{"title":"Autobiography and Biography Books","description":"","products":[{"product_id":"kannada-manikya-kiccha","title":"ಕನ್ನಡ ಮಾಣಿಕ್ಯ ಕಿಚ್ಚ","description":"\u003cp\u003e\u003c\/p\u003e","brand":"Dr. Sharanu Hulluru","offers":[{"title":"Default Title","offer_id":42020605821187,"sku":"HB00001854","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_a6334ae9-0597-44fe-a70e-57037abea58e.jpg?v=1636356247"},{"product_id":"nanna-rasayaatre","title":"ನನ್ನ ರಸಯಾತ್ರೆ","description":"","brand":"Mallikarjuna Manssur","offers":[{"title":"Default Title","offer_id":42020620599555,"sku":"HB00001662","price":75.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nannarasayaatre_0001.jpg?v=1636356597"},{"product_id":"sigmand-phraaid","title":"ಸಿಗ್ಮಂಡ್ ಫ್ರಾಯ್ಡ್","description":"","brand":"M. Basavanna","offers":[{"title":"Default Title","offer_id":42020621320451,"sku":"HB00001654","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sigmandphraaid_0001.jpg?v=1636356612"},{"product_id":"ganga-avatarana","title":"ಗಂಗಾವತರಣ","description":"","brand":"Damyanti Naregalla","offers":[{"title":"Default Title","offer_id":42020621549827,"sku":"HB00001652","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ganagavatarana_0001.jpg?v=1636356619"},{"product_id":"aarada-deepa","title":"ಆರದ ದೀಪ","description":"ನೀಲತ್ತಹಳ್ಳಿ ಕಸ್ತೂರಿ ಅವರು ರಾಜರತ್ನಂ ಸಂಗಡಿಗರಾಗಿ ಡಿಂಗರಿಗರಾಗಿ ಅವರ ಜಾಡಲ್ಲೇ ಅಡಿ ಇರಿಸಿ, ನೆರೆಯಲ್ಲೇ ನಿಂತು ನಲಿದವರು. ಅವರ ಹೃದಯ ಗ್ರಂಥವನ್ನು ಪುಟಪುಟ ಪಂಕ್ತಿ ಪಂಕ್ತಿ, ಪರಿಸಿ ಪುಟಗೊಂಡವರು. ಅವರ ಕವಿತನ, ಕಲಿತನ, ಕಣ್ಣೀರು, ಪನ್ನೀರು, ಪುಟ್ಟತನ, ದಿಟ್ಟತನಗಳನ್ನು ಹತ್ತಿರದಿಂದ ಅನುಭವಿಸಿ ಅರಿತವರು. ಆ ಆರದ ದೀಪದಿಂದ ತಾವೂ ಬಾಳನ್ನು ಬೆಳಗಿಸಿ, ದೀಪಾರಾಧನಾ ರೂಪವಾಗಿ ಈ ಸುಂದರ ಜ್ಯೋತಿಯನ್ನು ರಚಿಸಿದ್ದಾರೆ. ತಮ್ಮ ಬರವಣಿಗೆಯ ಕಾಯಕಕ್ಕೆ ಅವರು ಅಳವಡಿಸಿಕೊಂಡಿರುವುದು ಲೇಖನಿಯನ್ನಲ್ಲ, ಚಿತ್ರಕಾರನ ಕುಂಚವನ್ನು. ಜಿ.ಪಿ. ಅವರ ನಡೆನುಡಿಗಳ ಪದಪದದಲ್ಲೂ ತೊಳಗುವ ರತ್ನ ಪ್ರಭಾವಳಿಯನ್ನು ನೀಲತ್ತಹಳ್ಳಿ ಕಸ್ತೂರಿಯವರು ತಮ್ಮದೇ ಆಕರ್ಷಕ ಆದರಣೀಯ, ಅನಾಡಂಬರ ಶೈಲಿಯಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಇದು ಗುರುತರ ಕೈಂಕರ್ಯ, ಚಿರಕಾಲ ಕನ್ನಡ ಜನಮನವನ್ನು ಅರಳಿಸುವ ಉತ್ತಮ ಗದ್ಯಕಾವ್ಯ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ನೀ. ಕಸ್ತೂರಿಯ ಕೃತಿಗೆ ನಾ. ಕಸ್ತೂರಿಯ ಮುನ್ನುಡಿಯಿಂದ","brand":"Neelattahalli Kasturi","offers":[{"title":"Default Title","offer_id":42020621713667,"sku":"HB00001650","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/aaradadeepa_0001.jpg?v=1636356623"},{"product_id":"sampattinolagobba-santa","title":"ಸಂಪತ್ತಿನೊಳಗೊಬ್ಬ ಸಂತ","description":"","brand":"Sridhar Hegde Bhadran","offers":[{"title":"Default Title","offer_id":42020622532867,"sku":"HB00001647","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sampattinolagobbasanta_0001.jpg?v=1636356629"},{"product_id":"horatada-haadi","title":"ಹೋರಾಟದ ಹಾದಿ","description":"\u003cp\u003e\u003c\/p\u003e","brand":"Dr. H. Narasimhaiah","offers":[{"title":"Default Title","offer_id":42020628463875,"sku":"HB00001582","price":550.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/horaatadahaadi_400rs_620gms_0001.jpg?v=1636356753"},{"product_id":"malaala-yusaphaijiya","title":"ಮಲಾಲ ಯೂಸಫೈಜಿಯಾ","description":"\u003cp\u003eಮಗುವೊಂದಕ್ಕೆ ಹಾಲೂಡಿಸಿ, ಬೆರಳು ಹಿಡಿದುಕೊಂಡು ನಡೆದಾಡಿಸಿ, ಮಾತುಕತೆಗಳ ಕಲಿಸಿ, ಸಂಸ್ಕಾರ ಹೇಳಿಕೊಟ್ಟು ಆಯಾ ಸಮಾಜದ ಅತ್ಯುತ್ತಮ ಪ್ರಜೆಯನ್ನಾಗಿಸುವ ಪ್ರಕ್ರಿಯೆ ಒಂದು ಯಜ್ಞಕ್ಕೆ ಸಮವಾದುದು. ಪ್ರೀತಿಸುವುದನ್ನು, ಪರರ ಕಷ್ಟಕೋಟಲೆಗಳಿಗೆ ಮಿಡಿಯುವುದನ್ನು, ಎಲ್ಲರೂ ಸಮಾನರು ಎಂಬ ಭಾವವನ್ನು, ಏನಾದರೂ ಆಗಲಿ ಮಾನವೀಯತೆಯನ್ನು ಬಿಡಬಾರದು ಎಂಬ ಸತ್ಯವನ್ನು ಕಲಿಸುವುದು ಕೂಡ ಸುಲಭದ ಕೆಲಸವೇನಲ್ಲ. ಆದರೆ ಇದೆಲ್ಲ ನಾಗರಿಕ ಸಮಾಜದ ಮಾತಾಯಿತು. ಒಳ ಮತ್ತು ಹೊರಗಿನ ಕಣ್ಣು ಹಾಗೂ ಇಂದ್ರಿಯಗಳ ಸಂವೇದನೆಯನ್ನು ಕಳೆದುಕೊಂಡು ರಾಕ್ಷಸವಾಗಿರುವ ಸಮಾಜಕ್ಕೆ ಅರಣ್ಯ ನ್ಯಾಯವೇ ಪಾರಮ್ಯ. ಅಂಥ ರೋದನಕ್ಕೆ ಪಾತ್ರವಾಗುವವರು ಅಸಹಾಯಕರಾದ ವಯಸ್ಸಾದವರು, ಹೆಂಗಳೆಯರು ಮತ್ತು ಮಕ್ಕಳು. \u003c\/p\u003e\n\u003cp\u003eಮಲಾಲ ಎಂಬ ರೂಪಕದ ಕಥೆ ಕೂಡ ಇದೇ, ಎಲ್ಲ ಹೂಗಳಂತೆ ತಾನು ಆರಳಿ ಘಮಿಸಬೇಕು ಎಂದು ಎಲ್ಲರಂತೆ ಈ ಬಾಲಕಿ ಕನಸು ಕಂಡಿದ್ದೇ, ಅರಣ್ಯ ನ್ಯಾಯಾಧೀಶರಿಗೆ ಅಪರಾಧವಾಗಿ ಕಂಡಿತು. ಹಿಂಸಾಪಶುಗಳ ನಿರ್ದಯತೆ ಆಕೆಯನ್ನು ಸಾವಿನಂಚಿಗೆ ದೂಡಿತು.\u003c\/p\u003e\n\u003cp\u003eಲೋಕದ ಎಲ್ಲ ಶಕ್ತಿಗಳೂ ಒಗ್ಗೂಡಿ, ಮಲಾಲಳಿಗೆ ಮತ್ತೆ ಉಸಿರು ತುಂಬಿ, ನೂರ್ಕಾಲ ಬಾಳುವ ರೂಪಕವನ್ನಾಗಿಸಿದವು. ನೆತ್ತರದಾಹಕ್ಕೆ ಅನಾಮಿಕವಾಗಿ ಸಾವನ್ನಪ್ಪಬಹುದಾಗಿದ್ದ ಬಾಲೆ ಸ್ವಾಭಿಮಾನ, ಧೈರ್ಯ, ಸಾಹಸ ಮತ್ತು ಛಲವಂತಿಕೆಗಳ ಪ್ರತೀಕವಾಗಿ ಬದಲಾದಳು.\u003c\/p\u003e\n\u003cp\u003eಮಲಾಲಳ ಕೆಚ್ಚೆದೆಯ ಈ ಹೋರಾಟದ ಕಥೆಯನ್ನು ಆಕೆಯ ದಿನಚರಿ, ಸಂದರ್ಶನ, ಇತರರು ಆಕೆಯ ಕುರಿತು ಬರೆದ ಲೇಖನ, ಅಭಿಪ್ರಾಯಗಳನ್ನು ಆಧರಿಸಿ ಪುಸ್ತಕ ರೂಪದಲ್ಲಿ ಕನ್ನಡಿಗರಿಗೆ ಪರಿಚಯಿಸಿದ್ದಾರೆ ಮೀನಾ ಮೈಸೂರು. ಸರಳ ಹಾಗೂ ಸಹಜ ಅನುವಾದ ಉತ್ತಮ ಓದಿನ ಸುಖವನ್ನು ನೀಡುತ್ತದೆ.\u003c\/p\u003e","brand":"Meena mysuru","offers":[{"title":"Default Title","offer_id":42020635345155,"sku":"HB00001476","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4006.jpg?v=1636356941"},{"product_id":"nanna-tamma-shankara","title":"ನನ್ನ ತಮ್ಮ ಶಂಕರ......","description":"","brand":"Anant Nag","offers":[{"title":"Default Title","offer_id":42020635771139,"sku":"HB00001472","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3937.jpg?v=1636356947"},{"product_id":"nenape-sangeeta","title":"ನೆನಪೇ ಸಂಗೀತ","description":"\u003cp\u003eವಿದ್ಯಾಭೂಷಣರೆಂದರೆ ದಾಸರಪದಗಳ ಗಾಯಕರಾಗಿ ಬಹುತೇಕರಿಗೆ ಪರಿಚಿತರು. ಕುಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮಿಗಳಾಗಿ ಹದಿನಾರನೇ ವಯಸ್ಸಿನಲ್ಲಿ ಒಲ್ಲದ ಮನಸ್ಸಿನಿಂದ ಸನ್ಯಾಸ ಸ್ವೀಕರಿಸಿದರೂ ಆ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದು ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಲೋಕದ ರೂವಾರಿಯಾಗಿ ಬೆಳೆದ ಪರಿಯೇ ಅನನ್ಯ.\u003c\/p\u003e\n\u003cp data-adtags-visited=\"true\"\u003eಮನುಷ್ಯ ಸಹಜ ಆಕಾಂಕ್ಷೆಗಳಿಗೆ ಕಠೋರಪ್ರಾಯವಾಗಿರುವ ಬಾಲಸನ್ಯಾಸದ ಪದ್ಧತಿಯನ್ನು ಅಂತ್ಯಗೊಳಿಸಬೇಕಾದ ಕಾಲವಿದು. ಪೀಠದಲ್ಲಿದ್ದಾಗ, ಅದನ್ನು ತೊರೆಯುವ ಸಂದರ್ಭದಲ್ಲಿ ಅನುಭವಿಸಿದ ಮಾನಸಿಕ ತುಮುಲಗಳನ್ನು ಮುಕ್ತವಾಗಿ ಹಂಚಿಕೊಂಡಿರುವ ಶ್ರೀಯುತರು ನಮ್ಮ ಗೌರವಕ್ಕೆ ಪಾತ್ರರಾಗುತ್ತಾರೆ.\u003c\/p\u003e\n\u003cp data-adtags-visited=\"true\"\u003eಧರ್ಮಕರ್ಮಗಳ ಜಿಜ್ಞಾಸೆ ಮಾಡುವ ಪ್ರತಿಯೊಬ್ಬರೂ ಓದಲೇ ಬೇಕಾದ ಜೀವನ ಕಥನವಿದು.\u003c\/p\u003e","brand":"Vidhyabhushana","offers":[{"title":"Default Title","offer_id":42020635836675,"sku":"HB00001471","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3935.jpg?v=1636356949"},{"product_id":"nirbhaya","title":"ನಿರ್ಭಯ","description":"\u003cp\u003e\u003c\/p\u003e","brand":"Translated by S. Divakar","offers":[{"title":"Default Title","offer_id":42020641734915,"sku":"HB00001396","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/d2f3c9341b774537a046c9f20f66bd9d.jpg?v=1636357069"},{"product_id":"steve-jobs","title":"ಸ್ಟೀವ್ ಜಾಬ್ಸ್","description":"\u003cp\u003e\u003c\/p\u003e","brand":"Vishwanatha M. Basavanala Matha","offers":[{"title":"Default Title","offer_id":42020642324739,"sku":"HB00001386","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4131.jpg?v=1636357084"},{"product_id":"stephen-hawking-baduku-mattu-vichara","title":"ಸ್ಟೀಫನ್ ಹಾಕಿಂಗ್ ಬದುಕು ಮತ್ತು ವಿಚಾರ","description":"\u003cp\u003eಜಗತ್ತು ಕಂಡ ಅದ್ಭುತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಜೀವನ ಮತ್ತು ವಿಚಾರಗಳನ್ನು ಪರಿಚಯ ಮಾಡಿ ಕೊಡುವ ಕೃತಿ.\u003c\/p\u003e","brand":"B. S. Mayura","offers":[{"title":"Default Title","offer_id":42020658544899,"sku":"HB00001251","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4130.jpg?v=1636357360"},{"product_id":"nanna-saarvajanika-baduku","title":"ನನ್ನ ಸಾರ್ವಜನಿಕ ಬದುಕು - ಸರ್ ಮಿರ್ಜಾ ಇಸ್ಮಾಯಿಲ್","description":"\u003cp\u003eಮೈಸೂರಿನ ದಿವಾನರಾಗಿ ದೊಡ್ಡ ಪ್ರಮಾಣದಲ್ಲಿ ಜನರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಮಿರ್ಜಾ ಇಸ್ಮಾಯಿಲ್ ಅವರ ಇಂಗ್ಲಿಷಿನಲ್ಲಿ ಬರೆಯಲಾದ ಆತ್ಮಕಥೆಯ ಕನ್ನಡ ಅನುವಾದ ಈ ಕೃತಿ. ಅಂದಿನ ಮೈಸೂರು ಸಂಸ್ಥಾನದ ದಿನಗಳನ್ನು ಅರಿಯಲು ಅತ್ಯಂತ ಸಹಕಾರಿ ಈ ಕೃತಿ.\u003c\/p\u003e","brand":"Sir Mirza Ismail, Translated by Dr. Gajanana Sharma","offers":[{"title":"Default Title","offer_id":42020668211459,"sku":"HB00001184","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3942.jpg?v=1636357512"},{"product_id":"memoirs-of-my-working-life-nanna-vrutti-jeevanada-nenapugalu","title":"ನನ್ನ ವೃತ್ತಿಜೀವನದ ನೆನಪುಗಳು","description":"\u003cp\u003eಕನ್ನಡ ನಾಡು ಕಂಡ ಶ್ರೇಷ್ಟ ಇಂಜಿನಿಯರುಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ಸರ್. ಎಂ. ವಿಶ್ವೇಶ್ವರಯ್ಯನವರು. ತಮ್ಮ ಜೀವಿತ ಅವಧಿಯಲ್ಲೇ ಒಂದು ದಂತಕತೆಯಾಗಿದ್ದ ಅವರ ಜೀವನ, ಅವರ ಸಾಧನೆಗಳು ಕನ್ನಡಿಗರೆಲ್ಲರಿಗೂ ಸಾಧಿಸುವ ಛಲ ಮತ್ತು ಉತ್ಸಾಹ ತುಂಬುವಂತಿದೆ. Memoirs of My Working Life ಅನ್ನುವ ಪುಸ್ತಕದ ಮೂಲಕ ಅವರು ತಮ್ಮ ವೃತ್ತಿ ಜೀವನದ ನೆನಪುಗಳನ್ನು ದಾಖಲಿಸಿದ್ದಾರೆ. ಅದನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ.ಗಜಾನನ ಶರ್ಮ ಅವರು. ಅಂಕಿತ ಪ್ರಕಾಶನ ಹೊರ ತಂದಿರುವ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗ ಓದಬೇಕಾದ ಹೊತ್ತಗೆಗಳಲ್ಲೊಂದು. \u003c\/p\u003e","brand":"Sir. M. Vishweshvarayya, Translated by Dr. Gajanana Sharma","offers":[{"title":"Default Title","offer_id":42020678959363,"sku":"HB00001102","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_cdd71457-f64f-400d-bca8-e46d3c79384e.jpg?v=1685454221"},{"product_id":"loui-brail-kannada-pustaka","title":"ಅಂಧರ ಜ್ಞಾನಜ್ಯೋತಿ ಲೂಯಿ ಬ್ರೈಲ್","description":"ಒಬ್ಬ ವ್ಯಕ್ತಿಯ ಯಶಸ್ಸು ತಾನೇ ಕಟ್ಟಿಕೊಂಡ ಚೌಕಟ್ಟಿನಿಂದ ಹೊರಬಂದ ತನ್ನ ಮುಕ್ತ ಆಲೋಚನೆಯಲ್ಲೇ ಇದೆ. ಆತನ ಸಂಕಲ್ಪ ಛಲ ವಿಶ್ವಾಸಗಳಲ್ಲೇ ಇದೆ. ಆತನ ನಿರಂತರ ಪ್ರಯತ್ನ ಪರಿಶ್ರಮಗಳಲ್ಲೇ ಇದೆ. ಎಂತಹ ಸಂಕಷ್ಟ ಸಂದಿಗ್ಧ ಪರಿಸ್ಥಿತಿಗಳನ್ನೂ ಧೈರ್ಯದಿಂದ ಎದುರಿಸಿ ಮುನ್ನಡೆಯುವುದರಲ್ಲೇ ಇದೆ ಎಂಬುದು ಲೂಯಿ ಬ್ರೈಲ್ ಜೀವನ ಸಾಧನೆಯಲ್ಲಿ ಮನದಟ್ಟಾಗುತ್ತದೆ. ಈ ಪುಸ್ತಕವನ್ನು ಓದುತ್ತಾ ಹೋದಂತೆ ಲೂಯಿಯ ಬದುಕು ಸಾಧನೆ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ, ರೋಮಾಂಚನಗೊಳಿಸುತ್ತದೆ. ಇಲ್ಲಿ ಲೇಖಕರ ಮೂಲ ಉದ್ದೇಶ ಸಾಧಿತವಾಗಿದೆ. ಯಾವುದೋ ದೇಶ, ಯಾವುದೋ ಭಾಷೆ, ಯಾವುದೋ ಧರ್ಮ ಆದರೆ ಲೂಯಿಯ ಇಂತಹ ಸಾಧನೆಯ ಅದ್ಭುತ ಬದುಕು ಲೇಖಕರನ್ನು ರೋಮಾಂಚನಗೊಳಿಸಿದೆ. ಹಾಗೆಯೇ ಮಾನವಕುಲದ ಅಂತಃಸತ್ವವನ್ನೂ ಶ್ರೀಮಂತಗೊಳಿಸುತ್ತದೆ. ಮಹಾನ್ ಸಾಧಕರು ಇಲ್ಲಿಗೂ, ಯಾವುದಕ್ಕೂ ಸೀಮಿತವಲ್ಲ. ಅವರು ಮಾನವಕುಲವನ್ನು ಕೈಹಿಡಿದು ನಡೆಸುವ ನಾಯಕರೇ ಎಂಬುದು ಸಾಬೀತಾಗುತ್ತದೆ. ಒಟ್ಟಿನಲ್ಲಿ ಈ ಪುಸ್ತಕದ ಭಾಷೆ, ಶೈಲಿ ವಿಧಾನಗಳು ಏನೇ ಇರಲಿ ಆದರೆ ಇದರಲ್ಲಿರುವ ಹೂರಣ ಮಾತ್ರ ಅದ್ಭುತ, ರೋಮಾಂಚನಕಾರಿಯೇ! ಇದು ಮಾನವ ಕುಲದ ಪ್ರಗತಿಯ ಹೆಜ್ಜೆ ಗುರುತೇ, ಲೂಯಿ ಬ್ರೈಲ್ ಅವರಂತಹ ಮಹಾನ್ ನಾಯಕರು ಎಂದೆಂದಿಗೂ ಮಾನವಕುಲದ ಪ್ರಗತಿಯ ಮಾರ್ಗದರ್ಶಕರೇ ಆಗಿದ್ದಾರೆ.","brand":"Dr. M. S. S. Murthy","offers":[{"title":"Default Title","offer_id":42084464492803,"sku":"HB00001073","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/looyibrail_1.jpg?v=1637564375"},{"product_id":"kalpana-vilasa-biography-ravi-belagere-kannada-book","title":"ಕಲ್ಪನಾ ವಿಲಾಸ","description":"'ಆಕೆ ಮಿನುಗುತ್ತಾರೆ' ಎಂದು ವೈಎನ್ಕೆ ತಮಾಷೆ ಮಾಡುತ್ತಿದ್ದರು. ಆದರೆ ಆ ಮಹಾಗೆ ಮಿನುಗುತಾರೆ ವಿಷ ಕುಡಿದು ಪ್ರಾಣ ಬಿಟ್ಟು ಬೆಳಗಾವಿಯ ಬಳಿಯ ಗೋಟೂರಿನ ಇನ್ಸ್‌ಪೆಕ್ಸನ್ ಬಂಗಲೆಯ ಮುಂದೆ ನಿಂತಾಗ ನನ್ನನ್ನು ಕಾಡಿದ್ದು ವಿಷಾದದೊಂದೇ ವಿಚಿತ್ರ ನೋಡಿ: ಕಲ್ಪನಾ ಅವರ ಪಾರ್ಥಿವವನ್ನು ತದ್ದುದೇ ಆದ ಬೆಂಗಳೂರಿನ ಬಳಿಯ ಗುಬ್ಬಲಾಳದ ಸ್ವಂತ ತೋಟದಲ್ಲಿ ಸಮಾಧಿ ಮಾಡಿಕೊಂಡವರು, ಕಲ್ಪನಾಗಿ ಕೆಲಕಾಲ ತುಂಬ ಹತ್ತಿರವಾಗಿದ್ದ ಬಿ.ಎಸ್. ವಿಶ್ವನಾಥ್ ಅವರು, ನನ್ನ ಮಗ ಅದೇ ಗುಬ್ಬಲಾಳದ 'ಕರಿಷ್ಠಾಹಿಲ್' ಎಂಬಲ್ಲಿ ಮನೆ ಕಟ್ಟಿಸುತ್ತಿದ್ದಾನೆ. ಅದನ್ನು ನೋಡಲೆಂದು ಇತ್ತೀಚೆಗ ಹೋಗುತ್ತಿದ್ದಾಗ ಬಿ.ಎಸ್.ವಿಶ್ವನಾಥ್ ಅವರ ತೋಟ, ತೋಟದೊಳಗಿನ ಕಲ್ಪನಾರ ಸಮಾಧಿ ಕಾಣಿಸಿತು. ಕಾಡಿದ್ದು ಮತ್ತದೇ ವಿಷಾದ.\u003cbr data-mce-fragment=\"1\"\u003e\u003cbr data-mce-fragment=\"1\"\u003eಆಕೆ ಮೇರು ನಟ. ತುಂಬ tasteful ಆದ ಹೆಣ್ಣು ಮಗಳು ಒಳ್ಳೆಯ ಗೃಹಿಣಿಯಾಗಬೇಕು ಎಂದು ಬಯಸಿದ ಭಾವುಕ ಜೀವಿ. ಆದರೆ ಬದುಕೆಲ್ಲ ಶರ ಪಂಜರದೇ' ಆಯಿತು, ಸಿಕ್ಕಗಂಡಸರಾರೂ ಹಿಡಿಯಲಿಲ್ಲ. ವಿಪರೀತ ಸಾಲ ಮಾಡಿ ಅದ್ಭುತ ಮನೆ ಕಟ್ಟಿದಳು. ಆಕೆಯ ತದ್ಗುನಿಗಾಗಿ ದುಡಿದದ್ದನ್ನೆಲ್ಲ ಸುರಿದಳು, ಕಡೆಗೆ ಸಾಲದ ಹೊರೆ ತಡೆಯದಾದಾಗ ಇತರ ಅನೇಕ ನಟಿಯರಂತೆ ಉತ್ತರ ಕರ್ನಾಟಕದ ನಾಟಕ ಕಂಪನಿಗಳಿಗೆ ದಿನಕ್ಕಿದ್ದು ಅಂತ ಸಂಭಾವನೆ ಮಾತನಾಡಿಕೊಂಡು ನಟಿಸಲು ಹೋಗತೊಡಗಿದಳು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಲ್ಲಿಂದ ಶುರುವಾಯಿತು ಕಲ್ಪನಾರ ಪತನ, ಆಕೆ ಭಾವುಕಳಾ? ಹುಚ್ಚು ಮನಸ್ಸಿನವಳಾ? ಜೀವನೋಹಿಯಾ? ಕಾಮುಕಳಾ? ವಂಚಕಿಯಾ? ವಂಚನೆಗೆ ಒಳಗಾದದಳಾ? ಆಕೆಯದು ಕೊಲೆಯಾ?\u003cbr data-mce-fragment=\"1\"\u003e\u003cbr data-mce-fragment=\"1\"\u003eಎಲ್ಲವುಗಳಿಗೂ ಉತ್ತರ ಇಲ್ಲಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e''ಈ ಹುಡುಗಿಯ ಮೀಸಲು ಮುರಿದದನೇ ನಾನು' ಎಂದು ಹಾಸ್ಯ ನಟ ನರಸಿಂಹರಾಜು ಕಲ್ಪನಾಳ ಪಾರ್ಥಿವ ಶರೀರದ ಮುಂದೆ ನಿಂತು ಹೇಳಿದ್ದನ್ನು ಕೇಳಿದರೆ ಚಿತ್ರರಂಗವೆಂಬ ಮಾಯಾನಗರಿಯ ವೈಚಿತ್ರ ನಿದುಗೆ ಅರ್ಥವಾಗುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103080452355,"sku":"HB00000933","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_2.jpg?v=1637836423"},{"product_id":"major-sandeep-biography-ravi-belagere-kannada-book","title":"ಮೇಜರ್ ಸಂದೀಪ್ ಹತ್ಯೆ","description":"ನನ್ನ ಮಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಒಂದು ವಜ್ರ ಆದರೆ ವಜ್ರದಂತಹ ಹುಡುಗನನ್ನು ಪಾಕಿಸ್ತಾನದ ಒಬ್ಬ ಯಃಕಶ್ಚಿತ್ ಕಳ್ಳ ಕೊಂದುಬಿಟ್ಟ' ಅಂತ ಹಿರಿಯರಾದ ಉನ್ನಿಕೃಷ್ಣನ್ ಅವರು ಅಂದಾಗ ನನ್ನ ಕಣ್ಣು ನೀರಾಡಿದ್ದವು. ಸದ್ದಿಲ್ಲದೆ ದೋಣಿ ಹತ್ತಿ ಬಂದ ಹತ್ತು ಜನ ಭಯೋತ್ಪಾದಕರು ಅರವತ್ತು ಗಂಟೆಗಳಿಗೂ ಹೆಚ್ಚುಕಾಲ ಭಾರತವನ್ನೇ ಒತ್ತೆಯಿಟ್ಟುಕೊಂಡುಬಿಟ್ಟಿದ್ದರು. ಕೆಲವು ದೃಶ್ಯಗಳನ್ನು ಟೀವಿಗಳಲ್ಲಿ ನೋಡಿದೆವಾದರೂ, ಕೇವಲ ಹತ್ತು ಜನ ಆ ಪರಿಯ ಭಯೋತ್ಪಾದನೆ ಮಾಡಲು ಸಾಧ್ಯವಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಇಷ್ಟಕ್ಕೂ ಅಂಥ ವೀರಯೋಧ ಸಂದೀಪ್ ಉನ್ನಿಕೃಷ್ಣನ್‌ರ ಕೊಲೆ ಹೇಗಾಯಿತು ಎಂಬ ಪ್ರಶ್ನೆ ಬಾಧಿಸುತ್ತಿತ್ತು. ಅವೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ದೊರಕಿರುವುದು ಈ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eರವಿ ಬೆಳಗೆರೆ","brand":"Ravi Belagere","offers":[{"title":"Default Title","offer_id":42103244030211,"sku":"HB00000923","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_6.jpg?v=1637839437"},{"product_id":"maranavillada-mahakrantikaari-bhagath-singh-kannada-books","title":"ಮರಣವಿಲ್ಲದ ಮಹಾಕ್ರಾಂತಿಕಾರಿ ಭಗತ್ ಸಿಂಗ್","description":"ಅಂದು ತಮ್ಮ ಕಠೋರ ಶಾಸನಗಳ ಮೂಲಕ ಭಾರತದ ಮೂಲನಿವಾಸಿ ಭಾರತೀಯರನ್ನು ಚಿತ್ರಹಿಂಸೆಗಳಿಗೆ ದೂಡುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ದಿಟ್ಟತನದಿಂದ ಎದುರಿಸಿದವರು ಭಗತ್‌ಸಿಂಗ್, ಭಾರತ ಸ್ವಾತಂತ್ರ್ಯ ಸಮರದಲ್ಲಿ ಅಗ್ರಗಣ್ಯರಾಗಿ ನಿಂತವರು ಇವರು. ತಮ್ಮಿಬ್ಬರು ಸಹಚರರೊಡನೆ ನೇಣುಗಂಭಕ್ಕೆ ನಗುನಗುತ್ತಲೇ ಸ್ವತಃ ಏರಿ ತಮ್ಮ ಉಗ್ರ ದೇಶಾಭಿಮಾನವನ್ನೂ ಕೆಚ್ಚೆದೆಯನ್ನೂ ಇಡೀ ಜಗತ್ತಿಗೆ ಸಾರಿದವರು ಭಗತ್‌ಸಿಂಗ್, ತಾರುಣ್ಯದಲ್ಲೇ ಅಪಾರ ಚಿಂತನಾ ಸಾಮರ್ಥ್ಯ ಮೈದುಂಬಿಕೊಂಡು ತಾವು ಒಪ್ಪಿ ಅಪ್ಪಿಕೊಂಡ ಒಲವುಗಳಿಗೆ ಕಟಿಬದ್ಧರಾಗಿ ಉಳಿದವರು ಭಗತ್ ಸಿಂಗ್.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರ ಈ ಕೃತಿಯು ಭಗತ್ ಸಿಂಗರ ಜೀವನ ವೃತ್ತಾಂತವನ್ನು ಸವಿಸ್ತಾರವಾಗಿ ಹೃದ್ಯವಾಗಿ ಚಿತ್ರಿಸುತ್ತದೆ; ಕೃತಿಯನ್ನು ಓದಿ ಮುಗಿಸಿದಾಗ ಕಣ್ಣುಗಳು ಒದ್ದೆಯಾಗಿ ಆ ಮಹಾನ್ ಹೋರಾಟಗಾರನ ಬಗ್ಗೆ ಅನನ್ಯ ಗೌರವ ಮೂಡುತ್ತದೆ.","brand":"G. M. Krishnamurthy","offers":[{"title":"Default Title","offer_id":42113031438595,"sku":"HB00000807","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at11.03.43AM.jpg?v=1637991516"},{"product_id":"adamya-chethana-apj-abdul-kalam","title":"ಅದಮ್ಯ ಚೇತನ","description":"ಮಾನವೀಯ, ರಾಷ್ಟ್ರೀಯ ಮತ್ತು ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ವಿಶಾಲ ವ್ಯಾಪ್ತಿಯ ಕಾಳಜಿಯ ವಿಷಯಗಳನ್ನು ಪ್ರತಿಫಲಿಸುತ್ತಲೇ, ಡಾ. ಕಲಾಂ ಅವರ ಸ್ಫೂರ್ತಿ ನೀಡುವ, ಸರಿ ಸುಮಾರು ಐಂದ್ರಜಾಲಿಕದಂತೆಯೇ ಭಾಸವಾಗುವ ಮಾತುಗಳು ಓದುಗರ ಮನಸ್ಸು ಹಾಗೂ ಹೃದಯಗಳನ್ನು ಗಾಢವಾಗಿ ತೊಡಗಿಸಿಕೊಂಡು ತಮ್ಮತ್ತ ಸೆಳೆದುಕೊಳ್ಳುತ್ತವೆ.","brand":"G. K. Madhyastha | A. P. J Abdul Kalam","offers":[{"title":"Default Title","offer_id":42113039761667,"sku":"HB00000805","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at11.03.43AM_1.jpg?v=1637992055"},{"product_id":"nimma-bhavishyakondu-roopa-kodi","title":"ನಿಮ್ಮ ಭವಿಷ್ಯಕ್ಕೊಂದು ರೂಪ ಕೊಡಿ","description":"ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಆ ಸ್ಥಾನದಿಂದ ವಿಶ್ರಾಂತ ಪಡೆದ ನಂತರ ಹಲವು ವರ್ಷಗಳೇ ಸಂದುಹೋಗಿದ್ದರೂ ಅವರು ಇಂದೂ ಕೂಡ ಅತ್ಯಂತ ಜನಪ್ರಿಯ ಸಾರ್ವಜನಿಕ ಮಹನೀಯರಾಗಿಯೇ ಉವಿರುವಂತಹುದು. ಅಪೂರ್ವವಾದುದು. ಹೆಚ್ಚು ಅರಸಲ್ಪಡುವ, ಹೆಚ್ಚು ಅಭಿಮಾನಿಸಲ್ಪಡುವ ಅವರತ್ತ ಯುವ ಜನತೆ ಸಲಹೆಗಳಗಾಗಿ, ಮಾರ್ಗದರ್ಶನಕ್ಕಾಗಿ, ಸಾಂತ್ವನಕ್ಕಾಗಿ ನೋಡುತ್ತಾರೆ ಅಥವಾ ಅವರೊಡನೆ ಸುಮ್ಮನೆ ಸಂಪರ್ಕದಿಂದಿರಲು ಆಶಿಸುತ್ತಾರೆ. ತಾವು ರಾಮೇಶ್ವರಂನಿಂದ ರಾಷ್ಟ್ರಪತಿ ಭವನದವರೆಗೆ ನಡೆದು ಬಂದ ಬಂಡೆಗಲ್ಲುಗಳ ರಸ್ತೆಯಲ್ಲಿ ಎದುರಿಸಿದ ಪರೀಕ್ಷೆಗಳನ್ನು, ನೋವುಗಳನ್ನು ಚೆನ್ನಾಗಿ ಬಲ್ಲ ಡಾ. ಕಲಾಂ ಅವರು ಈ ಕೃತಿಯಲ್ಲಿ ನೀಡಿರುವ ಮಾರ್ಗದರ್ಶನಗಳು, ನಿರ್ದೇಶನಗಳು ಹಾಗೂ ಪರಿಹಾರಗಳು ಅವರ ಅನುಭವ ಪಾಕದಿಂದ ಹುಟ್ಟದ ಏವೇಕದಿಂದ ಬಂದಿರುವವೇ ಆಗಿವೆ.\u003cbr\u003e\u003cbr\u003eನಾವು ಪ್ರತಿಯೊಬ್ಬರೂ ನಮ್ಮ ದೈನಂದಿನ ಬದುಕಿನಲ್ಲಿ ಎದುರಿಸುವ ವ್ಯಕ್ತಿತ್ವ ವಿಕಸನದ ಸವಾಲುಗಆಂದ ಹಿಡಿದು ಒಂದು ಸಮಾಜವಾಗಿ ಮತ್ತು ಒಂದು ದೇಶವಾಗಿ ನಾವು ಎದುರಿಸುವ ಇನ್ನೂ ಹೆಚ್ಚಿನ ಸಂಕೀರ್ಣ ವಿಷಯಗಳವರೆಗೆ ಪರ್ಯಾಲೋಚಿಸುವ ಈ ಕೃತಿಯು ಒಂದು ಪ್ರೇರಣಾತ್ಮಕವಾದ ಹಾಗೂ ಒಂದು ಸ್ಪಷ್ಟ ಉದ್ದೇಶವುಳ್ಳ ಬದುಕನ್ನು ಜೀವಿಸಲು ಮಾರ್ಗನಕಾಶೆಯಾಗಿದೆ.","brand":"G. K. Madhyastha | A. P. J Abdul Kalam","offers":[{"title":"Default Title","offer_id":42113052999939,"sku":"HB00000803","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at11.03.43AM_2.jpg?v=1637992604"},{"product_id":"turning-points-wings-of-fire","title":"ಟರ್ನಿಂಗ್ ಪಾಯಿಂಟ್ಸ್ ( ಸವಾಲುಗಳ ಜೊತೆಗೊಂದು ಪಯಣ)","description":"ತಮಿಳುನಾಡಿನ ರಾಮೇಶ್ವರದಲ್ಲಿ 1931ರ ಅಕ್ಟೋಬರ್ 15ರಂದು ಜನಿಸಿದ ಡಾ. ಅವುಲ್ ಪಕೀರ್ ಜೈನುಲದ್ದೀನ್ ಅಬ್ದುಲ್ ಕಲಾಂ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಕಲಿತರು. ಡಾ. ಕಲಾಂ ಅವರು ಭಾರತದ ಪ್ರಖ್ಯಾತ ವಿಜ್ಞಾನಿ. ಅವರು ದೇಶ ವಿದೇಶಗಳ ಒಟ್ಟು 45 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಅವರಿಗೆ ಭಾರತ ಸರ್ಕಾರದ ಪದ್ಮಭೂಷಣ (1981), ಪದ್ಮವಿಭೂಷಣ (1990) ಹಾಗೂ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ (1997) ಸಂದಿವೆ. ಅವರಿಗೆ ಕೊಡಮಾಡಲಾಗಿರುವ ಹಲವಾರು ಅಂತರರಾಷ್ಟ್ರೀಯ ಪುರಸ್ಕಾರಗಳಲ್ಲಿ ಎರಡನೇ ಕಿಂಗ್ ಚಾರ್ಲ್ಸ್ ಪದಕ (2007), ವುಡೋ ವಿಲ್ಸನ್ ಪ್ರಶಸ್ತಿ (2008), ಹೂವರ್ ಪ್ರಶಸ್ತಿ (2008) ಹಾಗೂ ಇಂಟರ್‌ನ್ಯಾಷನಲ್ ವಾನ್ ಕರ್ಮನ್ ವಿಂಗ್ಸ್ ಪ್ರಶಸ್ತಿ (2009)ಗಳೂ ಸೇರಿವೆ.","brand":"G. K. Madhyastha | A. P. J. Abdul Kalam","offers":[{"title":"Default Title","offer_id":42113221001475,"sku":"HB00000800","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at11.03.43AM_3.jpg?v=1637993602"},{"product_id":"nannapayana-apjabdul-kalam-gkmadhyastha","title":"ನನ್ನ ಪಯಣ","description":"ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರದು ರಾಮೇಶ್ವರದ ಹುಡುಗನೊಬ್ಬ ಪ್ರಖ್ಯಾತ ವಿಜ್ಞಾನಿಯೂ ದೇಶದ ರಾಷ್ಟ್ರಪತಿಯೂ ಆದಂತಹ ಸ್ಫೂರ್ತಿದಾಯಕ ಮನೋಜ್ಞಕಥೆ. ಅದು ಸಂಕಲ್ಪಶಕ್ತಿ, ಧೈರ್ಯ, ನಿರಂತರ ಪರಿಶ್ರಮ ಹಾಗೂ ಗೆಲುವಿನ ಆಶಯವನ್ನು ಹೊತ್ತ ಕಥಾನಕವೇ ಆಗಿದೆ. ಈ ಕೃತಿಯಲ್ಲಿ ಡಾ. ಕಲಾಂ ಅವರು ತಮ್ಮ ಜೀವನದ ಮುಖ್ಯ ಘಟನೆಗಳನ್ನು, ಅವು ಚಿಕ್ಕವಿದ್ದರೂ, ಅವಲೋಕಿಸಿ ಅವು ಪ್ರತಿಯೊಂದೂ ಹೇಗೆ ತಮಗೆ ಗಾಢವಾದ ಪ್ರೇರಣೆ ಒದಗಿಸಿತೆಂಬುದನ್ನು ಓದುಗರಿಗೆ ತಿಳಿಸುತ್ತಾರೆ; ತಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ವ್ಯಕ್ತಿಗಳ ಬಗ್ಗೆ ಬೆಚ್ಚನೆಯ ಅಕ್ಕರೆಯಿಂದ ಮಾತನಾಡಿದ್ದಾರೆ; ಅಂತಹ ಮಹನೀಯರ ಸಂಗದಲ್ಲಿ ತಾವು ಕಲಿತ ಪಾಠಗಳೇನೆಂದು ತಿಳಿಸಿದ್ದಾರೆ; ಗಾಢವಾದ ದೈವಭಕ್ತಿಯ ತಂದೆ, ಕರುಣಾಳು ತಾಯಿ, ತಮ್ಮ ವಿಚಾರಗಳನ್ನೂ ಜೀವನ ದೃಷ್ಟಿಯನ್ನೂ ರೂಪಿಸಿದ ಮಾರ್ಗದರ್ಶಿಗಳು - ಇಂತಹ ತನ್ನ ಸಮೀಪವರ್ತಿಗಳ ಆಪ್ತ ಚಿತ್ರಣವೊಂದನ್ನು ಬಿಡಿಸಿಟ್ಟಿದ್ದಾರೆ.\u003cbr\u003e\u003cbr\u003eಬಂಗಾಳ ಕೊಲ್ಲಿಯ ತೀರದ ಸಣ್ಣಪಟ್ಟಣವೊಂದರಲ್ಲಿ ಬಾಲ್ಯವನ್ನು ಕಳೆದು, ಒಬ್ಬ ವಿಜ್ಞಾನಿಯಾಗುವ ಹಾಗೂ ನಂತರ ನಾಡಿನ ರಾಷ್ಟ್ರಪತಿಯಾಗುವ ಮಾರ್ಗದಲ್ಲಿನ ಹೋರಾಟಗಳ ಹಾಗೂ ತ್ಯಾಗಗಳ ಹೃದಯಸ್ಪರ್ಶಿ ಕಥನ ಇಲ್ಲಿದೆ.\u003cbr\u003e\u003cbr\u003eಭಾವುಕವೂ ಪ್ರಾಮಾಣಿಕವೂ ತೀರಾ ವೈಯಕ್ತಿಕವೂ ಆಗಿರುವ ನನ್ನ ಪಯಣ ಒಂದು ಅಪರೂಪದ ಅಂತೆಯೇ ಸಮೃದ್ಧ ಬದುಕಿನ ಮನೋಜ್ಞ ಕಥೆಯಾಗಿದೆ; ಹಾಗೆಯೇ ಮಕ್ಕಳಿಗೆ ಹಾಗೂ ಯುವಜನತೆಗೆ ಮಾರ್ಗದರ್ಶನ ಒದಗಿಸುವ ಕಥೆಯಾಗಿಯೂ ಮೈದಾಳಿದೆ.","brand":"G. K. Madhyastha | A. P. J Abdul Kalam","offers":[{"title":"1st Edition","offer_id":48193195016451,"sku":"HB00000799","price":150.0,"currency_code":"INR","in_stock":true},{"title":"Fourth Edition","offer_id":48193238302979,"sku":"HB00007129","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at11.03.43AM_4.jpg?v=1637993896"},{"product_id":"drambedkar-vyakti-mattu-vichara","title":"ಡಾ. ಅಂಬೇಡ್ಕರ್-ವ್ಯಕ್ತಿ ಮತ್ತು ವಿಚಾರ","description":"ಡಾ. ಅಂಬೇಡ್ಕರರ ಜೀವನ ಚರಿತ್ರೆ ಬದುಕಿನುದ್ದಕ್ಕೂ ಅವರು ನಡೆಸಬೇಕಾಗಿಬಂದ ಒಂದು ಅವಿಶ್ರಾಂತ ಹೋರಾಟದ ಕಥೆ. ಈ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೆ ಇಡೀ ಒಂದು ಜನವರ್ಗದ ಉನ್ನತಿಗಾಗಿ ನಡೆಸಿದ್ದು, ಹಿಂದು ಸಮಾಜದಲ್ಲಿ ಅಸ್ಪಶ್ಯವೆನಿಸಿಕೊಂಡ ಜನವರ್ಗದಲ್ಲಿ ಜನ್ಮತಾಳಿದ ಅವರು ಅದಕ್ಕೆ ಅಂಟಿಕೊಂಡು ಶತಮಾನಗಳಾಚೆಯಿಂದ ಬೆಳೆದುಬಂದಿದ್ದ ನೂರು ನಿರ್ಬಂಧಗಳ ಕಷ್ಟಗಳನ್ನು, ಅವಮಾನಗಳನ್ನು ಸಹಿಸಿಕೊಂಡು, ಯಾವ ಅನುಕೂಲ ಅವಕಾಶಗಳು ಇಲ್ಲದಿದ್ದರೂ ಅಖಂಡವಾದ ಸ್ವಪರಿಶ್ರಮದಿಂದ ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆಂದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಒಬ್ಬ ಅಸಾಮಾನ್ಯ ವಿಚಾರವಾದಿಯೆಂದು ಲೋಕವಿಖ್ಯಾತರಾದರು. ಸ್ವತಂತ್ರ ಭಾರತದ ಸಂವಿಧಾನವನ್ನೇ ಬರೆದು ಅಭಿನವ ಮನು ಎಂಬ ಮನ್ನಣೆ ಪಡೆದರು. ಅವರ ಜೀವನ ಸಿದ್ಧಿ ಈ ಶತಮಾನದಲ್ಲಿ ನಡೆದ ಒಂದು ಅದ್ವಿತೀಯ ಪವಾಡದಂತಿದೆ.\u003cbr\u003e\u003cbr\u003eಡಾ. ಅಂಬೇಡ್ಕರರ ಬದುಕು ಮತ್ತು ವಿಚಾರಗಳನ್ನು ಉತ್ಕೃಷ್ಟವಾಗಿ ಚಿತ್ರಿಸಿರುವ ಈ ಜೀವನ ಚರಿತ್ರೆ ಕಾದಂಬರಿಕಾರ ವಿ.ಎಂ. ಇನಾಂದಾರರ ಲೇಖನಿಯಿಂದ ಹೊರಬಿದ್ದ ಒಂದು ಕಾದಂಬರಿಯಂತೆಯೇ ರೋಚಕವಾಗಿದೆ.","brand":"V. M. Inamdaar","offers":[{"title":"Default Title","offer_id":42113250394371,"sku":"HB00000797","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at11.03.44AM.jpg?v=1637994250"},{"product_id":"bmshrikantayya-beechanahalli","title":"ಬಿ. ಎಂ. ಶ್ರೀಕಂಠಯ್ಯ","description":"ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೂ ಕನ್ನಡದ ಹೆಸರಾಂತ ಕತೆಗಾರರೂ ಆದ ಡಾ. ಕರೀಗೌಡ ಬೀಚನಹಳ್ಳಿ ಅವರು ಕನ್ನಡ ನಾಡಿನ ಹಿರಿಯ ಹಾಗೂ ನವೋದಯದ ಲೇಖಕರಾದ ಬಿ.ಎಂ. ಶ್ರೀಕಂಠಯ್ಯನವರ ಜೀವನ, ಸಾಧನೆ ಹಾಗೂ ಅವರ ಸಾಹಿತ್ಯವನ್ನು ಕುರಿತು ಈ ಕೃತಿಯಲ್ಲಿ ಸಮಗ್ರವಾಗಿ ಅವಲೋಕಿಸಿ ಸಮರ್ಥವಾಗಿ ವಿಶ್ಲೇಷಣೆ ಮಾಡಿದ್ದಾರೆ. ಶ್ರೀಯವರ ಸ್ವತಂತ್ರ ಕವನಗಳ ಮತ್ತು ಅನುವಾದಿತ ಕವನಗಳ ವಸ್ತು, ಉದ್ದೇಶ, ಭಾಷಾಶೈಲಿ ಕುರಿತಂತೆ ಬರೆದಿರುವ ಕರೀಗೌಡ ಬೀಚನಹಳ್ಳಿ ಅವರ ಈ ಬರವಣಿಗೆ ತುಂಬಾ ಆಕರ್ಷಕವಾಗಿದೆ. ಇಲ್ಲಿ ಶ್ರೀಯವರ ನಾಟಕಗಳ ಬಗ್ಗೆಯೂ ವಿವರವಾಗಿ, ವಸ್ತುನಿಷ್ಠವಾಗಿ ವಿವೇಚಿಸಿದ್ದಾರೆ. ಶ್ರೀ ಅವರು ಕನ್ನಡ ಕಟ್ಟುವುದಕ್ಕೆ ಸಂಬಂಧಿಸಿದಂತೆ ಚಿಂತನೆ ನಡೆಸಿದ ವಿಚಾರಗಳನ್ನು ತಾತ್ವಿಕವಾಗಿ ಹಾಗೂ ಆನ್ವಯಿಕವಾಗಿ ಇಲ್ಲಿ ಕರೀಗೌಡರು ಪರಿಶೀಲಿಸಿ ಚರ್ಚಿಸಿರುವುದು ಗಮನಾರ್ಹವಾಗಿದೆ.\u003cbr\u003e\u003cbr\u003eಶ್ರೀಯವರು ಕನ್ನಡ ನಾಡು, ನುಡಿ, ಸಂಸ್ಕೃತಿಗೆ ನೀಡಿದ ಕಾಣಿಕೆಗಳನ್ನು ಕುರಿತು ಬೀಚನಹಳ್ಳಿ ಅವರು ಆಪ್ತವಾಗಿ ವ್ಯಾಖ್ಯಾನಿಸಿದ್ದಾರೆ. ಶ್ರೀ ಅವರು ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕನ್ನಡ ಛಂದಸ್ಸಿನ ಬಗ್ಗೆ ಬರೆದಂತಹ ಬರಹಗಳನ್ನು ಕುರಿತು ಇಲ್ಲಿ ವಿವರಿಸಲಾಗಿದೆ. ಒಟ್ಟಾರೆ ಬಿಎಂಶ್ರೀ ಅವರನ್ನು ಕುರಿತಾದ ಈ ಕೃತಿ ತುಂಬಾ ಮೌಲಿಕ ಹಾಗೂ ಪರಿಣಾಮಕಾರಿ ಯಾಗಿರುವುದು ಪ್ರಶಂಸನೀಯವಾಗಿದೆ. ಇಂತಹ ಉಪಾದೇಯವಾದ ಕಾರ್ಯವನ್ನು ಮಾಡಿಕೊಟ್ಟ ಡಾ. ಕರೀಗೌಡ ಬೀಚನಹಳ್ಳಿ ಅವರನ್ನು ಮನಸಾರೆ ಅಭಿನಂದಿಸುತ್ತೇನೆ.\u003cbr\u003e\u003cbr\u003e← ಪ್ರೊ. ಹಿ.ಚಿ. ಬೋರಲಿಂಗಯ್ಯ","brand":"Dr. Karigowda Beechanahalli","offers":[{"title":"Default Title","offer_id":42113614020867,"sku":"HB00000766","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.42PM_2.jpg?v=1638006944"},{"product_id":"deha-kriyeya-sojigagalu-vasantha","title":"ದೇಹ ಕ್ರಿಯೆಯ ಸೋಜಿಗಗಳು","description":"\u003cp\u003eಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹಮ್ಮೆಯಿದ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವ ಪ್ರಶ್ನೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.\u003cbr\u003e\u003cbr\u003eವಿಜ್ಞಾನ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ನಾವು ನಮ್ಮ ಜನರಿಗೆ ವೈಜ್ಞಾನಿಕ ಮನೋಭಾವ ಮತ್ತು ತಿಳುವಳಿಕೆಯನ್ನು ನೀಡುವಲ್ಲಿ ಸೋತಿದ್ದೇವೆ. ನಮ್ಮ ದೇಹದ ಕುರಿತಂತೆಯೇ ನಮಗೆ ಅರಿವಿಲ್ಲ. ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳ ಕುರಿತ ಹಾಗೇ ಹಲವಾರು ಮೂಢನಂಬಿಕೆಗಳಿವೆ. ದೇಹದ ಎಡಭಾಗದ ಬಗ್ಗೆ ಇರುವ ಜನಸಾಮಾನ್ಯರ ನಂಬಿಕೆಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂತಹ ಹೊತ್ತಿನಲ್ಲಿ ದೇಹ ಸಮ್ಮಂದಿ ನಂಬಿಕೆಗಳನ್ನು ವಿಜ್ಞಾನದ ಒರೆಗಲ್ಲಿಗೆ ಹಚ್ಚಬೇಕು. ದೇಹದ ನಾನಾ ಅಂಗಗಳ ಕುರಿತು ವೈಜ್ಞಾನಿಕ ಅರಿವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಸರಳವಾದ ಭಾಷೆಯಲ್ಲಿ ಹೇಳಬೇಕಾಗುತ್ತದೆ. ಡಾ. ವಸಂತ ಕುಲಕರ್ಣಿಯವರು ನಮ್ಮ ದೇಹದೊಳಗಿನ ಅಂಗಾಂಗಗಳ ಅದ್ಭುತ ಲೋಕದ ಬಗ್ಗೆ ಸರಳವಾಗಿ ಪರಿಚಯಿಸಿರುವರು. ಹೃದಯ ಮೆದುಳುಗಳ ಬಗ್ಗೆ ಭಾವನಾತ್ಮಕ ನಂಬಿಕೆಗಳಿವೆ. ವೈಜ್ಞಾನಿಕವಾಗಿ ಅವುಗಳ ಪರಿಚಯವೇ ಇಲ್ಲ. ವೈಜ್ಞಾನಿಕ ಅರಿವನ್ನು ಆದರದೇ ಪರಿಭಾಷೆಯಲ್ಲಿ ಸರಳವಾಗಿ ಬರೆಯುವುದರ ಮೂಲಕ ಈ ಅದ್ಭುತ ಲೋಕದ ಪರಿಚಯ ಮಾಡಿಸಿದ ಡಾ. ವಸಂತ ಕುಲಕರ್ಣಿಯವರಿಗೆ ಅಭಿನಂದನೆಗಳು.\u003cbr\u003e\u003c\/p\u003e\n\u003cp\u003eಡಾ. ಮಲ್ಲಿಕಾ ಎಸ್. ಘಂಟಿ\u003c\/p\u003e","brand":"Dr. Vasanth A. Kulakarna","offers":[{"title":"Default Title","offer_id":42113629978883,"sku":"HB00000763","price":30.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.44PM.jpg?v=1638007324"},{"product_id":"taragatigalalli-kuvempu-biography-dr-s-m-vrushabhendraswami-kannada-book","title":"ತರಗತಿಗಳಲ್ಲಿ ಕುವೆಂಪು (ತೌಲನಿಕ ಕಾವ್ಯಮೀಮಾಂಸೆ)","description":"\u003cp\u003eಕುವೆಂಪುರವರ ಕಾವ್ಯಚಿಂತನೆ ಎಂದರೆ ಜಗತ್ತಿನ ಮಹಾ ಪ್ರತಿಭೆಗಳ ಮೂಲಮಾನದಲ್ಲಿ ನಡೆಯುವ ಒಂದು ರಸಯಾತ್ರೆಯೇ ಸರಿ. ಹೀಗಾಗಿ ಕುವೆಂಪು ಏಕಕಾಲಕ್ಕೆ ಮಹತ್ವದ ಕವಿಯಾಗಿರುವಂತೆ, ಮಹತ್ವದ ಚಿಂತಕರೂ ಆಗಿದ್ದಾರೆ.\u003c\/p\u003e\n\u003cp\u003eಭಾರತೀಯ ಕಾವ್ಯಮೀಮಾಂಸೆಯ ಎಷ್ಟೋ ಸಾಹಿತ್ಯ ತತ್ವಗಳನ್ನು ತಮ್ಮ ಸೃಜನಶೀಲ ಚಿಂತನೆಯಲ್ಲಿ ಮರು ವ್ಯಾಖ್ಯಾನಕ್ಕೆ ಗುರಿಪಡಿಸುವ ಕೌಶಲ, ಪಶ್ಚಿಮದ ಕಾವ್ಯಮಿಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯ ಪರಿಕಲ್ಪನೆಗಳನ್ನು ಕನ್ನಡದಲ್ಲಿ ಪುನರ್ಭವಗೊಳಿಸಿ, ಸಂವಾದಿ ಪರಿಭಾಷೆಗಳನ್ನು ರೂಪಿಸಿ ನಮ್ಮ ಸಾಹಿತ್ಯದ ಅರ್ಥವಂತಿಕೆಗೆ ಬಳಸುವ ಕ್ರಮ, ಕುವೆಂಪು ಕಾವ್ಯ ಚಿಂತನೆಯ ವೈಶಿಷ್ಟ್ಯಗಳಾಗಿವೆ. \u003c\/p\u003e","brand":"Dr. S. M. Vrushabhendraswami","offers":[{"title":"Default Title","offer_id":42113940685059,"sku":"HB00000728","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at5.41.05PM.jpg?v=1638017932"},{"product_id":"mugiyadirali-bandhana-sadashiv-shenoy","title":"ಮುಗಿಯದಿರಲಿ ಬಂಧನ","description":"\u003cp\u003eಸಿನಿಮಾ ನಾನು ಬಾಲ್ಯದಿಂದಲೂ ಸದಾ ಸಂಬಂಧ ಬೆಳೆಸಿಕೊಂಡ ಮಾಧ್ಯಮ ಅಮ್ಮನ ಜೊತೆಯಲ್ಲಿ ಸಿನಿಮಾಗಳಿಗೆ ನಾನು ಸದಾ ಹೋಗುತ್ತಿದ್ದ ಹಾಗೂ ಇದೊಂದೇ ರೀತಿಯಲ್ಲಿ ನಾನು ಸಿನಿಮಾಗಳನ್ನು ನೋಡುತ್ತಿದ್ದದ್ದೂ ಸಹ. ಅಮ್ಮ ನನ್ನನ್ನು ಕರೆದುಕೊಂಡು ಹೋದ ಸಿನಿಮಾಗಳ ಪೈಕಿ ಒಬ್ಬ ನಟ ನನ್ನ ಗಮನವನ್ನು ಸೆಳೆದರು. ಸ್ಪುರದ್ರೂಪಿ ವ್ಯಕ್ತಿ, ಆತನ ಮಾಂತ್ರಿಕ ಕಣ್ಣುಗಳು ಹಾಗೂ ಅದ್ಭುತ ಹೊಡೆದಾಟದ ದೃಶ್ಯಗಳಲ್ಲಿ ಬೆರಗುಂಟು ಮಾಡುತ್ತಿದ್ದ ನಟ. ಆ ದಿನಗಳಲ್ಲಿ ಅಂತಹ ದೃಶ್ಯಗಳು ಎಲ್ಲ ಮಕ್ಕಳನ್ನು ಆಕರ್ಷಿಸುತ್ತಿದ್ದವು. ನಾನೂ ಕೂಡಾ ಅದಕ್ಕೆ ಹೊರತಾಗಿರಲಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಾನು ಬೆಳೆದಂತೆ ಈ ಸಭ್ಯ ನಟನ ಬಗ್ಗೆ ನನಗಿದ್ದ ಆಕರ್ಷಣೆಯು ಅಭಿಮಾನವಾಗಿ ಬದಲಾಗುತ್ತಾ ಹೋಯಿತು. ಅವರು ನನಗೆ ಒಂಥರಾ ಆರಾಧ್ಯ ದೈವವಾದರು. ನಾನು ಅವರ ಚಿತ್ರಗಳನ್ನು ಎಂದೂ ನೋಡದೆ ಬಿಡುತ್ತಿರಲಿಲ್ಲ. ಅವರನ್ನು ಭೇಟಿಯಾಗುವ ಯಾವ ಅವಕಾಶವನ್ನು ನಾನು ಕಳೆದುಕೊಳ್ಳಲಿಲ್ಲ. ನಾನೂ ಬೆಳೆದು ಒಬ್ಬ ನಟನಾದೆ. ಅವರ ಬಗ್ಗೆ ಇದ್ದ ಆರಾಧ್ಯ ಭಾವನೆ ಅಪಾರ ಗೌರವವಾಗಿ ಮಾರ್ಪಟ್ಟಿತು. ಅವರೊಂದಿಗೆ ಹೆಚ್ಚು ಸಮಯ ಕಳೆಯುವ ಮತ್ತು ಅವರನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳುವ ಅವಕಾಶಗಳನ್ನು ಒದಗಿಸುವ ಸನ್ನಿವೇಶಗಳು ಸುದೈವದಿಂದ ಸೃಷ್ಟಿಯಾದವು. ಅವರು ನಮ್ರತೆ, ಶಾಂತಸ್ವಭಾವ ಮತ್ತು ಮಾನವೀಯತೆಯ ಸಾಕಾರಮೂರ್ತಿಯಾಗಿದ್ದರು. ನೀವೊಮ್ಮೆ ಅವರ ಸ್ನೇಹಲೋಕ ಪ್ರವೇಶಿಸಿದರೆ, ನೀವು ವಾಪಸ್ ಬರಲು ಸಾಧ್ಯವೇ ಇಲ್ಲ. ಇವತ್ತಿಗೂ ಅವರು ನನಗೆ ಒಂದು ವ್ಯಸನ, ನಾನು ತೀವ್ರವಾಗಿ ಮಿಸ್ ಮಾಡಿಕೊಳ್ಳುವ ವ್ಯಸನ ಅವರ ಹೆಸರಿನ ಹಚ್ಚೆ ನನ್ನ ಮೈಮೇಲೆ ಕಾಣಿಸಿಕೊಂಡಿಲ್ಲದಿರಬಹುದು. ಅವರಿಗೆ ನಾನು ಏನೂ ಕೊಡುಗೆ ನೀಡಿಲ್ಲದೆ ಇರಬಹುದು. ನಾನು ಯಃಕಶ್ಚಿತ್ ಮನುಷ್ಯನಾಗಿರಬಹುದು. ಆದರೂ ನಾನು ಸದಾ ಅವರನ್ನು ಪ್ರಶ೦ಸಿಸುವ, ಅನುಸರಿಸುವ, ಆರಾಧಿಸುವ ಅಭಿಮಾನಿಯಾಗಿದ್ದೇನೆ. ವಿಷ್ಣು ಸರ್, ನಾನು ನಿಮ್ಮನ್ನು ಆಧರಿಸುತ್ತೇನೆ. ನಿಮ್ಮ ಜೀವನದಲ್ಲಿ ನನಗೊಂದಿಷ್ಟು ಸ್ಥಳ ಕೊಟ್ಟಿದ್ದಕ್ಕಾಗಿ ಹಾಗೂ ನಾನು ನಿಮ್ಮನ್ನು ಪ್ರತಿ ಬಾರಿ ಭೇಟಿಯಾದಾಗಲೂ ನನ್ನ ಮೇಲೆ ಪ್ರೀತಿಯ ಮಳೆಗರೆದಿದ್ದಕ್ಕಾಗಿ ನಿಮಗೆ ಧನ್ಯವಾದಗಳು, ಮೈಕ್‌ನಲ್ಲಿ 'ಆಕ್ಷನ್' ಎಂದು ಕರೆಯುವ ಅವಕಾಶವನ್ನು ನನಗೆ ಕೊಟ್ಟಿದ್ದಕ್ಕಾಗಿ ನಾನು ನಿಮಗೆ ಋಣಿ. ಏಕೆಂದರೆ \"ನಾನು, ಕಿಚ್ಚ ಒಬ್ಬ ದಿಗ್ಗಜನನ್ನು ನಿರ್ದೇಶನ ಮಾಡಿದ್ದೇನೆ\" ಯಾವತ್ತಿಗೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಅವಕಾಶವದು.\u003cbr data-mce-fragment=\"1\"\u003e\u003cbr data-mce-fragment=\"1\"\u003eನೆನಪಿಡಿ : ಇತರರ ಹೃದಯಗಳಲ್ಲಿ ನೆಲೆಸುವ ವ್ಯಕ್ತಿ ಯಾವತ್ತಿಗೂ ಅಮರ, ದಿಗ್ಗಜ ಮತ್ತು ಅದಕ್ಕೂ ದೊಡ್ಡ ಪ್ರಭಾವಳಿ ಹೊಂದಿದ ವ್ಯಕ್ತಿತ್ವವನ್ನು ಕೃತಿ ರೂಪಕ್ಕೆ ಇಳಿಸುವುದೇ ಕಷ್ಟ, ಆ ದಿಗ್ಗಜ ಹೇಳಿದ್ದನ್ನೇ ಬರೆಯುವುದು ಇನ್ನೂ ಪ್ರಯಾಸದ ಕೆಲಸ. ಕೇವಲ ಮನಸ್ಸಿನಿಂದ ಮಾತನಾಡುವವರು ಮಾತ್ರ ಈ ದಿಗ್ಗಜನ ವ್ಯಕ್ತಿತ್ವವನ್ನು ವರ್ಣಿಸುವಂತಹ ಸಾಲುಗಳನ್ನು ಬರೆಯಲು ಸಾಧ್ಯ. ಸರಳವಾಗಿ ಹೇಳಬೇಕೆಂದರೆ, ಒಬ್ಬ ಒಳ್ಳೆಯ ವ್ಯಕ್ತಿ ಮಾತ್ರ ಒಬ್ಬ ಮಹಾನ್ ವ್ಯಕ್ತಿ ಬಗ್ಗೆ ಬರೆಯಬಲ್ಲ. ಶೆಣೈ ಸರ್, ನಿಮಗೆ ನನ್ನ ಗೌರವ ಮತ್ತು ಶುಭಾಶಯಗಳು\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರೀತಿಯಿಂದ\u003c\/p\u003e\n\u003cp\u003eಕಿಚ್ಚ\u003c\/p\u003e","brand":"Sadashiva Shenoy","offers":[{"title":"Default Title","offer_id":42116162879747,"sku":"HB00000654","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at5.10.28PM.jpg?v=1638099832"},{"product_id":"ambarish-sharanu-hunnur-sawanna","title":"ಅಂಬರೀಶ","description":"ನಟ ಅಂದರೆ ನಟನಲ್ಲ. ರಾಜಕಾರಣಿ ಅಂದರೆ ರಾಜಕಾರಣಿ ಅಲ್ಲ, ಅಹಂಕಾರಿ ಅಲ್ಲ, ಸ್ಟಾರ್ ಅಲ್ಲ, ಸೋಮಾರಿ ಅಲ್ಲ, ಸಮಯ ಪಾಲಕ ಅಲ್ಲ, ಮಹತ್ವಾಕಾಂಕ್ಷಿ ಮೊದಲೇ ಅಲ್ಲ. ಗೆಲ್ಲಬೇಕು ಅಂತ ಹೊರಡಲಿಲ್ಲ. ನಿಲ್ಲಬೇಕು ಅಂತ ಹೋರಾಡಲೂ ಇಲ್ಲ,\u003cbr data-mce-fragment=\"1\"\u003e\u003cbr data-mce-fragment=\"1\"\u003eowenge wart... Most reluctant actor. More reluctant politician. ಪಾಲಿಗೆ ಬಂದದ್ದು ಪರಮ ಸುಖ ಅಂತ ಇದ್ದು ಬಿಟ್ಟ ಸಂತ, ಯಾರ ತಾಳಕ್ಕೂ ಕುಣಿಯದ ನಿಶ್ಚಿಂತ. ಮಾತಿಗೆ ಅಂಕುಶ ಇರಲಿಲ್ಲ. ನಡೆ ನುಡಿಯ ನಡುವೆ ಅಂತರ ಇರಲಿಲ್ಲ. ಸೋತ ಬೇಸರ, ಗೆದ್ದ ಅಹಂಕಾರ ಎರಡೂ ಇರಲಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅವರ ಬಗ್ಗೆ ಯಾರೂ ಬರೆಯಲಿಲ್ಲ. ಏನು ಬರೆಯಬೇಕು ಅಂತ ಯಾರಿಗೆ ತಾನೇ ಗೊತ್ತಿತ್ತು. ಅವರು ಹೀಗೆ ಅಂತ ಯಾರಾದರೂ ಬರೆದರೆ ತಾನು ಹಾಗಲ್ಲ ಅಂತ ಮರುಕ್ಷಣವೇ ಸಾಬೀತು ಮಾಡುತ್ತಿದ್ದ ಕ್ಷಣ ಕ್ಷಣದ ಅಮರನಾಥ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈಗ ಗೆಳೆಯ ಶರಣು ಹುಲ್ಲೂರು ಅವರ ಕುರಿತು ಕುಂದಿಲ್ಲದೆ ಬರೆದು ಅವರ ನೆನೆದಿದ್ದಾರೆ. ಇದು ಅಂಬರೀಶ್ ಕುರಿತ ಮೊದಲ ಪುಸ್ತಕ ಅಲ್ಲದೇ ಇರಬಹುದು. ಆದರೆ ಅಂಬರೀಶ್ ಅಂತಸ್ಫೂರ್ತಿಯನ್ನು ಯಥಾವತ್ತು ಹಿಡಿದಿಡಲು ಅಚ್ಚುಕಟ್ಟಾಗಿ ಹವಣಿಸಿದ ಮೊತ್ತ ಮೊದಲ ಕೃತಿ. ಶರಣು ಹುಲ್ಲೂರು ಇದನ್ನು ಬರೆದು ನಮ್ಮೆಲ್ಲರ guilt ಕಮ್ಮಿ ಮಾಡಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜೋಗಿ","brand":"Dr. Sharanu Hulluru","offers":[{"title":"Default Title","offer_id":42116295033091,"sku":"HB00000643","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at5.49.02PM.jpg?v=1638102164"},{"product_id":"bilisaahebana-bharata-jagadish-koppa","title":"ಬಿಳಿ ಸಾಹೇಬನ ಭಾರತ","description":"ಜಗತ್ ಪ್ರಸಿದ್ಧ ಬೇಟೆಗಾರ ಜಮ್ ಕಾರ್ಬೆಟ್‌ನ ಬದುಕು, ಬಾಲ್ಯ, ಆತ ಕಂಡ ಭಾರತದ ಬಡತನ, ಭಾರತದ ಜನಸಾಮಾನ್ಯರ ಬಗ್ಗೆ, ಗ್ರಾಮೀಣ ಬದುಕಿನ ಬಗ್ಗೆ ಆತನಿಗಿದ್ದ ಅನನ್ಯ ಪ್ರೀತಿ ಹಾಗೂ ಅರಣ್ಯ ಪ್ರಾಣಿ ಜಗತ್ತು, ಪರಿಸರದ ಸೂಕ್ಷ್ಮತೆಗಳನ್ನು ಕುರಿತಂತೆ ಆತನಿಗಿದ್ದ ಅಪಾರ ಜ್ಞಾನವನ್ನು ಪರಿಚಯಿಸುವ ಕೆಲಸ ಇಲ್ಲ ನಡೆದಿದೆ. ಲೇಖಕರು ಜಿಮ್ ಕಾರ್ಬೆಟ್ ನೆಲೆಸಿದ ಉತ್ತರಾಂಚಲದ ಪ್ರದೇಶಗಳಲ್ಲಿ ಸುತ್ತಾಡಿ ಸಂಗ್ರಹಿಸಿದ ಮಾಹಿತಿಯ ಫಲಶೃತಿಯಾಗಿ ಈ ಕೃತಿ ರೂಪುಗೊಂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಕೆ. ಆರ್. ಸಂಧ್ಯಾರೆಡ್ಡಿ, ಬೆಂಗಳೂರು,","brand":"Dr. N. Jagadish Koppa","offers":[{"title":"Default Title","offer_id":42118427574531,"sku":"HB00000628","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at11.19.22AM.jpg?v=1638164992"},{"product_id":"solisabeda-gelisayya-monohara","title":"ಸೋಲಿಸಬೇಡ ಗೆಲಿಸಯ್ಯ","description":"\"ನನ್ನ ಬದುಕಿಗೆ ನಾನಾ ದಿಕ್ಕುಗಳಿವೆ. ಇದರಲ್ಲಿ ಯಾವದೇ ದಿಕ್ಕು ಸುಗಮವಾದುದಲ್ಲ. ಯಾವ ದಿಕ್ಕಿನಿಂದ - ಶುರು ಮಾಡಬೇಕೆಂದು ತಿಳಿಯುತ್ತಿಲ್ಲ. ಆತ್ಮಚರಿತ್ರೆ ಬರೆಯಬೇಕಾಗಿ ಬಂದಾಗ ಬಾಲ್ಯದಿಂದಲೇ ಏಕೆ ಶುರು ಮಾಡಬೇಕು? ಯಾವುದೋ ಒಂದು ಮಹತ್ವದ ಘಟನೆ ಅಥವಾ ದುರ್ಘಟನೆಯಿಂದಲೇ ಏಕಾಗಬಾರದು?\u003cbr data-mce-fragment=\"1\"\u003e\u003cbr data-mce-fragment=\"1\"\u003eಜೀವನ ನಿಂತ ನೀರಾದಾಗ ಅದು ಬದುಕೇ ಅಲ್ಲ. ಸದಾ ಹರಿಯುತ್ತಲೇ ಇರಬೇಕು. ಈ ಹರಿಯುವ ನದಿಯಲ್ಲಿ ಏರಿಳಿತಗಳು ಅನೇಕ. ಈ ಏರಿಳಿತಗಳಲ್ಲಿ ಮುಳುಗಿ ಎದ್ದು, ದಡ ಸೇರಬೇಕಾಗಿ ಬಂದಂಥ ಒಂದು ಆಗಿ ಪರೀಕ್ಷೆ ನಮ್ಮ ಜೀವನದಲ್ಲಿ ನಡೆದುಹೋಯಿತು. ದುರ್ಘಟನೆ ನಡೆದದ್ದು ಕಾರಂತರ ಜೀವನದಲ್ಲಿ. ಕಾರಂತರ ಜೀವನ ನನ್ನ ಜೀವನವೇ ಅಲ್ಲವೆ? ಆ ದುರ್ಘಟನೆಯ ಪ್ರಭಾವ ನನ್ನ ಬದುಕಿನ ಮೇಲೆ ಬೀರಿದ ಪರಿಣಾಮ ಭಯಂಕರವಾದದ್ದು. ನಮ್ಮಿಬ್ಬರ ಜೀವನವನ್ನೇ ಆಲುಗಾಡಿಸಿದಂಥ ದುರ್ಘಟನ ರಾಷ್ಟ್ರೀಯ ಮಟ್ಟದಲ್ಲಿ ಜನಜನಿತವಾಗಿ ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಆಕಾರ ಪಡೆಯುತ್ತಾ ಹೋಯಿತು. ಆದರೆ ಬೇರೆ ಎಲ್ಲರ ದೃಷ್ಟಿಯಲ್ಲಿ ಸತ್ಯಾಸತ್ಯ 'ಗಳಿಗಿಂತ ಕಟ್ಟುಕಥೆಗಳೇ ಜಾಸ್ತಿಯಾಗಿದ್ದವು. ಆದರೆ ನಡೆದ ಘಟನೆಗಳನ್ನೆಲ್ಲಾ ನನ್ನ ಕಣ್ಣಿನಿಂದಲೇ ನೋಡಿರುವುದರಿಂದ, ನನ್ನ ದೃಷ್ಟಿಕೋನ ಕಟುಸತ್ಯಗಳಿಂದ ಕೂಡಿರುತ್ತೆ ಎಂದುಕೊಂಡಿರುತ್ತೇನೆ...\"\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರೇಮಾ ಕಾರಂತ","brand":"Prema Karantha","offers":[{"title":"Default Title","offer_id":42118804111619,"sku":"HB00000620","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.22.19PM.jpg?v=1638169022"},{"product_id":"kannamuchche-kaadegoode-manoahara","title":"ಕಣ್ಣಾ ಮುಚ್ಚೇ... ಕಾಡೇ ಗೂಡೇ...","description":"\u003cp\u003eಪದ್ಮಶ್ರೀ ಡಾ. ಬಿ. ಜಯಶ್ರೀ ಈ ನಾಡು ಕಂಡ ಅಸಾಧಾರಣ ಕಲಾವಿದೆ ಆಕೆಯ ಕರೆ ಪರಂಪರಾಗತವಾಗಿ ಬಂದದ್ದು, ಅವರಿಗಿದು ಸಹಜ ಎಂದರಷ್ಟೇ ಸಾಕೆ? ಪ್ರತಿಭೆ ಪಾರಂಪರಿಕವೋ, ಅಭಿಜಾತವೋ ಯಾವುದೇ ಆದರೂ ಅದೊಂದು ಹೊಸ ದಿಕ್ಕನ್ನು ಶೋಧಿಸಬಯಸುತ್ತದೆ; ತನ್ನತನವನ್ನು ಕಂಡುಕೊಳ್ಳಲು ತುಡಿಯುತ್ತದೆ. ಆದೂ ಒಂದು ಹೆಣ್ಣು ಮಗುವಾದಾಗ ಅದಾಗಲೇ ಸ್ಥಾಪಿತ ಮೌಲ್ಯಗಳನ್ನು ಹೆಣೆದು ಹೊರಿಸಿರುವ ಸಾಮಾಜಿಕ ನಡಾವಳಿಯನ್ನು ಮೀರಿ ಅಸ್ಥಿತಿಯನ್ನು ಕಂಡುಕೊಳ್ಳುವಾಗಿನ ಅವಸ್ಥಾಂತರಗಳು, ಅಡೆತಡೆಗಳು ಸಾಧಾರಣವೂ ಅಲ್ಲ, ಸುಲಭದಲ್ಲಿ ದಾಟಿ ಕೊಳ್ಳುವಂಥವೂ ಅಲ್ಲ. ಸ್ಥಾಪಿತ ಹಿತಾಸಕ್ತಿಗಳ ಮನೋವಿನ್ಯಾಸ ಹೆಣ್ಣಿನ ಅಭಿವ್ಯಕ್ತಿಗೆ ತೊಡಕುಗಳಾಗುತ್ತವೆ ಎಂಬುದು ಅಭಿವ್ಯಕ್ತಿ ಬಿಡುಗಡೆಯ ದಾರಿ ಎಂದು ಭಾವಿಸಿರುವವರ ಅಭಿಪ್ರಾಯ, ಅಭಿವ್ಯಕ್ತಿಯೇ ಬದುಕಾದ ಹೆಣ್ಣುಮಗು ಈ ಮಾತನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದು ಜಿಜ್ಞಾಸ\u003c\/p\u003e\n\u003cp\u003e- ವಿಜಯಾ\u003c\/p\u003e","brand":"Preethi Nagraj","offers":[{"title":"Default Title","offer_id":42118831505667,"sku":"HB00000617","price":320.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at12.35.58PM.jpg?v=1638169819"},{"product_id":"bismilla-khan-jagadeesh-koppa","title":"ಬಿಸ್ಮಿಲ್ಲಾ ಖಾನ್","description":"","brand":"Dr. N. Jagadish Koppa","offers":[{"title":"Default Title","offer_id":42118869057795,"sku":"HB00000607","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at1.06.35PM.jpg?v=1638171542"},{"product_id":"jogi-reader-kannada-book","title":"ಜೋಗಿ ರೀಡರ್","description":"\u003cp\u003eಜೋಗಿ ಕನ್ನಡ ಸಾರಸ್ವತ ಲೋಕದ ವಿಸ್ಮಯ, ಕುಡ್ಲಸೀಮೆಯ ಗಿರೀಶ್ ರಾವ್ ಎಂಬ ಹೆಸರಿನ ಈ ಗೆಳೆಯ ತಮ್ಮ ಪತ್ನಿ ಜ್ಯೋತಿಯ ಹೆಸರನ್ನು ತಮ್ಮ ನಾಮವಾಚಕದೊಂದಿಗೆ ಸಾಂಕೇತಿಕವಾಗಿ ಅಲಂಕರಿಸಿಕೊಂಡವರು, ಆ ಕಾವ್ಯನಾಮದೊಂದಿಗೆ ನಿರಂತರವಾಗಿ ಸವೆಯದೇ ಬರೆಯುತ್ತಿರುವವರು. ಇವರು ಒಂದು ಕಡೆ ನಿಂತವರಲ್ಲ, ಕುಂತವರಂತೂ ಮೊದಲೇ ಅಲ್ಲ. ಈ ಬಹುಪದಿಯ ಸೃಜನಶೀಲ ಕೆಲಸಗಳು ಒಂದಲ್ಲ ಎರಡಲ್ಲ, ಹತ್ತಾರು. ಕಾರಣ ಇವರು ಕವಿ, ಕಥೆಗಾರ, ಕಾದಂಬರಿಕಾರ, ವಾಗ್ಮಿ ಮತ್ತು ಹಲವು ಧಾರವಾಹಿಗಳ ಸ್ಕ್ರಿಪ್ಟ್ ರೈಟರ್, ಅಲ್ಲದೆ ಹಲವು ಪತ್ರಿಕೆಗಳಲ್ಲಿ ರೆಗ್ಯುಲರ್ ಅಂಕಣಕಾರ. ಈ ಎಲ್ಲಾ ಸೃಜನಶೀಲ ಅವತಾರಗಳ ನಡುವೆ ದಣಿವರಿಯದ ಲೇಖಕ ಕೂಡ.\u003cbr data-mce-fragment=\"1\"\u003e\u003cbr data-mce-fragment=\"1\"\u003eತಮ್ಮ ಬರಹಗಳಿಂದ ಅಪಾರ ಜನಪ್ರಿಯತೆ ಸಂಪಾದಿಸಿರುವ ಈತ ಕಣ್ಣಿಗೆ ಸಿಕ್ಕ ಕೃತಿಯನ್ನು ಓದಿ ಅರಗಿಸಿಕೊಳ್ಳುವ ವಾತಾಪಿ, ಈ ಅಪ್ರತಿಮ ಸೃಜನಶೀಲ ಸಾಹಸಿ ಸಾವಿರಾರು ಕೃತಿಗಳನ್ನು ಓದಿರಬಹುದು, ಅಷ್ಟೇ ಸಂಖ್ಯೆಯ ಜಗದ್ವಿಖ್ಯಾತ ಚಲನಚಿತ್ರಗಳನ್ನು ನೋಡಿರಲೂಬಹುದು. ಸದಾ ನೂರಾರು ಗೆಳೆಯರಿಂದ ಅಲಂಕೃತಗೊಂಡಿರುವ ಜೋಗಿ ಸರ್ವಋತು ಸ್ನೇಹಶೀಲ ವ್ಯಕ್ತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈಗ ಜೋಗಿ ಬರಹಗಳಿಗೆ ದಿಕ್ಕೂಚಿಯಾಗುವ 'ಜೋಗಿ ವಾಚಿಕೆ' ಹೊರಬರುತ್ತಿದೆ. ಈ ಜೋಗಿ ಜೋಳಿಗೆಯೊಳಗೆ ನೀವು ಕೈ ಹಾಕಲೇಬೇಕು. ಕನ್ನಡದ ಉತ್ತಮ. ಓದುಗರಲ್ಲಿ ಒಬ್ಬರಾದ ಎನ್ ಸಂಧ್ಯಾರಾಣಿ ಅವರು ಈ ವಾಚಿಕೆಯನ್ನು ಸಂಪಾದಿಸಿದ್ದಾರೆ. ಕನ್ನಡದ ಸತ್ವವನ್ನು ಸರಿಯಾಗಿ ಮೊಗೆದು ಕೊಡುವ ಇವರು ಇಲ್ಲೂ ಯಶಸ್ವಿಯಾಗಿದ್ದಾರೆ.\u003cbr data-mce-fragment=\"1\"\u003e\u003c\/p\u003e\n\u003cp\u003e-ಕುಂವಿ\u003c\/p\u003e\n\u003cp\u003eಪ್ರಕಾಶಕರು - ಅಂಕಿತ ಪುಸ್ತಕ\u003c\/p\u003e","brand":"Sandhyarani","offers":[{"title":"Default Title","offer_id":42126335803651,"sku":"HB00000423","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jogireader_1.jpg?v=1638339050"},{"product_id":"novigaddida-kuncha-nemichandra-navakarnataka","title":"ನೋವಿಗದ್ದಿದ ಕುಂಚ","description":"ಪ್ರಸಿದ್ಧ ಚಿತ್ರಕಾರ ವ್ಯಾನ್‌ಗೋನ ಜೀವನ ಚಿತ್ರ","brand":"Nemichandra","offers":[{"title":"Default Title","offer_id":42136832114947,"sku":"HB00000246","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/13b59b62-39be-4594-8366-2f547ae556ea.jpg?v=1638520938"},{"product_id":"veera-sangolli-rayanna-short-biography-kannada-navakarnataka","title":"ವೀರ ಸಂಗೊಳ್ಳಿ ರಾಯಣ್ಣ","description":"ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಕಿತ್ತೂರು ಚೆನ್ನಮ್ಮನ ಹೋರಾಟವನ್ನು ಮುಂದುವರೆಸಿದ ಧೀರ. ಇಂದು ನಾವು ಯಾವ ರಣತಂತ್ರವನ್ನು 'ಗೆರಿಲ್ಲ ಯುದ್ಧ'ವೆಂದು ಕರೆಯುತ್ತೇವೆಯೋ ಅದನ್ನು ಸಮರ್ಥವಾಗಿ ಬಳಸಿಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾದ. ಬ್ರಿಟಿಷರು ಭಾರತೀಯರ ದೌರ್ಬಲ್ಯಗಳನ್ನು ಚೆನ್ನಾಗಿ ತಿಳಿದಿದ್ದವರಾದ ಕಾರಣ, ತಂತ್ರದಿಂದ ರಾಯಣ್ಣನನ್ನು ಹೆಡೆಮುರಿ ಕಟ್ಟಿ ನಂದಗಡದಲ್ಲಿ ನೇಣು ಹಾಕಿದ ಕಥೆ ಇಂದಿಗೂ ಕನ್ನಡಿಗರ ಕರುಳನ್ನು ಕತ್ತರಿಸುವ ಕಥೆಯಾಗಿದೆ. ದೇಶಭಕ್ತಿಯನ್ನು ಕೆರಳಿಸುತ್ತದೆ. ರಾಯಣ್ಣ ಏಳು ಅಡಿ ಎತ್ತರದ ಆಳು, ಹಾಗಾಗಿ ಆತನಿಗೆ ಎಂಟು ಅಡಿ ಉದ್ದದ ಸಮಾಧಿಯನ್ನು ನಂದಗಡದ ಬಳಿ ಕಟ್ಟಿದ್ದಾರೆ.","brand":"Pradeep Rokhade","offers":[{"title":"Default Title","offer_id":42137167757571,"sku":"HB00000217","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.16AM.jpg?v=1638529288"},{"product_id":"kiram-loka-shoodra-srinivas-bahuroopi","title":"ಕಿರಂ ಲೋಕ","description":"ಕನ್ನಡವನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿದ, ಕವಿತೆಯನ್ನು ಇನ್ನಷ್ಟು ಎದೆಗೆ ಹತ್ತಿರವಾಗುವಂತೆ ಮಾಡಿದ ಕಿ ರಂ ಬಗ್ಗೆ ಎಲ್ಲರಿಗೂ ವಿಶೇಷ ಪ್ರೀತಿ, ಅಂತಹ ಜೀವ ಉಳಿಸಿ ಹೋದ ಘಮವನ್ನು, ಅವರನ್ನು ಅತಿ ಸನಿಹದಿಂದ ಕಂಡ ಶೂದ್ರ ಶ್ರೀನಿವಾಸ್ ಹಿಹಿಡಿದಿಟ್ಟಿದ್ದಾರೆ. ಇದನ್ನು ಓದಿದ ನಿಮ್ಮೊಳಗೂ ಆ ಘಮ ಅರಳಲಿ..\u003cbr data-mce-fragment=\"1\"\u003e\u003cbr data-mce-fragment=\"1\"\u003eಜಿ ಎನ್ ಮೋಹನ್","brand":"Shrudra Srinivas","offers":[{"title":"Default Title","offer_id":42140803072259,"sku":"HB00000087","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/5369111a-f42b-4841-a31b-2c53a5ec85eb.jpg?v=1774943316"},{"product_id":"idonthara-aatmakathe-vittal-bahuroopi","title":"ಇದೊಂಥರಾ ಆತ್ಮಕಥೆ","description":"ಓಡುವ ಕಾಲವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಅದನ್ನು ಸುಳ್ಳು ಮಾಡಿದವರು ಹಿರಿಯ ಪತ್ರಕರ್ತ, ಆರ್. ಟಿ. ವಿಠಲಮೂರ್ತಿ ಅವರು,\u003cbr data-mce-fragment=\"1\"\u003e\u003cbr data-mce-fragment=\"1\"\u003e'ಇದೊಂಥರಾ ಆತ್ಮಕಥೆ'\u003cbr data-mce-fragment=\"1\"\u003eಕಾಲವನ್ನು ಕಟ್ಟಿ ಹಾಕಿದ ಕಥನ, ರಾಜ್ಯದ ಅಧಿಕಾರದ ಗದ್ದುಗೆಯಲ್ಲಿದ್ದವರ ಅಂತರಂಗದ ಪಿಸುಮಾತನ್ನು ಹಿಡಿದಿಟ್ಟವರು ವಿರಳ. ಆರ್ ಟಿ ವಿಠಲಮೂರ್ತಿ ಅಂತಹ ಅಪರೂಪದ ಪತ್ರಕರ್ತರು. ಅಧಿಕಾರವೆಂಬ ಅರಗಿನ ಮನೆಯಲ್ಲಿರುವವರ ಅಂತರಂಗದ ವರದಿಗಾರಿಕೆ ಇವರಿಗೆ ಮಾತ್ರ ಸಾಧ್ಯ ಎನ್ನುವುದನ್ನು ಈ ಕೃತಿ ಸಾಬೀತುಪಡಿಸಿದೆ. ತಮ್ಮ ಕೈನಲ್ಲಿರುವ ಕನ್ನಡಿಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲವನ್ನು ಸಲೀಸಾಗಿ ಕಟ್ಟಿ ಹಾಕಿ ಕೂರಿಸಿದ್ದಾರೆ. ತಮ್ಮ ಆತ್ಮ ಕಥನಕ್ಕೆ ನಾಡಿನ ಆತ್ಮ ಕಥನವನ್ನು ಬೆಸುಗೆ ಹಾಕಿದ್ದಾರೆ. ಈ ಕೃತಿ ಓದುತ್ತಾ ಹೋದರೆ ಒಂದು ಅಚ್ಚರಿ, ಒಂದು ವಿಷಾದ, ಒಂದು ತಲ್ಲಣ ಗೊತ್ತಿಲ್ಲದಂತೆ ಆವರಿಸಿಕೊಳ್ಳುತ್ತದೆ. ಹಾಗಾಗಿಯೇ ಇದು 'ಇದೊಂಥರಾ ಆತ್ಮಕಥೆ'.\u003cbr data-mce-fragment=\"1\"\u003e\u003cbr data-mce-fragment=\"1\"\u003eಜಿ ಎನ್ ಮೋಹನ್","brand":"R. T. Vittala Murthy","offers":[{"title":"Default Title","offer_id":42140815130883,"sku":"HB00000085","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/de7ddbf8-1b25-486f-9620-fbc959670e5b.jpg?v=1638621554"},{"product_id":"biography-eglantyne-jebb-kannada-bahuroopi","title":"ಆಕೆ ಮಕ್ಕಳನ್ನು ರಕ್ಷಿಸಿದಳು","description":"ಹೌದು, ಇವರುಗಳೆಂದರೆ ನಮಗೆ ಅಷ್ಟಕ್ಕಷ್ಟೇ. ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದವರು. ಈ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಇವರುಗಳದ್ದು ಇದೇ ಸ್ಥಿತಿ ಇದೇ ರೀತಿ. ಆದರೆ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತಿರುವವರು ಮಾತ್ರ ಇವರುಗಳೇ ಎನ್ನುವುದನ್ನು, ನಾವು ಗಮನಿಸದೇ ಇರುವುದು ದೊಡ್ಡ ದುರಂತ. ಎಲ್ಲಿಯೂ ಸಲ್ಲದ ಒಂದು ನರಳಾಟದ ಸದ್ದು ಇವರು. ಇವರು ನಮ್ಮ ಮಕ್ಕಳು.\u003cbr data-mce-fragment=\"1\"\u003eಎಗ್ಲಾಂಟೈನ್ ಜೆಬ್ ಮೊದಲ ಬಾರಿಗೆ, ಮಕ್ಕಳ ಬಗ್ಗೆ ಜಗತ್ತಿನ ಸಂವೇದನೆಯನ್ನು ಜಾಗೃತಗೊಳಿಸಿ, ನಾವುಗಳು ಮೃಗಗಳಾಗಿಯೇ ಕೊನೆಗೊಳ್ಳುವುದನ್ನು ತಪ್ಪಿಸಿದ ಹೆಣ್ಣು, ಕಣ್ಣು, ಮನುಷ್ಯ ಆಗಲು ಬಯಸುವ ಪ್ರತೀ ಜೀವಿಯೂ ಓದಲೇಬೇಕಾದ ಮಾನವ ಗಾಥೆ.\u003cbr\u003e","brand":"N. V. Vasudeva Sharma","offers":[{"title":"Default Title","offer_id":42140859531523,"sku":"HB00000078","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-04at5.05.02PM.jpg?v=1638622797"},{"product_id":"nanna-haadu-nannadu-kannada-spb-book","title":"ನನ್ನ ಹಾಡು ನನ್ನದು","description":"\u003cp\u003eಬಾಲು ಹಾಡಿದ ಹಾಡುಗಳನ್ನು ಕೇಳಿ, ಪ್ರೇರಣೆ ಪಡೆದು ಗಾಯಕರಾಗಿದ್ದಾರೆ, ನನಗೆ ಶಾಸ್ತ್ರೀಯ ಸಂಗೀತವೇ ಗೊತ್ತಿಲ್ಲ ಅನ್ನೋ ಅವರ ಹೇಳಿಕೆಯನ್ನೇ ಆತ್ಮವಿಶ್ವಾಸ ಮಾಡಿಕೊಂಡು, ಸಂಗೀತ ತಿಳಿಯದವರೂ ಹಾಡುವುದಕ್ಕೆ ಮುಂದೆ ಬಂದವರಿದ್ದಾರೆ. ಇಷ್ಟು ದೊಡ್ಡ ಗಾಯಕ, ಸಾವಿರ ಸಾವಿರ ಚಿತ್ರಕ್ಕೆ ಸಾವಿರ ಸಾವಿರ ಹಾಡುಗಳನ್ನು ಹಾಡಿದ್ದರೂ, ನಾವು ಗಾಯಕರಾಗ್ತಿವಿ ಅಂತ ಹೊರಟವರಿಗೆ ಬಾಲು ಹಾಡುವ ಶೈಲಿ, ಅದಕ್ಕೆ ಮಾಡಿಕೊಳ್ಳುತ್ತಿದ್ದ ಸಿದ್ಧತೆ, ತೋರುತ್ತಿದ್ದ ಭಕ್ತಿ, ರೂಢಿಸಿಕೊಂಡಿದ್ದ ವ್ಯಕ್ತಿತ್ವ ಬಳಸಿಕೊಳ್ಳಬೇಕಾದ ಸಂಸ್ಕಾರ, ಕಲಿಯುವ ಉತ್ಸಾಹ ಈ ಎಲ್ಲವೂ ಸ್ಟೀಟ್ ಲೈಟ್ ಥರ ಆಗಬೇಕಲ್ಲವೇ?\u003cbr data-mce-fragment=\"1\"\u003e\u003cbr data-mce-fragment=\"1\"\u003eವೇದಿಕೆ ಮೇಲೆ, ಹೊರಗಡೆ ಬಾಲು ಹೇಗೆಲ್ಲ ವರ್ತಿಸುತ್ತಿದ್ದರು, ಅಪಾರ ಹೆಸರು, ಪ್ರಶಸ್ತಿ, ಹಣ, ಹೊಗಳಿಕೆಗಳನ್ನು ಹೇಗೆಲ್ಲ ಅರಗಿಸಿಕೊಂಡಿದ್ದರು, ಈ ವ್ಯಕ್ತಿತ್ವವನ್ನು ಹಾಡಲ್ಲಿ ಹೇಗೆ ತರುತ್ತಿದ್ದರು, ಪಾಂಡಿತ್ಯವಿದ್ದರೂ ಪಾಮರನಂತೆ ಬದುಕುತ್ತಿದ್ದ ರೀತಿ ಇವೆಲ್ಲಾ ಯಾರಿಗಾದರು ಗೊತ್ತಾ? ಇವೆಲ್ಲದರ ಮೇಲೆ ಬೆಳಕು ಚೆಲ್ಲುವ ಪುಸ್ತಕ.\u003c\/p\u003e","brand":"Katte Gururaj","offers":[{"title":"Default Title","offer_id":42207515214083,"sku":"HB00000001","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/NannaHaaduNannadu.jpg?v=1639501113"},{"product_id":"shreemaate-the-mother-kannada-book","title":"ಶ್ರೀಮಾತೆ (ದಿ ಮದರ್)","description":"\u003cp\u003eಮದರ್ ಅಂದರೆ ಮಹಾಯೋಗಿ ಶ್ರೀ ಅರೊಬಿಂದೊ ಅವರ ಯೋಗ ಸಂಗಾತಿ, ಅವರು ಶಿವ ಈಕೆ ಪಾರ್ವತಿ ಸ್ವರೂಪಿ ಎಂಬುದು ಪೂರ್ಣಯೋಗ ಸಾಧಕರ ಶ್ರದ್ಧೆ, ವಿಶ್ವಾಸ, ದೂರದ ಫ್ರಾನ್ಸಿನಲ್ಲಿ ಜನಿಸಿ, ಲೌಕಿಕ ಮತ್ತು ಅಧ್ಯಾತ್ಮ ಸಾಧನೆಗಳನ್ನು ಮಾಡಿದವರು ಮದರ್‌, ಅವರು ಆಗ ಫ್ರೆಂಚರ ವಸಾಹತು ಆಗಿದ್ದ ಪಾಂಡಿಚೇರಿಗೆ ಬಂದು ಅರವಿಂದರ ಸುತ್ತ ಆಶ್ರಮ ಕಟ್ಟಿ ಬೆಳೆಸಿದ್ದು, ಯೋಗಸಾಧನೆ ಮಾಡಿದ್ದು, ಮನುಷ್ಯ ಕುಲದ ಬಸಿರಿನಿಂದ ಮಹಾಮಾನವನ ಜನನಕ್ಕೆ ಬೇಕಾದ ಸಿದ್ಧತೆ ಮಾಡಿದ್ದು ಈ ಪುಸ್ತಕದ ವಿಷಯ. ಇದು ಜೀವನ ಚರಿತ್ರೆಗೆ ಜೀವನ ಚರಿತ್ರೆ, ಯೋಗಶಾಸ್ತ್ರಕ್ಕೆ ಶಾಸ್ತ್ರ, ಅನುಭವಕ್ಕೆ ಅನುಭವ. ಇಲ್ಲಿರುವ ವಾಣಿಯ ಕಂಪನ ಸಹೃದಯರಿಗೆ ಹಿಡಿಸಿದರೆ ಲೇಖಕರ ಶ್ರಮ ಸಾರ್ಥಕ.\u003c\/p\u003e\n\u003cp\u003eಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್\u003c\/p\u003e","brand":"Dr. G. B. Harish","offers":[{"title":"Default Title","offer_id":42226284101891,"sku":"HB00002019","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/shreemaate_1.jpg?v=1639832377"},{"product_id":"bharataratna-a-p-j-abdul-kalaam-kannada-book","title":"ಭಾರತರತ್ನ - ಎ. ಪಿ. ಜೆ. ಅಬ್ದುಲ್ ಕಲಾಮ್","description":"\u003cspan data-mce-fragment=\"1\"\u003e\"ಮಿಸೈಲ್ ಮ್ಯಾನ್\" ಎಂದೇ ಖ್ಯಾತಿ ಪಡೆದಿರುವ ಭಾರತದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ತಮಿಳುನಾಡಿನ  ರಾಮೇಶ್ವರಂ ದ್ವೀಪದ ಅಲ್ಪಸಂಖ್ಯಾತ ಬಡ ಹುಡುಗ. ಈತ ಭಾರತ ರಾಷ್ಟ್ರಪತಿಯಾಗುವುದು ಅವರ ಅಸಾಮಾನ್ಯ ವ್ಯಕ್ತಿತ್ವಕ್ಕೆ ಸಾಕ್ಷಿ. ಅವರ ಬಾಲ್ಯ, ಬದುಕು, ಸಾಧನೆಯ ಕುರಿತು ಪುಸ್ತಕದಲ್ಲಿ ನವಿರಾಗಿ ನೀಡಿದ್ದಾರೆ ಲೇಖಕಿ ಅಸ್ಮಾ ಅನ್ಸಾರಿ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಇದನ್ನು ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.\u003c\/span\u003e","brand":"Dr. N. Someshwara","offers":[{"title":"Default Title","offer_id":42234990919939,"sku":"HB00001985","price":45.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/DR.A.P.J.AbdulKalaam_1_2.jpg?v=1640086446"},{"product_id":"karnataka-simhaasanaadheeshwara-krishnadevaraaya-kannada-book","title":"ಕರ್ನಾಟಕ ಸಿಂಹಾಸನಾಧೀಶ್ವರ - ಕೃಷ್ಣದೇವರಾಯ","description":"\u003cp\u003e''ಕೃಷ್ಣದೇವರಾಯನು ಸಕಲಾಂಗ ಪರಿಪೂರ್ಣ, ಆಪ್ರತಿಮ ಶೂರ. ಆತ ಎತ್ತರವೂ ಅಲ್ಲ, ಕುಳ್ಳನೂ ಅಲ್ಲ. ತಿಳಿಗೆಂಪು ಮೈ ಬಣ್ಣ, ಹೊಳಪು ಕಣ್ಣುಗಳು, ವಿಶಾಲವಾದ ಎದೆ, ವ್ಯಾಯಾಮ ಮಾಡಿ ಹುರಿಗಟ್ಟಿದ ಮೈ ನೋಡುವವರ ಮೇಲೆ ಅಪಾರ ಪ್ರಭಾವವನ್ನು ಬೀರುವ ವ್ಯಕ್ತಿ ಎನ್ನುತ್ತಾನೆ ಪೋರ್ಚುಗೀಸ್ ಪ್ರವಾಸಿ ಡೊಮಿಂಗೊ ಪಾಯಸ್. ತೆಲುಗಿನ ಅಲ್ಲಸಾನಿ ಪೆದ್ದನ್ನನ 'ಮನುಚರಿತಂ' ಕಾವ್ಯಕೃತಿಯೂ ಇದನ್ನು ಸಮರ್ಥಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕೃಷ್ಣದೇವರಾಯನು ಸಮರಾಂಗಣ-ಸಾಹಿತ್ಯ ಸಾರ್ವಭೌಮ, ಈತನ ಸಮರ ಸಾಮರ್ಥ್ಯಕ್ಕೆ ಇಡೀ ದಕ್ಷಿಣ ಭಾರತವು ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೆ ಒಳಗಾಗುತ್ತದೆ. ಸ್ವಯಂ ಕೃಷ್ಣದೇವರಾಯ ಸಂಸ್ಕೃತ ಹಾಗೂ ತೆಲುಗು ಭಾಷೆಯಲ್ಲಿ ಕಾವ್ಯವನ್ನು ರಚಿಸಿದರೆ, ಹೆಂಡತಿ ಜಗನ್ನೋಹಿನಿ ಹಾಗೂ ಮಗಳು ಮೋಹನಾಂಗಿಯೂ ಕವಯತ್ರಿಯರಾಗಿದ್ದರು. ಕನ್ನಡ ತೆಲುಗು-ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯವಿದ್ದ ಅಷ್ಟ ದಿಗ್ಗಜರು ಈತನ ಆಸ್ಥಾನದಲ್ಲಿದ್ದರು. ರೋಮ್ ನಗರದಷ್ಟು ದೊಡ್ಡದಿದ್ದ ವಿಜಯನಗರದ ರಾಜಧಾನಿಯ ಬೀದಿಗಳಲ್ಲಿ ಮುತ್ತುರತ್ನಗಳನ್ನು ರಾಶಿ ಹಾಕಿಕೊಂಡು ಮಾರುತ್ತಿದ್ದರು. ಅವನ ಆಳ್ವಿಕೆ ಮತ್ತು ಆಗಿನ ವಿಜಯನಗರದ ವೈಭವದ ಕುರಿತು ಲೇಖಕ ಕೆ. ಎನ್. ಭಗವಾನ್ ಸುಂದರವಾಗಿ ಬರೆದಿದ್ದಾರೆ. ಈ ಕೃತಿಯ ಸಂಪಾದಕರು ಡಾ. ನಾ. ಸೋಮೆಶ್ವರ. \u003cbr\u003e\u003c\/p\u003e","brand":"Dr. N. Someshwara","offers":[{"title":"Default Title","offer_id":42235072119043,"sku":"HB00001984","price":35.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/krishnadevaraaya_1.jpg?v=1640087110"},{"product_id":"gurudeva-kannada-biography","title":"ಗುರುದೇವ","description":"\u003cp\u003eರವೀಂದ್ರನಾಥ ಠಾಕೂರರ ಯೌವನದ ನಂತರದ ಬದುಕಿನ ಘಟನೆಗಳನ್ನು ಚಿತ್ರಿಸುವ ಕೃತಿ ಗುರುದೇವ (ಪುಸ್ತಕ ಎರಡು). ರವೀಂದ್ರರು ಆ ವೇಳೆಗಾಗಲೇ ಕವಿಯಾಗಿ, ಕಥೆಗಾರರಾಗಿ ತಮ್ಮ ಇರವನ್ನು ಸ್ಥಿರಪಡಿಸಿಕೊಂಡಿದ್ದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಮುಂದಿನದು ಸೃಜನಶೀಲತೆಯ ತುಮುಲದ ಬದುಕು. ರವೀಂದ್ರರ, ವಿವಾಹ, ಮಕ್ಕಳು, ಕುಟುಂಬ ಜೀವನದೊಂದಿಗೆ ಅವರ ಸೃಜನಶೀಲತೆಯೂ ವಿಸ್ತಾರಗೊಂಡಿತು. ಕಾದಂಬರಿಗಳನ್ನು ರಚಿಸಿದರು. ನಾಟಕ ರಚಿಸಿ ಪ್ರದರ್ಶಿಸಿದರು. ಕವಿತೆಗಳು, ಪ್ರಬಂಧಗಳು ಪ್ರಕಟವಾದವು. ಶಾಂತಿನಿಕೇತನದ ಸ್ಥಾಪನೆ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡೇ ತಮ್ಮ ಕಾವ್ಯ ಕೃಷಿಯನ್ನು ಮುಂದುವರಿಸಿದರು. ಹಿತಶತ್ರುಗಳ ಕಿರುಕುಳ, ಅಪಮಾನ ಸಹಿಸಿಕೊಂಡರು. ಪತ್ನಿ, ಮಕ್ಕಳ, ಬಂಧುವರ್ಗದವರ ಸಾವಿನ ನೋವು, ಜೊತೆಗೆ ಬ್ರಿಟಿಷ್ ಸರಕಾರದ ವಕ್ರದೃಷ್ಟಿ, ಸ್ವಾತಂತ್ರ ಹೋರಾಟಗಾರರೊಂದಿಗೆ ಸಂಪರ್ಕ, ಹಲವು ಬಾರಿ ವಿದೇಶ ಪ್ರವಾಸ, 'ಗೀತಾಂಜಲಿ'ಗಾಗಿ ನೊಬೆಲ್ ಪಾರಿತೋಷಕ ಪುರಸ್ಕಾರ ಹೀಗೆ ರವೀಂದ್ರರ ಬದುಕಿನ ಹಲವು ರೋಚಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದನ್ನು ರಚಿಸಿರುವ ಶ್ರೀ ಜಿ. ರಾಮನಾಥ ಭಟ್ ವೃತ್ತಿಯಿಂದ ಎಂಜಿನಿಯರ್‌, ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು, ಅದರಲ್ಲೂ ರವೀಂದ್ರರ ಕುರಿತು ವಿಶೇಷಜ್ಞತೆ, ರವೀಂದ್ರರ ಹಲವು ಕೃತಿಗಳ ಅನುವಾದ. ನಿವೃತ್ತಿ ನಂತರ ರವೀಂದ್ರರ ಕೃತಿಗಳ ಅನುವಾದ ದಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದಾರೆ. ರವೀಂದ್ರರ ಎಲ್ಲ ಕವಿತೆಗಳನ್ನೂ ಕನ್ನಡಕ್ಕೆ ಅನುವಾದಿಸಿರುವ ಹೆಗ್ಗಳಿಕೆ ಇವರದು.\u003c\/p\u003e","brand":"G. Ramnath Bhat","offers":[{"title":"Default Title","offer_id":42245715362051,"sku":"HB00001957","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/gurudeva.jpg?v=1640326805"},{"product_id":"immadi-pulakeshi-kannada-book","title":"ಇಮ್ಮಡಿ ಪುಲಕೇಶಿ","description":"\u003cp\u003e\u003cspan data-mce-fragment=\"1\"\u003eಚಾಲುಕ್ಯ ವಂಶದ ಪ್ರಸಿದ್ಧ ದೊರೆ. (ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು. ಕ್ರಿ.ಶ.ಸು. ೫೦೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು.\u003c\/span\u003e\u003c\/p\u003e\n\u003cp\u003eಇದೊಂದು ಇಮ್ಮಡಿ ಪುಲಕೇಶಿ ಕುರಿತ ಐತಿಹಾಸಿಕ ಕಾದಂಬರಿ. ಇದನ್ನು ಬರೆದವರು ಪ್ರಕಾಶ್ ಹೇಮಾವತಿ.\u003c\/p\u003e","brand":"Prakash Hemavathi","offers":[{"title":"Default Title","offer_id":42246212813059,"sku":"HB00001949","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/immadipulakeshi_1.jpg?v=1640339917"},{"product_id":"nobel-prashasti-vijeta-mahilaa-vijnaanigalu-kannada-book","title":"ನೊಬಲ್ ಪ್ರಶಸ್ತಿ ವಿಜೇತ ಮಹಿಳಾ ವಿಜ್ಞಾನಿಗಳು","description":"\u003cp\u003eಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿ, ಮೇರಿ ಕ್ಯೂರಿ ಜಗತ್ಪ್ರಸಿದ್ಧ ವಿಜ್ಞಾನಿಯಾದಳು. ಆಧುನಿಕ ಅನುಕೂಲತೆಗಳಿಲ್ಲದೆ, ಆರ್ಥಿಕ ಮುಗ್ಗಟ್ಟಿನಲ್ಲಿ ಮುರುಕಲು ಮರದ ಕೊಟ್ಟಿಗೆಯಲ್ಲಿ 'ರೇಡಿಯಂ' ಕಂಡುಹಿಡಿದ ಮೇರಿ ಕ್ಯೂರಿಯ ಬದುಕಿನ ಸಾಹಸಗಾಥೆ ಚಿರಪರಿಚಿತವಿದೆ. ಆದರೆ ನೊಬೆಲ್ ಪ್ರಶಸ್ತಿ ಪಡೆದ ಉಳಿದ ಒಂಬತ್ತು ಮಂದಿ ಮಹಿಳಾ ವಿಜ್ಞಾನಿಗಳನ್ನು ಕುರಿತು ಕನ್ನಡದಲ್ಲಿ ಯಾವ ಪುಸ್ತಕಗಳೂ ಹೊರಬಂದದ್ದು ತಿಳಿದಿಲ್ಲ. ಈ ಕಿರು ಹೊತ್ತಿಗೆಯಲ್ಲಿ ಈ ಮಹಿಳಾ ವಿಜ್ಞಾನಿಗಳ ಜೀವನ ಸಾಧನೆಯ ಪರಿಚಯವನ್ನು ನೀಡುತ್ತಿದ್ದಾರೆ. \u003cbr data-mce-fragment=\"1\"\u003eವಿಜ್ಞಾನಿಗಳನ್ನು ಕುರಿತ ಈ ಪುಸ್ತಕ ವಿಜ್ಞಾನದಂತೆಯೇ, ಮಹಿಳಾ ಅಧ್ಯಯನಕ್ಕೂ ಸಹಾಯಕವಾಗಲಿ ಎಂಬುದೇ ನನ್ನ ಆಸೆ ಎಂದು ಲೇಖಕ ನೇಮಿಚಂದ್ರ ಆಶಿಸಿದ್ದಾರೆ. \u003cbr data-mce-fragment=\"1\"\u003e\u003cbr data-mce-fragment=\"1\"\u003e\u003c\/p\u003e","brand":"Nemichandra","offers":[{"title":"Default Title","offer_id":42274334343427,"sku":"HB00002057","price":75.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nobelprashasthivijetamahilavijnaanigalu_1.jpg?v=1641022807"},{"product_id":"america-gandhi-kannada-book","title":"ಅಮೆರಿಕಾ ಗಾಂಧಿ","description":"\u003cp\u003eಮೂರ್ನಾಲ್ಕು ಶತಮಾನಗಳ ಸುದೀರ್ಘ ಹೋರಾಟದ ಫಲವೆನ್ನುವಂತೆ ಜಗತ್ತಿನ ದೀನದಲಿತ ಜನಾಂಗಗಳ ಬಿಸಿಯುಸಿರೇ ಆಕಾರ ಪಡೆದಂತೆ ಮಾರ್ಟಿನ್ ಲೂಥರ್ ಕಿಂಗ್. ನೀಗ್ರೋ ಕುಟುಂಬದಲ್ಲಿ ಜನಿಸಿ, ವಿದ್ಯಾಪಾರಂಗತನಾಗಿ, ಸೋದರ ಮಾನವರ ಹೃದಯವಿದ್ರಾವಕ ಪರಿಸ್ಥಿತಿಯಿಂದ ನೊಂದು ಬೆಂದು, ಅವರ ವಿಮೋಚನೆಗಾಗಿ ಕೃತಸಂಕಲ್ಪನಾಗುತ್ತಾನೆ. ಗಾಂಧಿ ಮಾರ್ಗದಿಂದಲ್ಲದೆ ವಿಮೋಚನೆ ಸಾಧ್ಯವಿಲ್ಲವೆಂದು ಮನಗಂಡ ಅವನು ಪ್ರಾಮಾಣಿಕವಾಗಿ ಅದನ್ನು ಅನುಷ್ಠಾನಗೈದು, ವಿಜಯದ ಸೂಚನೆ ದಿಗಂತದಲ್ಲಿ ಮಿನುಗುತ್ತಿದ್ದಾಗಲೇ, ಪ್ರಪಂಚದ ಮೂಲೆ ಮೂಲೆಗಳಲ್ಲಿ ಅವನ ಕೀರ್ತಿಯ ಪಾಂಚಜನ್ಯ ಮೊಳಗುತ್ತಿರುವಾಗಲೇ ಕರಿಯರ ಏಳ್ಗೆಯನ್ನು ಸಹಿಸದ ಹುಚ್ಚನೊಬ್ಬನ ಅಮಾನುಷ ಹತ್ಯೆಗೊಳಗಾಗಿ ಹುತಾತ್ಮನಾಗುತ್ತಾನೆ, \u003cspan data-mce-fragment=\"1\"\u003eಸಾಕ್ರೆಟಿಸ್\u003c\/span\u003e, ಯೇಸು, ಗಾಂಧಿಯರಿಗಾದ ಗತಿಯೇ ಅವನಿಗೂ ಸಂಭವಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಂಥ ಮಹಿಮಾವಂತನ ದುರಂತ ಕಥೆ ಮುಂದಿನ ಪುಟಗಳಲ್ಲಿ ಹರಿದಿದೆ. ಇದು ದಲಿತೋದಯದ ಸಾಂಕೇತಿಕ ಚಿತ್ರವೂ ಅಹುದು, ಗಾಂಧಿಮಾರ್ಗದ ಯಶಸ್ಸಿನ ಕಥಾನಕವೂ ಅಹುದು,   ಹಿಂದೆ ಅಮೆರಿಕಾದಲ್ಲಿದ್ದಾಗ ಅವನ ಬಗ್ಗೆ ಸಂಪಾದಿಸಿದ್ದ ಸಾಮಗ್ರಿ ಹಾಗೂ ಅವನ ಕಾರ್ಯಕ್ಷೇತ್ರದಲ್ಲಿ ಅಡ್ಡಾಡಿದ ಫಲವಾಗಿ ಈ ಕೃತಿ ಮೂಡಿದೆ. \u003cbr\u003e\u003c\/p\u003e","brand":"D. Javare Gowda","offers":[{"title":"Default Title","offer_id":42279020986627,"sku":"HB00002070","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Americagandhi_1.jpg?v=1641204062"},{"product_id":"mokshagundam-vishveshwarayya-kannada-book","title":"ಮೋಕ್ಷಗುಂಡಂ ವಿಶ್ವೇಶ್ವರಯ್ಯ","description":"\u003cp\u003eಮೋಕ್ಷಗುಂಡಂ ವಿಶ್ವರಯ್ಯ ಅವರು ಕನ್ನಡ ನಾಡಿನ,  ಭಾರತದ ಶ್ರೇಷ್ಠ ಸುಪುತ್ರರಲ್ಲಿ ಒಬ್ಬರು. ಅವರು ನುಡಿದಂತೆ ನಡೆದವರು. ಒಂದು ಸಮಾಜದ ಭಾಗ್ಯೋದಯದ ಹಾಗೆ ಅವರು ಬದುಕಿದರು. ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅವರು ನೀಡಿದ ಕೊಡುಗೆ ಹೋಲಿಕೆಯಿಲ್ಲದ್ದು, ಅವರನ್ನು ಕುರಿತು ಕನ್ನಡದ ಹಿರಿಯ ವಿದ್ವಾಂಸರಲ್ಲಿ ಒಬ್ಬರು ಎನಿಸಿದ ಪ್ರೊ. ಎಲ್.ಎಸ್. ಶೇಷಗಿರಿರಾವ್ ಈ ಪುಸ್ತಕವನ್ನು ಬರೆದಿದ್ದಾರೆ.  \u003cbr data-mce-fragment=\"1\"\u003e\u003cbr data-mce-fragment=\"1\"\u003e\u003c\/p\u003e","brand":"S. L. Sheshagiri Rao","offers":[{"title":"Default Title","offer_id":42279269597443,"sku":"HB00002075","price":70.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/mokshagundamvishveshwarayya_1.jpg?v=1641211419"},{"product_id":"raveendranatha-takoor-kannada-book","title":"ರವೀಂದ್ರನಾಥ ಠಾಕೂರ್","description":"ಠಾಕೂರರು ವಿಶ್ವದಲ್ಲೆಡೆ ಭಾರತದ ಕೀರ್ತಿಧ್ವಜವನ್ನು ಎತ್ತಿಹಿಡಿದವರು. ನಮ್ಮ ಪ್ರಾಚೀನ ಋಷಿಪರಂಪರೆಗೆ ಸೇರಿದ ಅವರು ಭಾರತದ ಎಲ್ಲ ಆದರ್ಶಗಳ ಮತ್ತು ಜೀವನದ ನಿಜಮೌಲ್ಯಗಳ ಸಂಕೇತವಾಗಿದ್ದಾರೆ.\u003cbr data-mce-fragment=\"1\"\u003eಈ ಪುಸ್ತಕದಲ್ಲಿ ಠಾಕೂರರ ಜೀವನದ ಪರಿಚಯ ಮಾಡಿಕೊಡಲು ಲೇಖಕರಾದ ಹಾ. ಮಾ. ನಾಯಕ ಪ್ರಯತ್ನಿಸಿದ್ದಾರೆ. ಠಾಕೂರರಂಥವರ ಜೀವನವನ್ನು ಕುರಿತು ಬರೆಯುವುದು ಸುಲಭವಲ್ಲ. ಬಹುಮುಖ ಪ್ರತಿಭೆಯ ಅವರ ಜೀವನವು ಚರಿತ್ರೆಯ ಚೌಕಟ್ಟಿಗೆ ಸಿಲುಕುವುದಿಲ್ಲ. ಕವಿಯ ಕಾವ್ಯವೇ ಅವನ ಜೀವನ. ಆದರೆ ಠಾಕೂರರ ಜೀವನವೇ ಕಾವ್ಯವಾಗಿದೆ. ಅದನ್ನು ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಬರೆದಿದ್ದಾರೆ.\u003cbr\u003e\n\u003cdiv id=\"gtx-trans\" style=\"position: absolute; left: 455px; top: 275px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. H. M. Nayaka","offers":[{"title":"Default Title","offer_id":42295805477123,"sku":"HB00002100","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/raveeandranaathatakoor_1.jpg?v=1641540190"},{"product_id":"bharatratna-dr-abdul-kalaam-jeevana-saadhane-kannada-book","title":"ಭಾರತರತ್ನ ಡಾ. ಅಬ್ದುಲ್ ಕಲಾಂ - ಜೀವನ ಸಾಧನೆ","description":"ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಸಾಕಷ್ಟು ವಿಚಾರಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ನಮ್ಮ ದೇಶ ವಿಶ್ವದಲ್ಲಿಯೇ ಅತ್ಯಂತ ಹಳೆಯ ನಾಗರಿಕತೆಯ ತಾಣ, ಈ ನೆಲದಲ್ಲಿ ಅದೆಷ್ಟೋ ಮಂದಿ ದಾರ್ಶನಿಕರು, ಸಾಧು-ಸಂತರು, ಕೆಚ್ಚೆದೆಯ ಹೋರಾಟಗಾರರು, ಅತ್ಯುತ್ತಮ ಆಡಳಿತಗಾರರು, ಅಪೂರ್ವ ದೇಶಪ್ರೇಮಿಗಳು, ತಾಂತ್ರಿಕ ಪರಿಣತಿ ಹೊಂದಿದ ಮಹನೀಯರು, ಸರಳತೆ, ನ್ಯಾಯಪರತೆಯನ್ನು ಮೆರೆದವರು ಆಗಿ ಹೋಗಿದ್ದಾರೆ. ಅವರ ಬದುಕಿನ ಆದರ್ಶ ಇಂದಿನ ಪೀಳಿಗೆಗೂ ಸ್ಫೂರ್ತಿದಾಯಕ, ವಿಪರ್ಯಾಸವೆಂದರೆ, ಇಂದಿನ ದಿನಮಾನದ ಯುವ ಸಮಾಜ ಹಲವು ಗೊಂದಲ-ಒತ್ತಡಗಳ ನಡುವೆ ನಲುಗುತ್ತಿದೆ. ವಿದ್ಯಾರ್ಜನೆ ನಿಯಮಿತ ಪಠ್ಯಕ್ಕೆ ಸೀಮಿತವಾಗಿರುವ ಕಾರಣ ಪಠ್ಯಕ್ಕೆ ಹೊರತಾಗಿ ಇರುವ ಅನೇಕ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿಯೂ ಅವರಲ್ಲಿ ಕಡಿಮೆಯಾಗುತ್ತಿದೆ. ರಟ್ಟೆಗಾತ್ರದ ಪಠ್ಯಪುಸ್ತಕಗಳಲ್ಲೇ ಮುಳುಗಿರುವ ಮಕ್ಕಳು ಮತ್ತು ಯುವಸಮುದಾಯ, ಅದರ ಹೊರತಾಗಿರುವ ಸಾಮಾನ್ಯ ಜ್ಞಾನದ ವಿಸ್ತರಣೆ ಮತ್ತು ಸುತ್ತಲ ಜಗದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳುವ ವಿಸ್ತೃತ ಅಧ್ಯಯನದಿಂದ ವಂಚಿತರಾಗುತ್ತಿದ್ದಾರೆ. ಕನ್ನಡದ ಬಗೆಗೂ ಯುವಸಮುದಾಯದಲ್ಲಿ ಅವಜ್ಞೆ ಮೂಡುತ್ತಿದೆ, ಪಾಶ್ಚಾತ್ಯ ಸಂಸ್ಕೃತಿಯ ಬಗೆಗಿನ ಆಸ್ಥೆ, ಆಂಗ್ಲಭಾಷೆಯ ಬಗ್ಗೆ ಇರುವ ವ್ಯಾಮೋಹದಿಂದಾಗಿ ಮುಂಬರುವ ವರ್ಷಗಳಲ್ಲಿ ನಮ್ಮ ನೆಲದ ಸಂಸ್ಕೃತಿಯ ಬೇರುಗಳು ಒಣಗಿಹೋಗುವ ಅಪಾಯವೂ ಇದೆ. ಹಾಗಾಗಿ ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ಐತಿಹಾಸಿಕ ಮಹತ್ವವನ್ನು ಯುವ ವಿದ್ಯಾರ್ಥಿ ಸಮುದಾಯದ ಮುಂದಿಡುವ ಕೆಲಸ ಸಮರ್ಥವಾಗಿ ಆಗಬೇಕಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ನಾಡಿನ ಹಿರಿಮೆ-ಗರಿಮೆಗಳನ್ನು ದೇಶವಿದೇಶಗಳಲ್ಲಿ ಪಸರಿಸಿದ, ಜನರಲ್ಲಿ ಸ್ಫೂರ್ತಿ ತುಂಬಿ ದೇಶದ ಸರ್ವತೋಮುಖ ಔನ್ನತ್ಯಕ್ಕೆ ನಿಸ್ವಾರ್ಥಭಾವದಿಂದ ಶ್ರಮಿಸಿದ ಮಹಾನ್ ವ್ಯಕ್ತಿಗಳ ಕುರಿತಾದ ಈ ಮಾಲಿಕೆಯಲ್ಲಿ ಆಯ್ದ ವ್ಯಕ್ತಿಗಳ ಸಂಕ್ಷಿಪ್ತ ಮತ್ತು ಸಮಗ್ರ ಮಾಹಿತಿಯನ್ನು ಸಂಗ್ರಹ ರೂಪದಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ. ಇದನ್ನು ಓದುವ ಮೂಲಕ ಯುವಸಮುದಾಯ ಸ್ಫೂರ್ತಿಗೊಳ್ಳಲಿ, ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವತ್ತ ಪ್ರೇರೇಪಿತರಾಗಲಿ ಎಂಬುದು ನಮ್ಮ ಆಶಯ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಕಾಶಕರು\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ನೇಹ ಬುಕ್ ಹೌ\u003cbr data-mce-fragment=\"1\"\u003e\n\u003cdiv id=\"gtx-trans\" style=\"position: absolute; left: 194px; top: 427px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Niranjana","offers":[{"title":"Default Title","offer_id":42312155693315,"sku":"HB00002120","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/DR.Abdulkalaam_1.jpg?v=1641884700"}],"url":"https:\/\/harivubooks.com\/collections\/life-story-kannada-books.oembed?page=12","provider":"Harivu Books","version":"1.0","type":"link"}