{"title":"Karnataka - Kannada - Kannadiga","description":"","products":[{"product_id":"shravanabelagolada-shasanagalu-ondu-samskrutika-adhyayana","title":"ಶ್ರವಣಬೆಳಗೊಳದ ಶಾಸನಗಳು ಒಂದು ಸಾಂಸ್ಕೃತಿಕ ಅಧ್ಯಯನ","description":"\u003cp\u003eಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ, ಒಂದು ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಶ್ರವಣಬೆಳಗೊಳದ ಅತ್ಯಮೂಲ್ಯವಾದ ಶಾಸನಗಳ ಸಾಂಸ್ಕೃತಿಕ ಅಧ್ಯಯನವನ್ನು ಪ್ರಸ್ತುತ ಗ್ರಂಥ \"ಶ್ರವಣಬೆಳಗೊಳದ ಶಾಸನಗಳು: ಒಂದು ಸಾಂಸ್ಕೃತಿಕ ಅಧ್ಯಯನ'’. ಶಾಸನಗಳು ಎಂದೂ ಸಾಂಸ್ಕೃತಿಕ ವಾಹಕಗಳಾಗಿ ಕೆಲಸ ಮಾಡಿವೆ. ಆದರೆ ಅದಕ್ಕಿಂತ ಅವುಗಳ ಮುಖ್ಯ ಉದ್ದೇಶ ಮಾಹಿತಿಯನ್ನು ಅಧಿಕೃತವಾಗಿ ನೀಡುವುದು. ಆ ಮಾಹಿತಿ ಸಂಬಂಧಪಟ್ಟ ಕಾಲದ ನಿಖರ ಪರಿಸ್ಥಿತಿಯನ್ನು ತಿಳಿಸುವುದಕ್ಕೆ ಸಹಕಾರಿಯಾಗಿವೆ. ಶಾಸನಗಳು ಮುಖ್ಯವಾಗಿ ಇತಿಹಾಸವನ್ನು ರಚಿಸಿಕೊಳ್ಳುವುದಕ್ಕೆ, ಪುನರ್ ರಚಿಸಿಕೊಳ್ಳುವುದಕ್ಕೆ ತುಂಬಾ ಸಹಕಾರಿಯಾಗಿವೆ. ಭಾರತೀಯ ದೃಷ್ಟಿಯಲ್ಲಿ ಶಾಸನಗಳು, ದೇವಸ್ಥಾನಗಳು...ಇತಿಹಾಸ ನಿರೂಪಿಸುವ ಆಕರಗಳಾಗಿ ಉಳಿದಿವೆ.\u003c\/p\u003e","brand":"Dr. S. Vimala","offers":[{"title":"Default Title","offer_id":42020603527427,"sku":"HB00001884","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_32ef006a-0f59-46c1-8d52-dcb4696d4476.jpg?v=1636356193"},{"product_id":"kappe-arabhattana-shaasana","title":"ಕಪ್ಪೆ ಅರಭಟ್ಟನ ಶಾಸನ ಸಮಗ್ರ ಅಧ್ಯಯನ","description":"\u003cp\u003e\u003cspan\u003eಹಿಂದೊಮ್ಮೆ ಪೂರ್ವ ಚಾಳುಕ್ಯರ ರಾಜಧಾನಿಯಾಗಿದ್ದ ಬಾದಾಮಿಯ ಶಾಸನ ಈ ಅಭ್ಯಾಸದ ಪ್ರಧಾನ ವಸ್ತು. ಜೆ.ಎಫ್. ಫ್ಲೀಟ್ ಇದನ್ನು 1881ರಲ್ಲಿಯೇ ಬೆಳಕಿಗೆ ತಂದರೂ ಸುಮಾರು ಅರ್ಧ ಶತಮಾನ ಕಾಲ ಇದು ಯಾರ ಗಮನವನ್ನೂ ಸೆಳೆಯಲಿಲ್ಲ. ಇದರಲ್ಲಿ ಬಳಸಿರುವ ವಿಶೇಷ ಛಂದಸ್ಸು ಮತ್ತು ಈ ಶಾಸನ ವೀರನಲ್ಲಿ ಸ್ಥಳೀಯರು ಕಂಡುಕೊಂಡ ಸ್ವಸ್ವರೂಪದಿಂದಾಗಿ ಕೆಲವು ಭಾಷಾಶಾಸ್ತ್ರಜ್ಞರ ಕುತೂಹಲವನ್ನು ಇದು ಕ್ರಮೇಣ ಕೆರಳಿಸತೊಡಗಿತು. ಇದರ ಪರಿಣಾಮದಿಂದಾಗಿ, 1930-2011ರ ಅವಧಿಯಲ್ಲಿ ಹತ್ತು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡವು. ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿಯೇ ಅತ್ಯಂತ ಪುರಾತನವೆನಿಸಿದ ತ್ರಿಪದಿ ಛಂದಸ್ಸಿನಲ್ಲಿ ರಚಿಸಿದ ಪದ್ಯಗಳನ್ನಲ್ಲದೆ, ಇಲ್ಲಿಯವರೆಗೂ ಇದರ ಬಗ್ಗೆ ಮಾಡಿದ ಸಂಶೋಧನೆಯ ಸ್ವರೂಪವನ್ನು ಪರಿಚಯಿಸಲು ನಾನಿಲ್ಲಿ ಪ್ರಯತ್ನಿಸಿರುವೆ.\u003c\/span\u003e\u003cbr\u003e\u003cspan\u003e*\u003c\/span\u003e\u003cbr\u003e\u003cspan\u003e…ಶಾಸನದ ಪಾಠವನ್ನು ಇದ್ದಕ್ಕಿದ್ದಂತೆಯೇ ಇಲ್ಲವೇ ಅಲ್ಪಸ್ವಲ್ಪ ಬದಲಿಸಿಯೋ ಬೇರೊಂದು ಪ್ರದೇಶದಲ್ಲಿ ಮರುಕಂಡರಿಸಿದ ನಿದರ್ಶನಗಳನ್ನು ವಿರಳವಾಗಿಯಾದರೂ ಕಾಣಬಹುದು, ಆದರೆ ಒಂದು ಶಾಸನವನ್ನು ತುಂಡರಿಸಿ ಒಂದೇ ಸ್ಥಳದಲ್ಲಿ ಅದನ್ನು ಹಂಚಿರುವುದನ್ನು ನಮ್ಮ ದೇಶದಲ್ಲೆಲ್ಲಿಯೂ ಕಾಣೆವು. ಈ ವಿಶೇಷ ಪ್ರಯೋಗದಿಂದಾಗಿ ನಮ್ಮ ದೇಶದ ಶಾಸನ ಕ್ಷೇತ್ರದಲ್ಲಿ ತಟ್ಟುಕೋಟೆಯ ಈ ಶಾಸನಕ್ಕೆ ವಿಶಿಷ್ಟ ಸ್ಥಾನವೊಂದು ದೊರಕಿದೆ.\u003c\/span\u003e\u003cbr\u003e\u003cspan\u003e*\u003c\/span\u003e\u003cbr\u003e\u003cspan\u003eಈ ಶಾಸನದ ಸಾಹಿತ್ಯಿಕ ಚರ್ಚೆ ಇಂದು ಮುಕ್ತಾಯದ ಹಂತ ತಲುಪಿದೆ. ತ್ರಿಪದಿ ಛಂದಸ್ಸಿನ ಪ್ರಾರಂಭವನ್ನು ನಾವಿಲ್ಲಿ ಕಂಡು, ಈ ಕಾವ್ಯಪ್ರಭೇದವು (ಆಂಧ್ರಪ್ರದೇಶವನ್ನೊಳಗೊಂಡು) ದಖ್ಖಣದಲ್ಲೆಲ್ಲ ಪ್ರಸರಿಸಿ, ಗಟ್ಟಿಗೊಳ್ಳುತ್ತಾ ರಂಗುಪಡೆದುಕೊಳ್ಳುತ್ತಾ ಮುಂದುವರಿದು, ಕನ್ನಡದ ಮಹಾಕವಿಗಳಾದ ಪಂಪ, ಪೊನ್ನ, ದುರ್ಗಸಿಂಹ, ಇಮ್ಮಡಿ ನಾಗವರ್ಮ, ಜನ್ನ, ಬಂಧುವರ್ಮ, ಮುಂತಾದವರ ಮೇಲೆ ಹೇಗೆ ಪ್ರಭಾವ ಬೀರಿ, ಕನ್ನಡದ ಸಂತ ಕವಿಯಾದ ಸರ್ವಜ್ಞನ ಹಾಡುಗಳಲ್ಲಿ ಹೇಗೆ ಔನ್ನತ್ಯದ ಅಂಚನ್ನು ಕಂಡುಕೊಂಡಿತು, ಮತ್ತು ಕನ್ನಡ ಮತ್ತು ಸಂಸ್ಕøತ ಅಲಂಕಾರಿಕರ ಗಮನವನ್ನು ತನ್ನೆಡೆಗೆ ಹೇಗೆ ಸೆಳೆದುಕೊಂಡಿತು, ಎಂಬುದನ್ನು ಕನ್ನಡ ಸಾಹಿತ್ಯ ಚರಿ\u003c\/span\u003e\u003c\/p\u003e","brand":"Sha. Shettar","offers":[{"title":"Default Title","offer_id":42020604018947,"sku":"HB00001877","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_8a64ccbc-00e1-431e-abac-e01940853905.jpg?v=1636356204"},{"product_id":"pracheena-bharathavemba-adbhuta","title":"ಪ್ರಾಚೀನ ಭಾರತವೆಂಬ ಅದ್ಭುತ","description":"\u003cp\u003e\u003c\/p\u003e","brand":"D. R. Mirji","offers":[{"title":"Default Title","offer_id":42020604215555,"sku":"HB00001874","price":950.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_3d48e711-9597-4705-861a-0f7514a2234e.jpg?v=1636356209"},{"product_id":"rebel-sultanaru","title":"ರೆಬೆಲ್ ಸುಲ್ತಾನರು","description":"\u003cp\u003eಈ ಪುಸ್ತಕದ ವಿಷಯ ಮಹತ್ವದ್ದು. ಬಹುತ್ವದ ಪರಿಕಲ್ಪನೆಯು ತೆಳುವಾಗುತ್ತಿರುವ ಈ ಕಾಲಘಟ್ಟದಲ್ಲಿ ರೆಬೆಲ್ ಸುಲ್ತಾನರು ಒಂದು ಪ್ರಮುಖ ಪುಸ್ತಕವಾಗಿ ನಿಲ್ಲುತ್ತದೆ. ಭಾರತದ ಇತಿಹಾಸವು ಎಂದಿಗೂ ಕಪ್ಪು-ಬಿಳುಪಿನ ಚೌಕಟ್ಟಾಗಿರಲಿಲ್ಲ. ಬದಲಾಗಿ ವಿವಿಧ ಧರ್ಮಗಳ, ಪದ್ಧತಿಗಳ, ರಾಜಕೀಯ, ಸಾಮಾಜಿಕ ರಚನೆಗಳ ಮಿಶ್ರಣದ ವರ್ಣಮಯ ಸ್ಥಳವಾಗಿತ್ತು ಎಂಬುದನ್ನು ಈ ಪುಸ್ತಕವು ವೃತ್ತಾಂತಗಳ ಸಮೇತವಾಗಿ ನಿರೂಪಿಸುತ್ತದೆ. ಒಬ್ಬ ಹಿಂದೂ ದೊರೆಯು ರಾಜಕೀಯ ಕಾರಣಗಳಿಗಾಗಿ, ಮುಸಲ್ಮಾನರ ಕುಟುಂಬದೊಂದಿಗೆ ವಿವಾಹ ಸಂಬಂಧ ಬೆಸೆದ ಕಥೆಗಳಿವೆ, ಬ್ರಾಹ್ಮಣ್ಯ ಮೂಲದ ವ್ಯಕ್ತಿಯು ಮುಸಲ್ಮಾನ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಉಲ್ಲೇಖಗಳಿವೆ. ಗುಲಾಮರು ದೊರೆಗಳಾದ, ದೊರೆಗಳು ರಸ್ತೆಗಿಳಿದು ಪಲಾಯನಗೈದಂತಹ ಹಲವಾರು ವಿವರಗಳು ಇವೆ. ಮುಸಲ್ಮಾನ ದೊರೆಗಳು ಹಿಂದೂ ದೇವರ ಆರಾಧಕರಾಗಿದ್ದ ಚಿತ್ರಣಗಳಿವೆ. ಮುಸಲ್ಮಾನ ಸುಲ್ತಾನರ ಕ್ರೌರ್ಯದೊಂದಿಗೆ ಹಿಂದೂ ದೊರೆಗಳ ವಂಚನೆ, ಕ್ರೂರತ್ವದ ಪರಾಕಾಷ್ಠತೆಯ ಉದಾಹರಣೆಗಳೂ ಇವೆ. ಹಿಂದೂ, ಮುಸಲ್ಮಾನ ಎಂಬ ಪರಿಕಲ್ಪನೆಗಳು ರಾಜಕೀಯ ದಾಳಗಳಾಗಿತ್ತೇ ಹೊರತು, ಧಾರ್ಮಿಕ ಸಂಘರ್ಷಗಳಾಗಿರಲಿಲ್ಲ ಎಂಬ ವಿವರಗಳಿವೆ. ಈ ಎಲ್ಲಾ ಕುತೂಹಲಕಾರಿ ಮಾಹಿತಿಗಳಿಗೂ ಮೂಲವಾದ ಹಲವಾರು ಆಕರ ಗ್ರಂಥಗಳನ್ನು ಲೇಖಕರು ನಮೂದಿಸಿದ್ದಾರೆ. ಹೀಗೆ ಅನೇಕ ವಿಷಯಗಳ ಆಗರವಾದ ಈ ಪುಸ್ತಕವು ಒಳ್ಳೆಯ ಸಂಪನ್ಮೂಲ ವಸ್ತುವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಒಂದೇ ಕಾಲಮಾನದಲ್ಲಿ ನಡೆದಿರಬಹುದಾದ ಭಿನ್ನ ಸಾಮ್ರಾಜ್ಯಶಾಹಿಗಳ ಕಥೆಗಳು ಬೇರೆಬೇರೆ ಅಧ್ಯಾಯಗಳಾಗಿ ಕಾಣಿಸಿಕೊಂಡಿವೆ.\u003c\/p\u003e","brand":"Translated by Samyukta Puligal","offers":[{"title":"Default Title","offer_id":42020607459587,"sku":"HB00001831","price":420.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_d8fd6a58-f6b8-4e4c-b446-446be9940a50.jpg?v=1636356284"},{"product_id":"stapati","title":"ಸ್ಥಪತಿ","description":"","brand":"Shantinatha Dibbada","offers":[{"title":"Default Title","offer_id":42020621811971,"sku":"HB00001649","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/stapati_0001.jpg?v=1636356626"},{"product_id":"hosahuttu-karnatakada-hitachintane-chitrakale-mattu-naatakakale","title":"ಹೊಸಹುಟ್ಟು ಕರ್ನಾಟಕದ ಹಿತಚಿಂತನೆ ಚಿತ್ರಕಲೆ ಮತ್ತು ನಾಟಕಕಲೆ","description":"","brand":"Aa. Na. Kru.","offers":[{"title":"Default Title","offer_id":42020624367875,"sku":"HB00001629","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/hosahuttukarnatakadahitachintanechitrakalemattunaatakakale_0001.jpg?v=1636356666"},{"product_id":"channa-basava-nayaka","title":"ಚನ್ನಬಸವನಾಯಕ","description":"","brand":"Srinivasa","offers":[{"title":"Default Title","offer_id":42020624826627,"sku":"HB00001623","price":700.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/channabasavanayaka_0001.jpg?v=1636356677"},{"product_id":"a-na-kru-kannada-samskruti","title":"ಅ.ನ.ಕೃ. ಮತ್ತು ಕನ್ನಡ ಸಂಸ್ಕೃತಿ","description":"","brand":"Narahalli Balasubrahmanya","offers":[{"title":"Default Title","offer_id":42020624957699,"sku":"HB00001621","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/A.NA.KRU.mattukannadasamskruti_0001.jpg?v=1636356681"},{"product_id":"tuluvara-mulataana-aadi-aalade-parampare-mattu-parivartane","title":"ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ","description":"","brand":"Dr. Indira Heggade","offers":[{"title":"Default Title","offer_id":42020626497795,"sku":"HB00001609","price":475.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/tuluvaramulataanaaadiaalade_0001.jpg?v=1636356708"},{"product_id":"kannada-sahitya-parampare-mattu-janaparate","title":"ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರತೆ","description":"\u003cp\u003e\u003c\/p\u003e","brand":"Dr. V. P. Narayan","offers":[{"title":"Default Title","offer_id":42020629676291,"sku":"HB00001565","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannada-sahitya-parampare-mattu-janaparate_0001j.jpg?v=1636356784"},{"product_id":"mylaaralinga-parampare","title":"ಮೈಲಾರಲಿಂಗ ಪರಂಪರೆ","description":"\u003cp\u003e\u003c\/p\u003e","brand":"Dr. F. T. Hallikeri","offers":[{"title":"Default Title","offer_id":42020640325891,"sku":"HB00001415","price":280.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4043.jpg?v=1636357036"},{"product_id":"nammadidu-itihaasa","title":"ನಮ್ಮದಿದು ಇತಿಹಾಸ","description":"\u003cp\u003e\u003c\/p\u003e","brand":"Dr. H. S. Gopal Rao","offers":[{"title":"Default Title","offer_id":42020641341699,"sku":"HB00001401","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3948.jpg?v=1636357058"},{"product_id":"vijayanagara-samrajya-2","title":"ವಿಜಯನಗರ ಸಾಮ್ರಾಜ್ಯ ಸಂಪುಟ-೨","description":"\u003cp\u003eಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳುಬೀಳುಗಳಿಗೆ ಸಂಬಂಧಿಸಿದ್ದು. ವಿಜಯನಗರ ಸಾಮ್ರಾಜ್ಯದ ಕುರಿತಂತೆ ಮೂಡಿಬಂದ ಎರಡನೆಯ ಸಂಪುಟ. ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.\u003c\/p\u003e","brand":"Aa. Na. Kru.","offers":[{"title":"Default Title","offer_id":42020646781187,"sku":"HB00001331","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4074.jpg?v=1636357171"},{"product_id":"vijayanagara-samrajya-1","title":"ವಿಜಯನಗರ ಸಾಮ್ರಾಜ್ಯ ಸಂಪುಟ-೧","description":"\u003cp\u003eಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳುಬೀಳುಗಳಿಗೆ ಸಂಬಂಧಿಸಿದ್ದು. ವಿಜಯನಗರ ಸಾಮ್ರಾಜ್ಯದ ಕುರಿತಂತೆ ಮೂಡಿಬಂದ ಮೊದಲ ಸಂಪುಟ. ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.\u003c\/p\u003e","brand":"Aa. Na. Kru.","offers":[{"title":"Default Title","offer_id":42020646846723,"sku":"HB00001330","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4073.jpg?v=1636357172"},{"product_id":"roovari","title":"ರೂವಾರಿ","description":"\u003cp\u003eಕನ್ನಡ ನಾಡಿನ ವಾಸ್ತು ಶಿಲ್ಪಗಳ ಚಾರಿತ್ರಿಕ ಹಿನ್ನೆಲೆ.\u003c\/p\u003e","brand":"S. Shettar","offers":[{"title":"Default Title","offer_id":42020655300867,"sku":"HB00001281","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4061.jpg?v=1636357286"},{"product_id":"kenarada-vibhajane","title":"ಕೆನರಾದ ವಿಭಜನೆ - ಹತ್ತಿ ರಾಜಕೀಯದ ವಿಶ್ಲೇಷಣೆ","description":"\u003cp\u003eಬ್ರಿಟಿಶ್ ವಸಾಹತುಶಾಹಿ ಆಳ್ವಿಕೆಯ ಹೊತ್ತಿನಲ್ಲಿ ಇಂದಿನ ಕರ್ನಾಟಕ ಹಲವಾರು ಘಟಕಗಳಾಗಿ ವಿಭಜನೆಯಾಗಿತ್ತು. ಕರಾವಳಿ ಕರ್ನಾಟಕವು ಬಾಂಬೆ ಹಾಗೂ ಮದರಾಸು ಪ್ರೆಸಿಡೆನ್ಸಿಗಳಲ್ಲಿ ಹಂಚಿ ಹೋಗಿತ್ತು. 1862ರಲ್ಲಿ ನಡೆದ ಕೆನರಾದ ವಿಭಜನೆ ಬ್ರಿಟಿಶ್ ವಸಾಹತುಶಾಹಿ ಧೋರಣೆಗೆ ಒಳ್ಳೆಯ ಉದಾಹರಣೆ. ವಿಭಜನೆಗೆ ಕಾರಣವಾದ ಆಡಳಿತಾತ್ಮಕ, ವ್ಯಾಪಾರ ಹಾಗೂ ಸೈನಿಕ ಕಾರಣಗಳನ್ನು ಹಾಗೂ ವಿಭಜನೆಯಿಂದಾದ ಪರಿಣಾಮಗಳನ್ನು ಈ ಕೃತಿಯಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕೃಷಿಯ ವಾಣಿಜ್ಯೀಕರಣ, ಬ್ರಿಟನ್ನಿನ ಹತ್ತಿ ರಾಜಕೀಯ, ಬಾಂಬೆ ಮತ್ತು ಮದರಾಸು ಸರ್ಕಾರಗಳ ಧೋರಣೆಗಳು ಹೀಗೆ ಹಲವು ವಿಚಾರಗಳನ್ನು ಸಾಕಷ್ಟು ಆಕರ ಬಳಸಿಕೊಂಡು ಚರ್ಚಿಸಲಾಗಿದೆ.\u003c\/p\u003e","brand":"Dr. K. Mohankrishna Rai","offers":[{"title":"Default Title","offer_id":42020659921155,"sku":"HB00001235","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3858.jpg?v=1636357393"},{"product_id":"kannada-nadina-charitre-2","title":"ಕನ್ನಡ ನಾಡಿನ ಚರಿತ್ರೆ ಭಾಗ-೨","description":"\u003cp\u003e\u003c\/p\u003e","brand":"Dr. S. C. Nandimatha","offers":[{"title":"Default Title","offer_id":42020661920003,"sku":"HB00001232","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3830.jpg?v=1636357399"},{"product_id":"karnatakadalli-turtu-paristhiti","title":"ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ - ಪ್ರಭಾವ ಮತ್ತು ಪರಿಣಾಮಗಳು","description":"\u003cp\u003eತುರ್ತು ಪರಿಸ್ಥಿತಿ ಭಾರತದ ಉದ್ದಗಲಕ್ಕೂ ಪೋಲಿಸ್ ಆಡಳಿತ, ನಾಗರೀಕ ಹಕ್ಕುಗಳ ದಮನಕ್ಕೆ ಕಾರಣವಾಗಿತ್ತು. ಕರ್ನಾಟಕವೂ ಇದಕ್ಕೆ ಪೂರ್ತಿಯಾಗಿ ಹೊರತಾಗಿರಲಿಲ್ಲ. ಆದರೆ ಕರ್ನಾಟಕ ಅದೇ ಸಮಯದಲ್ಲಿ ಭೂ ಸುಧಾರಣೆಯಂತಹ ದೊಡ್ಡಹೆಜ್ಜೆ ಇರಿಸುವ ಮೂಲಕ ನಾಡಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕಾರಣದ ಚಹರೆಯನ್ನು ದೊಡ್ಡ ಮಟ್ಟದಲ್ಲಿ ಬದಲಿಸುವ ಕೆಲಸಕ್ಕೂ ಸಾಕ್ಷಿಯಾಯಿತು. 1970ರ ದಶಕದ ಕರ್ನಾಟಕದ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಲು ಬಯಸುವವರಿಗೆ ಇದೊಂದು ಮಹತ್ವದ ಕೃತಿ. ಡಾ.ಎಸ್.ರಶ್ಮಿ ಅವರ ಡಾಕ್ಟರೇಟ್ ಮಹಾಪ್ರಬಂಧವನ್ನು ಅಭಿನವ ಪ್ರಕಾಶನ ಪುಸ್ತಕವಾಗಿ ಹೊರ ತಂದಿದೆ.\u003c\/p\u003e","brand":"Dr. Rashmi S.","offers":[{"title":"Default Title","offer_id":42020663984387,"sku":"HB00001222","price":500.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/06_99cf859e-83a5-4405-bed0-f1f793594857.jpg?v=1636357425"},{"product_id":"prakruta-jagadvalaya","title":"ಪ್ರಾಕೃತ ಜಗದ್ವಲಯ","description":"\u003cp\u003eದಾಖಲೆ ಮಾತ್ರ ಇತಿಹಾಸವಾಗುವುದಿಲ್ಲವೆನ್ನುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಶೆಟ್ಟರ್ ತಮ್ಮ ಸಂಶೋಧನೆಯ ವಿನ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದಲೇ ಅವರಿಗೆ ಇತಿಹಾಸವೆಂದರೆ ರಾಜರ ಕತೆಯಲ್ಲ, ಒಂದು ಸಂಸ್ಕೃತಿಯ ಚರಿತ್ರೆ. ಇತ್ತೀಚೆಗೆ ಪ್ರಕಟವಾದ ಶೆಟ್ಟರ್ ಅವರ ‘ಪ್ರಾಕೃತ ಜಗದ್ವಲಯ’ ದಕ್ಷಿಣ ಭಾರತದ ಭಾಷಾಸ್ವರೂಪವನ್ನು ವಿವರಿಸುತ್ತದೆ. ಆ ಮೂಲಕ ಸಮಾಜ, ಧರ್ಮ, ರಾಜಕೀಯ ಹಾಗೂ ಭಾಷೆ ಇವುಗಳಿಗಿರುವ ಸಂಬಂಧವನ್ನೂ ವಿಶ್ಲೇಷಿಸುತ್ತದೆ.\u003c\/p\u003e","brand":"S. Shettar","offers":[{"title":"Default Title","offer_id":42020664148227,"sku":"HB00001221","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3962.jpg?v=1636357428"},{"product_id":"hasta-pratigalu-kannadigara-baduku","title":"ಹಸ್ತಪ್ರತಿಗಳು - ಕನ್ನಡಿಗರ ಬದುಕು","description":"\u003cp\u003eಹಸ್ತಪ್ರತಿಗಳಲ್ಲಿನ ಸಾಂಸ್ಕೃತಿಕ ಚಹರೆಯನ್ನು ಗುರುತಿಸುವ ಪ್ರಯತ್ನ, ಅಂದರೆ ಒಂದು ಹಸ್ತಪ್ರತಿಯ ಸಿದ್ಧತೆಯಲ್ಲಿ ಒಂದು ಜನಸಮುದಾಯದ ಕಲಾಬದುಕು, ಅದರಲ್ಲಿಯ ಜ್ಞಾನವನ್ನು ಪ್ರಸಾರಿಸುವ ಲಿಪಿಕಾರನ ವೃತ್ತಿಬದುಕು, ಪೋಷಕರ ಸಂರಕ್ಷಣಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.\u003c\/p\u003e","brand":"Dr. K. Ravindranath","offers":[{"title":"Default Title","offer_id":42020666179843,"sku":"HB00001205","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4140.jpg?v=1636357471"},{"product_id":"vijayanagara-kaalada-samskruti","title":"ವಿಜಯನಗರ ಕಾಲದ ಸಂಸ್ಕೃತಿ - ಬೇಟೆ, ಪಶುಪಾಲನೆ ಮತ್ತು ಕೃಷಿ","description":"\u003cp\u003eವಿಜಯನಗರದ ಚರಿತ್ರೆಯನ್ನು ಕೇವಲ ರಾಜರ ಆಡಳಿತದಿಂದಷ್ಟೇ ನೋಡದೇ ಅಂದಿನ ಜನಜೀವನವನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಬೇಟೆ, ಪಶುಪಾಲನೆ ಮತ್ತು ಕೃಷಿಯ ಹಿನ್ನೆಲೆಯಲ್ಲಿ ಮಾಡಿರುವ ಅಧ್ಯಯನ ಈ ಪುಸ್ತಕದಲ್ಲಿದೆ.\u003c\/p\u003e","brand":"Dr. Viroopaklsha Poojarahalli","offers":[{"title":"Default Title","offer_id":42020666278147,"sku":"HB00001204","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4072.jpg?v=1636357473"},{"product_id":"prabhutva-mattu-janate","title":"ಪ್ರಭುತ್ವ ಮತ್ತು ಜನತೆ - ರಾಷ್ಟ್ರಕೂಟರಿಂದ ಹೊಯ್ಸಳರವರೆಗೆ","description":"\u003cp\u003eಮಧ್ಯಕಾಲೀನ ಯುಗವಾದ ರಾಷ್ಟ್ರಕೂಟರು ಮತ್ತು ಹೊಯ್ಸಳರ ಅವಧಿಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಮೇಲಾಟದಲ್ಲಿ ಸಾಮಾನ್ಯ ಜನರ ಬದುಕು ಹೇಗಿತ್ತು ಅನ್ನುವುದರ ಕುರಿತ ಅಧ್ಯಯನವಾಗಿದೆ.\u003c\/p\u003e","brand":"Dr. K. Mohankrishna Rai","offers":[{"title":"Default Title","offer_id":42020666605827,"sku":"HB00001203","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3960.jpg?v=1636357474"},{"product_id":"kannadiga-marivu-arivu","title":"ಕನ್ನಡಿಗ ಮರೆವು-ಅರಿವು","description":"\u003cp\u003eಕನ್ನಡಿಗ ಇಂದು ಕವಲುದಾರಿಯಲ್ಲಿದ್ದಾನೆ. ಹೊರಗಿನ ಅನೇಕ ಸಿದ್ಧಾಂತಗಳ ಗಾಳಿ ಗುದ್ದಾಟದಲ್ಲಿ ತನ್ನ ಇರುವನ್ನೇ ಮರೆತಿರುವ ಆತನನ್ನು ಎಚ್ಚರಿಸಲು, ಕನ್ನಡಿಗರ ಇಂದಿನ ದೊಡ್ಡ ದೊಡ್ಡ ಸವಾಲುಗಳ ಕುರಿತು ಯೋಚನೆಗೆ ಹಚ್ಚುವ ಹೊಸ ಪುಸ್ತಕ ಕನ್ನಡ ಪರ ಚಿಂತಕ, ಬರಹಗಾರ ಆನಂದ ಬರೆದಿದ್ದಾರೆ. ಕನ್ನಡಿಗರ ಇಂದಿನ ತಲ್ಲಣಗಳ ಕುರಿತು ಕಾಳಜಿಯುಳ್ಳ ಪ್ರತಿಯೊಬ್ಬರು ಓದಬೇಕಾದ ಹೊತ್ತಗೆ ಇಲ್ಲಿದೆ.\u003c\/p\u003e","brand":"G. Anand","offers":[{"title":"Default Title","offer_id":42020666933507,"sku":"HB00001198","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3772.jpg?v=1636357483"},{"product_id":"somanathapura","title":"ಸೋಮನಾಥಪುರ","description":"\u003cp\u003e\u003cb class=\"\"\u003e \u003c\/b\u003eಕ್ರಿ.ಶ 1000-1336ರ ನಡುವೆ ಆಳಿದ ಹೊಯ್ಸಳರು ಕನ್ನಡ ನಾಡಿನ ವಾಸ್ತುಶಿಲ್ಪದ ಪರಂಪರೆಗೆ ಕೊಟ್ಟ ಕೊಡುಗೆ ದೊಡ್ಡದು. ಹೊಯ್ಸಳರ ಕೊಡುಗೆಯಾದ ಸೋಮನಾಥಪುರದ ಕೇಶವ ದೇವಾಲಯದ ಬಗ್ಗೆ ಅತ್ಯಂತ ಆಳವಾದ ಅಧ್ಯಯನವನ್ನು ಕೊಡುವ ಈ ಕೃತಿ ಹೊಯ್ಸಳರು ಮತ್ತು ಅವರ ದೇವಾಲಯಗಳ ಪ್ರಸ್ತಾವನೆಯಿಂದ ಹಿಡಿದು ಸೋಮನಾಥಪುರದ ದೇಗುಲದ ಇತಿಹಾಸ, ಐತಿಹ್ಯ, ಪೋಷಕ, ವಾಸ್ತುಶಿಲ್ಪ ಮುಂತಾದವನ್ನು ಚರ್ಚಿಸುತ್ತ ವಾಸ್ತು, ಶಿಲ್ಪ, ಅರ್ಚನೆ, ಆರ್ಥಿಕ ವ್ಯವಸ್ಥೆಗಳ ಬಗೆಗಿನ ಚಿತ್ರವೊಂದನ್ನು ಒದಗಿಸಿಕೊಡುತ್ತದೆ. \"ಭಾರತೀಯ ಕಲೆ ಅನಾಮಧೇಯ\" ಮತ್ತು \"ಭಾರತೀಯ ಶಿಲ್ಪಗಳಿಗೆ ವೈಯಕ್ತಿಕತೆಯನ್ನು ಪ್ರತಿಪಾದಿಸಿಕೊಳ್ಳುವುದರ ಬಗ್ಗೆ ಅನಾಸಕ್ತಿ\" ಎಂಬ ವ್ಯಾಪಕ ನಂಬಿಕೆಯನ್ನು ಅಲ್ಲಗಳೆಯುವಂತೆ ಈ ಕೃತಿ ಸೋಮನಾಥಪುರ ದೇಗುಲದ ಶಿಲ್ಪಿಯ ಪರಿಚಯ ನೀಡುತ್ತದೆ.\u003c\/p\u003e","brand":"S. Shettar","offers":[{"title":"Default Title","offer_id":42020669751555,"sku":"HB00001175","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4127.jpg?v=1636357538"},{"product_id":"bengalurina-itihasa","title":"ಬೆಂಗಳೂರಿನ ಇತಿಹಾಸ","description":"\u003cp\u003eಬೆಂಗಳೂರು \"ಬೆಂದಕಾಳೂರು\" ಎಂಬ ಹೆಸರಿಂದಾ ಬಂದಿದ್ದಾ? ಅಥವಾ \"ವೆಂಗಳೂರು\" ಅನ್ನುವ ಹೆಸರಿಂದ ಬಂತಾ? ಬೆಂಗಳೂರಿನ ಇತಿಹಾಸದ ಪ್ರತಿಯೊಂದು ಹೆಜ್ಜೆಯ ಗುರುತನ್ನು ದಾಖಲಿಸಿ ಬೆಂಗಳೂರಿನ ಇತಿಹಾಸದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ \"ಬೆಂಗಳೂರಿನ ಇತಿಹಾಸ\". ರಾಜ್ಯ ಸರ್ಕಾರದ ಪತ್ರಾಗಾರಕ್ಕೆ ಹೋಗಿ ಅಲ್ಲಿ ಬೆಂಗಳೂರು ಕುರಿತ ಪತ್ರವ್ಯವಹಾರವನ್ನೆಲ್ಲ ಪರಿಶೀಲಿಸಿ ಕೆಂಪೇಗೌಡರ ಕಾಲದಿಂದ ಇಂದಿನವರೆಗಿನ ಬೆಂಗಳೂರಿನ ಇತಿಹಾಸವನ್ನು ಇಂದಿನ ತಲೆಮಾರಿಗೆ ಕಟ್ಟಿ ಕೊಡುವ ಸಾರ್ಥಕ ಕೆಲಸವನ್ನು ಬ.ನ.ಸುಂದರರಾವ್ ಅವರು ಮಾಡಿದ್ದಾರೆ. ಬೆಂಗಳೂರಿನ ಕುರಿತು ಬಂದಿರುವ ಮಹತ್ವದ ಪುಸ್ತಕಗಳಲ್ಲಿ ಇದೂ ಒಂದು.\u003c\/p\u003e","brand":"B. N. Sundar Rao","offers":[{"title":"Default Title","offer_id":42020670046467,"sku":"HB00001172","price":595.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3980.jpg?v=1636357544"},{"product_id":"indias-new-capitalists","title":"INDIA'S NEW CAPITALISTS","description":"","brand":"Harish Damodaran","offers":[{"title":"Default Title","offer_id":42020671684867,"sku":"HB00001157","price":695.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/08.jpg?v=1636357582"},{"product_id":"karnatakavonde","title":"ಕರ್ನಾಟಕವೊಂದೇ...ಒಡಕು ತರಲಿದೆ ಕೆಡುಕು.","description":"\u003cp\u003eನಮ್ಮ ಹಿರಿಯರ ದಶಕಗಳ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಕನ್ನಡ ನಾಡು ಒಂದಾಯಿತು. ಸರಿ ಸುಮಾರು 750 ವರ್ಷಗಳ ಕಾಲ ಬೇರೆ ಬೇರೆ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಮತ್ತೆ ಒಂದಾದದ್ದು ಕರ್ನಾಟಕದ ಏಕೀಕರಣವಾದ ಮೇಲೆ. ಇಂತಹ ಕನ್ನಡ ನಾಡನ್ನು ಒಡೆಯಬೇಕು ಅನ್ನುವ ದನಿಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿವೆ. ಎಲ್ಲ ಸಮಸ್ಯೆಗಳಿಗೂ ರಾಜ್ಯ ಒಡೆಯುವುದೇ ಪರಿಹಾರ ಅನ್ನುವ ವಾದವೊಂದನ್ನು ಮುನ್ನೆಲೆಗೆ ತರುವ ವ್ಯವಸ್ಥಿತ ಪ್ರಯತ್ನಗಳಾಗುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಯಾಕೆ ಒಂದಾಗಿರಬೇಕು, ಒಡೆದುಕೊಂಡರೆ ಉತ್ತರ, ದಕ್ಷಿಣವೆನ್ನದೆ ಎಲ್ಲ ಭಾಗದ ಕನ್ನಡಿಗರು ಎದುರಿಸಬಹುದಾದ ಸಮಸ್ಯೆಗಳೇನು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದು ದೊಡ್ಡದಾಗಿರಬೇಕಾದ ಅಗತ್ಯವೇನು, ಏಳಿಗೆಗೂ ಜನಪ್ರತಿನಿಧಿಗಳಿಗೂ ಇರುವ ಸಂಬಂಧವೇನು, ತೆಲಂಗಾಣ ರಾಜ್ಯವಾದ ಮೇಲೆ ತೆಲುಗರ ನಡುವೆ ಉಂಟಾಗಿರುವ ತೀವ್ರ ಒಡಕಿನ ಪರಿಣಾಮಗಳೇನು ಅನ್ನುವ ಬಗ್ಗೆ  ಕನ್ನಡಿಗರಲ್ಲಿ ಅರಿವು ಮೂಡಿಸುವ ಪ್ರಯತ್ನ “ಕರ್ನಾಟಕವೊಂದೇ – ಒಡಕು ತರಲಿದೆ ಕೆಡುಕು” ಹೊತ್ತಗೆ.\u003c\/p\u003e","brand":"Vasantha Shetty","offers":[{"title":"Default Title","offer_id":42020676337923,"sku":"HB00001116","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/05_1a6b09b2-4fbb-4a86-ad44-62caeefc2d5b.jpg?v=1636357655"},{"product_id":"hindi-herike-mooru-mantra-nooru-tantra","title":"ಹಿಂದೀ ಹೇರಿಕೆ ಮೂರು ಮಂತ್ರ : ನೂರು ತಂತ್ರ","description":"\u003cp\u003eಭಾರತ ಒಂದು ಬಹು ಭಾಷಿಕ ಪ್ರಾಂತ್ಯಗಳ ಒಕ್ಕೂಟ. ಇಲ್ಲಿ ರಾಷ್ಟ್ರಭಾಷೆ ಅನ್ನುವ ಹೆಸರಿನಲ್ಲಿ ಹಿಂದಿಯನ್ನು ಎಲ್ಲ ಹಿಂದಿಯೇತರರ ಮೇಲೆ ಹೇರುವ ಕ್ರಮದಿಂದ ಆಗುತ್ತಿರುವ ತೊಂದರೆಗಳೇನು? ಅಸಲಿಗೆ ಭಾರತಕ್ಕೊಂದು ರಾಷ್ಟ್ರಭಾಷೆ ಇದೆಯೇ?ರಾಷ್ಟ್ರಭಾಷೆಯೇ ಇರದ ಭಾರತದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳಲು ಕಾರಣವೇನು? ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಭಾರತಕ್ಕೆ ಬೇಕಾದ ಭಾಷಾ ನೀತಿಯ ಕುರಿತು ಆದ ಚರ್ಚೆಗಳೇನು? ಈಗ ಹಿಂದಿ ಹೇರಿಕೆಯ ಸ್ವರೂಪ ಹೇಗಿದೆ? ಅದು ಹಿಂದಿಯೇತರ ಭಾಷೆಗಳ ಪಾಲಿಗೆ ಯಾವ ರೀತಿಯಲ್ಲಿ ನಿಧಾನ ವಿಷವಾಗುತ್ತಿದೆ? ಇದಕ್ಕೆ ಪರಿಹಾರವೇನು? ಬಹಳ ಅಧ್ಯಯನ ಮತ್ತು ಸಂಶೋಧನಾ ಮಾಹಿತಿಯಿಟ್ಟುಕೊಂಡು ಭಾರತದ ಭಾಷಾ ವೈವಿಧ್ಯತೆಯ ಪರ ವಾದಿಸುವ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗ ಓದಬೇಕಾದದ್ದು.\u003c\/p\u003e","brand":"Anand G","offers":[{"title":"Default Title","offer_id":42020676403459,"sku":"HB00001115","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4149_bb8ad6b4-d851-4b41-b439-98302b4e2d3a.jpg?v=1664098844"},{"product_id":"gadi-chalavaligalu","title":"ಗಡಿ ಚಳವಳಿಗಳು","description":"\u003cp\u003eಕರ್ನಾಟಕದ ಎಲ್ಲ ಗಡಿ ಚಳವಳಿಗಳ ಕುರಿತು ಬಂದಿರುವ \"ಗಡಿ ಚಳವಳಿಗಳು\" ಪುಸ್ತಕ ನಿಮಗೆ ಕಾಸರಗೋಡು, ಸೊಲ್ಲಾಪುರ, ಬೆಳಗಾವಿ, ಬಳ್ಳಾರಿಯ ಕನ್ನಡಿಗರ ಹೋರಾಟದ ಕತೆಯನ್ನು ವಿವರವಾಗಿ ತಲುಪಿಸುತ್ತದೆ. ಇಲ್ಲಿ ಮಹಾಜನ್ ವರದಿಯ ಕುರಿತೂ ಮಾಹಿತಿಯಿದೆ. ಜೊತೆಯಲ್ಲಿ ಗಡಿ ಭಾಗದ ಕನ್ನಡಿಗರು ಇಂದು ಅನುಭವಿಸುತ್ತಿರುವ ಕಷ್ಟಗಳ ಕುರಿತು ಒಳನಾಡಿನ ಕನ್ನಡಿಗರನ್ನು ಎಚ್ಚರಗೊಳಿಸುವ ಹಲವು ಮಾಹಿತಿಯಿದೆ. ಹಂಪಿ ವಿಶ್ವವಿದ್ಯಾಲಯ ಹೊರತಂದ ಈ ಹೊತ್ತಗೆ ಈಗ ಮುನ್ನೋಟದಲ್ಲಿ ದೊರೆಯುತ್ತಿದೆ.\u003c\/p\u003e","brand":"Dr. N. Chinnaswamy Sosale","offers":[{"title":"Default Title","offer_id":42020677681411,"sku":"HB00001112","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3862.jpg?v=1636357672"},{"product_id":"karnatakada-sankshipta-itihaasa-education-dr-suryanath-kamath-kannada-book","title":"ಕರ್ನಾಟಕದ ಸಂಕ್ಷಿಪ್ತ ಇತಿಹಾಸ","description":"\u003cp\u003eಕರ್ನಾಟಕದ ಇತಿಹಾಸವನ್ನು ಆಧುನಿಕ ಇತಿಹಾಸದ ಹಿಂದಿನಿಂದ ಇಂದಿನವರೆಗೆ ಕಟ್ಟಿಕೊಟ್ಟ ಬಹು ಜನಪ್ರಿಯ ಪುಸ್ತಕಗಳಲ್ಲಿ ಒಂದಾಗಿರುವ \"ಕರ್ನಾಟಕದ ಸಂಕ್ಷಿಪ್ತ ಇತಿಹಾಸ\"ವನ್ನು ನಾಡಿನ ಖ್ಯಾತ ಇತಿಹಾಸ ತಜ್ಞರಲ್ಲಿ ಒಬ್ಬರಾಗಿದ್ದ ಸೂರ್ಯನಾಥ ಕಾಮತ್ ಅವರು ಬರೆದಿದ್ದಾರೆ.\u003c\/p\u003e","brand":"Dr. Suryanath Kamath","offers":[{"title":"Default Title","offer_id":42020678107395,"sku":"HB00001110","price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KarnatakadaSankshiptaItihasa.jpg?v=1776587191"},{"product_id":"akhanda-karnatakada-hejjegalu-history-dr-krishna-kolharakulkarni-kannada-book","title":"ಅಖಂಡ ಕರ್ನಾಟಕದ ಹೆಜ್ಜೆಗಳು","description":"\u003cp\u003eಅಖಂಡ ಕರ್ನಾಟಕದ ಹೆಜ್ಜೆಗಳು ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಚಳುವಳಿ ಮತ್ತು ಅದರಲ್ಲಿ ಪಾಲ್ಗೊಂಡ ಆದರೆ ಹೆಚ್ಚಾಗಿ ನಾವು ಕೇಳಿರದ ಹಲವರ ಕತೆಗಳನ್ನು ನಮ್ಮ ಮುಂದಿಡುತ್ತದೆ. ಏಕೀಕರಣ ಚಳವಳಿಯನ್ನು ಅರಿಯಲು ಇದೊಂದು ಮುಖ್ಯ ಪುಸ್ತಕವಾಗಿದೆ.\u003c\/p\u003e","brand":"Dr. Krishna Kolharakulkarni","offers":[{"title":"Default Title","offer_id":42020678598915,"sku":"HB00001104","price":330.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_41702944-6ae8-47f7-be3f-6ae980f4c387.jpg?v=1676623638"},{"product_id":"karnataka-samskruti-sameekshe","title":"ಕರ್ಣಾಟಕ ಸಂಸ್ಕೃತಿ ಸಮೀಕ್ಷೆ","description":"\u003cp\u003eಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಈ ಕೃತಿ ಈಗ ಹನ್ನೊಂದನೇ ಮುದ್ರಣ ಕಂಡಿದ್ದು, ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕರ್ಣಾಟಕದ ಇತಿಹಾಸದ ತಿಳಿವಿಗೆ ಈ ಹೊತ್ತಗೆ ಸಹಕಾರಿಯಾಗಿದೆ.\u003c\/p\u003e","brand":"Dr. H. Tipperudra Swamy","offers":[{"title":"Default Title","offer_id":42020679123203,"sku":"HB00001100","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Karnataka-Samskruti-Sameekshe-Front.jpg?v=1636357704"},{"product_id":"maretu-hoda-maha-saamraajya-vijayanagara","title":"ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ","description":"\u003cp\u003eಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ಬಣ್ಣಿಸುತ್ತದೆ. ರಾಬರ್ಟ್ ಸೆವೆಲ್ ಅವರ ಈ ಕೃತಿ ವಿಜಯನಗರದ ಏಳು ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಟ ಅಧ್ಯಯನಕ್ಕೆ ಮಾದರಿಯಾಗಿರುವ ಈ ಕೃತಿಯನ್ನು ಕನ್ನಡಕ್ಕೆ ಸದಾನಂದ ಕನವಳ್ಳಿಯವರು ಅನುವಾದಿಸಿದ್ದಾರೆ.\u003c\/p\u003e","brand":"Robert sevel | Sadananda Kanavalli","offers":[{"title":"Default Title","offer_id":42020679155971,"sku":"HB00001099","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4004.jpg?v=1636357705"},{"product_id":"karnataka-ekikarana-itihaasa","title":"ಕರ್ನಾಟಕ ಏಕೀಕರಣ ಇತಿಹಾಸ","description":"\u003cp\u003e೧೯೫೬ಕ್ಕೆ ಮೊದಲು ಭಾರತದ ಭೂಪಟದಲ್ಲಿ “ಕರ್ನಾಟಕ” ಹೆಸರಿನ ರಾಜ್ಯವೇ ಇರಲಿಲ್ಲ. ಮಾಯವಾಗಿದ್ದ ಅದು, ಮೂಡಿ ಬರಲು ನಡೆಸಿದ ಹೋರಾಟ, ಅದರ ಹಿಂದಿರುವ ಸೋಲು-ಗೆಲುವುಗಳ ಕತೆ ಈ ಪುಸ್ತಕದಲ್ಲಿ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಕರ್ನಾಟಕದ ಏಕೀಕರಣಕ್ಕೆ ನೂರು ವರುಶಗಳ ಕಾಲ ನಡೆದ ಹೋರಾಟದ ಎಲ್ಲ ಹಂತಗಳನ್ನು, ಏಕೀಕರಣವಾದಾಗ ಪಡೆದುಕೊಂಡದ್ದು, ಕಳೆದುಕೊಂಡದ್ದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಹೊತ್ತಗೆ ಕನ್ನಡಿಗರ ಮನೆಮನೆಯಲ್ಲಿರಬೇಕಾದದ್ದು. ಇತಿಹಾಸದಿಂದ ಪಾಠ ಕಲಿಯದವನು ಇತಿಹಾಸ ಸೃಷ್ಟಿಸಲಾರ ಅನ್ನುವ ಮಾತಿದೆ. ಸಮರ್ಥ ಕರ್ನಾಟಕ ತಲೆ ಎತ್ತಲು ನಾವು ನಮ್ಮ ಇತಿಹಾಸ ತಿಳಿಯಬೇಕಿದೆ. ಈ ಐತಿಹಾಸಿಕ ಕೃತಿ ಆ ಪ್ರಯತ್ನ ಮಾಡಿದೆ.\u003c\/p\u003e","brand":"Dr. H. S. Gopala Rao","offers":[{"title":"Default Title","offer_id":42020679745795,"sku":"HB00001093","price":590.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/22.jpg?v=1636357719"},{"product_id":"sebastian-and-sons-kannada-book","title":"ಸೆಬಾಸ್ಟಿಯನ್ \u0026 ಸನ್ಸ್","description":"ಇವರು ಮೃದಂಗ ಸೃಜಿಸಿದವರು... ನಾವಿವರನ್ನು ಮರೆಗೆ ಸರಿಸಿದೆವು...\u003cbr data-mce-fragment=\"1\"\u003e\u003cbr data-mce-fragment=\"1\"\u003eಮೃದಂಗದಿಂದ ಹೊಮ್ಮುವ ನಾದದ ಮೂಲ ಯಾರು? ಈ ಸಂಗೀತ ಸಂಯೋಜನೆಯಲ್ಲಿ ಸತ್ತಿದ್ದು ಮತ್ತು ಜೀವಂತವಿರುವುದು ಹೇಗೆ ಒಂದಾಗಿ ಬೆರೆತು ಹೊರಹೊಮ್ಮುತ್ತವೆ? ಹಸು, ಮೇಕೆ ಮತ್ತು ಎಮ್ಮೆ ಚರ್ಮಗಳು ಪರಸ್ಪರರನ್ನು ಆಲಿಸುತ್ತ ಪರಸ್ಪರರ ಚಲನೆಗಳಿಗೆ ಪ್ರತಿಸ್ಪಂದಿಸುತ್ತ ತಾಗುತ್ತ ಜೊತೆಗೂಡುತ್ತ ನಡೆದಂತೆ ಸಂಗೀತ ಜರುಗುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಾಗಿದ್ದರೆ ಧ್ವನಿಯನ್ನು ಯಾರು ಸೃಷ್ಟಿಸಿದರು?\u003cbr data-mce-fragment=\"1\"\u003e\u003cbr data-mce-fragment=\"1\"\u003eಕಲಾವಿದ ಈ ದೃಶ್ಯದಲ್ಲಿ ಪ್ರವೇಶಿಸುವ ಮೊದಲೇ, ವಿವಿಧ ಹೆಣಿಗೆ, ಬಣ್ಣ, ಧ್ವನಿ ಮತ್ತು ಆಕಾರಗಳನ್ನು ಒಂದೆಡೆ ತಂದು, ತಿರುಚಿ, ಮಡಚಿ, ಹಿಗ್ಗಿಸಿ, ಮುರಿದು, ಅರೆದು, ತೊಳೆದು, ಕತ್ತರಿಸಿ, ಎಲ್ಲವನ್ನೂ ಬೆಸುಗೆಯಾಗಿಸುವವರು ತಯಾರಕರು. ಅವರು ದೇವತೆಯೆಂತೆ. ಸತ್ತಿದ್ದು, ಜೀವಂತವಿರುವುದು, ನಿರ್ಜೀವವಾಗಿರುವುದು, ಕೃತಕವಾಗಿರುವುದು, ಈ ಎಲ್ಲವನ್ನೂ ಅವರು ಅರಿತು, ಅವೆಲ್ಲವನ್ನೂ ಪರಸ್ಪರ ಬೆಸೆಯುವ ವಿಧಾನವನ್ನು ಕಂಡುಕೊಳ್ಳುತ್ತಾರೆ. ಅವರಿಗೆ ಹೀಗೆ ನೋಡಿದೊಡನೆ ಅರಿವಾಗುತ್ತದೆ, ಮೃದಂಗದ ನಾದವನ್ನು ತಮ್ಮ ಬೆರಳುಗಳಲ್ಲಿ ಅನುಭವಿಸುತ್ತಾರೆ. ಹಾಗೆ ಅವರು ಮೊದಲ ಸಲ ಬೆರಳಿನಿಂದ ಘಾತಿಸಿದಾಗ ಅಥವಾ ತಟ್ಟಿದಾಗ ಮೃದಂಗವು ಜನ್ಮ ತಳೆಯುತ್ತದೆ.","brand":"Sumangala","offers":[{"title":"Default Title","offer_id":42096048242947,"sku":"HB00000993","price":330.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sebaastianandsons_1.jpg?v=1637737335"},{"product_id":"jaanapada-swaroopa-kannada-book","title":"ಜಾನಪದ ಸ್ವರೂಪ","description":"","brand":"Dr. H. M. Nayaka","offers":[{"title":"Default Title","offer_id":42097049075971,"sku":"HB00000976","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jaanapadaswaroopa_1.jpg?v=1637748603"},{"product_id":"yaavudu-charitre-krishnamurthy","title":"ಯಾವುದು ಚರಿತ್ರೆ?","description":"ಜಗತ್ತಿನಲ್ಲಿ ಇರುವುದೆಲ್ಲವೂ ಮಹಾಭಾರತದಲ್ಲಿದೆ. ಮಹಾಭಾರತದಲ್ಲಿ ಇಲ್ಲದ್ದು ಜಗತ್ತಿನಲ್ಲಿಲ್ಲ...' ಎಂಬಂತೆ ಕಾಲಾನುಕಾಲದಲ್ಲಿ ನಿರಂತರವಾಗಿ ಬೆಳೆದು ನಿಂತಿರುವ ಮಹಾಭಾರತದ ಅಸಂಖ್ಯ ಪಾತ್ರ-ಪ್ರಸಂಗಗಳ ವಿವರ ಈ ಕೃತಿಯಲ್ಲಿದೆ. ವಿಖ್ಯಾತ ವಿದ್ವಾಂಸರಾದ ಪ್ರೊ. ಅ.ರಾ. ಮಿತ್ರ ಅವರು ಮುಖ್ಯ ಪಾತ್ರಗಳನ್ನು ಕೈಬಿಟ್ಟು ಸಾಮಾನ್ಯ ಪಾತ್ರಗಳನ್ನು ಪರಿಚಯಿಸುವ ಸಾಹಸದ ಕೆಲಸವನ್ನು ಇಲ್ಲಿ ಮಾಡಿದ್ದಾರೆ. ಈ ಎಲ್ಲ ಉಪಪಾತ್ರಗಳ ಸಂಗತಿ ಮತ್ತು ಪೂರ್ವಾಪರಗಳನ್ನು ಗಮನಿಸುತ್ತಾ ಹೋದಂತೆ ಓದುಗರಿಗೆ ವ್ಯಾಸಭಾರತದ ಸ್ಕೂಲ ಕಥೆಯ ಪರಿಚಯವೇ ಆಗಿಬಿಡುತ್ತದೆ. ಆ ಹಿನ್ನೆಲೆಯಲ್ಲಿ ಅವರು ಕೊಡುವ ವಿಪುಲ, ವಿಶಿಷ್ಟ ಮಾಹಿತಿ ಸಾಹಿತ್ಯಾಸಕ್ತರಿಗೆ, ಸಂಸ್ಕೃತಿ ಚಿಂತಕರಿಗೆ, ಸಂಶೋಧಕರಿಗೆ ನೆರವಾಗುತ್ತದೆ. ಜನರು, ರಾಜರು, ಋಷಿಗಳ ಜೊತೆಗೆ ಪ್ರಾಣಿಕಥೆ, ಭಾರತದ ನದಿಗಳು, ಸಪ್ತಸಾಗರ, ಸ್ಥಳ ಐತಿಹ್ಯ ಇತ್ಯಾದಿಯನ್ನೂ ಲೇಖಕರು ಪರಿಚಯಿಸಿದ್ದಾರೆ. ಹೀಗಾಗಿ ಮಹಾಭಾರತದ ವಿಸ್ಕೃತ ಪಾತ್ರಪ್ರಪಂಚ ಕುರಿತಂತೆ ಇದೊಂದು ವಿಶ್ವಕೋಶವೇ ಆಗಿದ್ದು, ಸಂಗ್ರಾಹ್ಯ ಕೃತಿಯಾಗಿದೆ.","brand":"Babu Krishnamurthy","offers":[{"title":"Default Title","offer_id":42113279197443,"sku":"HB00000792","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at11.03.43AM_6.jpg?v=1637995881"},{"product_id":"vijayanagara-samrajya-chinnaswamy-sosale","title":"ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ  ಚರಿತ್ರೆ","description":"ಭಾರತದ ಚರಿತ್ರೆಯಲ್ಲಿ ನಮ್ಮ ಕರುನಾಡಿಗೆ ವಿಶಿಷ್ಟ ಸ್ಥಾನವಿದೆ. ಇದಕ್ಕೆ ಕಾರಣ ಈ ನಾಡನಾಳ್ವಿಕೆ ಮಾಡಿ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ವಿವಿಧ ಕಾಲಘಟ್ಟದಲ್ಲಿನ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ರಾಜ-ಮಹಾರಾಜರು ಕಾರಣರಾಗಿದ್ದಾರೆ. ಬಹುಮುಖ್ಯವಾಗಿ ಆಯಾಕಾಲದಲ್ಲಿ ಜೀವಿಸಿದ್ದ ಪಂಡಿತರು, ಸಾಹಿತಿಗಳು, ಶಿಲ್ಪ ಹಾಗೂ ಚಿತ್ರ ಕಲಾವಿದರು, ಕೃಷಿಕರು, ವಿಭಿನ್ನ ಶ್ರಮ ವೃತ್ತಿಯ ಜನಸಮುದಾಯದವರ ಕೊಡುಗೆ ಅಪಾರವಾಗಿದೆ. ಇಂದಿನ ಸಂದರ್ಭದಲ್ಲಿ ಚರಿತ್ರೆ ಅಧ್ಯಯನ ಮತ್ತು ರಚನೆ ಬಹುಸೂಕ್ಷ್ಮವಾದದ್ದು. ಆ ಸೂಕ್ಷ್ಮತೆ ಕೈತಪ್ಪಿದರೆ ಅದರ ಸಿದ್ಧಾಂತ ಸೂತ್ರ ಹರಿದ ಪಟದಂತಾಗುತ್ತದೆ ಎಂಬುದಕ್ಕೆ ಅನೇಕ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಸಮಕಾಲೀನ ಚರಿತ್ರೆಯನ್ನು ವಾಸ್ತವದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಸರಳವಾಗಿ ಸ್ನೇಹಮನೋಭಾವನೆಯಿಂದ ಬೆಸೆಯುವ ಉಪಕರಣವಾಗಿ ಬಳಸಬೇಕು ಹಾಗೂ ಆ ಚರಿತ್ರೆಯು ವಾಸ್ತವ ಹಾಗೂ ಭವಿಷ್ಯದ ಬದುಕಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಬೇಕು ಎಂಬುದು ಚರಿತ್ರೆಕಾರರ ಆಶಯವೂ ಆಗಿದೆ. ಕನ್ನಡ ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಮಧ್ಯಕಾಲೀನ ಚರಿತ್ರೆ ರಚನೆಯಲ್ಲಿ ದೇಶ-ವಿದೇಶಗಳ ಚರಿತ್ರೆಕಾರರು ಅತ್ಯಂತ ಹೆಚ್ಚು ಗಮನ ಹರಿಸಿದ್ದು ಈ ಸಂಧರ್ಭದಲ್ಲಿನ ಸಾಂಸ್ಕೃತಿಕ ಪಲ್ಲಟಗಳ ಕುರಿತೇ ಎಂಬುದು ಕಾರಣವಾಗಿದೆ. ಮೇಲಿನ ಆಶಯದೊಂದಿಗೆ ರಚನೆಗೊಂಡಿರುವ ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ ಎಂಬ ಈ ಕೃತಿ ರಾಜ ಕೀಯೇತರವಾಗಿ ವಿಭಿನ್ನ ನಲೆಯಲ್ಲಿ ಸಾಂಸ್ಕೃತಿಕವಾದ ಚಾರಿತ್ರಿಕ ಅಂಶಗಳನ್ನು ಸಮಗ್ರವಾಗಿ ಚರ್ಚಿಸುತ್ತದೆ. ವಿಜಯನಗರ ಸಾಮ್ರಾಜ್ಯ ಹಾಗು ಇಕ್ಕೇರಿ, ಮೈಸೂರು ಸಂಸ್ಥಾನಗಳ ರಾಜಮಹಾರಾಜರ ಬಿರುದು-ಬಾವಲಿಗಳನ್ನು ಅವರ ದಂಡಯಾತ್ರೆ, ಯುದ್ಧ, ದಾಳಿಗಳನ್ನು ಹೊರತುಪಡಿಸಿ ಜನಕೇಂದ್ರಿತ ಸೂಕ್ಷ್ಮಸಂವೇದನೆಯ ಸಾಂಸ್ಕೃತಿಕ ಅಧ್ಯಯನಕ್ಕೆ ಓದುಗರನ್ನು ಈ ಕೃತಿ ತೊಡಗಿಸುತ್ತದೆ. ಇಂಥ ಬಹುಸೂಕ್ಷ್ಮ ವಸ್ತುವಿಷಯವನ್ನು ಕೇಂದ್ರವನ್ನಾಗಿಸಿಕೊಂಡು ಸಂಶೋಧನಾತ್ಮಕ ಕೃತಿಯನ್ನು ಸಿದ್ಧಪಡಿಸಿರುವ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಪ್ರೊ, ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ಅಭಿನಂದನೆಗಳು,\u003cbr\u003e\u003cbr\u003e ಡಾ. ಸ.ಚಿ. ರಮೇಶ","brand":"Prof. N. Chinnaswamy Sosale","offers":[{"title":"Default Title","offer_id":42113398178051,"sku":"HB00000784","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.09PM.jpg?v=1637999689"},{"product_id":"baasikha-karnaataka-namma-kannada-bhaase-prasaranga","title":"ಬಾಶಿಕ ಕರ್ನಾಟಕ","description":"ಕನ್ನಡ ಭಾಷೆ ಶತ-ಶತಮಾನಗಳಿಂದ ಬಲಾಢ್ಯ, ಪ್ರಭಾವಿ ಭಾಷೆಗಳೊಂದಿಗೆ ಸೆಣಸಾಡುವುದರೊಂದಿಗೆ, ಸಣ್ಣ ಪುಟ್ಟ ಭಾಷೆಗಳೊಂದಿಗೂ ವ್ಯವಹರಿಸುವ ಮೂಲಕ ಆತಂಕವೂ ಎದುರಿಸಿದೆ. ಸಹಜವಾಗಿ ಜನರು ಬಳಸುವಂತೆ ಮಹಾಪ್ರಾಣಾಕ್ಷರಗಳನ್ನು ಬಳಸದೇ, ಹೊಸ ಭಾಷೆಯಲ್ಲಿ ಇರುವ ಈ ಪುಸ್ತಕ ಅನೇಕ ಕುತೂಹಲಗಳನ್ನು ಹುಟ್ಟಿಸುತ್ತದೆ.","brand":"Basavaraja Kodagunti","offers":[{"title":"Default Title","offer_id":42113461321987,"sku":"HB00000776","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.01.51PM.jpg?v=1638002154"},{"product_id":"kodavaparampareya-saamkrutika-padakosha","title":"ಕೊಡವ ಪರಂಪರೆಯ ಸಾಂಸ್ಕೃತಿಕ ಪದಕೋಶ","description":"ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಲು ಅದರ ಉಪಭಾಷೆಗಳೂ ಕಾರಣವಾಗಿವೆ. ಸರ್ವಜನಾಂಗಗಳಿರುವಂತೆ ಸರ್ವಭಾಷೆಗಳು ನಮ್ಮಲ್ಲಿವೆ. ಒಂದೊಂದು ಜನಾಂಗವೂ ತನ್ನ ಅಸ್ಮಿತೆಯನ್ನು ಸಾಂಸ್ಕೃತಿಕವಾಗಿ ರೂಪಿಸಿಕೊಳ್ಳುತ್ತಲೇ ಇರುತ್ತದೆ. ಪ್ರತಿಯೊಂದು ಜನಾಂಗಕ್ಕೂ ಪರಂಪರೆ ಇರುವಂತೆ ಭಾಷೆಯ ಸಾಂಸ್ಕೃತಿಕ ರೂಪವೂ ಇದೆ. ಆದರೆ ಪ್ರಧಾನ ಭಾಷೆಯ ಸಾಂಸ್ಕೃತಿಕ ದಾಳಿಯಿಂದ ಅನೇಕ ಉಪಭಾಷೆ ಇಂದು ಅಳಿವಿನಂಚಿನಲ್ಲಿವೆ. ಪ್ರಭುತ್ವದ ಭಾಷೆಯೂ, ಜನರ ದೈನಂದಿನ ಭಾಷೆಯಾಗಿದೆಯೇ ? ಎನ್ನುವ ಪ್ರಶ್ನೆಗಳು ನಮ್ಮ ಮುಂದಿವೆ. ಇದನ್ನು ಒಂದು ಗ್ರಹಿಕೆಯನ್ನಾಗಿಸಿಕೊಂಡು ಡಾ. ಹೆಬ್ಬಾಲೆ ಕೆ. ನಾಗೇಶ್ ಅವರು ಈ ಸಾಂಸ್ಕೃತಿಕ ಪದಕೋಶವನ್ನು ರಚಿಸಿದ್ದಾರೆ. ಅವರೇ ಹೇಳುವಂತೆ “ಕನ್ನಡ ಭಾಷೆಯು ಪ್ರಾಚೀನ ಕಾಲದಿಂದಲೂ ರಾಜಭಾಷೆಯಾಗಿ ರಾಜರಿಂದ ಮನ್ನಣೆ ಗಳಿಸುತ್ತಾ ಲಿಖಿತ ಆಕಾರವಾಗಿ ಭಾಷೆ ವೃದ್ಧಿಯಾಯಿತು. ಇದರ ಭರಾಟೆಯಲ್ಲಿ ಕೊಡವ ಭಾಷೆಯು ಸೀಮಿತ ಚೌಕಟ್ಟಿಗೆ ಒಳಪಟ್ಟಿದ್ದು ಜಾಗತಿಕ ವಿದ್ಯಮಾನದಿಂದ ದೂರ ಉಳಿದಿದೆ.” ಅಳಿವಿನಂಚಿನಲ್ಲಿರುವ ಕೊಡವ ಶಬ್ದಗಳನ್ನು ದಾಖಲಿಸಿದ್ದಲ್ಲದೆ, ಕನ್ನಡದ ಸಹ ಸಂಬಂಧವನ್ನು ಸಹ ವಿವರಿಸಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಮಲ್ಲಿಕಾ, ಎಸ್. ಘಂಟಿ","brand":"Dr. Hebbale K. Nagesh","offers":[{"title":"Default Title","offer_id":42113565884675,"sku":"HB00000772","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.41PM_1.jpg?v=1638005685"},{"product_id":"kitturu-rudrammana-kathe","title":"ಕಿತ್ತೂರು ರುದ್ರಮ್ಮನ ಕಥೆ","description":"ಪ್ರಸ್ತುತ 'ಕಿತ್ತೂರು ರುದ್ರಮನ ಕಥೆ' ಹೆಸರಿನ ಯಕ್ಷಗಾನ ಕೃತಿಯಲ್ಲಿ ನಾಡಿನ ಚರಿತ್ರೆ, ಕಥೆ, ಕವನ, ಕಾವ್ಯ ರೂಪದಲ್ಲಿ ಸಾಹಿತ್ಯಿಕವಾಗಿ, ಶಾಸನ, ನಿರೂಪ ಇತ್ಯಾದಿ ರೂಪಗಳು ದಾಖಲಾತ್ಮಕವಾಗಿ ನಿರೂಪಿಸಲ್ಪಟ್ಟಿರುತ್ತವೆ. ಇಂಥ ಚಿತ್ರ ನಿರ್ಮಾಣದಲ್ಲಿ ಸಾಹಿತ್ಯ ಕೃತಿಗಳ ಕೊಡುಗೆ ಅನನ್ಯವಾಗಿದ್ದು, ಕಲಾತ್ಮಕವಾಗಿ ರಚನೆಯಾದ ಇವುಗಳಲ್ಲಿನ ಚರಿತ್ರೆಯನ್ನು ವಾಸ್ತವ ನೆಲೆಯಲ್ಲಿ ನಿರೂಪಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.","brand":"Dr. K. Ravindranath","offers":[{"title":"Default Title","offer_id":42113643610371,"sku":"HB00000761","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.13PM.jpg?v=1638007627"},{"product_id":"padavinyasa-kannada-change-trend","title":"ಪದವಿನ್ಯಾಸ","description":"ಯಾವುದೇ ಭಾಷೆ ನಿಂತ ನೀರಲ್ಲ. ಅದು ಸದಾ ಬದಲಾವಣೆಗೆ ತೆರೆದುಕೊಂಡಿರುತ್ತದೆ. ಚಾರಿತ್ರಿಕವಾಗಿ, ಭೌಗೋಳಿಕವಾಗಿ ಮತ್ತು ಸಾಮಾಜಿಕವಾಗಿಯೂ, ಈ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಿದೆ. ಕನ್ನಡದ ಸಂದರ್ಭದಲ್ಲಿಯೂ ಕೂಡ, ಈ ಬೆಳವಣಿಯನ್ನು ಕಾಣಬಹುದು. ಉದಾಹರಣೆಗೆ, ಹಲ್ಮಿಡಿ ಶಾಸನದಿಂದ ಹಿಡಿದು ಇಲ್ಲಿಯವರೆಗು ಒಂದೇ ತೆರನಾದ ಕನ್ನಡ ಇಲ್ಲ. ಸಾಮಾಜಿಕವಾಗಿಯೂ ಬ್ರಾಹಣ, ಲಿಂಗಾಯತ, ಗೌಡ, ದಲಿತರ ಕನ್ನಡಗಳು ಬೇರೆ ಬೇರೆಯಾಗಿವೆ. ಹಾಗೆಯೇ ಇದೇ ರೀತಿಯ ಭಿನ್ನತೆ ಭೌಗೋಳಿಕವಾಗಿಯೂ ನೋಡಬಹುದು. ಹೀಗೆ ಭೌಗೋಳಿಕವಾಗಿ ಇರುವ ಕನ್ನಡದ ಬಗೆಗಳನ್ನು ಗುರುತಿಸುವುದು ಮತ್ತು ಅದನ್ನು ಕರ್ನಾಟಕದ ನಕ್ಷೆಯ ಮೂಲಕ ವಿವರಿಸುವುದು ಇನ್ನೂ ಕುತೂಹಲಕಾರಿ ಸಂಗತಿಯಾಗಿದೆ. ಇದನ್ನು ಪದವಿನ್ಯಾಸ ಪುಸ್ತಕದಲ್ಲಿ ಡಾ. ಅಶೋಕಕುಮಾರ ರಂಜೇರ ಅವರು ಮಾಡಿದ್ದಾರೆ.","brand":"Dr. Ashok Kumar Ranjere","offers":[{"title":"Default Title","offer_id":42113747910915,"sku":"HB00000754","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.23PM_2.jpg?v=1638010976"},{"product_id":"badhuku-belaku-chutuku-kannada-book","title":"ಬದುಕು ಬೆಳಕು ಚುಟುಕು","description":"ಅಂಕಣ ಬರಹಗಳ ಸಂಗ್ರಹ.","brand":"Dr. K. Chidananda Gowda","offers":[{"title":"Default Title","offer_id":42113853620483,"sku":"HB00000743","price":89.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at4.47.11PM.jpg?v=1638014109"},{"product_id":"hosagannada-sahitya-charitre-modern-kannada-ankita","title":"ಹೊಸಗನ್ನಡ ಸಾಹಿತ್ಯ ಚರಿತ್ರೆ","description":"ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸವನ್ನು ತಿಳಿಯಬೇಕೆನ್ನುವವರಿಗೆ ಎಲ್.ಎಸ್. ಶೇಷಗಿರಿರಾಯರ 'ಹೊಸಗನ್ನಡ ಸಾಹಿತ್ಯ ಚರಿತ್ರೆ' ಒಂದು ಉಪಯುಕ್ತ ಆಕರ ಗ್ರಂಥ.\u003cbr data-mce-fragment=\"1\"\u003eಈ ಶತಮಾನದಲ್ಲಿ, ಕನ್ನಡ ಸಾಹಿತ್ಯ ವೈವಿಧ್ಯಮಯವಾಗಿ, ಸಮೃದ್ಧವಾಗಿ ಬೆಳೆದಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಯಾವ ಒಂದು ಶತಮಾನದಲ್ಲೂ, ಈ ಬಗೆಯ ವೈವಿಧ್ಯಮಯ ಸೃಷ್ಟಿಯನ್ನು, ಇಷ್ಟೊಂದು ಎತ್ತರದ ಪ್ರತಿಭೆಗಳನ್ನು ಕಾಣುವುದಿಲ್ಲ. ಅಷ್ಟೊಂದು ವಿಸ್ತಾರ, ವೈವಿಧ್ಯ, ಆಧುನಿಕ ಕನ್ನಡ ಸಾಹಿತ್ಯದ್ದು. ಇದನ್ನು ಸಮಗ್ರವಾಗಿ ಹಿಡಿದಿಡುವುದು ಅಸಾಮಾನ್ಯ ಸಾಹಸದ ಕೆಲಸವೇ ಸರಿ. ಶೇಷಗಿರಿರಾಯರು ಈ ಸವಾಲನ್ನು ಒಪ್ಪಿಕೊಂಡು, ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಅದರ ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಸಮರ್ಥವಾಗಿ ದಾಖಲಿಸಿದ್ದಾರೆ. ಅವರ ವಿಸ್ತಾರವಾದ ಅಧ್ಯಯನ, ವಿಶ್ಲೇಷಣಾತ್ಮಕ ಒಳನೋಟ, ಪರಿಪಕ್ವ ಮನಸ್ಸಿನ ಪ್ರಸನ್ನತೆ-ಪರಿಚಯಾತ್ಮಕ ರೂಪದ ಈ ಬರವಣಿಗೆಗೆ ಪ್ರಬುದ್ಧತೆಯನ್ನು ತಂದುಕೊಟ್ಟಿದೆ. ಈ ಕೃತಿಯ ರಚನೆಯ ಮೂಲಕ ಶೇಷಗಿರಿರಾಯರು ಸಾಹಿತ್ಯಾಭಿಮಾನಿಗಳೆಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.","brand":"L. S. Sheshagiri Rao","offers":[{"title":"Default Title","offer_id":48287824216323,"sku":"HB00000407","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at12.06.37PM_4.jpg?v=1638345983"},{"product_id":"baragooru-ramachandrappa-ankita-pustaka","title":"ಕನ್ನಡ ಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ","description":"ಹಿರಿಯ ವಿಮರ್ಶಕರು, ಚಿಂತಕರಾದ ರಹಮತ್ ತರೀಕೆರೆ ಅವರ ಬಹುಮುಖ್ಯ ಕೃತಿಯೊಂದು ಹತ್ತು ವರ್ಷಗಳ ನಂತರ ಪರಿಷ್ಕೃತಗೊಂಡು ಮರುಮುದ್ರಣಗೊಳ್ಳುತ್ತಿದೆ. ಈ ಕೃತಿ ಮುಖ್ಯವಾಗಿ ಸಾಹಿತ್ಯ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಉಪಯೋಗವಾಗಲಿದೆ. ಅಭಿನವ ಪ್ರಕಟಿಸಿದೆ...\u003cbr data-mce-fragment=\"1\"\u003e\u003cbr data-mce-fragment=\"1\"\u003eಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಚಿಂತನೆಗೆ ಸಂಬಂಧಿಸಿ ಎರಡು ಪುಸ್ತಕಗಳನ್ನು ಪ್ರಕಟಿಸುವ ಪ್ರಸಂಗ ಬಂದಿತು. ಮೊದಲನೆಯದು- `ಮಾತು ತಲೆಯೆತ್ತುವ ಬಗೆ’. ಇದರಲ್ಲಿ ಸಾಹಿತ್ಯ ಜಿಜ್ಞಾಸೆಯ ಲೇಖನಗಳಲ್ಲಿ ಹುದುಗಿರುವ ಸಾಹಿತ್ಯ ತತ್ವಗಳನ್ನು ಶೋಧಿಸುವ ಪ್ರಯತ್ನವಿದೆ. ಎರಡನೆಯದು- `ಇಲ್ಲಿ ಯಾರೂ ಮುಖ್ಯರಲ್ಲ’. ಇದರಲ್ಲಿ ಆಧುನಿಕ ಸಾಹಿತ್ಯ ಕೃತಿಗಳಲ್ಲಿ ಅಂತರ್ಗತವಾಗಿರುವ ಸಾಹಿತ್ಯ ತತ್ವಗಳ ಹುಡುಕಾಟವಿದೆ. ಇವುಗಳ ತರುವಾಯ, ಸಾಹಿತ್ಯ ವಾಗ್ವಾದಗಳಲ್ಲಿರುವ ಸಾಹಿತ್ಯ ತತ್ವಗಳನ್ನು ವಿಶ್ಲೇಷಿಸುವ ಪ್ರಸ್ತುತ ಪುಸ್ತಕ ಪ್ರಕಟವಾಯಿತು. ಆಧುನಿಕ ಸಾಹಿತ್ಯ ಲೋಕದ ಈ ವಾಗ್ವಾದಗಳ ವಿಶೇಷತೆಯೆಂದರೆ, ಇವು ನಾಡಿನ ಸಾಮಾಜಿಕ ರಾಜಕೀಯ ಧಾರ್ಮಿಕ ಮಗ್ಗುಲುಗಳನ್ನೂ ಒಳಗೊಳ್ಳುತ್ತ, ಕರ್ನಾಟಕ ವಾಗ್ವಾದಗಳೂ ಆಗಿರುವುದು. ಹೀಗಾಗಿ ಈ ಪುಸ್ತಕವನ್ನು ವಾಗ್ವಾದಗಳ ಮೂಲಕ ಕಟ್ಟಲಾದ ಕನ್ನಡ ಸಾಹಿತ್ಯ ಚರಿತ್ರೆಯನ್ನಾಗಿ ಕೂಡ ನೋಡಬಹುದು. ಇದನ್ನು ಸಾಹಿತ್ಯ ಸಮಾಜ ರಾಜಕಾರಣಗಳಲ್ಲಿ ಆಸ್ಥೆಯುಳ್ಳ ಸರ್ವರೂ ಓದಬಹುದಾದ ಕರ್ನಾಟಕ ಸಂಸ್ಕೃತಿ ವಾಚಿಕೆಯನ್ನಾಗಿಸಲು ಯತ್ನಿಸಲಾಗಿದೆ. \u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕಕ್ಕಾಗಿ ಸುಮಾರು ಒಂದು ಶತಮಾನದ ಅವಧಿಯಲ್ಲಿ (1917-2015) ಘಟಿಸಿದ ಪ್ರಾತಿನಿಧಿಕವಾದ ಹತ್ತು ವಾಗ್ವಾದಗಳನ್ನು ಆರಿಸಿಕೊಳ್ಳಲಾಗಿದೆ. ಪ್ರತಿಯೊಂದು ವಾಗ್ವಾದವನ್ನೂ ಐದು ಘಟ್ಟಗಳಲ್ಲಿ ವಿಂಗಡಿಸಿಕೊಂಡು ಚರ್ಚಿಸಲಾಗಿದೆ: ಅವೆಂದರೆ-ಹಿನ್ನೆಲೆ ವಿದ್ಯಮಾನಗಳ ಪೂರ್ವಪೀಠಿಕೆ, ಪೂರ್ವಪಕ್ಷದ ವಾದಮಂಡನೆ, ಪರವಿರುದ್ಧವಾಗಿ ಬಂದ ಪ್ರತಿಕ್ರಿಯೆ, ವಾದ ಪ್ರತಿವಾದಗಳ ಮಥನದಲ್ಲಿ ಸಾಹಿತ್ಯ ಸಮಾಜ ಸಂಸ್ಕೃತಿ ರಾಜಕಾರಣ ಮೇಲೆ ಮೂಡಿದ ಪ್ರಮುಖ ವಿಚಾರಗಳ ವಿಶ್ಲೇಷಣೆ ಹಾಗೂ ಈ ವಿಶ್ಲೇಷಣೆಯಲ್ಲಿ ಹೊಮ್ಮಿದ ಚಿಂತನೆಯ ವ್ಯಾಖ್ಯಾನ. ಮೊದಲನೇ ಅಧ್ಯಾಯವು ವಾಗ್ವಾದ ಪರಿಕಲ್ಪನೆಯ ನಿರ್ವಚನ ಮಾಡಿದರೆ, ಕೊನೆಯದು ವಾಗ್ವಾದಗಳಲ್ಲಿ ಮೇಲೆದ್ದ ಕೆಲವು ವಿಶಿಷ್ಟ ಸಮಸ್ಯೆಗಳನ್ನು ಚರ್ಚಿಸುತ್ತದೆ. \u003cbr data-mce-fragment=\"1\"\u003e\u003cbr data-mce-fragment=\"1\"\u003eನಾಡನ್ನು ವಿವಾದಗ್ರಸ್ತ ಮತ್ತು ಸಂವಾದಹೀನ ಕಾವಳವು ಆವರಿಸಿರುವ ಹೊತ್ತಲ್ಲಿ ಈ ಪುಸ್ತಕದ ಪರಿಷ್ಕೃತ ಆವೃತ್ತಿ ಹೊರಬರುತ್ತಿದೆ. ನಮ್ಮ ಆಜುಬಾಜಿನಲ್ಲಿ, ರಾಜಕಾರಣ ಸಮಾಜ ಧರ್ಮ ಭಾಷೆ ಸಾಹಿತ್ಯ ಅರ್ಥವ್ಯವಸ್ಥೆಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ಪ್ರಜ್ಞಾವಂತರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಈ ಪ್ರಶ್ನೆಗಳು ಅರ್ಥಪೂರ್ಣ ವಾಗ್ವಾದ-ಸಂವಾದಗಳಾಗಿ ಬೆಳೆಯುತ್ತಿಲ್ಲ. ಬದಲಿಗೆ, ವಾದ-ಪ್ರತಿವಾದಗಳ ಮೂಲಕ ವಾಗ್ವಾದ-ಸಂವಾದವಾಗಿ ರೂಪುಗೊಳ್ಳಬೇಕಾದ ಸಂಗತಿಗಳು, ವಿಷಾದಕರ ವಿವಾದಗಳನ್ನು ಕೆರಳಿಸುತ್ತಿವೆ. ಈ ವಿವಾದಗಳು ಶಾಬ್ದಿಕ ಹಲ್ಲೆಗೆ ಪ್ರಚೋದಕವಾಗುತ್ತಿವೆ; ಪ್ರಾಣಬಲಿಯನ್ನೂ ಬೇಡುತ್ತಿವೆ. ಭಿನ್ನಮತ ಮತ್ತು ಚರ್ಚೆಗಳಿಲ್ಲದ ಸಮಾಜ, ಹಿಂಸೆಯನ್ನು ಸಹಜಗೊಳಿಸುತ್ತದೆ. ಇದೊಂದು ವೈಚಾರಿಕ ನಿರ್ವಾತ ಮತ್ತು ತಾತ್ವಿಕ ಜಡ ಪರಿಸರ. ತಮ್ಮ ಪ್ರಖರ ವೈಚಾರಿಕತೆಯಿಂದ ವಾಗ್ವಾದ ಹುಟ್ಟಿಸಬಲ್ಲ ಧೀಮಂತರ ಸಂಖ್ಯೆ ಕ್ಷೀಣಿಸುತ್ತಿದೆ. ದಿಟ್ಟವಾಗಿ ಮುಕ್ತವಾಗಿ ಚರ್ಚಿಸುವ ವಾತಾವರಣ ಉಡುಗಿ, ಅತಿಎಚ್ಚರದಿಂದ ಮಾತಾಡುವ ಮತ್ತು ಬರೆವ ಆತಂಕಿತ ಸನ್ನಿವೇಶ ಸೃಷ್ಟಿಯಾಗಿದೆ; ನಮ್ಮ ಹಿರೀಕರು ತಮ್ಮ ವಿಚಾರ ಪ್ರಚೋದಕ ಭಾಷಣ ಮತ್ತು ಬರೆಹಗಳಿಂದ ಚರ್ಚೆ-ಚಿಂತನೆಗಳನ್ನು ಉದ್ದೀಪಿಸುತ್ತಿದ್ದ ದಿನಗಳು ಮರಳಿ ಸಾಧ್ಯವೇ ಎಂಬ ಶಂಕೆ ಮೂಡುತ್ತಿದೆ. ಇದು ಸಂವಿಧಾನದ ಪೀಠಿಕೆಯಲ್ಲಿ ಘೋಷಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಮೌಲ್ಯದ ಅಣಕ. \u003cbr data-mce-fragment=\"1\"\u003e\u003cbr data-mce-fragment=\"1\"\u003eಆದರೆ ಇಂತಹ ಬಿಕ್ಕಟ್ಟಿನಲ್ಲೇ ಸಂವಿಧಾನದ ಮೌಲ್ಯಗಳನ್ನೂ ಪ್ರಜಾಪ್ರಭುತ್ವವನ್ನೂ ಜೀವಂತ ಇರಿಸಬೇಕಿದೆ; ಇದಕ್ಕಾಗಿ ಪ್ರಶ್ನೆ ಎತ್ತುವ, ಧರ್ಮ ರಾಜಕಾರಣ ಸಾಹಿತ್ಯ ಸಮಾಜ ಮೊದಲಾದ ಕ್ಷೇತ್ರಗಳಲ್ಲಿ ವಾಗ್ವಾದ-ಸಂವಾದ ಮಾಡುವ ಕೆಲಸವನ್ನು ಜಾರಿ ಇಡಬೇಕಿದೆ; ನಮ್ಮ ಪೂರ್ವಿಕರು ಮತ್ತು ಸಮಕಾಲೀನರು ತಮ್ಮ ಛಾತಿ ವಿದ್ವತ್ತು ಕಾಳಜಿಗಳಿಂದ ಗೈದಿರುವ ವಾಗ್ವಾದ- ಸಂವಾದಗಳಿಂದ ಕಸುವನ್ನು ಪಡೆದುಕೊಳ್ಳಬೇಕಿದೆ; ಅವರ ಪರಿಮಿತಿಗಳನ್ನು ಅರಿತು ದಾಟಿ, ಹೊಸ ತಾತ್ವಿಕ ಚೌಕಟ್ಟುಗಳನ್ನು ಕಟ್ಟಿಕೊಳ್ಳಬೇಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರಹಮತ್ ತರೀಕೆರೆ\u003cbr data-mce-fragment=\"1\"\u003e(ಅರಿಕೆಯಿಂದ)\u003cbr data-mce-fragment=\"1\"\u003e","brand":"Baraguru Ramachandrappa","offers":[{"title":"Default Title","offer_id":42131737411843,"sku":"HB00000331","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/c9937849-8876-416f-aa3c-aae2b66d5d27.jpg?v=1638431374"},{"product_id":"short-biography-nalwadi-krishnaraja-wodeyar-navakarnataka","title":"ಎಲ್ಲರೊಳಗೆ ಒಂದಾದ ನಾಲ್ವಡಿ ಕೃಷ್ಣರಾಜ ಒಡೆಯರ್‌","description":"ಮೈಸೂರು ಸಂಸ್ಥಾನದ ಆಳ್ವಿಕೆಯ ಕಾಲದಲ್ಲಿ \u003cstrong\u003eರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌\u003c\/strong\u003e ಅವರ ಆಡಳಿತ. ಅವರ ಪಾತ್ರ ಮತ್ತು ವ್ಯಕ್ತಿತ್ವದ ಪರಿಚಯ.","brand":"T. S. Gopal","offers":[{"title":"Default Title","offer_id":42133218590979,"sku":"HB00000274","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.17PM.jpg?v=1638449825"},{"product_id":"raashtrakavi-kuvempu-short-biography","title":"ರಾಷ್ಟ್ರಕವಿ ಕುವೆಂಪು","description":"ಕನ್ನಡಕ್ಕೆ ಹೊಸ ಬುನಾದಿ ಹಾಕಿ, ಅದನ್ನು ಮಹೋನತ್ತ ಸ್ಥಾನಕ್ಕೆ ಕೊಂಡೋಯ್ದ, ವಿಶ್ವಮಾನವ ಕುವೆಂಪು ಅವರ ಕುರಿತಾದ ಕಿರು ಹೊತ್ತಿಗೆ.","brand":"T. S. Gopal","offers":[{"title":"Default Title","offer_id":42137164415235,"sku":"HB00000218","price":45.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.12AM.jpg?v=1638529002"},{"product_id":"veera-sangolli-rayanna-short-biography-kannada-navakarnataka","title":"ವೀರ ಸಂಗೊಳ್ಳಿ ರಾಯಣ್ಣ","description":"ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಕಿತ್ತೂರು ಚೆನ್ನಮ್ಮನ ಹೋರಾಟವನ್ನು ಮುಂದುವರೆಸಿದ ಧೀರ. ಇಂದು ನಾವು ಯಾವ ರಣತಂತ್ರವನ್ನು 'ಗೆರಿಲ್ಲ ಯುದ್ಧ'ವೆಂದು ಕರೆಯುತ್ತೇವೆಯೋ ಅದನ್ನು ಸಮರ್ಥವಾಗಿ ಬಳಸಿಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾದ. ಬ್ರಿಟಿಷರು ಭಾರತೀಯರ ದೌರ್ಬಲ್ಯಗಳನ್ನು ಚೆನ್ನಾಗಿ ತಿಳಿದಿದ್ದವರಾದ ಕಾರಣ, ತಂತ್ರದಿಂದ ರಾಯಣ್ಣನನ್ನು ಹೆಡೆಮುರಿ ಕಟ್ಟಿ ನಂದಗಡದಲ್ಲಿ ನೇಣು ಹಾಕಿದ ಕಥೆ ಇಂದಿಗೂ ಕನ್ನಡಿಗರ ಕರುಳನ್ನು ಕತ್ತರಿಸುವ ಕಥೆಯಾಗಿದೆ. ದೇಶಭಕ್ತಿಯನ್ನು ಕೆರಳಿಸುತ್ತದೆ. ರಾಯಣ್ಣ ಏಳು ಅಡಿ ಎತ್ತರದ ಆಳು, ಹಾಗಾಗಿ ಆತನಿಗೆ ಎಂಟು ಅಡಿ ಉದ್ದದ ಸಮಾಧಿಯನ್ನು ನಂದಗಡದ ಬಳಿ ಕಟ್ಟಿದ್ದಾರೆ.","brand":"Pradeep Rokhade","offers":[{"title":"Default Title","offer_id":42137167757571,"sku":"HB00000217","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.16AM.jpg?v=1638529288"},{"product_id":"modern-indian-history-kannada-navakarnataka","title":"ಆಧುನಿಕ ಭಾರತದ ಇತಿಹಾಸ","description":"ಆಧುನಿಕ ಭಾರತದ ಇತಿಹಾಸದ ಬಗ್ಗೆ ಸಮಗ್ರ ಬರವಣಿಗೆ.","brand":"Prof. Bipin Chandra","offers":[{"title":"Default Title","offer_id":42137830719747,"sku":"HEDU0000074","price":390.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at5.10.29PM_1.jpg?v=1638537258"},{"product_id":"ancient-india-history-kannada-navakarnataka","title":"ಪ್ರಾಚೀನ ಭಾರತ","description":"ಒಂದು ದೇಶದ ಇತಿಹಾಸವೆಂದರೆ, ಆ ದೇಶವನ್ನು ಆಳಿದ ರಾಜವಂಶಗಳ, ಅವು ನಡೆಸಿದ ದಂಡಯಾತ್ರೆಗಳ, ಸಣ್ಣಪುಟ್ಟ ಯುದ್ಧಗಳ ಅಥವಾ ಅವುಗಳ ಸೋಲು-ಗೆಲುವು, ಅಳಿವು – ಉಳಿವುಗಳ ವರದಿಯಷ್ಟೇ ಅಲ್ಲ, ಇತಿಹಾಸವೆಂದರೆ ಸರಿಯಾದ ಆಧಾರವಿಲ್ಲದ ಕಾಲ್ಪನಿಕ ಭವ್ಯ ಚಿತ್ರಣವೂ ಅಲ್ಲ. ಇತಿಹಾಸದ ಅವಧಿಯಲ್ಲಿ, ಅಲ್ಲಿ ಬದುಕಿದ ಜನರ ಜೀವನ, ಅಲ್ಲಿನ ಆರ್ಥಿಕ ಪರಿಸ್ಥಿತಿ, ಪರದೇಶಗಳೊಂದಿಗಿನ ವಾಣಿಜ್ಯ - ಆರ್ಥಿಕ ಸಂಬಂಧಗಳು, ನಾನಾ ಕಾರಣಗಳಿಂದ ವಲಸೆ ಬಂದು ಅಲ್ಲಿ ನೆಲಸಿದ ಇತರ ಜನರು, ಅಲ್ಲಿ ಹುಟ್ಟಿದ ಮತ ಧಾರ್ಮಿಕ ಚಳವಳಿಗಳು ಹಾಗೂ ಪಂಥಗಳು. ಹೊಸ ಹೊಸ ಆಧಾರಗಳು ಬೆಳಕಿಗೆ ಬಂದಂತೆ ಅದರ ಸ್ವರೂಪವೂ ಬದಲಾಗುತ್ತ ಹೋಗುತ್ತದೆ.","brand":"Translated by N. P. Shankaranarayana Rao","offers":[{"title":"Default Title","offer_id":42137881280771,"sku":"HB00000183","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at5.10.30PM_1.jpg?v=1638537662"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/80011164d10ae0898397b1959a9e2061.png?v=1654504309","url":"https:\/\/harivubooks.com\/collections\/naadu-nudi-kannada-books.oembed?page=5","provider":"Harivu Books","version":"1.0","type":"link"}