{"title":"Malenadu Related New Books","description":"","products":[{"product_id":"kaadu-haadiya-jaadu-hatti-kannada-story-book","title":"ಕಾಡು ಹಾದಿಯ ಜಾಡು ಹತ್ತಿ","description":"","brand":"Karthikaditya Belgodu","offers":[{"title":"Default Title","offer_id":42089529442563,"sku":"HB00001054","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaaduhaadiyajaaduhatti_1.jpg?v=1637644637"},{"product_id":"missed-kaala-gopal-yadagere","title":"ಮಿಸ್ಡ್‌ ಕಾಲ","description":"ಬಾಲ್ಯದಲ್ಲಿನ ತುಂಟ ಹುಡುಗರ ಕೀಟಲೆಗಳು, ಅವರ ಕ್ರಿಯಾಶೀಲತೆಯ ಸಾಹಸಗಳು ಆಸಕ್ತಿ ಕೆರಳುವಂತೆ ಮಾಡುತ್ತದೆ. ಆಗಿನ ನಂಬಿಕೆಗಳು ಅಚ್ಚರಿ, ನೋವು, ವಿಷಾದ ಎಲ್ಲವನ್ನೂ ಹುಟ್ಟಿಸುತ್ತದೆ. ಹಳೆ ತಲೆಮಾರು ಇದನ್ನು ಓದಿದಾಗ ಮರೆತು ಹೋದ ಜಾಗವನ್ನೆಲ್ಲಾ ಒಮ್ಮೆ ಸುತ್ತಾಡಿ ಬಂದಂತೆ, ಹೊಸ ತಲೆಮಾರು ಓದಿದಾಗ ಹೀಗೆಲ್ಲಾ ಇತ್ತಾ ಎಂದು ಚಕಿತಗೊಳಿಸುವಂತೆ ಆಗುತ್ತದೆ. ಇದನ್ನೆಲ್ಲಾ ಗೋಪಾಲ್ ಯಡಗೆರೆ ಸರಳವಾಗಿ, ಆಸಕ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ.","brand":"Gopal Yadagere","offers":[{"title":"Default Title","offer_id":42115888414979,"sku":"HB00000697","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MissedKaalaCover.jpg?v=1747119027"},{"product_id":"kaadina-nentaru-novel-kannada-book","title":"ಕಾಡಿನ ನೆಂಟರು","description":"ಮಲೆನಾಡು ಅಂದ, ಚಂದ, ಸುಂದರ, ಸುಮಧುರ, ಮೋಹಕ, ಮನಮೋಹಕ ಹೀಗೆ ವರ್ಣನೆಯ ಮಳೆಗಯ್ಯುತ್ತಾ ಹೋದರೆ ಪದಗಳಿಗೂ ಬಹುಶಃ ಬೇಜಾರಾಗುವುದಿಲ್ಲ. ಹೌದು ಆ ಚೆಲುವು , ಪ್ರೌಢಿಮೆ, ಹೊಗಳಿಕೆ ಮಲೆನಾಡಿಗೆ ಸಲ್ಲತಕ್ಕದ್ದೆ. ಮಲೆನಾಡಿನ ವರ್ಣನೆ, ಸಂಸ್ಕೃತಿ, ಜೀವನಶೈಲಿಯ ಬಗ್ಗೆ ಈಗಾಗಲೇ ಸಾಕಷ್ಟು ಓದಿಕೊಂಡಿದ್ದೇವೆ; ತಿಳಿದುಕೊಂಡಿದ್ದೇವೆ. ಆದರೆ ಇತ್ತೀಚಿನ ಮಲೆನಾಡು, ಬದಲಾಗುತ್ತಿರುವ ಮಲೆನಾಡು, ಬದಲಾದ ಮಲೆನಾಡು ನಿಜಕ್ಕೂ ಅಷ್ಟೊಂದು ಮನಮೋಹಕವಾಗಿದೆಯೇ? ಹಸಿರಿದೆ, ಮಳೆಯಿದೆ, ತೊರೆಯಿದೆ, ನೆರೆಯಿದೆ. ಆದರೂ ಕಳೆದುಕೊಂಡದ್ದೇನು ಎಂಬುದನ್ನು ಹುಡುಕುವ ತುಡಿತ ಇಲ್ಲವಾಗಿದೆ. \u003cbr data-mce-fragment=\"1\"\u003eನಾನು ಚಿಕ್ಕಂದಿನಲ್ಲಿ ಕಂಡ ಮಲೆನಾಡು ಈಗಿಲ್ಲ. ಮುಂದೆ ಇರುವುದೂ ಇಲ್ಲ. “ಕಾಡಿನ ನೆಂಟರು” ಹಿಂದಿನ, ಇಂದಿನ ಮಲೆನಾಡಿನ ಏರಿಳಿತದ ಹಲವು ಮಾಹಿತಿಗಳನ್ನ ಸಣ್ಣ ಕತೆಗಳ ಮೂಲಕ ಬರೆಸಿಕೊಂಡಿದೆ. ಇಲ್ಲಿ ಅದೇ ಮಲೆನಾಡಿನ ಕಾಡು, ನದಿ, ಸಂಸ್ಕೃತಿ, ಬದಲಾದ ಜೀವನ ಎಲ್ಲವೂ ಇದೆ. ಹಸಿರನ್ನು ಉಳಿಸಬೇಕೆಂಬ ಒಕ್ಕೊರಲ ಕೂಗಿದೆ. ಉಳಿಸಿಕೊಳ್ಳುವ ಮಾತನ್ನು ಯಾಕೆ ಆಡುತ್ತಿದ್ದೀನಿ ಎಂದರೆ ಅದಾಗಲೇ ನಾವು ಎಡವಿ ಬಿದ್ದಾಗಿದೆ. ಈ ಹಿಂದಿನಿಂದ ನೋಡುತ್ತಾ ಬಂದರೆ ಮಲೆನಾಡಿಗೆ ಬಂದ ಯೋಜನೆಗಳೆಷ್ಟು? ಆ ಯೋಜನೆಗಳಿಂದಾದ ಪರಿಣಾಮಗಳೇನು? ಏರಿಳಿತಗಳೆಷ್ಟು? ಇವೆಲ್ಲಾ ವಿಷಯಗಳ ಬಗ್ಗೆ ಅವಲೋಕನ ಮಾಡಿ ಮುಂದೆ ಸಾಗಲೇಬೇಕಾದ ಸಮಯ ಇದು. ನನಗನ್ನಿಸಿದ ಹಾಗೆ ನಾವೀಗ ಅರಣ್ಯಗಳನ್ನ ಬಳಸಿಕೊಂಡ ರೀತಿಗೆ ಸಂಪೂರ್ಣವಾಗಿ ಸುಂಕ ಕಟ್ಟುವ ಕಾಲ ಕೂಡ ದೂರ ಇಲ್ಲ. ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲೇ ಅರಣ್ಯ ಬೆಳೆಸಲು, ಗಿಡಗಳನ್ನು ನೆಡುವ ದೊಡ್ಡ ಉದ್ಯೋಗ ಸೃಷ್ಟಿಯ ಕ್ರಾಂತಿಯಾಗುವುದೇನೋ! ಯಾಕೆಂದರೆ ಹಸಿರು ಉಳಿಸಿದಾಗ ಮಾತ್ರವೇ ಉಸಿರಾಡಬಹುದು. \u003cbr data-mce-fragment=\"1\"\u003e“ಈ ಕೃತಿಯಲ್ಲಿರುವ ಸಂಗತಿಗಳು, ಪಾತ್ರಗಳು ಮಲೆನಾಡ ನೆಲದಲ್ಲಿ ನಾವು ಸೃಷ್ಟಿ ಮಾಡಿಕೊಂಡಿರುವುದೇ ಹೊರತು ಅವಾಗೆ ಜನ್ಮ ತಾಳಿದ್ದಲ್ಲ. ಅವುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಕೆಲವು ಕಾಲ್ಪನಿಕ ಸಂಗತಿಗಳಿದ್ದರೂ ವಾಸ್ತವದ ಎದೆ ಬಡಿತಕ್ಕೆ ಸ್ಪಂದಿಸುತ್ತವೆ","brand":"Rakshith Tirthahalli","offers":[{"title":"Default Title","offer_id":43258844414211,"sku":"HB00003463","price":130.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bb2ec07f-0e88-4a3f-8dfd-56fe3d521d67.jpg?v=1662292763"},{"product_id":"ondanondu-malenaadalli-collection-of-stories-vinay-makonahalli-madhav-kannada-book","title":"ಒಂದಾನೊಂದು ಮಲೆನಾಡಲ್ಲಿ","description":"ವಿನಯ್‌ ಸೃಷ್ಟಿಸಿರುವ ಪಾತ್ರಗಳೆಲ್ಲ ತೇಜಸ್ವಿಯವರ ಕಾಲಕ್ಕಿಂತ ಹಿಂದಿನವು ಮತ್ತು ಮುಂದಿನವು, ತೇಜಸ್ವಿಯವರು ಸುಮಾರು 60-80ರ ದಶಕದ ಪಾತ್ರಗಳನ್ನು ತಮ್ಮ ಕಾದಂಬರಿಗಳಲ್ಲಿ ತಂದರು. ಇಲ್ಲಿನ ಹಲವು ಪಾತ್ರಗಳು ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ಸೇರಿದಂಥವು. ಹೀಗಾಗಿ ತೇಜಸ್ವಿ ಪಾತ್ರಗಳ ಜತೆ ಹೋಲಿಕೆ ಮಾಡುವ ಅಪಾಯದಿಂದ ಆ ಪಾತ್ರಗಳನ್ನು ವಿನಯ್ ಪಾರು ಮಾಡಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿನಯ್ ಕತೆಗಳಲ್ಲೂ ಅತಿಭಾವುಕತೆಯ ಲವಲೇಶವೂ ಇಲ್ಲ. ಅವರು ಮೂಲತಃ ವರದಿಗಾರ ಆಗಿರುವುದರಿಂದ ಒಂದು ಮಟ್ಟಗಿನ ವಸ್ತುನಿಷ್ಠತೆ ಅವರಿಗೆ ದಕ್ಕಿದೆ. ಆದರೆ ಎಷ್ಟೋ ಸಲ ವರದಿಗಾರನ ವಸ್ತುನಿಷ್ಠತೆಯೇ ಕಲೆಗೆ ಶತ್ರುವಾಗಿ ಪರಿಣಮಿಸುವುದನ್ನೂ ನಾವು ನೋಡಿದ್ದೇವೆ. ವಸ್ತುನಿಷ್ಟತೆ ಮತ್ತು ಕಲ್ಪನೆ ಇವುಗಳ ನಡುವಿನ ಅತ್ಯುತ್ತಮ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟ. ಅದನ್ನು ವಿನಯ್ ಬಹಳ ಸಹಜವಾಗಿಯೇ ಸಾಧಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಲೆನಾಡಿನ ಕತೆಗಳ ಪರಂಪರೆಗೆ ಈ ಹೊಸ ಸೇರ್ಪಡೆ, ಮಲೆನಾಡಿನ ಕುರಿತ ನಮ್ಮ ನೋಟವನ್ನು ಬದಲಾಯಿಸುವಷ್ಟು ಶಕ್ತವಾಗಿವೆ ಎಂದು ಹೇಳುತ್ತಾ, ಈ ಕತೆಗಳಿಗಾಗಿ ವಿನಯ್‌ ಅವರನ್ನು ಅಭಿನಂದಿಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಜೋಗಿ\u003cbr data-mce-fragment=\"1\"\u003eಮುನ್ನುಡಿಯಿಂದ","brand":"Makonahalli Vinay Madhav","offers":[{"title":"Default Title","offer_id":47445114224899,"sku":"PHB0000073","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Screenshot_2025-11-15_154957_1.png?v=1776085995"},{"product_id":"malenaada-ajji-stories-shabaraj-kannada-book","title":"ಮಲೆನಾಡ ಅಜ್ಜಿ","description":"ಏನನ್ನೂ ಅಪೇಕ್ಷಿಸಿದ, ಯಾರನ್ನೂ ಉಪೇಕ್ಷಿಸದ ಈಕೆ ಅಪ್ಸರೆ. ಅಮರರಿಗೆ ಕಾಲದ ಹಂಗಿಲ್ಲ. ಹಾಗಾಗಿ ಭೂತ ಭವಿಷ್ಯತ್ತಿನ ಎಲ್ಲೆಗಳಿಲ್ಲ, ನಿರಂತರ ವರ್ತಮಾನ. ಕಾದದ್ದು ಊರ ಚೌಡಿಯಂತೆ, ಮುಟ್ಟಿದ್ದೆಲ್ಲಾ ಅಮೃತ, ಬೇಯಿಸಿದ ಅನ್ನ, ಕಾಯಿಸಿದ ಹಾಲು ಎಲ್ಲಾ ಹದ. ಕುದಿಯುತ್ತೆ; ಉಕ್ಕಲ್ಲ, ಕತ್ತಲ ಅಟ್ಟದ ಜಾಡಿಯ ಮಿಡಿ ಉಪ್ಪಿನಕಾಯಿಯೂ ವರ್ಷಗಳಾದರೂ ಕೆಡೊಲ್ಲ. ಉರಿಗಾರದ ಬಾಣಂತಿ ಲೇಹ್ಯ ಕೇವಲ ಅವಶ್ಯಕ ಕಾವನ್ನಷ್ಟೇ ಕೊಡುತ್ತೆ. ಆಷ್ಟ್ಯಾಕೆ ಸುತ್ತಲಿನ ನಿರ್ಲಿಪ್ತ ಗಾಳಿ ಕೂಡಾ ಅ೦ಟಿಕೊ೦ಡವರಿಗೆ ಉಸಿರಾಗುತ್ತೆ. ಓದಿ ಮುಗಿಸಿದೆ, ಮೈ ಮನ ತು೦ಬಿದೆ. ಭಾವೋದ್ವೇಗದಲ್ಲಿ ಅಲ್ಲಲ್ಲಿ ಉಕ್ಕಿದರೂ ಎಲ್ಲೆ ಮೀರಿ ಎಲ್ಲೂ ಚೆಲ್ಲಿಲ್ಲ. ಹಾಲು ಕುದ್ದು ನೀರು ಆವಿಯಾಗಿ ಅನುಭವದ ಸಾರ ಹೆಪ್ಪುಗಟ್ಟಿದಾಗ ಖಾಲಿತನ ಕಾಡಿದ್ದುಂಟು ಹೌದು ಆದರೆ ಅದನ್ನು ಮೀರಿದ ಪರಿಮಳ ಆವರಿಸಿದ್ದು ಸುಳ್ಳಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಸೇತುರಾಂ","brand":"Shobha Raj","offers":[{"title":"Default Title","offer_id":44551328497923,"sku":"HB00004529","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_8f5c3789-0782-4dae-bab0-08c44f527f20.jpg?v=1704541483"},{"product_id":"ettinahole-novel-hridya-kannada-book","title":"ಎತ್ತಿನ ಹೊಳೆ","description":"\u003cp\u003eನಗರವಾಸಿಗಳು ಸ್ವರ್ಗವೆಂದು ಉದ್ಘರಿಸುವ ಸಕಲೇಶಪುರ ಭಾಗದ ಹಸಿಹಸಿ ಚಿತ್ರಣ, ಅಲ್ಲಿನ ಜನಜೀವನ, ಕೆಲವೇ ವರ್ಷಗಳಲ್ಲಾದ ಭೌಗೋಳಿಕ ಬದಲಾವಣೆಗಳು, ಅಪರೂಪವಾಗುತ್ತಿರುವ ಅಪ್ಪಟ ಮಲೆನಾಡಿನ ಮರಗಳು, ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಮಲೆನಾಡಗಿಡ್ಡ ತಳಿಯ ದನಗಳು ಹೀಗೆ ಸಾಗುವ ಕೃತಿಯಲ್ಲಿ ಅಚ್ಚುಕಟ್ಟಾದ ಕಥಾ ಹಂದರವು ಒಂದು ಸುಂದರ ಪ್ರಾಕೃತಿಕ ಪ್ರವಾಸದಂತೆ ಸಾಗಿದೆ. \u003c\/p\u003e\n\u003cp\u003eಮಲೆನಾಡನ್ನು ಮರಳಿ ಕಟ್ಟುವ ಕನಸು ಕಟ್ಟಿಕೊಂಡ ಯುವ ಜೋಡಿಯ ಪಯಣದಲ್ಲಿ ನಾವೂ ಸೇರಿಕೊಳ್ಳಬೇಕು ಎಂದೆನಿಸದಿರದು. ಮಲೆನಾಡಿಗರನ್ನು ಕನಲುವಂತೆ ಮಾಡಿದ್ದ ಗುಂಡ್ಯ ಜಲವಿದ್ಯುತ್‌ ಯೋಜನೆ ಹಿಮ್ಮೆಟ್ಟಿದ ಪರಿ, ಎತ್ತಿನ ಹೊಳೆ ನದಿ ತಿರುವು ಯೋಜನೆ ಮೂಲಕ ಪಶ್ಚಿಮ ಘಟ್ಟಕ್ಕೆ ಹಾಕಿರುವ ಬರೆ ಎಲ್ಲವೂ ಮನಸ್ಸಿಗೆ ನಾಟುತ್ತದೆ. ಮಲೆನಾಡು ನಮ್ಮ ನಾಡು ಎಂಬ ಅಪ್ಯಾಯತೆ ಮೂಡುತ್ತದೆ.\u003c\/p\u003e","brand":"Hridya","offers":[{"title":"Default Title","offer_id":46226441699587,"sku":"HB00005055","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-12-13at10.36.16PM_1.jpg?v=1734324620"},{"product_id":"didugu-collection-of-stories-mallamma-jondi-kannada-book","title":"ದಿಡುಗು","description":"\u003cp\u003eಮೊದಲ ಕಥಾ ಸಂಕಲನವನ್ನು ಪ್ರಕಟಿಸುವ ಲೇಖಕಿಯೊಬ್ಬರಿಂದ ಸಾಮಾನ್ಯ ಓದುಗನೊಬ್ಬ ಏನನ್ನು ಬಯಸಬಹುದು? ಮನಸ್ಸಿಗೆ ತಾಕುವ ಕಥಾವಸ್ತು, ಬಿಗಿಬಂಧ, ತೊಡಕಾಗದ ನಿರೂಪಣೆ, ಮನಸ್ಸನ್ನು ಆರ್ದ್ರಗೊಳಿಸಿ ಅರಳಿಸಬಲ್ಲ, ಅಥವ ಚಿಂತನೆಗೆ ಹಚ್ಚಬಲ್ಲ ಶೈಲಿ ಹಾಗೂ ಪರಿಣಾಮವೇನೆಂದು ಊಹಿಸಿದರೆ ಮಲ್ಲಮ್ಮ ಜೊಂಡಿ ಅವರ ಚೊಚ್ಚಲ ಕೃತಿಯಲ್ಲಿ ಈ ಎಲ್ಲವೂ ಇವೆ.\u003c\/p\u003e\n\u003cp\u003eನಮ್ಮ ಸಾಮಾಜಿಕ ಬದುಕಿನ ಮೂಲ ಬೇರಾದ ಹಳ್ಳಿಗಾಡಿನ ಅನುಭವದ ಕುರಿತು ಎಷ್ಟು ಬರೆದರೂ ಅಕ್ಷಯವೇ. ಮಲ್ಲಮ್ಮ ಅಂಥ ನೆಲದ ಕಸುವಿನ ಅನುಭವದಲ್ಲಿ ತಮ್ಮ ಭಾವಲೋಕವನ್ನು ಆಳಕ್ಕಿಳಿಸಿ ಪ್ರತಿಭೆಯನ್ನು ಪಣಕ್ಕೊಡ್ಡಿ ಫಸಲನ್ನು ತೆಗೆಯಲು ಪ್ರಯತ್ನಿಸುತ್ತಿರುವ ಲೇಖಕಿ. ಅದರಲ್ಲಿ ಅವರು ಅಪರೂಪದ ಯಶಸ್ಸು ಸಾಧಿಸಿರುವುದು ಅವರ ಧ್ಯಾನದ ಫಲ.\u003c\/p\u003e\n\u003cp\u003eಜೀವನದ ಸಣ್ಣಪುಟ್ಟ ಘಟನೆ, ಜಂಜಾಟ, ಸಂಬಂಧಗಳ ಜಟಿಲತೆ, ಅಂತಃಕರಣ ಸೂಸುವ ಘಳಿಗೆಗಳು, ಹೆಣ್ಣಿನ ತಾಕಲಾಟಗಳು ಈ ಕಥೆಗಳ ಉದ್ದಕ್ಕೂ ಹರಿವ ಜಲವಾಗಿದೆ. ಹೆಣ್ಣಿನ ಒಳತೋಟಿ ಬಹುಪಾಲು ಕಥೆಗಳನ್ನು ಆವರಿಸಿವೆ. ಮಲ್ಲಮ್ಮ ಅವರ ಕೆನೆಗಟ್ಟಿದ ಅನುಭವ, ಬಯಲು ಸೀಮೆಯ ನವುರು ಸೂಚಿಸುವ ಭಾಷೆ, ನುರಿತ ನಿರೂಪಣೆ, ಕಲ್ಪನೆಯಲ್ಲಿ ಸುಖಿಸದೆ ಜೀವದ ಕಟುತ್ವದವನ್ನು ತೆರೆದಿಡುವ ವಾಸ್ತವತೆ ಈ ಕಥೆಗಳನ್ನು ಪಕ್ವವಾಗಿಸಿವೆ. ಸೋಂಕಿಲ್ಲದ ಮೃಣ್ಮಯ ಗೊಂಬೆಗಳಂಥ ಮನುಷ್ಯರ ಪಡಿಪಾಟಲುಗಳನ್ನು ಹಾಡುವ ಈ ಸಂಕಲನದ ಓದು ಮನಸ್ಸಿಗೆ ಮುದ ನೀಡುತ್ತಲೇ ಚಿಂತನೆಗೂ ಹಚ್ಚಬಲ್ಲವು.\u003c\/p\u003e\n\u003cp\u003e- ಕೇಶವ ಮಳಗಿ\u003c\/p\u003e","brand":"Mallamma Jondi","offers":[{"title":"Default Title","offer_id":47085737181443,"sku":"HB00005378","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Didugu.jpg?v=1754995407"}],"url":"https:\/\/harivubooks.com\/collections\/malenadu-related-new-books.oembed","provider":"Harivu Books","version":"1.0","type":"link"}