{"title":"Sampatooru Vishwanath","description":"","products":[{"product_id":"haasya-pataaki","title":"ಹಾಸ್ಯ ಪಟಾಕಿ","description":"\u003cp\u003e\u003c\/p\u003e","brand":"Sampatooru Vishwanath","offers":[{"title":"Default Title","offer_id":42020608508163,"sku":"HB00001817","price":20.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_dda8698d-b517-4abe-b341-7ea9a203427e.jpg?v=1636356310"},{"product_id":"1000-artapoorna-gaadegalu","title":"1000 ಅರ್ಥಪೂರ್ಣ ಗಾದೆಗಳು","description":"\u003cp\u003eಅರ್ಥಪೂರ್ಣವಾಗಬೇಕಾದರೆ ಮಾರ್ಗದರ್ಶನ ಅಗತ್ಯ. ಓದು ಬಲ್ಲವರಿಗೆ ಈ ಮಾರ್ಗದರ್ಶನ ಪುಸ್ತಕಗಳಿಂದ. ಆದರೆ, ಓದಲು ತಿಳಿಯದವರಿಗೆ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಹರಿದು ಬರುವ ಅನುಭವಯುಕ್ತ ಆಡುಮಾತಿನಿಂದ ಮಾರ್ಗದರ್ಶನ ಆಗುತ್ತದೆ. ಸಂಕ್ಷಿಪ್ತ, ಧ್ಯೇಯ ವಾಕ್ಯಗಳು 'ಗಾದೆ'ಗಳೆನಿಸಿಕೊಳ್ಳುತ್ತವೆ. ಇಂತಹ ಒಂದು ಸಾವಿರ ಗಾದೆಗಳು, ಸಾರ್ವಕಾಲಿಕ ನೀತಿಚಿಂತಾಮಣಿ ಎನ್ನಿಸಿಕೊಂಡು ನಿಮ್ಮ ಕೈಸೇರಿದೆ. ಪ್ರತಿಯೊಂದು ಗಾದೆಯ ಅರ್ಥ ಮನನಯೋಗ್ಯ. ಬದುಕಿನ ವಿವಿಧ ಹಂತ, ಚಟುವಟಿಕೆ, ತಿಳಿವಳಿಕೆಗಳಿಗೆ ಸಂಬಂಧಿಸಿದ ಈ ಗಾದೆಗಳಿಂದ ಪ್ರತಿಯೊಬ್ಬರೂ ಶಾಂತಿ,ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯ.\u003cbr\u003e\u003c\/p\u003e\n\u003cp\u003eರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾಗಿರುವ ಸಂಪಟೂರು ವಿಶ್ವನಾಥ್ ಈ ಕೃತಿಯನ್ನು ರೂಪಿಸಿಕೊಟ್ಟಿದ್ದು, ಅವರು ಸುಮಾರು 64 ಕೃತಿಗಳನ್ನೂ 2750ನ್ನೂ ಮೀರಿದ ಸಂಖ್ಯೆಯ ಇಂಗ್ಲಿಷ್ ಹಾಗೂ ಕನ್ನಡದ ಲೇಖನಗಳನ್ನೂ ಬರೆದಿರುವ ಅನುಭವಿ ಲೇಖಕರು. ವಿಜ್ಞಾನ, ವ್ಯಕ್ತಿತ್ವ ವಿಕಾಸ, ರಸಪ್ರಶ್ನೆ, ಪ್ರಬಂಧ ಹೀಗೆ ಅನೇಕ ಪ್ರಕಾರಗಳಲ್ಲಿ ಅವರ ಬರವಣಿಗೆ ಹರಿದಿದೆ. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. \u003c\/p\u003e","brand":"Sampatooru Vishwanath","offers":[{"title":"Default Title","offer_id":42020641800451,"sku":"HB00001395","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ghf.jpg?v=1636357070"},{"product_id":"hasya-pataki-vishwanath-navakarnataka","title":"ಹಾಸ್ಯ ಪಟಾಕಿ","description":"'ನಗುವು ಸಹಜ ಧರ್ಮ' ಎಂದಿದ್ದಾರೆ ಮಾನ್ಯ ಡಿ.ವಿ.ಜಿ. ಆದರೆ ಇಂದಿನ ದಿನಗಳಲ್ಲಿ ಸಹಜ ಅಂತಿರಲಿ, ಕೃತಕ ನಗುವಿಗೂ ಬರ ಬಂದಿದೆ. ಎಲ್ಲೆಲ್ಲೂ ಧಾವಂತ - ಆತಂಕ - ದುಗುಡ ತುಂಬಿದ ಮುಖಗಳೇ. ಜನರನ್ನು ನಗಿಸುವುದೆಂತು? ನಗೆ ಕ್ಲಬ್ಬುಗಳೇ ತಲೆ ಎತ್ತಿವೆ. ನಗು ಟಾನಿಕ್‌ನಂತೆ ಎಂದು ವೈದ್ಯರು ಪೂಸಿ ಮಾಡುತ್ತಾರೆ. ನಕ್ಕರೆ ಸ್ವರ್ಗ ಎಂದು ನಗೆ ಸಾಹಿತಿಗಳು ಓದುಗನ ಬೆನ್ನು ಹತ್ತಿದ್ದಾರೆ. ಅವರಲ್ಲೊಬ್ಬರು ಸಂಪಟೂರು ವಿಶ್ವನಾಥ್. ನಗೆ ಮಿಂಚು ಕೊಂಚ ಮುಖಕ್ಕೆ ಬಡಿದು ಕ್ಷಣಕಾಲ ಬೆಳಗಲೆಂದು ಯತ್ನಿಸಿದ್ದಾರೆ.\u003cbr\u003e\u003cbr\u003eಲೇಖಕರಾದ ಶ್ರೀ ಸಂಪಟೂರು ವಿಶ್ವನಾಥ್ ಅವರು ಎಂ. ಎಸ್ಸಿ. (ಸಸ್ಯಶಾಸ್ತ್ರ), ಬಿ. ಎಡ್. ಪದವೀಧರರು. ಗಾಂಧಿನಗರದ ಪ್ರೌಢನ್ನತ ಶಾಲೆಯಲ್ಲಿ ವೃತ್ತಿ ಆರಂಭಿಸಿದ ಇವರು 1996ರಲ್ಲಿ ಅದೇ ಶಾಲೆಯ ಪ್ರಿನ್ಸಿಪಾಲರಾಗಿ ನಿವೃತ್ತ ರಾದರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ವ್ಯಕ್ತಿತ್ವ ವಿಕಸನ, ವಿಜ್ಞಾನ ರಸಪ್ರಶ್ನೆ, ಲಘು ಪ್ರಬಂಧ, ಹಾಸ್ಯಕ್ತಿಗಳು, ಶಿಶುಕವನ ಮುಂತಾದ ಹಲವು ಲೇಖನಗಳು ಪ್ರಕಟಗೊಂಡಿವೆ.","brand":"Sampatooru Vishwanath","offers":[{"title":"Default Title","offer_id":42136560304387,"sku":"HB00000265","price":20.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/18cfe544-3396-455f-96bf-0ec53e0289c9.jpg?v=1638514337"},{"product_id":"sanathana-subhashitagalu-kannada-wisdom-sapna","title":"ಸನಾತನ ಸುಭಾಷಿತಗಳು","description":"1380 ಸುಭಾಷಿತಗಳು ಮತ್ತು ಅವುಗಳ ಅರ್ಥಗಳ ಸಹಿತ ಒಂದು ಪುಸ್ತಕ.","brand":"Sampatooru Vishwanath","offers":[{"title":"Default Title","offer_id":42140879192323,"sku":"HB00000073","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-04at6.54.03PM.jpg?v=1638624728"},{"product_id":"neetigondu-kate-kannada-childrens-book","title":"ನೀತಿಗೊಂದು ಕಥೆ","description":"\u003cp\u003eಮಕ್ಕಳ ಕಲಿಕೆಯಲ್ಲಿ ಕಥೆಯ ಪಾತ್ರ ದೊಡ್ಡದು. ನೀತಿಯನ್ನು ನೇರವಾಗಿ ಹೇಳದೆ, ಸ್ವಾರಸ್ಯವೆನಿಸುವ ಘಟನೆ, ಅಥವಾ ಕಾಲ್ಪನಿಕ ಕಥೆಯ ಮೂಲಕ ಹೇಳುವುದು ಪರಿಣಾಮಕಾರಿ ವಿಧಾನ, ನೂರಾರು ವರ್ಷಗಳಿಂದ ಪ್ರಚಲಿತವಾಗಿರುವ ಈ 'ಕಥೆಯಿಂದ ಪಾಠ' ನಿಧಾನವಾಗಿ ಕಾಣೆಯಾಗುತ್ತಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೊರತೆಯು ಈಗ ಕಾಳಜಿಯಾಗಿದೆ. ಮಕ್ಕಳಿಗೆ ಹೇಳಲು ಯೋಗ್ಯವಾದ 82 ಕಥೆಗಳ ಸಂಗ್ರಹವೇ ಸಂಪಟೂರು ವಿಶ್ವನಾಥ 'ನೀತಿಗೊಂದು ಕಥೆ,' ಶೀರ್ಷಿಕೆಯೇ ಹೇಳುವಂತೆ ಸಾರ್ಥಕ ಜೀವಿಗಳ ಬದುಕು ಮತ್ತು ದೇಶ ವಿದೇಶದ ಜಾನಪದದಿಂದ ಆರಿಸಿರುವ ಈ ಕಥೆಗಳು ಮಕ್ಕಳಿಗೆ ರುಚಿಸುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿರುವ 82 ಕಥೆಗಳಲ್ಲಿ ಪ್ರತಿಯೊಂದೂ ತಂದೆ ತಾಯಿ ಮತ್ತು ಶಿಕ್ಷಕರು ಪಾಠಕ್ಕೆ ಪೂರಕ ವಸ್ತುವನ್ನಾಗಿ ಬಳಸುವ ಅರ್ಹತೆಯನ್ನು ಪಡೆದಿವೆ.\u003c\/p\u003e\n\u003cp\u003e'ನೀತಿಗೊಂದು ಕಥೆಯನ್ನು ಬರೆದಿರುವ ಸಂಪಟೂರು ವಿಶ್ವನಾಥ್ ಕಳೆದ 46 ವರ್ಷಗಳಿಂದ 90 ಪುಸ್ತಕಗಳನ್ನೂ, 3000ಕ್ಕೂ ಮಿಕ್ಕಿ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕೆಡಮಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಹಾಸ್ಯಬ್ರಹ್ಮ ಬೀಚಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ, ಸ್ನೇಹ ಸೇತು ಪ್ರಶಸ್ತಿ, ಸಪ್ನ ರಾಜ್ಯೋತ್ಸವ ಪ್ರಶಸ್ತಿ, ಮುಂತಾದವನ್ನು ಮುಡಿಗೇರಿಸಿಕೊಂಡಿರುವ ವಿಶ್ವನಾಥ್‌ರ 'ನೀತಿಗೊಂದು ಕಥೆ' ಸಪ್ನ ಬುಕ್ ಹೌಸ್ ಪ್ರಕಟಿಸುತ್ತಿರುವ ಲೇಖಕರ 15ನೆಯ ಕೃತಿ.\u003cbr\u003e\u003cbr\u003eಕನ್ನಡ ಮಕ್ಕಳ ಸಾಹಿತ್ಯ ಪ್ರಿಯರೆಲ್ಲರೂ ಕೊಂಡು ಓದಬೇಕಾದ ಕೃತಿ ಇದು.\u003c\/p\u003e","brand":"Sampatooru Vishwanath","offers":[{"title":"Default Title","offer_id":42758675857667,"sku":"HB00002628","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7fc12915-d476-4962-bf3d-fa2326fcc0da.jpg?v=1651240112"},{"product_id":"kshanakkondu-kate-kannada-childrens-book","title":"ಕ್ಷಣಕ್ಕೊಂದು ಕಥೆ","description":"\u003cp\u003e'ಭಾರತೀಯರು ನೂರಾರು ವರ್ಷಗಳಿಂದ ತಮ್ಮ ಮಕ್ಕಳಿಗೆ ಕಥೆಗಳ ಮೂಲಕ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಆ ಮಕ್ಕಳಲ್ಲಿ ಸೃಜನಶೀಲತೆ, ಸೂಕ್ಷ್ಮಬುದ್ಧಿ, ವಿವೇಕ ಮತ್ತು ಧರ್ಮಶ್ರದ್ಧೆ ಬೆಳೆಯುವುದಕ್ಕೆ ಕಥೆಗಳೇ ಕಾರಣ. ಇದು ಪರಿಣಾಮಕಾರಿಯಾದ ವಿಧಾನ. ನಾವೂ ಇದನ್ನು ಅನುಸರಿಸಬೇಕಾಗಿದೆ.'\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬರಾಕ್ ಒಬಾಮಾ, \u003c\/p\u003e\n\u003cp\u003eಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರು\u003cbr data-mce-fragment=\"1\"\u003e\u003cbr data-mce-fragment=\"1\"\u003eಇತ್ತೀಚೆಗೆ ಕಥೆಗಳನ್ನು ಸ್ವಾರಸ್ಯಕರವಾಗಿ ಹೇಳುವವರು ಮತ್ತು ಕುತೂಹಲದಿಂದ ಕೇಳಿಸಿಕೊಳ್ಳುವವರು ಕಡಿಮೆಯಾಗಿದ್ದಾರೆ ಎನ್ನುವ ಅಳಲು ಸತ್ಯಕ್ಕೆ ದೂರವಲ್ಲ. ಈ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಮಕ್ಕಳಿಗಾಗಿಯೇ ಬರೆದಿರುವ 120 ಸಣ್ಣ ಕಥೆಗಳ ಸಂಕಲನವೇ ಈ ಹೊತ್ತಗೆ 'ಕ್ಷಣಕ್ಕೊಂದು ಕಥೆ.'\u003cbr data-mce-fragment=\"1\"\u003e\u003cbr data-mce-fragment=\"1\"\u003eಮಕ್ಕಳ ಚಂಚಲ ಬುದ್ಧಿಯನ್ನು ಹಿಡಿದಿಡಲು ಸಣ್ಣ ಕಥೆಗಿಂತ ಉತ್ತಮ ಮಾರ್ಗವಿಲ್ಲ. 'ಕ್ಷಣಕ್ಕೊಂದು ಕಥೆ' ಯ ಮೂಲಕ, ಮೌಲ್ಯಗಳನ್ನು ಪ್ರತಿಪಾದಿಸುವ ಪ್ರಯತ್ನ ಇಲ್ಲಿ ನಡೆದಿದೆ.\u003c\/p\u003e\n\u003cp\u003eಈ ಕೃತಿಯನ್ನು ರಚಿಸಿರುವ ಸಂಪಟೂರು ವಿಶ್ವನಾಥ್ ಕಳೆದ 45 ವರ್ಷಗಳಿಂದ ಸುಮಾರು 89 ಪುಸ್ತಕಗಳನ್ನೂ, 3000ಕ್ಕೂ ಮಿಕ್ಕಿ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕೆಡಮಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಹಾಸ್ಯಬ್ರಹ್ಮ ಬೀಚಿ ಪ್ರಶಸ್ತಿ, ಸಪ್ನ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ ಮುಂತಾದವನ್ನು ಪಡೆದಿರುವ ವಿಶ್ವನಾಥ್‌ರ 'ಕ್ಷಣಕ್ಕೊಂದು ಕಥೆ' ಸಪ್ನ ಬುಕ್ ಹೌಸ್ ಪ್ರಕಟಿಸುತ್ತಿರುವ ಲೇಖಕರ 14ನೆಯ ಪುಸ್ತಕ.\u003cbr\u003e\u003cbr\u003eಕನ್ನಡ ನಾಡಿನ ಪುಸ್ತಕಪ್ರಿಯರು ಕೊಂಡು ಓದಬೇಕಾದ, ಮಕ್ಕಳ ಕಥೆ ಪುಸ್ತಕ ಇದು.\u003cbr\u003e\u003cbr\u003eಪ್ರಕಾಶಕರು.\u003c\/p\u003e","brand":"Sampatooru Vishwanath","offers":[{"title":"Default Title","offer_id":42762556047619,"sku":"HB00002644","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d19081dc-472c-4479-ba6c-a7e096d263ce.jpg?v=1651402919"},{"product_id":"kaadina-raja-mattu-itara-kategalu-childrens-kannada-book","title":"ಕಾಡಿನ ರಾಜ ಮತ್ತು ಇತರ ಕಥೆಗಳು","description":"ಕನ್ನಡದ ಹಿರಿಯ ಲೇಖಕರಾದ ಸಂಪಟೂರು ವಿಶ್ವನಾಥರು ಕಥೆಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು, ನೈತಿಕ ಮೌಲ್ಯಗಳನ್ನು ಬಿತ್ತಬಹುದೆಂದು ಬಲವಾಗಿ ನಂಬಿ ಅದರಂತೆಯೇ ಬಹು ಹಿಂದಿನಿಂದಲೂ ಮಕ್ಕಳನ್ನು ಪ್ರಭಾವಿಸುವ ಕಥೆಗಳನ್ನು ನೀಡುತ್ತ ಬಂದಿರುವವರು. ತಮ್ಮ ದೀರ್ಘಕಾಲದ ಬೋಧನಾ ವೃತ್ತಿಯಿಂದಾಗಿ ಮಕ್ಕಳ ಮನಸ್ಸನ್ನು ಅರಿತು ಅವರ ಕುತೂಹಲವನ್ನು ಅರಳಿಸುವ ಕಥೆಗಳನ್ನು ಬರೆಯುವುದು ಅವರಿಗೆ ಬಹು ಸಹಜವಾದುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.\u003cbr data-mce-fragment=\"1\"\u003e","brand":"Sampatooru Vishwanath","offers":[{"title":"Default Title","offer_id":42797527761155,"sku":"HB00002753","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5cbe0ca9-bca4-4bd5-a556-00b663bd3d6c.jpg?v=1652168268"},{"product_id":"namma-hemmeya-kannadigaru-biographys-kannada-book","title":"ನಮ್ಮ ಹೆಮ್ಮೆಯ ಕನ್ನಡಿಗರು","description":"ಸುಮಾರು ಒಂದೂವರೆ ಸಾವಿರ ವರ್ಷಗಳಷ್ಟು ಇತಿಹಾಸ ಇರುವ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣಕರ್ತರು ಲಕ್ಷಾಂತರ ಮಂದಿ, ಈ ಕಾರಣಕರ್ತರ ಸಾಧನೆಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದವು. ಆಧ್ಯಾತ್ಮ, ತತ್ತ್ವಜ್ಞಾನ, ಸಾಹಿತ್ಯ, ಸಮಾಜಸೇವೆ, ಸಾರ್ವಜನಿಕ ಆಡಳಿತ, ವಿಜ್ಞಾನ, ತಂತ್ರಜ್ಞಾನ, ಕಲೋಪಾಸನೆ, ಕ್ರೀಡೆ, ಹವ್ಯಾಸ, ರಾಜಕಾರಣ-ಇಂತಹ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ಮಹನೀಯರನ್ನು ಸ್ಮರಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ವಿವಿಧ ಕ್ಷೇತ್ರಗಳ ಸಾಧಕ ಸಾಧಕಿಯರ ಸಂಖ್ಯೆ ಸಾವಿರಕ್ಕೂ ಹೆಚ್ಚು. ಇವರ ಪೈಕಿ ಕೆಲವರನ್ನು ಮಾತ್ರ ಇಂದಿನವರಿಗೆ ಪರಿಚಯಿಸುವುದು ನ್ಯಾಯಸಮ್ಮತವಲ್ಲ. ಆದರೂ ಹೊತ್ತಗೆಯ ಗಾತ್ರವನ್ನು ಗಮನದಲ್ಲಿಟ್ಟುಕೊಂಡು 372 ಮಹನೀಯರನ್ನು ಆರಿಸಿಕೊಳ್ಳಲಾಗಿದೆ.","brand":"Sampatooru Vishwanath","offers":[{"title":"Default Title","offer_id":43589159387395,"sku":"HB00003776","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_cb35e61c-815e-4696-af2a-fee56027d665.jpg?v=1670934841"},{"product_id":"ವಿದ್ಯಾ-ಸಂಪನ್ನ-ಕನ್ನಡಿಗರು","title":"ವಿದ್ಯಾ ಸಂಪನ್ನ ಕನ್ನಡಿಗರು","description":"\u003cp\u003eಕನ್ನಡ ನಾಡುನುಡಿಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ, ವ್ಯಾಸಂಗ ಕೌಶಲ, ಅನುಭವ, ಸಮಯ, ಕರ್ತವ್ಯಪ್ರಜ್ಞೆಗಳನ್ನು ಧಾರೆ ಎರೆದಿರುವವರು ಲಕ್ಷಾಂತರ ಮಂದಿ. ಈ ಲಕ್ಷಾಂತರ ಕನ್ನಡಿಗರಲ್ಲಿ ಭಾಷಾಪ್ರೇಮ ಪ್ರಕಟವಾದ ರೀತಿ ಅವರನ್ನು ಸ್ಮರಣಯೋಗ್ಯರನ್ನಾಗಿ ಮಾಡಿದೆ. ನಾನು ಮೊದಲನೆಯ ಭಾಗ 'ನಮ್ಮ ಹೆಮ್ಮೆಯ ಕನ್ನಡಿಗರು'ನಲ್ಲಿ ಚಿಂತಕರು, ಆಧ್ಯಾತ್ಮಜೀವಿಗಳು, ಸಮಾಜ ಸೇವಕರು, ಆಡಳಿತಗಾರರು, ರಾಜಕಾರಣಿಗಳು ಮತ್ತು ಕಲೋಪಾಸಕರನ್ನು; ಎರಡನೆಯ ಭಾಗದಲ್ಲಿ ಆದರ್ಶ ಅಧ್ಯಾಪಕರು, ಸಂಶೋಧಕರು, ದಾರ್ಶನಿಕರನ್ನು ಹಾಗೂ ಮೂರನೆಯ ಭಾಗದಲ್ಲಿ 725 ಸಾಹಿತಿಗಳನ್ನು ರಸಪ್ರಶ್ನೆಗಳ ರೂಪದಲ್ಲಿ ಸ್ಮರಿಸಿಕೊಂಡಿದ್ದೇನೆ. ಪುಸ್ತಕದ ಗಾತ್ರದ ದೃಷ್ಟಿಯಿಂದ ಕೇವಲ ಕೆಲವರನ್ನೇ ಆರಿಸಿಕೊಳ್ಳುವುದು ಅನಿವಾರ್ಯವಾಯಿತು.\u003cbr\u003e\u003cbr\u003e-ಸಂಪಟೂರು ವಿಶ್ವನಾಥ್\u003c\/p\u003e\n\u003cdiv id=\"gtx-trans\" style=\"position: absolute; left: -119px; top: -18.4167px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Sampatooru Vishwanath","offers":[{"title":"Default Title","offer_id":44516490805507,"sku":"HB00004515","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_121def0b-47a9-4f30-8d00-9787ef8a5c7e.jpg?v=1703229680"},{"product_id":"shree-krishnana-kate-childrens-book-sampaturu-vishwanath-kannada-book","title":"ಶ್ರೀ ಕೃಷ್ಣನ ಕಥೆ","description":"\u003cp\u003eಮಕ್ಕಳ ಪುಸ್ತಕ.\u003c\/p\u003e","brand":"Sampatooru Vishwanath","offers":[{"title":"Default Title","offer_id":46765740949763,"sku":"HB00005194","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ShreeKrishnanaKate.jpg?v=1745234005"}],"url":"https:\/\/harivubooks.com\/collections\/sampatooru-vishwanath-kannada-books.oembed","provider":"Harivu Books","version":"1.0","type":"link"}