{"title":"Makonahalli Vinay Madhav","description":"","products":[{"product_id":"ardhasatya-vinay-madhav-sawanna","title":"ಅರ್ಧ ಸತ್ಯ","description":"ಹೌದು.\u003cbr data-mce-fragment=\"1\"\u003e\u003cbr data-mce-fragment=\"1\"\u003eನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್. ಯಾವ ಸುದ್ದಿಯ ಹಿಂದೆ ಬೇಕಾದರೂ ಹೋಗ್ತಿನಿ. ಯಾವ ಅಪರಾಧ ಸುದ್ದಿಯೂ ನನ್ನ ಕಣ್ಣಪ್ಪಿಸಿ ಹೋಗೋಕೆ ಸಾಧ್ಯನೇ ಇಲ್ಲ. ವೇಶ್ಯಾವಾಟಿಕೆ, ಡ್ರಗ್ಸ್, ಕೊಲೆ, ಅಂಡರ್‌ವರ್ಲ್ಡ್ ಯಾವುದಾದರೂ ಸರಿ. ಯಾವ ಪೋಲಿಸ್ ಅಧಿಕಾರಿಯ ಹತ್ತಿರ ಬೇಕಾದರೂ ಘಂಟೆಗಟ್ಟಲೆ ಕುಳಿತು ಮಾತನಾಡಿ, ನನಗೆ ಬೇಕಾದ ಸುದ್ದಿ ಹೊರ ತರಬಲ್ಲೆ, ಅಂಡರ್‌ವರ್ಲ್ಡ್ ಡಾನ್ ಎಂದು ಎನ್ನಿಸಿಕೊಂಡವರು ಸಹ ನನಗೇನೂ ದೂರವಲ್ಲ. ಆದರೆ, ಯಾವಾಗ ಬೇಕಾದರೂ, ಯಾರ ವಿರುದ್ಧ ಕೂಡ ತಿರುಗಿ ಬೀಳಬಲ್ಲೆ. ನನ್ನ ಕೈಯಲ್ಲಿ ಆಗದ ಕೆಲಸವಿಲ್ಲ ಎನ್ನುವ ಹಣ್ಣು ಬೇರೆ. ಯಾರ ಹಂಗಿನಲ್ಲೂ ನಾನಿಲ್ಲ ಎನ್ನುವ\u003cbr data-mce-fragment=\"1\"\u003e\u003cbr data-mce-fragment=\"1\"\u003eಆದರೆ, ತಾನು ಯಾವ ವೇಶ್ಯಾವಾಟಿಕೆ, ಡ್ರಗ್‌ಗಳ ವಿರುದ್ಧ ಪುಟಗಟ್ಟಲೆ ಬರೆದಿದ್ದೆನೋ, ಆದೇ ಆ ವೃತ್ತದೊಳಗೆ ಸ್ನೇಹಿತರ ಜೊತೆ ಪರೋಕ್ಷವಾಗಿ ಭಾಗಿಯಾದಾಗ? ತನಗೆ ಸುದ್ದಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೆಲವು ಅಧಿಕಾರಿಗಳನ್ನು ಹೀರೋಗಳಂತೆ ಪ್ರತಿಬಿಂಬಿಸಿ, ಕೊನೆಗೆ ಸತ್ಯ ತಿಳಿದಾಗ? ಇಷ್ಟೆಲ್ಲಾ ಅಧಿಕಾರದಲ್ಲಿರುವವರ ಸಂಪರ್ಕವಿದ್ದರೂ, ನಿಜವಾಗಿ ನೊಂದವರಿಗೆ ಸಾಂತನ ಹೇಳಲೂ ಆಗದಿದ್ದಾಗ?\u003cbr data-mce-fragment=\"1\"\u003e\u003cbr data-mce-fragment=\"1\"\u003eಇದೆಲ್ಲಾ ಇರಲಿ... ಇಡೀ ವ್ಯವಸ್ಥೆಯೇ ತನ್ನನ್ನು ಹೀರೋ ಎಂದು ಹೊಗಳುತ್ತಾ, ತಮಗೆ ಬೇಕಾದಂತೆ ಕಥೆಗಳನ್ನು ಕಟ್ಟುತ್ತಾ ಹೋದಾಗ? ತನ್ನನ್ನು ಟಾಯ್ಲೆಟ್‌ನಲ್ಲಿ ಟಿಶ್ಯೂ ಪೇಪರ್‌ನಂತೆ ಉಪಯೋಗಿಸಿ ಎಸೆದಂತೆ ಅನುಭವವಾಗುತ್ತದೆ. ಆಗ ಸಾಮಾನ್ಯ ಮನುಷ್ಯನಂತೆ ಯೋಚಿಸಲು ಆರಂಭಿಸುತ್ತೇನೆ. ಆದರೂ, ಪ್ರಪಂಚದ ಮಟ್ಟಿಗೆ ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್...\u003cbr data-mce-fragment=\"1\"\u003e\u003cbr data-mce-fragment=\"1\"\u003eಮಾಕೋನಹಳ್ಳಿ ವಿನಯ್ ಮಾಧವ್","brand":"Makonahalli Vinay Madhav","offers":[{"title":"Default Title","offer_id":42115765436675,"sku":"HB00000717","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at12.28.33PM.jpg?v=1638083094"},{"product_id":"vanyalokadalli-naku-hejjegalu","title":"ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು","description":"\u003cp\u003eಇದು \"ಪರಿಸರ ಸಂರಕ್ಷಣೆ ಖಂಡಿತ ಸಾಧ್ಯ\" ಎಂಬ ಸಕಾರಾತ್ಮಕ ಭಾವನೆಯನ್ನು ಓದುಗರಲ್ಲಿಯೂ ಸ್ಪುರಿಸಬಲ್ಲ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಾಗರಹೊಳೆಯಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀ ಚಿಣ್ಣಪ್ಪನವರ ಹೆಸರಿನಲ್ಲಿ ತಮಗೆ ಬಂದ ಪತ್ರದ ಬೆನ್ನು ಹತ್ತಿ, ಒಂದು ರೀತಿಯ ಪತ್ತೇದಾರಿ ಕಥೆಯಂತೆ ಅವರ ಬದುಕಿನ ಪರಿಸರ ಪಯಣ, ಗಂಭೀರ ವಿದ್ಯಾರ್ಥಿಯಿಂದ ಶುರುವಾಗಿ, ಪತ್ರಿಕಾ ವರದಿಗಾರನಾಗಿ, ಸಂಘರ್ಷಕನಾಗಿ, ಕೊನೆಗೆ ಕಾನೂನು ರೀತ್ಯಾ ಹೋರಾಟಕ್ಕಿಳಿಯುವವರೆಗೂ ಸಾಗಿದ್ದನ್ನು ವಿನಯ್ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. \u003cbr data-mce-fragment=\"1\"\u003e\u003cbr\u003e\u003c\/p\u003e\n\u003cp\u003e \u003c\/p\u003e","brand":"Makonahalli Vinay Madhav","offers":[{"title":"Default Title","offer_id":42116008673539,"sku":"HB00000675","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at4.12.32PM.jpg?v=1638096274"},{"product_id":"ckg-sports-club-makonahalli","title":"ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನ ಹಳ್ಳಿ","description":"ಮಾಕೋನಹಳ್ಳಿ ವಿನಯ್‌ ಮಾಧವ್\u003cbr data-mce-fragment=\"1\"\u003e\u003cbr data-mce-fragment=\"1\"\u003eಹಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ, ಅಮ್ಮನ ಊರು ಕೊಡಗು ಜಿಲ್ಲೆಯ ಸೋಮಾವಾರ ಪೇಟೆಯ ಹತ್ತಿರದ ಕರ್ಕಳ್ಳಿ. ಅಣ್ಣ (ಅಪ್ಪ)ನ ಊರು ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ಹತ್ತಿರದ ಮಾರೋನಹಳ್ಳಿ,\u003cbr data-mce-fragment=\"1\"\u003e\u003cbr data-mce-fragment=\"1\"\u003eಓದಿ ಮುಂದೇನು ಮಾಡಬೇಕು ಎನ್ನುವುದಕ್ಕೆ ಎಂದೂ ಸ್ಪಷ್ಟ ಚಿತ್ರಣ ದೊರೆತಿರಲಿಲ್ಲ. ಸಕಲೇಶಪುರ, ಕೇರಳಾಪುರ, ಮೈಸೂರು, ಕಾರ್ಕಳ, ಉಡುಪಿ ಮತ್ತು ಶಿವಮೊಗ್ಗಗಳಲ್ಲಿ ಶಾಲಾ, ಕಾಲೇಜುಗಳಿಗೆ ಹೋಗಿ, ಪದವಿ ವಂಚಿತನಾಗಿ, 1989ರಲ್ಲೇ ಬೆಂಗಳೂರಿಗೆ ಬಂದರೂ, ಇಲ್ಲೇನು ಮಾಡುವುದು ಎನ್ನುವುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ದೊಡ್ಡ ಕಟ್ಟಡದಿಂದ ಟೈ ಹಾಕಿಕೊಂಡು, ಇಂಗ್ಲಿಷ್ ಮಾತನಾಡಿಕೊಂಡು ಬರುವವರನ್ನು ಕಂಡರೆ ಎರಡು ಹೆಜ್ಜೆ ಹಿಂದೆ ಹೋಗುತ್ತಿದ್ದೆ. ಮುಂದಿನ ಜೀವನ ಖಾಲಿ ಕಾಗದದ ಮೇಲೆ ಗೀಚಿದ ಚಿತ್ರಗಳಂತೆ ಸಾಗಿತು. ಇಷ್ಟವಾದ ಚಿತ್ರಗಳು ಉಳಿದುಕೊಂಡವು. ಇನ್ನುಳಿದವು ಸ್ಮೃತಿಪಟಲದಿಂದ ಅಳಿಸಿಹೋದವು.\u003cbr data-mce-fragment=\"1\"\u003e\u003cbr data-mce-fragment=\"1\"\u003e1994ರವರೆಗೆ ಪತ್ರಿಕೋದ್ಯಮದ ಬಗ್ಗೆ ಯಾವುದೇ ಜ್ಞಾನ ವಿಲ್ಲದವನು, 1996ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದೆ. ಒಂದೆರೆಡು ವರ್ಷಗಳಲ್ಲಿ ಊರಿಗೆ ಹೋಗಿ, ಕಾಫಿ ಪ್ಲಾಂಟರ್ ಆಗುವ ಕನಸನ್ನು ಹೊತ್ತುಕೊಂಡೇ ಮೂರು ದಶಕಗಳು ದಾಟಿ ಹೋದವು. ಈಗ ಆ ಬಣ್ಣದ ಕನಸು, ಕಪ್ಪು-ಬಿಳುಪಾಗಿ ರೂಪಾಂತರಗೊಂಡಿದೆ.","brand":"Makonahalli Vinay Madhav","offers":[{"title":"Default Title","offer_id":43589148573955,"sku":"HB00003775","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_eb8bc0e8-753e-41aa-88bd-054e72ca8659.jpg?v=1670934208"},{"product_id":"ondanondu-malenaadalli-collection-of-stories-vinay-makonahalli-madhav-kannada-book","title":"ಒಂದಾನೊಂದು ಮಲೆನಾಡಲ್ಲಿ","description":"ವಿನಯ್‌ ಸೃಷ್ಟಿಸಿರುವ ಪಾತ್ರಗಳೆಲ್ಲ ತೇಜಸ್ವಿಯವರ ಕಾಲಕ್ಕಿಂತ ಹಿಂದಿನವು ಮತ್ತು ಮುಂದಿನವು, ತೇಜಸ್ವಿಯವರು ಸುಮಾರು 60-80ರ ದಶಕದ ಪಾತ್ರಗಳನ್ನು ತಮ್ಮ ಕಾದಂಬರಿಗಳಲ್ಲಿ ತಂದರು. ಇಲ್ಲಿನ ಹಲವು ಪಾತ್ರಗಳು ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ಸೇರಿದಂಥವು. ಹೀಗಾಗಿ ತೇಜಸ್ವಿ ಪಾತ್ರಗಳ ಜತೆ ಹೋಲಿಕೆ ಮಾಡುವ ಅಪಾಯದಿಂದ ಆ ಪಾತ್ರಗಳನ್ನು ವಿನಯ್ ಪಾರು ಮಾಡಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿನಯ್ ಕತೆಗಳಲ್ಲೂ ಅತಿಭಾವುಕತೆಯ ಲವಲೇಶವೂ ಇಲ್ಲ. ಅವರು ಮೂಲತಃ ವರದಿಗಾರ ಆಗಿರುವುದರಿಂದ ಒಂದು ಮಟ್ಟಗಿನ ವಸ್ತುನಿಷ್ಠತೆ ಅವರಿಗೆ ದಕ್ಕಿದೆ. ಆದರೆ ಎಷ್ಟೋ ಸಲ ವರದಿಗಾರನ ವಸ್ತುನಿಷ್ಠತೆಯೇ ಕಲೆಗೆ ಶತ್ರುವಾಗಿ ಪರಿಣಮಿಸುವುದನ್ನೂ ನಾವು ನೋಡಿದ್ದೇವೆ. ವಸ್ತುನಿಷ್ಟತೆ ಮತ್ತು ಕಲ್ಪನೆ ಇವುಗಳ ನಡುವಿನ ಅತ್ಯುತ್ತಮ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟ. ಅದನ್ನು ವಿನಯ್ ಬಹಳ ಸಹಜವಾಗಿಯೇ ಸಾಧಿಸಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಲೆನಾಡಿನ ಕತೆಗಳ ಪರಂಪರೆಗೆ ಈ ಹೊಸ ಸೇರ್ಪಡೆ, ಮಲೆನಾಡಿನ ಕುರಿತ ನಮ್ಮ ನೋಟವನ್ನು ಬದಲಾಯಿಸುವಷ್ಟು ಶಕ್ತವಾಗಿವೆ ಎಂದು ಹೇಳುತ್ತಾ, ಈ ಕತೆಗಳಿಗಾಗಿ ವಿನಯ್‌ ಅವರನ್ನು ಅಭಿನಂದಿಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಜೋಗಿ\u003cbr data-mce-fragment=\"1\"\u003eಮುನ್ನುಡಿಯಿಂದ","brand":"Makonahalli Vinay Madhav","offers":[{"title":"Default Title","offer_id":47445114224899,"sku":"PHB0000073","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Screenshot_2025-11-15_154957_1.png?v=1776085995"},{"product_id":"shoonyadedege-mattitara-kategalu-stories-makonahalli-vinay-madhav-kannada-book","title":"ಶೂನ್ಯದೆಡೆಗೆ ಮತ್ತಿತರ ಕಥೆಗಳು","description":"\"ನಮ್ಮ ಜೀವನಕ್ಕೆ ಯಾವ ಕಥೆ ಹೊಂದುತ್ತದೆಯೋ, ಆ ಕಥೆಯನ್ನು ಆರಿಸಿಕೊಳ್ಳಬೇಕು. ಆ ಕಥೆಯಲ್ಲಿ ಬರುವ ಧರ್ಮ-ಅಧರ್ಮಗಳ ಚರ್ಚೆಯನ್ನು ಗಮನಿಸಿಕೊಳ್ಳಬೇಕು. ಅದಕ್ಕೆ ಯಾವುದೇ ರೀತಿಯ ತಾರ್ಕಿಕ ಅಂತ್ಯ ಇಲ್ಲದ್ದ ರಿಂದ, ನಮ್ಮ ಜೀವನಕ್ಕೆ ಹೊಂದುವ ಉತ್ತರವನ್ನೂ ನಾವೇ ಕಂಡುಕೊಳ್ಳಬೇಕು. ಇದರಷ್ಟು ಪ್ಲೆಕ್ಸಿಬಲ್ ಆಗಿ ಯಾವುದೇ ಧರ್ಮವೂ ಕೊಡಲಾರದು\" ಎನ್ನುವ ಮಾತುಗಳು ಈ ಅನುಭಾವದತ್ತ ನಡೆಯನ್ನು ತೋರಿಸುತ್ತವೆ. ಬದುಕಿನಲ್ಲಿ ಒಂದಲ್ಲ ಒಂದು ಹಂತದಲ್ಲಿ ಹುಟ್ಟುವ ನಿರ್ವಾಣ ಸ್ಥಿತಿಯನ್ನು ವಿನಯ್ ಕತೆಯ ಉತ್ತರಾಂತ್ಯದಲ್ಲಿ ಹೇಳುತ್ತಾರೆ.\u003cbr\u003e\u003cbr\u003eಐಟಿ ಪ್ರೊಫೆಶನರ್‌ನಿಗೆ ಈ ಸ್ಥಿತಿಯ ಕಲ್ಪನೆ ನಮ್ಮ ಪುರಾಣಗಳಲ್ಲಿ ಬರೋ ಈ ಋಷಿ, ಮಹರ್ಷಿ, ರಾಜರ್ಷಿ, ಬ್ರಹ್ಮರ್ಷಿ ಪದವಿಗಳೆಲ್ಲ, ಈಗಿನ ಡೈರೆಕ್ಟರ್, ವೈಸ್ ಪ್ರೆಸಿಡೆಂಟ್, ಸಿಇಒ, ಛೇರ್ಮನ್ ಥರದ ಬಿರುದುಗಳಂತೆಯೇ ಕಾಣುತ್ತದೆ. ಇದು ಶೂನ್ಯದೆಡೆಗೆ ಕತೆಯ ಸೊಗಸು. ಇದನ್ನು ಕತೆಯಾಗಿಯೂ, ನೀಳ್ಗತೆಯಾಗಿಯೂ, ಕಾದಂಬರಿಯಾಗಿಯೂ ನೀವು ಓದಿಕೊಳ್ಳಬಹುದು. ಅಲ್ಲಲ್ಲಿ ಕಾವ್ಯದ ಮಿಳಿತವೂ ಕಾಣುತ್ತದೆ. ಅದನ್ನೂ ಸ್ವೀಕರಿಸಿ ಮುನ್ನಡೆಯಬಹುದು.\u003cbr\u003e\u003cbr\u003e-ಗೋಪಾಲಕೃಷ್ಣ ಕುಂಟಿನಿ","brand":"Makonahalli Vinay Madhav","offers":[{"title":"Default Title","offer_id":44489388491011,"sku":"HB00004468","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_05d27e7e-a75d-49b0-af81-2b88b99a0658.jpg?v=1702379813"}],"url":"https:\/\/harivubooks.com\/collections\/makonahalli-vinay-madhav.oembed","provider":"Harivu Books","version":"1.0","type":"link"}