=1638085442"},{"product_id":"l-jogi-kannada-book","title":"L","description":"\u003cp\u003eಇದು ನನ್ನ ನೋವು. ಇದು ನನ್ನ ಸಂಕಟ. ಇದು ನನ್ನ ಕೊನೆಯ ಉಸಿರಿನ ತನಕ ನನ್ನ ಜೊತೆ ಚಿತೆಯಂತೆ ಸುಡುತ್ತ ಇರಬೇಕಾದ್ದು. ಇರುತ್ತದೆ. ನಾನು ವೈತರಣಿಯನ್ನೆ ದಾಟಿದ್ದೇನೆ, ಇನ್ನೇನು ಎಂಬ ಹಮ್ಮಿನಲ್ಲಿದ್ದರೆ ಜೋಗಿ ನನ್ನನ್ನು ಅನಾಮತ್ತಾಗಿ ಈಚೆಗೆ ಎಳೆದು ಹಾಕಿದ್ದಾರೆ. ಬಹುಶಃ ನಾನು ಅವರನ್ನು ಕ್ಷಮಿಸುವುದು ಕಷ್ಟ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜೋಗಿ, ಯೂ ಹ್ಯಾವ್ ಡನ್ ಇಟ್! ಎಕ್ಸಲೆಂಟ್ಲಿ, ಅಬ್ಸಲ್ಯೂಟ್ಲೀ! \u003c\/p\u003e\n\u003cp\u003e-ನರೇಂದ್ರ ಪೈ\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Jogi","offers":[{"title":"Default Title","offer_id":42115795419395,"sku":"HB00000710","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/L_1.jpg?v=1638085244"},{"product_id":"life-super-guru-kannada-book","title":"ಲೈಫ್ ಸೂಪರ್ ಗುರೂ","description":"\u003cp\u003eಮನಮುಟ್ಟುವಂತೆ ಪರಿಣಾಮಕಾರಿಯಾಗಿ ಕತೆ ಹೇಳಬಲ್ಲ ಋತುಪರ್ಣ ಅವರು, ನಿಮಗೆ ಮೌಲ್ಯಯುತ ಪಾಠಗಳನ್ನು ಗಟ್ಟಿ ಕತೆಗಳ ಮೂಲಕ ದಾಟಿಸಿದ್ದಾರೆ. ಬದುಕಿನ ಏತಕಾನತೆ ಮುರಿದು, ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಲು ಇಚ್ಛೆಯಿದ್ದರೆ, ನೀವು ಈ ಪುಸ್ತಕವನ್ನು ಓದಲೇ ಬೇಕು.\u003cbr data-mce-fragment=\"1\"\u003e-ಸ್ಮೃತಿ ಮಹಾಳೆ,\u003cbr data-mce-fragment=\"1\"\u003eಲೇಖಕರು ಮತ್ತು ಚಾರ್ಟರ್ಟ್ ಅಕೌಂಟೆಂಟ್\u003cbr data-mce-fragment=\"1\"\u003e\u003cbr data-mce-fragment=\"1\"\u003eನಾನಾ ಅನುಭವಗಳನ್ನು ಕಟ್ಟಿಕೊಡುವ ಈ ಪುಸ್ತಕವು, ಬದುಕನ್ನು ನೀವು ಪ್ರಶ್ನೆ ಮಾಡುವಂತೆ ಮಾಡುತ್ತದೆ. ದೈನಂದಿನ ಸಂಗತಿಗಳನ್ನು ಇಟ್ಟುಕೊಂಡೇ ಆಪ್ತವಾಗಿ ಪುಸ್ತಕವನ್ನು ಲೇಖಕರು ಬರೆದಿದ್ದಾರೆ. ಇದೊಂದು ಉತ್ತಮಓದು!\u003cbr data-mce-fragment=\"1\"\u003e-ಡಾ. ಅನೀಶ್ ವಿದ್ಯಾಶಂಕರ್. ದಿ ವೈರ್‌ಲೆಸ್ ವಾಕಿಂಗ್ ವಯಲಿನಿಸ್ಟ್\u003cbr data-mce-fragment=\"1\"\u003e\u003cbr data-mce-fragment=\"1\"\u003eತಾಜಾತನ, ಧೈರ್ಯ, ಭರವಸೆ, ಸಕಾರಾತ್ಮಕತೆ ತುಂಬುವ ಈ ಪುಸ್ತಕದ ಸಂಗತಿಗಳು ವಿಶೇಷವಾಗಿ ಯುವಕರು ಸೇರಿದಂತೆ ಪ್ರತಿಯೊಬ್ಬರಿಗೂ ಎಲ್ಲರನ್ನೂ ಗೆಲ್ಲುವಂಥ ಸಾಮರ್ಥ್ಯವನ್ನು ಸೃಷ್ಟಿಸುತ್ತವೆ. ಈ ಯುವ ಲೇಖಕರು ಮಹಾತ್ರಿಯಾ ರಾ ಅವರ ವಿಚಾರಗಳಲ್ಲಿ ವಿಶ್ವಾಸವನ್ನು ಇಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ.ರಾಘವೇಂದ್ರ\u003cbr data-mce-fragment=\"1\"\u003eಓರಲ್ ಆಂಡ್ ಮ್ಯಾಕ್ಸಿಲೋಫೇಸಿಯಲ್ ಸರ್ಜನ್\u003cbr data-mce-fragment=\"1\"\u003e\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Rutuparna Shrama","offers":[{"title":"Default Title","offer_id":42115805348099,"sku":"HB00000708","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2fa342ff-9c30-456e-a237-8b9bf616bb39.jpg?v=1638085851"},{"product_id":"brand-builders-deepa-hiregutti","title":"ಬ್ರ್ಯಾಂಡ್ ಬಿಲ್ಡರ್ಸ್","description":"ಐಡಿಯಾಗಳು ಜಗತ್ತನ್ನು ಆಳುತ್ತವೆ ಎಂಬುದನ್ನು ಸಾಬೀತುಪಡಿಸಿದ ಕಂಪನಿಗಳು ಬೆಳೆದುಬಂದ ದಾರಿಯ ಅಪರೂಪದ ಕಥೆಗಳಿವು. ತಮ್ಮ ಉತ್ಕೃಷ್ಟತೆಯಿಂದಲೇ ಗೆದ್ದ, ತಂತ್ರಜ್ಞಾನದ ದಿಕ್ಕನ್ನೇ ಬದಲಾಯಿಸಿದ, ಬಡತನದ ಹಿನ್ನೆಲೆಯಿದ್ದರೂ ತಮ್ಮ ಉದ್ಯಮಶೀಲತೆಯಿಂದ ವಿಶ್ವದರ್ಜೆಯ ಸ್ಥಾನಮಾನ ಗಳಿಸಿದ, ಜನರ ಕಾಲೆಳೆಯುವಿಕೆಯನ್ನೇ ಸ್ಫೂರ್ತಿಯಾಗಿಸಿಕೊಂಡು ಮೇಲೇರಿ ತಮ್ಮದೇ ಆದ ಬ್ಯಾಂಡ್ ನಿರ್ಮಿಸಿಕೊಂಡ ವಿಭಿನ್ನ ವಿಶಿಷ್ಟ ಕಂಪನಿಗಳಿವು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕಂಪನಿಗಳು ತಲುಪಿದ ಎತ್ತರ ವರ್ಷ ವರ್ಷಗಳ ಪರಿಶ್ರಮದ ಫಲ. ನಿಧಾನವಾಗಿ ಆದರೆ ದೃಢವಾಗಿ ಮೇಲೇರಿದ ಸಾಧನೆ ಇವುಗಳದ್ದು. ಆದರೆ ಆಲದಮರದಂತೆ ವಿಶಾಲವಾಗಿರುವ ಸಾಧನೆಯ ಹಿಂದೆ ಕಣ್ಣೀರಿದೆ, ಹಸಿವಿನ ಸಂಕಟವಿದೆ, ಸೋಲಿನ ಛಾಯೆಯಿದೆ, ಭವಿಷ್ಯದ ಆತಂಕವಿದೆ, ಕತ್ತಿಯಲುಗಿನಂತಹ ಸಮಾಜದ ವ್ಯಂಗ್ಯವಿದೆ, ಅನಿರೀಕ್ಷಿತ ಏರಿಳಿತಗಳಿಂದಕೂಡಿದ ಸವಾಲಿನ ಬದುಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂತಹ ಹಿನ್ನಡೆಗಳ ಮಧ್ಯೆಯೂ ತಮ್ಮ ಕನಸುಗಳನ್ನು ನಂಬಿ ಮುನ್ನಡೆದು ಇಂತಹ ಅದ್ಭುತಗಳನ್ನು ಸಾಧ್ಯವಾಗಿಸಿದ ಸಾಧಕರ ಸಾಧನೆಯ ಹಾದಿಯನ್ನು ಸಮಾಧಾನದಿಂದ ಗಮನಿಸಿದರೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ. ಏಕೆಂದರೆ ಈ ಸಾಧಕರು ಯಾರೂ ಗೆದ್ದದ್ದು ಅದೃಷ್ಟದಿಂದಲ್ಲ! ಬದಲಾಗಿ ತಾವು ಯಶಸ್ವಿಯಾಗಬೇಕೆಂದು ತೀರ್ಮಾನಿಸಿದ್ದರಿಂದ ಸಾಧಾರಣ ವ್ಯಕ್ತಿಗಳೂ ಸಹ ಛಲ, ದೃಢ ಮನಸ್ಸು, ಸತತ ಪರಿಶ್ರಮ, ಸದಾ ಹೊಸದನ್ನು ಕಲಿಯುವ ಹಂಬಲ, ದಣಿವರಿಯದ ಸ್ಪೂರ್ತಿಯಿಂದ ಕಣ್ಣಕ್ಷಿತಿಜವನ್ನು ಮೀರಿ ಮುನ್ನಡೆಯಬಹುದು ಎಂಬುದಕ್ಕೆ ಉದಾಹರಣೆ ಈ ಸಾಧಕರು. ನಮ್ಮ ಗುರಿ ಏನೇ ಇರಲಿ, ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸುವುದಿರಲಿ, ಒಳ್ಳೆಯ ಉದ್ಯೋಗ ಪಡೆಯುವುದಿರಲಿ ಅಥವಾ ಸ್ವಂತ ಉದ್ಯಮದಲ್ಲಿ ಮುನ್ನಡೆಯುವುದಿರಲಿ, ಇಂತಹ ಸ್ಫೂರ್ತಿಯ ಕಥೆಗಳು ಸದಾ ಮಾರ್ಗದರ್ಶಕವಾಗಿರುತ್ತವೆ. ನಡುಗಡಲಲ್ಲೂ ಕೈ ಸೋಲದಂತೆ ಕಾಪಾಡುವ ಭರವಸೆಯ ಹುಲ್ಲಿನೆಳೆಯಂತೆ...\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಡು ಮರಳುಗಾಡಲ್ಲಿ ಸಿಕ್ಕ ಜೀವದಾಯಿನಿ ಓಯಸಿಸ್‌ನಂತೆ...","brand":"Deepa Heeregutti","offers":[{"title":"Default Title","offer_id":42115819045123,"sku":"HB00000707","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at1.20.48PM.jpg?v=1638086502"},{"product_id":"cini-maayaloka","title":"ಸಿನಿ ಮಾಯಾಲೋಕ","description":"\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv id=\"synopsys\" class=\"col-sm relative\"\u003e\n\u003cp\u003e‘ಸಿನಿಮಾಯಾಲೋಕ’ ಎನ್. ಸಂಧ್ಯಾರಾಣಿ ಅವರ ಲೇಖನ ಸಂಕಲನ. ಸಿನಿ ಮಾಯಾಲೋಕ- ಇದು ಸಿನಿಮಾ ಎನ್ನುವ ಮಾಯಾಲೋಕವನ್ನು ಕುರಿತ ಬರಹಗಳು. ನಾವು ಬೆಳೆಯುತ್ತಿದ್ದಾಗ ಸಿನಿಮಾ ನಮ್ಮ ಏಕೈಕ ಮನರಂಜನೆ. ಗಡಿಭಾಗದ ಕೋಲಾರ ಜಿಲ್ಲೆಯಲ್ಲಿ ಬೆಳೆದ ನನಗೆ ಕನ್ನಡದಷ್ಟೇ ತೆಲುಗು ಮತ್ತು ತಮಿಳು ಚಿತ್ರಗಳೂ ಪ್ರಿಯ. ಇವುಗಳ ಜೊತೆಯಲ್ಲಿ ಆಗ ದೂರದರ್ಶನದಲ್ಲಿ ಭಾನುವಾರ ಮಧ್ಯಾಹ್ನಗಳಂದು ಬರುತ್ತಿದ್ದ ಭಿನ್ನಧ್ವನಿಯ ಚಲನಚಿತ್ರಗಳು ನಮ್ಮ ಅರಿವನ್ನು, ಸಿನಿಮಾ ಕಲ್ಪನೆಯನ್ನೂ ವಿಸ್ತರಿಸುತ್ತಿದ್ದವು ಎನ್ನುತ್ತಾರೆ ಲೇಖಕಿ ಸಂಧ್ಯಾರಾಣಿ. \" ಈಗಂತೂ ನನಗೆ ಸಿನಿಮಾ ಎನ್ನುವುದು ದಿನಪತ್ರಿಕೆಯ ಹಾಗೇ ದಿನಪತ್ರಿಕೆ ಓದದ, ಒಂದಾದರೂ ಸಿನಿಮಾ ನೋಡದ ದಿನಗಳು ನನ್ನ ಕ್ಯಾಲೆಂಡರಿನಲ್ಲಿ ಬಹಳ ಕಡಿಮೆ. ಹೀಗೆ ಇಷ್ಟಬಂದ ಚಿತ್ರಗಳನ್ನು ನೋಡುತ್ತಿದ್ದವಳಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸನ ಜಗತ್ತಿನ ಸಿನಿಮಾಗಳನ್ನು ಕಣ್ಣೆದುರಲ್ಲಿ ತಂದು ನಿಲ್ಲಿಸಿತ್ತು. ಹಾಗೇ ನೋಡಿದ ಕೆಲವು ಚಿತ್ರಗಳ ಬಗ್ಗೆ ಬರೆಯದೆ ಇರಲು ಸಾಧ್ಯವೇ ಇಲ್ಲ ಎಂದಾಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರಗಳು ಮತ್ತು ತೆಲುಗು, ತಮಿಳು, ಮಲಯಾಳಂ ಚಿತ್ರಗಳನ್ನು ನಾನು ಕಂಡ ಬಗೆ ಮತ್ತು ಅವುಗಳೊಡನೆ ನನ್ನ ಸಂವಾದವನ್ನು ಬರೆಯಲಾರಂಭಿಸಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಸಿದ್ಧವಾದ ಚಲನಚಿತ್ರ ಇನ್ಯಾವುದೋ ಮೂಲೆಯಲ್ಲಿರುವವರೊಂದಿಗೆ ಮಾತನಾಡಲು ಸಾಧ್ಯ ಎನ್ನುವುದರಲ್ಲಿ ಸಿನಿಮಾದ ಮಾಯಾಲೋಕ ಇದೆ. ರಾಜ್ಯ, ದೇಶ, ಖಂಡಗಳಾಚೆಗೂ ಮನುಷ್ಯರ ಬದುಕು, ಪ್ರೀತಿ, ಪ್ರೇಮ, ನೋವು, ಅವಮಾನ, ತಲ್ಲಣ ಮೂಲಭೂತವಾಗಿಒಂದೇ ಎನ್ನುವುದು ನನ್ನ ನಂಬಿಕೆ. ಹಾಗಾಗಿಯೇ ಈ ಕಥೆಗಳು ನಮ್ಮೆಲ್ಲರ ಕಥೆಯೂ ಹೌದು\" ಎಂದಿದ್ದಾರೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv id=\"buy_now_section\"\u003e\n\u003csection class=\"synopsys section2\"\u003e\n\u003cdiv id=\"\" class=\"container buylink\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"w-100\"\u003e\n\u003cdiv class=\"h2-head\"\u003e\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003c\/div\u003e","brand":"N. Sandhya Rani","offers":[{"title":"Default Title","offer_id":42115821437187,"sku":"HB00000706","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at1.31.55PM.jpg?v=1638086661"},{"product_id":"lipia-patragalu-kannada-book","title":"ಲಿಪಿಯ ಪತ್ರಗಳು","description":"\u003cp data-mce-fragment=\"1\"\u003eಜಯನಗರದ ಹುಡುಗಿಯಾಗಿ ಸ್ವಚ್ಚಂದವಾಗಿ ಹಾರಾಡಿಕೊಂಡಿದ್ದ ನನಗೆ ಮೂರು ವರ್ಷಗಳ ಹಿಂದೆ ಮದುವೆಯಾಯಿತು. ಮದುವೆಯಾದ ಮೇಲೆ ಜವಾಬ್ದಾರಿ ಜಾಸ್ತಿ ಎಂದು ಅಮ್ಮ ಹೇಳಿದ್ದರೂ ನನಗೆ ಅದ್ಯಾವುದು ಅಷ್ಟಾಗಿ ತಟ್ಟಲ್ಲಿಲ್ಲ. ಮಾಡಿದ್ದು ತಿಂದು ಸುಮ್ಮನೆ ನನ್ನ ಕೆಲಸ ನೋಡಿಕೊಂಡು ಹೋಗುವ ಜಾಯಮಾನದವಳಾದ ನನಗೆ ಅತ್ತೆ ಮನೆಯಲ್ಲಿ ಒಂದು ಕಾರ್ಯಕ್ರಮ, ಅಮ್ಮನ ಮನೆಯಲ್ಲಿ ನಡೆಯುವ ಕಾರ್ಯಕ್ರಮ ಒಂದೇ ದಿವಸ ಬಂದು ಎಲ್ಲಿಗೆ ಹೋಗಲಿ ಎಂಬ ದ್ವಂದ್ವ ಶುರುವಾದಾಗಲೇ ಈ ಐಡಿಯಾ ಹೊಳೆದಿದ್ದು. ನನ್ನ ಮನಸ್ಸು ಬೇರೇನೋ ಮಾಡು ಅಂದರೂ ನನ್ನ ಬುದ್ಧಿ ಬೇರೇನೋ ಮಾಡಿರುತ್ತದೆ. ಅಥವಾ ಬುದ್ಧಿ ಅಂದುಕೊಂಡಿದ್ದನ್ನು ಮನಸ್ಸು ವಿಪರೀತ ಯೋಚನೆ ಮಾಡಿ ಡ್ರಾಮಾ ಮಾಡಿಸಿ ಇನ್ನೇನೋ ಮಾಡಿರಿಸುತ್ತದೆ. ಇದು ದಿನ ನಿತ್ಯದ ದ್ವಂದ್ವ. ಇದು ಬರಿ ಹೆಣ್ಣುಮಕ್ಕಳಿಗೆ ಆಗುವಂಥದ್ದಾ ಎಂಬ ಪ್ರಶ್ನೆಗೆ ನಾನು ಉತ್ತರಿಸಲಾರೆ ಯಾಕೆಂದರೆ ಅಪ್ಪ, ಅಮ್ಮನನ್ನ ಹಚ್ಚಿಕೊಂಡು ಮದುವೆಯಾಗಿ ಬೇರೆ ಮನೆಗೆ ಹೋಗಿರುವ ಗಂಡು\/ಹೆಣ್ಣು ಇಬ್ಬರಲ್ಲೂ ಈ ಕನ್ಫ್ಯೂಷನ್‌ ಕಾಡಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪತ್ರ ಬರೆಯೋದು ನನಗೆ ತಾತ ಹೇಳಿಕೊಟ್ಟ ವಿದ್ಯೆ. ಸೋದರತ್ತೆ ಒಬ್ಬರು ಬೇರೆ ಊರಲ್ಲಿದ್ದಾಗ ಇನ್ಲ್ಯಾಂಡ್‌ ಲೆಟರಿನಲ್ಲಿ ಮನೆಯ ಎಲ್ಲಾ ವಿಚಾರಗಳನ್ನೂ ಬರೆಯಬೇಕಾಗುತ್ತಿತ್ತು. ಮೊಮ್ಮಗಳಿಗೆ ಕನ್ನಡ ಬರೆಯೋದು ಅಭ್ಯಾಸವಾಗಲಿ ಎಂದು ಹಾಳೆ ಮಡಿಕೆಯ ಜಾಗದಲ್ಲಿ ಸ್ವಲ್ಪ ಸ್ವಲ್ಪವೇ ಕನ್ನಡದಲ್ಲಿ ಬರೆಯಲು ತಾತ ಅವಕಾಶ ಮಾಡಿಕೊಡುತ್ತಿದ್ದರು. ಕೆಲವೊಮ್ಮೆ ತಪ್ಪುಗಳಾಗುತ್ತಿತ್ತು. ಆದರೆ ತಾತ ಕೈಹಿಡಿದು ಬರೆಸುತ್ತಿದ್ದರು. ಈ ಪುಸ್ತಕವನ್ನೂ ಅವರೇ ಬರೆಸಿದ್ದಾರೆ ಎಂಬ ನಂಬಿಕೆ ನನಗೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಲಿಪಿ ಮತ್ತು ಲಿಖಿತಾ ಅವಳಿ ಜವಳಿ, ಒಂದು ನಾಣ್ಯದ ಎರಡು ಮುಖಗಳು. ಎಲ್ಲಾ ಮನುಷ್ಯರಿಗೂ ಆ ಎರಡು ಮುಖಗಳು ಇರುತ್ತವೆ. ಒಂದು ಬಹಳ ಭಾವುಕವಾದದ್ದು ಮತ್ತೊಂದು ಬಹಳ ಪ್ರಾಕ್ಟಿಕಲ್‌ ಆದದ್ದು. ಒಂದೊಂದು ಸಂದರ್ಭದಲ್ಲಿ ಒಂದೊಂದು ಮುಖ ಅನಾವರಣ ಆಗುತ್ತದೆ. ಇಲ್ಲಿ ಎರಡು ಹೆಣ್ಣುಮಕ್ಕಳು ಒಟ್ಟಿಗೆ ಹುಟ್ಟಿದರೂ ಅವರ ಗುಣ ಸ್ವಭಾವವೇ ಬೇರೆ, ಅವರು ಎಲ್ಲಾ ವಿಷಯಗಳನ್ನು ನೋಡುವ ಕೋನವೇ ಬೇರೆ. ಬಾಲ್ಯದಲ್ಲಿ ಆದ ಆನುಭವಗಳು ಒಬ್ಬಳನ್ನು ಮೆತ್ತಗೆ ಮಾಡಿಸಿತು, ಇನ್ನೊಬ್ಬಳನ್ನ ಗಟ್ಟಿಮಾಡಿಸಿತು, ಟೀನೇಜಿನಲ್ಲಿ ನೋಡಿದ ವಿಷಯಗಳು, ಅನುಭವಿಸಿದ ಕಿರುಕುಳಗಳನ್ನು ವಿಶ್ಲೇಷಣೆ ಮಾಡುವ ರೀತಿಯೇ ಬೇರೆ, ಅಥವಾ ಲವ್‌, ಮದುವೆ, ಸೆಕ್ಸ್‌ ಮತ್ತು ಒಂಟಿತನವನ್ನು ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ. ಭಾವುಕರಾಗಿ ಯೋಚಿಸಿದಾಗ ಬರುವ ಅಭಿಪ್ರಾಯಗಳು ಮತ್ತು ವ್ಯಾವಹಾರಿಕವಾಗಿ ಯೋಚಿಸಿದಾಗ ಬರುವ ಅಬಿಪ್ರಾಯಗಳು ಬೇರೆಯೇ. ಕೆಲವರಿಗೆ ಅದು ಸರಿ, ಕೆಲವರಿಗೆ ಇದು ಸರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಲಿಪಿ ಮಕ್ಕಳ ಬಗ್ಗೆ, ಪೀರಿಯಡ್ಸ್‌ ಬಗ್ಗೆ, ಲಿಖಿತಾ ಸಂಪ್ರದಾಯ, ದೇವರ ಬಗ್ಗೆ ಬಹಳ ಪ್ಯಾಷನೇಟಾಗಿ ಬರೆಯುತ್ತಾರೆ. ಇವಷ್ಟಕ್ಕೂ ಆಲ್ಟರ್‌ನೇಟ್‌ ಆಯಾಮ ಇದ್ದೇ ಇರುತ್ತದೆ. ಅವರಿಬ್ಬರು ಅನುಭವಿಸಿದ ಡ್ರೆಸ್‌ ಕೋಡಿನ ಹಿಂಸೆಯಾಗಲಿ ಪ್ರಯಾಣ ಮಾಡುವಾಗ, ತಿನ್ನುವಾಗ, ಅವರ ಹವ್ಯಾಸಗಳು, ವೃದ್ಧಾಪ್ಯ ಮತ್ತು ಸಾವಿನ ಬಗ್ಗೆಯೂ ವಿಸ್ತಾರವಾಗಿ ಬರೆದು ತಮ್ಮ ಅಭಿಪ್ರಾಯ ಮತ್ತು ತಮ್ಮದೇ ವಾದವನ್ನು ಮಂಡಿಸುತ್ತಾರೆ. ನಾನು ಅರಿತಂತೆ ಎಲ್ಲಾ ಹೆಣ್ಣುಮಕ್ಕಳಲ್ಲೂ ಲಿಪಿ ಮತ್ತು ಲಿಖಿತಾ ಇರುತ್ತಾರೆ. ಒಬ್ಬರಿಗೊಬ್ಬರು ಮಾತಾಡಿದರೆ ಮಾತ್ರ ಜೀವನ ಸುಗಮ ಎಂಬುದು ನನ್ನ ನಂಬಿಕೆ.\u003c\/p\u003e\n\u003cp data-mce-fragment=\"1\"\u003e \u003cbr data-mce-fragment=\"1\"\u003e\u003c\/p\u003e\n\u003cp data-mce-fragment=\"1\"\u003e\u003cstrong data-mce-fragment=\"1\"\u003e-ಮೇಘನಾ ಸುಧೀಂದ್ರ\u003c\/strong\u003e\u003c\/p\u003e\n\u003cp data-mce-fragment=\"1\"\u003e\u003cstrong data-mce-fragment=\"1\"\u003eಸಾವಣ್ಣ ಪ್ರಕಾಶನ\u003c\/strong\u003e\u003c\/p\u003e","brand":"Meghana Sudhindra","offers":[{"title":"Default Title","offer_id":42115824451843,"sku":"HB00000705","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e004e770-6bf2-4926-9d7d-253267c16cf8.jpg?v=1638086850"},{"product_id":"ellara-mane-dose-stories-dr-virupaksha-devaramane-kannada-book","title":"ಎಲ್ಲರ ಮನೆ ದೋಸೆ","description":"\u003cspan data-mce-fragment=\"1\"\u003e\u003cspan data-mce-fragment=\"1\"\u003eವಿರೂಪಾಕ್ಷ ದೇವರಮನೆ ಅವರು ಬರೆದಿರುವ ಕಥಾ ಸಂಕಲನ ”ಎಲ್ಲರ ಮನೆ’. \u003c\/span\u003e\u003c\/span\u003e\n\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv id=\"synopsys\" class=\"col-sm relative\"\u003e\n\u003cp\u003e\u003cspan\u003eಬರಹಗಾರ ಜೋಗಿ ಅವರು ಈ ಕೃತಿಯ ಕುರಿತು \"ದೇವರಮನೆಯಿಂದ ಮನಸಿನ  ಅರಮನೆಗೆ. ಏನನ್ನೂ ಹೇಳದೇ ಎಲ್ಲವನ್ನೂ ಹೇಳುವ ಕತೆಗಳೆಂದರೆ ನನಗಿಷ್ಟ. ನಮ್ಮನ್ನು ಅನಾದಿಕಾಲದಿಂದ ಪೊರೆಯುತ್ತಾ ಬಂದದ್ದು ಇಂಥ ಪುಟ್ಟ ಪುಟ್ಟ ಕತೆಗಳೇ. ಅವನ್ನು ದೂರದಿಂದಲೇ ತೋರಿಸಿ ನಮ್ಮ ಕಣ್ಣು ಅವುಗಳ ಮೇಲೆ ಕೀಲಿಸುವಂತೆ ಮಾಡುವುದಕ್ಕೆ ಕಥನಕಾರರು ಬೇಕು.\u003cbr\u003eಡಾ. ವಿರೂಪಾಕ್ಷ ದೇವರಮನೆ, ತಾವು ಬದುಕಿನಲ್ಲಿ ಕಂಡ, ಗ್ರಹಿಸಿದ, ಊಹಿಸಿದ, ನಡೆದ, ನಡೆಯಬಹುದಾದ, ಮನಸ್ಸಿನೊಳಗೇ ನಡೆದ ಘಟನೆಗಳಿಗೆ ಕಥೆಯ ರೂಪ ಕೊಟ್ಟಿದ್ದಾರೆ. \u003cbr\u003eಇದೊಂದು ರೀತಿಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಥರದ ಕತೆಗಳು. ನಮ್ಮೊಳಗನ್ನು ಅವರು ಕಥೆಯೆಂಬ ಮಾಪನದಲ್ಲಿ ಸ್ಕ್ಯಾನ್ ಮಾಡಿ, ನಿಮ್ಮ ಒಳಗಿರುವುದು ಇದು ಅಂತ ಹೇಳುತ್ತಾರೆ. ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕಾದವರು ನಾವು. ಇವತ್ತು ನಮಗೆ ಎರಡು ಥರದ ಕನ್ನಡಿಯೂ ಬೇಕು. ಹೊರಗಿನದನ್ನು ತೋರುವ ಪಾರದರ್ಶಕವಾದ ಕಿಟಕಿಯ ಗಾಜು, ನಮ್ಮನ್ನೇ ನಮಗೆ ತೋರುವ ಒಂದು ಬದಿಗೆ ಪಾದರಸ ಬಳಿದ ಕನ್ನಡಿ ಗಾಜು. ಈ ಕತೆಗಳು ಏಕಕಾಲಕ್ಕೆ ಕಿಟಕಿಯೂ ಹೌದು, ಕನ್ನಡಿಯೂ ಹೌದು \" ಎಂದಿರುವುದು ಈ ಕೃತಿಯ ವಿಶೇಷತೆಯನ್ನು ತಿಳಿಸುತ್ತದೆ. \u003c\/span\u003e\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e","brand":"Dr. Virupaksha Devaramane","offers":[{"title":"Default Title","offer_id":42115832807683,"sku":"HB00000703","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_10.jpg?v=1689084678"},{"product_id":"ellindalo-bandavaru-bharathi-sawanna","title":"ಎಲ್ಲಿಂದಲೋ ಬಂದವರು","description":"ಕೊಡುಕೊಳ್ಳುವ ಈ ವ್ಯಾವಹಾರಿಕ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ಯಾರೋ ಎದುರಾಗಿ ನಮಗೆ ಸಹಾಯ ಹಸ್ತ ಚಾಚುತ್ತಾರೆ, ಯಾರೋ ನಾನಿದ್ದೇನೆ ಸುಮ್ಮನಿರು ಎಂದು ಭರವಸೆ ಕೊಟ್ಟು ಬಿಡುತ್ತಾರೆ, ಯಾರೋ this too shall pass ಎನ್ನುವ ಆತ್ಮೀಯ ನುಡಿಗಳನ್ನು ಆಡಿಬಿಡುತ್ತಾರೆ. ಅದು ಮಳೆಯಾಗುವ ಮುನ್ನ ಗಂಟೆಗಟ್ಟಲೆ ಕಟ್ಟುವ ಮೋಡದಂತಲ್ಲ... ಕಗ್ಗತ್ತಲಿನ ಹಾದಿಯಲ್ಲಿ ಒಬ್ಬೊಂಟಿ ನಡೆವಾಗ ಸುಮ್ಮನೆ ಸುಳಿದು ಮಾಯವಾಗುವ ಕೋಲ್ಕಿಂಚಿನಂತೆ!\u003cbr data-mce-fragment=\"1\"\u003e\u003cbr data-mce-fragment=\"1\"\u003eಕಣ್ಣು ಕೋರೈಸುವ ಬೆಳಕು ನೀಡಿ ಮಾಯವಾದ ನಂತರ ಹಾದಿ ತುಸು ನಿಚ್ಚಳವಾಗಿ, ನಡೆಯಲು ಸುಗಮವಾಗಿಬಿಡುತ್ತದೆ. ಆ ಕ್ಷಣದಲ್ಲಿ ಅವರು ಸಹಾಯ ಮಾಡುವ ಅಗತ್ಯವೇನೂ ಇರುವುದಿಲ್ಲ. ಆದರೂ ಮಾಡುತ್ತಾರೆ. ಕೇಳಿದರೇ ಕೊಡಲು ಕೈ ತಡೆಯುವವರ ಜಗತ್ತಿನಲ್ಲಿ ಇಂಥ ಅಪರೂಪದವರೂ ಎದುರಾಗುವುದು ನನ್ನನ್ನು ಯಾವತ್ತೂ ವಿಸ್ಮಯಳಾಗಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'Be the reason someone believes in the goodness of people' ಎಂಬ ಮಾತಿದೆಯಲ್ಲ, ಅದರಂತೆ ನಡೆದುಕೊಂಡವರು! ಹೂ ಗುಚ್ಛವನ್ನು ಒಂದು ಹೂದಾನಿಯಲ್ಲಿಟ್ಟು, ಭರ್ತಿ ನೀರು ತುಂಬಿಸಿ ಕಾಂಡದ ತುದಿ ಮಾತ್ರ ದಿನವೂ ತುಸುವೇ ಕತ್ತರಿಸುತ್ತಿದ್ದರೆ ಎಷ್ಟೋ ಕಾಲ ಹೂವು ಬಾಡದೇ ಉಳಿಯುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನೆನಪುಗಳೂ ಹಾಗೆಯೇ...\u003cbr data-mce-fragment=\"1\"\u003e'ಎಲ್ಲಿಂದಲೋ ಬಂದವರು' ಅಂಥವರ ನೆನಪಿನ ಗುಚ್ಛ!\u003cbr data-mce-fragment=\"1\"\u003e\u003cbr data-mce-fragment=\"1\"\u003e- ಭಾರತಿ ಬಿ ವಿ","brand":"Bhatrati B. V.","offers":[{"title":"Default Title","offer_id":42115835756803,"sku":"HB00000702","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_58c118c8-f681-49ec-bcc7-ec89d94d5cac.jpg?v=1643092088"},{"product_id":"jagavane-jayisona-kannada-book","title":"ಜಗವನೆ ಜಯಿಸೋಣ","description":"\u003cspan data-mce-fragment=\"1\"\u003eಒಂದು ಕತೆಯ ಪ್ರಕಾರ ಹದಿನೆಂಟು ಅಡಿ ಎತ್ತರದ ಅಮೃತಶಿಲೆ ಹಲವು ವರ್ಷಗಳ ಕಾಲ ಹಾಗೆಯೇ ಬಿದ್ದುಕೊಂಡಿತ್ತು. ವಾಸ್ತವದಲ್ಲಿ, ಅದು ಮೈಕೆಲೆಂಜೆಲೊ ಹುಟ್ಟುವುದಕ್ಕೂ ಎಷ್ಟೋ ಹಿಂದಿನಿಂದಲೇ ಅಲ್ಲಿತ್ತು. ಲಿಯೋನಾರ್ಡೋ ಡಾವಿಂಚಿಯಂಥ ಮಹಾನ್‌ ಕಲಾವಿದರನ್ನೂ ಆಹ್ವಾನಿಸಿ ಈ ಶಿಲೆಯಿಂದ ಶಿಲ್ಪಕೃತಿಯನ್ನು ರಚಿಸಲು ಕೇಳಿಕೊಳ್ಳಲಾಗಿತ್ತು. ಅವರೆಲ್ಲ ಅದರತ್ತ ನೋಡಿ ಅದು ನಿರುಪಯುಕ್ತವೂ ದೋಷಪೂರ್ಣವೂ ಆಗಿದೆ ಎಂದು ಕೈಚೆಲ್ಲಿದರು. ಅದರಿಂದ ಏನನ್ನೂ ಕೆತ್ತಲು ಸಾಧ್ಯವಿಲ್ಲ ಎಂದರವರು. ಕೆಲವು ವರ್ಷಗಳ ಬಳಿಕ, ಮೈಕೆಲೆಂಜೆಲೊ ಆ ದೋಷಪೂರಿತವೂ ನಿರುಪಯುಕ್ತವೂ ಆದ ಶಿಲೆಯನ್ನು ಕೆತ್ತುವ ಕೆಲಸದಲ್ಲಿ ತೊಡಗಿ ಅತ್ಯದ್ಭುತವಾದ ಕಲಾಕೃತಿಯೊಂದನ್ನು ನಿರ್ಮಿಸಿದ. ಅವನು ‘ಡೇವಿಡ್‌’ ಎಂಬ ಆ ಶಿಲ್ಪದ ಕೆತ್ತನೆ ಮಾಡುತ್ತಿರುವಾಗ, ಒಬ್ಬ ಪುಟ್ಟ ಬಾಲಕ ಅವನ ಬಳಿಗೆ ಹೋಗಿ “ಯಾಕೆ ನೀನು ಈ ಕಲ್ಲನ್ನು ಬಡಿಯುತ್ತಿರುವೆ” ಎಂದು ಕೇಳಿದನಂತೆ. ಅದಕ್ಕೆ ಮೈಕೆಲೆಂಜೆಲೊ ಕಲ್ಲಿಗೆ ಇನ್ನೂ ಬಲವಾಗಿ ಬಡಿಯುತ್ತಾ “ಓ ಬಾಲಕನೆ, ಈ ಶಿಲೆಯಲ್ಲಿ ಒಂದು ದೈವವಿದೆ. ನಾನು ಆತನನ್ನು ಬಿಡುಗಡೆಗೊಳಿಸುತ್ತಿರುವೆ” ಎಂದನಂತೆ. ನೀವು ಯೋಚಿಸಿ: ನಾವೆಲ್ಲ ಆ ಅದ್ಭುತ ಶಿಲೆಯ ಹಾಗೆಯೇ ಅಲ್ಲವೇ? ನಮ್ಮೆಲ್ಲರಲ್ಲೂ ಓರ್ವ ಪ್ರತಿಭಾವಂತನಿದ್ದಾನೆ. ಒಳಗೊಬ್ಬ ವಿಜೇತನಿದ್ದಾನೆ; ಪ್ರಕಟಗೊಳ್ಳಲು ಕಾಯುತ್ತಿದ್ದಾನೆ. ನಾವು ಯಾರೂ ದೋಷಿಗಳಲ್ಲ, ನಿರುಪಯುಕ್ತರಲ್ಲ; ಬಹಳಷ್ಟು ಸಂದರ್ಭಗಳಲ್ಲಿ, ಓರ್ವ ಯೋಗ್ಯ ಶಿಲ್ಪಿಯ ಬರವಿಗಾಗಿ ನಾವು ಕಾಯುತ್ತಿರುತ್ತೇವೆ; ಆ ಶಿಲ್ಪಿ ಒರಟಾದ ಶಿಲೆಯನ್ನು ಕೆತ್ತಿ ಒಳಗಿರುವ ವಿಜಯಿಯನ್ನು ಹೊರಗೆ ತರಲಿ ಎಂದು ಕಾಯುತ್ತಿರುತ್ತೇವೆ.\u003c\/span\u003e\n\u003cp data-mce-fragment=\"1\"\u003e \u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಜಗವನೆ ಜಯಿಸೋಣ’ ಕೃತಿ ನಿಮ್ಮಲ್ಲಿರುವ ನಾಯಕ ತನ್ನನ್ನು ತಾನು ಕಂಡುಕೊಳ್ಳಲು ಸಹಕರಿಸುತ್ತದೆ. ನಮ್ಮಲ್ಲಿ ಅಪಾರವಾದ ಅಂತಃಸತ್ತ್ವವಿದೆ. ನಾವೆಲ್ಲ ಇನ್ನೂ ಉತ್ತಮರಾಗಬಹುದು. ಈ ಕೃತಿಯು ಅಂಥ ಕೆಲವು ಮಾರ್ಗಸೂಚಿಗಳನ್ನು ಕೊಡುತ್ತದೆಂದು ನಾನು ನಂಬಿದ್ದೇನೆ. ಅದು ನಿಮ್ಮನ್ನು ಬದಲಾಯಿಸುವುದಿಲ್ಲ. ಆದರೆ ನೀವು ಏನಾಗಬೇಕಾಗಿದೆಯೋ ಅದಾಗಲು ಈ ಕೃತಿ ಸಹಕಾರಿ. ಉಳಿದವರು ತಮ್ಮ ಪೂರ್ಣ ಅಂತಃಸತ್ತ್ವವನ್ನು ಬೆಳೆಸಿಕೊಳ್ಳಲು ಬೇಕಾದ ನೆರವು ನೀಡುವ ನಿಮಗೆ ಈ ಪುಸ್ತಕ ನೆರವಾಗುತ್ತದೆ. ‘ಜಗವನೆ ಜಯಿಸೋಣ’ ಎಂಬ ಕೃತಿಯು ನಿಜಕ್ಕೂ ಕತೆಗಳ ಸಂಕಲನ, ನನ್ನ ಜೀವನ ಪರಿವರ್ತನೆಗೆ ಕಾರಣವಾದ ಕತೆಗಳು; ನಿಮ್ಮ ಜೀವನದಲ್ಲೂ ಪರಿವರ್ತನೆಯುಂಟು ಮಾಡಬಲ್ಲ ಕತೆಗಳು. ನಾನು ಬಹಳಷ್ಟು ಮುಖ್ಯ ಪಾಠಗಳನ್ನು ನನ್ನ ಮೇಲಧಿಕಾರಿಗಳಿಂದ ಕಲಿಯದೆ ಮಾರಾಟ ಪ್ರತಿನಿಧಿಗಳು, ಲಿಫ್ಟ್ ನಿಯಂತ್ರಕರು, ಕರಣಿಕರು ಹಾಗೂ ಕಾರ್ಖಾನೆಯ ಕೆಲಸಗಾರರಿಂದ ಕಲಿತಿದ್ದೇನೆ. ಬಹಳಷ್ಟು ಸಂದರ್ಭಗಳಲ್ಲಿ ಸಾಮಾನ್ಯ ಜನರೇ ಅಸಾಧಾರಣ ನಾಯಕರು. ನಾಯಕರು ನಾಯಕರನ್ನು ಸೃಷ್ಟಿಸುತ್ತಾರೆ, ಅನುಯಾಯಿಯಗಳನ್ನಲ್ಲ ಎಂಬ ಹೇಳಿಕೆ ಸರಿಯಾಗಿದೆ. ಈಗಲೆ ಕೆತ್ತನೆ ಶುರುಮಾಡಿ, ಸಾವಿರ ನೇತಾರರು ಮೂಡಿ ಬರಲಿ. ನೆನಪಿಡಿ,\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eನೀವು ಏನಾಗಬಹುದಿತ್ತೋ ಅದಾಗಲು ಇನ್ನೂ ಕಾಲಮಿಂಚಿಲ್ಲ.\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಸಾವಣ್ಣ ಪ್ರಕಾಶನ\u003c\/span\u003e\u003c\/p\u003e\n\u003cp data-mce-fragment=\"1\"\u003e \u003c\/p\u003e","brand":"Dr. Mahabaleshwara Rao","offers":[{"title":"Default Title","offer_id":42115839590659,"sku":"HB00000701","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_00b56aa9-5eac-4958-85b0-f002ba0a89f2.jpg?v=1638087858"},{"product_id":"gate-keeper","title":"ಗೇಟ್ ಕೀಪರ್","description":"\u003csection class=\"synopsys section2\" data-mce-fragment=\"1\"\u003e\n\u003cdiv class=\"container\" data-mce-fragment=\"1\"\u003e\n\u003cdiv class=\"container-fluid\" data-mce-fragment=\"1\"\u003e\n\u003cdiv class=\"row\" data-mce-fragment=\"1\"\u003e\n\u003cdiv class=\"col-sm relative\" id=\"synopsys\" data-mce-fragment=\"1\"\u003e\n\u003cp data-mce-fragment=\"1\"\u003eಜಗತ್ತಿನ ಹತ್ತಾರು ಭಾಷೆ, ನೂರಾರು ಬದುಕಿನ ಚಿತ್ರಣಗಳಿರುವ ಕೃತಿ ‘ಗೇಟ್‌ ಕೀಪರ್‌’. ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ, ಮಲೆಯಾಳಂ, ಇರಾನ್‌, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್‌ ಮುಂತಾದ ದೇಶ-ಭಾಷೆಗಳ ಸಿನಿಮಾಗಳ ಕುರಿತು ಚಿತ್ರಣ ನೀಡಿರುವ ಕೃತಿ ಇದಾಗಿದೆ. ಹಲವಾರು ಕತೆಗಳನ್ನು ಈ ಕೃತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಜತೆಗೆ ನಿಮ್ಮ ಬೆರಗಿನ ನೋಟಗಳಿಗೆ ದೃಶ್ಯವಾಗುತ್ತದೆ. ಕಂಡರಿಯದ ದೇಶ-ವಿದೇಶ ಸಿನಿ ಕತೆಗಳತ್ತ ನಿಮ್ಮನ್ನು ಸೆಳೆಯುತ್ತದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv id=\"buy_now_section\" data-mce-fragment=\"1\"\u003e\n\u003csection class=\"synopsys section2\" data-mce-fragment=\"1\"\u003e\n\u003cdiv class=\"container buylink\" id=\"\" data-mce-fragment=\"1\"\u003e\n\u003cdiv class=\"container-fluid\" data-mce-fragment=\"1\"\u003e\n\u003cdiv class=\"row\" data-mce-fragment=\"1\"\u003e\n\u003cdiv class=\"w-100\" data-mce-fragment=\"1\"\u003e\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003c\/div\u003e","brand":"R. Keshavmurthy","offers":[{"title":"Default Title","offer_id":42115850731779,"sku":"HB00000699","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at1.59.37PM.jpg?v=1638088477"},{"product_id":"hettavare-makkala-bagge-kaalaji-vahisi","title":"ಹೆತ್ತವರೇ, ಮಕ್ಕಳ ಬಗ್ಗೆ ಕಾಳಜಿ ವಹಿಸಿ","description":"ಕೇವಲ ಹೆತ್ತವರಾಗಬೇಡಿ; ಹೃದಯವಂತ ಹೆತ್ತವರಾಗಿರಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಮಕ್ಕಳು ಸಂತೋಷದಿಂದಿರಬೇಕು, ಸುರಕ್ಷಿತವಾಗಿರಬೇಕು ಎಂದು ಹೆತ್ತವರು ಬಯಸುತ್ತಾರೆ. ಯಾವುದೇ ತಂದೆ ತಾಯಿ ಉದ್ದೇಶ ಪೂರ್ವಕವಾಗಿ ಮಕ್ಕಳಿಗೆ ಕಿರುಕುಳ, ಹಿಂಸೆ, ನೋವು ಕೊಡುವುದಿಲ್ಲ. ಆದರೆ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ತೋಲ ತಪ್ಪಿದ ಸಂವಹನದಿಂದ ಮಕ್ಕಳ ಹಾಗೂ ಹೆತ್ತವರ ಬಾಳು ಗೋಳಾಗುತ್ತದೆ. ಮನೆ ಕುರುಕ್ಷೇತ್ರವಾಗುತ್ತದೆ. ಮಕ್ಕಳು ವಿಧೇಯರೂ ಸಭ್ಯರೂ ಸಂಸ್ಕಾರವಂತರೂ ಆಗಬೇಕು ಎಂದು ಹಿರಿಯರು ಬಯಸುತ್ತಾರೆ. ಆದರೆ ಬಿರುಕು ಮೂಡಿದ ಸಂವಹನದಿಂದಾಗಿ ಮಕ್ಕಳು ಒರಟರೂ ಅವಿಧೇಯರೂ ಆಗುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕರುಣೆ, ಸಹಾನುಭೂತಿ, ಬದ್ಧತೆ ಹಾಗೂ ಧೈಯ್ಯ ಸಾಹಸ ಬೆರೆತ ಮನುಷ್ಯರಾಗಲು ಮಕ್ಕಳಿಗೆ ಹೆತ್ತವರು ಸಹಾಯ ಮಾಡಬಹುದು. ಈ ಮಾನವೀಯ ಗುರಿಗಳ ಸಾಧನೆಗೆ ಹೆತ್ತವರು ಮಾನವೀಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಕೇವಲ ಪ್ರೀತಿಯೊಂದೇ ಸಾಲದು; ಜಾಣೆಯೂ ಬೇಕು. ಮಕ್ಕಳು ಹಾಗೂ ಹದಿಹರೆಯದವರ ಜೊತೆಗಿನ ಸಂಬಂಧಗಳನ್ನು ನಿರ್ವಹಣೆ ಮಾಡುವ ಕೌಶಲಗಳನ್ನು ಹೇಗೆ ಕರಗತ ಮಾಡಿಕೊಳ್ಳಬೇಕು ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದೇ ಈ ಕೃತಿಯ ಸಾರಸರ್ವಸ್ವ ಒಂದು ಸಮಸ್ಯೆಯನ್ನು ಧನಾತ್ಮಕವಾಗಿ ಪರಿಶೀಲಿಸಿದಾಗ ಒದಗಬಹುದಾದ ಧನಾತ್ಮಕ ಪರಿಣಾಮಗಳನ್ನು ಹತ್ತಾರು ನಿದರ್ಶನಗಳ ಮೂಲಕ ಚಿತ್ರಿಸಿದ ಈ ಕೃತಿ ಹೆತ್ತವರ ಪಾಲಿಗೆ ಪ್ರಾಯೋಗಿಕ ಸ್ವರೂಪದ ಅಪೂರ್ವ ಕೈಪಿಡಿ. ಪರಸ್ಪರ ಗೌರವ ಹಾಗೂ ಘನತೆಯೊಂದಿಗೆ ಮಕ್ಕಳ ಜೊತೆ ಬದುಕಲು ಬಯಸುವ ಹೆತ್ತವರಿಗೆ ಈ ಕೃತಿಯು ಮೂಲಭೂತ ಸಂವಹನ ತತ್ವಗಳನ್ನು ಆಧರಿಸಿದ ನಿರ್ದಿಷ್ಟ ಸಲಹೆ ಸೂಚನೆಗಳನ್ನು ನೀಡುತ್ತದೆ. ಖ್ಯಾತ ಚಿಕಿತ್ಸಕ ಮನೋವಿಜ್ಞಾನಿ ಡಾ. ಹೈಮ್‌ಜಿನೋ ಅವರ ಗ್ರಂಥಗಳಿಂದ ಪ್ರಭಾವಿತರಾದ ಶಿಕ್ಷಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಅವರ ಲೇಖನಿಯಿಂದ ಮೂಡಿಬಂದಿರುವ ಈ ಕೃತಿ ಪಾಲಕರ, ಮನಃಪರಿವರ್ತನೆಗೆ ಸಹಕಾರಿಯಾಗಿದೆ.","brand":"Dr. Mahabaleshwara Rao","offers":[{"title":"Default Title","offer_id":42115856859395,"sku":"HB00000698","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at2.07.14PM.jpg?v=1638088948"},{"product_id":"missed-kaala-gopal-yadagere","title":"ಮಿಸ್ಡ್‌ ಕಾಲ","description":"ಬಾಲ್ಯದಲ್ಲಿನ ತುಂಟ ಹುಡುಗರ ಕೀಟಲೆಗಳು, ಅವರ ಕ್ರಿಯಾಶೀಲತೆಯ ಸಾಹಸಗಳು ಆಸಕ್ತಿ ಕೆರಳುವಂತೆ ಮಾಡುತ್ತದೆ. ಆಗಿನ ನಂಬಿಕೆಗಳು ಅಚ್ಚರಿ, ನೋವು, ವಿಷಾದ ಎಲ್ಲವನ್ನೂ ಹುಟ್ಟಿಸುತ್ತದೆ. ಹಳೆ ತಲೆಮಾರು ಇದನ್ನು ಓದಿದಾಗ ಮರೆತು ಹೋದ ಜಾಗವನ್ನೆಲ್ಲಾ ಒಮ್ಮೆ ಸುತ್ತಾಡಿ ಬಂದಂತೆ, ಹೊಸ ತಲೆಮಾರು ಓದಿದಾಗ ಹೀಗೆಲ್ಲಾ ಇತ್ತಾ ಎಂದು ಚಕಿತಗೊಳಿಸುವಂತೆ ಆಗುತ್ತದೆ. ಇದನ್ನೆಲ್ಲಾ ಗೋಪಾಲ್ ಯಡಗೆರೆ ಸರಳವಾಗಿ, ಆಸಕ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ.","brand":"Gopal Yadagere","offers":[{"title":"Default Title","offer_id":42115888414979,"sku":"HB00000697","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MissedKaalaCover.jpg?v=1747119027"},{"product_id":"saolannu-solisi-gopal-yadagere","title":"ಸೋಲನ್ನು ಸೋಲಿಸಿ","description":"ಶೇಕಡಾ ಒಂದರಷ್ಟು ಸ್ಫೂರ್ತಿ ಮತ್ತು ಶೇಕಡಾ ತೊಂಬತ್ತೊಂಬತ್ತರಷ್ಟು ಪರಿಶ್ರಮದಿಂದ ಯಶಸ್ಸು ಲಭಿಸುತ್ತದೆ ಎನ್ನುತ್ತಾರೆ ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್, ಹೌದು, ಸ್ಫೂರ್ತಿ ಇಲ್ಲದಿದ್ದರೆ ನಾವು ಪರಿಶ್ರಮ ಪಡಲು ಹೋಗುವುದಿಲ್ಲ, ಯಶಸ್ಸಿನ ಮಾತಂತೂ ಹತ್ತಿರ ಸುಳಿಯುವುದಿಲ್ಲ ಬಿಡಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಸ್ಫೂರ್ತಿಯನ್ನು ಪಡೆಯುವುದು ಹೇಗೆ? ಇದಕ್ಕಾಗಿ ನಾವೆಲ್ಲರೂ ಹೊರ ಜಗತ್ತಿನಲ್ಲಿಯೇ ಹುಡುಕಾಟ ನಡೆಸುತ್ತಾ ಬಂದಿದ್ದೇವೆ. ಮಹಾತ್ಮರ ಜೀವನ, ಇನ್ಯಾರದೋ ಹೇಳಿಕೆ, ಯಶಸ್ವಿ ಸಾಧಕರ ಏಳು-ಬೀಳು... ಹೀಗೆ ನಮ್ಮ ಹುಡುಕಾಟಕ್ಕೆ ಎಲ್ಲೆ ಇಲ್ಲ. ಇದೆಲ್ಲಾ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಹುಡುಕಾಟ ನಡೆಸಿದಂತೆ. ಖಂಡಿತಾ ಹೌದು,\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕ ಓದುತ್ತಾ ಹೋದಂತೆ ಇದು ನಿಮ್ಮ ಅರಿವಿಗೆ ಬರುತ್ತದೆ. ಜೀವನದಲ್ಲಿನ ಘಟನೆಗಳನ್ನು ಪಾಸಿಟಿವ್ ಆಗಿ ನೋಡಿ, ಅದರಿಂದಲೇ ಸ್ಫೂರ್ತಿ ಪಡೆಯುವುದು ಹೇಗೆಂಬದನ್ನು ಗೋಪಾಲ್ ಯಡಗೆರೆ ಇಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.\u003cbr data-mce-fragment=\"1\"\u003eನೀವೂ ಓದಿ, ಜೀವನದಲ್ಲಿನ ಸೋಲುಗಳನ್ನು ಸೋಲಿಸುತ್ತಾ, ಗೆಲುವಿನೆತ್ತರಕ್ಕೆ ಜಿಗಿಯಿರಿ...","brand":"Gopal Yadagere","offers":[{"title":"Default Title","offer_id":42115907027203,"sku":"HB00000694","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.00.25PM.jpg?v=1638092136"},{"product_id":"saaladalli-soladiri-jayadeva","title":"ಸಾಲದಲ್ಲಿ ಸೋಲದಿರಿ","description":"\u003cp\u003eಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು? ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ - ಈ ಪುಸ್ತಕದ ಜೀವಾಳ. ಒಟ್ಟಾರೆ ದೃಷ್ಟಿಯಿಂದ ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಪ್ರಾಯೋಗಿಕ ಟಿಪ್ಸ್ಗಳ ಜೊತೆಗೆ 'ಸಾಲದಲ್ಲಿ ಸೋಲದಿರಿ' ಎಂಬ ಈ ಪುಸ್ತಕದಲ್ಲಿ ನೀಡಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಾಸು-ಕುಡಿಕೆ' ಖ್ಯಾತಿಯ ಜಯದೇವ ಪ್ರಸಾದ ಮೊಳೆಯಾರರು ಐಐಎಂ, ಅಹಮದಾಬಾದ್ ಪದವೀಧರರು. ದೇಶ ವಿದೇಶಗಳಲ್ಲಿ ಬಿಸಿನೆಸ್ ಅನುಭವ ಉಳ್ಳ ಆರ್ಥಿಕ ಹಾಗೂ ಹೂಡಿಕಾ ತಜ್ಞರು, ಹಿಂದುಸ್ತಾನ್ ಲಿವರ್‌ನಲ್ಲಿ ಸೇವೆ ಸಲ್ಲಿಸಿ ಸದ್ಯ ವೃತ್ತಿಪರ ಮ್ಯಾನೇಜೆಂಟ್ ಸಲಹೆಗಾರರು.\u003c\/p\u003e","brand":"Jayadeva Prasada Moleyara","offers":[{"title":"Default Title","offer_id":42115913154819,"sku":"HB00000692","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9794379c-0066-49f6-b2e6-7d33ad161fe2.jpg?v=1663669791"},{"product_id":"mahabharatha-heliyoo-heladdu","title":"ಮಹಾಭಾರತ ಹೇಳಿಯೂ ಹೇಳದ್ದು","description":"ಮಹಾಭಾರತ ಓದಿಲ್ಲದವರಿಗೂ ಅಲ್ಲಿನ ಕಥೆಗಳು ಅಪರಿಚಿತವೇನಲ್ಲ. ಯಾರೋ ಹೇಳಿದ, ಎಲ್ಲೋ ಓದಿದ, ಎಲ್ಲೋ ಕೇಳಿದ ಈ ಕಥೆಗಳನ್ನು ಒಂದೆಡೆ ಗಮನಿಸಿದಾಗ, ಅರೆ! ಇವೆಲ್ಲಾ ಮಹಾಭಾರತದಲ್ಲಿವೆಯೇ ಎಂದು ಅಚ್ಚರಿಯಾಗುತ್ತದೆ. ಮೂಲ ಕಥೆಯೊಂದಿಗೆ ಈ ಉಪಕಥೆಗಳೂ ಹಾಸು ಹೊಕ್ಕಾಗಿವೆ. ಒಂದು ವಿಷಯ \/ ಘಟನೆಯನ್ನು ಇನ್ನೊಬ್ಬರಿಗೆ ಹೇಳುವಾಗ ಒಂದು ಉಪಕಥೆಯನ್ನು ಬಳಸಿಕೊಳ್ಳುವುದು ಇಲ್ಲಿಯ ಸ್ವಾರಸ್ಯ, ಹಾಗಾಗಿ ಮಹಾಭಾರತ, ನೂರಾರು ಉಪಕಥೆಗಳ ಸಮುದ್ರವೇ ಆಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮೂಲ ಕಥೆಯೊಂದಿಗೆ ಓದಿದಾಗ ಅಲ್ಲಿಯ ಭಾಗವಾಗಿವೇ ಕಾಣುವ ಕಥೆಗಳು, ಸ್ವತಂತ್ರ ಕಥೆಗಳಾಗಿಯೂ ಪ್ರಸಿದ್ಧವಾಗಿವೆ. ಕಿರಾತಾರ್ಜುನೀಯ, ನಳದಮಯಂತಿ, ಶಾಕುಂತಲ ಮುಂತಾದ ಕಥೆಗಳಂತೂ ಸ್ವತಂತ್ರವಾಗಿ ಬೆಳೆದು ಪ್ರತ್ಯೇಕ ಗ್ರಂಥಗಳ ಸ್ವರೂಪತಾಳಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಡೀ ಮಹಾಭಾರತವೇ ಒಂದು ನೀತಿಕಥೆ. ಇಲ್ಲಿಯ ಉಪಕಥೆಗಳೂ ಅದಕ್ಕೆ ಹೊರತಲ್ಲ. ರಂಜನೆ, ನೀತಿ, ಹಾಸ್ಯ, ಶೃಂಗಾರ ಮುಂತಾದವುಗಳನ್ನೊಳಗೊಂಡ ಈ ಕಥೆಗಳು ಮೂಲ ಕಥೆಯಂತೆಯೇ ರಂಜಿಸುತ್ತವೆ. ಈ ಕಥೆಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಪ್ರಕಾಶ್ ಕಂಬತ್ತಳ್ಳಿ","brand":"Jagadeeshasharma Sampa","offers":[{"title":"Default Title","offer_id":42115919315203,"sku":"HB00000691","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at2.43.09PM_1.jpg?v=1638092684"},{"product_id":"uppiginta-ruchi-bere-illa-kannada-book","title":"ಉಪ್ಪಿಗಿಂತ ರುಚಿ ಬೇರೆ ಇಲ್ಲ","description":"\u003cp\u003eಜೀವನದಲ್ಲಿ ನಮಗೆ ಬೇಕಿರುವುದು ಸತ್ಸಂಗ ಆ ಸತ್ಸಂಗವೇ. ಈ ರೀತಿಯ ಪುಸ್ತಕಗಳು. ನುಡಿ ಮುತ್ತುಗಳು ನಿಮ್ಮನ್ನು ತಲುಪುವುದು ಪುಸ್ತಕಗಳ ಮೂಲಕ. ಜೀವನವಿಡೀ ಅವೇ ನಿಮಗೆ ದಾರಿದೀಪವಾಗಿ ಮುನ್ನಡೆಸುವವು... ಅಚ್ಚಳಿಯದೇ ನಿಮ್ಮ ಮಸ್ತಕಗಳ ಮೂಲಕ.\u003c\/p\u003e\n\u003cp\u003e-ಉಪೇಂದ್ರ\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Ramaswamy Hulakoodu","offers":[{"title":"Default Title","offer_id":42115922166019,"sku":"HB00000690","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d5ded7c1-b2f9-4563-990b-c9e27c9c587d.jpg?v=1638092730"},{"product_id":"management-bhavadgeete","title":"ಮ್ಯಾನೇಜ್‌ಮೆಂಟ್ ಭಗವದ್ಗೀತೆ","description":"\u003cp\u003e\u003cspan data-mce-fragment=\"1\"\u003eಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ-ಮ್ಯಾನೇಜ್ ಮೆಂಟ್ ಭಗವದ್ಗೀತೆ. \u003c\/span\u003e\u003c\/p\u003e\n\u003cp\u003e\u003cspan data-mce-fragment=\"1\"\u003eಕುರುಕ್ಷೇತ್ರದಲ್ಲಿ ಅರ್ಜುನ ಯುದ್ಧ ಮಾಡಲಾರೆ ಎಂದು ಕೈಚೆಲ್ಲಿ ನಿಂತಾಗ ಶ್ರೀಕೃಷ್ಣ, ಭಗವದ್ಗೀತೆ ಬೋಧಿಸುವ ಮೂಲಕ ಮಾಡಿದ ಕೆಲಸ ಅಪ್ಪಟ ಬ್ರೇನ್‌ವಾಶ್! ಅದನ್ನು 21ನೇ ಶತಮಾನದ ಶೈಕ್ಷಣಿಕ ಭಾಷೆಯಲ್ಲಿ ಮೈಂಡ್ ಮ್ಯಾನೇಜ್‌ಮೆಂಟ್ ಎನ್ನುತ್ತಾರೆ.\u003cbr data-mce-fragment=\"1\"\u003eಮಾತಿಗೆ ಅರ್ಜುನ ಬಗ್ಗದಿದ್ದಾಗ ಶ್ರೀಕೃಷ್ಣ ತೋರಿಸಿದ್ದು ವಿಶ್ವರೂಪ. ಅದೊಂದು ರೀತಿಯಲ್ಲಿ\u003cbr data-mce-fragment=\"1\"\u003eಬ್ಲ್ಯಾಕ್‌ಮೇಲ್ ತಂತ್ರವೂ ಹೌದು, ಹೆದರಿಸಿ ಬಗ್ಗಿಸುವ ಉಪಾಯವೂ ಹೌದು.\u003cbr data-mce-fragment=\"1\"\u003eಯುದ್ಧದಲ್ಲಿ ಕರ್ಣನನ್ನು ಸೋಲಿಸಲು ಸಾಧ್ಯವೇ ಆಗದಿದ್ದಾಗ ಅವನ ರಥದ ಚಕ್ರ ಹೂತುಹೋಗುವಂತೆ ಮಾಡಿ ಅರ್ಜುನನ ಕೈಯಿಂದ ಶ್ರೀಕೃಷ್ಣ ಬಾಣ ಬಿಡಿಸಿದ್ದು ಅದ್ಭುತ ಸ್ಟಾಟಜಿಕ್ ಪ್ಲಾನಿಂಗ್. ಇದು ಇಲ್ಲದೆ ಇಂದಿನ ಕಾರ್ಪೊರೇಟ್ ವ್ಯವಹಾರಗಳು ಒಂದು ಹೆಜ್ಜೆಯೂ ಮುಂದೆ ಹೋಗುವುದಿಲ್ಲ.\u003cbr data-mce-fragment=\"1\"\u003e\u003c\/span\u003e\u003cspan data-mce-fragment=\"1\"\u003eಇಂತಹ ನೂರಾರು ಮ್ಯಾನೇಜ್‌ಮೆಂಟ್ ಕೌಶಲಗಳನ್ನು ಶ್ರೀಕೃಷ್ಣ ಭಗವದ್ಗೀತ ಹಾಗೂ ಮಹಾಭಾರತದಲ್ಲಿ ಹೇಳಿದ್ದಾನೆ. ಆದ್ದರಿಂದಲೇ ಇಂದು ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಭಗವದ್ಗೀತೆಯ ವಾರ ಮಾಡುತ್ತಾರೆ.\u003cbr\u003eಭಗವದ್ಗೀತೆಯನ್ನು ನಿತ್ಯದ ಬದುಕು ಹಾಗೂ ಬಿಸಿಸ್‌ಗೆ ಲಾಭದಾಯಕವಾಗಿ ಬಳಸಿಕೊಳ್ಳುವುದು ಹೇಗೆ? ಈ ಪುಸ್ತಕದಲ್ಲಿ ತಿಳಿದುಕೊಳ್ಳಿ.\u003c\/span\u003e\u003c\/p\u003e","brand":"Mahabala Seetalabhavi","offers":[{"title":"Default Title","offer_id":42115929309443,"sku":"HB00000689","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at2.43.09PM_2.jpg?v=1638093041"},{"product_id":"netnoota-sawanna-enterprises","title":"ನೆಟ್ ನೋಟ","description":"ವಿಜ್ಞಾನಲೋಕವನ್ನು ಬಗೆಗಣ್ಣಿನಲ್ಲಿ ನೋಡಿ ಓದುಗರಲ್ಲಿ ಬೆರಗು ಹುಟ್ಟಿಸಿದ ಮೋಡಿಗಾರ ಸುಧೀಂದ್ರ ಪಾಲ್ಗೊಡೇರಿ, ಜನಸಾಮಾನ್ಯರ ಎದೆಯೊಳಕ್ಕೆ ಹನಿಹನಿಯಾಗಿ ನೇರವಾಗಿ ಜಿನುಗುವ ಭಾಷೆ, ಪುಟಪುಟಗಳಲ್ಲೂ ಪುಟಿಯುವ ಶಬ್ದಲಾಲಿತ್ಯ, ಸಮಕಾಲೀನ ವಿಜ್ಞಾನ ತಂತ್ರಜ್ಞಾನಗಳತ್ತ ನೆಟ್ಟ ನೋಟ, ಸಂಶೋಧನೆಗಳಿಗೆ ಕಥೆಯ ಹಂದರ ತೊಡಿಸಿ ಓದನ್ನು ಸುಭಗಗೊಳಿಸಿದ ಲೇಖಕ. ಎಲ್ಲ ಮಾಧ್ಯಮಗಳೂ ಅವರ ಇರುವನ್ನು, ಬರುವನ್ನು, ಬರಹವನ್ನು ನಿರೀಕ್ಷಿಸುತ್ತಿದ್ದವು. ಅವರ ಯೋಚನಾಲಹರಿಯ ಬೀಸು, ವಿಸ್ತಾರ ಎರಡೂ ಹೈಜಂಪ್, ಲಾಂಗ್‌ಜಂಪ್‌ಗೆ ಹಾತೊರೆಯುತ್ತಿದ್ದವು.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಸಾಹಿತ್ಯದ ಬಹುರೂಪಿ ಗುಣವನ್ನು ವಿಜ್ಞಾನ ಸಾಹಿತ್ಯಕ್ಕೆ ಯುಕ್ತವಾಗಿ ಬಳಸಿಕೊಂಡ ಜಾಣೆ ಅವರದು. ಬರಹದಲ್ಲಿ ವಚನಗಳ ಸಾಲು ಇಣುಕಿದವು-ದಾಸರ ಕೀರ್ತನೆಗಳು ಕುಣಿದವು. ಕನ್ನಡ ಕವಿಗಳ ಪ್ರಸಿದ್ಧ ಸಾಲುಗಳು ಮಿಂಚಿದವು, ಸಿನಿಮಾ ಹಾಡುಗಳಿಗೂ ಪ್ರವೇಶ ಕಲ್ಪಿಸಿದರು. ಆದರೆ ಎಲ್ಲೂ ಅದು ವಿಜ್ಞಾನಕ್ಕೆ ಕೃತಕ ಎನ್ನಿಸಲಿಲ್ಲ, ಅಲಂಕಾರದ ಮಾತಾಗಲಿಲ್ಲ, ಬದಲು ಲೇಖನದ ಸೊಗಡನ್ನು ಹೆಚ್ಚಿಸಿದವು. ಅವರ ಲೇಖನಗಳ ರೇಂಜ್ ನ್ಯಾನೋ ತಂತ್ರಜ್ಞಾನದಿಂದ ಹಿಡಿದು ಜೇನ್ ಎಡಿಟಿಂಗ್‌ವರೆಗೆ, ಸೊಳ್ಳೆಯಿಂದ ಹಿಡಿದು ಯುದ್ಧ ವಿಮಾನಗಳವರೆಗೆ-ಅವರು ಸ್ಪರ್ಶಿಸದ ವಿಜ್ಞಾನ ವಿಷಯಗಳೇ ಅಲ್ಲ, ವಿಜ್ಞಾನವನ್ನು ವಜ್ರದೇಹಿ ಎಂಬ ಆರೋಪದಿಂದ ಮುಕ್ತಗೊಳಿಸಿ, ಅದರ ವಿಶ್ವಯದ ಬಾಗಿಲನ್ನು ತೆರೆದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ.ಆರ್.ಡಿ.ಓ. ಸಂಸ್ಥೆಯಲ್ಲಿ ಸುಧೀಂದ್ರ ಮಾಡಿದ್ದು ಸಂಶೋಧನೆ, ವಿಜ್ಞಾನ ಸಾಹಿತ್ಯದಲ್ಲಿ ಬರವಣಿಗೆಯ ನಿಗೂಢ ಆಯಾಮಗಳ ಶೋಧನೆ. ಇದರಿಂದ ಲಾಭವಾದದ್ದು ಕನ್ನಡ ಓದುಗರಿಗೆ ಕಳೆದ ನಾಲ್ಕು ದಶಕಗಳಿಂದ ಅವರು ಬರೆದ ವಿಜ್ಞಾನ ಲೇಖನಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸಿದರೆ ಅದೇ ವಿಜ್ಞಾನದ ವಿಶ್ವಕೋಶ ಸಂಪುಟಗಳಾಗಬಹುದು, ಹೊಸ ತಲೆಮಾರಿನ ಲೇಖಕರಿಗೆ ಸ್ಫೂರ್ತಿಯ ಸೆಲೆಯಾಗಬಹುದು. ಈ ಪ್ರಕಟಣೆ ಆ ನಿಟ್ಟಿನ ಮೊದಲ ಹೆಜ್ಜೆ,\u003cbr data-mce-fragment=\"1\"\u003e\u003cbr data-mce-fragment=\"1\"\u003e-ಟಿ.ಆರ್. ಅನಂತರಾಮು","brand":"Sudhindra Haldodderi","offers":[{"title":"Default Title","offer_id":42115930161411,"sku":"HB00000688","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.15.02PM.jpg?v=1638093044"},{"product_id":"ondkathe-hella-dkraajamma-sawanna","title":"ಒಂದ್ ಕಥೆ ಹೇಳ್ಲಾ...","description":"ಜೀವನದಲ್ಲಿ ಪ್ರೇರಣೆ ವಹಿಸುವ ಪಾತ್ರ ಅಪಾರ, ಪ್ರೇರಣೆಗೆ ವಸ್ತು ಅಥವಾ ಏಷಯ ಇಂತಹದೇ ಆಗಿರಬೇಕೆಂಬ ಯಾವುದೇ ನಿಯಮದಿಲ್ಲ. ಶಕ್ತಿಯುತವಾದ ಒಂದು ಹೇಳಿಕೆ, ಸಾಂತ್ವನದ ಒಂದು ಮಾತು ಕೇಳಿದ ಕಥೆ, ನೋಡಿದ ಚಲನಚಿತ್ರ, ಓದಿದ ಪುಸ್ತಕ, ದಿನನಿತ್ಯದ ಜೀವನದಲ್ಲಿ ನಡೆಯುವ ಆಗುಹೋಗುಗಳು, ಭೇಟಿ ಮಾಡುವ ವ್ಯಕ್ತಿಗಳು, ಭಾಗವಹಿಸುವ ಸಭೆಸಮಾರಂಭಗಳು, ಹಿರಿಯರ ಅನುಭವದ ಹಿತನುಡಿಗಳು, ಮಹಾನುಭಾವರ ಜೀವನದಲ್ಲಿ ನಡೆದ ಘಟನೆಗಳು, ಒಂದು ಸಂದೇಶ... ಹೀಗೆ ಯಾವುದೇ ಮೂಲಗಳಿಂದ ಹರಿದು ಬರುವ ಒಳ್ಳೆಯ ವಿಚಾರಗಳು ಒಳ್ಳೆಯ ಬದುಕಿಗೆ ಪ್ರೇರಣೆ ನೀಡುತ್ತವೆ. ಬದುಕು ಇನ್ನೇನು ಮುಗಿದುಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕುಳಿತವನನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡುತ್ತವೆ, ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಎಂಬ ನಂಬಿಕೆ ನನ್ನದು. ಈ ನಿಟ್ಟಿನಲ್ಲಿ ಪ್ರೇರಣೆ ಪ್ರೇರಣೆಗೆ ಕಾರಣವಾಗುತ್ತದೆ ಎಂಬ ಮಾತಿನಂತೆ ವಿವಿಧ ಮೂಲಗಳಿಂದ ಲಭಿಸಿದ ವಸ್ತು ವಿಷಯಗಳಿಂದ ಪ್ರೇರಿತಳಾಗಿ 'ಒಂದು ಕಥೆ ಹೇಳ್ತಾ...' ಎಂಬ ಈ ಕೃತಿ ರಚನೆಗೆ ಮುಂದಾಗಿ, ಎಲ್ಲ ವಯೋಮಾನದವರಿಗೂ ಆಪ್ತವಾಗುವ ರೀತಿಯಲ್ಲಿ, ಸರಳವಾದ ಭಾಷೆಯಲ್ಲಿ, ಚಿಕ್ಕ ಚಿಕ್ಕ ಕಥೆಗಳ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಈ ಕಥೆಗಳಲ್ಲಿ ಪ್ರೇರಣೆಯ ಜೊತೆಗೆ ನೀತಿಯ ಲೇಪನವಿದೆ. ಜೀವನೋತ್ಸಾಹಕ್ಕೆ ಚೈತನ್ಯ ತುಂಬುವ ಪ್ರಸಂಗಗಳಿವೆ. ಇವು ಓದುಗರ ಮನಸ್ಸನ್ನು ಮುಟ್ಟಿ, ಹೃದಯವನ್ನು ತಟ್ಟುತ್ತವೆ ಎಂದು ಭಾವಿಸಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eರಾಜಮ್ಮ ಡಿ.ಕೆ.","brand":"Rajamma D. K.","offers":[{"title":"Default Title","offer_id":42115937075459,"sku":"HB00000687","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_45c5e4dc-57ab-4117-9867-d2a684cfc016.jpg?v=1643119339"},{"product_id":"kathavasantha","title":"ಕಥಾವಸಂತ","description":"\u003cspan data-mce-fragment=\"1\"\u003e'ಕಥಾವಸಂತ’ 2018ರ ಯುಗಾದಿ ಹಬ್ಬದ ಪ್ರಯುಕ್ತ ವಿಜಯ ಕರ್ನಾಟಕ ಪತ್ರಿಕೆ ಏರ್ಪಡಿಸಿದ್ದ ಕಥಾಸ್ಪರ್ಧೆಗೆ ಬಂದಿರುವ ಪೈಕಿ ಆಯ್ದ ಉತ್ತಮ 25 ಕಥೆಗಳ ಸಂಕಲನ. \u003c\/span\u003e","brand":"Sawanna Publications","offers":[{"title":"Default Title","offer_id":42115937829123,"sku":"HB00000686","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at2.43.10PM.jpg?v=1638093517"},{"product_id":"tuttu-tattva-kannada-book","title":"ತುತ್ತು ತತ್ತ್ವ","description":"\u003cp\u003eಕೆ.ಸಿ.ರಘುರವರ ಈ ಪುಸ್ತಕ 'ತುತ್ತು-ತತ್ತ್ವ\", ಅವರ ದೇಶ-ವಿದೇಶ ಪ್ರವಾಸದ, ನಿರಂತರ ಪಠನದಿಂದ ಬಸಿದ ಸತ್ವ, ಆಹಾರ ಜ್ಞಾನ-ವಿಚಾರಗಳ ಬಗ್ಗೆ ಟಿವಿ ವಾಹಿನಿಗಳಲ್ಲಿ ಜನ ಸಾಮಾನ್ಯರಿಗೆ ತಿಳಿಯುವಂತೆ ಸರಳವಾಗಿ ಸುಲಲಿತವಾಗಿ ಕನ್ನಡ ಹಾಗು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿವರಿಸುವ ರಘು ಕರ್ನಾಟಕದ ಜನರಿಗೆ ಚಿರಪರಿಚಿತರು, ಮುನ್ನುಡಿಯಲ್ಲಿ ಸುಗತ ಶ್ರೀನಿವಾಸರಾಜುರವರು ಹೇಳುವಂತೆ ಆಹಾರ ಶಾಸ್ತ್ರ ಸಂಶೋಧನೆ ಸಾರಗಳ ಬಗ್ಗೆ ಓದಿ ತಿಳಿಯಲು ಆಂಗ್ಲ ಭಾಷೆಯ ಪುಸ್ತಕಗಳನ್ನು ಅವಲಂಬಿಸುವುದನ್ನು ರಘುರವರ ಅಂಕಣಗಳು, ಲೇಖನಗಳು ತಪ್ಪಿಸಿವೆ. ರಘುರವರ ಖಾಸಗಿ ಗ್ರಂಥಾಲಯ ಹೊಕ್ಕರೆ ಸುಮಾರು 50 ಸಾವಿರಕ್ಕೂ ಹೆಚ್ಚು ಕನ್ನಡ-ಇಂಗ್ಲಿಷ್ ಹೊತ್ತಿಗೆಗಳು ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ವೈಚಾರಿಕತೆ, ಆಧ್ಯಾತ್ಮ ಇತಿಹಾಸ, ವೇದ-ಪುರಾಣ, ಮಾನವ ಶಾಸ್ತ್ರ, ತತ್ವ ಶಾಸ್ತ್ರ, ಕಗ್ಗದಿಂದ ಕಾರ್ಲ್‌ಮಾರ್ಕ್ಸವರೆಗೆ ಕಾಣಸಿಗುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಆಧುನಿಕ ಆಹಾರದ ಅವತಾರಗಳ ಪೊಟ್ಟಣಗಳ ಮರ್ಮಗಳನ್ನು ಸಾಮಾನ್ಯ ಜನರಿಗೆ ಅನಾವರಣ ಮಾಡುವ ವಿಧ್ವತ್ತು ರಘುರವರ ಮಾತು ಮತ್ತು ಕೃತಿ ಎರಡರಲ್ಲೂ ಅಡಗಿದೆ. ಆಹಾರ ಸಂಸ್ಕೃತಿ, ಉತ್ಪಾದನೆ, ಸಂಸ್ಕರಣೆ, ರಕ್ಷಣೆ, ಅದರಲ್ಲೂ ಸಾವಯವ ಪದ್ಧತಿ ಬಗ್ಗೆ ಅಪಾರ ಜ್ಞಾನ ಹೊಂದಿರುವ ರಘುರವರ ಲೇಖನಗಳು ಅಂತರಾಷ್ಟ್ರೀಯ ಸಮಾವೇಷಗಳಲ್ಲಿ, ಜರಲಗಳಲ್ಲಿ ಮನ್ನಣೆ ಪಡೆದಿವೆ. ಆರೋಗ್ಯವಂತ ಜೀವನಕ್ಕೆ ಆಹಾರವೇ ಮದ್ದಾಗಬೇಕು ಎಂಬುದು ರಘುರವರ ಸಲಹೆ. ವಿಶ್ವದ ಜೊತೆಗೆ ನಮ್ಮ ದೇಶವನ್ನು ಕಾಡುತ್ತಿರುವ ಅಪೌಷ್ಟಿಕತೆಗೆ ಮೂಲ ಯಾವುದು, ಬೆಳಿಗ್ಗೆ ಎದ್ದ ಕೂಡಲೇ ಏನು ಕುಡಿಯಬೇಕು, ತಿನ್ನಬೇಕು, ರಾತ್ರಿ ಮಲಗುವ ಮುನ್ನ ಮಡದಿಯ ಜೊತೆ ಏನು ಸೇವಿಸಬೇಕು ಎಂಬುದನ್ನು ತಿಳಿಯಲು ರಘುರವರನ್ನು ಕೇಳಬೇಕು ಅಥವಾ ಈ ಪುಸ್ತಕ ಓದಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಾಗ್ಗೆರೆ ರಾಮಸ್ವಾಮಿ ಲೇಖಕ-ಪತ್ರಕರ್ತ\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"K. C. Raghu","offers":[{"title":"Default Title","offer_id":42115938386179,"sku":"HB00000684","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b9cc591d-dafb-423d-9eba-308dfd93f8e4.jpg?v=1638093519"},{"product_id":"nishkaama-sooralu-tantri-sawanna-enterprises","title":"ನಿಷ್ಕಾಮ","description":"ಯಜ್ಞವೃತ್ತಿಯಿಂದ ಸುರರ ಆಳಾಗಿರುವ ಈ ದೇವ ಬರಹಗಾರ ತನ್ನ ಈ ಸರ್ವಸುಂದರ ಬರಹದ ಪ್ರವೃತ್ತಿಯಿಂದ ಸುರರನ್ನೆ ಆಳಿರುವುದು, ಓದಿ ಅನುಭವಿಸಿದ ಈ ಅಹೋರಾತ್ರನಿಗೆ 'ಸೂರಾಲು ತಂತ್ರಿ ಎನ್ನುವ ಹೆಸರು ಸಾರ್ಥಕನಾಮವಾಗಿ ಕಂಡಿತು. ಓದುತ್ತಾ ಹೋದಂತೆಲ್ಲಾ ಈ ಮಹಾನುಭಾವ ಸಾಮಾನ್ಯ ಮಾನವನಲ್ಲ ಇದೊಂದು ಮಹಾ ಕಾರಣ ಜನ್ಮ ಎಂಬುದು ಅರಿವಾಗುತ್ತಾ ಹೋಯಿತು. ಈ ಬರಹ ಕೂಡಾ ಈ ಗಂಧರ್ವನ ಉಕ್ಕಿ ಹರಿದ ಜ್ಞಾನ ಪ್ರವಾಹದ ಉಕ್ಕಿದ ಭಾಗ ಮಾತ್ರ ಕಣಿ, ವೃತ್ತಿಯಿಂದ ಜನರ ಮನಸ್ಸು ಮತ್ತು ಶರೀರಗಳ, ಪಿತೃಲೋಕದಿಂದ, ಜನ್ಮಾಂತರದಿಂದ ಪೂರ್ವಪುಣ್ಯ, ಪ್ರಾರಬ್ದಾದಿ ಅನೇಕ ಕರ್ಮಗಳನ್ನು ಅಭ್ಯಾಸಮಾಡಿ ಅಷ್ಟಮಂಗಳ, ಆಗಮಗಳೇ ಮುಂತಾದ ಮೊದಲಾದ ಜ್ಯೋತಿರ್ವಿದ್ಯೆಗಳ ಸತತ ಅಧ್ಯಯನ ಪ್ರಯೋಗಗಳಿಂದ ಇವರ ವಿಜ್ಞಾನಮಯಕೋಶವು ಜಾಗೃತವಾಗಿರುವುದು ಈ ಬರಹರತ್ನತ್ರಯಗಳನ್ನು ಪರೀಕ್ಷಿಸಿದಾಗ ದಿಟವೆಂದರಿವಾಯಿತು.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಜ್ಞಾನಮಯಕೋಶದಲ್ಲಿರುವುದೇ ಜನ್ಮಾಂತರ ನೆನಪುಗಳು, ವ್ಯಾಸರ ಶ್ರೀಮದ್ಭಾಗವತವನ್ನು ಓದಿ ಕೇಳಿದ ಮಾತ್ರಕ್ಕೆ ಬರೆದ ಬರಹವಲ್ಲ ಮತ್ತು ಹಾಗೆ ಬರೆಯಲು ಸಾಧ್ಯವೂ ಇಲ್ಲ. ಅಂದಿನ ದಿನಗಳಲ್ಲಿ ಇದ್ದು ಸಾಕ್ಷಿಭಾವದಿ ವೀಕ್ಷಿಸಿದ ದಕ್ಷತನದ ಬರಹವಿದು. ಓದುವವರ ಎಲ್ಲ ಸಂದೇಹಗಳನ್ನು ನಿವಾರಿಸಿ ನಖಶಿಖಾಂತ ರೋಮಾಂಚನಗೊಳಿಸಿ ಸಂಮ್ಮೋಹನಕ್ಕೆ ಹೊತ್ತೊಯ್ಯುವ ಬರಹವೇ ಈ ಹೊತ್ತಗೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಹೋರಾತ್ರ","brand":"Sooralu Tantri","offers":[{"title":"Default Title","offer_id":42115956211971,"sku":"HB00000683","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/469a4d93-25ab-4400-a1ca-5048560d2860.jpg?v=1638251676"},{"product_id":"ಜೀವನ-ಸಂಜೀವನಾ","title":"ಜೀವನ ಸಂಜೀವನಾ","description":"\u003cp\u003e\u003cspan data-mce-fragment=\"1\"\u003eಹಾಸ್ಯ ಬರಹಗಾರ ಗಂಗಾವತಿ ಪ್ರಾಣೇಶ್ ಅವರ ಕೃತಿ-ಜೀವನ ಸಂಜೀವನಾ. \u003c\/span\u003e\u003c\/p\u003e\n\u003cp\u003eಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ;\u003cbr\u003eಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ;\u003cbr\u003eವಸ್ತುಸಾಕ್ಷಾತ್ಕಾರವಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ||\u003cspan data-mce-fragment=\"1\"\u003e\u003cbr\u003eಎನ್ನುವುದಕ್ಕೆ ಈ ಪುಸ್ತಕ ಒ೦ದು ಉತ್ತಮ ಉದಾಹರಣೆ, ಅಧ್ಯಯನಸಾಗರದ ಅಮೂಲ್ಯ ರತ್ನಗಳನ್ನು ಹೆಕ್ಕಿ ಓದುಗರ ತೀರಕ್ಕೆ ತಲುಪಿಸುವ ತರಂಗವಾಗಿ ರೂಪುಗೊಂಡಿರುವ ಪ್ರಾಣೇಶರ ಈ ಹೊತ್ತಿಗೆ ಎಲ್ಲ ಹೊತ್ತಿಗೆ ಸಲ್ಲುವಂಥದ್ದು. ಪುಟಗಳ ಅಧ್ಯಯನದ ಜೊತೆಜೊತೆಗೆ ಪುಟಪುಟನೆ ಪರ್ಯಟನೆ ಮಾಡಿ ಸಂಪುಟಗಳನ್ನು ತುಂಬಿಸಿಕೊಂಡದ್ದನ್ನೂ ಇಲ್ಲಿ ದಾಖಲಿಸಿರುವ ರೀತಿ ಸೊಗಸಾಗಿದೆ.\u003c\/span\u003e\u003c\/p\u003e","brand":"Gangavathi Pranesh","offers":[{"title":"Default Title","offer_id":42115960930563,"sku":"HB00000682","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at2.43.10PM_1.jpg?v=1638094239"},{"product_id":"onanna-chetana-sawanna-someshwara","title":"ಓ.... ನನ್ನ ಚೇತನ!...","description":"ತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದ ವಿಜ್ಞಾನಿಯೊಬ್ಬನು ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಟಿಮಾಡಿ, ಸಾವನ್ನು ಗೆಲ್ಲುವೆನೆಂಬ ಅಹಂಕಾರದಿಂದ ಬೀಗುತ್ತಿದ್ದನು.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಜ್ಞಾನಿಯ ಅಂತ್ಯಕಾಲ ಸಮೀಪಿಸಿದಾಗ, ಅವನ ಜೀವವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದಾಗ, ಅಲ್ಲಿ 13 ಜನರಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎಂದು ತಿಳಿಯದೆ ಯಮನು ಗೊಂದಲದಲ್ಲಿ ಬಿದ್ದನು. ಮನುಷ್ಯರ ಸ್ವಭಾವವನ್ನು ಚೆನ್ನಾಗಿ ತಿಳಿದಿದ್ದ ಯಮಧರ್ಮನು ನಸುನಗುತ್ತಾ 13 ವಿಜ್ಞಾನಿಗಳ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ\u003cbr data-mce-fragment=\"1\"\u003e\u003cbr data-mce-fragment=\"1\"\u003e“ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ ಅಭಿನಂದನೆಗಳು!! ಆದರೆ ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಠಿಯಲ್ಲಿ ಒಂದೇ ಒಂದು ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ\" ಎಂದನು.\u003cbr data-mce-fragment=\"1\"\u003e\u003cbr data-mce-fragment=\"1\"\u003e“ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ' ಎಂದು ವಿಜ್ಞಾನಿಯು ಎದ್ದು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ “ಇದುವೇ ನಾನು ಹೇಳಿದ ಕೊರತೆ…” ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟರು\u003cbr data-mce-fragment=\"1\"\u003e\u003cbr data-mce-fragment=\"1\"\u003e• ಏನಿದು ಈ ಅಹಂಕಾರ!? ನನಗೇಕೆ ಅಹಂಕಾರ ಬರುತ್ತದೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಶ್ವಾಸವು, ಯಾವಾಗ ಅಂಧ ವಿಶ್ವಾಸವಾಗಿ, ಅಹಂಕಾರಕ್ಕೆ ಎಡೆಕೊಡುತ್ತದೆ? ಪ್ರಕೃತಿ ಮಾತ್ರ ಪರಿಪೂರ್ಣ. ಮನುಷ್ಯನು ಸದಾ ಕಾಲಕ್ಕೂ ಅಪೂರ್ಣನಲ್ಲವೆ!?\u003cbr data-mce-fragment=\"1\"\u003e\u003cbr data-mce-fragment=\"1\"\u003eಅಹಂಕಾರವು ಆತ್ಮವಿನಾಶಕ್ಕೆ ಕಾರಣವಾಗುವುದನ್ನು ನಾನೇಕೆ ತಿಳಿಯುವುದಿಲ್ಲ?\u003cbr data-mce-fragment=\"1\"\u003e\u003cbr data-mce-fragment=\"1\"\u003eಮನುಷ್ಯನು ತನ್ನ ಮೂಲಭೂತ ಸ್ವಭಾವಗಳನ್ನು ಎಂದಿಗೆ ಗೆಲ್ಲುತ್ತಾನೆ?\u003cbr data-mce-fragment=\"1\"\u003e\u003cbr data-mce-fragment=\"1\"\u003e“ಓ... ನನ್ನ ಚೇತನ!...' ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು 'ಪಪ್ಪರ್ಮೆಂಟ್' ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸಂಗವನ್ನು ನಡೆಸಬಹುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಚಂದನ, ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ ನಿರಂತರವಾಗಿ 2150ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿ ರಾಷ್ಟ್ರೀಯ ದಾಖಲೆಯನ್ನು ನಿಮಿಸಿರುವ 'ಥಟ್ ಅಂತ ಹೇಳಿ!?' ಕ್ವಿಜ್ ಸ್ಪರ್ಧೆಯ ಪರಿಕಲ್ಪನೆ, ಸಂಶೋಧನೆ ಹಾಗೂ ನಿರೂಪಣೆಯನ್ನು ಮಾಡುತ್ತಿರುವ ಕ್ಲಿಜ್ ಮಾಸ್ಟರ್ ಡಾ| ನಾ. ಸೋಮೇಶ್ವರ ಅವರ ಲೇಖನಿಯಿಂದ ಹರಿದುಬಂದ ಅನುಭವ ಹಾಗೂ ಆತ್ಮಾವಲೋಕನದ ಸೆಳೆಮಿಂಚುಗಳು","brand":"Dr. N. Someshwara","offers":[{"title":"Default Title","offer_id":42115961651459,"sku":"HB00000681","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.38.05PM.jpg?v=1638094302"},{"product_id":"swalpa-maathadi-please-kannada-book","title":"ಸ್ವಲ್ಪ ಮಾತಾಡಿ ಪ್ಲೀಸ್","description":"\u003cp\u003eಒಂದು ಸಂಬಂಧ ಬೆಳದು ಗಟ್ಟಿಗೊಳ್ಳಬೇಕಾದ್ರೆ ವರ್ಷಗಳೇ ಹಿಡಿಯುತ್ತೆ. ಆದರೂ ಅದು ಉಳಿದು ಇನ್ನಷ್ಟು ಸಧೃಡವಾಗಬೇಕಾದ್ರೆ ನಿರಂತರ ಪ್ರೀತಿ, ವಿಶ್ವಾಸ, ಮುಖ್ಯವಾಗಿ ಮಾತುಗಳು ಬೇಕು. ಎಲ್ಲ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ. ಅಂಥಹ ಮಾತುಗಳೇ ಇರದ ಬರಡು ವಾತಾವರಣದಲ್ಲಿ ಸಂಬಂಧಗಳ ಕೊಂಡಿಗಳು ಶಿಥಿಲಗೊಂಡು ಒಂದೊಂದಾಗಿ ಕಳಚಿಕೊಳ್ಳುತ್ತಾ ಒಂದು ದಿನ ನಾವು ಅಕ್ಷರಶಃ ಒಂಟಿಯಾಗಿ ಬಿಡುತ್ತೇವೆ. ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಸೀತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೀ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ. \u003c\/p\u003e\n\u003cp\u003eಈ ಪುಸ್ತಕ ಓದಿ ಕೆಳಗಿಡುವಷ್ಟರಲ್ಲಿ ನಿಮ್ಮೆಲ್ಲಾ ಸಂಬಂಧಗಳಲ್ಲಿ ಚೈತನ್ಯ ತುಂಬಿ ನಿಮ್ಮಲ್ಲಿ ನವ ಜೀವನೋತ್ಸಾಹ ತುಂಬುವುದು ಗ್ಯಾರಂಟಿ. ಇಟ್ಸ್ ಮೈ ಪ್ರಾಮಿಸ್. ನಿಮ್ಮೆಲ್ಲಾ ಸಂತಸಗಳಿಗೆ ಕಾರಣವಾಗಬಲ್ಲ ಸಂಬಂಧಗಳ ಕೊಂಡಿಗಳು ಕಳಚುವ ಮುನ್ನ.. ಸ್ವಲ್ಪ ಮಾತಾಡಿ ಪ್ಲೀಸ್.\u003c\/p\u003e\n\u003cp\u003e- ವಿರೂಪಾಕ್ಷ ದೇವರಮನೆ        \u003c\/p\u003e","brand":"Dr. Viroopaksha Devaramane","offers":[{"title":"Default Title","offer_id":42115963552003,"sku":"HB00000680","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/SwalpaMaathadiPlease.jpg?v=1638094479"},{"product_id":"neenillada-nenagenide-virupaaksha","title":"ನೀನಿಲ್ಲದೇ ನನಗೇನಿದೆ...!","description":"ತದ್ರೂಪಿ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದ ವಿಜ್ಞಾನಿಯೊಬ್ಬನು ತನ್ನ ಹಾಗೇ ಇರುವ ಒಂದು ಡಜನ್ ತದ್ರೂಪಿಗಳನ್ನು ಸೃಷ್ಟಿಮಾಡಿ, ಸಾವನ್ನು ಗೆಲ್ಲುವೆನೆಂಬ ಅಹಂಕಾರದಿಂದ ಬೀಗುತ್ತಿದ್ದನು.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಜ್ಞಾನಿಯ ಅಂತ್ಯಕಾಲ ಸಮೀಪಿಸಿದಾಗ, ಅವನ ಜೀವವನ್ನು ಕೊಂಡೊಯ್ಯಲು ಸ್ವಯಂ ಯಮಧರ್ಮನೇ ಬಂದಾಗ, ಅಲ್ಲಿ 13 ಜನರಿದ್ದರು. ಅವರಲ್ಲಿ ನಿಜವಾದ ವಿಜ್ಞಾನಿ ಯಾರು ಎಂದು ತಿಳಿಯದೆ ಯಮನು ಗೊಂದಲದಲ್ಲಿ ಬಿದ್ದನು. ಮನುಷ್ಯರ ಸ್ವಭಾವವನ್ನು ಚೆನ್ನಾಗಿ ತಿಳಿದಿದ್ದ ಯಮಧರ್ಮನು ನಸುನಗುತ್ತಾ 13 ವಿಜ್ಞಾನಿಗಳ ಕಡೆಗೆ ಬಂದನು. ಎಲ್ಲರ ಕಡೆಯೂ ನೋಡುತ್ತಾ\u003cbr data-mce-fragment=\"1\"\u003e\u003cbr data-mce-fragment=\"1\"\u003e“ಹುಂ! ಅದ್ಭುತ ತದ್ರೂಪಿ ತಂತ್ರಜ್ಞಾನ ಅಭಿನಂದನೆಗಳು!! ಆದರೆ ಮನುಷ್ಯ ಎಂದಿಗೂ ಬ್ರಹ್ಮನಾಗಲಾರ. ಈ ತದ್ರೂಪಿ ಸೃಷ್ಠಿಯಲ್ಲಿ ಒಂದೇ ಒಂದು ಸಣ್ಣ ದೋಷವಿದೆ. ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ದೋಷ ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ\" ಎಂದನು.\u003cbr data-mce-fragment=\"1\"\u003e\u003cbr data-mce-fragment=\"1\"\u003e“ಸಾಧ್ಯವೇ ಇಲ್ಲ. ನಾನು ನೂರಕ್ಕೆ ನೂರರಷ್ಟು ನಿಖರವಾಗಿರುವ ತದ್ರೂಪಿಗಳನ್ನು ರೂಪಿಸಿದ್ದೇನೆ' ಎಂದು ವಿಜ್ಞಾನಿಯು ಎದ್ದು ನುಡಿಯುತ್ತಿರುವಂತೆಯೇ ಯಮಧರ್ಮನು ಅವನ ಕೊರಳಿಗೆ ಉರುಳನ್ನು ಬೀಸಿ “ಇದುವೇ ನಾನು ಹೇಳಿದ ಕೊರತೆ…” ಎಂದೆನ್ನುತ್ತಾ ವಿಜ್ಞಾನಿಯನ್ನು ಕರೆದುಕೊಂಡು ಹೊರಟೇಬಿಟ್ಟರು\u003cbr data-mce-fragment=\"1\"\u003e\u003cbr data-mce-fragment=\"1\"\u003e• ಏನಿದು ಈ ಅಹಂಕಾರ!? ನನಗೇಕೆ ಅಹಂಕಾರ ಬರುತ್ತದೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಶ್ವಾಸವು, ಯಾವಾಗ ಅಂಧ ವಿಶ್ವಾಸವಾಗಿ, ಅಹಂಕಾರಕ್ಕೆ ಎಡೆಕೊಡುತ್ತದೆ? ಪ್ರಕೃತಿ ಮಾತ್ರ ಪರಿಪೂರ್ಣ. ಮನುಷ್ಯನು ಸದಾ ಕಾಲಕ್ಕೂ ಅಪೂರ್ಣನಲ್ಲವೆ!?\u003cbr data-mce-fragment=\"1\"\u003e\u003cbr data-mce-fragment=\"1\"\u003eಅಹಂಕಾರವು ಆತ್ಮವಿನಾಶಕ್ಕೆ ಕಾರಣವಾಗುವುದನ್ನು ನಾನೇಕೆ ತಿಳಿಯುವುದಿಲ್ಲ?\u003cbr data-mce-fragment=\"1\"\u003e\u003cbr data-mce-fragment=\"1\"\u003eಮನುಷ್ಯನು ತನ್ನ ಮೂಲಭೂತ ಸ್ವಭಾವಗಳನ್ನು ಎಂದಿಗೆ ಗೆಲ್ಲುತ್ತಾನೆ?\u003cbr data-mce-fragment=\"1\"\u003e\u003cbr data-mce-fragment=\"1\"\u003e“ಓ... ನನ್ನ ಚೇತನ!...' ಬದುಕಿನ ಬಗ್ಗೆ ಹಲವು ಒಳನೋಟಗಳನ್ನು ನೀಡುವ ಕಥಾಸಂಗ್ರಹ. ಇಲ್ಲಿರುವ ಒಂದೊಂದೇ ಕಥೆಗಳನ್ನು 'ಪಪ್ಪರ್ಮೆಂಟ್' ಚಪ್ಪರಿಸಿದ ಹಾಗೆ ಸವಿಯಬಹುದು. ಇಲ್ಲವೇ ಸಾಮೂಹಿಕವಾಗಿ ಸಮಾನ ಮನಸ್ಕರು ಸೇರಿ ಕಥಾಸಂಗವನ್ನು ನಡೆಸಬಹುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಚಂದನ, ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ ನಿರಂತರವಾಗಿ 2150ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿ ರಾಷ್ಟ್ರೀಯ ದಾಖಲೆಯನ್ನು ನಿಮಿಸಿರುವ 'ಥಟ್ ಅಂತ ಹೇಳಿ!?' ಕ್ವಿಜ್ ಸ್ಪರ್ಧೆಯ ಪರಿಕಲ್ಪನೆ, ಸಂಶೋಧನೆ ಹಾಗೂ ನಿರೂಪಣೆಯನ್ನು ಮಾಡುತ್ತಿರುವ ಕ್ಲಿಜ್ ಮಾಸ್ಟರ್ ಡಾ| ನಾ. ಸೋಮೇಶ್ವರ ಅವರ ಲೇಖನಿಯಿಂದ ಹರಿದುಬಂದ ಅನುಭವ ಹಾಗೂ ಆತ್ಮಾವಲೋಕನದ ಸೆಳೆಮಿಂಚುಗಳು","brand":"Dr. Virupaksha Devaramane","offers":[{"title":"Default Title","offer_id":42115978133763,"sku":"HB00000678","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.44.47PM.jpg?v=1638094756"},{"product_id":"nithyopayukta-devatastotra-nagarajrao-keerthiraaj","title":"ನಿತ್ಯೋಪಯುಕ್ತ ದೇವತಾಸ್ತೋತ್ರಗಳು","description":"\u003cp\u003eಡಾ|| ಕೆ. ನಾಗರಾಜರಾವ್ ಮತ್ತು ಡಾ|| ಎನ್, ಕೀರ್ತಿರಾಜ್ ನಿತ್ಯೋಪಯುಕ್ತ ದೇವತಾಸ್ತೋತ್ರಗಳು\u003cbr data-mce-fragment=\"1\"\u003e\u003cbr data-mce-fragment=\"1\"\u003e204 ದೇವತಾ ಸ್ತೋತ್ರಗಳು ಒಂದು ಮಿನಿ ಪ್ರಾರ್ಥನಾ\" ಗ್ರಂಥ\u003cbr data-mce-fragment=\"1\"\u003e\u003cbr data-mce-fragment=\"1\"\u003eಐಶ್ವರ್ಯ ಪ್ರಾಪ್ತಿಗೆ ಸುಖ ಶಾಂತಿ ಸಂಪತ್ತಿಗೆ\u003cbr data-mce-fragment=\"1\"\u003e\u003cbr data-mce-fragment=\"1\"\u003eವಿವಾಹತಡ ನಿವಾರಣೆಗೆ\u003c\/p\u003e\n\u003cp\u003eವಿದ್ಯಾಬುದ್ಧಿ ಸಿದ್ಧಿಗೆ\u003c\/p\u003e\n\u003cp\u003eಸಕಲ ಸಂಕಟ ಬಿಡುಗಡೆಗೆ\u003c\/p\u003e\n\u003cp\u003eಉದ್ಯೋಗ ವ್ಯವಹಾರದಲ್ಲಿ ಲಾಭಕ್ಕೆ\u003c\/p\u003e\n\u003cp\u003eಸಾಲಗಳಿಂದ ಬಿಡುಗಡೆಗೆ\u003c\/p\u003e\n\u003cp\u003eನವಗ್ರಹಪೀಡಾ ಪರಿಹಾರಕ್ಕೆ\u003c\/p\u003e\n\u003cp\u003eಶತೃಬಾಧೆ ನಿವಾರಣೆಗೆ\u003c\/p\u003e\n\u003cp\u003eರೋಗ ಋಜನಗಳ ನಿವಾರಣೆಗೆ\u003c\/p\u003e\n\u003cp\u003eಆಯುರಾರೋಗ್ಯ ವೃದ್ಧಿಗೆ ಶೀಘ್ರ ವಿವಾಹಕ್ಕೆ\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಷ್ಣು, ಲಕ್ಷ್ಮಿ, ಬ್ರಹ್ಮ-ಸರಸ್ವತಿ, ಶಿವ-ಪಾರ್ವತಿ, ಗಣಪತಿ, ರಂಗನಾಥ, ಶ್ರೀರಾಮ, ಕೃಷ್ಣ, ಹಯಗ್ರೀವ, ದತ್ತಾತ್ರೇಯ, ಪಾಂಡುರಂಗ, ಅಯ್ಯಪ್ಪ, ವರಲಕ್ಷ್ಮಿ, ಸಿದ್ಧಲಕ್ಷ್ಮಿ, ಅಷ್ಟಲಕ್ಷ್ಮಿ ಆಂಜನೇಯ, ಗರುಡ, ಶ್ಯಾಮಲ, ಅನ್ನಪೂರ್ಣ, ರಾಜೇಶ್ವರಿ, ಭುವನೇಶ್ವರಿ, ಆದಿಶೇಷ, ಶಾರದಾ, ಗಾಯತ್ರಿ, ಮೂಕಾಂಬಿಕಾ, ಸಂತೋಷಿಮಾತಾ, ಅಶ್ವತ್ಥ, ತುಳಸಿ, ಬಿಲ್ವ, ಶಮೀವೃಕ್ಷ, ವಾಲ್ಮೀಕಿ, ವ್ಯಾಸ, ಯಾಜ್ಞವಲ್ಯ, ಗಂಗಾ, ಸಿಂಧು, ಕಾವೇರಿ, ನರ್ಮದಾ, ಯಮುನಾ, ಹಬ್ಬಹರಿದಿನಗಳಲ್ಲಿ ಹೇಳಿಕೊಳ್ಳಲು ಉಪಯುಕ್ತ ಶ್ಲೋಕಗಳು, ಸಂತಾನ ಪ್ರಾಪ್ತಿಗೆ, ಮಾಂಗಲ್ಯ ರಕ್ಷಣೆಗೆ, ಶೀಘ್ರ ವಿವಾಹಕ್ಕೆ, ಮಂಗಳದೋಷ - ನವಗ್ರಹದೋಷ ನಿವಾರಣೆಗೆ, ಸೂರ - ಚಂದ್ರಗ್ರಹಣ ಶಾಂತಿಗೆ, ವ್ಯಾಪಾರ ವ್ಯವಹಾರಗಳಲ್ಲ ಲಾಭಗಳಸಲು 204ಕ್ಕೂ ಹೆಚ್ಚು ಉಪಯುಕ್ತ ಸ್ತೋತ್ರಗಳು ಇದರಲ್ಲಿದೆ.\u003c\/p\u003e","brand":"Dr. K. Nagaraj Rao, Dr. N. Keerthiraj","offers":[{"title":"Default Title","offer_id":42115997040899,"sku":"HB00000677","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.53.43PM.jpg?v=1638095251"},{"product_id":"neevu-odabahudu-prammod-deshapande","title":"ನೀವೂ ಓಡಬಹುದು..","description":"ನೀವೂ ಓಡಬಹುದು.. ಅತ್ಯುತ್ತಮ ಓಟಕ್ಕಾಗಿ ಸಂರ್ಪೂಣ ಮಾಹಿತಿ","brand":"Pramod Deshpande","offers":[{"title":"Default Title","offer_id":42116000481539,"sku":"HB00000676","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.59.13PM.jpg?v=1638095571"},{"product_id":"vanyalokadalli-naku-hejjegalu","title":"ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು","description":"\u003cp\u003eಇದು \"ಪರಿಸರ ಸಂರಕ್ಷಣೆ ಖಂಡಿತ ಸಾಧ್ಯ\" ಎಂಬ ಸಕಾರಾತ್ಮಕ ಭಾವನೆಯನ್ನು ಓದುಗರಲ್ಲಿಯೂ ಸ್ಪುರಿಸಬಲ್ಲ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಾಗರಹೊಳೆಯಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀ ಚಿಣ್ಣಪ್ಪನವರ ಹೆಸರಿನಲ್ಲಿ ತಮಗೆ ಬಂದ ಪತ್ರದ ಬೆನ್ನು ಹತ್ತಿ, ಒಂದು ರೀತಿಯ ಪತ್ತೇದಾರಿ ಕಥೆಯಂತೆ ಅವರ ಬದುಕಿನ ಪರಿಸರ ಪಯಣ, ಗಂಭೀರ ವಿದ್ಯಾರ್ಥಿಯಿಂದ ಶುರುವಾಗಿ, ಪತ್ರಿಕಾ ವರದಿಗಾರನಾಗಿ, ಸಂಘರ್ಷಕನಾಗಿ, ಕೊನೆಗೆ ಕಾನೂನು ರೀತ್ಯಾ ಹೋರಾಟಕ್ಕಿಳಿಯುವವರೆಗೂ ಸಾಗಿದ್ದನ್ನು ವಿನಯ್ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. \u003cbr data-mce-fragment=\"1\"\u003e\u003cbr\u003e\u003c\/p\u003e\n\u003cp\u003e \u003c\/p\u003e","brand":"Makonahalli Vinay Madhav","offers":[{"title":"Default Title","offer_id":42116008673539,"sku":"HB00000675","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at4.12.32PM.jpg?v=1638096274"},{"product_id":"yashasvibhava","title":"ಯಶಸ್ವೀಭವ","description":"\u003csection data-mce-fragment=\"1\" class=\"synopsys section2\"\u003e\n\u003cdiv data-mce-fragment=\"1\" class=\"container\"\u003e\n\u003cdiv data-mce-fragment=\"1\" class=\"container-fluid\"\u003e\n\u003cdiv data-mce-fragment=\"1\" class=\"row\"\u003e\n\u003cdiv data-mce-fragment=\"1\" id=\"synopsys\" class=\"col-sm relative\"\u003e\n\u003cp data-mce-fragment=\"1\"\u003e'ಯಶಸ್ವೀಭವ' ಯಂಡಮೂರಿ ವೀರೇಂದ್ರನಾಥ ಅವರ ಅನುಭವ, ಆಲೋಚನೆಗಳ ವಿಶಿಷ್ಠ ಕೃತಿ. ಈ ಕೃತಿಯಲ್ಲಿ ವೀರೇಂದ್ರನಾಥ ಅವರು, ಕಂಡ ಅನುಭವ, ಅನುಭಾವಗಳನ್ನು, ವಿವಿಧ ಸನ್ನಿವೇಶಗಳ ಆಲೋಚನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಓದುವವರಿಗೆ ಕೃತಿ ವಿಭಿನ್ನವಾಗಿದೆ ಎನಿಸುವುದು ಮಾತ್ರವಲ್ಲದೇ ಕತೆಯ ರೂಪದಲ್ಲಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಆಲೋಚನೆಗಳ ಬಗ್ಗೆ ಚಿತ್ರಣ ನೀಡುತ್ತಾ, ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಇಣುಕು ನೋಟ ಬೀರಿರುವುದು ಕಂಡುಬರುತ್ತದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv data-mce-fragment=\"1\" id=\"buy_now_section\"\u003e\n\u003csection data-mce-fragment=\"1\" class=\"synopsys section2\"\u003e\n\u003cdiv data-mce-fragment=\"1\" id=\"\" class=\"container buylink\"\u003e\n\u003cdiv data-mce-fragment=\"1\" class=\"container-fluid\"\u003e\n\u003cdiv data-mce-fragment=\"1\" class=\"row\"\u003e\n\u003cdiv data-mce-fragment=\"1\" class=\"w-100\"\u003e\n\u003cdiv data-mce-fragment=\"1\" class=\"h2-head\"\u003e\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003c\/div\u003e","brand":"Dr. Yandamoori Veerendranath","offers":[{"title":"Default Title","offer_id":42116028236035,"sku":"HB00000671","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at4.12.32PM_1.jpg?v=1638097268"},{"product_id":"vishnuvardhan-jogi-sawanna-enterprises","title":"ಮಾತು|ಮೌನ|ಧ್ಯಾನ ವಿಷ್ಣುವರ್ಧನ","description":"ಅಪ್ಪಟ ಕಲಾವಿದ ಮೂಲತಃ ಅಂತರ್ಮುಖಿ. ಅವನು ಏನನ್ನೋ ಗಳಿಸಿ ಏನನ್ನೋ ಉಳಿಸಿ ಏನನ್ನೋ ಕೈಯಲ್ಲಿಟ್ಟು ತೆರಳುತ್ತಾನೆ. ಅವನ ಕಾಣಿಕೆಯನ್ನು ಮೆಚ್ಚಿ ಕೊಂಡಾಡುವವರು ಅಭಿಮಾನಿಗಳಾಗುತ್ತಾರೆ. ಮರೆಯುವ ಮುನ್ನ, ಅವನ ಹೆಜ್ಜೆ ಗುರುತುಗಳನ್ನು, ವ್ಯಕ್ತಿತ್ವದ ಸಂಗತ ಅಸಂಗತಗಳನ್ನು ಅಕ್ಷರಗಳಲ್ಲಿ ಬಂಧಿಸಿ ಇಡುವವನೂ ಕಲಾವಿದನೇ ಆಗಿರುತ್ತಾನೆ. ಅಂಥ ಇಬ್ಬರು ಕಲಾವಿದರು ನಿಮಗೆ ಒಳಪುಟಗಳಲ್ಲಿ ಸಿಗುತ್ತಾರೆ. ಒಬ್ಬನು ರಾಮಾಚಾರಿ, ಇನ್ನೊಬ್ಬನು ಅಕ್ಷರ ಕರ್ಮಚಾರಿ. ಚಲನಚಿತ್ರವನ್ನು ನೋಡಬೇಕು ಅದರ ಬಗ್ಗೆ ಓದಬಾರದು; ಕಲಾವಿದನ ಕುರಿತು ಓದಿಕೊಳ್ಳಬೇಕು, ಅವನನ್ನು ನೋಡಬಾರದು ಎಂಬ ಮಾತಿದೆ. ವಿಷ್ಣುವರ್ಧನ್ ಸಿನಿಮಾಗಳನ್ನು ಮತ್ತೊಮ್ಮೆ ನೋಡಿ. ಜೋಗಿ ಕಂಡುಂಡ ಈ ಅನುಭವ ದ್ರವ್ಯವನ್ನು ಯಾವಾಗಲಾದರೂ ಓದಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಎಸ್ ಕೆ ಶಾಮಸುಂದರ","brand":"Jogi","offers":[{"title":"Default Title","offer_id":42116032561411,"sku":"HB00000670","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-20at5.51.19PM.jpg?v=1774009368"},{"product_id":"naane-badava-naane-sukhi-sawanna","title":"ನಾನು ಬಡವ ನಾನೇ ಸುಖಿ","description":"ತಾಯಿಯ ನೆನಪುಗಳ ಮೂಲಕ ಒಡಮೂಡಿದ ಜೋಗಿಯವರ ಆತ್ಮಕಥಾನಕವೋ, ಮಗನೊಬ್ಬ ಬರೆದ ತಾಯಿಯ ಜೀವನಗಾಥೆಯೋ ಎಂಬ ಭೇದವನ್ನು ಮಸುಕು ಮಾಡುವ ಬರಹ ಇದು. ತಾಯಿಯ ಕುರಿತಾದ ಜೋಗಿ ಅವರ ಈ ನೆನಪಿನ ನೆರೆಯೊಳಗೆ ಭಯವಿದೆ, ತಾಕಲಾಟಗಳಿವೆ, ಅದಕ್ಕೆ ತನ್ನದೇ ಆದ ಚೆಲುವೂ ಇದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜ ನಾ ತೇಜಶ್ರೀ","brand":"Jogi","offers":[{"title":"Default Title","offer_id":42116033708291,"sku":"HB00000669","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at4.33.16PM.jpg?v=1638097415"},{"product_id":"rasa-tattva-kannada-book","title":"ರಸ ತತ್ತ್ವ","description":"\u003cp\u003e\u003cspan data-mce-fragment=\"1\"\u003eಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅಂದರು ಹಿರಿಯರು. ಆಧುನಿಕ ಬದುಕಿನಲ್ಲಿ ಒಳ್ಳೆಯ ಆರೋಗ್ಯ ಪಡೆಯಲು ಇರುವ ಆಹಾರದ ಗುಟ್ಟೇನು? ತಿನ್ನುವ ಆಹಾರದಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳಿತು ಅನ್ನುವ ಕುರಿತು ತಿಳಿವಿಗಿಂತ ಅಜ್ಞಾನವೇ ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿನ ಬಿಡಿಬಿಡಿಯಾಗಿರುವ ಜ್ಞಾನ ಪರಂಪರೆಯನ್ನು ಪೋಣಿಸುವ, ಜೋಡಿಸುವ ಕೆಲಸವನ್ನು ಆಹಾರ ತಜ್ಞ ಕೆ.ಸಿ.ರಘು ಅವರ ಜನಪ್ರಿಯ ಕೃತಿ ರಸ ತತ್ವ ಮಾಡಿದೆ.\u003c\/span\u003e\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"K. C. Raghu","offers":[{"title":"Default Title","offer_id":42116038131971,"sku":"HB00000668","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_095177d4-b06a-40b6-a6af-5fb143e671b6.jpg?v=1638097498"}],"url":"https:\/\/harivubooks.com\/collections\/sawanna-enterprises.oembed?page=3","provider":"Harivu Books","version":"1.0","type":"link"}