{"title":"Linguistics Books","description":"","products":[{"product_id":"kannada-barahada-padasamasye","title":"ಕನ್ನಡ ಬರಹದ ಪದಸಮಸ್ಯೆ","description":"\u003cp\u003eಅತಿಯಾದ ಸಂಸ್ಕೃತ ಪದಗಳ ಬಳಕೆಯೇ ಇವತ್ತು ಕನ್ನಡ ಬರಹಗಳನ್ನು ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆ. ಕನ್ನಡಿಗರ ಮಾತಿನಲ್ಲಿ ನೂರಕ್ಕೆ ಐದರಷ್ಟು ಸಂಸ್ಕೃತ ಪದಗಳು ಬಳಕೆಯಾಗುತ್ತಿದ್ದರೆ, ಬರಹಗಳಲ್ಲಿ ನೂರಕ್ಕೆ ನಲುವತ್ತು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕೃತ ಪದಗಳು ಬಳಕೆಯಾಗುತ್ತವೆ. ಇವನ್ನೆಲ್ಲ ಮಾತಿನಲ್ಲಿ ಇಲ್ಲವೇ ಓದಿನಲ್ಲಿ ಇರುವ ಹಾಗೆ ಬರೆಯದೆ ಸಂಸ್ಕೃತದಲ್ಲಿರುವ ಹಾಗೆ ಬರೆಯುವುದು ಈ ಸಮಸ್ಯೆಯನ್ನು ಹೆಚ್ಚು ಮಾಡಿದೆ. ಕನ್ನಡದ ವಿಜ್ಞಾನ ಬರಹಗಳಲ್ಲಂತೂ ಸಂಸ್ಕೃತದಲ್ಲಿ ಕಟ್ಟಿದ ಪಾರಿಭಾಷಿಕ ಪದಗಳು ತುಂಬಿಹೋಗಿವೆ. ಇವು ಕನ್ನಡ ಬರಹ ತುಂಬಾ ಕೃತಕವಾಗುವ ಹಾಗೆ ಮಾಡಿವೆ ಮತ್ತು ಅವುಗಳಲ್ಲಿ ಜೀವಂತಿಕೆ ಇಲ್ಲದಂತೆ ಮಾಡಿದೆ. ಇದಲ್ಲದೆ, ಕನ್ನಡ ಬರಹ ಸಮಾಜದ ಎಲ್ಲಾ ಜನರನ್ನೂ ತಲಪುವಂತೆ ಮಾಡುವಲ್ಲಿ ಈ ಪದಸಮಸ್ಯೆ ಒಂದು ದೊಡ್ಡ ತೊಡಕಾಗಿದೆ. ಕನ್ನಡಿಗರ ಮಾತಿಗೂ ಬರಹಕ್ಕೂ ನಡುವಿರುವ ಅಂತರ ಈ ಪದಸಮಸ್ಯೆಯಿಂದಾಗಿ ತುಂಬಾ ಹೆಚ್ಚಾಗಿದೆ. ಈ ಸಮಸ್ಯೆಯ ನಿಜವಾದ ಸ್ವರೂಪ ಎಂತಹದು ಮತ್ತು ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಈ ಕಿರುಕಡತದಲ್ಲಿ ತೋರಿಸಿಕೊಡಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020604150019,"sku":"HB00001875","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/D.N.S.jpg?v=1636356207"},{"product_id":"samskruta-padagalige-kannadadde-padagalu","title":"ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು","description":"\u003cp\u003e \u003c\/p\u003e\n\u003cdiv class=\"\"\u003eಕನ್ನಡ ಬರಹಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡದವು ಯಾವುವು ಮತ್ತು ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳು ಯಾವುವು ಎಂಬುದನ್ನು ತಿಳಿಯಬೇಕೆಂದಿರುವವರಿಗೆ ನೆರವಾಗಲು ಈ ಪದನೆರಕೆಯನ್ನು ಉಂಟುಮಾಡಲಾಗಿದೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲಪುವಂತೆ ಮಾಡಲು ಅವುಗಳಲ್ಲಿ ಆದಶ್ಟು ಕಡಿಮೆ ಸಂಸ್ಕೃತ ಎರವಲುಗಳನ್ನು ಬಳಸಬೇಕು ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಬೇಕು ಎಂಬ ತುಡಿತ ಇರುವವರಿಗೆ ಸಂಸ್ಕೃತ ಎರವಲುಗಳಿಗೆ ಸಾಟಿಯಾಗಿ ಎಂತಹ ಕನ್ನಡ ಪದಗಳನ್ನು ಬಳಸಲು ಬರುತ್ತದೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಈ ಪದನೆರಕೆಯನ್ನು ಉಂಟುಮಾಡಲಾಗಿದೆ.\u003c\/div\u003e\n\u003cbr\u003e\n\u003cdiv class=\"\"\u003eಸಂಸ್ಕೃತ ಎರವಲುಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಕಟ್ಟಬೇಕೆಂದಿರುವವರಿಗೂ ಈ ಪದನೆರಕೆಯಲ್ಲಿ ಬಳಸಲಾಗಿರುವ ಹಲವು ಹೊಸ ಪದಕಟ್ಟಣೆಗಳು ನೆರವು ನೀಡಬಲ್ಲುವು.\u003c\/div\u003e","brand":"Dr. D. N. Shankara Batt","offers":[{"title":"Default Title","offer_id":42020631642371,"sku":"HB00001535","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-05at16.01.57.jpg?v=1638777451"},{"product_id":"dravidabhaasha-jnaatipadakosha","title":"ದ್ರಾವಿಡಭಾಷಾ ಜ್ಞಾತಿಪದಕೋಶ","description":"\u003cp\u003e\u003c\/p\u003e","brand":"Dr. Hampa Nagarajayya","offers":[{"title":"Default Title","offer_id":42020634657027,"sku":"HB00001490","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DravidaBhashaJnaatipadakosha.jpg?v=1727696648"},{"product_id":"nudiyarimeya-padagalige-kannadadde-padagalu","title":"ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು","description":"\u003cp\u003eಕನ್ನಡದಲ್ಲಿ ನುಡಿಯರಿಮೆಯ ಕುರಿತಾಗಿ ಬಂದಿರುವ ಬರಹಗಳು ತುಂಬಾ ಕಡಿಮೆ. ಇವುಗಳಲ್ಲಿ ಹೆಚ್ಚಿನವೂ ಇಂಗ್ಲೀಶ್ ಪದಗಳಿಗೆ ಬದಲಿಗೆ ಸಂಸ್ಕ್ರುತ ಪದಗಳನ್ನು ಇಲ್ಲವೇ \u003cspan data-mce-fragment=\"1\"\u003eಸಂಸ್ಕ್ರುತ\u003c\/span\u003e ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಹೊಸದಾಗಿ ಉಂಟುಮಾಡಿದ ಪದಗಳನ್ನು ಬಳಸುತ್ತವೆ. ಇಂತಹ ಬರಹಗಳನ್ನು ಓದಿ ತಿಳಿದುಕೊಳ್ಳುವುದು ಕಶ್ಟ. ಇದಲ್ಲದೆ, ಇಂತಹ ಬರಹಗಳನ್ನು ಕನ್ನಡದಲ್ಲಿ ಹೊಸದಾಗಿ ಬರೆಯಬೇಕೆಂದಿರುವವರಿಗೆ ತಮಗೆ ಬೇಕಾಗುವ ಹೊಸಪದಗಳನ್ನು ಉಂಟುಮಾಡಲು \u003cspan data-mce-fragment=\"1\"\u003eಸಂಸ್ಕ್ರುತ\u003c\/span\u003eದ ತಿಳಿವು ಬೇಕಾಗುತ್ತದೆ.\u003c\/p\u003e\n\u003cp\u003eಇಂತಹ ಬರಹಗಳಿಗೆ ಬೇಕಾಗುವ ಹೊಸಪದಗಳನ್ನು ಕನ್ನಡದಲ್ಲೇ ಉಂಟುಮಾಡಲು ಬರುತ್ತದೆ ಎಂಬುದನ್ನು ಈ ಪದನೆರಕೆ ತೋರಿಸಿಕೊಡುತ್ತದೆ, ಮತ್ತು ಅಂತಹ ಹಲವಾರು ಪದಗಳನ್ನು ಕಟ್ಟಿಕೊಡುತ್ತದೆ. ಇದಲ್ಲದೆ, ಈ ಪದಗಳ ಕುರಿತಾಗಿ ವಿವರಣೆಯನ್ನೂ ಉದಾಹರಣೆಗಳೊಂದಿಗೆ ಕೊಡುತ್ತದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020642423043,"sku":"HB00001384","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/JPG.jpg?v=1636357087"},{"product_id":"halagannada-padasampada","title":"ಹಳಗನ್ನಡ ಪದಸಂಪದ","description":"\u003cp\u003eಹಳಗನ್ನಡ ಕಾವ್ಯಾಭ್ಯಾಸಿಗಳಿಗೆ ತಕ್ಕಮಟ್ಟಿಗೆ ಸಹಾಯಕವಾಗಬಲ್ಲುದೆಂದು ಭಾವಿಸಿ ರಚಿಸಿದ ಶಬ್ದಕೋಶ. ಹಳಗನ್ನಡ ಕಾವ್ಯಗಳಲ್ಲಿ ಪ್ರಯೋಗಗೊಂಡ ಶಬ್ದಗಳಿಗೆ ಅರ್ಥ ಅಥವಾ ಅರ್ಥಗಳನ್ನು ನೀಡುವ ಪ್ರಯತ್ನ ಇಲ್ಲಿದೆ. ಕೊನೆಯಲ್ಲಿ ಅರ್ಥವಿನ್ನೂ ಸ್ಪಷ್ಟವಾಗದ ವಿವಾದಿತ ಶಬ್ದಗಳ ಪಟ್ಟಿಯನ್ನೂ ಕೊಟ್ಟು, ಮುಂದಿನ ಶಬ್ದಾರ್ಥ ಜಿಜ್ಞಾಸೆಗೆ ಎಡೆಮಾಡಿಕೊಡುವ ಪ್ರಯತ್ನವೂ ಇದರಲ್ಲಿದೆ.\u003c\/p\u003e","brand":"Dr. P. V. Narayana","offers":[{"title":"Default Title","offer_id":42020643176707,"sku":"HB00001376","price":330.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_166601fc-554d-4a5b-b3cb-3dd01eef6c62.jpg?v=1676623608"},{"product_id":"kalikenudi-mattu-nudikalike","title":"ಕಲಿಕೆನುಡಿ ಮತ್ತು ನುಡಿಕಲಿಕೆ","description":"\u003cp\u003eಮಕ್ಕಳು ತಮ್ಮ ಮೊದಲನೇ ನುಡಿಯನ್ನು ಹೇಗೆ ಕಲಿಯುತ್ತಾರೆ ಮತ್ತು ಅದರೊಂದಿಗೆ ಒಂದೆರಡು ಬೇರೆ ನುಡಿಗಳನ್ನು ಹೇಗೆ ಕಲಿಯಬಲ್ಲರು ಎಂಬುದನ್ನು ಈ ಚುಟುಕು ಪುಸ್ತಕದಲ್ಲಿ ತಿಳಿಸಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020658151683,"sku":"HB00001257","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kalikenudi-mattu-nudikalike_0001.jpg?v=1636357350"},{"product_id":"kannada-barahada-sollarime-7","title":"ಕನ್ನಡ ಬರಹದ ಸೊಲ್ಲರಿಮೆ - ೭","description":"\u003cp\u003eಕನ್ನಡಕ್ಕೆ ಕನ್ನಡದ್ದೇ ಆದ ಒಂದು ವ್ಯಾಕರಣವನ್ನು ಒದಗಿಸಿಕೊಡುವ ಡಿ.ಎನ್.ಶಂಕರ ಬಟ್ ಅವರ ಪ್ರಯತ್ನದಲ್ಲಿ ಇದು ಏಳನೆಯ ಮತ್ತು ಕೊನೆಯ ತುಂಡು. ಇದರಲ್ಲಿ ಅಲ್ಲಗಳೆತದ ಸೊಲ್ಲುಗಳು, ಕೇಳ್ವಿಸೊಲ್ಲುಗಳು, ಸೆಲವುಸೊಲ್ಲುಗಳು ಮತ್ತು ಬೆರಗುಸೊಲ್ಲುಗಳು ಎಂಬುದಾಗಿ ನಾಲ್ಕು ಪಸುಗೆಗಳಿವೆ.\u003c\/p\u003e\n\u003cp\u003eನೂರಾರು ನುಡಿಗಳಲ್ಲಿ ಸೊಲ್ಲುಗಳನ್ನು ಹೇಗೆ ಕಟ್ಟಲಾಗುತ್ತದೆ ಎಂಬುದನ್ನು ಅವುಗಳ ವ್ಯಾಕರಣದಿಂದ ತಿಳಿದುಕೊಂಡು, ಕನ್ನಡದಲ್ಲಿ ಸೊಲ್ಲುಗಳನ್ನು ಕಟ್ಟುವ ಬಗೆಯನ್ನು ಈ ಪುಸ್ತಕದ ವಿಭಾಗಗಳಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020658905347,"sku":"HB00001245","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannada-barahada-sollarime-7_0001.jpg?v=1636357369"},{"product_id":"kannada-vakyagala-olarachane-mattu-arthavyavasthe","title":"ಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ್ಥವ್ಯವಸ್ಥೆ","description":"\u003cp\u003e1978ರಲ್ಲಿ ಮೊದಲಿಗೆ ಪ್ರಕಟವಾಗಿದ್ದ \u003cstrong\u003eಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ಥವ್ಯವಸ್ಥೆ\u003c\/strong\u003e ಎಂಬ ಪುಸ್ತಕವನ್ನು ಕೆಲವು ಮಾರ್ಪಾಡುಗಳೊಂದಿಗೆ ಇದೀಗ \u003cstrong\u003eಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ್ಥವ್ಯವಸ್ಥೆ\u003c\/strong\u003e ಎಂಬ ಹೆಸರಿನಲ್ಲಿ ಮರುಮುದ್ರಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಕನ್ನಡ ವಾಕ್ಯಗಳನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ವಿವರಿಸುವ ಉದ್ದೇಶದಿಂದ ಆ ವಾಕ್ಯಗಳ ಹಿಂದಿರುವ ವ್ಯಾಕರಣ ನಿಯಮಗಳನ್ನು ಪರಿಶೀಲಿಸಲಾಗಿದೆ.\u003c\/p\u003e\n\n\u003cp\u003eಸುಮಾರು ಒಂದು ಸಾವಿರ ವರ್ಷಗಳಿಂದಲೂ ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳೆಲ್ಲ ಮುಖ್ಯವಾಗಿ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನಗಳಾಗಿದೆ. ಆದರೆ, ಇಂಡೋ-ಯುರೋಪಿಯನ್ ಎಂಬ ನುಡಿಕುಟುಂಬಕ್ಕೆ ಸೇರಿದ ಸಂಸ್ಕೃತ ನುಡಿಯ ವ್ಯಾಕರಣಕ್ಕೂ ದ್ರವಿಡಿಯನ್ ಎಂಬ ಅದಕ್ಕಿಂತ ಬೇರಾಗಿರುವ ನುಡಿಕುಟುಂಬಕ್ಕೆ ಸೇರಿದ ಕನ್ನಡ ನುಡಿಯ ವ್ಯಾಕರಣಕ್ಕೂ ನಡುವೆ ಅಜಗಜಾಂತರವಿದೆ. ಹಾಗಾಗಿ, ಹಿಂದಿನ ಪ್ರಯತ್ನಗಳೆಲ್ಲ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ವಿವರಿಸುವಲ್ಲಿ ಸೋತುಹೋಗಿವೆ.\u003c\/p\u003e\n\n\u003cp\u003eಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ವಿವರಿಸುವ ಮೊದಲ ಪ್ರಯತ್ನ ಈ ಪುಸ್ತಕವಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020659167491,"sku":"HB00001242","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannada-vaakyagala-olarachane-mattu-artavevaste.jpg?v=1636357376"},{"product_id":"kannada-bhasheya-kalpita-charithre","title":"ಕನ್ನಡ ಭಾಷೆಯ ಕಲ್ಪಿತ ಚರಿತ್ರೆ","description":"\u003cp\u003eಕನ್ನಡ ಭಾಷೆಯ ಚರಿತ್ರೆಯನ್ನು ಈ ಪುಸ್ತಕದಲ್ಲಿ ಎರಡು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಅವುಗಳಲ್ಲಿ ಒಂದೊಂದು ಭಾಗದಲ್ಲೂ ಒಂದೊಂದು ಮೂಲೆನುಡಿಯನ್ನು ಕಟ್ಟಿ, ಆ ಮೂಲನುಡಿಯ ಮೂಲಕ ಕನ್ನಡ ಭಾಷೆಯ ಚರಿತ್ರೆಯನ್ನು ವಿಂಗಡಿಸಲಾಗಿದೆ. \u003cbr\u003e\u003cbr\u003eಮೊದಲನೆಯ ಭಾಗದಲ್ಲಿ ಕನ್ನಡ, ತಮಿಳು, ತೆಲುಗು, ತುಳು, ಗೋಂಡಿ, ಕುಡುಕ್ ಮೊದಲಾದ ದ್ರಾವಿಡ ನುಡಿಗಳಿಗೆಲ್ಲ ಮೂಲವಾಗಬಲ್ಲ ಮೂಲದ್ರಾವಿಡ ಎಂಬ ನುಡಿಯೊಂದನ್ನು ಕಲ್ಪಿಸಿಕೊಳ್ಳಲಾಗಿದೆ, ಮತ್ತು ಈ ಕಲ್ಪಿತ ನುಡಿಯಿಂದ ಕನ್ನಡ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ವಿವರಿಸಲಾಗಿದೆ. \u003cbr\u003e\u003cbr\u003eಎರಡನೆಯ ಭಾಗದಲ್ಲಿ ಕನ್ನಡದ ಬೇರೆ ಬೇರೆ ಇವತ್ತಿನ ಮತ್ತು ಹಿಂದಿನ ಒಳನುಡಿಗಳಿಗೆಲ್ಲ ಮೂಲವಾಗಬಲ್ಲ ಮೂಲಕನ್ನಡ ಎಂಬ ಬೇರೊಂದು ಮೂಲನುಡಿಯನ್ನು ಕಲ್ಪಿಸಿಕೊಳ್ಳಲಾಗಿದೆ, ಮತ್ತು ಈ ಕಲ್ಪಿತವಾದ ನುಡಿಯಿಂದ ಕನ್ನಡ ಈ ಒಳನುಡಿಗಳು ಹೇಗೆ ಬೆಳೆದುಬಂದಿರಬೇಕು ಎಂಬುದನ್ನು ವಿವರಿಸಲಾಗಿದೆ. \u003cbr\u003e\u003cbr\u003eಒಂದು ನುಡಿಯ ಚರಿತ್ರೆಯನ್ನು ಈ ರೀತಿ ಮೂಲನುಡಿಯನ್ನು ಕಟ್ಟಿ ಹೇಳುವ ಬಗೆ ಕನ್ನಡಕ್ಕೆ ಹೊಸದು. ಮುಖ್ಯವಾಗಿ ಕನ್ನಡದ ಶಾಸನಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಹೋಲಿಸಿ ನೋಡಿ, ಮತ್ತು ಅವುಗಳ ಕಾಲಾನುಕ್ರಮವನ್ನು ಬಳಸಿ, ಕನ್ನಡದ ಚರಿತ್ರೆಯನ್ನು ಬರೆಯುವುದೇ ಕನ್ನಡದಲ್ಲಿ ಬಳಕೆಯಲ್ಲಿರುವ ಬಗೆ. ಆದರೆ, ಅಂತಹ ಚರಿತ್ರೆ ಕನ್ನಡ ಬರಹದ ಚರಿತ್ರೆಯಾಗಬಲ್ಲುದಲ್ಲದೆ, ಕನ್ನಡ ನುಡಿಯ ಚರಿತ್ರೆಯಾಗಲಾರದು. ಚರಿತ್ರೆಯನ್ನು ಬರೆಯುವಲ್ಲಿ ಬಳಕೆಯಾಗುವ ಈ ಎರಡು ಬಗೆಗಳ ನಡುವಿನ ವ್ಯತ್ಯಾಸವನ್ನು ಇಲ್ಲಿ ವಿವರಿಸಲಾಗಿದೆ. \u003cbr\u003e\u003cbr\u003eಕನ್ನಡ ನುಡಿಯ ಚರಿತ್ರೆಯನ್ನು ಇನ್ನೊಂದು ರೀತಿಯಲ್ಲಿ, ಮತ್ತು ಇನ್ನಷ್ಟು ಹೆಚ್ಚು ವಿವರವಾಗಿ ತಿಳಿಸಿರುವುದನ್ನು ಇದೇ ಬರಹಗಾರರ ಕನ್ನಡ ನುಡಿ ನಡೆದು ಬಂದ ದಾರಿ ಎಂಬ ಪುಸ್ತಕದಲ್ಲಿ ನೋಡಬಹುದು.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020659790083,"sku":"HB00001236","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_a26ad58b-0e67-4295-9387-5ed97595dcd0.jpg?v=1653633359"},{"product_id":"jnana-tumbida-koda-prof-mariyappa-bhat","title":"ಜ್ಞಾನ ತುಂಬಿದ ಕೊಡ ಪ್ರೊ. ಎಂ.ಮರಿಯಪ್ಪ ಭಟ್ಟ","description":"\u003cp\u003eಇಂದು ಕನ್ನಡಿಗರು ಬಹುತೇಕ ಮರೆತಿರುವ ಡಾ. ಮರಿಯಪ್ಪ ಭಟ್ಟರನ್ನು ಕನ್ನಡಿಗರಿಗೆ ಪರಿಚಯಿಸುವ ಈ ಕೃತಿ ಕನ್ನಡಿಗರು ಓದಲೇಬೇಕಾದ ಕೃತಿಯಲ್ಲೊಂದು. ಕನ್ನಡ ನುಡಿಯತ್ತ ಡಾ. ಮರಿಯಪ್ಪ ಭಟ್ಟರ ಕೆಲಸಗಳನ್ನು ತಿಳಿದಲ್ಲಿ ಎಂತಹ ದೊಡ್ಡ ಸಾಧನೆಗೈದು ಎಲೆ ಮರೆ ಕಾಯಿಯಂತೆಯೇ ಬದುಕಿದ ಮಹಾನ್ ವ್ಯಕ್ತಿ ಅನ್ನಿಸದೆ ಇರದು.\u003c\/p\u003e","brand":"Dr. Srikrishnabhatta Artikaje","offers":[{"title":"Default Title","offer_id":42020665327875,"sku":"HB00001214","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3875.jpg?v=1636357450"},{"product_id":"kannada-sollarime-6","title":"ಕನ್ನಡ ಬರಹದ ಸೊಲ್ಲರಿಮೆ-೬","description":"\u003cp\u003eಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ಆರನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ಒಳಸೊಲ್ಲುಗಳ ಬಳಕೆ ಮತ್ತು ಸೊಲ್ಲುಗಳ ಜೋಡಣೆ ಎಂಬ ಎರಡು ವಿಭಾಗಗಳಿವೆ.\n\u003cbr\u003e\u003c\/p\u003e\u003cdiv\u003e\u003c\/div\u003e","brand":"Dr. D. N. Shankara Batt","offers":[{"title":"Default Title","offer_id":42020665426179,"sku":"HB00001213","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannada-sollarime-6-Custom-1.png?v=1636357453"},{"product_id":"kannadakke-mahaaprana-yaake-beda","title":"ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?","description":"\u003cp\u003eಕನ್ನಡವನ್ನು ಬರಹಕ್ಕೆ ಇಳಿಸುವಾಗ ಹಲವಾರು ಕಾರಣಗಳಿಂದಾಗಿ ಕನ್ನಡದ ವರ್ಣಮಾಲೆಯಲ್ಲಿ ಹೆಚ್ಚಿನ ಅಕ್ಷರಗಳನ್ನು ಉಳಿಸಿಕೊಳ್ಳಲಾಗಿತ್ತು. ಈ ಕೆಲವು ಹೆಚ್ಚಿನ ಅಕ್ಷರಗಳನ್ನು ಹಾಗೆ ಉಳಿಸಿಕೊಳ್ಳಲು ಏನೇ ಕಾರಣಗಳಿದ್ದರೂ ಅವುಗಳ ಉಲಿಯುವಿಕೆ ಮಾತ್ರ ನಿಜವಾಗಿಯೂ ಕನ್ನಡ ನುಡಿಯಲ್ಲಿ ಅಂದರೆ ಕನ್ನಡ ಮಾತಲ್ಲಿ ಇರಲಿಲ್ಲ ಹಾಗೂ ಈಗಲೂ ಇಲ್ಲ. ಕನ್ನಡಿಗರ ಉಲಿಯುವಿಕೆಗೆ ತಕ್ಕಂತೆ ಬರೆಯುವುದಾದರೆ 31 ಅಕ್ಷರಗಳು ಮಾತ್ರ ಸಾಕಾಗುತ್ತವೆ. ಮಹಾಪ್ರಾಣಗಳು, ವಿಸರ್ಗ, ಋ ಮತ್ತು ಷ ಮೊದಲಾದ ಅಕ್ಷರಗಳು ಕನ್ನಡಕ್ಕೆ ಅನವಶ್ಯಕ.\u003c\/p\u003e\n\n\u003cp\u003eಈ ವಿಷಯಗಳ ಕುರಿತಾಗಿ ಡಾ ಡಿ ಎನ್ ಶಂಕರ ಬಟ್ಟರು ಹಲವು ವರುಶಗಳಿಂದ ಹೇಳುತ್ತ ಬಂದಿದ್ದಾರೆ. ಈ ಎಲ್ಲ ವಿಷಯಗಳನ್ನು ಒಟ್ಟು ಸೇರಿಸಿ ಚುಟುಕಾಗಿ ‘\u003cstrong\u003eಕನ್ನಡಕ್ಕೆ\u003c\/strong\u003e \u003cstrong\u003eಮಹಾಪ್ರಾಣ\u003c\/strong\u003e \u003cstrong\u003eಯಾಕೆ\u003c\/strong\u003e \u003cstrong\u003eಬೇಡ\u003c\/strong\u003e\u003cstrong\u003e?\u003c\/strong\u003e‘ ಎಂಬ ಹೊತ್ತಗೆಯನ್ನು ಬರೆದಿದ್ದಾರೆ. ಈ ಹೊತ್ತಗೆಯಲ್ಲಿ ಮಹಾಪ್ರಾಣಗಳೇ ಮೊದಲಾದ ಅಕ್ಷರಗಳು ಯಾಕೆ ಕನ್ನಡಕ್ಕೆ ಅನವಶ್ಯಕ ಎಂದು ತೋರಿಸಿರುವುದಲ್ಲದೆ, ಯಾವುದೇ ಹೊಸ ಮಾರ್ಪಾಟುಗಳಿಲ್ಲದೆ ಕನ್ನಡಕ್ಕೆ ಬೇಕಾಗುವಂತೆ ವರ್ಣಮಾಲೆಯನ್ನು ಹೇಗೆ ಒಗ್ಗಿಸಿಕೊಳ್ಳಬಹುದು ಮತ್ತು ಹಾಗೆ ಮಾಡುವುದರಿಂದ ಕನ್ನಡ ಸಮಾಜಕ್ಕೆ ಆಗುವ ಒಳಿತುಗಳೇನು ಎಂಬುದನ್ನು ತಿಳಿಸಲಾಗಿದೆ. ಅಲ್ಲದೆ ಹೀಗೆ ಲಿಪಿಯನ್ನು ತಮ್ಮ ನುಡಿಯ ಉಚ್ಚಾರಣೆಗೆ ತಕ್ಕಂತೆ ಒಗ್ಗಿಸಿಕೊಂಡ ಪ್ರಪಂಚದ ಹಲವು ನುಡಿಗಳ ಉದಾಹರಣೆಗಳನ್ನು ಈ ಹೊತ್ತಗೆಯಲ್ಲಿ ನೀಡಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020670374147,"sku":"HB00001169","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannadakke-mahaprana-yaake-beda1.jpg?v=1636357552"},{"product_id":"havyaka-kannada","title":"ಹವ್ಯಕ ಕನ್ನಡ","description":"\u003cp\u003eಈ ಪುಸ್ತಕದಲ್ಲಿ ದಕ್ಶಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹವ್ಯಕರಲ್ಲಿ ಬಳಕೆಯಲ್ಲಿರುವ ಕನ್ನಡ ಒಳನುಡಿಯ ಪರಿಚಯವನ್ನು ಮಾಡಿಕೊಡಲಾಗಿದೆ. ಬರಹ ಕನ್ನಡಕ್ಕೂ ಈ ಒಳನುಡಿಗೂ ನಡುವೆ, ಹಳೆಗನ್ನಡಕ್ಕೂ ಈ ಒಳನುಡಿಗೂ ನಡುವೆ, ಕರಾವಳಿಯ ಬೇರೆ ಒಳನುಡಿಗಳಿಗೂ ಈ ಒಳನುಡಿಗೂ ನಡುವೆ, ಮತ್ತು ಕುಮಟಾ, ಶಿರಸಿ, ಸಿದ್ದಾಪುರ, ಹಾಗೂ ಸಾಗರದ ಹವ್ಯಕ ಒಳನುಡಿಗಳಿಗೂ ಈ ಒಳನುಡಿಗೂ ನಡುವೆ ಎಂತಹ ಹೋಲಿಕೆ ಮತ್ತು ಬೇರ್ಮೆಗಳಿವೆ ಎಂಬುದನ್ನು ತಿಳಿಸುವ ಮೂಲಕ ಈ ಕೆಲಸವನ್ನು ನಡೆಸಿಕೊಡಲಾಗಿದೆ.\u003c\/p\u003e\n\n\u003cp\u003eಕನ್ನಡ ನುಡಿಯ ಹಿನ್ನಡವಳಿ(ಚರಿತ್ರೆ)ಯನ್ನು ತಿಳಿಯುವಲ್ಲಿ ಹವ್ಯಕ ಕನ್ನಡದ ಪರಿಚಯವನ್ನು ಮಾಡಿಕೊಳ್ಳುವುದು ತುಂಬಾ ಮುಕ್ಯವೆಂದು ಹೇಳಬಹುದು. ಯಾಕೆಂದರೆ, ಕನ್ನಡದ ಯಾವ ಬರಹದಲ್ಲೂ ಕಾಣಿಸಿಕೊಳ್ಳದಂತಹ ಕೆಲವು ಮುಂದ್ರಾವಿಡ ಪರಿಚೆಗಳನ್ನು ಹವ್ಯಕ ಕನ್ನಡ ಉಳಿಸಿಕೊಂಡಿದೆ. ಹಾಗಾಗಿ, ಕನ್ನಡದ ಹಿನ್ನಡವಳಿಯನ್ನು ತೀರಾ ಹಳೆಯ ಕನ್ನಡ ಬರಹಗಳಿಗಿಂತಲೂ ಹಿಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಈ ಒಳನುಡಿ ನೆರವಾಗುತ್ತದೆ.\u003c\/p\u003e\n\n\u003cp\u003eಕರಾವಳಿಯ ಬೇರೆ ಒಳನುಡಿಗಳ ಹಾಗೆ, ಹವ್ಯಕ ಕನ್ನಡವೂ ಹಳೆಗನ್ನಡದ ಹಲವು ಪರಿಚೆಗಳನ್ನು ತೋರಿಸುತ್ತಿದೆ; ಆದರೆ, ಇದಕ್ಕೆ ಹವ್ಯಕ ಕನ್ನಡ ಹಳೆಗನ್ನಡವಾಗಿ ಉಳಿದಿರುವುದು ಕಾರಣವಲ್ಲ; ಕನ್ನಡದ ಬೇರೆ ಒಳನುಡಿಗಳ ಹಾಗೆ ಹವ್ಯಕ ಕನ್ನಡವೂ ತಲೆಮಾರಿನಿಂದ ತಲೆಮಾರಿಗೆ ಮಾರ‍್ಪಡುತ್ತಾ ಬಂದಿದೆ. ಅದರಲ್ಲಿ ಬೇರೆಯವಕ್ಕಿಂತ ಹೆಚ್ಚು ಹಳೆಗನ್ನಡದ ಪರಿಚೆಗಳು ಕಾಣಿಸಿಕೊಳ್ಳುವುದಕ್ಕೆ ಬೇರೆಯೇ ಕಾರಣಗಳಿವೆ ಎಂಬುದನ್ನೂ ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020671193347,"sku":"HB00001160","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4137.jpg?v=1636357573"},{"product_id":"kannadada-sollarime","title":"ಕನ್ನಡದ ಸೊಲ್ಲರಿಮೆ","description":"\u003cp\u003eಕನ್ನಡಕ್ಕೆ ಕೇಶಿರಾಜನ ಕಾಲದಿಂದಲೂ ಬಳಕೆಯಲ್ಲಿರುವ ವ್ಯಾಕರಣಕ್ಕಿಂತ ತೀರಾ ಬೇರಾಗಿರುವ ಅದರದೇ ಆದ ಒಂದು ವ್ಯಾಕರಣ ಇದೆ. ಅದು ಎಂತಹದು ಎಂಬುದನ್ನು ತೀರಾ ಚುಟುಕಾಗಿ ತಿಳಿಸುವ ಕೆಲಸವನ್ನು ಈ ಚಿಕ್ಕ ಪುಸ್ತಕದಲ್ಲಿ ಮಾಡಲಾಗಿದೆ.\u003c\/p\u003e\n\u003cp\u003eಒಂದು ನುಡಿಯಲ್ಲಿ ಉಲಿಗಳನ್ನು ಬಳಸಿ ಹೇಗೆ ಪದಗಳನ್ನು ಕಟ್ಟಲಾಗುತ್ತದೆ, ಮತ್ತು ಪದಗಳನ್ನು ಬಳಸಿ ಹೇಗೆ ಸೊಲ್ಲುಗಳನ್ನು ಕಟ್ಟಲಾಗುತ್ತದೆ ಎಂಬುದನ್ನು ಅದರ ವ್ಯಾಕರಣ ತಿಳಿಸಬೇಕು.\u003c\/p\u003e\n\u003cp\u003eಇದಲ್ಲದೆ, ಎರಡು ಇಲ್ಲವೇ ಹೆಚ್ಚು ಸೊಲ್ಲುಗಳನ್ನು ಒಟ್ಟಿಗೆ ಸೇರಿಸಿ ಹೇಳುವುದು ಹೇಗೆ, ಮತ್ತು ಸೊಲ್ಲುಗಳೊಳಗೆ ಇಲ್ಲವೇ ಸೊಲ್ಲುಗಳಲ್ಲಿ ಬರುವ ಪದಕಂತೆಗಳ ಒಳಗೆ ಬೇರೆ ಸೊಲ್ಲುಗಳನ್ನು ಇರಿಸಿ ಹೇಳುವುದು ಹೇಗೆ ಎಂಬುದನ್ನೂ ಅದರ ವ್ಯಾಕರಣ ತಿಳಿಸಬೇಕು.\u003c\/p\u003e\n\u003cp\u003eಕನ್ನಡದಲ್ಲಿ ಈ ಎಲ್ಲಾ ಕೆಲಸಗಳನ್ನೂ ಹೇಗೆ ನಡೆಸಲಾಗುತ್ತದೆ ಎಂಬುದನ್ನು ನೇರವಾಗಿ ತಿಳಿಸುವ ವ್ಯಾಕರಣವನ್ನಶ್ಟೇ ಕನ್ನಡದ್ದೇ ಆದ ವ್ಯಾಕರಣ ಇಲ್ಲವೇ ಸೊಲ್ಲರಿಮೆ ಎಂದು ಕರೆಯಬಹುದು, ಮತ್ತು ಅದನ್ನೇ ಈ ಪುಸ್ತಕ ತುಂಬ ಚುಟುಕಾಗಿ ನಡೆಸುತ್ತದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020674633987,"sku":"HB00001137","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannadada-sollarime11.jpg?v=1636357617"},{"product_id":"kannada-nudiarimeya-inukunota","title":"ಕನ್ನಡ ನುಡಿಯರಿಮೆಯ ಇಣುಕುನೋಟ","description":"\u003cp\u003eಒಂದಲ್ಲ ಒಂದು ಬಗೆಯ ಸಾಹಿತ್ಯಕ್ಕಾಗಿ ಮಾತ್ರ ಬಳಸಲಾಗುತ್ತಿದ್ದ ಕನ್ನಡವಿಂದು ಹಿಂದೆಂದೂ ಇಡದ ಹೆಜ್ಜೆಯನ್ನು ಇಡಬೇಕಿದೆ. ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ಬರೆಯುವವರು ಮಾತ್ರ ಬಳಸುತ್ತಿದ್ದ ಕನ್ನಡವನ್ನು ಇಂದು ಇವಾವುದರ ಗಂಧವೂ ಇಲ್ಲದ ಅರಿಗರು,ಇಂಜಿನಿಯರುಗಳು, ಡಾಕ್ಟರುಗಳು, ಮುಂತಾದವರು ತಂತಮ್ಮ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಂಡು ಕನ್ನಡವನ್ನು ಜಪಾನೀಸ್, ಕೊರಿಯನ್, ಜರ್ಮನ್, ಹೀಬ್ರೂ, ಮುಂತಾದ ನುಡಿಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ.\n\u003cbr\u003eಆದರೆ ಹಿಂದೆಯೂ ಆಗಿರುವಂತೆ, ಬರವಣಿಗೆಯ ಇಟ್ಟಳದಲ್ಲಾಗುತ್ತಿರುವ ಈ ಬೆಳವಣಿಗೆಯು ಬರಿಗೆಮಣೆ, ಪದಬಳಕೆ ಮತ್ತು ಬರವಣಿಗೆಯ ಒಡ್ಡವದಲ್ಲಿಯೂ ಮಾರ್ಪಾಡುಗಳನ್ನು ಚಿಗುರಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಮಾರ್ಪಾಡುಗಳಿಂದ ಈಗ ‘ಎಲ್ಲರ ಕನ್ನಡ’ವೊಂದು ರೂಪುಗೊಳ್ಳುತ್ತಿದೆ. ‘ಎಲ್ಲರ ಕನ್ನಡ’ವೆಂದರೆ ನಿಜಕ್ಕೂ ಎಲ್ಲರದಾಗಿದ್ದು ಆದಷ್ಟು ಕನ್ನಡದ ಪದಗಳನ್ನೇ ಬಳಸಲಾಗುತ್ತದೆ, ಹೊಸ ಪದಗಳನ್ನು ಕನ್ನಡದಲ್ಲೇ ಕಟ್ಟಲಾಗುತ್ತದೆ. ಕನ್ನಡವನ್ನು ಮುಂಬೊತ್ತಿಗೆ ಸಜ್ಜಾಗಿಸುವ ಹೊಣೆ ಎಲ್ಲರದೂ ಆಗಿದೆಯೆಂದು ಕಂಡುಕೊಂಡರೆ ಈ ಮಾರ್ಪಾಡುಗಳು ಏತಕ್ಕೆ ಬೇಕೆಂದು ತಾನಾಗಿಯೇ ತಿಳಿದು ಬರುತ್ತದೆ.\n\u003cbr\u003eಹೀಗೆ ಕನ್ನಡವನ್ನು ನಾಳೆಗೆ ಸಜ್ಜುಗೊಳಿಸಬೇಕಿರುವಾಗ, ನಿಜಕ್ಕೂ ಕನ್ನಡವೆಂದರೆ ಏನು? ಇದರ ಸೊಗಡೇನು? ನುಡಿಯೊಂದರ ಹರವು ಏನು? ಕಸುವು ಏನು? ಮಾತು ಹೇಗೆ ಬದಲಾಗುತ್ತದೆ? ಇದರ ಸೊಲ್ಲರಿಮೆಯೇನು? ಎಂಬುದರ ಬಗ್ಗೆ ಕನ್ನಡಿಗರಲ್ಲಿ ಅರಿವುಂಟಾಗುವುದು ಕನ್ನಡಿಗರ ನಾಳೆಗಳ ಹಿನ್ನೆಲೆಯಲ್ಲಿ ತುಂಬಾ ಬೇಕಾದುದಾಗಿದೆ. ಈ ನಿಟ್ಟಿನಲ್ಲಿ ಬೆಳಕು ಚೆಲ್ಲುವ ಬರಹಗಳನ್ನು ಈ ಹೊತ್ತಗೆಯಲ್ಲಿ ಕೊಡಮಾಡಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020674732291,"sku":"HB00001136","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3835.jpg?v=1636357618"},{"product_id":"kannada-vyakarana-yake-beku","title":"ಕನ್ನಡ ವ್ಯಾಕರಣ ಯಾಕೆ ಬೇಕು?","description":"\u003cp\u003eಕನ್ನಡ ವ್ಯಾಕರಣ (ಸೊಲ್ಲರಿಮೆ) ಎಂಬುದು ಯಾವ ಕೆಲಸಕ್ಕೂ ಬಾರದ ಕಗ್ಗಂಟಲ್ಲ; ಕನ್ನಡದಲ್ಲಿ ಓದಲು-ಬರೆಯಲು ಕಲಿಯುವುದು, ಇಂಗ್ಲಿಶ್ನಂತಹ ಬೇರೆ ನುಡಿಗಳನ್ನು ಕಲಿಯುವುದು, ಕನ್ನಡದಿಂದ ಬೇರೊಂದು ನುಡಿಗೆ ಇಲ್ಲವೇ ಬೇರೊಂದು ನುಡಿಯಿಂದ ಕನ್ನಡಕ್ಕೆ ನುಡಿಮಾರುವುದು (ಅನುವಾದಿಸುವುದು) ಮೊದಲಾದ ನುಡಿಗೆ ಸಂಬಂಧಿಸಿದಂತಹ ಹಲವಾರು ಕೆಲಸಗಳನ್ನು ನಡೆಸುವಲ್ಲಿ ಅದು ನೆರವನ್ನು ಕೊಡಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.\n\u003cbr\u003eಆದರೆ ಈ ರೀತಿ ನೆರವನ್ನು ಪಡೆಯಬೇಕಿದ್ದಲ್ಲಿ, ನಿಜವಾದ ಕನ್ನಡ ವ್ಯಾಕರಣ ಎಂತಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳು ನಿಜವಾದ ಕನ್ನಡ ವ್ಯಾಕರಣಗಳಲ್ಲ; ಹಾಗಾಗಿ, ಅವು ಮೇಲಿನ ಕೆಲಸಗಳನ್ನು ನಡೆಸುವಲ್ಲಿ ಯಾವ ನೆರವನ್ನೂ ಕೊಡುವುದಿಲ್ಲ.\n\u003cbr\u003eಕನ್ನಡದ ನಿಜವಾದ ವ್ಯಾಕರಣ ಎಂತಹುದು ಎಂಬುದನ್ನು ತಿಳಿಯುವುದರೊಂದಿಗೆ, ಕನ್ನಡಕ್ಕೆ ಸಂಬಂಧಿಸಿದಂತಹ ಒಂದೊಂದು ಕೆಲಸಕ್ಕೂ ಆ ತಿಳಿವನ್ನು ಬಳಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅಂತಹ ತಿಳಿವನ್ನು ಕೊಡಬಲ್ಲ ಹಲವಾರು ಬಳಕೆಯ ವ್ಯಾಕರಣಗಳನ್ನೂ ಬರೆಯಬೇಕಾಗುತ್ತದೆ. ಇವತ್ತು ಕನ್ನಡದಲ್ಲಿ ಈ ಎರಡು ಬಗೆಯ ಕೆಲಸಗಳನ್ನೂ ನಡೆಸಬೇಕಾಗುತ್ತದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020674797827,"sku":"HB00001135","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Kannada-vykarana-yaake-beeku.png?v=1636357621"},{"product_id":"nudiya-baggege-nivenu-balliri-linguistic-shankara-bhat-kannada-book","title":"ನುಡಿಯ ಬಗೆಗೆ ನೀವೇನು ಬಲ್ಲಿರಿ?","description":"\u003cp\u003eಕಣ್ಣುಗಳೆರಡು ನಮ್ಮ ಮೂಗಿನ ತುದಿಯಲ್ಲೇ ಇವೆಯಾದರೂ ಅವು ನೋಯತೊಡಗಿದುವೆಂದರೆ ನಾವು ಸೀದಾ ಡಾಕ್ಟರಲ್ಲಿಗೆ ಓಡುತ್ತೇವೆ. ನಮ್ಮ ವಶದಲ್ಲೇ ಇವೆಯಾದರೂ ಅವುಗಳ ಒಳಗುಟ್ಟು ನಮಗೆ ತಿಳಿದಿಲ್ಲ. ನಮ್ಮ ನಾಲಗೆಯ ತುದಿಯಲ್ಲೇ ಕುಣಿಯುವ ನುಡಿಯೂ ಇಂತಹದೇ. ಬೇಕಾದಂತೆ ಅದನ್ನು ನಾವು ಬಳಸಬಲ್ಲೆವು. ಆದರೆ ಅದರ ಒಳಗುಟ್ಟು ಮಾತ್ರ ನಮಗೆ ತಿಳಿಯದು.\u003c\/p\u003e\n\u003cp\u003e ಆದರೆ, ಕಣ್ಣಿನ ನೋವಿನ ಹಾಗೆ ನುಡಿಯ ನೋವು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಹಿಂಸಿಸುವುದಿಲ್ಲ. ಅದರ ತೊಂದರೆಯನ್ನು ಇಡೀ ಸಮಾಜವೇ ಒಟ್ಟಾಗಿ ಅನುಭವಿಸುತ್ತದೆ. ಇದಕ್ಕಾಗಿಯೋ ಏನೋ, ನುಡಿಯ ಸಮಸ್ಯೆಯನ್ನು ಪರಿಹರಿಸಲು ಯಾರೂ ನುಡಿಯ ಪಂಡಿತರಲ್ಲಿಗೆ ಓಡುವುದಿಲ್ಲ. ಆದರೆ, ಇದರಿಂದಾಗುವ ಅನಾಹುತಗಳು ಮಾತ್ರ ಹಲವು.\u003c\/p\u003e\n\u003cp\u003eಲಿಪಿಯ ವಿಷಯದಲ್ಲಿ ನುಡಿಮಾಧ್ಯಮದ ವಿಷಯದಲ್ಲಿ, ವ್ಯಾಕರಣವನ್ನು ಕಲಿಸುವ ವಿಷಯದಲ್ಲಿ ಮತ್ತು ಇನ್ನು ಹಲವಾರು ನುಡಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಹಲವಿವೆ ಎಂಬುದನ್ನು ಈ ಪುಸ್ತಕ ತೋರಿಸಿ ಕೊಡುತ್ತದೆ. ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ ಬೇರೆ ಬೇರೆ ನಿರ್ಧಾರಗಳನ್ನು ಮಾಡುವವರು ಅವಶ್ಯವಾಗಿಯೂ ತಿಳಿದಿರಬೇಕಾದ ವಿಷಯಗಳಿವು.\u003c\/p\u003e\n\u003cp\u003eಈ ಪುಸ್ತಕದ ಬರಹಗಾರರು ಕಳೆದ ಐವತ್ತು ವರ್ಷಗಳಿಂದ ನುಡಿಯ ಕುರಿತಾಗಿ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ, ಮತ್ತು ಕನ್ನಡಕ್ಕೆ ಅದರದೇ ಆದ ವ್ಯಾಕರಣವೊಂದನ್ನು ಸಿದ್ಧಪಡಿಸಿದ್ದಾರೆ. ಇದಲ್ಲದೆ, ಕನ್ನಡ ಬರಹಗಳು ಎಲ್ಲರ ಕೈಸೇರುವಂತೆ ಮಾಡಲು ಅದರಲ್ಲಿ ಬಳಕೆಯಾಗುವ ಸಂಸ್ಕೃತ ಎರವಲುಗಳನ್ನು ಕಡಿಮೆ ಮಾಡಬೇಕು, ಮತ್ತು ಅದರಲ್ಲಿ ಆನವಶ್ಯಕವಾಗಿ ಬಳಕೆಯಾಗುತ್ತಿರುವ ಸುಮಾರು ಹದಿನೇಳು ಅಕ್ಷರಗಳನ್ನು ಬಿಟ್ಟುಕೊಡಬೇಕು ಎಂದು ವಾದಿಸಿ, ఆ ರೀತಿ ಬಿಟ್ಟುಕೊಟ್ಟಿರುವ 'ಹೊಸಬರಹ'ವೊಂದನ್ನು ಬರಹಗಾರರ ಮುಂದಿಟ್ಟು, ಅದನ್ನು ಈಗ ತಾವೇ ಬಳಸತೊಡಗಿದ್ದಾರೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020674863363,"sku":"HB00001134","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NudiyaBagegeNeevenuBalliri.jpg?v=1740137281"},{"product_id":"matina-olaguttu","title":"ಮಾತಿನ ಒಳಗುಟ್ಟು","description":"\u003cp\u003eಮಾತಿನ ಬಗ್ಗೆ ಏನೇ ಹೇಳುವುದಿದ್ದರೂ ಅದರ ಒಳಗುಟ್ಟನ್ನು ಅರಿಯುವುದು ಅಗತ್ಯ ಎಂಬುದನ್ನು ಈ ಪುಸ್ತಕ ತೋರಿಸಿಕೊಡುತ್ತದೆ. ನಮ್ಮ ನಾಲಿಗೆಯ ತುದಿಯಲ್ಲೇ ಕುಣಿಯುತ್ತಿದೆಯಾದರೂ ಕಣ್ಣು, ಕಿವಿ ಮೊದಲಾದವುಗಳ ಹಾಗೆ ನಮ್ಮ ಮಾತೂ ತುಂಬಾ ಸಂಕೀರ್ಣವಾದುದು. ಅದರ ಕುರಿತಾಗಿ ಎಷ್ಟು ಕಲಿತರೂ, ಎಷ್ಟು ಸಂಶೋಧನೆ ನಡೆಸಿದರೂ ನಮಗೆ ಅದು ಪೂರ್ತಿ ಅರ್ಥವಾಗಿದೆಯೆಂದು ಹೇಳುವ ಎದೆಗಾರಿಕೆ ಇವತ್ತು ಯಾರಿಗೂ ಇಲ್ಲ. \u003cbr\u003eಹೀಗಿದ್ದರೂ ಮಾತಿನ ಕುರಿತಾಗಿ ಇವತ್ತು ನಾವು ಪಡೆದುಕೊಂಡಿರುವ ತಿಳಿವಳಿಕೆಯನ್ನು ಆದಷ್ಟು ಮಟ್ಟಿಗೆ ಬಳಸಿಕೊಳ್ಳುವುದು ಅವಶ್ಯ. ಅದು ಎಂತಹುದು ಎಂಬುದನ್ನು ಈ ಪುಸ್ತಕದಲ್ಲಿ ಚುಟುಕಾಗಿ ವಿವರಿಸಲಾಗಿದೆ. ಮಾತಿನ ಕುರಿತು ನುಡಿಗಳ ಕುರಿತು, ಓದು-ಬರಹದ ಕುರಿತು ನಮ್ಮಲ್ಲಿ ಹಲವಾರು ಅನಿಸಿಕೆಗಳಿವೆ. ಇವುಗಳಲ್ಲಿ ಹಲವು ಸರಿಯಿಲ್ಲ ಎಂಬುದನ್ನು ಈ ತಿಳಿವಳಿಕೆಯ ಆಧಾರದ ಮೇಲೆ ಹೇಳಲು ಸಾಧ್ಯವಿದೆ. \u003cbr\u003eಉದಾಹರಣೆಗಾಗಿ ಮಕ್ಕಳಿಗೆ ಇಂಗ್ಲಿಶ್ ಚೆನ್ನಾಗಿ ಬರಬೇಕೆಂಬುದು ಅವರನ್ನು ತಾಯಿನುಡಿಯಿಂದ ದೂರಮಾಡಿದರೆ ಇಲ್ಲವೇ ತಾಯಿನುಡಿಯ ಮೇಲೆ ಅವರಿಗೆ ಕೀಳರಿಮೆ ಉಂಟಾಗುವ ಹಾಗೆ ಮಾಡಿದರೆ, ಅವರಿಂದ ಮಾತಿನ ಬುಡಕಟ್ಟನ್ನೇ ಕಿತ್ತುಕೊಂಡ ಹಾಗಾಗುತ್ತದೆ. ನಿಜಕ್ಕೂ ಎರಡು ಇಲ್ಲವೇ ಹೆಚ್ಚು ನುಡಿಗಳನ್ನು ಕಲಿತ ಮಕ್ಕಳು ಒಂದೇ ನುಡಿ ಕಲಿತವರಿಗಿಂತ ಹಲವು ವಿಷಯಗಳಲ್ಲಿ ಮುಂದಿರುವುದು ಕಂಡುಬಂದಿದೆ. \u003cbr\u003eಇದನ್ನು ತಿಳಿಯದಿರುವ ಹಲವು ಮಂದಿ ಕನ್ನಡಿಗರು ಇಂಗ್ಲಿಶ್ ನುಡಿಯ ಮೇಲಿರುವ ಮೋಹದಿಂದಾಗಿ ಇವತ್ತು ತಮ್ಮ ಮಕ್ಕಳನ್ನು ಅವರ ತಾಯಿನುಡಿಯಿಂದ ದೂರಮಾಡುತ್ತಿದ್ದಾರೆ ಮತ್ತು ಆ ಮೂಲಕ ಅವರ ಬುದ್ದಿಶಕ್ತಿಯನ್ನೇ ಹಾಳುಗೆಡವುತ್ತಿದ್ದಾರೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020674928899,"sku":"HB00001133","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4014.jpg?v=1636357624"},{"product_id":"kannada-vakyagala-olarachane","title":"ಕನ್ನಡ ವಾಕ್ಯಗಳ ಒಳರಚನೆ","description":"\u003cp\u003eಒಂದು ಭಾಷೆಯಲ್ಲಿ ಬರುವ ಪದಗಳ ಮತ್ತು ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ವಿವರಿಸಿ ಹೇಳುವುದೇ ವ್ಯಾಕರಣದ ಮುಖ್ಯ ಉದ್ದೇಶ. ಕನ್ನಡದಲ್ಲಿ ಪ್ರಕಟವಾಗಿರುವ ವ್ಯಾಕರಣಗಳಾವುವೂ ಈ ಉದ್ದೇಶವನ್ನು ಸಾಧಿಸುವಲ್ಲಿ ಸಫಲವಾಗಿಲ್ಲ. ಅವೆಲ್ಲ ಮುಖ್ಯವಾಗಿ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ.\n\u003cbr\u003eಕನ್ನಡ ಮಾತು ಮತ್ತು ಬರಹಗಳಲ್ಲಿ ನಾವುಗಳು ತಡೆಯಿಲ್ಲದಂತೆ ಹಲವು ಪದಗಳು ಮತ್ತು ಪದರೂಪಗಳನ್ನು ಬಳಸುತ್ತೇವೆ. ಆದರೆ ಹೀಗೆ ಬಳಸುವಾಗ ಹಲವು ಸಿಕ್ಕಲು-ಸಿಕ್ಕಲಾದ ಕಟ್ಟಲೆಗಳನ್ನು ಬಳಸುತ್ತೇವೆ ಎಂಬುದು ನಮ್ಮ ಅರಿವಿಗೆ ಬರುವುದಿಲ್ಲ. ಇದಕ್ಕೆ ಕಾರಣ, ಈ ಕಟ್ಟಲೆಗಳು ನಮ್ಮ ಮನಸ್ಸಿನಲ್ಲಿ ಅರಿವಿಗೆ ಎಟುಕದ ರೀತಿಯಲ್ಲಿ ಇರುತ್ತವೆ ಮತ್ತು ನಾವು ಅವುಗಳನ್ನು ಅರಿವಿಗೆ ಬಾರದಂತೆಯೇ ಬಳಸುತ್ತೇವೆ.\n\u003cbr\u003eಈ ಪುಸ್ತಕದಲ್ಲಿ, ಕನ್ನಡ ವಾಕ್ಯಗಳ ಕಟ್ಟಣೆಯಲ್ಲಿ ಬಳಕೆಯಾಗುವ ಇಂತಹ ಕೆಲವು ಕಟ್ಟಲೆಗಳನ್ನು ತೋರಿಸಿಕೊಡಲಾಗಿದೆ. ಈ ಕೆಲಸವನ್ನು ನಮ್ಮ ಕನ್ನಡ ವ್ಯಾಕರಣಗಳು ಮಾಡಬೇಕಾಗಿದೆ, ಆದರೆ ಇಂದು ಶಾಲೆಯಲ್ಲಿ ಕಲಿಸಲಾಗುವ ಕನ್ನಡ ವ್ಯಾಕರಣಗಳು ಸಂಸ್ಕೃತದ ವ್ಯಾಕರಣವನ್ನೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ. ಸಂಸ್ಕೃತ ವ್ಯಾಕರಣದ ಕಟ್ಟಲೆಗಳು ಹೇಗೆ ಕನ್ನಡಕ್ಕೆ ಹೊಂದುತ್ತವೆ ಎಂಬುದು ಮಾತ್ರ ಕಲಿಸುಗರಿಗೂ ಕಲಿಯುವವರಿಗೂ ತಿಳಿದಿರುವುದಿಲ್ಲ.\n\u003cbr\u003eಈ ಪುಸ್ತಕದಲ್ಲಿ ಉದಾಹರಣೆಗಳ ಮೂಲಕ ಹಲವು ಬಗೆಯ ಕನ್ನಡ ವಾಕ್ಯಗಳನ್ನು ನೀಡಿ, ಅವುಗಳ ಕಟ್ಟಣೆಯನ್ನು ಗಮನಿಸಿ, ನೇರವಾಗಿ ಅವುಗಳಿಂದಲೇ ಕಟ್ಟಲೆಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಹಾಗಾಗಿ ಈ ಕಟ್ಟಲೆಗಳು ಹೇಗೆ ಕನ್ನಡ ವಾಕ್ಯಗಳಿಗೆ ಹೊಂದುತ್ತವೆ ಎಂಬುದು ಸುಲಭವಾಗಿ ತಿಳಿಯಬಹುದು.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020674994435,"sku":"HB00001132","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannada-vaakyagala-olarachane_0001.jpg?v=1636357625"},{"product_id":"kannadakke-beku-kannadadde-vyakarana","title":"ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ","description":"\u003cp\u003eಇವತ್ತಿನ ದಿನ ಶಾಲೆಗಳಲ್ಲಿ ಕನ್ನಡ ವ್ಯಾಕರಣದ ನಿಯಮಗಳು ಎಂದು ಕಲಿಸಿಕೊಡಲಾಗುತ್ತಿರುವ ನಿಯಮಗಳು ನಿಜವಾದ ಕನ್ನಡ ವ್ಯಾಕರಣ ನಿಯಮಗಳಿಗಿಂತ ಬಹಳಷ್ಟು ಭಿನ್ನವಾಗಿವೆಯಾದ ಕಾರಣ ಕನ್ನಡ ಪದಗಳ ಮತ್ತು ವಾಕ್ಯಗಳ ರಚನೆಯನ್ನು ಸರಿಯಾಗಿ ವಿವರಿಸಲಾರವು. ನಿಜಕ್ಕೂ ಕನ್ನಡದ ವ್ಯಾಕರಣ ನಿಯಮಗಳು ಎಂತಹವು, ಕನ್ನಡ ವ್ಯಾಕರಣಗಳಲ್ಲಿ ಅದರಲ್ಲೂ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ವ್ಯಾಕರಣಗಳಲ್ಲಿ ಬರುವ ನಿಯಮಗಳಿಗಿಂತ ಅವು ಹೇಗೆ ಭಿನ್ನವಾಗಿವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಮತ್ತು ಅದರ ವ್ಯಾಕರಣದಲ್ಲಿ ಆಸಕ್ತಿಯಿರುವವರೆಲ್ಲ ಅವಶ್ಯವಾಗಿ ಓದಬೇಕಾದ ಪುಸ್ತಕವಿದು. \u003cbr\u003eಈ ಪುಸ್ತಕವನ್ನು ಬರೆದಿರುವ ಡಿ. ಎನ್. ಶಂಕರ ಭಟ್ ಅವರು ನೂರಾರು ಭಾಷೆಗಳ ವ್ಯಾಕರಣಗಳನ್ನು ಪರಿಶೀಲಿಸಿ, ಅವುಗಳ ನಡುವೆ ಯಾವ ರೀತಿಯಲ್ಲೆಲ್ಲ ವ್ಯತ್ಯಾಸಗಳು ಕಾಣಿಸಿಕೊಳ್ಳಬಲ್ಲುವು ಎಂಬುದನ್ನು ಕಂಡುಹಿಡಿಯುವುದಕ್ಕಾಗಿ ಅವರು ಸುಮಾರು ನಲವತ್ತು ವರ್ಷಗಳ ಸಂಶೋಧನೆ ಮಾಡಿದ್ದಾರೆ. ಈ ಸಂಶೋಧನೆಯ ಮೂಲಕ ತಾವು ಪಡೆದ ತಿಳುವಳಿಕೆಯನ್ನು ಅವರೀಗ ಕನ್ನಡ ವ್ಯಾಕರಣವನ್ನು ಅರಿಯುವ ಪ್ರಯತ್ನದಲ್ಲಿ ಬಳಸಿಕೊಳ್ಳುತ್ತಿದ್ದಾರೆ.\u003cbr\u003e\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675059971,"sku":"HB00001131","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KannadakkeBekuKannadaddeVyakarana.jpg?v=1715247360"},{"product_id":"kannada-nudi-nadedu-banda-daari","title":"ಕನ್ನಡ ನುಡಿ ನಡೆದು ಬಂದ ದಾರಿ","description":"\u003cp\u003eಮೂಲದ್ರಾವಿಡದಿಂದ ಇವತ್ತಿನ ಬರಹ ಕನ್ನಡದ ತನಕ ಮತ್ತು ಹಳೆಗನ್ನಡದಿಂದ ಇವತ್ತಿನ ಕನ್ನಡದ ಒಳನುಡಿ(ಆಡುನುಡಿ)ಗಳ ತನಕ ಕನ್ನಡ ನುಡಿಯಲ್ಲಿ ನಡೆದಿರುವ ಬದಲಾವಣೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. \u003cbr\u003eಮೂಲತೆಂಕುದ್ರಾವಿಡದಿಂದ ಬೇರಾದ ಮೇಲೆ ಕರಾವಳಿ ಮತ್ತು ಒಳನಾಡುಗಳ ನಡುವೆ ನಡೆದ ಒಡೆತವೇ ಕನ್ನಡ ನುಡಿಯ ಮಟ್ಟಿಗೆ ಅತ್ಯಂತ ಹಳೆಯದಾದ ಮತ್ತು ಮುಖ್ಯವಾದ ಒಡೆತ ಎಂಬುದನ್ನೂ ಇಲ್ಲಿ ತೋರಿಸಿಕೊಡಲಾಗಿದೆ. \u003cbr\u003eಈ ಪುಸ್ತಕವನ್ನು ಬರೆದಿರುವ ಡಿ. ಎನ್. ಶಂಕರ ಭಟ್ ಅವರು ಕನ್ನಡ ನುಡಿಯ ಚರಿತ್ರೆಯ ಕುರಿತು ಇದಕ್ಕೂ ಮೊದಲೇ ಬರೆದಿದ್ದ ಒಂದು ಪುಸ್ತಕವನ್ನು (ಕನ್ನಡ ಭಾಷೆಯ ಕಲ್ಪಿತ ಚರಿತ್ರೆ) ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಆ ಪುಸ್ತಕವನ್ನು ಬಳಸಿ ಮತ್ತು ಹಲವಾರು ಹೊಸ ವಿಷಯಗಳನ್ನೂ ಸೇರಿಸಿ ಈ ಪುಸ್ತಕವನ್ನು ತಯಾರಿಸಲಾಗಿದೆ. ಕನ್ನಡ ನುಡಿ ಮತ್ತು ಮೂಲದ್ರಾವಿಡ ಕುರಿತಾಗಿ ಇತ್ತೀಚಿನವರೆಗೂ ನಡೆದಿರುವ ಸಂಶೋಧನೆಗಳನ್ನು ಈ ಪುಸ್ತಕವು ಒಳಗೊಂಡಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675191043,"sku":"HB00001129","price":190.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3832.jpg?v=1636357630"},{"product_id":"kannada-padagala-olarachane","title":"ಕನ್ನಡ ಪದಗಳ ಒಳರಚನೆ","description":"\u003cp\u003eಸಂಸ್ಕೃತ ಪದಗಳ ಒಳರಚನೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಾಗುತ್ತವೆಯೋ ಅವನ್ನೇ ಬಳಸಿ ಕನ್ನಡ ಪದಗಳ ಒಳರಚನೆಯನ್ನೂ ವರ್ಣಿಸುವುದು ರೂಢಿ. ಆದರೆ, ಕನ್ನಡ ಸಂಸ್ಕೃತಕ್ಕಿಂತ ತೀರ ಭಿನ್ನವಾದ ಭಾಷೆಯಾದ ಕಾರಣ, ಈ ವಿಧಾನದ ಮೂಲಕ ನಮಗೆ ಕನ್ನಡ ಪದಗಳ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಬರುವುದಿಲ್ಲ. \u003cbr\u003eಇದಕ್ಕೆ ಬದಲಾಗಿ, ಕನ್ನಡ ಪದಗಳನ್ನು ನೇರವಾಗಿ ಪರಿಶೀಲಿಸಿ, ಅವುಗಳ ತಯಾರಿಕೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಲ್ಲಿವೆ, ಹೇಗೆ ಕನ್ನಡದಲ್ಲಿ ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡಲಾಗುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ. \u003cbr\u003eಇದರಿಂದಾಗಿ, ಕನ್ನಡ ಪದಗಳ ಒಳರಚನೆ ಈ ಪುಸ್ತಕದಲ್ಲಿ ಹೆಚ್ಚು ಸ್ಪಷ್ಟವಾಗಿ ಮೂಡಿಬಂದಿದೆ. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಆದ ಒಳರಚನೆಯಿದೆ. ಹಾಗಾಗಿ ಅವನ್ನು ವರ್ಣಿಸುವಾಗಲೂ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಬಳಸಿಕೊಳ್ಳುವುದು ಸರಿಯಲ್ಲ. ಇದು ಯಾಕೆ ಎಂಬುದನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675322115,"sku":"HB00001128","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3836.jpg?v=1636357633"},{"product_id":"kannada-barahavannu-saripadisona","title":"ಕನ್ನಡ ಬರಹವನ್ನು ಸರಿಪಡಿಸೋಣ","description":"\u003cp\u003eಇವತ್ತಿನ ಸಮಾಜದಲ್ಲಿ ಬರಹವನ್ನು ತಿಳಿಯದವರು ಯಾರೂ ನೆಮ್ಮದಿಯಿಂದ ಬದುಕಲಾರರು. ಅಂತಹ ಮಹತ್ವ ಬರಹಕ್ಕೆ ಬಂದಿದೆ. ಇದಲ್ಲದೆ, ಇವತ್ತು ಒಂದು ಸಮಾಜ ಮುಂದೆ ಬರಬೇಕಿದ್ದಲ್ಲಿ ಅದರಲ್ಲಿರುವ ಎಲ್ಲಾ ವರ‍್ಗದ ಜನರೂ ಸಮಾನವಾಗಿ ಬರಹವನ್ನು ತಿಳಿದಿರಬೇಕಾಗುತ್ತದೆ. ನಮ್ಮ ನಾಡಿನಲ್ಲಿ ಇದು ನಡೆಯದಿರುವುದಕ್ಕೆ ಹಲವು ಕಾರಣಗಳಿವೆ.\u003c\/p\u003e\n\u003cp\u003e \u003c\/p\u003e\n\u003cp\u003eಕನ್ನಡ ಬರಹಗಳಲ್ಲಿ ಅತಿಯಾಗಿ ಸಂಸ್ಕ್ರುತ ಪದಗಳನ್ನು ಬಳಸುತ್ತಿರುವುದು ಇವುಗಳಲ್ಲಿ ಒಂದು ಕಾರಣ; ಈ ಪದಗಳ ಉಚ್ಚಾರಣೆ ಹೇಗೆಯೇ ಇರಲಿ, ಅವನ್ನು ಬರೆಯುವಾಗ ಮಾತ್ರ ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯಬೇಕೆಂಬ ಕಟ್ಟಳೆಯನ್ನು ಮಾಡಿರುವುದು ಮತ್ತು ಅದಕ್ಕಾಗಿ ಹಲವು ಹೆಚ್ಚಿನ ಅಕ್ಶರಗಳನ್ನು ಕನ್ನಡ ಲಿಪಿಯಲ್ಲಿ ಉಳಿಸಿಕೊಂಡಿರುವುದು ಇನ್ನೊಂದು ಕಾರಣ. ಬೇರೆ ಕಾರಣಗಳೇನೇ ಇರಲಿ, ಮೇಲಿನ ಎರಡು ಕಾರಣಗಳನ್ನು ಮಾತ್ರ ಕನ್ನಡದ ಬರಹಗಾರರು ವಯ್ಯಕ್ತಿಕವಾಗಿ ತೊಡೆದುಹಾಕಬಲ್ಲರು. ಇದಕ್ಕಾಗಿ ಅವರು ತಮ್ಮ ಬರಹಗಳಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಆದಶ್ಟು ಕಡಿಮ ಬಳಸಬೇಕು ಮತ್ತು ಬಳಸುವುದಿದ್ದರೂ ಅವನ್ನು ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯಬೇಕು. ಈ ಎರಡು ಕೆಲಸಗಳನ್ನು ಅವರು ಯಾಕೆ ಮಾಡಬೇಕಾಗಿದೆ ಮತ್ತು ಅವನ್ನು ಮಾಡುವ ಬಗೆ ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e\n\u003cp\u003e \u003c\/p\u003e\n\u003cp\u003eಈ ಪುಸ್ತಕವನ್ನು ಬರೆದ ಶಂಕರಬಟ್ಟರು ಕನ್ನಡ ವ್ಯಾಕರಣದಲ್ಲಿ ಕನ್ನಡತನವನ್ನು ಕಾಣಿಸುವ ಬಗೆ ಹೇಗೆ ಎಂಬುದನ್ನು ತಿಳಿಸಲು ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕವನ್ನು ಬರೆದಿದ್ದರು. ಈಗ ಈ ಇನ್ನೊಂದು ಪುಸ್ತಕವನ್ನು ಬರೆಯುವುದರ ಮೂಲಕ ಕನ್ನಡ ಬರಹದಲ್ಲಿ ಮತ್ತು ಅದರಲ್ಲಿ ಬಳಕೆಯಾಗುವ ಪದಗಳಲ್ಲಿ ಕನ್ನಡತನವನ್ನು ಉಳಿಸುವ ಬಗೆ ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675551491,"sku":"HB00001127","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_458945ac-0b87-4b8f-85f7-ff1f548d0fb7.jpg?v=1691242658"},{"product_id":"matu-mattu-barahada-naduvina-gondala","title":"ಮಾತು ಮತ್ತು ಬರಹದ ನಡುವಿನ ಗೊಂದಲ","description":"\u003cp\u003eಮಾತು ಮತ್ತು ಬರಹಗಳ ನಡುವಿನ ಸಂಬಂಧವೆಂತಹುದು, ಮತ್ತು ಅವಕ್ಕೂ ನುಡಿ ಇಲ್ಲವೇ ಭಾಷೆಗೂ ನಡುವಿರುವ ಸಂಬಂಧವೆಂತಹುದು ಎಂಬುದರ ಕುರಿತಾಗಿ ಜನರಲ್ಲಿ ಗೊಂದಲವಿದೆ; ಈ ಗೊಂದಲದಿಂದಾಗಿ, ಅವರಲ್ಲಿ ನುಡಿಯ ಕುರಿತಾಗಿ ಹಲವು ತಪ್ಪು ಅನಿಸಿಕೆಗಳು ಮೂಡಿಬಂದಿವೆ. ಇವನ್ನು ಹೋಗಲಾಡಿಸುವುದಕ್ಕಾಗಿ, ಈ ಎರಡು ಬಗೆಯ ಸಂಬಂಧಗಳು ಎಂತಹವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. \u003cbr\u003eನುಡಿ ಎಂಬುದು ಮಾತಲ್ಲದೆ ಬರಹವಲ್ಲ; ನುಡಿಯ ಇಲ್ಲವೇ ಮಾತಿನ ಒಂದು ಕೃತಕ ರೂಪವೇ ಬರಹ. ಮಾತು ಮಕ್ಕಳ ಬೆಳವಣಿಗೆಯ ಅಂಗವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಹೋಗುತ್ತದೆ; ಹಾಗಾಗಿ, ಅದು ಯಾವಾಗಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675584259,"sku":"HB00001126","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4015.jpg?v=1636357636"},{"product_id":"english-padagalige-kannadadde-padagalu","title":"ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು","description":"\u003cp\u003eಇದೊಂದು ಹೊಸ ಬಗೆಯ ಪದಕೋಶ. ಇಂಗ್ಲಿಶ್ ನುಡಿಯನ್ನು ಸಾಕಷ್ಟು ತಿಳಿದಿದ್ದು, ಅದರಲ್ಲಿ ಬರುವ ಪದಗಳಿಗೆ ಸಮನಾದ ಕನ್ನಡದ್ದೇ ಆದ ಪದಗಳು ಯಾವುವಿವೆ ಎಂಬುದನ್ನು ತಿಳಿಯಬಯಸುವವರಿಗೆ ಇದನ್ನು ರಚಿಸಲಾಗಿದೆ. \u003cbr\u003eಸಾಮಾನ್ಯವಾಗಿ ಇಂಗ್ಲಿಶ್-ಕನ್ನಡ ಪದಕೋಶಗಳಲ್ಲಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳಿಗಿಂತಲೂ ಸಂಸ್ಕೃತದಿಂದ ಎರವಲಾಗಿ ಪಡೆದ ತತ್ಸಮ ಪದಗಳನ್ನು ಕೊಡುವುದೇ ಜಾಸ್ತಿ. ಹಾಗಾಗಿ ಕನ್ನಡವೇ ಆದ ಪದಗಳಿದ್ದರೂ ಅವು ಅಂತಹ ಪದಕೋಶಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. \u003cbr\u003eಇದರಿಂದಾಗಿ ತಮ್ಮ ಬರಹಗಳಲ್ಲಿ ಕನ್ನಡದವೇ ಆದ ಪದಗಳನ್ನು ಬಳಸಬೇಕೆಂದಿರುವವರಿಗೆ ಅವು ಒತ್ತಾಸೆಯಾಗುವುದಿಲ್ಲ. ಆದರೆ ಈ ಪದಕೋಶದಲ್ಲಿ ಇಂಗ್ಲಿಶ್ ಪದಗಳಿಗೆ ಸಮಾನವಾಗಿರುವಂತಹ ಕನ್ನಡದವೇ ಆದ ಪದಗಳನ್ನು ಕೊಡಲಾಗಿದೆ ಮತ್ತು ಹೊಸಗನ್ನಡ ಪದಗಳನ್ನಲ್ಲದೆ ಹಳೆಗನ್ನಡ ಪದಗಳನ್ನೂ ಕೊಟ್ಟಿದ್ದು ಅವನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ಪದಕಂತೆಗಳ ಮೂಲಕ ಮತ್ತು ಹೊಸಗನ್ನಡ ವಾಕ್ಯಗಳ ಮೂಲಕ ಸೂಚಿಸಲಾಗಿದೆ. \u003cbr\u003eಕನ್ನಡದವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಹೊಸದಾಗಿ ಪದಗಳನ್ನು ಉಂಟುಮಾಡಬೇಕೆಂದಿರುವವರಿಗೂ ಈ ಪದಕೋಶ ಒತ್ತಾಸೆಯಾಗಬಲ್ಲುದು. ಅಂತಹ ಹಲವು ಪದಗಳನ್ನು ಈ ಪದಕೋಶದಲ್ಲಿ ತಯಾರಿಸಿ ಕೊಡಲಾಗಿದೆ. ಅವನ್ನು ತಯಾರಿಸಿಕೊಳ್ಳುವಲ್ಲಿ ಕನ್ನಡದ ಒಲವೇನು ಎಂಬುದನ್ನು ವಿವರಿಸಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675649795,"sku":"HB00001125","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/3c34bc77-4e86-4c7b-9cab-042b33f39ba6.jpg?v=1700808991"},{"product_id":"kannada-barahada-sollarime-5","title":"ಕನ್ನಡ ಬರಹದ ಸೊಲ್ಲರಿಮೆ–೫","description":"\u003cp\u003eಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ಐದನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಪರಿಚೆಪದಗಳು’ ಮತ್ತು ‘ಎಣಿಕೆಪದಗಳು’ ಎಂಬ ಎರಡು ವಿಭಾಗಗಳಿವೆ. \u003cbr\u003eಈ ತುಂಡಿನ ಮೊದಲನೇ ಪಸುಗೆಯಲ್ಲಿ ಅಗಲ, ಉದ್ದ, ಕೆಂಪು, ಉರುಟು, ಮೊದಲಾದ ಹೆಸರುಪರಿಚೆಗಳನ್ನು ಮತ್ತು ಮೆಲ್ಲಗೆ, ಹಿಂದೆ, ಬಳಿಕ, ತುಸು, ಮೊದಲಾದ ಎಸಕಪರಿಚೆಗಳನ್ನು ಗುಂಪಿಸುವುದು ಹೇಗೆ, ಅವನ್ನು ಬೇರೆ ಬಗೆಯ ಪದಗುಂಪುಗಳಿಂದ ಬೇರ್ಪಡಿಸುವುದು ಹೇಗೆ, ಸೊಲ್ಲುಗಳಲ್ಲಿ ಅವನ್ನು ಹಂತಪದಗಳೊಂದಿಗೆ ಮತ್ತು ಹೋಲಿಕೆಯ ನುಡಿತಗಳೊಂದಿಗೆ ಬಳಸುವುದು ಹೇಗೆ ಎಂಬುದನ್ನೂ ಈ ಪಸುಗೆಯಲ್ಲಿ ತಿಳಿಸಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675715331,"sku":"HB00001124","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Kannada-barahada-sollarime-aidu.png?v=1636357640"},{"product_id":"kannada-barahada-sollarime-4","title":"ಕನ್ನಡ ಬರಹದ ಸೊಲ್ಲರಿಮೆ–೪","description":"\u003cp\u003eಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ನಾಲ್ಕನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಆಡುಪದಗಳು’ ಮತ್ತು ‘ತೋರುಪದಗಳು’ ಎಂಬ ಎರಡು ಪಸುಗೆಗಳಿವೆ. \u003cbr\u003eಈ ಹೊತ್ತಗೆಯ ಮೊದಲನೇ ಪಸುಗೆಯಲ್ಲಿ ನಾನು, ನೀನು ಮತ್ತು ತಾನು ಎಂಬ ಮೂರು ಆಡುಪದಗಳು ಎಂತಹವು, ಹೆಸರುಪದಗಳಿಂದ ಮತ್ತು ತೋರುಪದಗಳಿಂದ ಅವು ಹೇಗೆ ಬೇರಾಗಿವೆ, ಮತ್ತು ಸೊಲ್ಲುಗಳಲ್ಲಿ ಅವುಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸುತ್ತದೆ. \u003cbr\u003eಎರಡನೆಯ ಪಸುಗೆಯಲ್ಲಿ ಅವನು-ಇವನು-ಯಾವನು, ಯಾರು, ಅಲ್ಲಿ-ಇಲ್ಲಿ-ಎಲ್ಲಿ ಮೊದಲಾದ ತೋರುಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ವಿವರಿಸುತ್ತದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675813635,"sku":"HB00001123","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Sollarime-4.png?v=1636357642"},{"product_id":"kannada-barahada-sollarime-3","title":"ಕನ್ನಡ ಬರಹದ ಸೊಲ್ಲರಿಮೆ-೩","description":"\u003cp\u003eಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣ ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ಮೂರನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಎಸಕಪದಗಳ ಪಾಂಗುಗಳು’ ಮತ್ತು ‘ಪಾಂಗಿಟ್ಟಳದಲ್ಲಿ ಮಾರ್ಪಾಡುಗಳು’ ಎಂಬ ಎರಡು ವಿಭಾಗಗಳಿವೆ. \u003cbr\u003eಇವುಗಳಲ್ಲಿ ಮೊದಲನೆಯ ಪಸುಗೆ ಎಸಕಪದಗಳೊಂದಿಗೆ ಎಂತಹ ಪಾಂಗುಗಳು ಮತ್ತು ಎಷ್ಟು ಪಾಂಗುಗಳು ಬರಬಲ್ಲವು ಎಂಬುದನ್ನು ತಿಳಿಸುತ್ತದೆ, ಮತ್ತು ಈ ವಿಷಯವನ್ನವಲಂಬಿಸಿ ಎಸಕಪದಗಳನ್ನು ಒಟ್ಟು ಹದಿಮೂರು ಪಾಂಗಿಟ್ಟಳಗಳಲ್ಲಿ ಗುಂಪಿಸುತ್ತದೆ. ಪಾಂಗುಗಳಲ್ಲಿಯೂ ಇಟ್ಟಳದ ಪಾಂಗುಗಳು ಮತ್ತು ನೆರವು ಪಾಂಗುಗಳು ಎಂಬ ಎರಡು ಬಗೆಗಳನ್ನು ಗುರುತಿಸಲಾಗಿದ್ದು, ಅವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಇದೇ ಪಸುಗೆ ಕೊಡುತ್ತದೆ. \u003cbr\u003eಕೆಲವು ಎಸಕಪದಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಅವುಗಳ ಪಾಂಗಿಟ್ಟಳದಲ್ಲಿ ಮಾರ್ಪಾಡನ್ನು ಮಾಡಲು ಬರುತ್ತದೆ, ಮತ್ತು ಹೆಚ್ಚಿನ ಎಸಕಪದಗಳಿಗೂ ಕೆಲವು ಒಟ್ಟುಗಳನ್ನು ಇಲ್ಲವೇ ಪದಗಳನ್ನು ಸೇರಿಸಿ ಅವುಗಳ ಪಾಂಗಿಟ್ಟಳವನ್ನು ಮಾರ್ಪಡಿಸಲು ಬರುತ್ತದೆ. ಈ ಎರಡು ಬಗೆಯ ಮಾರ್ಪಾಡುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಈ ತುಂಡಿನ ಎರಡನೆಯ ಪಸುಗೆ ಕೊಡುತ್ತದೆ. \u003cbr\u003eಕನ್ನಡದಲ್ಲಿ ಅದರದೇ ಆದ ಸೊಲ್ಲರಿಮೆಯ ನಡವಳಿಯೊಂದನ್ನು ಬೆಳೆಸಬೇಕಿದ್ದಲ್ಲಿ, ಅದರಲ್ಲೇನೆ ಹಲವು ಅರಿಮೆಯ ಪದಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳಬೇಕಾಗುತ್ತದೆ; ಇಂತಹ ಹಲವನ್ನು ಇಲ್ಲಿ ಉಂಟುಮಾಡಲಾಗಿದ್ದು, ಅವುಗಳ ಒಂದು ಪಟ್ಟಿಯನ್ನು ಪುಸ್ತಕದ ಮೊದಲಿಗೇನೆ ಕೊಡಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675879171,"sku":"HB00001122","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Sollarime-3.png?v=1636357644"},{"product_id":"kannada-barahada-sollarime-2","title":"ಕನ್ನಡ ಬರಹದ ಸೊಲ್ಲರಿಮೆ-೨","description":"\u003cp\u003eಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಭಟ್ ಅವರ ಪ್ರಯತ್ನದಲ್ಲಿ ಇದು ಎರಡನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಎಸಕಪದಗಳ ಬಳಕೆ’ ಮತ್ತು ‘ಹೆಸರುಕಂತೆಗಳ ಇಟ್ಟಳ’ ಎಂಬ ಎರಡು ವಿಭಾಗಗಳಿವೆ. \u003cbr\u003eಕನ್ನಡದ ಸೊಲ್ಲುಗಳ ಕೊನೆಯಲ್ಲಿ ಬರುವ ಎಸಕಪದಗಳು ಒಂದು ಎಸಕವನ್ನು ತುಂಬಾ ಅಡಕವಾಗಿ ತಿಳಿಸುತ್ತವೆ; ಅದರ ಕುರಿತಾಗಿ ಕೆಲವು ಹೆಚ್ಚಿನ ವಿವರಗಳನ್ನು ಅವುಗಳೊಂದಿಗೆ ಬರುವ ಒಟ್ಟುಗಳು ಮತ್ತು ನೆರವೆಸಕಪದಗಳು ತಿಳಿಸುತ್ತವೆ; ಈ ಕೆಲಸ ಹೇಗೆ ನಡೆಯುತ್ತದೆ ಎಂಬುದನ್ನು ಈ ಎರಡನೇ ತುಂಡಿನ ಮೊದಲನೆಯ ಪಸುಗೆ ವಿವರಿಸುತ್ತದೆ. \u003cbr\u003eಸೊಲ್ಲುಗಳು ತಿಳಿಸುವ ಎಸಕಗಳಲ್ಲಿ ಹಲವು ಬಗೆಯ ಪಾಂಗುಗಳು ತೊಡಗಿಕೊಂಡಿದ್ದು, ಅವನ್ನು ಗುರುತಿಸುವುದಕ್ಕಾಗಿ ಹೆಸರುಕಂತೆಗಳು ಬಳಕೆಯಾಗುತ್ತವೆ. ಈ ಕೆಲಸವನ್ನು ನಡೆಸುವುದಕ್ಕಾಗಿ ಅವು ಪಾಂಗುಗಳ ಪರಿಚೆ, ಅಳವಿ ಮತ್ತು ನೆಲೆಗಳನ್ನು ತಿಳಿಸಬೇಕಾಗುತ್ತದೆ. ಹೆಸರುಕಂತೆಗಳಲ್ಲಿ ಬರುವ ನೆರವುಪದಗಳು ಮತ್ತು ನುಡಿತಗಳು ಇದನ್ನು ಹೇಗೆ ನಡೆಸುತ್ತವೆ ಎಂಬುದನ್ನು ಈ ತುಂಡಿನ ಎರಡನೆಯ ಪಸುಗೆ ವಿವರಿಸುತ್ತದೆ. \u003cbr\u003eಕನ್ನಡದಲ್ಲಿ ಅದರದೇ ಆದ ಸೊಲ್ಲರಿಮೆಯ ನಡವಳಿಯೊಂದನ್ನು ಬೆಳೆಸಬೇಕಿದ್ದಲ್ಲಿ, ಅದರಲ್ಲೇನೇ ಹಲವು ಅರಿಮೆಯ ಪದಗಳನ್ನು ಹೊಸದಾಗಿ ಉಂಟು ಮಾಡಿಕೊಳ್ಳಬೇಕಾಗುತ್ತದೆ; ಇಂತಹ ಹಲವನ್ನು ಇಲ್ಲಿ ಉಂಟುಮಾಡಲಾಗಿದ್ದು, ಅವುಗಳ ಒಂದು ಪಟ್ಟಿಯನ್ನೂ ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675944707,"sku":"HB00001121","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sollarime-2.png?v=1636357646"},{"product_id":"kannada-barahada-sollarime-1","title":"ಕನ್ನಡ ಬರಹದ ಸೊಲ್ಲರಿಮೆ-೧","description":"\u003cp\u003eಇವತ್ತು ನಮ್ಮಲ್ಲಿ ಬಳಕೆಯಲ್ಲಿರುವ ‘ಕನ್ನಡ ವ್ಯಾಕರಣ’ಗಳು ನಿಜಕ್ಕೂ ಕನ್ನಡದ ವ್ಯಾಕರಣಗಳೇ ಅಲ್ಲ; ಯಾಕೆಂದರೆ, ಅವು ಕನ್ನಡದ ಪದ, ಪದಕಂತೆ, ಮತ್ತು ಸೊಲ್ಲುಗಳನ್ನು ಉಂಟುಮಾಡುವಲ್ಲಿ ಎಂತಹ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನು ತಿಳಿಸುವ ಬದಲು, ಸಂಸ್ಕೃತ ವ್ಯಾಕರಣದ ಕಟ್ಟಲೆಗಳನ್ನು ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ ಎಂಬುದಾಗಿ ಹತ್ತು ವರುಶಗಳ ಹಿಂದೆಯೇ ಶಂಕರ ಭಟ್ಟರು ತಮ್ಮ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಹೊತ್ತಗೆಯಲ್ಲಿ ತೋರಿಸಿ ಕೊಟ್ಟಿದ್ದರು. ಆದರೆ, ಈ ಹೊತ್ತಗೆಯ ಮೂಲಕ ಕನ್ನಡಕ್ಕೆ ಕನ್ನಡದ್ದೇ ಸೊಲ್ಲರಿಮೆ(ವ್ಯಾಕರಣ)ಯನ್ನು ಬರೆಯುವ ಮೊದಲನೇ ಹೆಜ್ಜೆಯನ್ನಿಟ್ಟಿದ್ದಾರೆ. \u003cbr\u003eನುಡಿಯ ಸೊಲ್ಲರಿಮೆಗಿಂತ ಬರಹದ ಸೊಲ್ಲರಿಮೆಯು ಹಲವು ವಿಷಯಗಳಲ್ಲಿ ಬೇರಾಗಿರುತ್ತದೆ, ಮತ್ತು ಇವತ್ತು ಕನ್ನಡ ಬರಹದಲ್ಲಿ ಎಂತಹ ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ, ಎಂತಹವು ಬಳಕೆಯಾದರೆ ಒಳ್ಳೆಯದು ಎಂಬುದನ್ನು ಈ ಹೊತ್ತಗೆಯಲ್ಲಿ ಶಂಕರ ಭಟ್ಟರು ವಿವರಿಸಿದ್ದಾರೆ. ಇದಲ್ಲದೆ, ಕನ್ನಡದ್ದೇ ಆದ ಪದ ಮತ್ತು ಒಟ್ಟುಗಳನ್ನೂ ಬಳಸಿ ಹೊಸ ಪದಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. \u003cbr\u003eಶಂಕರ ಭಟ್ಟರು ತಮ್ಮ ಕನ್ನಡ ವ್ಯಾಕರಣ ಯಾಕೆ ಬೇಕು ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲುದು ಎಂಬುದನ್ನು ವಿವರಿಸಿದ್ದರು. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸಬಲ್ಲುದು.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020676010243,"sku":"HB00001120","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sollarime-1.png?v=1636357648"},{"product_id":"kannadadalle-padagalannu-kattuva-bagge","title":"ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ","description":"\u003cp\u003eಇವತ್ತು ಕನ್ನಡ ಬರಹಗಾರರು ಹೊಸಪದಗಳು ಬೇಕಾದಾಗಲೆಲ್ಲ ಸಂಸ್ಕೃತದ ಪದ ಮತ್ತು ಒಟ್ಟುಗಳನ್ನು ಬಳಸಿ ಅವುಗಳನ್ನು ಕಟ್ಟಿಕೊಳ್ಳುವ ವಾಡಿಕೆಗೆ ಬಿದ್ದಿದ್ದಾರೆ. ಇದರಿಂದಾಗಿ ಕನ್ನಡ ಬರಹದಲ್ಲಿ ಸಂಸ್ಕೃತ ಎರವಲುಗಳ ಎಣಿಕೆ ಹೆಚ್ಚಾಗುತ್ತಿದ್ದು, ಕನ್ನಡ ಬರಹ ಹೆಚ್ಚಿನ ಕನ್ನಡಿಗರಿಂದಲೂ ದೂರ ಉಳಿಯುವಂತಾಗಿದೆ. \u003cbr\u003eಬೆಳವಣಿಗೆಯನ್ನು ಪಡೆದಿರುವ ಇಂಗ್ಲಿಶ್ನಂತಹ ಬರಹಗಳಲ್ಲಿ ಹಲವಾರು ಪದಗಳಿಗೆ ಏಳೆಂಟು ಹುರುಳುಗಳಿರುತ್ತವೆ; ಆದರೆ, ಕನ್ನಡದಲ್ಲಿ ಅಂತಹವೇ ಪದಗಳಿಗೆ ಒಂದೆರಡು ಹುರುಳುಗಳಷ್ಟೇ ಇರುತ್ತವೆ; ಹೆಚ್ಚಿನ ಹುರುಳುಗಳು ಬೇಕಾಗುವಲ್ಲೆಲ್ಲ ಕನ್ನಡ ಪದಗಳನ್ನು ಬಳಸುವ ಬದಲು ಸಂಸ್ಕೃತ ಎರವಲುಗಳನ್ನು ಬಳಸುತ್ತಿರುವುದರಿಂದಾಗಿಯೇ ಈ ರೀತಿ ಕನ್ನಡ ಪದಗಳು ಬೆಳವಣಿಗೆಯಲ್ಲಿ ಹಿಂದೆ ಬಿದ್ದಿವೆ. \u003cbr\u003eಕನ್ನಡ ಬರಹಗಾರರಿಗೆ ಸಂಸ್ಕೃತ ಎರವಲುಗಳ ಮೇಲಿರುವ ಈ ಒಲವಿನಿಂದಾಗಿ ಓದುಗರಲ್ಲಿಯೂ ಕನ್ನಡ ಪದಗಳ ಕುರಿತಾಗಿ ಕೀಳರಿಮೆ ಬೆಳೆದುಬಂದಿದೆ. ಇದನ್ನು ಹೋಗಲಾಡಿಸಲು, ಮತ್ತು ಕನ್ನಡ ಬರಹ ಎಲ್ಲಾ ಕನ್ನಡಿಗರನ್ನೂ ತಲಪುವಂತಾಗಲು ಇವತ್ತು ಅವುಗಳಲ್ಲಿ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಲು ತೊಡಗಬೇಕಾಗಿದೆ. \u003cbr\u003eಇದಲ್ಲದೆ, ಎಲ್ಲಾ ಬಗೆಯ ಅರಿವುಗಳನ್ನೂ ಕನ್ನಡದವೇ ಆದ ಪದಗಳನ್ನು ಬಳಸಿ ತಿಳಿಸಲು ಬರುತ್ತದೆ ಎಂಬುದನ್ನು ಕನ್ನಡ ಬರಹಗಾರರು ಮನಗಾಣುವಂತೆ ಮಾಡಬೇಕಾಗಿದೆ. ಹೀಗೆ ಮಾಡುವಲ್ಲಿ ನೆರವಾಗುವುದೇ ಈ ಕಡತದ ಗುರಿಯಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020676075779,"sku":"HB00001119","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3819.jpg?v=1636357650"},{"product_id":"english-kannada-padanerake","title":"ಇಂಗ್ಲಿಶ್ - ಕನ್ನಡ ಪದನೆರಕೆ","description":"\u003cp\u003eಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದ್ದೇ ಆದ ಪದಗಳನ್ನು ಕೊಡುವ ಒಂದು ಪ್ರಯತ್ನವನ್ನು ಈ ಪದನೆರಕೆಯಲ್ಲಿ ಮಾಡಲಾಗಿದೆ. \u003cbr\u003eಅಂತಹ ಪದಗಳು ಕನ್ನಡದಲ್ಲಿ ಇಲ್ಲದಿರುವಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ, ಇಲ್ಲವೇ ಪದಗಳನ್ನು ಜೋಡಿಸಿ, ಹೊಸದಾಗಿ ಪದಗಳನ್ನು ಉಂಟು ಮಾಡುವ ಕೆಲಸವನ್ನೂ ಇಲ್ಲಿ ನಡೆಸಲಾಗಿದೆ. \u003cbr\u003eಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡುವವರು ಹೆಚ್ಚಾಗಿ ಸಂಸ್ಕೃತದ ಪದ ಮತ್ತು ಒಟ್ಟುಗಳನ್ನು ಬಳಸುತ್ತಾರೆ. ಆದರೆ ಈ ರೀತಿ ಉಂಟು ಮಾಡಿದ ಪದಗಳು ಕನ್ನಡದ ಮಟ್ಟಿಗೆ ತೊಡಕು ತೊಡಕಾಗಿರುತ್ತವೆ, ಮತ್ತು ಕನ್ನಡದ ಸೊಬಗನ್ನು ಕೆಡಿಸುತ್ತವೆ. ಹಾಗಾಗಿ, ಅಂತಹ ಪದಗಳನ್ನು ಬಳಸಿರುವ ಬರಹಗಳು ಹೆಚ್ಚಿನ ಕನ್ನಡಿಗರಿಂದಲೂ ದೂರವೇ ಉಳಿಯುತ್ತವೆ. \u003cbr\u003eಇದಲ್ಲದೆ, ಇಂತಹ ಪದಗಳನ್ನು ಬಳಸಿ ಕನ್ನಡಕ್ಕೆ ಬೇಕಾಗಿರುವ ಹಲವು ಬಗೆಯ ಬೇರ್ಮೆಗಳನ್ನು ಖಚಿತವಾಗಿ ತಿಳಿಸಲು ಬರುವುದಿಲ್ಲ ಮತ್ತು ಇದರಿಂದಾಗಿ, ಅವನ್ನು ಬಳಸಿರುವ ಅರಿಮೆಯ ಬರಹಗಳಲ್ಲಿ ಕೆಲವು ಬಗೆಯ ಗೊಂದಲಗಳು ಸೇರಿಕೊಳ್ಳುತ್ತವೆ. \u003cbr\u003eಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ನಮಗೆ ಬೇಕಾಗುವ ಪದಗಳನ್ನು ಉಂಟುಮಾಡಿದಲ್ಲಿ ಅವು ಕನ್ನಡದ ಸೊಲ್ಲುಗಳಲ್ಲಿ ಹೆಚ್ಚು ಚೆನ್ನಾಗಿ ಹೊಂದಿಕೊಳ್ಳಬಲ್ಲುವು ಮತ್ತು ಕನ್ನಡದ ಸೊಗಡನ್ನೂ ಕೆಡಿಸದೆ ಉಳಿಸಿಕೊಳ್ಳಬಲ್ಲುವು. ಅವನ್ನು ಬಳಸಿ ಬರೆದ ಅರಿಮೆಯ ಬರಹಗಳು ವಿಶಯಗಳನ್ನು ಹೆಚ್ಚು ಮನದಟ್ಟಾಗುವಂತೆ ಓದುಗರಿಗೆ ತಿಳಿಸಬಲ್ಲುವು. ಅಂತಹ ಹಲವಾರು ಪದಗಳನ್ನು ಇಲ್ಲಿ ಉಂಟುಮಾಡಲಾಗಿದೆಯಲ್ಲದೆ ಹೊಸದಾಗಿ ಅಂತಹ ಪದಗಳನ್ನು ಉಂಟುಮಾಡಲು ಹೊರಡುವವರಿಗೂ ಈ ಪದನೆರಕೆ ಒತ್ತಾಸೆಯಾಗಬಲ್ಲುದು.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020676141315,"sku":"HB00001118","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3747.jpg?v=1636357651"},{"product_id":"hindi-herike-mooru-mantra-nooru-tantra","title":"ಹಿಂದೀ ಹೇರಿಕೆ ಮೂರು ಮಂತ್ರ : ನೂರು ತಂತ್ರ","description":"\u003cp\u003eಭಾರತ ಒಂದು ಬಹು ಭಾಷಿಕ ಪ್ರಾಂತ್ಯಗಳ ಒಕ್ಕೂಟ. ಇಲ್ಲಿ ರಾಷ್ಟ್ರಭಾಷೆ ಅನ್ನುವ ಹೆಸರಿನಲ್ಲಿ ಹಿಂದಿಯನ್ನು ಎಲ್ಲ ಹಿಂದಿಯೇತರರ ಮೇಲೆ ಹೇರುವ ಕ್ರಮದಿಂದ ಆಗುತ್ತಿರುವ ತೊಂದರೆಗಳೇನು? ಅಸಲಿಗೆ ಭಾರತಕ್ಕೊಂದು ರಾಷ್ಟ್ರಭಾಷೆ ಇದೆಯೇ?ರಾಷ್ಟ್ರಭಾಷೆಯೇ ಇರದ ಭಾರತದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳಲು ಕಾರಣವೇನು? ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಭಾರತಕ್ಕೆ ಬೇಕಾದ ಭಾಷಾ ನೀತಿಯ ಕುರಿತು ಆದ ಚರ್ಚೆಗಳೇನು? ಈಗ ಹಿಂದಿ ಹೇರಿಕೆಯ ಸ್ವರೂಪ ಹೇಗಿದೆ? ಅದು ಹಿಂದಿಯೇತರ ಭಾಷೆಗಳ ಪಾಲಿಗೆ ಯಾವ ರೀತಿಯಲ್ಲಿ ನಿಧಾನ ವಿಷವಾಗುತ್ತಿದೆ? ಇದಕ್ಕೆ ಪರಿಹಾರವೇನು? ಬಹಳ ಅಧ್ಯಯನ ಮತ್ತು ಸಂಶೋಧನಾ ಮಾಹಿತಿಯಿಟ್ಟುಕೊಂಡು ಭಾರತದ ಭಾಷಾ ವೈವಿಧ್ಯತೆಯ ಪರ ವಾದಿಸುವ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗ ಓದಬೇಕಾದದ್ದು.\u003c\/p\u003e","brand":"Anand G","offers":[{"title":"Default Title","offer_id":42020676403459,"sku":"HB00001115","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4149_bb8ad6b4-d851-4b41-b439-98302b4e2d3a.jpg?v=1664098844"},{"product_id":"baasikha-karnaataka-namma-kannada-bhaase-prasaranga","title":"ಬಾಶಿಕ ಕರ್ನಾಟಕ","description":"ಕನ್ನಡ ಭಾಷೆ ಶತ-ಶತಮಾನಗಳಿಂದ ಬಲಾಢ್ಯ, ಪ್ರಭಾವಿ ಭಾಷೆಗಳೊಂದಿಗೆ ಸೆಣಸಾಡುವುದರೊಂದಿಗೆ, ಸಣ್ಣ ಪುಟ್ಟ ಭಾಷೆಗಳೊಂದಿಗೂ ವ್ಯವಹರಿಸುವ ಮೂಲಕ ಆತಂಕವೂ ಎದುರಿಸಿದೆ. ಸಹಜವಾಗಿ ಜನರು ಬಳಸುವಂತೆ ಮಹಾಪ್ರಾಣಾಕ್ಷರಗಳನ್ನು ಬಳಸದೇ, ಹೊಸ ಭಾಷೆಯಲ್ಲಿ ಇರುವ ಈ ಪುಸ್ತಕ ಅನೇಕ ಕುತೂಹಲಗಳನ್ನು ಹುಟ್ಟಿಸುತ್ತದೆ.","brand":"Basavaraja Kodagunti","offers":[{"title":"Default Title","offer_id":42113461321987,"sku":"HB00000776","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.01.51PM.jpg?v=1638002154"},{"product_id":"padavinyasa-kannada-change-trend","title":"ಪದವಿನ್ಯಾಸ","description":"ಯಾವುದೇ ಭಾಷೆ ನಿಂತ ನೀರಲ್ಲ. ಅದು ಸದಾ ಬದಲಾವಣೆಗೆ ತೆರೆದುಕೊಂಡಿರುತ್ತದೆ. ಚಾರಿತ್ರಿಕವಾಗಿ, ಭೌಗೋಳಿಕವಾಗಿ ಮತ್ತು ಸಾಮಾಜಿಕವಾಗಿಯೂ, ಈ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಿದೆ. ಕನ್ನಡದ ಸಂದರ್ಭದಲ್ಲಿಯೂ ಕೂಡ, ಈ ಬೆಳವಣಿಯನ್ನು ಕಾಣಬಹುದು. ಉದಾಹರಣೆಗೆ, ಹಲ್ಮಿಡಿ ಶಾಸನದಿಂದ ಹಿಡಿದು ಇಲ್ಲಿಯವರೆಗು ಒಂದೇ ತೆರನಾದ ಕನ್ನಡ ಇಲ್ಲ. ಸಾಮಾಜಿಕವಾಗಿಯೂ ಬ್ರಾಹಣ, ಲಿಂಗಾಯತ, ಗೌಡ, ದಲಿತರ ಕನ್ನಡಗಳು ಬೇರೆ ಬೇರೆಯಾಗಿವೆ. ಹಾಗೆಯೇ ಇದೇ ರೀತಿಯ ಭಿನ್ನತೆ ಭೌಗೋಳಿಕವಾಗಿಯೂ ನೋಡಬಹುದು. ಹೀಗೆ ಭೌಗೋಳಿಕವಾಗಿ ಇರುವ ಕನ್ನಡದ ಬಗೆಗಳನ್ನು ಗುರುತಿಸುವುದು ಮತ್ತು ಅದನ್ನು ಕರ್ನಾಟಕದ ನಕ್ಷೆಯ ಮೂಲಕ ವಿವರಿಸುವುದು ಇನ್ನೂ ಕುತೂಹಲಕಾರಿ ಸಂಗತಿಯಾಗಿದೆ. ಇದನ್ನು ಪದವಿನ್ಯಾಸ ಪುಸ್ತಕದಲ್ಲಿ ಡಾ. ಅಶೋಕಕುಮಾರ ರಂಜೇರ ಅವರು ಮಾಡಿದ್ದಾರೆ.","brand":"Dr. Ashok Kumar Ranjere","offers":[{"title":"Default Title","offer_id":42113747910915,"sku":"HB00000754","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.23PM_2.jpg?v=1638010976"},{"product_id":"karnataka-manohara-grantha-maala","title":"ಕರ್ನಾಟಕ ಏಕೀಕರಣದ ನಾಲ್ವರು ಚಿಂತಕರು","description":"ಪ್ರೊ. ಕೆ. ರಾಘವೇಂದ್ರರಾಯರು, ಕೆನಡಾದ ಟೊರೆಂಟೋ ಯುನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಪಿಎಚ್.ಡಿ ಪಡೆದರು. ರಾಜ್ಯಶಾಸ್ತ್ರದಲ್ಲಿ ಭಾರತದಲ್ಲಿ ಗುವಾಹಾತಿ, ಕರ್ನಾಟಕ, ಮಂಗಳೂರು ಯುನಿವರ್ಸಿಟಿಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಅವರ ಇಂಗ್ಲಿಷ್ ಕೃತಿ \"Imagining Unimaginable Communities 20 ಮಹತ್ವದ ಪುಸ್ತಕ ಕನ್ನಡಲ್ಲಿ ಈ ಪುಸ್ತಕವನ್ನು 'ಕರ್ನಾಟಕ ಏಕೀಕರಣದ ನಾಲ್ವರು ಚಿಂತಕರು' ಎಂಬ ಹೆಸರಿನಲ್ಲಿ ಆರ್ಯರು ಅನುವಾದಿಸಿದ್ದಾರೆ. ಭಾರತೀಯ ಸ್ವಾತಂತ್ರಾಂದೋಲನದ ನಿಟ್ಟಿನಲ್ಲಿ ೧೯ನೆಯ ಶತಮಾನದಲ್ಲಿ ಕೊನೆಯಲ್ಲೇ 'ಕರ್ನಾಟಕ ಏಕೀಕರಣ' ಸಿದ್ಧಾಂತವನ್ನು ರೂಪಿಸಿ, ಅದಕ್ಕಾಗಿ ಹೋರಾಡಿದ ನಾಲ್ಕು ಪ್ರಮುಖ ಚಿಂತಕ, ಚಳುವಳಿಗಾರರು - ಆಲೂರ ವೆಂಕಟರಾಯರು, ಹರ್ಡೇಕರ ಮಂಜಪ್ಪ, ಪಂಡಿತ ತಾರಾನಾಥ ಹಾಗೂ ಡಿಡಿ ವಿ. ಗುಂಡಪ್ಪ ಮುಖ್ಯರಾದವರು. ಈ ಪ್ರಮುಖರ ಜೀವನ, ಕೃತಿಗಳನ್ನು ಆಳವಾಗಿ, ತುಲನಾತ್ಮಕವಾಗಿ ವಿಶ್ಲೇಷಿಸಿ, ದೀರ್ಘ ಚಳುವಳಿಯ ನಂತರ ೧೯೫೬ ರಲ್ಲಿ ಕರ್ನಾಟಕ ರಾಜ್ಯ ರೂಪಗೊಂಡುದರ ವೈಚಾರಿಕ ಹಿನ್ನೆಲೆಯನ್ನು ಈ ಕೃತಿಯಲ್ಲಿ ಕೂಲಂಕಷವಾಗಿ ಬಿಡಿಸಿ ತೋರಿಸಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಸುವರ್ಣ ಕರ್ನಾಟಕ ವರ್ಷದಲ್ಲಿ ಈ ಕೃತಿ ಪ್ರಕಟವಾಗುವದು ಅತ್ಯಂತ \u003cspan data-mce-fragment=\"1\"\u003eಮಹತ್ವದ\u003c\/span\u003e ಮೈಲುಗಲ್ಲಾಗುವುದರಲ್ಲಿ ಸಂಶಯವಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr\u003e","brand":"Dr. K. Raghavendra Rao","offers":[{"title":"Default Title","offer_id":42118734610691,"sku":"HB00000623","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at11.49.33AM.jpg?v=1638167116"},{"product_id":"hosagannada-sahitya-charitre-modern-kannada-ankita","title":"ಹೊಸಗನ್ನಡ ಸಾಹಿತ್ಯ ಚರಿತ್ರೆ","description":"ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸವನ್ನು ತಿಳಿಯಬೇಕೆನ್ನುವವರಿಗೆ ಎಲ್.ಎಸ್. ಶೇಷಗಿರಿರಾಯರ 'ಹೊಸಗನ್ನಡ ಸಾಹಿತ್ಯ ಚರಿತ್ರೆ' ಒಂದು ಉಪಯುಕ್ತ ಆಕರ ಗ್ರಂಥ.\u003cbr data-mce-fragment=\"1\"\u003eಈ ಶತಮಾನದಲ್ಲಿ, ಕನ್ನಡ ಸಾಹಿತ್ಯ ವೈವಿಧ್ಯಮಯವಾಗಿ, ಸಮೃದ್ಧವಾಗಿ ಬೆಳೆದಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಯಾವ ಒಂದು ಶತಮಾನದಲ್ಲೂ, ಈ ಬಗೆಯ ವೈವಿಧ್ಯಮಯ ಸೃಷ್ಟಿಯನ್ನು, ಇಷ್ಟೊಂದು ಎತ್ತರದ ಪ್ರತಿಭೆಗಳನ್ನು ಕಾಣುವುದಿಲ್ಲ. ಅಷ್ಟೊಂದು ವಿಸ್ತಾರ, ವೈವಿಧ್ಯ, ಆಧುನಿಕ ಕನ್ನಡ ಸಾಹಿತ್ಯದ್ದು. ಇದನ್ನು ಸಮಗ್ರವಾಗಿ ಹಿಡಿದಿಡುವುದು ಅಸಾಮಾನ್ಯ ಸಾಹಸದ ಕೆಲಸವೇ ಸರಿ. ಶೇಷಗಿರಿರಾಯರು ಈ ಸವಾಲನ್ನು ಒಪ್ಪಿಕೊಂಡು, ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಅದರ ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಸಮರ್ಥವಾಗಿ ದಾಖಲಿಸಿದ್ದಾರೆ. ಅವರ ವಿಸ್ತಾರವಾದ ಅಧ್ಯಯನ, ವಿಶ್ಲೇಷಣಾತ್ಮಕ ಒಳನೋಟ, ಪರಿಪಕ್ವ ಮನಸ್ಸಿನ ಪ್ರಸನ್ನತೆ-ಪರಿಚಯಾತ್ಮಕ ರೂಪದ ಈ ಬರವಣಿಗೆಗೆ ಪ್ರಬುದ್ಧತೆಯನ್ನು ತಂದುಕೊಟ್ಟಿದೆ. ಈ ಕೃತಿಯ ರಚನೆಯ ಮೂಲಕ ಶೇಷಗಿರಿರಾಯರು ಸಾಹಿತ್ಯಾಭಿಮಾನಿಗಳೆಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.","brand":"L. S. Sheshagiri Rao","offers":[{"title":"Default Title","offer_id":48287824216323,"sku":"HB00000407","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-01at12.06.37PM_4.jpg?v=1638345983"},{"product_id":"vyaakarana-kaigannadi-kannada-book","title":"ವ್ಯಾಕರಣ ಕೈಗನ್ನಡಿ","description":"\u003cp\u003eಭಾಷೆ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಪರ್ಕ ಸಾಧನ. ಭಾಷಾ ತಿಳಿವಳಿಕೆ ಹೆಚ್ಚಿದಂತೆ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವೂ ಹೆಚ್ಚುತ್ತದೆ, ಭಾಷೆಯ ಕಲಿಕೆಯಂತೆಯೇ ವ್ಯಾಕರಣ ಕಲಿಕೆ ಸಹ ಮುಖ್ಯವಾದದ್ದು. ಒಂದು ಭಾಷೆಯನ್ನು ಸರಿಯಾಗಿ ತಿಳಿದು ಸಮರ್ಥವಾಗಿ ಅದನ್ನು ದುಡಿಸಿಕೊಳ್ಳಬೇಕಾದರೆ ವ್ಯಾಕರಣ, ಛಂದಸ್ಸು, ಅಲಂಕಾರಗಳ ಪರಿಚಯ ಮಾಡಿಕೊಡುವುದು ಅಗತ್ಯವಾಗುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶಾಲೆಯಲ್ಲಿ ವ್ಯಾಕರಣದ ಬಗ್ಗೆ ಅನೇಕರಿಗೆ ಒಂದು ಬಗೆಯ ಹಿಂಜರಿಕೆ, ವ್ಯಾಕರಣದ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದನ್ನು ಅನೇಕರು ಒಂದು ಹೊರೆಯೆಂದು ಭಾವಿಸುತ್ತಾರೆ. ಆದರೆ ಈ ಹಿಂಜರಿಕೆ ನಿರಾಧಾರವಾದುದು. ವ್ಯಾಕರಣವಾಗಲಿ, ಛಂದಸ್ಸಾಗಲಿ ಒಂದು ಆಸಕ್ತಿದಾಯಕ ಕಲಿಕೆಯೆಂದು ವಿವರಿಸುವ ಪ್ರಯತ್ನವೇ ಈ 'ನವಕರ್ನಾಟಕ ವ್ಯಾಕರಣ ಕೈಗನ್ನಡಿ'.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದನ್ನು ರಚಿಸಿರುವ ಶ್ರೀ ಕೆ. ದಾಮೋದರ ಐತಾಳರು ಹಲವು ವರ್ಷ ಕನ್ನಡ ಪಂಡಿತರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಜೊತೆಗೆ ಪತ್ರಕರ್ತರಾಗಿ, ಬಳಕೆದಾರರ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ, 'ಬಳಕೆದಾರರ ವೇದಿಕೆ' ಪಾಕ್ಷಿಕದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.\u003cbr data-mce-fragment=\"1\"\u003e\u003cbr\u003e\u003c\/p\u003e\n\u003cp\u003eಪ್ರಕಾಶಕರು - ನವಕರ್ನಾಟಕ ಪ್ರಕಾಶನ\u003c\/p\u003e","brand":"K. Damodar Itaala","offers":[{"title":"Default Title","offer_id":42230630711555,"sku":"HB00002003","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vyaakaranakaigannadi_1.jpg?v=1639994459"},{"product_id":"halagannada-shabdhaartha-kosha-kannada-book","title":"ಹಳಗನ್ನಡ ಶಬ್ದಾರ್ಥ ಕೋಶ","description":"ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥಕೋಶದೊಡನೆ ವಿದ್ವತ್ಪೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ಕನ್ನಡ ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸ್ತುತ ಇದೇ ಗ್ರಂಥದ ಹಳಗನ್ನಡ ಶಬ್ದಾರ್ಥಕೋಶವನ್ನು ಬಿಡಿಯಾಗಿ ಪ್ರಕಟಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ವಿದ್ವಾಸಗೂ, ಸಂಶೋಧಕರಿಗೂ ಉಪಯುಕ್ತವೂ, ಅಧಿಕೃತವೂ ಆಗಿರುತ್ತದೆ.\u003cbr data-mce-fragment=\"1\"\u003e\u003cbr\u003e","brand":"N. Basavaradhya","offers":[{"title":"Default Title","offer_id":42455825678595,"sku":"HB00002219","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_595ebcb6-38d9-4a64-9f44-458c87e14359.jpg?v=1644573524"},{"product_id":"nudia-odalu-kannada-book","title":"ನುಡಿಯ ಒಡಲು","description":"ನುಡಿ, ಮಾತು, ಭಾಷೆ - ಇವು ಸಮಾನಾಂತರ ಹದಗಳು ಮತ್ತು ಮಾನವನ ಆಲೋಚನೆಗಳಿಗೆ ಅಭಿವ್ಯಕ್ತಿ ಮಾಧ್ಯಮ. ಈ ಹೊತ್ತು ಭಾಷೆಯನ್ನು ಕುರಿತಾಗಿ ಹಲವು ಹೊಸ ಅಧ್ಯಯನದ ಆಯಾಮಗಳು ಕನ್ನಡದಲ್ಲಿ ತೆರೆದುಕೊಂಡಿವೆ. ಅದರಲ್ಲಿ ಭಾಷೆಯ ಸಾಮಾಜೀಕರಣ ಕುರಿತಾಗಿ ಹೆಚ್ಚು ಚರ್ಚೆ-ಸಂವಾದಗಳು ನಡೆದಿವೆ. ಒಂದು ಭಾಷೆಯ ಬಳಕೆ, ಅದರ ಭಿನ್ನ ಭಿನ್ನ ಆಯಾಮಗಳು, ಆಲೋಚನೆಗಳು, ಇದರಿಂದ ಸಮುದಾಯ-ಸಾಮಾಜಿಕ ಬದುಕಿನ ಮೇಲಾಗುವ ಪರಿಣಾಮಗಳು ಇಂದಿನ ಭಾಷಾಶಾಸ್ತ್ರ ಅಧ್ಯಯನದ ವ್ಯಾಪ್ತಿಗೆ ಸೇರಿಕೊಂಡಿವೆ. ಶಿಕ್ಷಣ, ಜನಸಂಖ್ಯೆ, ತಂತ್ರಜ್ಞಾನ, ಲಿಪಿಶಾಸ್ತ್ರ, ಜಾಗತೀಕರಣ, ಮಾತೃಭಾಷೆ ಮುಂತಾದ ನೆಲೆಗಳಲ್ಲಿ ಭಾಷೆ ನಿರ್ವಹಿಸುವ ಸಾಧ್ಯತೆಗಳನ್ನು ಕುರಿತು \"ನುಡಿಯ ಒಡಲು\" ಕೃತಿ ಚರ್ಚಿಸುತ್ತದೆ. ಇಲ್ಲಿಯ ಎಲ್ಲ ಲೇಖನಗಳು ಭಾಷಾಕೇಂದ್ರಿತವಾಗಿ ನಡೆಸುವ ಸಂವಾದಗಳಾಗಿವೆ. ಕನ್ನಡ ನುಡಿ ಕುರಿತಾಗಿ ತಮ್ಮ ಚಿಂತನೆಗಳನ್ನು ಕೃತಿ ರೂಪದಲ್ಲಿ ಬರೆದುಕೊಟ್ಟ ಮೇಟಿ ಮಲ್ಲಿಕಾರ್ಜುನ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಸ.ಚಿ. ರಮೇಶ\u003cbr data-mce-fragment=\"1\"\u003e\u003cbr data-mce-fragment=\"1\"\u003eಕುಲಪತಿ","brand":"Meti Mallikarjuna","offers":[{"title":"Default Title","offer_id":42836876558595,"sku":"HB00002813","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5c8f9aeb-2ac5-413e-b892-4cd0f0ab0329.jpg?v=1653034823"},{"product_id":"why-kannada-needs-its-own-grammer-english-book","title":"WHY KANNADA NEEDS ITS OWN GRAMMAR","description":"WHY KANNADA NEEDS ITS OWN GRAMMAR\u003cbr data-mce-fragment=\"1\"\u003e\u003cbr data-mce-fragment=\"1\"\u003eThe main aim of a grammar is to explain the internal structure of words and sentences that occur in a language. None of the grammars published in Kannada have succeeded in fulfilling this aim. They have all tried to apply the rules of Sanskrit grammar directly to Kannada.\u003cbr data-mce-fragment=\"1\"\u003e\u003cbr data-mce-fragment=\"1\"\u003eThese Sanskrit grammatical rules are totally different from the rules that are actually used by Kannada, and hence, they cannot explain the structure of Kannada words and sentences properly. The present book explains the real nature of the grammatical rules of Kannada and the way in which they are different from the rules that occur in the current Kannada grammars, especially in the grammars that are being taught in schools to children. It would therefore be interesting to those who want to know Kannada grammar,\u003cbr data-mce-fragment=\"1\"\u003e\u003cbr data-mce-fragment=\"1\"\u003eThe original author of the present book, namely D.N.S.Bhat, has also written and published in Kannada a detailed Kannada grammar in seven volumes (and in about 2.200 pages), entitled Kannada barahada sollarime.","brand":"Dr. D. N. Shankara Batt","offers":[{"title":"Default Title","offer_id":43223472570627,"sku":"HEB00000138","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WHYKANNADANEEDITSOWNGRAMMER_1.jpg?v=1661607521"},{"product_id":"sarala-kannada-vyakarana-kannada-book","title":"ಸರಳ ಕನ್ನಡ ವ್ಯಾಕರಣ","description":"ಕನ್ನಡ ಭಾಷೆ ತನ್ನದೇ ಆದ ಪ್ರಾಚೀನತೆಯನ್ನು ಹೊಂದಿದೆ ಹಾಗೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 'ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು' ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಇಂತಹ ಕನ್ನಡಕ್ಕೆ ಭದ್ರ ಬುನಾದಿ ಎಂದರೆ ವ್ಯಾಕರಣ. ಚೆನ್ನಾಗಿ ವ್ಯಾಕರಣವನ್ನು ಕಲಿತವರು ಕನ್ನಡದಲ್ಲಿ ಅತ್ಯುತ್ತಮವಾಗಿ ವ್ಯವಹರಿಸಬಲ್ಲರು. ಮಾತು ಮತ್ತು ಬರವಣಿಗೆ ಅತ್ಯಾಕರ್ಷಕವಾಗಿರುತ್ತದೆ. ಕನ್ನಡ ಕಲಿಯುವವರಿಗಾಗಿಯೇ ಸರಳವಾಗಿ ಈ ಪುಸ್ತಕದಲ್ಲಿ ವ್ಯಾಕರಣದ ಬಗೆಗೆ ಮಾಹಿತಿಯನ್ನು ನೀಡಲಾಗಿದೆ. ಶಾಲಾ ಮಕ್ಕಳಿಗೆ ಈ ಪುಸ್ತಕ ಅತ್ಯುಪಯುಕ್ತವಾಗಿದೆ. 'ಸಿರಿಕನ್ನಡ'ದ ಸೊಗಸನ್ನು ಈ ಮೂಲಕ ಆಸ್ವಾದಿಸಿ, ಆನಂದಿಸಿ.","brand":"K. Ramu","offers":[{"title":"Default Title","offer_id":43256245420291,"sku":"HB00003459","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5310e84a-b026-4ae2-99ae-86ca194fab37.jpg?v=1662211569"},{"product_id":"nudihammuge-kannada-book","title":"ನುಡಿಹಮ್ಮುಗೆ","description":"ಈ ಪುಸ್ತಕದಲ್ಲಿ ಕನ್ನಡಕ್ಕೆ ಏಕಾಗಿ ನುಡಿಹಮ್ಮುಗೆ ಬೇಕು ಎಂಬುದನ್ನು ಚರ್ಚಿಸಲಾಗಿದೆ. ಅಲ್ಲದೇ ಇದುವರೆಗೆ ಕನ್ನಡದ ನುಡಿಹಮ್ಮುಗೆಯಲ್ಲಿ ನಡೆದ ಪ್ರಯತ್ನಗಳ ಬಗ್ಗೆ, ನಾಳೆಗಳಿಗೆ ಆಗಿರುವ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದೇನೆ. ನಂತರ ಕನ್ನಡದಲ್ಲಿ ನುಡಿಹಮ್ಮುಗೆಯನ್ನು ಹೇಗೆಲ್ಲಾ ಹಮ್ಮಿಕೊಳ್ಳಬಹುದು ಎಂಬುದರ ಕುರಿತಂತೆ ನನ್ನ ಆಲೋಚನೆಗಳನ್ನೂ, ಸಲಹೆಗಳನ್ನೂ, ನನಗೆ ಅನ್ನಿಸಿದ ವಿಧಾನಗಳನ್ನೂ ಮುಂದಿಟ್ಟಿದ್ದೇನೆ. ಮುಂದೊಮ್ಮೆ ಕನ್ನಡಿಗರು ಈ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ಸಮಾಲೋಚಿಸಿ ಸರಿಯಾದ ಗಟ್ಟಿಯಾದ ಯೋಜನೆಯೊಂದನ್ನು ಸಂಬಂಧಿಸಿದ ತಜ್ಞರುಗಳನ್ನೆಲ್ಲಾ ಸೇರಿಸಿಕೊಂಡು ರೂಪಿಸುತ್ತಾರೆ ಎನ್ನುವ ಆಶಾವಾದ ನನ್ನಲ್ಲಿದೆ. ನನ್ನ ಬರಹದ ಈ ಹೊತ್ತಗೆಯು ಕನ್ನಡ ನಾಡಿನ ಏಳಿಗೆಯ ದಾರಿಯಲ್ಲಿನ ಒಂದು ಸಣ್ಣ ಹಣತೆಯಾದರೂ ಸಾಕು. ನನಗದೇ ಸಾರ್ಥಕತೆ!\u003cbr data-mce-fragment=\"1\"\u003e\u003cbr data-mce-fragment=\"1\"\u003e-ಆನಂದ್‌ ಜಿ.","brand":"Anand G","offers":[{"title":"Default Title","offer_id":43258348896515,"sku":"HB00003462","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f283e51d-cfa4-4f1c-a1a0-4565c3b6da75.jpg?v=1662273436"},{"product_id":"kannada-sahity-sangati-note-keertinatha-kurtakoti-kannada-books","title":"ಕನ್ನಡ ಸಾಹಿತ್ಯ ಸಂಗಾತಿ","description":"ಸಮಗ್ರವಾಗಿ ಹಳಗನ್ನಡ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶವೇ ಇಲ್ಲಿ ಪ್ರಮುಖವಾಗಿದ್ದರೂ ಬರವಣಿಗೆಯ ಸ್ವರೂಪದಲ್ಲಿ 'ಕನ್ನಡ ಸಾಹಿತ್ಯ ಸಂಗಾತಿ' ಅದನ್ನೂ ಮೀರಿದ ಹೆಚ್ಚಿನ ಆಕಾಂಕ್ಷೆಯನ್ನು ಒಳಗೊಂಡು ಅನೇಕ ಮುಖ್ಯ ಸಂಗತಿಗಳತ್ತ ನಮ್ಮ ಗಮನ ಸೆಳೆಯುತ್ತದೆ. ಕವಿ ಕೃತಿಗಳಲ್ಲಿ ತಾವು ಕಂಡ ವಿಶಿಷ್ಟ ಅಂಶಗಳನ್ನು ಕುರ್ತಕೋಟಿ ಅವರು ಟಿಪ್ಪಣಿಗಳ ರೂಪದಲ್ಲಿ ಇಲ್ಲಿ ಮಂಡಿಸಿದ್ದರೂ, ಹಾಗೆ ಮಂಡಿಸುವಾಗ ಇಡೀ ಸಾಹಿತ್ಯ ಪರಂಪರೆ ಅವರ ಕಣ್ಣ ಮುಂದಿದೆ. ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರ್ತಕೋಟಿಯವರು ಇಲ್ಲಿ ಹೊಸದಾಗಿ ಬರೆಯುತ್ತಿದ್ದಾರೆ ಅನ್ನಿಸುತ್ತದೆ. ಆದರೆ ರೂಢಿಯ ಅರ್ಥದ ಸಾಹಿತ್ಯ ಚರಿತ್ರೆಯ ಕ್ರಮ ಇಲ್ಲಿಲ್ಲ. ಮಾಹಿತಿಗಳನ್ನು ನೀಡುವ, ಈಗಾಗಲೇ ಗೊತ್ತಿರುವ ಸಂಗತಿಗಳನ್ನು ಹೇಳುವ ಮತ್ತೊಂದು ವಸ್ತುಗಳು, ಪರಿಕಲ್ಪನೆಗಳು ಬೆಳೆದುಬಂದ ಬಗೆಯನ್ನು ಕುರ್ತಕೋಟಿಯವರು ಇಲ್ಲಿ ಗುರ್ತಿಸುತ್ತಾರೆ. ನಮ್ಮ ಪರಂಪರೆಯನ್ನು ಗುರ್ತಿಸಿಕೊಳ್ಳಲು ಹವಣಿಸುತ್ತಿರುವ ಇಂದಿನ ವಿಮರ್ಶೆಗೆ ಸಾವಿರದ ಐದನೂರು ವರ್ಷಗಳಲ್ಲಿ ಕನ್ನಡ ಮನಸ್ಸು ಹೇಗೆ ಬೆಳೆದು ಬಂದಿದೆ ಎಂಬುದರ ಸೂಕ್ಷ್ಮ ಪರಿಚಯ ಮಾಡಿಕೊಡುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ನರಹಳ್ಳಿ ಬಾಲಸುಬ್ರಹ್ಮಣ್ಯ","brand":"Keerthinatha Kurtakoti","offers":[{"title":"Default Title","offer_id":43727089336579,"sku":"HB00003993","price":550.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d26b161a-893a-4fba-bb5e-e48acf72223b.jpg?v=1675951480"},{"product_id":"yugadharma-haagu-sahithta-darshana-essaya-keertinatha-kurtakoti-kannada-books","title":"ಯುಗಧರ್ಮಹಾಗೂ ಸಾಹಿತ್ಯ ದರ್ಶನ","description":"ನೀವು ನಡೆದು ಬಂದ ದಾರಿಯ ಕಾವ್ಯ ವಿಭಾಗಕ್ಕೆ ಪೀಠಿಕೆಯಾಗಿ ನೀವು ಬರೆದದ್ದನ್ನು ಓದುತ್ತ ಹೋದಂತೆ ನೀವು ನನ್ನ ತಲೆಮಾರಿನ ಅತ್ಯುತ್ತಮ ವಿಮರ್ಶಕರಲ್ಲೊಬ್ಬರು ಎಂಬುದು ಸ್ಪಷ್ಟವಾಗುತ್ತ ಬಂತು, ಆಳವಾದ ಅಭ್ಯಾಸ, ಸದಭಿರುಚಿ, ಮುಖ್ಯಾಂಶಗಳ ಮೇಲೆ ದೃಢವಾದ ಹಿಡಿತ ಇವುಗಳನ್ನು ಗಮನಿಸಿದಾಗ ಅತ್ಯಂತ ತೃಪ್ತಿಯೂ ಸಂತೋಷವೂ ಆಯಿತು.. ಹೊಸಗನ್ನಡ ಕಾವ್ಯದ ಪರಿಶೀಲನೆಗೆ ನೀವು ಬಲು ಭದ್ರವಾದ ಬುನಾದಿಯನ್ನು ಹಾಕಿದ್ದೀರಿ. ಆ ಬಗ್ಗೆ ಮುಂದೆ ನಡೆಯುವ ಕೆಲಸವೆಲ್ಲವೂ ನಿಮ್ಮ ಈ ಲೇಖನದ ಆಧಾರದ ಮೇಲೆಯೇ ನಡೆಯಬೇಕಾಗಿದೆ.\u003cbr\u003e\u003cbr\u003e-ಗೋಪಾಲಕೃಷ್ಣ ಅಡಿಗ","brand":"Keerthinatha Kurtakoti","offers":[{"title":"Default Title","offer_id":43728758800643,"sku":"HB00003994","price":425.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_718a91cb-cff9-482b-87d2-6fe46a092607.jpg?v=1676011822"},{"product_id":"kannada-kannada-english-nighantu-nudiyarime-kannada-books","title":"ಕನ್ನಡ - ಕನ್ನಡ - ಇಂಗ್ಲಿಷ್ ನಿಘಂಟು","description":"ಈ ನಿಘಂಟಿನ ಮೂವರು ಸಂಪಾದಕರೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೆಸರು ಗಳಿಸಿದವರಾಗಿದ್ದಾರೆ. ನಾಡೋಜ. ಪ್ರೊಫೆಸರ್. ಜಿ. ವೆಂಕಟಸುಬ್ಬಯ್ಯನವರು 40 ವರ್ಷಕ್ಕೂ ಮಿಕ್ಕು ಕನ್ನಡವನ್ನು ಬೋದಿಸಿರುವ ಖ್ಯಾತ ವಿಮರ್ಶಕ ವಿದ್ವಾಂಸರು.ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ- ಕನ್ನಡ ನಿಘಂಟಿನ ಮುಖ್ಯ ಬೃಹತ್ಸಂಪುಟಗಳ ಪ್ರಕಟಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಖಿಲ ಭಾರತ ನಿಘಂಟುಕಾರರ ಸಂಸ್ಥೆಗೂ, ತೆಲುಗು ಅಕಾಡೆಮಿಯ 'ಶಬ್ದಸಾಗರ' ನಿರ್ಮಾಣದಲ್ಲಿಯೂ ಸಲಹೆಗಾರರಾಗಿದ್ದಾರೆ. ಕನ್ನಡ-ಇಂಗ್ಲಿಷ್-ಸಂಸ್ಕೃತ ಈ ಭಾಷೆಗಳ ಅವರ ಅಪಾರವಾದ ಅನುಭವ ಸಹಾಯ ಈ ನಿಘಂಟಿಗೆ ಒದಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಾ. ಎಲ್. ಎಸ್. ಶೇಷಗಿರಿರಾಯರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪರಿಣಿತರೂ ಸಾಹಿತ್ಯ ವಿಮರ್ಶನ ಪ್ರಪಂಚದಲ್ಲಿ ಖ್ಯಾತರೂ ಆಗಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಾ. ಎಚ್. ಕೆ. ರಾಮಚಂದ್ರಮೂರ್ತಿಯವರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣದಲ್ಲಿ ಹಲವು ವರ್ಷ ಶ್ರಮಸಾಧ್ಯವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತುಂಬ ವಿದ್ವಾಂಸರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲೂ ಪರಿಣಿತರಾಗಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಮೂವರೂ ಸ್ವಂತವಾಗಿ ಅನೇಕ ಕೃತಿಗಳನ್ನು ರಚಿಸಿರುವುದಲ್ಲದೆ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದಾರೆ.","brand":"Pro. G. Venkatasubbayya, Pro. L. S. Sheshagirirao, Pro. H. K. Ramachandramurthy","offers":[{"title":"Default Title","offer_id":43766310666499,"sku":"HB00004028","price":390.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_bbd3a075-625b-4a68-a09f-7ff04af97d6c.jpg?v=1677146906"},{"product_id":"kannadada-sawaalugalu-linguistic-girisha-mathera-nesara-prakashana-kannada-books","title":"ಕನ್ನಡದ ಸವಾಲುಗಳು","description":"ದೇಸಿ ಭಾಷೆಗಳ ಅದರಲ್ಲೂ ಕನ್ನಡ ಭಾಷೆಯ ಆಸ್ಥಿತ ಮತ್ತು ಸಾಂಸ್ಕೃತಿಕ ನೆಲೆ ಕುಸಿದ ಪಾತಾಳ ಮುಟ್ಟುತ್ತಿರುವ ಈ ಹೊತ್ತಿನಲ್ಲಿ ಭಾಷೆಯನ್ನು ಸಕಲ ಕ್ಷೇತ್ರಗಳಲ್ಲೂ ಸಜ್ಜುಗೊಳಿಸಲು ಅಧಿಕಾರ ರಾಜಕಾರಣ ಹೇಗೆ ಅಡ್ಡಗಾಲಾಗುತ್ತಿದೆ, ಅಧಿಕಾರಶಾಹಿ ಮತ್ತು ಆ ಭಾಷೆಯನ್ನಾಡುವ ಜನ ಹೇಗೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಸಮ್ಮೋಹಕ ವ್ಯಸನ ಹೇಗೆ ದೇಸಿ ಸಂಸ್ಕೃತಿಯ ಸೌಧವನ್ನು ಬುಡಮೇಲು ಮಾಡುತ್ತಿದೆ ಎನ್ನುವುದನ್ನು ಇಲ್ಲಿನ ಲೇಖನಗಳು ಸಶಕ್ತವಾಗಿ ವಿವರಿಸುತ್ತವೆ. ಭಾಷೆಯ ಬಗೆಗಿನ ಕುರುಡು ವಿಸ್ತರಿಸಿ ಅದರ ಸರ್ವತೋಮುಖ ಬೆಳವಣಿಗೆ ಯಾವ ದಿಸೆಯಲ್ಲಾಗಬೇಕು ಎಂಬ ದಿಕ್ಕೂಚಿಯು ಅಲ್ಲಿನ ಬರಹಗಳ ಗುರುತ್ವವನ್ನು ಹೆಚ್ಚಿಸುವಂತಿದೆ. ಮಾಹಿತಿದಾಯಕ ಹಾಗೂ ಪೂರ್ಣದೆಡೆಗೆ ಸಾಗುವ ವಿಕಾಸಕ್ರಮದ ಹಂಬಲ, ವಿಷಯ ಸ್ಪಷ್ಟತೆ ಮತ್ತು ಪಾರದರ್ಶಕತೆ ಈ ಲೇಖನಗಳ ಮತ್ತೊಂದು ವೈಶಿಷ್ಟ್ಯ. ನುಡಿಯ ಬಗ್ಗೆ ನಿಜವಾದ ಕಾಳಜಿ ಮತ್ತು ಅಭಿಮಾನ ಇರುವವರು, ಆಡಳಿತಗಾರರು ಓದಲೇಬೇಕಾದ ಈ ಹೊತ್ತಿಗೆಯನ್ನು ಕನ್ನಡ ಲೋಕಕ್ಕೆ ನೀಡಿದ ಅರ್ಷೀತ ಮನೋಭಾವದ ತಿಳಿಮನಸ್ಸಿನ ಲೇಖಕ ಕ್ರಿಯಾಶೀಲರೂ ಆದ ಗಿರೀಶ್‌ ಮತ್ತೇರ ಅವರನ್ನು ನಾನು ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. \u003cbr\u003e\u003cbr\u003e-ಚಂದ್ರಶೇಖರ ತಾಳ್ಯ, ಸಾಹಿತಿಗಳು","brand":"Girisha Mathera","offers":[{"title":"Default Title","offer_id":43878819594499,"sku":"HB00004083","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_4_14ed1b6c-ddc8-47ae-9007-3971284a185c.jpg?v=1681827658"},{"product_id":"samjnaanarthagalu-mattu-upayukta-koshtakagalu-linguistic-shree-t-k-anantanarayana-kannada-books","title":"ಸಂಜ್ಞಾರ್ಥಗಳು ಮತ್ತು ಉಪಯುಕ್ತ ಕೋಷ್ಟಕಗಳು","description":"ವೃತ್ತಿಯಿಂದ ಶಿಕ್ಷಕರಾಗಿದ್ದ ಶ್ರೀ ಟಿ. ಕೆ. ಅನಂತನಾರಾಯಣರು ಇವರ ಕಾಲಘಟ್ಟದಲ್ಲಿ ಸಾಮಾನ್ಯರ ರೂಢಿ ಬಳಕೆಯಲ್ಲಿದ್ದ ಸಾಂಕೇತಿಕ ಪದಗಳು ಮತ್ತು ಪಾರಂಪರಿಕ ಕೋಷ್ಟಕಗಳು ಮೆಟ್ರಿಕ್‌ ಪದ್ಧತಿಯ ಅಳವಡಿಕೆ (1958) ನಂತರ ನಶಿಸಿಹೋಗಬಹುದು ಎಂಬ ದೂರದೃಷ್ಟಿಯಿಂದ ಇವುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಾಹಿತ್ಯ ವಿದ್ಯಾರ್ಥಿಗಳಿಗೆ ಹಾಗು ಕನ್ನಡ ರಸಾಭಿಮಾನಿಗಳಿಗೆ ಉಪಯೋಗವಾಗಲೆಂದು ಈ ಸಂಖ್ಯಾರ್ಥ ಪದಗಳ ಒಳಾರ್ಥಗಳನ್ನು, ಅಳತೆ ಮತ್ತು ಇತರೆ ಗಣಿತ ಕೋಷ್ಟಕಗಳು, ಕನ್ನಡದಲ್ಲಿ ಮಗ್ಗಿ ಉಚ್ಚಾರಣೆ ಹಾಗೂ ಇನ್ನಿತರ ಉಪಯುಕ್ತ ಮಾಹಿತಿಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ. ಈ ವಿವರಗಳು ನಮ್ಮ ಸಂಸ್ಕೃತಿ, ಇತಿಹಾಸ, ಮತ್ತು ಭಾಷಾ ಶ್ರೀಮಂತಿಕೆ ದೃಷ್ಟಿಯಿಂದ ಇಂದಿಗೂ ಪ್ರಸ್ತುತವೆಂದು ಭಾವಿಸಿ ಪ್ರಕಟಿಸುತ್ತಿದ್ದೇವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರೀಗಳು ಸಂಜ್ಞಾರ್ಥಗಳು ಮತ್ತು ಉಪಯುಕ್ತ ಕೋಷ್ಟಕಗಳು ಒಳಗೊಂಡಂತೆ ಕನ್ನಡದ ಕವಿಕಾವ್ಯ ಚರಿತ್ರ ಸಂಗ್ರಹ, ವಸ್ರ ವಿದ್ಯಾ ಶಾಸ್ತ್ರ - ವಸ್ತ್ರೀಕರಣ ಮತ್ತು ಸೂತ್ರೀಕರಣ, ಕನ್ನಡ ಶಬ್ದಾರ್ಥ ಕೋಶ ಸಂಗ್ರಹ, ಗಾದೆಗಳ ಗಣಿ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಭಾರತ, ರಾಮಾಯಣಗಳ ಬಗ್ಗೆ ಅಭ್ಯಸಿಸಿ ವಿಮರ್ಷೆಗಳನ್ನು ಬರೆದಿದ್ದಾರೆ.","brand":"Shree. T. K. Anantanarayana","offers":[{"title":"Default Title","offer_id":44059322188035,"sku":"HB00004178","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/2_1_1_cf37b170-258f-4ee3-9fc8-20968913e550.jpg?v=1688809362"},{"product_id":"kannada-chandomeemamse-linguistic-t-v-venkatachala-shastry-kannada-book","title":"ಕನ್ನಡ ಛಂದೋಮೀಮಾಂಸೆ","description":"ವಿ. ವೆಂಕಟಾಚಲ ಶಾಸ್ತ್ರಿಗಳು ಒಬ್ಬ ಮಹತ್ವದ ಕನ್ನಡ ಸಾಹಿತ್ಯ ಪ್ರಕಾರದ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ, ಹಾಗೂ ಉತ್ಕೃಷ್ಟ ಸಂಪಾದಕರಾಗಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಾ ಬಂದಿದ್ದಾರೆ. ವೆಂಕಟಾಚಲ ಶಾಸ್ತ್ರಿಗಳು, ೨೬ ಆಗಸ್ಟ್, ೧೯೩೩ ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಾಶಾಸ್ತ್ರಿಗಳು ಮತ್ತು ತಾಯಿ ಸುಬ್ಬಮ್ಮನವರು.","brand":"T. V. Venkatachala Shastry","offers":[{"title":"Default Title","offer_id":44185798050051,"sku":"HB00004290","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/2_1_14.jpg?v=1693039630"},{"product_id":"halagannada-vyakarana-praveshike-linguistic-t-v-venkatachala-shastry-kannada-book","title":"ಹಳಗನ್ನಡ ವ್ಯಾಕರಣ ಪ್ರವೇಶಿಕೆ","description":"ವಿ. ವೆಂಕಟಾಚಲ ಶಾಸ್ತ್ರಿಗಳು ಒಬ್ಬ ಮಹತ್ವದ ಕನ್ನಡ ಸಾಹಿತ್ಯ ಪ್ರಕಾರದ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ, ಹಾಗೂ ಉತ್ಕೃಷ್ಟ ಸಂಪಾದಕರಾಗಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಾ ಬಂದಿದ್ದಾರೆ. ವೆಂಕಟಾಚಲ ಶಾಸ್ತ್ರಿಗಳು, ೨೬ ಆಗಸ್ಟ್, ೧೯೩೩ ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಾಶಾಸ್ತ್ರಿಗಳು ಮತ್ತು ತಾಯಿ ಸುಬ್ಬಮ್ಮನವರು.","brand":"T. V. Venkatachala Shastry","offers":[{"title":"Default Title","offer_id":44185815777539,"sku":"HB00004291","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_1dfaad42-cd9e-4724-b2dd-df8819a074ac.jpg?v=1693040496"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/75ae4d227d551cf6ce49a53b4d8bba92.png?v=1654504334","url":"https:\/\/harivubooks.com\/collections\/linguistics-books.oembed?page=4","provider":"Harivu Books","version":"1.0","type":"link"}