{"title":"Money and Market","description":"","products":[{"product_id":"aahaara-udyamadalli-gelluvudu-hege","title":"ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ?","description":"\u003cp\u003eಕನ್ನಡದ ಹೆಸರಾಂತ ಲೇಖಕ ಮತ್ತು ಪತ್ರಕರ್ತ ಜೋಗಿಯವರು ಶ್ರೀನಿವಾಸ ರಾವ್ ಬಗ್ಗೆ ಬರೆದಿರುವುದು ವಿಶೇಷ. ಪತ್ರಕರ್ತರ ಚಿಕಿತ್ಸಕ, ಸಂಶೋಧನೆಯ ನೋಟ ಮತ್ತು ಸಾಹಿತಿಯ ಲಾಲಿತ್ಯ, ಸೊಗಡು ಈ ಕೃತಿಯಲ್ಲಿ ಮೇಳೈಸಿವೆ. ಕತೆ, ಕಾದಂಬರಿ, ಅಂಕಣ, ಚಿತ್ರ ಸಂಭಾಷಣೆಗಳಲ್ಲಿ ಸಾಕಷ್ಟು ಕೃಷಿ ಮಾಡಿರುವ ಜೋಗಿ, ಜೀವನಕಥೆ ಪ್ರಕಾರಕ್ಕೆ ಈ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದು ಸ್ವಾಗತಾರ್ಹ. ಅದಕ್ಕೆ ಅವರಿಗೆ ಶ್ರೀನಿವಾಸ್ ರಾವ್ ಅವರ ವ್ಯಕ್ತಿತ್ವ ಪ್ರಭಾವ ಬೀರಿರಬಹುದು. ಸಾಧಕರೆಲ್ಲರ ಬಗ್ಗೆಯೂ ಇಂಥ ಕೃತಿಗಳನ್ನು ಬರೆಯಲಾಗುವುದಿಲ್ಲ. ನಮಗೆ ಆಪ್ತವಾಗುವ, ಪ್ರಭಾವ ಬೀರಿದ, ಹಿತವೆನಿಸುವ, ವಿಷಯಕ್ಕೆ ನ್ಯಾಯವೊದಗಿಸಬಲ್ಲೆ ಎಂಬ ವಿಶ್ವಾಸವಿರುವವರ ಬಗ್ಗೆ ಮಾತ್ರ ಇಂಥ ಪ್ರಯತ್ನಕ್ಕೆ ಮುಂದಾಗಬಹುದು. ಈ ಕೆಲಸವನ್ನು ಜೋಗಿಯವರು ಅತ್ಯಂತ ಸಮರ್ಥವಾಗಿ ಮಾಡಿದ್ದಾರೆ.\u003cbr\u003e\u003cbr\u003eಜೀವನಕಥೆಯೆಂದರೆ ವ್ಯಕ್ತಿಯೊಬ್ಬನ ವಿಸ್ತೃತ ಬಯೋಡಾಟ ಅಲ್ಲ. ಪ್ರತಿಯೊಬ್ಬರ ಜೀವನಕ್ಕೂ ಹಲವು ಆಯಾಮಗಳಿರುತ್ತವೆ. ಮುಖಗಳಿರುತ್ತವೆ. ಯಾವುದಾದರೂ ಒಂದು ತಪ್ಪಿಹೋದರೂ ವ್ಯಕ್ತಿಯ ಸಂಪೂರ್ಣ ಚಿತ್ರಣ ಕಟ್ಟಿಕೊಟ್ಟಂತಾಗುವುದಿಲ್ಲ. ಹಾಗೆಂದು ಗೊತ್ತಿದ್ದರೂ ಎಲ್ಲಾ ಮಾಹಿತಿಯನ್ನೂ ಬರೆಯಲಾಗುವುದಿಲ್ಲ. ಇವೆರಡರ ನಡುವೆ ಹದವಾದ, ಹಿತವಾದ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಇದು ಬಯೋಗ್ರಾಫರ್‌ನಿಗೆ ದೊಡ್ಡ ಸವಾಲು ಈ ಕೆಲಸವನ್ನು ಜೋಗಿ ಬಹಳ ಸಮರ್ಥವಾಗಿ ಮಾಡಿದ್ದಾರೆ. ಈ ಕೃತಿ ಶ್ರೀನಿವಾಸ್ ರಾವ್ ವ್ಯಕ್ತಿತ್ವದಂತೆ ಆಪ್ತ, ಸುಂದರ ಹಾಗೂ ಪ್ರೇರಣಾದಾಯಕ ಹಾಗೆಂದು ಶ್ರೀನಿವಾಸ್ ರಾವ್ ಅವರನ್ನು ಎಲ್ಲೂ ವೈಭವೀಕರಿಸಿಲ್ಲ. ವಿಶೇಷಗಣಗಳ ಒಗ್ಗರಣೆ, ಅತಿಯಾದ ಮಸಾಲೆ ಹಾಕಿ, ಅಡುಗೆ ಸ್ವಾದ ಕೆಡಿಸಿಲ್ಲ. ಇದೊಂದು ಅಚ್ಚುಕಟ್ಟಾದ, ರುಚಿಕಟ್ಟಾದ ಭೋಜನ ಸವಿದ ಅನುಭವ ಈ ಕೃತಿ ಮೂಲಕ ಜೋಗಿಯವರು ತಾವು ಸಹ ಉತ್ತಮ 'ಅಕ್ಷರಗಳ ಪಾಕ ಪ್ರವೀಣ' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಒಬ್ಬ ಅಪರೂಪದ ವ್ಯಕ್ತಿಯ ಪರಿಚಯ, ನಮಗೆ ಗೊತ್ತಿರುವ ಉದ್ಯಮದ ಒಳಸುಳಿ ಹಾಗೂ ಒಬ್ಬ ಸಾಧಕನ ಬದುಕಿನ ಅನಾವರಣ ಈ ಕೃತಿಯಲ್ಲಿ ಒಟ್ಟಿಗೇ ಸಿಗುತ್ತದೆ. ನಿಜಕ್ಕೂ ಜೋಗಿಯವರು ಅಭಿನಂದನಾರ್ಹರು.\u003cbr\u003e\u003cbr\u003eವಿಶ್ವೇಶ್ವರ ಭಟ್\u003cbr\u003e\u003c\/p\u003e\n\u003cdiv id=\"gtx-trans\" style=\"position: absolute; left: 220px; top: 223.938px;\"\u003e\n\u003cdiv class=\"gtx-trans-icon\"\u003e\u003cbr\u003e\u003c\/div\u003e\n\u003c\/div\u003e","brand":"Jogi","offers":[{"title":"Default Title","offer_id":42020634886403,"sku":"HB00001484","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3744.jpg?v=1636356928"},{"product_id":"business-360","title":"ಬಿಸಿನೆಸ್ 360°","description":"\u003cp\u003e\u003c\/p\u003e","brand":"Suresh Padmanabhan","offers":[{"title":"Default Title","offer_id":42020640227587,"sku":"HB00001417","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/business-360007.jpg?v=1636357033"},{"product_id":"108-daily-money-kannada-book","title":"108 Daily ಮನಿ","description":"\u003cp\u003eನಿಮಗೆಲ್ಲಾ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಜಂಕ್ ಬಾಂಡ್ ಎಂದರೇನು? ಎನ್ನುವ ಪ್ರಶ್ನೆ ಬಂದಿರುತ್ತದೆ. ಮಸಾಲಾ ಬಾಂಡ್ ಎನ್ನುವ ಹೆಸರನ್ನ ಕೇಳಿರುತ್ತೀರಿ ಆದರೆ ಅದೇನು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿರುವುದಿಲ್ಲ. ಎಲ್ಲರ ಬಾಯಲ್ಲಿ 'ಎಕಾನಮಿ' ಬಿದ್ದೋಗಿದೆ ಅಥವಾ ಎಕಾನಮಿ ರಿಕವರಿ ಆಗಿದೆ ಎನ್ನುವ ಮಾತನ್ನ ಕೇಳಿರುತ್ತೀರಿ. ಆದರೆ ಯಾರಾದರೂ ವಾಟ್ ಇಸ್ ಎಕಾನಮಿ? ಎಂದಾಗ ತಬ್ಬಿಬ್ಬಾಗುತ್ತೇವೆ ಅಲ್ಲವೇ?\u003cbr data-mce-fragment=\"1\"\u003e\u003cbr data-mce-fragment=\"1\"\u003eಗ್ರೋಥ್ ರೇಟ್, ಬಯ್ ಬ್ಯಾಕ್ ಆಫ್ ಶೇರ್ಸ್, ಮ್ಯೂಚುಯಲ್ ಫಂಡ್, ನೆಗೆಟಿವ್ ರೇಟ್ ಆಫ್ ಇಂಟರೆಸ್ಟ್, ಮಾಡರ್ನ್ ಮನಿ ಥಿಯರಿಗಳು ಏನು ಹೇಳುತ್ತವೆ? ಯೂನಿವರ್ಸಲ್ ಬೇಸಿಕ್ ಇನ್ನಮ್ ಸಿದ್ಧಾಂತವೇನು? ಇವಕ್ಕೆಲ್ಲ ಚುಟುಕಾದ ಉತ್ತರಗಳು ಇಲ್ಲಿವೆ. ವುಕಾ ಎಕಾನಮಿ, ಗಿಗ್ ಎಕಾನಮಿ, ವಾರ್ ಎಕಾನಮಿ, ಜೊತೆಗೆ ಎಸ್ಬಿಐ, ಜಿಡಿಪಿ, ಎಫ್ ಆರ್ ಡಿ ಐಗಳ ಜೊತೆಗೆ ಕರೆನ್ಸಿ ವಾರ್, ಟ್ರೇಡ್ ವಾರ್, ಬಯೋ ವಾರ್ ಹೀಗೆ ಸಾಕಷ್ಟು ಪದಪುಂಜಗಳನ್ನ ಉಚ್ಚರಿಸುವುದ ಕೇಳುವುದು ಜೊತೆಗೆ ಕೆಲವೊಮ್ಮೆ ಮಾತಿನಲ್ಲಿ ಬಳಸಿರುತ್ತೇವೆ.\u003c\/p\u003e\n\u003cp\u003eಸಾವಣ್ಣ ಪ್ರಕಾಶನ\u003c\/p\u003e","brand":"Rangaswamy Mookanahalli","offers":[{"title":"Default Title","offer_id":42115733979395,"sku":"HB00000723","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/108DAILMONEY.jpg?v=1638080788"},{"product_id":"saaladalli-soladiri-jayadeva","title":"ಸಾಲದಲ್ಲಿ ಸೋಲದಿರಿ","description":"\u003cp\u003eಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು? ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ - ಈ ಪುಸ್ತಕದ ಜೀವಾಳ. ಒಟ್ಟಾರೆ ದೃಷ್ಟಿಯಿಂದ ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಪ್ರಾಯೋಗಿಕ ಟಿಪ್ಸ್ಗಳ ಜೊತೆಗೆ 'ಸಾಲದಲ್ಲಿ ಸೋಲದಿರಿ' ಎಂಬ ಈ ಪುಸ್ತಕದಲ್ಲಿ ನೀಡಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಾಸು-ಕುಡಿಕೆ' ಖ್ಯಾತಿಯ ಜಯದೇವ ಪ್ರಸಾದ ಮೊಳೆಯಾರರು ಐಐಎಂ, ಅಹಮದಾಬಾದ್ ಪದವೀಧರರು. ದೇಶ ವಿದೇಶಗಳಲ್ಲಿ ಬಿಸಿನೆಸ್ ಅನುಭವ ಉಳ್ಳ ಆರ್ಥಿಕ ಹಾಗೂ ಹೂಡಿಕಾ ತಜ್ಞರು, ಹಿಂದುಸ್ತಾನ್ ಲಿವರ್‌ನಲ್ಲಿ ಸೇವೆ ಸಲ್ಲಿಸಿ ಸದ್ಯ ವೃತ್ತಿಪರ ಮ್ಯಾನೇಜೆಂಟ್ ಸಲಹೆಗಾರರು.\u003c\/p\u003e","brand":"Jayadeva Prasada Moleyara","offers":[{"title":"Default Title","offer_id":42115913154819,"sku":"HB00000692","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9794379c-0066-49f6-b2e6-7d33ad161fe2.jpg?v=1663669791"},{"product_id":"sell-well-kannada-self-help-book","title":"ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ","description":"ಆಕಸ್ಮಿಕವೋ, ಅನಿವಾರ್ಯವೋ, ಅಪ್ರಯತ್ನವಾಗಿ ದೊರೆತ ಅವಕಾಶವೋ ಅಥವಾ ಮಾರಾಟದ ಬಗೆಗಿನ ಒಲವೋ ಕೆಲವರು ಸೇಲ್ಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಎಷ್ಟು ಶ್ರಮಿಸಿದರೂ ಮಾರಾಟ ಕೌಶಲ್ಯ ಅವರಿಗೆ ಒಗ್ಗುವುದಿಲ್ಲ. ಇಂಥವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸಂತೆಯಲ್ಲಿ ನಿಂತವರ ರೀತಿ ಕಷ್ಟಕ್ಕೀಡಾಗುತ್ತಾರೆ. ಸೇಲ್ಸ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದ ಮತ್ತು ಸಾವಿರಾರು ಜನರಿಗೆ ಸೇಲ್ಸ್‌ನಲ್ಲಿ ತರಬೇತಿ ನೀಡಿ ಅವರ ಬದುಕಿಗೆ ದಾರಿದೀಪವಾದ ಸತ್ಯನಾರಾಯಣ ಅವರು ಈ ಪುಸ್ತಕ 'ಸೆಲ್ ವೆಲ್' ರಚಿಸಿದ್ದಾರೆ. ಸೇಲ್ಸ್‌ನಲ್ಲಿ ಯಶಸ್ಸು ಗಳಿಸಲಾರದೇ ಸಮಸ್ಯೆಗಳನ್ನು ಎದುರಿಸುತ್ತಿರುವವರ ಕೈಹಿಡಿದು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ರೂಪುಗೊಂಡು ಸರಳ ಕನ್ನಡದಲ್ಲಿರುವ 'ಸೆಲ್ ವೆಲ್' ಪುಸ್ತಕವನ್ನು ಓದು ಅರ್ಥ ಮಾಡಿಕೊಂಡು ಸೇಲ್ಸ್ ವೃತ್ತಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪಬೇಕೆನ್ನುವುದು ನಮ್ಮ ಆಶಯ.","brand":"Satyanarayana V.R.","offers":[{"title":"Default Title","offer_id":42116067295491,"sku":"HB00000664","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/SellWell.jpg?v=1638098091"},{"product_id":"how-to-manage-money-financial-kannada-navakarnataka","title":"ಹಣಕಾಸು ನಿರ್ವಹಣೆ ಹೇಗೆ?","description":"\u003cp\u003eಹಣಕಾಸು ನಿರ್ವಹಣೆ ಬಹಳ ವಿವೇಚನೆಯಿಂದ ನಡೆಸಬೇಕಾಗುತ್ತದೆ. ತುಂಬಿರಿಸಿಕೊಳ್ಳುವುದು ಶ್ರೀಮಂತಿಕೆಯ ಲಕ್ಷಣವಾದರೆ, ಅದನ್ನು ಸರಿಯಾದ ರೀತಿಯ ನಿರ್ವಹಿಸಿದಾಗಷ್ಟೇ ಸಾರ್ಥಕತೆ ಲಭಿಸುತ್ತದೆ.\u003cbr\u003eಸಾಲಗಳಲ್ಲಿ ಎಷ್ಟು ವಿಧಗಳಿವೆ, ನೀಡಿದ ಸಾಲವನ್ನು ವಸೂಲಿ ಮಾಡಲು ಕಾನೂನಿನಲ್ಲಿರುವ ಮಾರ್ಗೋಪಾಯಗಳು ಯಾವುವು? ಚೀಟಿ ವ್ಯವಹಾರ ಹೇಗ ನಡೆಸಬೇಕು, ಕ್ರೆಡಿಟ್ ಕಾರ್ಡ್‌ನ ಚಲಾವಣೆ ಹೇಗೆ ನಡೆಯುತ್ತದೆ, ಬ್ಯಾಂಕ್ ಲಾಕರ್‌ಗಳಿಂದ ಉಪಯೋಗವೇನು - ಮುಂತಾಗಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ - ವಿಷಯಗಳನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.\u003c\/p\u003e","brand":"B. R. Ravindranath","offers":[{"title":"Default Title","offer_id":42137021645059,"sku":"HB00000228","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.35AM_1.jpg?v=1638526507"},{"product_id":"goodininda_baanige","title":"ಗೂಡಿನಿಂದ ಬಾನಿಗೆ","description":"\u003cul data-mce-fragment=\"1\"\u003e\n\u003cli data-mce-fragment=\"1\"\u003e\u003cspan data-mce-fragment=\"1\"\u003eಒಂದು ಸಾಮಾನ್ಯ ಕುಟುಂಬದಲ್ಲಿ ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದ ಹೇಮಾ ಅವರು ಕನ್ಸರ್ವ್ ಅನ್ನುವ ಡಿಜಿಟಲ್ ವಿದ್ಯುತ್ ಮೀಟರುಗಳ ಕಂಪನಿಯನ್ನು ಕಟ್ಟಿ, ಬೆಳೆಸಿದ ಕತೆ \u003cstrong data-mce-fragment=\"1\"\u003eಗೂಡಿನಿಂದ ಬಾನಿಗೆ\u003c\/strong\u003e\u003c\/span\u003e\u003c\/li\u003e\n\u003cli data-mce-fragment=\"1\"\u003e\u003cspan data-mce-fragment=\"1\"\u003eವಿದ್ಯುತ್ ಉದ್ದಿಮೆಯಂತಹ ಭ್ರಷ್ಟಾಚಾರದ ಆಗರದಲ್ಲಿ ಭ್ರಷ್ಟಾಚಾರಕ್ಕೆ ಚೂರು ಅವಕಾಶ ಕೊಡದೇ ಅತ್ಯಂತ ಯಶಸ್ವಿಯಾದ, ಪಾರದರ್ಶಕವಾದ ಸಂಸ್ಥೆಯೊಂದನ್ನು ಕಟ್ಟಿ ಗೆಲುವು ಸಾಧಿಸಿದ ಕತೆ \u003cstrong data-mce-fragment=\"1\"\u003eಗೂಡಿನಿಂದ ಬಾನಿಗೆ\u003c\/strong\u003e\u003c\/span\u003e\u003c\/li\u003e\n\u003cli data-mce-fragment=\"1\"\u003e\u003cspan data-mce-fragment=\"1\"\u003eಧಾರವಾಡದಲ್ಲಿ ಓದಿ, ಬೆಳೆದು, ಕಲ್ಕತ್ತೆಯ ಐಐಎಂನಲ್ಲಿ ಎಂಬಿಎ ಪದವಿ ಪಡೆದು ಎರಡು ದಶಕಗಳಲ್ಲಿ ಭಾರತದಲ್ಲೇ ಹೆಸರುವಾಸಿಯಾದ ಸಂಸ್ಥೆ ಕಟ್ಟಿ ಜಗತ್ತಿನ ಖ್ಯಾತ ಬಿಸಿನೆಸ್ ಸ್ಕೂಲ್ಸ್ ಅಲ್ಲಿ ಪಠ್ಯವಾಗುವಂತಹ ಯಶೋಗಾಥೆ ನಿರ್ಮಿಸಿದ ಛಲಗಾತಿ ಹೆಣ್ಣಿನ ಕತೆ \u003cstrong data-mce-fragment=\"1\"\u003eಗೂಡಿನಿಂದ ಬಾನಿಗೆ\u003c\/strong\u003e\u003c\/span\u003e\u003c\/li\u003e\n\u003cli data-mce-fragment=\"1\"\u003e\u003cspan data-mce-fragment=\"1\"\u003eಸಂಸ್ಥೆಯೆಂದರೆ ಮಾಲೀಕ, ನೌಕರ ಅನ್ನುವ ಸಂಬಂಧವಲ್ಲ, ಅದೊಂದು ಕುಟುಂಬದ ಸಂಬಂಧ ಅನ್ನುವಂತೆಯೇ ಸಂಸ್ಥೆಯನ್ನು ರೂಪಿಸಿ ಉದ್ಯೋಗಿಗಳಿಗೆಲ್ಲ ಒಳ್ಳೆಯ ಕೆಲಸ, ಏಳಿಗೆ ಸೃಷ್ಟಿಸಿದ ಕನ್ಸರ್ವ್ ಅನ್ನುವ ಸಂಸ್ಥೆಯ ಕತೆ \u003cstrong data-mce-fragment=\"1\"\u003eಗೂಡಿನಿಂದ ಬಾನಿಗೆ\u003c\/strong\u003e\u003c\/span\u003e\u003c\/li\u003e\n\u003c\/ul\u003e\n\u003cp data-mce-fragment=\"1\"\u003eಭಾರತದಲ್ಲಿ ವಿದ್ಯುತ್ ಉದ್ದಿಮೆಯೆನ್ನುವುದು ಭ್ರಷ್ಟಾಚಾರಕ್ಕೆ ಹೆಸರುವಾಸಿ. ಈ ಕ್ಷೇತ್ರದಲ್ಲಿ ಉತ್ಪಾದನೆ, ವಿತರಣೆ, ಮಾರಾಟ ಹೀಗೆ ಎಲ್ಲ ಹಂತದಲ್ಲೂ ಬಹುತೇಕ ಗಂಡಸರದ್ದೇ ಕಾರುಬಾರು. ಅಂತಹ ಕ್ಷೇತ್ರಕ್ಕೆ ಕಾಲಿಟ್ಟು, ಭ್ರಷ್ಟಾಚಾರಕ್ಕೆ ಚೂರು ಸೊಪ್ಪು ಹಾಕದೇ ಒಂದು ಅದ್ಭುತವಾದ ಸಂಸ್ಥೆ ಕಟ್ಟಿ ತೋರಿಸಿದ, ಧಾರವಾಡದಿಂದ ಹಾರ್ವರ್ಡ್‌ವರೆಗೆ ಹಬ್ಬಿದ ಸಾಧಕಿ ಹೇಮಾ ಹಟ್ಟಂಗಡಿ ಅವರ ಬದುಕಿನ ಕತೆ ಲಿಫ್ಟ್ ಆಫ್ ಅನ್ನುವ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗಿತ್ತು. ಅದನ್ನು ಈಗ ಮೈಲ್ಯಾಂಗ್ ಪ್ರಕಾಶನ ಕನ್ನಡಕ್ಕೆ ತಂದಿದೆ. ಕನ್ನಡದ ಭರವಸೆಯ ಯುವ ಬರಹಗಾರ್ತಿ ಸಂಯುಕ್ತಾ ಪುಲಿಗಲ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  \u003c\/p\u003e","brand":"Samyukta Puligal","offers":[{"title":"Default Title","offer_id":42141281911043,"sku":"HB00000060","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/gb.jpg?v=1638636718"},{"product_id":"jaagatika-vitta-nota-kannada-book","title":"ಜಾಗತಿಕ ವಿತ್ತ ನೋಟ","description":"\u003cp\u003eಸಾಲ ಎನ್ನುವುದು ಇವತ್ತು ಬಹಳ ಸಹಜವಾಗಿ ಹೋಗಿದೆ. ಸಾಲ ಮಾಡದವರು ವಿರಳರಲ್ಲಿ ವಿರಳ ಎನ್ನುವ ಮಟ್ಟಕ್ಕೆ ಸಮಾಜ ಬಂದು ನಿಂತಿದೆ. ಜಗತ್ತಿನಲ್ಲಿ ಒಟ್ಟು 100 ರೂಪಾಯಿ ಆಸ್ತಿಯಿದ್ದರೆ ಅದನ್ನ ಕೊಳ್ಳಲು ಅಥವಾ ಸೃಷ್ಟಿಸಲು ಹತ್ತಿರತ್ತಿರ 250 ರೂಪಾಯಿ ಸಾಲವಿದೆ!, ಅಂದರೆ ಗಮನಿಸಿ ನಮ್ಮ ಒಟ್ಟು ಆಸ್ತಿಯನ್ನು ಯಾರಾದರೂ ಅನ್ಯಗ್ರಹ ಜೀವಿಗಳು ಬಂದು ಕೊಂಡರೂ ನಾವು ನಮ್ಮ ಸಾಲ ತೀರಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಒಟ್ಟು 196 ದೇಶಗಳಿವೆ ಅವುಗಳಲ್ಲಿ ಕೇವಲ ಐದು ದೇಶಗಳು ಮಾತ್ರ ತಮ್ಮ ಖರ್ಚಿಗೆ ಮೀರಿದ ಆದಾಯವನ್ನು ಹೊಂದಿದೆ. ಉಳಿದೆಲ್ಲಾ ದೇಶಗಳು ಖರ್ಚು ಹೆಚ್ಚು ಆದಾಯ ಫಾರ್ಮುಲಾದಲ್ಲಿ ಬಂಡಿ ಸಾಗುಸುತ್ತಿವೆ. ಇದೆಲ್ಲಾ ಶುರುವಾಗಿದ್ದು ಇಲ್ಲದ ಹಣವನ್ನು ಖರ್ಚು ಮಾಡಲು ಶುರು ಮಾಡಿದ್ದು ಕಾರಣ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಮಗೆ ಗೊತ್ತೇ? ಚೀನಾದಲ್ಲಿ ಜಿರಳೆಯನ್ನ ಬೆಳೆಸುವುದು ಕೂಡ ಒಂದು ದೊಡ್ಡ ಉದ್ಯಮ. ಇಲ್ಲಿ ಹೂಡಿಕೆ ಮಾಡಿದವರು ಕೋಟ್ಯಂತರ ಹಣ ಮಾಡಿಕೊಳ್ಳುತ್ತಿದ್ದಾರೆ. ವರ್ಷದಲ್ಲಿ 600 ಕೋಟಿಗೂ ಹೆಚ್ಚಿನ ಜಿರಳೆಗಳನ್ನ ಇಲ್ಲಿ ಸಾಕಲಾಗುತ್ತದೆ, ಚೀನಿಯರು ಜಗತ್ತಿನಲ್ಲಿ ಆಹಾರವನ್ನ ಬಿಸಾಡುವುದರಲ್ಲಿ ಕೂಡ ಎತ್ತಿದ ಕೈ. ಇಂತಹ ಆಹಾರವನ್ನ ಬಿಸಾಡುವುದು ದೊಡ್ಡ ಸಮಸ್ಯೆ. ಇದಕ್ಕಾಗಿ ಈ ಜಿರಲೆಗಳನ್ನು ಸಾಕುತ್ತಾರೆ, ಅವು ಇಂತಹ ವೇಸ್ಟ್ ಆಹಾರ ತಿಂದು ಬೆಳೆದ ಮೇಲೆ ಅದನ್ನು ಇವರು ಹಲವಾರು ಬಳಕೆಗೆ ಬಳಸುತ್ತಾರೆ. ಇದನ್ನ ಔಷಧ ತಯಾರಿಕೆಯಲ್ಲಿ ರೆಸ್ಟುರೆಂಟ್ಗಳಲ್ಲಿ ತಿನ್ನುವುದಕ್ಕೆ ಉಪಯೋಗಿಸುತ್ತಾರೆ. ಟೂತ್ ಪೇಸ್ಟ್ ನಲ್ಲಿ ಕೂಡ ಜಿರಳೆಯನ್ನ ಬಳಸುತ್ತಾರೆ. ಹೀಗೆ ಇದೊಂದು ದೊಡ್ಡ ಉದ್ಯಮ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಸ್ನೇಹ ಬುಕ್ ಹೌಸ್\u003c\/p\u003e","brand":"Rangaswamy Mookanahalli","offers":[{"title":"Default Title","offer_id":42307422552323,"sku":"HB00002111","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jaagatikavittanota_1.jpg?v=1641806603"},{"product_id":"sheru-samrajya-kalitawane-adhipati-kannada-book","title":"ಷೇರು ಸಾಮ್ರಾಜ್ಯ ಕಲಿತವನೇ ಅಧಿಪತಿ","description":"\u003cp\u003eದೂರದಿಂದ ನಿಂತು ನೋಡುವ ಜನ ಸಾಮಾನ್ಯರಿಗೆ ಷೇರು ಮಾರುಕಟ್ಟೆ ಅಚ್ಚರಿಯ ಆಗರ. ಸದ್ದಿಲ್ಲದೇ ಹಣ ಗಳಿಸುವವರ ಕಂಡು ಹುಬ್ಬೇರಿಸುತ್ತಾರೆ. ಅಯ್ಯೋ ನಾವು ಕೂಡ ಹೂಡಿಕೆ ಮಾಡಿ ಹಣ ಗಳಿಸಬೇಕು, ಸಾಕಪ್ಪ ಈ ದಿನನಿತ್ಯದ ಹೋರಾಟ ಎನ್ನಿಸುತ್ತದೆ. ಇದ್ದಬದ್ದ ಧೈರ್ಯ ಮತ್ತು ಹಣವನ್ನ ಕ್ರೂಡೀಕರಿಸಿಕೊಂಡು ಇನ್ನೇನು ಮಾರುಕಟ್ಟೆಗೆ ಧುಮುಕಬೇಕು ಎನ್ನುವಾಗ ಹಣವನ್ನ ಕಳೆದುಕೊಂಡು ಬೀದಿಗೆ ಬಂದೆವು ಎನ್ನುವ ಜನರ ಗೋಳಾಟ ಕೇಳಿ ಭಯ ಉತ್ಪನ್ನವಾಗುತ್ತದೆ. ಹೀಗಾಗಿ ಇದು ದೂರದಿಂದ ನೋಡುವುದಕ್ಕೆ ಸೂಪರ್ ಹತ್ತಿರ ಹೋದರೆ ಪಾಪರ್ ಎನ್ನುವುದು ಜನ ಸಾಮಾನ್ಯನ ಅಂಬೋಣ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂದಿನ ದಿನದಲ್ಲಿ ಷೇರು ಮಾರುಕಟ್ಟೆಯಿಂದ ದೂರ ಉಳಿದು ಬದುಕುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎನ್ನುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ವಯಸ್ಸು, ಆರ್ಥಿಕತೆ, ಅಧ್ಯಯನ ಯಾವ ಹಂತದಲ್ಲಿದೆ ಎನ್ನುವುದನ್ನ ಮೀರಿ ಎಲ್ಲರೂ ಇಲ್ಲಿ ಇಂದು ಹೂಡಿಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.\u003c\/p\u003e","brand":"Rangaswamy Mookanahalli","offers":[{"title":"Default Title","offer_id":42605388071171,"sku":"HB00002429","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1052aa15-6368-4b69-8864-14519d06875d.jpg?v=1647933806"},{"product_id":"money-money-economy-kannada-book","title":"ಮನಿ ಮನಿ ಎಕಾನಮಿ","description":"","brand":"Rangaswamy Mookanahalli","offers":[{"title":"Default Title","offer_id":43050659119363,"sku":"HB00003198","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_53e87728-6f52-42b6-80d1-34060b36d869.jpg?v=1658139152"},{"product_id":"jana-jana-hana-kannada-book","title":"ಝಣ ಝಣ ಹಣ","description":"\u003cp\u003eಹಣ ಗಳಿಕೆ, ಅದರ ಉಳಿಕೆ ಮತ್ತು ಹೂಡಿಕೆ ಎಂಬ ಪ್ರಮುಖ ಅಂಶಗಳನ್ನು ಆಧಾರವನ್ನಾಗಿಟ್ಟುಕೊಂಡು, ಶ್ರೀ. ರಂಗಸ್ವಾಮಿ ಮೂಕನಹಳ್ಳಿ ಅವರು ಕ್ಲಿಷ್ಟ ವಾಣಿಜ್ಯ ವಿಷಯಗಳನ್ನು ಬಹಳ ಸರಳವಾಗಿ ತಮ್ಮ 'ಹಣಕ್ಲಾಸು' ಅಂಕಣದಲ್ಲಿ ತಿಳಿಸಿಕೊಟ್ಟಿದ್ದಾರೆ. ಲೋಕದೆ ಕುರಿತು ಜನಸಾಮಾನ್ಯರಲ್ಲಿ ಅರಿವಿನ ಕೊರತೆಯನ್ನು ನೀಗಿಸುವ ಮತ್ತು ಆರ್ಥಿಕ ವಿಷಯಗಳನ್ನು ಕನ್ನಡದಲ್ಲಿ ಪರಿಚಯಿಸುವ ಒಂದು ಒಳ್ಳೆಯ ಪ್ರಯತ್ನ ಇದಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಟಿ. ಜಿ. ಶ್ರೀನಿಧಿ, ಸಂಪಾದಕ,\u003c\/p\u003e","brand":"Rangaswamy Mookanahalli","offers":[{"title":"Default Title","offer_id":43179946377475,"sku":"HB00003407","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f3ebf504-8e29-4d07-9594-2a0bc710121f.jpg?v=1660907899"},{"product_id":"sheru-maarukatte-stock-market-kannada-books","title":"ಷೇರು ಮಾರುಕಟ್ಟೆ","description":"ಷೇರು ಮಾರುಕಟ್ಟೆ ಎಂದ ತಕ್ಷಣ ಬಹುತೇಕರದು ತೆನಾಲಿ ರಾಮನ ಬೆಕ್ಕಿನ ಕಥೆ! ಹಾಲು ತಣ್ಣಗಿದ್ದರೂ ಬೆಕ್ಕು ಬಟ್ಟಲನ್ನ ಮುಟ್ಟಲು ಹೆದರುವ ಹಾಗೆ, ಲಾಭ ತಂದುಕೊಡುವ ಸಾಧ್ಯತೆ ಹೆಚ್ಚಿದ್ದರೂ 'ಅಯ್ಯೋ ಅದು ನನಗಲ್ಲಪ್ಪ' ಎನ್ನುವ ಮನೋಭಾವ, ಹೀಗೇಕಾಗುತ್ತದೆ? ಎನ್ನುವುದನ್ನ ನಾವು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಸ್ವಲ್ಪ ಈ ಬಗ್ಗೆ ಯೋಚಿಸಿದರೆ ಢಾಳವಾಗಿ ಕಣ್ಣಿಗೆ ರಾಚುವ ಸತ್ಯವೇನು ಗೊತ್ತೇ? ಕಲಿಕೆಯ ಕೊರತೆ, ಮಾಹಿತಿಯ ಕೊರತೆ. ನೀವೊಂದು ಆಟದಲ್ಲಿ ಭಾಗಿಯಾಗಿರುತ್ತೀರಿ ಎಂದುಕೊಳ್ಳಿ, ಆ ಆಟಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನ ತಿಳಿದುಕೊಳ್ಳದೆ ನೀವು ಆಟದಲ್ಲಿ ಪಾಲ್ಗೊಂಡರೆ ಗೆಲ್ಲುವ ಮಾತು ಬಹುದೂರ, ಸೋಲು ಶತಸಿದ್ಧ. ಹೀಗಾಗಿ ಈ ಪುಸ್ತಕದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಪ್ರಮುಖ ಅಂಶಗಳಾದ ಫಂಡಮೆಂಟಲ್ ಅನಾಲಿಸಿಸ್, ಟೆಕ್ನಿಕಲ್ ಅನಾಲಿಸಿಸ್ ಜೊತೆಗೆ ಹೆಚ್ಚಾಗಿ ಪ್ರಸ್ತಾಪವಾಗದೆ ಇರುವ ಆದರೆ ಬಹುಮುಖ್ಯವಾದ ಸೆಂಟಿಮೆಂಟ್ ಅನಾಲಿಸಿಸ್ ಬಗ್ಗೆ ಕೂಡ ಮಾಹಿತಿಯನ್ನ ನೀಡಲಾಗಿದೆ. ಇದರ ಜೊತೆಗೆ ಪ್ರೈಮರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಸೆಕೆಂಡರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಡಿರೈವೆಟಿವ್ ಮಾರುಕಟ್ಟೆಯ ಪ್ಯೂಚರ್ ಮತ್ತು ಆಪ್ಟನ್ ಮಾರುಕಟ್ಟೆ ಬಗ್ಗೆ ಕೂಡ ಒಂದಷ್ಟು ತಿಳಿಸುವ ಪ್ರಯತ್ನವಿದೆ. ಹೂಡಿಕೆಯಿಂದ ಬರುವ ಅಪಾಯಗಳೇನು? ಷೇರುದಾರನ ಹಕ್ಕುಗಳೇನು? ಷೇರಿನ ಮೇಲಿನ ತೆರಿಗೆ ನೀತಿಯೇನಿದೆ? ಅಲ್ಗೊ ಟ್ರೇಡಿಂಗ್, ಪಿಎಂಎಸ್, ಸೆಕ್ಯುರಿಟೀಸ್, ಷೇರು ಮಾರುಕಟ್ಟೆ ಟರ್ಮಿನಾಲಜಿಗಳು, ಹೂಡಿಕೆದಾರನ ರಕ್ಷಣೆ, ಅಹವಾಲು, ಪರಿಹಾರದ ತನಕ ಷೇರು ಮಾರುಕಟ್ಟೆಯಲ್ಲಿ ನೆಲೆ ನಿಲ್ಲಲು ಬೇಕಾದ ಸಂಪೂರ್ಣ ಮಾಹಿತಿಯನ್ನ ಕಟ್ಟಿಕೊಡುವ ಪುಟ್ಟ ಪ್ರಯತ್ನ ಇಲ್ಲಿದೆ.\u003cbr\u003e","brand":"Rangaswamy Mookanahalli","offers":[{"title":"Default Title","offer_id":43691488706819,"sku":"HB00003959","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6.jpg?v=1674734482"},{"product_id":"stock-market-secrets-money-secrets-investment-sharath-m-s-kannada-books","title":"ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಮತ್ತು ಮನಿ ಸೀಕ್ರೆಟ್ಸ್","description":"\u003cp\u003e\u003cspan style=\"font-size: 0.875rem;\"\u003eನಿಮ್ಮ ಆರ್ಥಿಕ ಸ್ವಾತಂತ್ರ್ಯದ ಕನಸನ್ನು ನಿಜ ಮಾಡಿಕೊಳ್ಳಲು ಈ ಎರಡು ಅತ್ಯುತ್ತಮ ಪುಸ್ತಕಗಳು ನಿಮಗೆ ದಾರಿ ತೋರಿಸುತ್ತವೆ.\u003c\/span\u003e\u003c\/p\u003e\n\u003cp data-start=\"254\" data-end=\"480\"\u003e\u003cstrong data-start=\"256\" data-end=\"286\"\u003eಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್\u003c\/strong\u003e – ಶೇರು ಮಾರುಕಟ್ಟೆಯ ನಿಜವಾದ ರಹಸ್ಯಗಳನ್ನು ತಿಳಿಯಿರಿ! ಹೂಡಿಕೆ ಮಾಡಲು ಸರಿಯಾದ ತಂತ್ರಗಳು, ದೀರ್ಘಕಾಲದ ಲಾಭ ಗಳಿಸಲು ಉಪಾಯಗಳು ಮತ್ತು ವೃತ್ತಿಪರ ಹೂಡಿಕೆದಾರರು ಬಳಸುವ ತಂತ್ರಗಳು – ಎಲ್ಲವನ್ನೂ ಈ ಪುಸ್ತಕದಲ್ಲಿ ತಿಳಿದುಕೊಳ್ಳಬಹುದು.\u003c\/p\u003e\n\u003cp data-start=\"482\" data-end=\"656\"\u003e\u003cstrong data-start=\"484\" data-end=\"502\"\u003eಮನಿ ಸೀಕ್ರೆಟ್ಸ್\u003c\/strong\u003e – ಹಣದ ಮೇಲೆ ಹಿಡಿತ ಸಾಧಿಸಲು ಬೇಕಾದ ಮನೋಭಾವ, ಸಂಪತ್ತಿನ ನಿರ್ಮಾಣಕ್ಕೆ ಉಪಾಯಗಳು ಮತ್ತು ಹಣಕಾಸಿನ ಸ್ವಾತಂತ್ರ್ಯವನ್ನು ಪಡೆಯಲು ಅಗತ್ಯವಾದ ಸೂತ್ರಗಳು ಈ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e","brand":"Sharath. M. S.","offers":[{"title":"Default Title","offer_id":43837384458499,"sku":"HB000004053","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9.jpg?v=1679811898"},{"product_id":"hana-enidu-ninna-guna-characteristics-of-money-rangaswamy-mookanahalli-kannada-book","title":"ಹಣ ಏನಿದು ನಿನ್ನ ವಿಚಿತ್ರ ಗುಣ!","description":"ನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ. ಒಂದು ಮರಿ ಆನೆಯ ಕಾಲಿಗೆ ಸರಪಳಿಯನ್ನು ಬಿಗಿದು ಮರಕ್ಕೆ ಕಟ್ಟಿಹಾಕುತ್ತಾರೆ. ಅದು ಬಿಡಿಸಿಕೊಳ್ಳಲು ಹಲವು ಪ್ರಯತ್ನ ಮಾಡುತ್ತದೆ, ಅದರಲ್ಲಿ ವಿಫಲವಾಗುತ್ತದೆ. ಸಮಯ ಕಳೆಯುತ್ತದೆ. ಆನೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅದೇ ಮರಕ್ಕೆ, ಅದೇ ಸರಪಳಿಯಲ್ಲಿ ಆನೆಯನ್ನು ಬಂಧಿಸಿ ಇಡಲಾಗಿದೆ. ಆನೆ ಮನಸ್ಸು ಮಾಡಿದರೆ ಮರವನ್ನೇ ಕಿತ್ತು ಬಿಸಾಡಬಹುದು. ಆದರೂ ಅದು ಏನೂ ಮಾಡದೆ ಸರಪಳಿ ಕಟ್ಟನ್ನು ಒಪ್ಪಿಕೊಂಡು ಬಂಧಿಯಾಗಿದೆ. ಈ ಕಥೆಯನ್ನು ನಾವೆಲ್ಲರೂ ಸ್ವಲ್ಪ ನಮ್ಮ ಬದುಕಿಗೆ, ವೆಲ್ತ್ ಕ್ರಿಯೇಷನ್ ಬಗ್ಗೆ ತಳುಕು ಹಾಕಿ ನೋಡೋಣವೇ? \u003cbr\u003e\u003cbr\u003eನಮ್ಮಲ್ಲಿನ ವ್ಯವಸ್ಥೆ, ಹಣಕಾಸು ಬಗೆಗಿನ ಭಾವನೆಗಳು ಸದಾ ನಮ್ಮನ್ನು ಬಡತನದಲ್ಲಿರಿಸುವ ಅಂಶಗಳನ್ನು ಹೊಂದಿವೆ. ನಮ್ಮನ್ನು ಬಡವರನ್ನಾಗೇ ಉಳಿಸಲು ನಡೆದಿದೆ ಹುನ್ನಾರ! ಶ್ರೀಮಂತರಾಗಲು ಈ ಪುಸ್ತಕದಲ್ಲಿದೆ ಪರಿಹಾರ!! ಹೌದು, ನೀವು ನಿಜಕ್ಕೂ ಇಲ್ಲಿನ ಅಂಶಗಳನ್ನು ಓದಿ, ಅಳವಡಿಸಿಕೊಂಡಿದ್ದೇ ಆದರೆ, ಚಿಂತನೆಗಳನ್ನು ಬದಲಿಸಿಕೊಂಡಿದ್ದೇ ಆದರೆ, ನಮ್ಮ ಹಣೆಬರಹವನ್ನು ಕೂಡ ಬದಲಿಸಿಕೊಳ್ಳಬಹುದು. ಆನೆಗೆ ಮರವನ್ನು ಕಿತ್ತೊಗೆಯುವ ಶಕ್ತಿ ಇದ್ದರೂ ಅದು ತನ್ನ ಶಕ್ತಿಯನ್ನು ಬಳಸಿಕೊಳ್ಳದ ಹಾಗೆ ನಾವು ಕೂಡ ಬಡತನವನ್ನು ಕಿತ್ತೋಡಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಪ್ರಯತ್ನ ಬೇಕು ಅಷ್ಟೇ .\u003cbr\u003e\u003cbr\u003eಜಗತ್ತಿನಲ್ಲಿ ಹೆಚ್ಚು ಜನರು ಬಡವರಾಗೇ ಉಳಿಯಲು ಇನ್ನೊಂದು ಪ್ರಮುಖ ಕಾರಣವೇನು ಗೊತ್ತೇ? ಹಣವನ್ನು ನಾವು ಸಬ್ ಜೀರೋ ಸಂ ಗೇಮ್ ಎನ್ನುವಂತೆ ನೋಡುತ್ತೇವೆ. ಅಂದರೆ ಒಬ್ಬ ಲಾಭಗಳಿಸಲು, ಇನ್ನೊಬ್ಬ ನಷ್ಟ ಮಾಡಿಕೊಳ್ಳಲೇಬೇಕು ಎನ್ನುವುದು ಸಬ್ ಜೀರೋ ಸಂ ಗೇಮ್ ಎನ್ನಿಸಿಕೊಳ್ಳುತ್ತದೆ. ವಾಣಿಜ್ಯ ಕಲಿತವರಲ್ಲೂ ಇದರ ಬಗ್ಗೆ ನಿಖರತೆ, ಮಾಹಿತಿ ಇಲ್ಲದಿರುವುದು ವಿಪರ್ಯಾಸ, ಹಣ, ವೆಲ್ತ್ ನಾವು ಸೃಷ್ಟಿಸಬಹುದು. ಅದಕ್ಕೆ ಒಬ್ಬ ನಷ್ಟ ಮಾಡಿಕೊಳ್ಳಲೇಬೇಕು ಎನ್ನುವ ನಿಯಮವೇನೂ ಇಲ್ಲ. ಆದರೆ ಎಳವೆಯಿಂದ ನಮಲ್ಲಿ ಈ ಅಂಶವನ್ನು ತುಂಬಲಾಗಿದೆ. ಅದರಿಂದ ನಾವು ಪ್ರಜ್ಞಾಪೂರ್ವಕವಾಗಿ ಹೊರಬರಬೇಕಿದೆ.\u003cbr\u003e\u003cbr\u003eನೆನಪಿರಲಿ: ಹಣವೆನ್ನುವುದು ಸಬ್ ಜೀರೋ ಸಂ ಗೇಮ್ ಅಲ್ಲವೇ ಅಲ್ಲ. ಹಣ, ವೆಲ್ತ್ ಸೃಷ್ಟಿಸಬಹುದು.\u003cbr\u003e\u003cbr\u003e-ರಂಗಸ್ವಾಮಿ ಮೂಕನಹಳ್ಳಿ","brand":"Rangaswamy Mookanahalli","offers":[{"title":"Default Title","offer_id":44146248614147,"sku":"HB00004215","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_4_7e7ae37d-89b8-4199-ad29-cc58803712b9.jpg?v=1691846557"},{"product_id":"kannada-shaktiya-veraat-swaroopa-articles-ra-nam-chandrashekara-kannada-book","title":"'ಕನ್ನಡ ಶಕ್ತಿ'ಯ ವಿರಾಟ್ ಸ್ವರೂಪ","description":"ಅನ್ಯ ಪ್ರಾಂತೀಯರ ವಲಸೆ ಪರಿಣಾಮ. ಕನ್ನಡಿಗ ಸ್ಥಳೀಯ ನಿರಾಶ್ರಿತ- ಕನ್ನಡ ಅನಾಥ ಎಂಬ ಲೇಖನದಲ್ಲಿ ಅನ್ಯ ಪ್ರಾಂತೀಯರ ವಲಸೆಯ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಿ ದಾಖಲಿಸಿದ್ದಾರೆ. ಈ ಪರಿಸ್ಥಿತಿ ಏರ್ಪಡುವುದಕ್ಕೆ ಅವಕಾಶ ನೀಡಿದ ಕನ್ನಡಿಗರ ದೌರ್ಬಲ್ಯವೇನು ಎಂಬುದರತ್ತ ರಾ.ನಂ.ಚಂದ್ರಶೇಖರ ಗಮನ ಹರಿಸಬೇಕಿತ್ತು. ಆ ಬಗೆಯ ವಿಮರ್ಶೆಯೂ ಅತ್ಯಗತ್ಯ. ಈ ರೀತಿಯ ಕೆಲಸವನ್ನು \"ಕನ್ನಡ ಭಾಷೆ ಹಿತರಕ್ಷಣೆ ನಾವೇನು ಮಾಡಬೇಕು\" ಲೇಖನದಲ್ಲಿ ಸ್ವಲ್ಪಮಟ್ಟಿಗೆ ಮಾಡಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eರಾ.ನಂ.ಚಂದ್ರಶೇಖರ ಅವರು ವಿಸ್ತಾರವಾಗಿ ಓದಿಕೊಂಡವರು. ಹಲವಾರು ಪುಸ್ತಕಗಳ ಬಗ್ಗೆ ಪರಿಚಯಾತ್ಮಕ ಬರಹಗಳನ್ನು ಬರೆದಿದ್ದಾರೆ. ತಾವು ತುಂಬಾ ಮೆಚ್ಚಿಕೊಂಡ ಕೃಷ್ಣಕುಮಾರ ಕೊಲ್ದಾರ ಅವರ ಅಖಂಡ ಕರ್ನಾಟಕದ ಹೆಜ್ಜೆಗಳು ಪುಸ್ತಕವನ್ನು ಅವರು ಎಳೆ ಎಳೆಯಾಗಿ ಬಿಡಿಸಿ ಪರಿಚಯಿಸಿದ್ದಾರೆ. ಒಬ್ಬ ಹೋರಾಟಗಾರನಾಗಿ, ಹೋರಾಟಗಳ ಇತಿಹಾಸಕಾರನಾಗಿ ರಾನಂಚಂ ಈ ಪುಸ್ತಕವನ್ನು ಪರಿಚಯಿಸಿದ್ದಾರೆ. ಆದ್ದರಿಂದಲೇ ಆ ಪುಸ್ತಕದ ಮಹತ್ವ ನಮ್ಮ ಗಮನಕ್ಕೆ ಬರುತ್ತದೆ. ಇದೊಂದು ಸಹೃದಯ ವಿಮರ್ಶೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಆರ್. ಶೇಷಶಾಸ್ತ್ರಿ\n\u003cdiv id=\"gtx-trans\" style=\"position: absolute; left: 569px; top: 49.0556px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Ra. Nam. Chandrashekar","offers":[{"title":"Default Title","offer_id":44489221800195,"sku":"HB00004463","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_6ec4f35f-7387-478c-90b6-89190b9f8e32.jpg?v=1702373383"},{"product_id":"sirivantikege-sarala-sootragalu","title":"ಸಿರಿವಂತಿಕೆಗೆ ಸರಳ ಸೂತ್ರಗಳು","description":"ನಾನು ಅತ್ಯಂತ ಇಷ್ಟಪಡುವ ವ್ಯಕ್ತಿ ಲೀ ಕ ಶಿಂಗ್‌ ಹೇಳುತ್ತಾರೆ: ಬದುಕು, ಭವಿಷ್ಯ, ಸಂತೋಷ, ಶ್ರೀಮಂತಿಕೆ ಎಲ್ಲವನ್ನೂ ಪ್ಲಾನ್‌ ಮಾಡಬಹುದು! ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಇವರು. ಅವರ ಪ್ರಕಾರ, Life can be designed. Careers can be planned. Happiness can be prepared. ಅಬ್ಬಾ ಅದೆಂತಹ ಸಾಲುಗಳು! ಅದೆಂತಹ ಆತ್ಮಶಕ್ತಿ! ಅದೆಂತಹ ವಿಶ್ವಾಸ! ಅದೆಷ್ಟು ನಂಬಿಕೆ ಅಲ್ವಾ? ಇಂದಿಗೆ 95ರ ಲೀ ಕ ಶಿಂಗ್‌ 15ನೇ ವಯಸ್ಸಿಗೆ ಶಾಲೆ ಬಿಟ್ಟು ದಿನಕ್ಕೆ 16 ತಾಸು ದುಡಿಯಲು ಶುರು ಮಾಡಿದವರು. ನಿಮಗೆಲ್ಲಾ ಗೊತ್ತಿರಲಿ ಜಗತ್ತಿನ ಮಿಲಿಯನೇರ್‌ ಮತ್ತು ಬಿಲಿಯನೇರ್‌ಗಳಲ್ಲಿ 85 ಪ್ರತಿಶತ ಸೆಲ್ಫ್ ಮೇಡ್‌. ಅವರಿಗೂ ನಿಮ್ಮಂತೆ, ನನ್ನಂತೆ ಫ್ಯಾಮಿಲಿ, ಸಂಪತ್ತು ಅಥವಾ ಗಾಡ್‌ಫಾದರ್‌ ಇರಲಿಲ್ಲ. ಇಂದಿಗೆ ಅವರು ಹಾಂಗ್‌ ಕಾಂಗ್‌ನ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು! ಜಾಗತಿಕ ಮಟ್ಟದಲ್ಲೂ ಅತಿ ದೊಡ್ಡ ಶ್ರೀಮಂತರ ಸಾಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ಸಾಧ್ಯವಾದರೆ ಅದು ನಮಗೂ ಸಾಧ್ಯ. ಇಂದಿಗೆ ಶ್ರೀಮಂತಿಕೆಗೆ ಲೀ ಕ ಶಿಂಗ್‌ ಮಾಡೆಲ್‌ ಅತ್ಯಂತ ಸೂಕ್ತವಾಗಿದೆ. ಏನಿದು ಲೀ ಕ ಶಿಂಗ್‌ ಮಾಡೆಲ್‌ ಎನ್ನುವುದರ ಬಗ್ಗೆ ಪುಸ್ತಕದಲ್ಲಿ ವಿವರವಿದೆ.\u003cbr\u003eಈ ಪುಸ್ತಕದಲ್ಲಿರುವ ಅಧ್ಯಾಯಗಳನ್ನು ಅನುಭವಿಸಿ ಬರೆದದ್ದು. ಅಲ್ಲಲ್ಲಿ ನನ್ನ ಬದುಕಿನ ಸನ್ನಿವೇಶಗಳ ಉಲ್ಲೇಖವನ್ನೂ ಮಾಡಿದ್ದೇನೆ. ಶ್ರದ್ಧೆ, ಬತ್ತದ ಉತ್ಸಾಹ, ಹಂಬಲದ ಬೆಂಬಲವದ್ದಿರೆ ನಾವಂದುಕೊಂಡ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಸಿರಿವಂತಿಕೆಗೆ ಸರಳ ಸೂತ್ರಗಳಿವೆ, ಅವುಗಳನ್ನು ಕೇವಲ ಓದಿ ಮುಂದಕ್ಕೆ ಹೋದರೆ ಪ್ರಯೋಜನವಿಲ್ಲ. ಇಲ್ಲಿನ ಸೂತ್ರಗಳನ್ನು ಅಳವಡಿಸಿಕೊಂಡರೆ ಎಲ್ಲರೂ ಶ್ರೀಮಂತರಾಗಬಹುದು! - Good Luck.\u003cbr\u003e\u003cbr\u003e- ರಂಗಸ್ವಾಮಿ ಮೂಕನಹಳ್ಳಿ","brand":"Rangaswamy Mookanahalli","offers":[{"title":"Default Title","offer_id":44558589198595,"sku":"HB00004535","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_0166cdcc-0b66-4130-822c-36b87dfecd69.jpg?v=1704714657"},{"product_id":"hana-hani-financial-decisions-kannada-books","title":"ಹಣ ಹಣಿ","description":"\u003cp\u003eನಾವು ಕ್ರಿಕೆಟ್, ಚೆಸ್, ಕಬಡ್ಡಿ ಹೀಗೆ ಹಲವಾರು ಆಟಗಳನ್ನು ನೋಡಿದ್ದೇವೆ, ಆಡಿದ್ದೇವೆ.\u003c\/p\u003e\n\u003cp\u003eಆ ಆಟಗಳಿಗೆ ನಿಯಮಾವಳಿಗಳಿವೆ. ನಿಯಮವನ್ನು ಸರಿಯಾಗಿ ತಿಳಿದುಕೊಂಡವರು, ಶ್ರದ್ಧೆಯಿಂದ ಆಟವನ್ನು ಪ್ರಾಕ್ಟಿಸ್ ಮಾಡಿದವರು ಆಟದಲ್ಲಿ ಮೇಲುಗೈ ಸಾಧಿಸುವುದು ಸಹಜ. ಬದುಕು ಕೂಡ ಥೇಟ್ ಹೀಗೇ ಕಣೋ, ಇಲ್ಲೂ ನಿಯಮಾವಳಿಗಳಿವೆ. ಅದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೆ ಅಷ್ಟು ನಮಗೆ ಒಳ್ಳೆಯದು. ಈ ರೀತಿಯ ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಜೀವನದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳಿಗೆ ಒಂದು ಔಟ್ ಲೈನ್ ಅಥವಾ ಒಂದು ಸ್ಟ್ಯಾಂಡರ್ಡ್ ಪ್ಯಾರಾಮೀಟರ್, ಪರಿಧಿಯನ್ನು ಇಲ್ಲಿಯವರೆಗೆ ಯಾರೂ ಹೇಳಿಲ್ಲ. ಏಕೆಂದರೆ ಬದುಕು ಎರಡು ಪ್ಲಸ್ ಎರಡು ನಾಲ್ಕಕ್ಕೆ ಸಮ ಎನ್ನುವಷ್ಟು ಸರಳವಲ್ಲ. ಆದರೆ ಬಹುಪಾಲು ಸಮಯ ನಾವು ಎಲ್ಲಕ್ಕೂ ಪ್ಯಾರಾಮೀಟರ್ ಸೆಟ್ ಮಾಡಬಹುದು. ವೈದ್ಯಕೀಯ ವಿಜ್ಞಾನದಲ್ಲಿ ಬಿಪಿ, ಶುಗರ್, ಪ್ಲೇಟೈಟ್ ಇಷ್ಟಿರಬೇಕು ಎನ್ನುವ ಪ್ಯಾರಾಮೀಟರ್ ಇದೆ. ಅದೇ ರೀತಿ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಪ್ಯಾರಾಮೀಟರ್ ಸೃಷ್ಟಿಸುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಿದ್ದೇನೆ. ಹೇಗೆ ಬಿಪಿ, ಶುಗರ್ ಅವರು ಹೇಳಿದಷ್ಟು ಎಲ್ಲರಲ್ಲೂ ಇರುವುದಿಲ್ಲವೋ ಹಾಗೆಯೇ ಇಲ್ಲಿ ನಾನು ಹೇಳಿರುವ ಪ್ಯಾರಾಮೀಟರ್ ಕೂಡ ನಿಮ್ಮ ಬದುಕಿನ ಲೆಕ್ಕಾಚಾರಕ್ಕಿಂತ ಭಿನ್ನವಾಗಿರಬಹುದು. ಇಲ್ಲಿ ಹೇಳಿರುವುದು ಒಂದು ಸ್ಟ್ಯಾಂಡರ್ಡ್ ಪರಿಧಿ. ಇದರ ಸುತ್ತಮುತ್ತವಿದ್ದರೆ ಅಷ್ಟರಮಟ್ಟಿಗೆ ನಮ್ಮ ಬದುಕು ಸರಾಗ.\u003c\/p\u003e","brand":"Rangaswamy Mookanahalli","offers":[{"title":"Default Title","offer_id":45384319140099,"sku":"HB00004807","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HanaHani.jpg?v=1715683905"},{"product_id":"shreemantaragona-banni-stock-market-arun-killuru-kannada-book","title":"ಶ್ರೀಮಂತರಾಗೋಣ ಬನ್ನಿ","description":"\u003cp data-sourcepos=\"7:4-7:308\"\u003eಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತೀರಾ ಆದರೆ ಎಲ್ಲಿಂದ ಪ್ರಾರಂಭಿಸಬೇಕೆಂದು ತಿಳಿದಿಲ್ಲವೇ? \"ಶ್ರೀಮಂತರಾಗೋಣ ಬನ್ನಿ\" ಅರುಣ್ ಕಿಲ್ಲೂರು ಅವರು ಯಶಸ್ವಿ ಹೂಡಿಕೆಗಾಗಿ ಪ್ರಾಯೋಗಿಕ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುತ್ತಾರೆ. ನಿಮ್ಮ ಪ್ರತಿಯನ್ನು ಇಂದು ಪಡೆದುಕೊಳ್ಳಿ ಮತ್ತು ನಿಮ್ಮ ಆರ್ಥಿಕ ಭವಿಷ್ಯವನ್ನು ನಿರ್ಮಿಸಲು ಪ್ರಾರಂಭಿಸಿ!\u003c\/p\u003e","brand":"Arun Killuru","offers":[{"title":"Default Title","offer_id":46182537167107,"sku":"HB00005030","price":185.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ShreemantaragonaPart1.jpg?v=1732882678"},{"product_id":"galike-ulike-hoodike-investment-rangaswamy-mookanahally-kannada-book","title":"ಗಳಿಕೆ ಉಳಿಕೆ ಹೂಡಿಕೆ","description":"\u003cdiv\u003e\n\u003cp class=\"x_MsoNormal\"\u003e\u003cspan lang=\"KN\" data-olk-copy-source=\"MessageBody\"\u003eಹಣಕಾಸು ವ್ಯವಸ್ಥೆಯನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಎಲ್ಲಕ್ಕೂ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ನಿಮಗೆಲ್ಲಾ ಗೊತ್ತಿರಲಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹಣಕಾಸು ವ್ಯವಸ್ಥೆಯಲ್ಲಿ ದೈಹಿಕ ಶ್ರಮದಿಂದ ಸ್ಥಿತಿವಂತರಾಗಲು ಸಾಧ್ಯವಿಲ್ಲ. ಬೆಳಿಗ್ಗೆಯಿಂದ ರಾತ್ರಿ ನಿಷ್ಠೆಯಿಂದ ದುಡಿಯುವುದರಿಂದ ಕೂಡ ಇದು ಸಾಧ್ಯವಿಲ್ಲ. ಇನ್ನು ವಾಮ ಮಾರ್ಗಗಳ ಮೂಲಕ ಇದನ್ನು ಸಾಧಿಸಿಕೊಳ್ಳುವುದು ಸುಲಭದ ಮಾತಲ್ಲ. ಹೀಗಾಗಿ ನಮ ಮುಂದಿರುವ ಏಕೈಕ ಮಾರ್ಗ ಹೂಡಿಕೆ! ಹೌದು ನಮ ಇಂದಿನ ಹಣಕಾಸು ವ್ಯವಸ್ಥೆಯಲ್ಲಿನ ಮೇಲಿನ ಮೆಟ್ಟಿಲುಗಳನ್ನು ಹತ್ತಲು ಹೂಡಿಕೆಯ ಸಹಾಯ ಪಡೆಯದೆ ಅನ್ಯ ಮಾರ್ಗವಿಲ್ಲ. ನಿಮಗೆಲ್ಲಾ ಗೊತ್ತಿರಲಿ ಗಳಿಕೆ ಬಹಳ ಮುಖ್ಯ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅದಿಲ್ಲದೆ ಉಳಿಕೆ ಮತ್ತು ಹೂಡಿಕೆಗಳ ಪ್ರಸ್ತಾಪ ಮಾಡಲು ಕೂಡ ಸಾಧ್ಯವಿಲ್ಲ. ಇಂದಿನ ದಿನದಲ್ಲಿ ಉಳಿಕೆ ಮತ್ತು ಹೂಡಿಕೆಯ ನಡುವೆ ಅಗಾಧ ಅಂತರವಿದೆ. ಅದೇನು\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಉಳಿಕೆಯ ಮಾರ್ಗಗಳು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹೂಡಿಕೆಯ ಮಾರ್ಗಗಳು ಅಲ್ಲಿ ಎದುರಾಗುವ ಅವಕಾಶ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸವಾಲುಗಳೇನು\u003c\/span\u003e\u003cspan\u003e?-\u003c\/span\u003e\u003cspan lang=\"KN\"\u003eಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವಿಲ್ಲಿದೆ. ಅಪಾಯವೆಂದು ಹೂಡಿಕೆ ಮಾಡದೆ ಹಣವನ್ನು ನಿಮ ಬಳಿ ಇಟ್ಟುಕೊಂಡರೂ ಹಣದುಬ್ಬರ ಅದನ್ನು ಕರಗಿಸಿ ಬಿಡುವುದು ಗ್ಯಾರಂಟಿ. ಕೊನೆಪಕ್ಷ ಹೂಡಿಕೆಯಲ್ಲಿ ಹಣವನ್ನು ವೃದ್ಧಿಸಿಕೊಳ್ಳುವ ಸಂಭಾವ್ಯತೆ ಇದೆ.\u003c\/span\u003e\u003cspan lang=\"KN\"\u003e\u003c\/span\u003e\u003c\/p\u003e\n\u003c\/div\u003e\n\u003cdiv\u003e\u003c\/div\u003e","brand":"Rangaswamy Mookanahalli","offers":[{"title":"Default Title","offer_id":46189898039555,"sku":"HB00005035","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GalikeUlikeHoodike.jpg?v=1733135871"},{"product_id":"sheru-hoodike-kali-tili-nali-collection-of-articles-k-g-krupal-kannada-book","title":"ಷೇರು ಹೂಡಿಕೆ : ಕಲಿ ತಿಳಿ ನಲಿ","description":"\u003cp\u003eಕೆ.ಜಿ. ಕೃಪಾಲ್ ಸುಮಾರು ನಾಲ್ಕು ದಶಕಕ್ಕಿಂತ ಹಿಂದೆ ಜಾಗತಿಕ ಹಣಕಾಸು ವಹಿವಾಟು ಹಾಗೂ ಪ್ರಾದೇಶಿಕ ಹಣಕಾಸು ವಹಿವಾಟುಗಳ ಕುರಿತು ಕನ್ನಡತನದಲ್ಲಿ ಅತ್ಯಂತ ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಆರ್ಥಿಕ ಸಾಕ್ಷರತೆಯನ್ನು ಕನ್ನಡ ನೆಲದಲ್ಲಿ ಪಸರಿಸಿದವರು. ಸಾಂಪ್ರದಾಯಿಕ ಚಿಂತನೆಗಳನ್ನು ಆಧುನಿಕರಣದ ಕಾಲಘಟ್ಟದಲ್ಲಿ ಸಕಾಲಿಕಗೊಳಿಸುವುದರ ಜೊತೆಗೆ ಭೂತ, ವರ್ತಮಾನ ಹಾಗೂ ಭವಿಷ್ಯದ ದೃಷ್ಟಿಕೋನದಲ್ಲಿ ಅಧ್ಯಯನವನ್ನು ನಡೆಸಿ ಅದರ ಸಾರವನ್ನು ಜನರ ಮುಂದಿಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತಾ ಬಂದಿರುವ ಆರ್ಥಿಕ ವಲಯದ ವೇಗದ ಜೊತೆ ನಿರಂತರವಾಗಿ ಓಡುತ್ತಾ, ದೇಶ ವಿದೇಶಗಳ ವಿದ್ಯಮಾನಗಳನ್ನು ಕ್ಷಣಕ್ಷಣಕ್ಕೂ ಗ್ರಹಿಸುತ್ತಾ, ಕಾಲದಿಂದ ಕಾಲಕ್ಕೆ ಹೊಸ ತಿಳುವಳಿಕೆಗಳನ್ನು ತಮ್ಮ ತೆಕ್ಕೆಗೆ ಜೋಡಿಸಿಕೊಳ್ಳುತ್ತಾ, ಹಣಕಾಸು ನಿರ್ವಹಣೆ ಅದರಲ್ಲೂ ವಿಶೇಷವಾಗಿಷೇರುಪೇಟೆ ವ್ಯವಹಾರಗಳ ಕುರಿತು ಕನ್ನಡದಲ್ಲಿ ಮಾಹಿತಿಗಳನ್ನು ಒದಗಿಸುವ ನಡೆದಾಡುವ ಜ್ಞಾನಕೋಶವೆಂದೇ ಇವರನ್ನು ಕರೆಯಬಹುದಾಗಿದೆ.\u003c\/p\u003e\n\u003cp\u003eಉಳಿತಾಯ, ಹೂಡಿಕೆ, ಸಾಲ, ಹಣಕಾಸು ನಿರ್ವಹಣೆ, ಆಸ್ತಿ ಹೀಗೆ ಎಲ್ಲಾ ಶಾಖೆಗಳಲ್ಲಿಯೂ ಹುದುಗಿರುವ ಸಾಧ್ಯತೆಗಳನ್ನು ಜೇನುಹುಳವು ಹೂವುಗಳಿಂದ ಮಕರಂದವನ್ನು ಹೀರಿಜೇನಾಗಿ ಪರಿವರ್ತಿಸಿ ನಮಗೆ ನೀಡುವಂತೆ, ಸಹಸ್ರಾರು ಪುಷ್ಪಗಳ ಮಕರಂದವನ್ನು ಸಂಗ್ರಹಿಸಿ ಸೂಕ್ತ ಮಾಹಿತಿಗಳನ್ನು ಕನ್ನಡದ ಜನರಿಗೆ ಉಣ ಬಡಿಸುತ್ತಾ ಬಂದಿದ್ದಾರೆ. ಅನೇಕ ಮಾರ್ಗದರ್ಶಕ ಸೂತ್ರಗಳು ಈ ಪ್ರಕ್ರಿಯೆಯಲ್ಲಿ ಸಿದ್ಧವಾಗಿವೆ. ಇವೆಲ್ಲವೂ ಕೇವಲ ಸೂತ್ರವಾಗಿ ಉಳಿಯದೆ ಆರ್ಥಿಕ ವಿದ್ವತ್ ಕ್ಷೇತ್ರದ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಅಧ್ಯಯನದ ದೃಷ್ಟಿಯಿಂದಲೂ ಸಂಗ್ರಹಿಸಿ ಇಡಬಹುದಾದ ಅನೇಕ ಲೇಖನಗಳ ಭಂಡಾರವೇ ಕನ್ನಡದ ಅರ್ಥಸಾಹಿತ್ಯ ಕ್ಷೇತ್ರಕ್ಕೆ ದೊರಕುವಂತಾಗಿದೆ.\u003c\/p\u003e\n\u003cp\u003e-ಶರತ್ ಎಂ.ಎಸ್\u003c\/p\u003e","brand":"K. G. Krupal","offers":[{"title":"Default Title","offer_id":46211566698755,"sku":"HB00005051","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SheruHoodikeKaliTiliNali.jpg?v=1733752660"},{"product_id":"sirivantikege-100-sutragalu-self-development-keshava-prasad-b-kannada-book","title":"ಸಿರಿವಂತಿಕೆಗೆ 100% ಸೂತ್ರಗಳು!","description":"\u003cp\u003eಸಿರಿವಂತಿಕೆಗೆ 100% ಸೂತ್ರಗಳು!\u003c\/p\u003e\n\u003cp\u003eಮದುವೆಗೆ ಮುನ್ನ ವಧುವಿನ ಪೋಷಕರು, ಕಡೆಯವರು ವರನ ವರಮಾನ ಎಷ್ಟಿದೆ ಎಂಬುದನ್ನು ಆದ್ಯತೆಯ ಮೇರೆಗೆ ಪರಿಗಣಿಸದೆ ಇರುವುದಿಲ್ಲ. ನಾಲ್ಕು ಪುರುಷಾರ್ಥಗಳಲ್ಲಿ ಅರ್ಥಕ್ಕೆ ಎರಡನೇ ಸ್ಥಾನವಿದೆ. ಕ್ರಿಸ್ತಪೂರ್ವ ಕಾಲದಲ್ಲೇ ಭಾರತದಲ್ಲಿ ಚಾಣಕ್ಯ, ಅರ್ಥಶಾಸ್ತ್ರವನ್ನು ಬರೆದಿದ್ದ! ಈ ಮೂಲಕ ಹಣದ ಸಂಪಾದನೆಯನ್ನು ವಿಜ್ಞಾನಕ್ಕೆ ಸಮವೆಂದು ಪ್ರಾಚೀನ ಭಾರತ ಪುರಸ್ಕರಿಸಿತ್ತು. ಅಂಥ ದೇಶದಲ್ಲಿ ಹಣಕಾಸು ಸಾಕ್ಷರತೆ ಎಷ್ಟು ಕಡಿಮೆ ಎಂದರೆ ದಿಗ್ಭ್ರಮೆಯಾಗುತ್ತದೆ. ಹಣದ ಬಗ್ಗೆ ಬಹಿರಂಗವಾಗಿ ಮಾತನಾಡುವುದೇ ಪಾಪ ಎಂಬ ನಿಷೇಧಾತ್ಮಕ ಮನಸ್ಥಿತಿಯಿಂದ ಕುಟುಂಬ, ಸಮಾಜ, ದೇಶಕ್ಕೆ ಉಂಟಾಗಿರುವ ನಷ್ಟದ ಲೆಕ್ಕ ಇಟ್ಟವರಿಲ್ಲ. ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಆರ್ಥಿಕ ಬೆಳವಣಿಗೆ ಪ್ರತಿಯೊಬ್ಬನ ವೈಯಕ್ತಿಕ ಸಂಪತ್ತಿನ ಹೆಚ್ಚಳಕ್ಕೂ ಕಾರಣವಾಗಬೇಕಿದ್ದರೆ, ಸಿರಿವಂತಿಕೆಯ ಸೂತ್ರಗಳನ್ನು 100% ತಿಳಿಯಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕವನ್ನು ನಯ ಓದುಗರ ಮಡಿಲಿಗೆ ಇಡುತ್ತಿದ್ದೇವೆ.\u003c\/p\u003e\n\u003cp\u003e-ಕೇಶವ ಪ್ರಸಾದ್‌ ಬಿ.\u003c\/p\u003e","brand":"Keshava Prasad. B.","offers":[{"title":"Default Title","offer_id":46335357911299,"sku":"HB00005122","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Sirivantikege100_Sutragalu.jpg?v=1737455907"},{"product_id":"life-360-personality-development-s-d-kumar-anantha-kunigal-kannada-book","title":"ಲೈಫ್ 360","description":"\u003cp\u003eನಮ್ಮ ಬದುಕು ಹುಟ್ಟಿನಿಂದಲೇ ಶುರುವಾಗಬಹುದು. ಆದರೆ ಸೋಲು-ಗೆಲುವುಗಳು ನಿರ್ಧಾರವಾಗುವುದು ನಮ್ಮ ಆಲೋಚನೆಗಳ ಮೇಲೆಯೇ.. ಆಲೋಚನೆಗಳು ಇಲ್ಲದೆ ಬದುಕಿಲ್ಲ! ಬದುಕಿನ 360 ಕೋನದಲ್ಲೂ ಯೋಚಿಸುವಂತಹ ಶಕ್ತಿಯನ್ನು ನಾವು ಗಳಿಸದಿದ್ದರೆ ಖಂಡಿತ ಸ್ಪರ್ಧೆಯ ಸಾಲಿನಿಂದ ತುಂಬಾ ಹಿಂದೆ ಉಳಿದುಬಿಡುತ್ತೇವೆ. ಇವತ್ತು ಯಾರಿಗೂ ಹಿಂದೆ ಉಳಿಯಲು ಇಷ್ಟವಿಲ್ಲವಾದ್ದರಿಂದ ಆಲೋಚನಾಕ್ರಮದ ಬಗ್ಗೆ ಈ ಕೃತಿ ನಿಮಗೆ, ನಿಮ್ಮ ಗೊಂದಲಗಳಿಗೆ ಉತ್ತರಿಸುತ್ತಲೇ ನಿಮ್ಮ ಯಶಸ್ಸಿನ ದಾರಿಗೆ ನೆರವಾಗಬಲ್ಲದು.. ಸೋತವರಿಗೆ, ಗೆಲುವನ್ನು ಎದುರು ನೋಡುವವರಿಗೆ, ಸಮಾನ ಮನಸ್ಕರಿಗೆ ಉಡುಗೊರೆಯಾಗಿ ನೀಡಲು ಈ ಕೃತಿ ಬೆಸ್ಟ್‌ ಆಯ್ಕೆ.\u003c\/p\u003e","brand":"Anantha Kunigal","offers":[{"title":"Default Title","offer_id":46362453836035,"sku":"HB00005130","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Life360.jpg?v=1738305580"},{"product_id":"japaninalli-ranga-travelogue-rangaswamy-mookanahalli-kannada-book","title":"ಜಪಾನಿನಲ್ಲಿ ರಂಗ","description":"\u003cdiv\u003e\n\u003cp\u003eರಂಗಸ್ವಾಮಿ ಮೂಕನಹಳ್ಳಿ\u003cbr\u003eಜಪಾನಿನಲ್ಲಿ ರಂಗ\u003c\/p\u003e\n\u003cp\u003eನಾವು ಬದುಕನ್ನು ನೋಡುವ ರೀತಿ ಬದಲಿಸಿಕೊಂಡರೆ ಸಾಕು, ನಮಗೆ ಬಹಳಷ್ಟು ವಿಷಯಗಳು ಸಹ್ಯವಾಗುತ್ತವೆ. ಮನಸ್ಸಿನಲ್ಲಿದ್ದ ದುಃಖ, ದುಮ್ಮಾನಗಳು ಮರೆಯಾಗುತ್ತವೆ. ನಾನು ಬದುಕಿನಲ್ಲಿ ಎಂದಿಗೂ ಪರ್ಫೆಕ್ಷನ್ ಹುಡುಕಿದವನಲ್ಲ.\u003c\/p\u003e\n\u003cp\u003eಏಕೆಂದರೆ ಇದು ಪರ್ಫೆಕ್ಟ್ ಎಂದು ಸರ್ಟಿಫಿಕೇಟ್ ಕೊಡುವವರು ಯಾರು? ಅದೇ ಪರ್ಫೆಕ್ಟ್ ಎನ್ನುವುದಕ್ಕೆ ಪುರಾವೆಯಾದರೂ ಏನಿದೆ? ಅಲ್ಲದೆ ಈ ಪರ್ಫೆಕ್ಟ್ ಎನ್ನುವುದು ಟೈಮ್ ಸೆನ್ಸಿಟಿವ್ ವಿಷಯ. ಇಂದು, ಈಗ ಪರ್ಫೆಕ್ಟ್ ಎನ್ನಿಸಿದ್ದು ಮರುಘಳಿಗೆ ಬದಲಾಗಿರಬಹುದಲ್ವಾ? ಸೃಷ್ಟಿಯಲ್ಲಿ ಯಾವುದೂ ಪೂರ್ಣವೂ ಅಲ್ಲ, ಯಾವುದೂ ಅಪೂರ್ಣವೂ ಅಲ್ಲ. ಪೂರ್ಣದ ತೃಣ ಅಪೂರ್ಣ, ಆದರೂ ತನ್ನ ಪರಿಧಿಯಲ್ಲಿ ಪೂರ್ಣ ಕೂಡ ಹೌದಲ್ಲ! ಸೃಷ್ಟಿಯಲ್ಲಿ “imperfect, impermanent and incomplete\" ಅಷ್ಟೇ ಸತ್ಯ. ಪ್ರಕೃತಿಯಲ್ಲಿ ಇದ್ದದ್ದು ಇದ್ದಹಾಗೆ ನೋಡುವ ಪರಿಪಾಠಕ್ಕೆ ಜಪಾನೀಯರು 'ವಾಬಿ ಸಬಿ' ಎನ್ನುತ್ತಾರೆ. ಜಪಾನ್ ಪ್ರವಾಸ ನನ್ನ ಹಲವಾರು ನಂಬಿಕೆಗಳಿಗೆ ನೀರೆರೆದಿದೆ. ಬದುಕೆಂದರೆ Endless Discovery!\u003c\/p\u003e\n\u003c\/div\u003e\n\u003cdiv\u003e\u003cbr\u003e\u003c\/div\u003e","brand":"Rangaswamy Mookanahalli","offers":[{"title":"Default Title","offer_id":46403851288835,"sku":"HB00005143","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/JapaninalliRanga.jpg?v=1739436941"},{"product_id":"middle-class-to-rich-kannada-self-help","title":"ಮಿಡಲ್ ಕ್ಲಾಸ್ to ರಿಚ್","description":"\u003cp\u003eಮಧ್ಯಮ ವರ್ಗದವರು ದುಡ್ಡಿನ ವಿಚಾರದಲ್ಲಿ ಎಲ್ಲಿ ಎಡವುತ್ತಿದ್ದಾರೆ? ಯಾವ ವಿಚಾರಗಳಲ್ಲಿ ಅವರ ಆಲೋಚನೆ ಬದಲಾದರೆ ಹೆಚ್ಚು ಅನುಕೂಲ? ದುಡ್ಡಿನ ಪಾಠಗಳ ಮೂಲಕ, ಮಧ್ಯಮ ವರ್ಗದವರು ತಮ್ಮ ಬದುಕು ಹೇಗೆ ಹಸನಾಗಿಸಿಕೊಳ್ಳಬಹುದು?\u003c\/p\u003e\n\u003cp\u003eಹೀಗೆ ಮಧ್ಯಮ ವರ್ಗದ ಏಳಿಗೆಗೆ ಹಲವು ಮಾರ್ಗಗಳನ್ನು ಈ ಹೊತ್ತಿಗೆಯಲ್ಲಿ ಪ್ರಾಯೋಗಿಕವಾಗಿ ವಿವರಿಸಲಾಗಿದೆ. ಸಾಕಷ್ಟು ಅಧ್ಯಯನ ಮಾಡಿ ಈ ಪುಸ್ತಕವನ್ನು ರೂಪಿಸಲಾಗಿದೆ. ಇನ್ನೊಂದು ವಿಶೇಷ ಅಂದ್ರೆ ಈ ಪುಸ್ತಕವನ್ನು ಹೀಗೆಯೇ ಓದಬೇಕೆಂಬ ನಿಬಂಧನೆಯಿಲ್ಲ. ಪ್ರತಿಯೊಂದು ಅಧ್ಯಾಯವೂ ಸ್ವತಂತ್ರವಾಗಿದೆ. ಎಲ್ಲಿಂದ ಓದು ಆರಂಭಿಸಿದರೂ ನಿಮಗೆ ಅಡೆತಡೆಯಾಗುವುದಿಲ್ಲ. ಇದರಲ್ಲಿರುವ ಅಂಶಗಳನ್ನು ಓದಿ- ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ನೀವೂ ಆರ್ಥಿಕವಾಗಿ ಶ್ರೀಮಂತರಾಗುವುದರಲ್ಲಿ ಅನುಮಾನವಿಲ್ಲ.\u003c\/p\u003e","brand":"Sharath. M. S.","offers":[{"title":"Default Title","offer_id":47575708172547,"sku":"HB00005502","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/middleclasstorich.jpg?v=1766579611"}],"url":"https:\/\/harivubooks.com\/collections\/money-and-market.oembed","provider":"Harivu Books","version":"1.0","type":"link"}