{"title":"Latest Books in Kannada","description":"","products":[{"product_id":"mudde-gantu","title":"ಮುದ್ದೆ ಗಂಟು","description":"\u003cp\u003e\u003cspan\u003eಸಿ.ಪಿ. ನಾಗರಾಜು ಅವರ ಅಂಕಣ ಬರಹಗಳ ಸಂಕಲನ ಮುದ್ದೆ ಗಂಟು. ಈ ಕೃತಿಯು ಮುಖ್ಯವಾಗಿ ವಾಸ್ತವಿಕ ನೆಲೆಗಟ್ಟನ್ನು ಹೊಂದಿರುವಂತಹದು. ತಾವು ಕಂಡ, ಕೇಳಿದ ಸಂಗತಿಗಳಿಗೆ ಸ್ಪಂದಿಸಿದ ರೀತಿಯನ್ನು ಲೇಖಕರು ಈ ಕೃತಿಯಲ್ಲಿ ಬಿಡಿಸಿದ್ದಾರೆ. ಜಾತಿ, ಮತ, ಧರ್ಮ, ದೇವರು ಮತ್ತು ಅವುಗಳ ಉಪ ಉತ್ಪನ್ನವಾದ ಸಾಮಾಜಿಕ ಸಮಸ್ಯೆಗಳ ಕುರಿತು ಇಲ್ಲಿಯ ಬರಹಗಳು ಬೆಳಕು ಚೆಲ್ಲಿವೆ.\u003c\/span\u003e\u003c\/p\u003e","brand":"C. P. Nagraj","offers":[{"title":"Default Title","offer_id":42020600807683,"sku":"HB00001923","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/mudde_0001.jpg?v=1636356130"},{"product_id":"pampa-bharatha-odu-prathamaashvasa","title":"ಪಂಪ ಭಾರತ ಓದು","description":"\u003cp\u003eಸಿ.ಪಿ.ನಾಗರಾಜ ಅವರ ಪಂಪ ಭಾರತ ಓದು ನಾಟಕ ರೂಪದಲ್ಲಿ ಪ್ರಕಟವಾಗಿರುವ ಕೃತಿ. ಪ್ರತಿಯೊಂದು ಪ್ರಸಂಗದಲ್ಲಿಯೂ ಪಂಪ ಭಾರತ ಪಠ್ಯದ ನಾಟಕ ರೂಪ, ಪದ ವಿಂಗಡಣೆ ಮತ್ತು ತಿರುಳು, ಪಂಪ ಭಾರತ ಪಠ್ಯ ಎಂಬ ಮೂರು ಭಾಗಗಳಿವೆ. ಹಳೆಗನ್ನಡ ಕಾವ್ಯಗಳನ್ನು ಜನರಿಗೆ ತಲುಪಿಸಲೆಂದು ಮಹಾಕವಿ ರನ್ನನ ಗದಾಯುದ್ಧ ಕಾವ್ಯವನ್ನು ನಾಟಕ ರೂಪದಲ್ಲಿ ಅಳವಡಿಸಿದ ಬಿ.ಎಂಶ್ರೀ ಅವರಿಂದ ಮೊದಲುಗೊಂಡು ನಮ್ಮ ಕನ್ನಡ ಲೇಖಕರು ಅನೇಕ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸುತ್ತಲೇ ಇದ್ದಾರೆ. ಈ ಹಾದಿಯಲ್ಲಿ ಸಿ.ಪಿ ನಾಗರಾಜ ಅವರು ‘ಪಂಪ ಭಾರತ ಓದು’ ಕೃತಿಯ ಮೂಲಕ ಒಂದು ಹೆಜ್ಜೆಯನ್ನು ಇಟ್ಟಿದ್ದಾರೆ. \u003c\/p\u003e","brand":"C. P. Nagaraja","offers":[{"title":"Default Title","offer_id":42020600873219,"sku":"HB00001922","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/pampa.jpg?v=1636356131"},{"product_id":"samudradalli-mulugida-shreekrishnana-dvaarake","title":"ಸಮುದ್ರದಲ್ಲಿ ಮುಳುಗಿದ ಶ್ರೀಕೃಷ್ಣನ ದ್ವಾರಕೆ","description":"\u003cp\u003eಮಹಾಭಾರತದ ಮೂಲಬಿಂದು ಶ್ರೀಕೃಷ್ಣ. ಕೃಷ್ಣನ ಪಾತ್ರ ಭಾರತದುದ್ದಕ್ಕೂ ಹಾಸು ಹೊಕ್ಕಾಗಿದೆ. ಈ ವಾಸುದೇವ ಕೃಷ್ಣನು, ದ್ವಾರಕಾನಗರಿಯನ್ನು ಸಮುದ್ರದಲ್ಲಿ ನಿರ್ಮಿಸಿ, ಯಾದವರೊಂದಿಗೆ ವಾಸಿಸುತ್ತಿದ್ದನೆಂದೂ, ಈ ದ್ವಾರಕೆಯು ನಂತರ ಸಮುದ್ರದಲ್ಲಿ ಮುಳುಗಿ ಹೋಯಿತೆಂದೂ, ಮಹಾಭಾರತ ಹೇಳುತ್ತದೆ.\u003cbr\u003eಈ ಘಟನೆಯ ಸತ್ಯಾಸತ್ಯತೆ ಎಷ್ಟು? ಕೃಷ್ಣನು ನಿಜವಾಗಿಯೂ ಐತಿಹಾಸಿಕ ವ್ಯಕ್ತಿಯೇ? ಅಥವಾ ಕವಿ ನಿರ್ಮಿತ ಕಾವ್ಯದ ಕಥಾನಾಯಕನೇ? ಕೃಷ್ಣ ನಿಜವಾಗಿ ಐತಿಹಾಸಿಕ ವ್ಯಕ್ತಿಯಾಗಿದ್ದರೆ, ಆತ ಬದುಕಿದ್ದನೆನ್ನಲಾದ ಕಾಲ ಯಾವುದು? ಯಾವ ಕಾರಣದಿಂದ ಅಂದಿನ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಸಿಗದೆ ಕಣ್ಣುಮುಚ್ಚಾಲೆಯಾಡುತ್ತಿವೆ? ಕೃಷ್ಣನ ಇರುವು ನಿಜವಾದರೆ ಕೃಷ್ಣನ ದ್ವಾರಕೆ ಯಾವುದು? ಮುಂತಾದ ಪ್ರಶ್ನೆಗಳು ಏಳುವುದು ಸಹಜ.\u003cbr\u003eಆ ನಿಟ್ಟಿನಲ್ಲಿ ಕೈಗೊಂಡ ವೈಜ್ಞಾನಿಕ ಸಮುದ್ರೀಯ ಪುರಾತತ್ವೀಯ ಉತ್ಖನನದ ಮಹತ್ವದ ಸಾಧನೆಯನ್ನು ಹೇಳುವುದೇ ಈ ಗ್ರಂಥದ ಉದ್ದೇಶ. 1980ರಿಂದ ಈಚೆಗೆ ಹಲವಾರು ಅಭಿಯಾನಗಳನ್ನು ನಡೆಸಿ \u003cspan data-mce-fragment=\"1\"\u003eಸಮುದ್ರೀಯ \u003c\/span\u003eಪುರಾತತ್ವ ತಜ್ಞರು, ಆಧಾರಭೂತವಾಗಿ ದ್ವಾರಕೆಯ ಅವಶೇಷಗಳನ್ನು ಬೆಳಕಿಗೆ ತಂದಿದ್ದಾರೆ. ಆ ಮಹತ್ವದ ಸಾಧನೆ ಹೇಗೆ ಬೀಜವಾಗಿ ಹುಟ್ಟಿತು? ಹೇಗೆ ಮೊಳೆತು ಫಲಿಸಿತು? ಸಾಧನೆಯ ಮಾರ್ಗದ ತೊಡಕು ತೊಡರುಗಳೇನು ? ಎನ್ನುವ ಎಲ್ಲ ವಿಷಯಗಳನ್ನೂ ಸಂಕ್ಷಿಪ್ತವಾಗಿ ತಿಳಿಸುವುದೇ ಈ ಗ್ರಂಥದ ಉದ್ದೇಶ.\u003c\/p\u003e","brand":"Dr. S. R. Rao","offers":[{"title":"Default Title","offer_id":42020600938755,"sku":"HB00001921","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_93ed7353-56a2-4f55-81e8-63a49990f0e1.jpg?v=1636356132"},{"product_id":"muttallige-setuve-banditu-mattu-itara-kategalu","title":"ಮುತ್ತಳ್ಳಿಗೆ ಸೇತುವೆ ಬಂದಿತು! ಮತ್ತು ಇತರ ಕಥೆಗಳು","description":"ಲೇಖಕ ಮತ್ತೂರು ಸುಬ್ಬಣ್ಣರವರು ಮಕ್ಕಳಿಗಾಗಿ ಬರೆದಿರುವಂತಹ ಕಥೆ ಪುಸ್ತಕ.","brand":"Muttooru Subbanna","offers":[{"title":"Default Title","offer_id":42020601004291,"sku":"HB00001920","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_74a37ae3-b88d-442b-b2e8-d700b95c3cdd.jpg?v=1636356134"},{"product_id":"satyada-eradu-mukagalu","title":"ಸತ್ಯದ ಎರಡು ಮುಖಗಳು (ಮಕ್ಕಳ ಕಥೆಗಳು)","description":"\u003cp\u003eಸತ್ಯಕ್ಕೆ ಎರಡು ಮುಖಗಳಿರುತ್ತವೆ. ಅದು ಹೇಳಿದವನಿಗೂ, ಕೇಳುವವನಿಗೂ ನೆಮ್ಮದಿ ಹಾಗೂ ಸಂತೋಷ ಕೊಡುವಂತಿರಬೇಕು. ನೀವು ಕಳ್ಳನ ಹತ್ತಿರ ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು ಮುಂತಾದ ಹಿತವಚನಗಳನ್ನು ಹೇಳಿದರೆ, ಅದು ಕಳ್ಳನಿಗೆ ಪಥ್ಯವಾಗುವುದಿಲ್ಲ. ಏಕೆಂದರೆ, ಅವನು ಆ ಮಾರ್ಗದಲ್ಲಿ ಬದುಕುತ್ತಿರುವುದಿಲ್ಲ. ಆತನಿಗೆ ತಾನು ಮಾಡುತ್ತಿರುವ ಕೊಲೆ, ಸುಲಿಗೆ, ದರೋಡೆಯೇ ಸರಿಯಾಗಿ ಕಾಣುತ್ತದೆ. ಅವನಿಗೆ ನಿಮ್ಮ ಮೇಲೆ ವಿಶ್ವಾಸ ಅಥವಾ ನಂಬಿಕೆಯುಂಟಾಗುವುದಿಲ್ಲ.\u003c\/p\u003e\n\u003cp\u003eಅದೇ ವಿಷಯಗಳನ್ನು ನೀವು ಒಳ್ಳೆಯವರಿಗೆ ಹೇಳಿದರೆ, ಅವರು ನಿಮ್ಮ ಮಾತುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಅವರು ಆ ಮಾರ್ಗದಲ್ಲಿಯೇ ಬದುಕುತ್ತಿರುತ್ತಾರೆ. ಹಾಗಾಗಿ ಹೇಳುವವರ ಹಾಗೂ ಕೇಳುವವರ ರೀತಿ ನೀತಿಗಳು ಒಂದೇ ತೆರನಾಗಿದ್ದರೆ ಮಾತ್ರ ಸತ್ಯ ಹೇಳಿದಂತಾಗುತ್ತದೆ. ಒಳ್ಳೆಯ ಮಕ್ಕಳ ಕಥೆಗಳನ್ನು ಈ ಪುಸ್ತಕದಲ್ಲಿ ನೀವು ಓದಬಹುದು.\u003c\/p\u003e","brand":"V. Ganesha Sagara","offers":[{"title":"Default Title","offer_id":42020601626883,"sku":"HB00001910","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_8dbafb56-e3e7-444c-a90d-2e90edea9356.jpg?v=1636356148"},{"product_id":"aksharagalodane-akkareya-sarasa","title":"ಅಕ್ಷರಗಳೊಡನೆ ಅಕ್ಕರೆಯ ಸರಸ","description":"\u003cp\u003eಮಕ್ಕಳಲ್ಲಿ ತುಂಬಾ ಕುತೂಹಲ ಇರುತ್ತದೆ. ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚು. ಅದನ್ನು ಹತೋಟಿಯಲ್ಲಿ ಇಡುವಷ್ಟು ಬುದ್ಧಿಯು ಬೆಳೆದಿರುವುದಿಲ್ಲ. ಚಟುವಟಿಕೆಗಳು ಅದ್ಭುತವಾಗಿದ್ದರೆ, ಅವರ ಕಲ್ಪನಾ ಶಕ್ತಿಯ ಸರಿಯಾದ ಓಡಾಟಕ್ಕೆ ಅವಕಾಶವಾಗುತ್ತದೆ.\u003c\/p\u003e\n\u003cp\u003eಪುಟ್ಟ ಮಕ್ಕಳು ಸುಲಭವಾಗಿ ಬಿಡಿಸಬಲ್ಲ, ದೊಡ್ಡ ಅಕ್ಷರದ ಪುಸ್ತಕ ಮಾಲಿಕೆಯನ್ನು ಈ ಮೂಲಕ ನೀಡುತ್ತಿದ್ದಾರೆ ಲೇಖಕರು. ಕನ್ನಡದ ಮಕ್ಕಳಿಗೆ ಈ ಪುಸ್ತಕ ಸಂತಸವನ್ನು ನೀಡಿ, ಅಕ್ಷರಾಭ್ಯಾಸವನ್ನು ಉತ್ತಮವಾಗಿ ಬೆಳಸುತ್ತದೆ ಎಂಬ ನಿರೀಕ್ಷೆ ಲೇಖಕರದ್ದು.\u003c\/p\u003e","brand":"Anantha M. Tamhankar","offers":[{"title":"Default Title","offer_id":42020601692419,"sku":"HB00001909","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_812608b9-6569-4ca3-9da7-4b286875f19b.jpg?v=1636356149"},{"product_id":"vividha-kathegala-sankalana-makkala-kathegalu","title":"ವಿವಿಧ ಕಥೆಗಳ ಸಂಕಲನ (ಮಕ್ಕಳ ಕಥೆಗಳು)","description":"\u003cp\u003eನಮ್ಮ ಭಾರತ ದೇಶದಲ್ಲಿ ಕತೆಗಳ ಅಣಿಮುತ್ತುಗಳನ್ನು ತನ್ನ ಗರ್ಭಕೋಶದಲ್ಲಿ ಸುರಕ್ಷಿತವಾಗಿ ಅಡಗಿಸಿಟ್ಟುಕೊಂಡಿರುವ ಮಹಾಸಾಗರಗಳೇ ಇವೆ. ಪುರಾತನ ಕಾಲದಲ್ಲಿ ವೇದ ವೇದಾಂತಗಳ ಕ್ಲಿಷ್ಟವಾದ ಭಾಗಗಳನ್ನು ಶಿಷ್ಯರಿಗೆ ಸುಲಭವಾಗಿ ಅರ್ಥ ಮಾಡಿಸುವ ಸಲುವಾಗಿ, ಗುರುಗಳು ಕತೆಗಳ ಮಾಧ್ಯಮವನ್ನು ಅನುಸರಿಸುತ್ತಿದ್ದರು. ದುಷ್ಟ ಶಕ್ತಿಗಳನ್ನು ಹದ್ದುಬಸ್ತಿನಲ್ಲಿ ಇಡಲು, ನಾಶ ಮಾಡಲು, ಅವುಗಳ ವಿರುದ್ಧ ಹೋರಾಡುವ ಶಕ್ತಿಗಳ ಕತೆಗಳು, ಅಸುರ ದೇವತೆಗಳ ಘರ್ಷಣೆಗಳ ಕತೆಗಳು; ಅಪ್ಸರೆಯರ, ಮಾನವರ, ದೇವತೆಗಳ, ಅಸುರರ ಪ್ರಣಯ ಕತೆಗಳು ಮಾಧ್ಯಮಗಳಲ್ಲಿ ರೂಪುಗೊಂಡವು. ಹಾಗೆಯೇ ಕಥಾವಸ್ತುಗಳಾಗಿ ರಾಜ ರಾಣಿಯರ, ರಾಜಕುಮಾರ ರಾಜಕುಮಾರಿಯರ ಪ್ರೇಮ, ಸಾಹಸಗಳ ಕತೆಗಳು, ಅದ್ಭುತವಾದ ಬೃಹತ್ಕಥಾಕೋಶಗಳು, ಕಥಾಸರಿತ್ಸಾಗರ, ಪಂಚತಂತ್ರ ಹಾಗೂ ರಾಮಾಯಣ ಮಹಾಭಾರತದಲ್ಲಿ ಇರುವ ಕತೆಗಳು, ತೆನಾಲಿರಾಮ, ಮರ್ಯಾದೆ ರಾಮ, ಬೀರಬಲ್ ಇಂತಹ ಚರಿತ್ರಾರ್ಹ ವ್ಯಕ್ತಿಗಳ ಬಗ್ಗೆ ಕತೆಗಳು.\u003c\/p\u003e\n\u003cp\u003eಈ ಬಗೆಯ ಕತೆಗಳು ಪ್ರಪಂಚದಾದ್ಯಂತ ಇವೆ. ಈ ತರಹದ ಕತೆಗಳ ಮೂಲ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಇವು ಜನಪದ ಕತೆಗಳು. ಯಾರೋ ಯಾವುದೋ ಕಾಲದಲ್ಲಿ ಹೇಳಿದ ಬಾಯ್ಮಾತಿನ ಕತೆಗಳು.\u003c\/p\u003e","brand":"Jagannatha Sogala","offers":[{"title":"Default Title","offer_id":42020602216707,"sku":"HB00001903","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_b4dac18a-ea7f-4568-a230-4278e61c98c7.jpg?v=1636356165"},{"product_id":"makkala-mooru-kiru-kadambarigalu","title":"ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು","description":"\u003cp\u003e\u003cstrong\u003e \u003c\/strong\u003e'ರಸಿಕಪುತ್ತಿಗೆ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದಿವಂಗತ ಶ್ರೀ ಸುಬ್ರಹ್ಮಣ್ಯ ಆಚಾರ್ಯರವರು ಬದುಕಿದ್ದು ಕೇವಲ ಅರವತ್ತೊಂದು ವರ್ಷ ಮಾತ್ರ . ಬರೆಯಲು ಆರಂಭಿಸಿದ್ದು ಇಪ್ಪತ್ತರ ಹರೆಯದಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ಸಮೀಪದ ಮುತ್ತಿಗೆ ಎಂಬ ಸಣ್ಣ ಗ್ರಾಮ ಅವರ ಹುಟ್ಟೂರು. ಅಲ್ಲಿಂದ ಅವರು \"ರಸಿಕ, ಪುತ್ತಿಗೆ' ಎಂಬ ಕಾವ್ಯನಾಮದಿಂದ ಬರವಣಿಗೆ ಆರಂಭಿಸಿ, ನಂತರ 'ರಸಿಕಪುತ್ತಿಗೆ'ಯಾಗಿ ಬಹು ಭಾಷಾ ವಿಶಾರದರಾಗಿ ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಪಡೆದು 50 ಕ್ಕೂ ಮೀರಿದ ಕೃತಿಗಳನ್ನು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ರಚಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಾಹಿತ್ಯದ ನಾನಾ ಪ್ರಾಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಅವರ ವಿಶೇಷ ಒಲವು ಮಕ್ಕಳ ಸಾಹಿತ್ಯ. ಮಕ್ಕಳಿಗಾಗಿ ಬರೆದದ್ದೇ ಹೆಚ್ಚು. ಮಕ್ಕಳ ಸಾಹಿತಿ ಎಂದು ಗುರುತಿಸಿಕೊಳ್ಳಲು ಅವರು ಇಷ್ಟಪಡುತ್ತಿದ್ದರು. ಅವರ ಕೃತಿಗಳಲ್ಲಿ ಬಹುಪಾಲು ಲಭ್ಯವಿಲ್ಲ. ಹಾಗಾಗಿ ಅವರ ಬರವಣಿಗೆಗಳ ಸಮಗ್ರ ಶ್ರೇಣಿ ಹೊರತರುವ ಮೊದಲ ಪ್ರಯತ್ನವಾಗಿ ಈ ಕೃತಿ ನಿಮ್ಮ ಮುಂದಿದೆ.\u003c\/p\u003e","brand":"Dr. V. Ranganath","offers":[{"title":"Default Title","offer_id":42020602282243,"sku":"HB00001902","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ca8cf8ac-042d-4891-9e93-f4a6b54bc1bc.jpg?v=1636356166"},{"product_id":"bodhisatvana-janmagala-kategalu-bhaga-1","title":"ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧","description":"\u003cp\u003e\u003c\/p\u003e","brand":"Jagannatha Bhogala","offers":[{"title":"Default Title","offer_id":42020602511619,"sku":"HB00001899","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_dd194edd-b6f1-46da-a15f-125adf298f4c.jpg?v=1636356171"},{"product_id":"di-shankara-annaji-kulakarni-avara-karnataka-simhasana-staapanaacharya","title":"ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ","description":"\u003cp\u003e\u003c\/p\u003e","brand":"H. D. Arunachala","offers":[{"title":"Default Title","offer_id":42020602740995,"sku":"HB00001895","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_b740170f-0d4b-4b9c-a34b-4013dac77689.jpg?v=1636356176"},{"product_id":"di-panje-mangesharayara-aitihaasika-kathavali","title":"ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ","description":"\u003cp\u003eಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ ೧೮೭೪ ಫೆಬ್ರುವರಿ ೨೨ ರಂದು ಜನಿಸಿದರು. ಇವರ ತಾಯಿಯ ಹೆಸರು ಶಾಂತಾದುರ್ಗಾ.\u003cbr\u003eಬಂಟವಾಳದಲ್ಲಿಯೇ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಬಡತನದ ಕಾರಣ ಮಕ್ಕಳ ವಿದ್ಯೆಗಾಗಿ ಅವರ ತಂದೆ ಸಾಲ ಮಾಡಿದ್ದರು. ೧೮೯೦ರಲ್ಲಿ ರಾಮಪ್ಪಯ್ಯ ತೀರಿಕೊಂಡಾಗ ಮಂಗೇಶರಾಯರಿಗೆ ಹದಿನಾರು ವರ್ಷದ ಪ್ರಾಯವಾಗಿದ್ದು, ಮಂಗಳೂರಿನಲ್ಲಿ ಓದುತ್ತಿದ್ದರು.\u003cbr\u003eಅಣ್ಣ ಮದ್ರಾಸ್ (ಈಗಿನ ಚೆನ್ನೈ) ನಲ್ಲಿ ಓದುತ್ತಿದ್ದುದರಿಂದ ಸಂಸಾರದ ಜವಾಬ್ದಾರಿ ಇವರ ಮೇಲೇ ಬಿತ್ತು. ೧೮೯೪ ರಲ್ಲಿ ಇವರ ಮದುವೆ ಖ್ಯಾತನಾಮರಾದ ಬೆನಗಲ್ ರಾಮರಾವ್ ಅವರ ತಂಗಿ ಭವಾನಿಬಾಯಿಯವರೊಂದಿಗೆ ಜರುಗಿತು. ಈಗಿನ ಪಿಯುಸಿ ಎರಡನೆಯ ವರ್ಷಕ್ಕೆ ತತ್ಸಮವಾದ, ಕಾಲೇಜಿನ ಮೊದಲ ವರ್ಷದ ಎಫ್.ಏ.(ಆರ್ಟ್ಸ್) ತರಗತಿಯಲ್ಲಿ ಉತ್ತೀರ್ಣರಾದರು.\u003cbr\u003eಬಳಿಕ ಇವರು ೧೮೯೬ ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತ ಹುದ್ದೆ ಪಡೆದರು. ಇದಕ್ಕಾಗಿ ಅವರು ಕನ್ನಡ ವಿಶಿಷ್ಟ ಪರೀಕ್ಷೆಯಲ್ಲಿ ಪಾಸಾಗಿದ್ದರು. ಇಲ್ಲಿ ನಂದಳಿಕೆ ಲಕ್ಷ್ಮೀನಾರಾಯಣರು (ಮುದ್ದಣ ಕವಿ) ಸಹೋದ್ಯೋಗಿ ಯಾಗಿದ್ದರು. ಮಂಜೇಶ್ವರದ ಗೋವಿಂದ ಪೈಯವರು ಶಿಷ್ಯರಾಗಿದ್ದರು.\u003cbr\u003eಬಿ.ಎ ಪದವಿಯನ್ನು ಪಡೆದ ಬಳಿಕ ಮದ್ರಾಸಿನಲ್ಲಿ ಎಲ್ ಡಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮರಳಿ ಬಂದು ಮಂಗಳೂರು ಕಾಲೇಜಿನ ಉಪಾಧ್ಯಾಯ ವೃತ್ತಿಯನ್ನು ಮುಂದುವರೆಸಿದರು. ಅನತಿ ಕಾಲದಲ್ಲೇ ಮಂಗಳೂರಿನ ವಿದ್ಯಾ ಇಲಾಖೆಯಲ್ಲಿ ಸಬ್ ಅಸಿಸ್ಟಂಟ್ ಶಾಲಾ ಇನ್ಸ್‌ಪೆಕ್ಟರಾಗಿ ನೇಮಕಗೊಂಡರು. ಆಮೇಲೆ ಟ್ರೈನಿಂಗ್ ಶಾಲೆಯ ಅಧ್ಯಾಪಕರೂ ಆದರು.\u003cbr\u003eಶಾಲಾ ಇನ್ಸ್‌ಪೆಕ್ಟರಾಗಿದ್ದಾಗ ಉಪಾಧ್ಯಾಯರನ್ನು ಗೌರವದಿಂದ ಬಹುವಚನದಲ್ಲಿ ಮಾತಾಡಿಸಿ, ಮಕ್ಕಳ ಮನಸ್ಸನ್ನು ಆಕರ್ಷಿಸುವ ರೀತಿಯಲ್ಲಿ ಪಾಠ ಹೇಳುವ ಕ್ರಮವನ್ನು ನಯವಾಗಿ ತಿಳಿಹೇಳುವ ಅವರ ಕ್ರಮವೇ ಹೊಸ ತರಹದ್ದಾಗಿದ್ದು, ಇನ್ಸ್‌ಪೆಕ್ಟರ್ ಅಂದರೆ ಕಳವನ್ನು ಪತ್ತೆಹಚ್ಚಲು ಬರುವ ಪೊಲೀಸರಲ್ಲ ಎಂದು ಉಪಾಧ್ಯಾರ ಮನೋಭಾವನೆ ಬದಲಾಯಿತು.\u003cbr\u003eಅವರ ಆಗಮನವನ್ನು ಎದುರು ನೊಡುವ, ತಮ್ಮಲ್ಲಿನ ಸಂದರ್ಶನದ ಬಳಿಕ ಮುಂದಿನ ಊರಿಗೆ ಅವರನ್ನು ಮುಟ್ಟಿಸುವ ಉತ್ಸಾಹ ಉಪಾಧ್ಯಾಯರಲ್ಲಿ ಕಾಣಿಸತೊಡಗಿತು. ೧೯೨೧ರಲ್ಲಿ ಅವರನ್ನು ಕೊಡಗಿನ ಶಾಲಾ ಇನ್ಸ್‌ಪೆಕ್ಟರಾಗಿ ವರ್ಗಾಯಿಸಿದಾಗ, ತಮ್ಮವರಂತೆ ಹಾಗೂ ಆಗಿದ್ದ ಆಂಗ್ಲರಂತೆ, ಸೂಟು-ಬೂಟು ಧರಿಸದ, ಕಟ್ಟುನಿಟ್ಟಿನ ಶಿಸ್ತಿಲ್ಲದ ವಿದ್ಯಾಧಿಕಾರಿಯೆಂದು ತುಸು ಅಸಡ್ಡೆಯಿಂದ ಕೊಡಗಿನ ಜನತೆ ಕಂಡರು.\u003cbr\u003eಇನ್ಸ್‌ಪೆಕ್ಟರ್ ಜೆ ಎ ಯೇಟ್ಸನ ಹೊಸ ರೀತಿಯ ಪಾಠಕ್ರಮವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯಗತ ಮಾಡುವದರಲ್ಲಿ ಹೆಚ್ಚಿನ ಶ್ರಮವಹಿಸಿದರು. ಎರಡು ವರ್ಷಗಳ ನಂತರ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾರನ್ನಾಗಿ ಪಂಜೆಯವರನ್ನು ನೇಮಿಸಲಾಯಿತು.\u003cbr\u003eಅದುವರೆಗೆ ಆ ಶಾಲೆಯ ಮುಖ್ಯೋಪಾಧ್ಯಾರಾಗಿ ಆಂಗ್ಲರೇ ಇದ್ದು, ಈಗ ಬಂದ ದೇಶೀಯನನ್ನು ಸ್ಥಳೀಯ ಸಹೋದ್ಯೋಗಿಗಳು ತಾತ್ಸಾರದಿಂದ ಕಂಡರು. ೧೯೨೯ ರವರೆಗೆ ಅವರು ಈ ಹುದ್ದೆಯಲ್ಲಿದ್ದು ನಿವೃತ್ತರಾದಾಗ ೨೨ ವರ್ಷಗಳ ಕಾಲ ಜನಸೇವೆ ಸಂದಿತ್ತು.\u003c\/p\u003e","brand":"Shreenidhi Subhramanya","offers":[{"title":"Default Title","offer_id":42020602970371,"sku":"HB00001892","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_41891d01-aa5e-49de-aa2c-1c1180a3441e.jpg?v=1636356180"},{"product_id":"aadalita-padakosha","title":"ಆಡಳಿತ ಪದಕೋಶ","description":"\u003cp\u003eಸ.ರ.  ಸುದರ್ಶನ ಅವರು ಪ್ರಸ್ತುತ ಮೈ. ವಿ. ವಿ. ಯ ಪ್ರಸಾರಂಗದಲ್ಲಿ ಉಪನಿರ್ದೇಶಕ (ಪ್ರಭಾರ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮೈ. ವಿ. ವಿ. ಯ ಇಂಗ್ಲಿಷ್ - ಕನ್ನಡ ನಿಘಂಟು ಪರಿಷ್ಕರಣ ಯೋಜನೆಯಲ್ಲಿ ಸಹಾಯಕ ಸಂಪಾದಕರಾಗಿ ಸುಮಾರು ೧೫ ವರ್ಷಗಳ ಅನುಭವ ಪಡೆದಿದ್ದಾರೆ. ಈ ಅನುಭವದ ಹಿನ್ನಲೆಯಲ್ಲಿ ಪ್ರಸ್ತುತ 'ಆಡಳಿತ ಪದಕೋಶ'ವನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಇಂಗ್ಲಿಷ್‌ನ ಆಡಳಿತ ಶಬ್ದಗಳಿಗೆ ಸೂಕ್ತವಾದ ಕನ್ನಡ ಪದಗಳನ್ನು ವಿವಿಧ ಆಕರಗಳ ನೆರವಿನಿಂದ ಸಂಯೋಜಿಸುವ ಕಾರ್ಯವನ್ನು ಮಾಡಿದ್ದಾರೆ. ಇದರಲ್ಲಿ ಜನಸಾಮಾನ್ಯರಿಗೆ ಹೆಚ್ಚು ಪರಿಚಿತವಾಗಿರುವ ಪದಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದು ಆಡಳಿತದಲ್ಲಿ ಕನ್ನಡ ಬಳಕೆ ಸಂಪೂರ್ಣವಾಗಿ ಆಗಬೇಕಾಗಿರುವ ಈ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗಿದೆ.\u003c\/p\u003e","brand":"S. R. Sudarshan","offers":[{"title":"Default Title","offer_id":42020603232515,"sku":"HB00001888","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_b4c396be-2f79-45bd-b0cd-d68f92a2fd8c.jpg?v=1636356187"},{"product_id":"m-a-raamaanujayyangarya-avara-kabbigara-kaavam","title":"ಮಂ!! ಆ!! ರಾಮಾನುಜಯ್ಯಂಗಾರ‍್ಯ ಅವರ ಕಬ್ಬಿಗರ ಕಾವಂ","description":"\u003cp\u003e\u003cspan style=\"color: #000000;\"\u003eಕ‌ನ್ನಡ ಭಾಷೆಯ ಮೊಟ್ಟ ಮೊದಲನೆಯ ಅಚ್ಚಗನ್ನಡ ಕಾವ್ಯ. ಅಚ್ಚ ಕನ್ನಡದ ಕವಿ ಆಂಡಯ್ಯನ ಕನ್ನಡ ಭಾಷೆಯ ಅಭಿಮಾನ ಲೋಕೋತ್ತರವಾದುದು. ಸಂಸ್ಕೃತದ ಒಂದೂ ಪದವನ್ನು ಬೆರಸದೆ, ಅಚ್ಚ ಕನ್ನಡದಲ್ಲಿ ಕಾವ್ಯ ರಚನೆಯನ್ನು ಮಾಡಿದ ಹೆಗ್ಗಳಿಕೆ ಆಂಡಯ್ಯನದು. ಈ ಕಾವ್ಯದ ಹೆಸರು ಕಬ್ಬಿಗರ ಕಾವಂ - ಕವಿಗಳ ರಕ್ಷಕ ಎಂದು ತನ್ನ ಕೃತಿಗೆ ನಾಮಕರಣ ಮಾಡಿದ್ದಾನೆ. ಇದು ರಮ್ಯವಾಗಿರುವುದರಿಂದ ಇದಕ್ಕೆ ಸೊಬಗಿನ ಸುಗ್ಗಿ ಎಂಬ ಹೆಸರು ಬಂದಿದೆ. ಸಂಸ್ಕೃತ ತಿಳಿದವರು ಇದನ್ನು ಮದನ ವಿಜಯ ಎಂದು ಕರೆಯುತ್ತಾರೆ.\u003c\/span\u003e\u003c\/p\u003e","brand":"Samskriti Subhramanya","offers":[{"title":"Default Title","offer_id":42020603298051,"sku":"HB00001887","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0005.jpg?v=1636356188"},{"product_id":"dalita-kotyaadipatigalu-kannada-book","title":"ದಲಿತ ಕೋಟ್ಯಧಿಪತಿಗಳು","description":"\u003cp\u003e\u003cspan\u003eಲೇಖಕ ಮಿಲಿಂದ್ ಖಂಡೇಕರ್ ರಚಿಸಿರುವ 15 ಸ್ಫೂರ್ತಿದಾಯಕ ಕತೆಗಳನ್ನೊಳಗೊಂಡಿರುವ ಕೃತಿಯೇ ಈ ದಲಿತ ಕೋಟ್ಯಧಿಪತಿಗಳು...\u003c\/span\u003e\u003c\/p\u003e","brand":"Milind Kandekar, Translated By U. Shreedhar","offers":[{"title":"Default Title","offer_id":42020603592963,"sku":"HB00001883","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_38c35ce3-fa48-4af0-86b0-7a85182dbe67.jpg?v=1636356195"},{"product_id":"baaligondu-nambike","title":"ಬಾಳಿಗೊಂದು ನಂಬಿಕೆ","description":"\u003cp\u003e\u003cspan id=\"freeText17084762000866546273\"\u003eನನ್ನ ಸ್ವಂತ ನಂಬಿಕೆಯನ್ನು ಒಂದು ಪ್ರಬಂಧದಲ್ಲಿ ಸಮಗ್ರವಾಗಿಯೂ ಕಾರಣ ಮಿವರಣೆಯೊಡನೆಯೂ ರೂಪಗೊಳಿಸಬೇಕೆಂಬ ಆಲೋಚನೆ ಬಹುದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆ ಕೆಲಸವನ್ನು ಈ ಸಣ್ಣ ಪುಸ್ತಕದಲ್ಲಿ ತಕ್ಕಮಟ್ಟಿಗೆ ಪ್ರಯತ್ನಿಸಿದೆ.\u003cbr\u003e\u003cbr\u003eನಮ್ಮ ಬದುಕು ಚೆನ್ನಾಗಿ ಸಾಗಿ, ಸಾರ್ಥಕವಾಗಬೇಕಾದರೆ ನಮಗೆ ಒಂದು ಒಳ್ಳೆಯ ಗುರಿಯ ತಿಳಿವಳಿಕೆಯೂ, ಆ ಗುರಿಯನ್ನು ಮುಟ್ಟಿಸಬಲ್ಲ ದಾರಿಯ ತಿಳಿವಳಿಕೆಯೂ ಇರಬೇಕು. ಅಂಥ ಜೀವನಯಾತ್ರೆಯ ನಕಾಶೆಯೊಂದನ್ನು ಗುರುತು ಮಾಡಲು ಈ ಲೇಖನದಲ್ಲಿ ಯತ್ನಿಸಿದೆ.\u003cbr\u003e\u003cbr\u003eಅದು ಸುಲಭಸಾಧ್ಯವಾದ ಯೋಚನೆಯಲ್ಲ; ನಮ್ಮ ಪುರಾತನ ಮಹನೀಯರು ನಮಗೆ ತಕ್ಕ ಗುರಿಗೊತ್ತುಗಳನ್ನು ತಿಳಿಸಿಕೊಟ್ಟಿದ್ದಾರೆ ಎಂಬುದು ದಿಟ. ಆದರೆ ಈ ಹೊತ್ತು ಲೋಕ ಹೇಗಿದೆ? ಹತ್ತಾರು ಹೊಸಹೊಸ ಶಾಸ್ತ್ರಗಳೂ, ಹೊಸಹೊಸ ಮತಗಳೂ ತಲೆಯೆತ್ತಿ, ಹತ್ತಾರು ದಿಕ್ಕುಗಳಿಗೆ ನಮ್ಮ ಬುದ್ಧಿ ಮನಸ್ಸುಗಳನ್ನು ಸೆಳೆದಾಡಿ, ಹಳೆಯ ನಿಶ್ಚಯವನ್ನು ಹೋಗಲಾಡಿಸಿ, ಹೊಸ ಸಂದೇಹ ಸಂಕ್ಷೋಭೆಗಳನ್ನು ಹರಡಿವೆ. ಈ ಹೊಸ ವಿಜ್ಙಾನ ವಿಕ್ಷಿಪ್ತವಾದ ವಾತಾವರಣದಲ್ಲಿ ನಾವು ನಾವು ನಮ್ಮ ಜೀವನ ಸಮಸ್ಯಗಳನ್ನು ಪುನರ್ವಿಚಾರದಿಂದ ವಿಮರ್ಶೆ ಮಾಡಬೇಕಾಗಿದೆ.\u003cbr\u003e\u003cbr\u003eಇದು ಪಂಡಿತರಿಗಾಗಿ ಬರೆದ ಗ್ರಂಥವಲ್ಲ. ದೇಶದಲ್ಲಿ ಬಹುಮಂದಿಯಾದ ಅತಿ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿರಿಸಿಕೊಂಡು ಬರೆದ ಬರವಣಿಗೆ ಇದು.\u003cbr\u003e\u003cbr\u003eಇದನ್ನೋದುವವರಿಗೆ ಅಲ್ಲಲ್ಲಿ ಪ್ರಶ್ನೆಗಳೂ ಸಂದೇಹಗಳೂ ತೋರಬಹುದು. ಅಂಥವರು ಈ ಪುಸ್ತಕವನ್ನು ಕಡೆಯವರೆಗೂ ಓದಿದ ಬಳಿಕ ವಿಮರ್ಶೆಗೆ ಹೊರಡಬಹುದೆಂದು ಲೇಖಕನ ಮಿಜ್ಙಾಪನೆ.\u003c\/span\u003e\u003cspan\u003e \u003c\/span\u003e\u003c\/p\u003e","brand":"D.V.G","offers":[{"title":"Default Title","offer_id":42020603822339,"sku":"HB00001880","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_abbe3f18-cb4d-45fd-b9c3-fd1a833ef09d.jpg?v=1636356199"},{"product_id":"baria-nenapalla-palasteni-bhaavuka-kathana","title":"ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ","description":"\u003cp\u003e\u003c\/p\u003e","brand":"Marcello Di Cintio, Translated by Akarsh Ramesh Kamala","offers":[{"title":"Default Title","offer_id":42020603953411,"sku":"HB00001878","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_8a0f9a93-3fce-4be2-89a0-a5641acb1c45.jpg?v=1636356203"},{"product_id":"kappe-arabhattana-shaasana","title":"ಕಪ್ಪೆ ಅರಭಟ್ಟನ ಶಾಸನ ಸಮಗ್ರ ಅಧ್ಯಯನ","description":"\u003cp\u003e\u003cspan\u003eಹಿಂದೊಮ್ಮೆ ಪೂರ್ವ ಚಾಳುಕ್ಯರ ರಾಜಧಾನಿಯಾಗಿದ್ದ ಬಾದಾಮಿಯ ಶಾಸನ ಈ ಅಭ್ಯಾಸದ ಪ್ರಧಾನ ವಸ್ತು. ಜೆ.ಎಫ್. ಫ್ಲೀಟ್ ಇದನ್ನು 1881ರಲ್ಲಿಯೇ ಬೆಳಕಿಗೆ ತಂದರೂ ಸುಮಾರು ಅರ್ಧ ಶತಮಾನ ಕಾಲ ಇದು ಯಾರ ಗಮನವನ್ನೂ ಸೆಳೆಯಲಿಲ್ಲ. ಇದರಲ್ಲಿ ಬಳಸಿರುವ ವಿಶೇಷ ಛಂದಸ್ಸು ಮತ್ತು ಈ ಶಾಸನ ವೀರನಲ್ಲಿ ಸ್ಥಳೀಯರು ಕಂಡುಕೊಂಡ ಸ್ವಸ್ವರೂಪದಿಂದಾಗಿ ಕೆಲವು ಭಾಷಾಶಾಸ್ತ್ರಜ್ಞರ ಕುತೂಹಲವನ್ನು ಇದು ಕ್ರಮೇಣ ಕೆರಳಿಸತೊಡಗಿತು. ಇದರ ಪರಿಣಾಮದಿಂದಾಗಿ, 1930-2011ರ ಅವಧಿಯಲ್ಲಿ ಹತ್ತು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡವು. ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿಯೇ ಅತ್ಯಂತ ಪುರಾತನವೆನಿಸಿದ ತ್ರಿಪದಿ ಛಂದಸ್ಸಿನಲ್ಲಿ ರಚಿಸಿದ ಪದ್ಯಗಳನ್ನಲ್ಲದೆ, ಇಲ್ಲಿಯವರೆಗೂ ಇದರ ಬಗ್ಗೆ ಮಾಡಿದ ಸಂಶೋಧನೆಯ ಸ್ವರೂಪವನ್ನು ಪರಿಚಯಿಸಲು ನಾನಿಲ್ಲಿ ಪ್ರಯತ್ನಿಸಿರುವೆ.\u003c\/span\u003e\u003cbr\u003e\u003cspan\u003e*\u003c\/span\u003e\u003cbr\u003e\u003cspan\u003e…ಶಾಸನದ ಪಾಠವನ್ನು ಇದ್ದಕ್ಕಿದ್ದಂತೆಯೇ ಇಲ್ಲವೇ ಅಲ್ಪಸ್ವಲ್ಪ ಬದಲಿಸಿಯೋ ಬೇರೊಂದು ಪ್ರದೇಶದಲ್ಲಿ ಮರುಕಂಡರಿಸಿದ ನಿದರ್ಶನಗಳನ್ನು ವಿರಳವಾಗಿಯಾದರೂ ಕಾಣಬಹುದು, ಆದರೆ ಒಂದು ಶಾಸನವನ್ನು ತುಂಡರಿಸಿ ಒಂದೇ ಸ್ಥಳದಲ್ಲಿ ಅದನ್ನು ಹಂಚಿರುವುದನ್ನು ನಮ್ಮ ದೇಶದಲ್ಲೆಲ್ಲಿಯೂ ಕಾಣೆವು. ಈ ವಿಶೇಷ ಪ್ರಯೋಗದಿಂದಾಗಿ ನಮ್ಮ ದೇಶದ ಶಾಸನ ಕ್ಷೇತ್ರದಲ್ಲಿ ತಟ್ಟುಕೋಟೆಯ ಈ ಶಾಸನಕ್ಕೆ ವಿಶಿಷ್ಟ ಸ್ಥಾನವೊಂದು ದೊರಕಿದೆ.\u003c\/span\u003e\u003cbr\u003e\u003cspan\u003e*\u003c\/span\u003e\u003cbr\u003e\u003cspan\u003eಈ ಶಾಸನದ ಸಾಹಿತ್ಯಿಕ ಚರ್ಚೆ ಇಂದು ಮುಕ್ತಾಯದ ಹಂತ ತಲುಪಿದೆ. ತ್ರಿಪದಿ ಛಂದಸ್ಸಿನ ಪ್ರಾರಂಭವನ್ನು ನಾವಿಲ್ಲಿ ಕಂಡು, ಈ ಕಾವ್ಯಪ್ರಭೇದವು (ಆಂಧ್ರಪ್ರದೇಶವನ್ನೊಳಗೊಂಡು) ದಖ್ಖಣದಲ್ಲೆಲ್ಲ ಪ್ರಸರಿಸಿ, ಗಟ್ಟಿಗೊಳ್ಳುತ್ತಾ ರಂಗುಪಡೆದುಕೊಳ್ಳುತ್ತಾ ಮುಂದುವರಿದು, ಕನ್ನಡದ ಮಹಾಕವಿಗಳಾದ ಪಂಪ, ಪೊನ್ನ, ದುರ್ಗಸಿಂಹ, ಇಮ್ಮಡಿ ನಾಗವರ್ಮ, ಜನ್ನ, ಬಂಧುವರ್ಮ, ಮುಂತಾದವರ ಮೇಲೆ ಹೇಗೆ ಪ್ರಭಾವ ಬೀರಿ, ಕನ್ನಡದ ಸಂತ ಕವಿಯಾದ ಸರ್ವಜ್ಞನ ಹಾಡುಗಳಲ್ಲಿ ಹೇಗೆ ಔನ್ನತ್ಯದ ಅಂಚನ್ನು ಕಂಡುಕೊಂಡಿತು, ಮತ್ತು ಕನ್ನಡ ಮತ್ತು ಸಂಸ್ಕøತ ಅಲಂಕಾರಿಕರ ಗಮನವನ್ನು ತನ್ನೆಡೆಗೆ ಹೇಗೆ ಸೆಳೆದುಕೊಂಡಿತು, ಎಂಬುದನ್ನು ಕನ್ನಡ ಸಾಹಿತ್ಯ ಚರಿ\u003c\/span\u003e\u003c\/p\u003e","brand":"Sha. Shettar","offers":[{"title":"Default Title","offer_id":42020604018947,"sku":"HB00001877","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_8a64ccbc-00e1-431e-abac-e01940853905.jpg?v=1636356204"},{"product_id":"kannada-barahada-padasamasye","title":"ಕನ್ನಡ ಬರಹದ ಪದಸಮಸ್ಯೆ","description":"\u003cp\u003eಅತಿಯಾದ ಸಂಸ್ಕೃತ ಪದಗಳ ಬಳಕೆಯೇ ಇವತ್ತು ಕನ್ನಡ ಬರಹಗಳನ್ನು ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆ. ಕನ್ನಡಿಗರ ಮಾತಿನಲ್ಲಿ ನೂರಕ್ಕೆ ಐದರಷ್ಟು ಸಂಸ್ಕೃತ ಪದಗಳು ಬಳಕೆಯಾಗುತ್ತಿದ್ದರೆ, ಬರಹಗಳಲ್ಲಿ ನೂರಕ್ಕೆ ನಲುವತ್ತು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕೃತ ಪದಗಳು ಬಳಕೆಯಾಗುತ್ತವೆ. ಇವನ್ನೆಲ್ಲ ಮಾತಿನಲ್ಲಿ ಇಲ್ಲವೇ ಓದಿನಲ್ಲಿ ಇರುವ ಹಾಗೆ ಬರೆಯದೆ ಸಂಸ್ಕೃತದಲ್ಲಿರುವ ಹಾಗೆ ಬರೆಯುವುದು ಈ ಸಮಸ್ಯೆಯನ್ನು ಹೆಚ್ಚು ಮಾಡಿದೆ. ಕನ್ನಡದ ವಿಜ್ಞಾನ ಬರಹಗಳಲ್ಲಂತೂ ಸಂಸ್ಕೃತದಲ್ಲಿ ಕಟ್ಟಿದ ಪಾರಿಭಾಷಿಕ ಪದಗಳು ತುಂಬಿಹೋಗಿವೆ. ಇವು ಕನ್ನಡ ಬರಹ ತುಂಬಾ ಕೃತಕವಾಗುವ ಹಾಗೆ ಮಾಡಿವೆ ಮತ್ತು ಅವುಗಳಲ್ಲಿ ಜೀವಂತಿಕೆ ಇಲ್ಲದಂತೆ ಮಾಡಿದೆ. ಇದಲ್ಲದೆ, ಕನ್ನಡ ಬರಹ ಸಮಾಜದ ಎಲ್ಲಾ ಜನರನ್ನೂ ತಲಪುವಂತೆ ಮಾಡುವಲ್ಲಿ ಈ ಪದಸಮಸ್ಯೆ ಒಂದು ದೊಡ್ಡ ತೊಡಕಾಗಿದೆ. ಕನ್ನಡಿಗರ ಮಾತಿಗೂ ಬರಹಕ್ಕೂ ನಡುವಿರುವ ಅಂತರ ಈ ಪದಸಮಸ್ಯೆಯಿಂದಾಗಿ ತುಂಬಾ ಹೆಚ್ಚಾಗಿದೆ. ಈ ಸಮಸ್ಯೆಯ ನಿಜವಾದ ಸ್ವರೂಪ ಎಂತಹದು ಮತ್ತು ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಈ ಕಿರುಕಡತದಲ್ಲಿ ತೋರಿಸಿಕೊಡಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020604150019,"sku":"HB00001875","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/D.N.S.jpg?v=1636356207"},{"product_id":"pracheena-bharathavemba-adbhuta","title":"ಪ್ರಾಚೀನ ಭಾರತವೆಂಬ ಅದ್ಭುತ","description":"\u003cp\u003e\u003c\/p\u003e","brand":"D. R. Mirji","offers":[{"title":"Default Title","offer_id":42020604215555,"sku":"HB00001874","price":950.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_3d48e711-9597-4705-861a-0f7514a2234e.jpg?v=1636356209"},{"product_id":"americadalli-gorooru","title":"ಅಮೇರಿಕಾದಲ್ಲಿ ಗೊರೂರು","description":"\u003cp\u003eಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ವಿಶಿಷ್ಟ ಲೇಖಕರು. ಸ್ವಾತಂತ್ರ ಹೋರಾಟದ ಭಾಗವಾಗಿ ಬೆಳೆದ ಭಾವಕೋಶವುಳ್ಳ ಗೊರೂರರ ಸಾಹಿತ್ಯವು ಸಾಮಾಜಿಕ - ರಾಜಕೀಯ ಇತಿಹಾಸದ ಕೆಲವು ಮಹತ್ವಪೂರ್ಣ ಗುರುತುಗಳನ್ನು ದಾಖಲಿಸಿದೆ. ಕತೆ, ಪ್ರಬಂಧ, ಲಲಿತ ಪ್ರಬಂಧ - ಹೀಗೆ ಯಾವುದೇ ಪ್ರಕಾರದಲ್ಲಿ ಬರೆದರೂ ಪರಸ್ಪರ ಸಂಬಂಧ ಸ್ಥಾಪಿಸುವ ಶೈಲಿಯನ್ನು ರೂಢಿಸಿಕೊಂಡ ಗೊರೂರರು ಬದುಕಿನ ಚಲನಶೀಲತೆಗೆ ಎಂದೂ ಬೆನ್ನು ತೋರಿಸಿದವರಲ್ಲ ಹೀಗಾಗಿ ಅವರ ಸಾಹಿತ್ಯವು ಚಲನಶೀಲ ಮೌಲ್ಯಗಳನ್ನು ಒಳಗೊಳ್ಳುತ್ತಲೇ ಸಮಕಾಲೀನವಾಗುತ್ತದೆ : ವರ್ತಮಾನದಲ್ಲಿ ಉಸಿರಾಡುತ್ತದೆ. ಗೊರೂರು ಸಾಹಿತ್ಯದಲ್ಲಿ ಮೈತಳೆದ ಕೆಲವು ವ್ಯಕ್ತಿಚಿತ್ರಗಳು ಸಾಂಸ್ಕೃತಿಕ ಚೌಕಟ್ಟಿನ ಸಾಮಾಜಿಕ ಅಂತಃಸತ್ವವಾಗಿ ಅರಳುತ್ತವೆ. ಸರಳ, ಸಂವಹನಶೀಲ ಸಾಹಿತ್ಯ ರಚನೆಯ ಮೂಲಕ ಸಂಕೀರ್ಣ ಬದುಕಿನ ವಿವರಗಳನ್ನು ನಿರೂಪಿಸುವ ಗೊರೂರರು ತಮಗೆ ತಾವೇ ಒಂದು ಮಾದರಿಯಾಗಿದ್ದಾರೆ. ಈ ಮಾದರಿಯೊಂದಿಗೆ ನಡೆಸುವ ಮಾತುಕತೆಯ ಮೂಲಕ ಅರ್ಥಪೂರ್ಣ ಚಿಂತನೆ ಹೊರಹೊಮ್ಮುವಂತಾಗಲಿ. ಶ್ರೀ ಸಂಜಯ ಅಡಿಗ ಅವರು ಗೊರೂರರ ಎಲ್ಲ ಕೃತಿಗಳ ಮರುಮುದ್ರಣ ಮಾಡಿದ್ದು, ಇದು ಮರು ಚಿಂತನೆಗೆ ಪ್ರೇರಣೆಯಾಗಲಿ.\u003cbr\u003e\u003c\/p\u003e\n\u003cp\u003e- ಪ್ರೊ. ಬರಗೂರು ರಾಮಚಂದ್ರಪ್ಪ\u003c\/p\u003e","brand":"Goruru Ramaswamy Iyengar","offers":[{"title":"Default Title","offer_id":42020604281091,"sku":"HB00001873","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ba90c98b-630d-4098-aac4-6b8611660924.jpg?v=1636356210"},{"product_id":"huliraaya-mattu-itara-kategalu","title":"ಹುಲಿರಾಯ ಮತ್ತು ಇತರ ಕಥೆಗಳು","description":"\u003cp\u003eಹುಲಿರಾಯ ಮತ್ತು ಇತರ ಕಥೆಗಳು\u003c\/p\u003e","brand":"M. Gopalakrishna Adiga","offers":[{"title":"Default Title","offer_id":42020604346627,"sku":"HB00001872","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_25231c90-5d21-4c04-ada4-f48d9999850b.jpg?v=1636356212"},{"product_id":"bahubali-satyavannu-ariyalu-saamraajyavanne-bittukottavanu","title":"ಬಾಹುಬಲಿ - ಸತ್ಯವನ್ನು ಅರಿಯಲು ತನ್ನ ಸಾಮ್ರಾಜ್ಯವನ್ನೇ ಬಿಟ್ಟುಕೊಟ್ಟವನು","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020604674307,"sku":"HB00001870","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_991de495-1662-41b5-8caa-4c3e834784c9.jpg?v=1636356217"},{"product_id":"bheema-mattu-hanuma-vaayu-devara-makkalu","title":"ಭೀಮ ಮತ್ತು ಹನುಮ - ವಾಯು ದೇವರ ಮಕ್ಕಳು","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020604805379,"sku":"HB00001868","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_f191b3a1-7119-4ea7-a229-f0cd037d1c48.jpg?v=1636356221"},{"product_id":"jaana-birbal-akbarana-aapta-mantri-birballana-sahasagalu","title":"ಜಾಣ ಬೀರ್ಬಲ್ - ಅಕ್ಬರನ ಆಪ್ತ ಮಂತ್ರಿ ಬೀರ್ಬಲ್ಲನ ಸಾಹಸಗಳು","description":"\u003cp\u003e\u003c\/p\u003e","brand":"I. B. H. Publications","offers":[{"title":"Default Title","offer_id":42020604870915,"sku":"HB00001867","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_553ea68e-ca87-416f-8f08-37a41a9d4c78.jpg?v=1636356223"},{"product_id":"iliya-vyaapaari-ondu-jaataka-kate","title":"ಇಲಿಯ ವ್ಯಾಪಾರಿ - ಒಂದು ಜಾತಕ ಕಥೆ","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020605034755,"sku":"HB00001865","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_5909c180-96a9-4f61-a399-2088821fae34.jpg?v=1636356227"},{"product_id":"haaruva-kalla-kesariya-vivekada-kategalu","title":"ಹಾರುವ ಕಳ್ಳ-ಕೇಸರಿ - ವಿವೇಕದ ಕಥೆಗಳು","description":"\u003cp\u003e\u003c\/p\u003e","brand":"I. B. H. Publications","offers":[{"title":"Default Title","offer_id":42020605100291,"sku":"HB00001864","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_7025a2c9-d5df-4724-b275-699dc1eeac8f.jpg?v=1636356229"},{"product_id":"kaagegalu-mattu-goobegalu-panchatantra-kategalu","title":"ಕಾಗೆಗಳು ಮತ್ತು ಗೂಬೆಗಳು - ಪಂಚತಂತ್ರದ ಕಥೆಗಳು","description":"\u003cp\u003e\u003c\/p\u003e","brand":"I. B. H. Publications","offers":[{"title":"Default Title","offer_id":42020605165827,"sku":"HB00001863","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_f526e431-6101-47fc-b2f5-5c0bc738b4ef.jpg?v=1636356231"},{"product_id":"panchatantra-ranjaneeya-kategalu","title":"ಪಂಚತಂತ್ರ - ರಂಜನೀಯ ಕಥೆಗಳು","description":"\u003cp\u003e\u003cspan\u003eಪಂಚತಂತ್ರದ ಕಥೆಗಳು ಬಹಳ ಪ್ರಾಚೀನವಾದವು. ಅವುಗಳ ಮೂಲ ಸಂಸ್ಕೃತದಲ್ಲಿ ರಚನೆಗೊಂಡಿವೆ. ಓದಲು ಸ್ವಾರಸ್ಯ ವಾಗಿರುವುದು ಮಾತ್ರವಲ್ಲದೆ,ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಉತ್ತಮ ಮಾರ್ಗದರ್ಶನವನ್ನು ನೀಡುತ್ತದೆ.ಪ್ರತಿ ಕಥೆಯೂ ಒಂದು ನೀತಿ ಮೌಲ್ಯವನ್ನು ಪ್ರತಿಪಾದಿಸುತ್ತದೆ.ಆದ್ದರಿಂದಲೇ ಎಲ್ಲ ವಯೋಮಾನದವರು ಆ ಕಥೆಗಳನ್ನು ಅತ್ಯಂತ ಆಸಕ್ತಿಯಿಂದ ಓದುತ್ತಾರೆ.\u003c\/span\u003e\u003cbr\u003e\u003cspan\u003eಪಂಚತಂತ್ರ ಎಂಬುದು ಎರಡು ಪದಗಳಿಂದ ಆಗಿದೆ ‘ಪಂಚ’ ಎಂದರೆ ‘ಐದು’ ಮತ್ತು ‘ತಂತ್ರ’ ಎಂದರೆ ‘ಆಚರಣೆ’ ಅಥವಾ ನಡವಳಿಕೆಯ ತತ್ವಗಳು. ಆದ್ದರಿಂದ ಪಂಚತಂತ್ರ ಪ್ರಧಾನವಾಗಿ ಮಕ್ಕಳು ಓದಲು ಪ್ರಿಯವಾಗುವ ಪ್ರಾಣಿಗಳ ಕಥೆಗಳ ಮೂಲಕ ನೀತಿ ಶಾಸ್ತ್ರವನ್ನು (ಜೀವನದ ಬುದ್ಧಿವಂತಿಕೆ) ನಿರೂಪಿಸುತ್ತದೆ.\u003c\/span\u003e\u003c\/p\u003e","brand":"I B H Publication","offers":[{"title":"Default Title","offer_id":42020605264131,"sku":"HB00001862","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_f0491418-2592-4efe-974f-183f1652be64.jpg?v=1636356233"},{"product_id":"pattedaara-sahasasimha-kanmareyaada-pustakagala-prakarana","title":"ಪತ್ತೇದಾರ ಸಾಹಸಸಿಂಹ - ಕಣ್ಮರೆಯಾಗುವ ಪುಸ್ತಕಗಳ ಪ್ರಕರಣ","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020605690115,"sku":"HB00001856","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ecee403d-94ee-4550-9aad-5daf5241eb5d.jpg?v=1636356243"},{"product_id":"pattedaara-sahasasimha-ollada-manasina-jebugallana-prakarana","title":"ಪತ್ತೇದಾರ ಸಾಹಸಸಿಂಹ - ಒಲ್ಲದ ಮನಸ್ಸಿನ ಜೇಬುಗಳ್ಳನ ಪ್ರಕರಣ","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020605755651,"sku":"HB00001855","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_d556146b-7a9e-4795-877c-f36b95e18f03.jpg?v=1636356245"},{"product_id":"kannada-manikya-kiccha","title":"ಕನ್ನಡ ಮಾಣಿಕ್ಯ ಕಿಚ್ಚ","description":"\u003cp\u003e\u003c\/p\u003e","brand":"Dr. Sharanu Hulluru","offers":[{"title":"Default Title","offer_id":42020605821187,"sku":"HB00001854","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_a6334ae9-0597-44fe-a70e-57037abea58e.jpg?v=1636356247"},{"product_id":"naaticha-raami-saisuthe-kannada","title":"ನಾತಿಚರಾಮಿ","description":"ನಾತಿಚರಾಮಿ : ಇದು ಸಾಯಿಸುತೆರವರು ಬರೆದಿರುವ ಸಾಮಾಜಿಕ ಕಾದಂಬರಿ.\n\u003cp\u003e \u003c\/p\u003e","brand":"Saisuthe","offers":[{"title":"Default Title","offer_id":42020606017795,"sku":"HB00001851","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_46f210ad-7fde-4e25-b580-841d268d971a.jpg?v=1636356251"},{"product_id":"hrudaya-raaga","title":"ಹೃದಯರಾಗ","description":"\u003cp\u003e\u003c\/p\u003e","brand":"Saisuthe","offers":[{"title":"2nd Edition","offer_id":49557603713283,"sku":"HB00001850","price":170.0,"currency_code":"INR","in_stock":true},{"title":"1st Edition","offer_id":49557606007043,"sku":"HB00007507","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0fba01b7-4d8b-4ff8-8253-dec6a1d4f863.jpg?v=1636356252"},{"product_id":"geronimo-n-a-m-ismail-kannada-book","title":"ಜೆರೊನಿಮೊ - ಆದಿವಾಸಿಯ ಆತ್ಮ ಕಥನ","description":"\u003cp\u003eನಾವು ಯಾವತ್ತೂ ನಮ್ಮ ವಿರೋಧಿಗಳನ್ನು ಶಿಕ್ಷಿಸು ಎಂದು ಉಸೇನ್ನನ್ನು ಬೇಡಿಕೊಂಡಿಲ್ಲ. ನಮಗೆ ಯಾರ ಮೇಲಾದರೂ ಸೇಡಿದ್ದರೆ ಅದನ್ನು ನಾವೇ ತೀರಿಸಿಕೊಳ್ಳುತ್ತಿದ್ದೆವು. ಉಸೆನ್ ಮನುಷ್ಯರ ಕ್ಷುಲ್ಲಕ ಜಗಳನ್ನು ಲಕ್ಷಿಸುವುದಿಲ್ಲ ಎಂದು ನಮಗೆ ಕಲಿಸಿಕೊಡಲಾಗಿತ್ತು.\u003c\/p\u003e\n\u003cp\u003eನಮಗೆ ದೈವದತ್ತ ಹಕ್ಕಾಗಿ ದೊರೆತ ಭೂಮಿಗೆ ಹಿಂದಿರುಗುವ ಸ್ವಾತಂತ್ರ್ಯ ಬೇಕು. ನಮ್ಮ ಸಂಖ್ಯೆ ಕುಸಿಯುತ್ತಿದೆ. ಈಗಾಗಲೇ ನಾವು ಕೃಷಿಯ ವಿಧಾನಗಳನ್ನು ಕಲಿತಿರುವುದರಿಂದ ನಮಗೆ ಹಿಂದಿನಷ್ಟು ದೊಡ್ಡ ಪ್ರಮಾಣದ ಭೂಮಿಯ ಅಗತ್ಯವಿಲ್ಲ. ನಮಗೆ ದೇವರು ಆದಿಯಲ್ಲಿ ಕೊಟ್ಟಿದ್ದ ಎಲ್ಲಾ ಭೂಮಿಯನ್ನೂ ನಮಗೇ ಕೊಡಬೇಕೆಂದು ನಾವು ಕೇಳುತ್ತಿಲ್ಲ. ಆದರೆ ನಮಗೆ ಕೃಷಿ ಮಾಡುವುದಕ್ಕೆ ಅಗತ್ಯವಿರುವಷ್ಟು ಭೂಮಿ ಬೇಕು. ನಮಗೆ ಅಗತ್ಯವಿಲ್ಲದ ಭೂಮಿಯಲ್ಲಿ ಬಿಳಿಯರು ಕೃಷಿ ಮಾಡುವುದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ.\u003c\/p\u003e","brand":"N. A. M. Ismail","offers":[{"title":"Default Title","offer_id":42020606181635,"sku":"HB00001849","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0931d0fd-448f-4fb1-8a7f-8101823b4e81.jpg?v=1636356254"},{"product_id":"bandoola","title":"ಬಂಡೂಲ","description":"\u003cp\u003e\u003cspan\u003eಬ್ರಿಟಿಷ್ ಸೈನಿಕನೊಬ್ಬನು ಮೊದಲ ಮಹಾಯುದ್ಧದಲ್ಲಿ ಹೋರಾಡಿ ರೋಸಿ ಹೋಗುತ್ತಾನೆ. ನೆಮ್ಮದಿಯನ್ನು ಹುಡುಕಿ ಬರ್ಮಾ ದೇಶದ ಕಾಡುಗಳಲ್ಲಿ ಒಂದು ಕೆಲಸವನ್ನು ಹುಡುಕಿಕೊಂಡು ಹೋಗುತ್ತಾನೆ. ಅಲ್ಲಿ ಸಾಕು ಆನೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವನ ಮೇಲೆ ಬೀಳುತ್ತದೆ. ಆ ಆನೆಗಳೊಡನೆ ವಿಶೇಷ ಸಂಬಂಧವನ್ನು ಬೆಳೆಸಿಕೊಂಡ ಆತನ ಅಪರೂಪದ ಜೀವನಚರಿತ್ರೆ. ಪ್ರಾಣಿಗಳ ಒಡನಾಟದ ಈ ಜೀವಂತ ಕಥನ ನಮ್ಮ ಮನಸ್ಸನ್ನು ಆರ್ದ್ರಗೊಳಿಸುತ್ತದೆ.\u003c\/span\u003e\u003c\/p\u003e","brand":"Translated by Rajashri kulamarva","offers":[{"title":"Default Title","offer_id":42020606247171,"sku":"HB00001848","price":323.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_e4caf7ba-468f-4087-b1ff-0b366ae92385.jpg?v=1636356256"},{"product_id":"ugaadi","title":"ಯುಗಾದಿ","description":"\u003cp\u003eಮನೆಗೆ ಹೋಗುವ ದಿನ ಮಾಸ್ತರರು ರಾಧಳಿಗೆ ಒಂದಿಷ್ಟು ಹಣ್ಣು-ಹಂಪಲುಗಳನ್ನು ಕೊಟ್ಟರು. ಅವುಗಳ ಮೇಲಿಟ್ಟಿದ್ದ ನೋಟುಗಳನ್ನು ನಯವಾಗಿ ನಿರಾಕರಿಸಿದ ರಾಧ, 'ಏನ್ರಿ ಮಾಸ್ತರ್ರೆ... ನಿಮ್ಮ ಹತ್ತಿರ ಹಣ ಹೆಂಗೆ ತೊಗಳ್ಳಿ ರೀ...' ಅಂತಂದಳು. 'ಹಂಗಲ್ಲಮ್ಮ ಇಷ್ಟು ಹಚ್ಚಿಗೊಂಡು ಮಾಡಿದ್ದೆ... ಅದಕ್ಕೆ ಪ್ರತಿಯಾಗಿ ನಾವು ಏನಾರ ಕೊಡಬೇಕೋ ಬ್ಯಾಡೋ...' ಅಂತಂದರು. 'ಮಾಸ್ತರ್ರೆ, ಬದುಕು ಮಾಡೋದು ಹೆಂಗೆ ಅಂತ ಕಲಿಸಿ ಕೊಟ್ಟೇರಿ. ಅದಕ್ಕಿಂತ ದೊಡ್ಡದು ಬೇರೆ ಏನು ಕೊಡಲಿಕ್ಕೆ ಆಗೈತೆ ಬಿಡ್ರಿ' ಅಂತಂದು ಖಡಾಖಂಡಿತವಾಗಿ ಹಣವನ್ನು ನಿರಾಕರಿಸಿಬಿಟ್ಟಳು. ಕಾರಿನ ತನಕ ಬಂದು, ಮಗುವಿನ ಮೂಗನ್ನು “ಅ...ಲ...ಲಾ...' ಎಂದು ಅಲ್ಲಾಡಿಸಿ ಬೀಳ್ಕೊಟ್ಟಳು. ಕಾರಿನಲ್ಲಿ ವಾಪಾಸು ಮನೆಗೆ ಹೋಗುವಾಗ ಪ್ರಹ್ಲಾದ ಮಾತನಾಡಿದ, “ಅಪ್ಪ ರಾಧಳಂತಹ ವ್ಯಕ್ತಿ ನನ್ನ ಜೀವನದಲ್ಲಿ ಖಂಡಿತಾ ಸಿಗಂಗಿಲ್ಲ ಅನಿಸ್ತದೆ.\u003c\/p\u003e\n\u003cp\u003eಈ ರೀತಿ, ರೋಚಕವಾಗಿ ವರ್ಣಿಸುತ್ತ, ತಮ್ಮ ಸಣ್ಣಕಥೆಗಳಲ್ಲಿ ಬೇಕಾದ ವೈಶಿಷ್ಟ್ಯಗಳನ್ನು ತುಂಬುತ್ತ, ಕಥಾ ಗುಚ್ಛವನ್ನು ಲೇಖಕ ವಸುಧೇಂದ್ರ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.\u003c\/p\u003e","brand":"Vasudhendra","offers":[{"title":"Default Title","offer_id":42020606411011,"sku":"HB00001846","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0bd06dd4-f1f7-44b0-93fe-3373863203ab.jpg?v=1636356259"},{"product_id":"parvatadalli-pavaada","title":"ಪರ್ವತದಲ್ಲಿ ಪವಾಡ","description":"\u003cp\u003e\u003cspan\u003eನ್ಯಾಂಡೋ ಪರಾಡೋ ಮತ್ತವನ ಫೂಟ್‌ಬಾಲ್ ಆಟದ ಗೆಳೆಯರ ವಿಮಾನವು, ಆಂಡೀಸ್ ಪರ್ವತಗಳ ಮೇಲೆ ಹತೋಟಿ ತಪ್ಪಿ ಬಿದ್ದಾಗ, ಸಾಕಷ್ಟು ಜನರು ಬದುಕಿ ಉಳಿಯುತ್ತಾರೆ. ಆದರೆ ಆ ಪರ್ವತಗಳನ್ನು ದಾಟಿ ಮರಳಿ ಜನವಸತಿಯ ಭಾಗಕ್ಕೆ ಬರುವುದು ಅತ್ಯಂತ ಸಂಕಷ್ಟದ ಸಂಗತಿಯಾಗಿರುತ್ತದೆ. ಆದರೂ ಬದುಕುವ ಛಲದಿಂದ ಹಲವರು ಈ ಪರ್ವತಗಳನ್ನು ದಾಟಿ ಬರುತ್ತಾರೆ. ಸಾಹಸ, ಬದುಕುಳಿಯುವ ಛಲ ಇತ್ಯಾದಿಗಳ ಕುರಿತ ಒಂದು ಮನೋಜ್ಞ ಅನುಭವ ಕಥನ.\u003c\/span\u003e\u003c\/p\u003e\n\u003cp\u003e\u003cspan\u003eಪುಸ್ತಕದ ಕುರಿತು ಸಂಯುಕ್ತಾ ಪುಲಿಗಲ್ ಅವರ ಮಾತುಗಳು ಇಲ್ಲಿವೆ: https:\/\/youtu.be\/qqGhLNB9EKIk\u003c\/span\u003e\u003c\/p\u003e\n\u003cp\u003e \u003c\/p\u003e","brand":"Translated by Samyuktha Puligal","offers":[{"title":"1st Print","offer_id":49548504203523,"sku":"HB00001845","price":340.0,"currency_code":"INR","in_stock":true},{"title":"2nd Edition","offer_id":49548506333443,"sku":null,"price":370.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_1a444282-2f5c-4c9f-8244-30f92c32dba3.jpg?v=1636356261"},{"product_id":"deepavirada-daariyalli","title":"ದೀಪವಿರದ ದಾರಿಯಲ್ಲಿ","description":"\u003cp\u003eನಮ್ಮ ಸಮಾಜದಲ್ಲಿ ಸಲಿಂಗರತಿ ಮತ್ತು ಅದಕ್ಕೆ ಸಂಬಂಧಿಸಿದಂತಿರುವ ಅನೇಕ ಸಂಗತಿಗಳು ಜನಪ್ರಿಯವಾಗಿದ್ದರೂ, ಅದರ ಬಗ್ಗೆ ಬಹಿರಂಗವಾದ ಚರ್ಚೆಗಳು ನಡೆದದ್ದು ಕಡಿಮೆ. ಈ ಕುರಿತು ನಮ್ಮ ತಿಳುವಳಿಕೆಗಳನ್ನು ಹೆಚ್ಚಿಸುವ ಪುಸ್ತಕಗಳಾಗಲಿ, ಲೇಖನಗಳಾಗಲಿ ಪ್ರಕಟವಾದದ್ದು ಕೂಡಾ ಕಡಿಮೆಯೆ. ಒಂದು ಗಂಡಿಗೆ ಇನ್ನೊಂದು ಗಂಡಿನ ಮೇಲಿನ ಮೋಹ ಹುಟ್ಟುವುದು ಅಸಹಜವೇನಲ್ಲವಾದರೂ, ಅದರ ಬಗ್ಗೆ ಅಮೆರಿಕಾದಲ್ಲೋ, ಮೆಕ್ಸಿಕೋದಲ್ಲೋ ಮಾತಾಡುವಷ್ಟು ಸಹಜವಾಗಿ ನಾವು ಮಾತಾಡಲಾರೆವು. ಸಲಿಂಗ ಪ್ರೇಮಿಗಳನ್ನು ನಮ್ಮ ಸಮಾಜವು ಆದರಿಸುವ ಉದಾರತೆಯನ್ನು ಇನ್ನೂ ತೋರಿಸಿಲ್ಲ. ಈ ಕಾದಂಬರಿಯು ಅಂತಹ ಲೈಂಗಿಕತೆಯ ವಿಭಿನ್ನ ಮಜಲುಗಳನ್ನು ಧೈರ್ಯವಾಗಿ ಶೋಧಿಸುತ್ತದೆ.\u003c\/p\u003e\n\u003cp\u003eರವೀಂದ್ರ, ಆಕಾಶ್ ಮತ್ತು ಸುಕೇಶರ ನಡುವಣ ತ್ರಿಕೋನ ಸಂಬಂಧಗಳ ಜೊತೆಗೆ, ಗಂಡಸರ ಹಿಂದೆ ಹೋಗುವ ರಘುಪತಿಯ ಸಮಸ್ಯೆಗಳೂ ಬಿಚ್ಚಿಕೊಳ್ಳುತ್ತವೆ. ಗೇ ಸೆಕ್ಸ್ ವೀಡಿಯೋ ನೋಡುವ ಗಂಡನನ್ನು ತೊರೆದು, ಅವನ ಹೆಂಡತಿ ಗುಜರಾತಿಯೊಬ್ಬನ ಸ್ನೇಹ ಮಾಡುತ್ತಾಳೆ. ಈ ಎಲ್ಲಾ ಘಟನೆಗಳನ್ನು ಸಮಾಜವು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಳ್ಳುತ್ತಾ ಹೋಗುತ್ತದೆ. ಇಂಥ ಸಂಕೀರ್ಣ ಸ್ಥಿತಿಯನ್ನು ಕಾದಂಬರಿ ತಣ್ಣಗೆ ಕಟ್ಟಿಕೊಡುತ್ತದೆ. ಈ ಕಾದಂಬರಿಯ ವಸ್ತು ಮತ್ತು ಪಾತ್ರಗಳು ಕನ್ನಡಕ್ಕೆ ತೀರಾ ಹೊಸದು. ಕಾನೂನು ತೊಡಕುಗಳು, ಸಂಪ್ರದಾಯಸ್ಥರ ಆಕ್ರಮಣ, ಮಡಿವಂತಿಕೆ ನಿಷೇಧ ಭಯ ಇತ್ಯಾದಿ ಕಾರಣಗಳಿಂದಾಗಿ LGBTQ ಕಥನಗಳು ಸಾಹಿತ್ಯದ ಮುಖ್ಯ ಧಾರೆಗೆ ಬರಲೇ ಇಲ್ಲ. ಸುಶಾಂತ್ ಕೋಟ್ಯಾನ್, ತುಂಬ ಧೈರ್ಯವಹಿಸಿ ಈ ಕಾದಂಬರಿಯನ್ನು ಬರೆದು ನಮ್ಮ ಅರಿವಿನ ಗಡಿರೇಖೆಗಳನ್ನು ವಿಸ್ತರಿಸಿದ್ದಾರೆ.\u003c\/p\u003e","brand":"Sushanth Kotyan","offers":[{"title":"Default Title","offer_id":42020606542083,"sku":"HB00001844","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ba664320-8859-4af1-a378-b0f21022756b.jpg?v=1636356263"},{"product_id":"vaadi-vaasal","title":"ವಾಡಿವಾಸಲ್","description":"\u003cp\u003eತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ – ಜಲ್ಲಿಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದು ಬಂದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು \"ಏರು ತಳುವುದಲ್\". ಏರು ಎಂಬ ಶಬ್ದಕ್ಕೆ \u003cstrong\u003eಎತ್ತು\u003c\/strong\u003e ಅಥವಾ \u003cstrong\u003eಗೂಳಿ\u003c\/strong\u003e ಎಂಬ ಅರ್ಥವಿದೆ. ಗೂಳಿಯನ್ನು ಅಡಗಿಸಿ ಕನ್ಯೆಯ ಕೈ ಹಿಡಿಯುವ ವ್ಯಕ್ತಿಗಳ ಬಗ್ಗೆ ಚಿತ್ರಣಗಳಿವೆ. ಅದನ್ನು ಕಥಾವಸ್ತುವಾಗಿ ಬಳಸಿಕೊಂಡು ಬರೆದ ಕಥೆ ಇದು. ಚಿ.ಸು. ಚೆಲ್ಲಪ್ಪ ವಿವರಿಸುವ ವಿಧಾನ, ಪಾತ್ರಗಳನ್ನು ಬೆಳೆಸುವ ರೀತಿ, ಕಟ್ಟಿಕೊಡುವ ನೈಜ ಚಿತ್ರಣ - ಇವುಗಳಿಂದ ಅವರು ಎಂತಹ ಶ್ರೇಷ್ಠ ಸಾಹಿತಿಯೆಂಬುದು ಗೊತ್ತಾಗುತ್ತದೆ. ವಾಡಿವಾಸಲ್‌ನಲ್ಲಿ ಮನುಷ್ಯನ ರಕ್ತ ಬೀಳಬಹುದು, ಆದರೆ ಗೂಳಿಯ ರಕ್ತ ಬೀಳುವಂತಿಲ್ಲ. ಮನುಷ್ಯನಿಗೆ ಇದು ಆಟವೇ ಆಗಿರಬಹುದು, ಆದರೆ ಗೂಳಿಗೆ ಇದು ಆಟವಲ್ಲ. ಜಲ್ಲಿಕಟ್ಟು ಮೃಗವನ್ನು ಹಿಂಸಿಸುವ ಕ್ರೀಡೆಯೆಂದು ವಿಮರ್ಶಿಸುವ ಪ್ರಾಣಿದಯಾ ಗುಂಪಿನವರು, ಒಮ್ಮೆ “ವಾಡಿವಾಸಲ್‌” ಅನ್ನು ಓದಬೇಕು. ಈ ಕಥೆಯ ಮೂಲಕ ಹೊಸ ಜಗತ್ತನ್ನು ನಿಮಗೆ ಪರಿಚಯಿಸುತ್ತಾರೆ ಲೇಖಕರು.\u003c\/p\u003e","brand":"C. S. Chellappa","offers":[{"title":"Default Title","offer_id":42020606607619,"sku":"HB00001843","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_909be0d8-6269-44fc-a3cd-e093cca250c2.jpg?v=1636356265"},{"product_id":"pardaa-and-paaligami","title":"ಪರ್ದಾ \u0026 ಪಾಲಿಗಮಿ","description":"\u003cp\u003e\u003cspan\u003ePurdah and Polygomy: Life In An Indian Muslim Household (‘ಪರ್ದಾ \u0026amp; ಪಾಲಿಗಮಿ: ಭಾರತೀಯ ಮುಸ್ಲಿಮ್ ಕುಟುಂಬವೊಂದರಲ್ಲಿ ಬದುಕು’) ಎಂಬ ಹೆಸರಿನ ಇಂಗ್ಲೀಷ್ ಕಾದಂಬರಿ ಬೆಂಗಳೂರಿನ ಹೊಸಾಳಿ ಮುದ್ರಣಾಲಯದಲ್ಲಿ ಮುದ್ರಿತವಾಗಿ 1944ರಲ್ಲಿ ಪ್ರಕಟವಾಯಿತು. ಇದನ್ನು ರಚಿಸಿದವರು ಬೆಂಗಳೂರಿನ ಇಕ್ಬಾಲುನ್ನೀಸಾ ಹುಸೇನ್ ಎಂಬ ಮುಸ್ಲಿಂ ಮಹಿಳೆ. ಆ ಮೂಲಕ ಇಂಗ್ಲೀಷ್‌ನಲ್ಲಿ ಸಾಮಾಜಿಕ ಕಾದಂಬರಿಯನ್ನು ಬರೆದ ಮೊದಲ ಭಾರತೀಯ ಮುಸ್ಲಿಮ್ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿ, ಇಕ್ಬಾಲುನ್ನೀಸಾ ಭಾರತೀಯ ಇಂಗ್ಲೀಷ್ ಸಾಹಿತ್ಯದ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡರು.\u003c\/span\u003e\u003c\/p\u003e\n\u003cp\u003eಈ ಕೃತಿಯನ್ನು ಇಂಗ್ಲೀಷ್‌ನಲ್ಲಿ ಬರೆಯಲ್ಪಟ್ಟ ಪ್ರಥಮ ಮುಸ್ಲಿಮ್ ಸುಧಾರಣಾವಾದಿ ಕಾದಂಬರಿಯೆಂದು ಅಥವಾ ಪ್ರಥಮ ಸ್ತ್ರೀವಾದಿ ಕಾದಂಬರಿಯೆಂದು ನೋಡಬಹುದು. ಒಂದಲ್ಲಾ ಒಂದು ರೀತಿಯಲ್ಲಿ ಮಹಿಳೆಯು ತನ್ನ ಹಕ್ಕುಗಳಿಗಾಗಿ ಹೋರಾಡುವುದು ಕೇವಲ ಇತ್ತೀಚಿನ ಬೆಳವಣಿಗೆಯಲ್ಲ ಮತ್ತು ಕೇವಲ ಪಾಶ್ಚಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ವೈಚಾರಿಕತೆಯೂ ಅಲ್ಲ ಎಂಬುದಕ್ಕೆ ಇಕ್ಬಾಲುನ್ನೀಸಾ ಹುಸೇನ್ ಅವರ “ಪರ್ದಾ \u0026amp; ಪಾಲಿಗಮಿ” ಕಾದಂಬರಿ ಅತ್ಯುತ್ತಮ ನಿದರ್ಶನ. 21ನೆಯ ಶತಮಾನದಲ್ಲಿಯೂ ‘ಧಾರ್ಮಿಕ ಅಸ್ಮಿತೆ’ ಎಂಬ ನೆಪದಲ್ಲಿ ಎಲ್ಲಾ ಧರ್ಮಗಳ ನಾಯಕರೂ ಪರಂಪರಾಗತ ಸ್ತ್ರೀ-ಪುರುಷ ಶ್ರೇಣೀಕರಣವನ್ನು ಹಿಂಬಾಗಿಲಿಂದ ತರಲು ಪ್ರಯತ್ನಿಸುತ್ತಿರುವ ಕಾರಣದಿಂದ ಈ ಕಾದಂಬರಿ ಇಂದೂ ಕೂಡಾ ಅತ್ಯಂತ ಪ್ರಸ್ತುತವಾಗಿದೆ.\u003c\/p\u003e\n\u003cp\u003eಒಂದು ಅತ್ಯಂತ ಪ್ರಸ್ತುತವಾಗಿರುವ ಇಂಗ್ಲೀಷ್ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿರುವ ದಾದಾಪೀರ್ ಜೈಮನ್ ಮತ್ತು ಈ ಕೃತಿಯನ್ನು ಅನುವಾದಿಸಲು ಜೈಮನ್ ಅವರನ್ನು ಪ್ರೋತ್ಸಾಹಿಸಿ, ಅನಂತರ ‘ಛಂದ ಪುಸ್ತಕ’ ಎಂಬ ತಮ್ಮದೇ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯ ಮೂಲಕ ಅನುವಾದಿತ ಕೃತಿಯನ್ನು ಪ್ರಕಟಿಸುತ್ತಿರುವ, ಪ್ರಸಿದ್ಧ ಕತೆಗಾರ-ಕಾದಂಬರಿಕಾರ ವಸುಧೇಂದ್ರ ಇವರಿಬ್ಬರಿಗೂ ನನ್ನ ಹಾರ್ದಿಕ ಅಭಿನಂದನೆಗಳು.\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಡಾ. ಸಿ.ಎನ್. ರಾಮಚಂದ್ರನ್\u003c\/p\u003e","brand":"Translated By Dadaphir Jaiman","offers":[{"title":"Default Title","offer_id":42020606673155,"sku":"HB00001842","price":380.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_8f311e96-5320-4065-940c-de2fb1f7f452.jpg?v=1636356266"},{"product_id":"maavona-koneya-nartaka","title":"ಮಾವೋನ ಕೊನೆಯ ನರ್ತಕ","description":"\u003cp\u003eಇದೊಂದು ತುಂಬಾ ಪ್ರಾಮಾಣಿಕವಾಗಿರುವ, ನಾಟಕೀಯವಾಗಿರುವ, ಸ್ವಾರಸ್ಯಕರವಾಗಿರುವ ಲೀ ಶ್ವಿನ್‌ಶಿಂಗ್‌ ಆತ್ಮಕಥೆ. ಇದನ್ನು ಓದುವಾಗ ಒಂದು ಕಡೆ ಕಾರಂತರ 'ಮೊಗ ಪಡೆದ ಮನ' ನೆನಪಿಗೆ ಬರುತ್ತಿದ್ದರೆ, ಮತ್ತೊಂದು ಕಡೆ ಶ್ರೇಷ್ಠ ಭಾರತೀಯ ಸಾಧಕರಾದ ಉದಯಶಂಕರ, ಮಾಯಾ ರಾವ್ ಮುಂತಾದವರ ಕಥೆಯಂತೆಯೂ ಕಾಣುತ್ತದೆ. ಒಂದು ಬಡ ಸಮಾಜದಿಂದ ಬರುವ ಪ್ರತಿಭಾಶಾಲಿ, ಮತ್ತೊಂದು ಶ್ರೀಮಂತ ಸಮಾಜದಲ್ಲಿ ತನ್ನ ಕಲಾಸಿದ್ಧಿಯನ್ನು ಕಂಡುಕೊಳ್ಳುವುದು ಆಧುನಿಕ ಕಾಲದ ದುರದೃಷ್ಟಕರ ವ್ಯಂಗ್ಯ. ಈ ಕಥನ, ಕಲಾವಿದನ ಬಾಲ್ಯದಿಂದ ಪ್ರಾರಂಭವಾಗಿ ಇವನ ಕಲೆ ಪರಿಪೂರ್ಣವಾಗುವಲ್ಲಿಗೆ ಮುಗಿಯುತ್ತದೆ. ಹಾಗೆಯೇ, ಇನ್ನೊಂದು ನೆಲೆಯಲ್ಲಿ ಮಾವೋವಾದಿ ಚೀನಾದ ಕ್ರೌರ್ಯ ಹಾಗೂ ಬಂಡವಾಳಶಾಹಿ ಅಮೆರಿಕಾದ 'ಉದಾರವಾದ'ಗಳಿಗೂ ಕನ್ನಡಿ ಹಿಡಿಯುತ್ತದೆ.\u003c\/p\u003e","brand":"Jayshri Bhat","offers":[{"title":"Default Title","offer_id":42020606738691,"sku":"HB00001841","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_db46e57e-7008-44cc-9adb-3ef945ba0e39.jpg?v=1636356268"},{"product_id":"jagava-chumbisu","title":"ಜಗವ ಚುಂಬಿಸು","description":"\u003cp\u003e\u003cspan\u003eಸುಬ್ರೊತೊ ಬಾಗ್ಚಿಯವರು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಫ್ಟ್‌ವೇರ್ ಕಂಪನಿಗಳ ಲ್ಲೊಂದಾದ ಮೈಂಡ್‌ಟ್ರೀ ಕಂಪನಿಯ ಸಹಸ್ಥಾಪಕರು ಮತ್ತು ಚೇರ‍್ಮನ್. ಅವರು ಬಲು ಬೇಡಿಕೆಯಲ್ಲಿರುವ ಬಿಸಿನೆಸ್ ಪುಸ್ತಕಗಳ ಪ್ರಖ್ಯಾತ ಲೇಖಕರು. The High Performance Entrepreneur, Go Kiss the World ಮತ್ತು The Professional ಅವರ ಕೃತಿಗಳು. ತರುಣ ಪೀಳಿಗೆಗಾಗಿ ಬರೆದ ಅವರ ಬಿಸಿನೆಸ್ ಪುಸ್ತಕ, MBA At 16 ೨೦೧೨ ರಲ್ಲಿ ಪ್ರಕಟವಾಯಿತು. ಸುಬ್ರೊತೊ ಬಾಗ್ಚಿಯವರ ಪುಸ್ತಕಗಳು ಹಿಂದಿ, ಮರಾಠಿ, ಮಲಯಾಳಂ, ತಮಿಳು, ಕನ್ನಡ, ಕೊರಿಯನ್ ಮತ್ತು ಚೈನೀಸ್ ಭಾಷೆಗಳಿಗೆ ಅನುವಾದಗೊಂಡಿವೆ. ಅವರ Go Kiss the World ಎಂಬ ಕೃತಿಯ ಕನ್ನಡ ಅನುವಾದ ಇದಾಗಿದೆ.\u003c\/span\u003e\u003c\/p\u003e","brand":"Translated by Vandana P. C.","offers":[{"title":"190rs","offer_id":48219154317571,"sku":"HB00001840","price":190.0,"currency_code":"INR","in_stock":true},{"title":"2nd Edition","offer_id":48219162116355,"sku":"HB00007138","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_b0e624d7-e17c-4444-9d05-e717f5cefc57.jpg?v=1636356269"},{"product_id":"purva-pashchima","title":"ಪೂರ್ವ ಪಶ್ಚಿಮ","description":"\u003cp\u003eಮನುಷ್ಯತ್ವದ ಘನತೆಯ ಆರ್ತ ಹುಡುಕಾಟದಲ್ಲಿ, ಈ ಬರಹ ಮುಖ್ಯವಾಗುವುದು. ಈ ಬರಹಗಳಲ್ಲಿ ಲೇಖಕನು, ತಾನು ಪಡೆದ ಅನುಭವವನ್ನು, ಭಾಷೆ ಮತ್ತು ಲಯದ ಮೂಲಕ ಇನ್ನೊಬ್ಬರಿಗೆ ದಾಟಿಸಲು ಹೋರಾಡುತ್ತಿದ್ದಾನೆ. ಅನುಭವದ ಸೂಕ್ಷ್ಮಗಳನ್ನು ಹಿಡಿಯಲು, ಚಿಂತನೆಯ ಕವಲುಗಳನ್ನು ಹಿಡಿಯಲು ಸೂಕ್ಷ್ಮ ಸಂವೇದನೆಯ ಲೇಖಕ ತಹತಹಿಸತೊಡಗುತ್ತಾನೆ. ಎಂ.ಆರ್‌. ದತ್ತಾತ್ರಿ ಅವರ ಗದ್ಯದಲ್ಲಿ, ಆಕರ್ಷಕವಾದ ಲಯದ ಮುರಿವುಗಳು, ಭಾವುಕವಾಗದ, ಆದರೆ ಭಾವಗುಣ ಬಿಟ್ಟುಕೊಡದ ಭಾಷಾಶೈಲಿ, ಅಲ್ಲಲ್ಲಿ ಅನಾಯಾಸವಾಗಿ ದಕ್ಕುವ ಕಾವ್ಯದ ಜಿಗಿತಗಳು, ನವಿರಾದ ಹಾಸ್ಯ ಭಾವದಷ್ಟೇ ಬುದ್ಧಿ ಪ್ರಕಾಶಕ್ಕೂ ಎಡೆಗೊಡುವ ತೂಕದ ಅರ್ಥಗುಂಪಿದೆ. ಇದಕ್ಕಿಂತ ಇನ್ನೇನು ಬೇಕು?\u003c\/p\u003e","brand":"M. R. Dattatri","offers":[{"title":"Default Title","offer_id":42020606869763,"sku":"HB00001839","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_9cad23c7-764e-4747-8f6a-50db8721c86f.jpg?v=1636356271"},{"product_id":"agedashtu-nakshatra","title":"ಅಗೆದಷ್ಟೂ ನಕ್ಷತ್ರ","description":"\u003cp\u003eಯಾವಾಗ ಅವ್ರು ಗದ್ದೆ ಮಾಡಬ್ಯಾಡ ಅಂದರೋ ಆವಾಗ ನಮ್ಮಪ್ಪ ಸಂಜೆ ಮನಿಗೆ ಬಂದು ಹಿಂಗಂದ್ರು ಅಂದ್ರು ಅತ್ತೆಂದರು. ನಮ್ಮಪ್ಪನ ಮನಿಗೆ ಅದೇ ದೊಡ್ಡ ಹೊಡ್ತ ಕೊಟ್ಟದ. ಬೇಲಿ ಮರೇಲಿ ಆ ಕಡೆ ಮರದ ಮ್ಯಾಗೆ ಮಾಡ್ಕಂಡಿದ್ರು, ಹೆಗಲ ಮ್ಯಾಗಿದ್ದ ಟವೆಲ್ಲು ಕುತ್ತಿಗೆಯಾಗೆ ಇತ್ತು.''\u003c\/p\u003e\n\u003cp\u003e''ಎಲ್ಲದಕ್ಕೂ ಕಾರಣ ಇಲ್ಲೇಬೇಕು ಅಂತೂ ಇಲ್ಲಿ ಕಾರಣ ಗೊತ್ತಾದ್ರೂ, ವಾಸ್ತವ ಬದಲಾಗದಿಲ್ಲ, ಅಂಥದೊಂದು ಸಂಬಂಧ ಬ್ಯಾರೆ ಎಲ್ಲೋ ನಿಜ ಆಗದನ್ನು ನೀ ಕಂಡಳಕು ಅಂದ್ರೆ ಮುಂದೆ ಹೋಗ್ತಲೇ ಇರಕು.''\u003c\/p\u003e\n\u003cp\u003eಬದುಕಿಗೆ ಅಷ್ಟು ಹತ್ತಿರವಿದ್ದ ನೆಲಜಲದ ಅರಿವು ಅನಂತಕಾಲದಲ್ಲಿ ಎಲ್ಲೋ ಹೂತುಹೋಗಿ, ನಂತರದ ಸಮುದಾಯವೊಂದು ಬದುಕಿನ ಮೂಲಭೂತ ಅಗತ್ಯಗಳಿಂದ ವಂಚಿತವಾಗಿ, ಕತ್ತಲಕೂಪದಲ್ಲಿ ಮುಳುಗಿರುತ್ತೆ. ಹೊಸ್ತಿಲಿನಾಚೆ ಬಾಹ್ಯಾಕಾಶದವರೆಗೆ ತಾಂತ್ರಿಕ ಪರಿಣತಿಯ ಏಣಿಯ ಮೆಟ್ಟಲುಗಳಲ್ಲಿ ನಮ್ಮ ಸಮುದಾಯವೊಂದು ಮೇಲೆ ಏರುತ್ತಲೇ ಹೋಗುತ್ತಿರುತ್ತದೆ. ಈ ಕಾದಂಬರಿ ಗ್ರಾಮ್ಯ ಸೊಗಡಿನ ಭಾಷೆ ಮತ್ತು ಸಂಸ್ಕೃತಿಯನ್ನು ತುಂಬಾ ಸೊಗಸಾಗಿ ಚಿತ್ರಿಸುತ್ತದೆ.\u003c\/p\u003e","brand":"Sumangala","offers":[{"title":"Default Title","offer_id":42020606935299,"sku":"HB00001838","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_4d9fdb8b-d7d0-4954-a431-7cee6bb7203c.jpg?v=1636356273"},{"product_id":"antu","title":"ಅಂತು","description":"\u003cp\u003e‘ಅಂತು’ ಎಂಬ ಶಬ್ದದ ಎಲ್ಲ ಸಾಧ್ಯತೆಗಳನ್ನೂ ಅರ್ಥಪೂರ್ಣವಾಗಿ ಧ್ವನಿಸುವ ಈ ಕಾದಂಬರಿಯು, ತನ್ನ ವಸ್ತು ಮತ್ತು ಕಥನತಂತ್ರ ಎರಡೂ ದೃಷ್ಟಿಗಳಿಂದ ಕನ್ನಡ ಕಾದಂಬರಿಲೋಕಕ್ಕೆ ಒಂದು ವಿಶಿಷ್ಟ, ಮೌಲಿಕ ಸೇರ್ಪಡೆ. ಸದ್ಯದ ಅತ್ಯಾಧುನಿಕವಾದ ಕಾಪೆರ್Çರೇಟ್ ಜಗತ್ತಿನ ರೋಚಕ ವಿದ್ಯಮಾನಗಳನ್ನು ಲವಲವಿಕೆಯಿಂದ ನಿರೂಪಿಸುತ್ತಲೇ, ಅವುಗಳನ್ನೂ ಮೀರಿದ ನಿತ್ಯಸತ್ಯಗಳನ್ನು ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆ ಇಲ್ಲಿ ಕಂಡುಬರುತ್ತದೆ. ಒಂದು ಕುತೂಹಲಕಾರೀ ಪ್ರಾಜೆಕ್ಟಿನ ಪೂರ್ವಾಪರಗಳನ್ನು ಪತ್ತೇದಾರೀ ಶೈಲಿಯಲ್ಲಿ ಶೋಧಿಸುವಂತೆ ಆರಂಭವಾಗುವ ಈ ಬರಹವು ಕ್ರಮೇಣ ಹುಟ್ಟು-ಸಾವು-ಪುನರ್ಜನ್ಮಗಳಂಥ ಗಂಭೀರ ಪ್ರಶ್ನೆಗಳಿಗೆ ಎದುರಾಗಿ ತಾತ್ವಿಕ ಎತ್ತರಗಳಿಗೆ ಬೆಳೆಯುವ ಪರಿ ಗಮನಾರ್ಹವಾಗಿದೆ. ಕನ್ನಡನಾಡಿನಿಂದ ಬಹುದೂರದ ಅಮೆರಿಕಾದಲ್ಲಿ, ತೀರಾ ಭಿನ್ನವಾದ ಪಾತ್ರ-ಭಾಷೆ-ಔದ್ಯಮಿಕ ಪರಿಸರದಲ್ಲಿ ಸೃಷ್ಟಿಯಾಗುವ ಅನುಭವವನ್ನು ಕನ್ನಡ ಭಾಷೆಯಲ್ಲಿ ಒಳಗೊಳ್ಳುವ ಈ ಸೃಜನಶೀಲ ಪ್ರಯೋಗವು ಕನ್ನಡ ಸಾಹಿತ್ಯವು ಹಿಗ್ಗುತ್ತಿರುವ ಬಗೆಯನ್ನೂ ಕಾಣಿಸುತ್ತ ಆಸಕ್ತಿ ಹುಟ್ಟಿಸುತ್ತದೆ. ತನ್ನ ಸ್ಮೃತಿಗಳಲ್ಲಿ ಜತನದಿಂದ ಕಾಪಿಟ್ಟುಕೊಂಡಿರುವ ಸ್ಥಳೀಯ ತಿಳಿವಳಿಕೆಯನ್ನು ಆಧುನಿಕ ಲೋಕಕ್ಕೆ ಮುಖಾಮುಖಿಯಾಗಿಸಿ ಕಥನ ಪ್ರಕ್ರಿಯೆಯನ್ನು ಸತ್ಯದ ಶೋಧವಾಗಿ ವಿಸ್ತರಿಸುವ ಪ್ರಯತ್ನದಲ್ಲಿ ಪ್ರಕಾಶ್ ನಾಯಕರು ಸಾಕಷ್ಟು ಯಶಸ್ವಿಯಾಗಿದ್ದಾರೆ. ‘ಅಂತು’ ನಿಸ್ಸಂದೇಹವಾಗಿ ಈ ದಶಕದ ಮುಖ್ಯ ಕನ್ನಡ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವಂಥದ್ದು.\u003c\/p\u003e\n\u003cp\u003e- ಟಿ. ಪಿ. ಅಶೋಕ\u003c\/p\u003e","brand":"Prakash Nayak","offers":[{"title":"Default Title","offer_id":42020607000835,"sku":"HB00001837","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ce6fe11f-77b7-40c5-8353-fd342be967f7.jpg?v=1636356274"},{"product_id":"chukki-belakina-jaadu","title":"ಚುಕ್ಕಿ ಬೆಳಕಿನ ಜಾಡು","description":"\u003cp\u003e\u003cspan\u003eಅಪರಿಚಿತವಾದುದನ್ನು ನನ್ನದೇ ಅನುಭವ ಎಂಬಂತೆ ಅನುಭವಕ್ಕೆ ತಂದುಕೊಡುವುದೇ ಕಲೆಯ ಶಕ್ತಿ. ಕರ್ಕಿ ಕೃಷ್ಣಮೂರ್ತಿಯವರ ಚುಕ್ಕಿ ಬೆಳಕಿನ ಜಾಡು ಈ ಶಕ್ತಿಯನ್ನು ಬೆನ್ನತ್ತಿ ಹೊರಟಿದೆ. ಸಮಕಾಲೀನ ಜಗತ್ತಿನ ಸನ್ನಿವೇಶಗಳು ಬದುಕಿನ ಅಸಂಗತತೆಯನ್ನು ಇನ್ನೂ ದಟ್ಟವಾಗಿಸುತ್ತಿರುವ ವಾಸ್ತವದ ಶೋಧವಾಗಿಯೂ ಇದು ಕಾಣಿಸುತ್ತದೆ. ಆಮಿಷಗಳನ್ನು ಬದುಕು ಒಡ್ಡುತ್ತದೋ ನಾವೇ ಸೃಷ್ಟಿಸಿಕೊಳ್ಳುವುದೋ ಎನ್ನುವ ಬಗೆಹರಿಯದ ದ್ವಂದ್ವ , ಮಹತ್ವಾಕಾಂಕ್ಷೆ, ಕನಸು, ದುರಾಸೆ, ಸ್ವಾರ್ಥ, ಸಣ್ಣತನಗಳ ಸಹಜ ಅಸಹಜ ನೆಲೆಗಳ ಸಂಘರ್ಷ ಈ ಕೃತಿಯನ್ನು ರೂಪಿಸಿದೆ. ಗುಟ್ಟೇ ಬಿಟ್ಟುಕೊಡದ ಬದುಕನ್ನು, ಅದು ನಿನಗೆ ಬೇಡ ಎಂದದ್ದನ್ನು ಕಿತ್ತುಕೊಳ್ಳಲು ಹಪಹಪಿಸುವ ಮನುಷ್ಯಾವಸ್ಥೆಯನ್ನು ತುಸು ಆತಂಕದಿಂದಲೇ ಈ ಕೃತಿ ಎದುರಾಗುತ್ತದೆ. \u003c\/span\u003e\u003c\/p\u003e\n\u003cp\u003eಕಾದಂಬರಿಯ ನಾಯಕ ನಿರಂಜನನ ಪಾತ್ರಕ್ಕೆ ಸಾಧಾರಣೀಕರಣದ ಗುಣ ಮತ್ತು ಸ್ವರೂಪ ಎರಡೂ ದಕ್ಕಿದೆ. ಎಲ್ಲ ಹುಲುಮಾನವರ ಒಳಗೂ ಇದ್ದೇ ಇರುವ ಕ್ಷುದ್ರ ಸಂಗತಿಗಳನ್ನು ಆತ್ಮವಂಚನೆಯಲ್ಲಿ ನಿಭಾಯಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಿರಂಜನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಎಗ್ಗಿಲ್ಲದೆ ಸಮರ್ಥಿಸಿಕೊಳ್ಳುತ್ತಾ ಹೋಗುತ್ತಾನೆ. ತನಗೆ ಬೇಕಾದ್ದನ್ನು ಪಡೆದುಕೊಳ್ಳಲು ಯಾವ ದಾರಿ ಹಿಡಿದರೂ ತಪ್ಪಿಲ್ಲ ಎಂದು ಮತ್ತೆ ಮತ್ತೆ ಯೋಚಿಸುವುದೇ, ತನಗೆ ತಾನೇ ನಂಬಿಸಿಕೊಳ್ಳಲು ಹೋಗುವುದೇ ಅವನೊಳಗಿನ ಸಾಕ್ಷಿ ಪ್ರಜ್ಞೆಯನ್ನು ಧ್ವನಿಸುತ್ತದೆ. ನೈತಿಕ ಅನೈತಿಕತೆಯ ಪ್ರಶ್ನೆಗಳನ್ನು ನಿರಂಜನ ಸುಪ್ತಪ್ರಜ್ಞೆಯಲ್ಲಿ ಮುಖಾಮುಖಿಯಾಗುತ್ತಾನೆ. ಹೀಗಿದ್ದೂ ಬದುಕಿನೊಳಗೆ ಬಾಳಬಹುದಾದ ಬೆಳಕಿನ ಜಾಡನ್ನು ಹುಡುಕುವ ಗುಪ್ತಗಾಮಿನಿಯೂ ನಮ್ಮೊಳಗೇ ಇರುವ ಸೂಚನೆಯೂ ಇಲ್ಲಿದೆ.\u003c\/p\u003e\n\u003cp\u003e- ಡಾ. ಎಂ. ಎಸ್. ಆಶಾದೇವಿ\u003c\/p\u003e\n\u003cp\u003eA Kannada novel from Chanda Pustaka \/ ಛಂದ ಪುಸ್ತಕ ಕಾದಂಬರಿ\u003c\/p\u003e","brand":"Karki Krishnamurthy","offers":[{"title":"Default Title","offer_id":42020607099139,"sku":"HB00001836","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_6b402ba2-f155-40c1-8072-38ecff3d81e4.jpg?v=1636356276"},{"product_id":"lerionka","title":"ಲೇರಿಯೊಂಕ","description":"\u003cp\u003eಲೇರಿಯೊಂಕ\u003c\/p\u003e\n\u003cp\u003eದನಗಾಹಿ ಬುಡಕಟ್ಟಿನ ಒಬ್ಬ ಮುಗ್ಧ ಹುಡುಗ, ತನ್ನ ಹಾಡಿಯನ್ನು ಬಿಟ್ಟು ಶಾಲೆಗೆಂದು ನಗರಕ್ಕೆ ಹೋಗುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ. ಅನುಭವ\u003c\/p\u003e\n\u003cp\u003eಇಡೀ ಕಥೆ ಒಂದು ದೀರ್ಘ ಪಯಣದ ವಿನ್ಯಾಸದಲ್ಲಿದೆ.\u003c\/p\u003e\n\u003cp\u003eರೋಚಕವೂ ಮಾನವೀಯವೂ ವಿನೋದಪೂರ್ಣವೂ ಕರುಣಾಜನಕವೂ ಆದ ಘಟನಾವಳಿಗಳಿಂದ ಕೂಡಿರುವ ಇಲ್ಲಿನ ಕಥನ ಅಪೂರ್ವವಾಗಿದೆ, ಕಾವ್ಯಮಯವಾಗಿದೆ.\u003c\/p\u003e\n\u003cp\u003eಇದನ್ನು ಓದುವಾಗ ಕುವೆಂಪು ಕಾದಂಬರಿಗಳು ನೆನಪಾಗುತ್ತವೆ; ಆಫ್ರಿಕನ್ ಲೇಖಕರಾದ ಶೋಯಿಂಕಾ, ಅಚಿಬೆ, ಗೂಗಿ ಅವರ ಕೃತಿಗಳು ನೆನಪಾಗುತ್ತವೆ.\u003c\/p\u003e\n\u003cp\u003eಇವೆಲ್ಲವೂ ದೇಶೀ ಸಮಾಜಗಳು ಯುರೋಪಿಯನ್ ಆಧುನಿಕತೆಯ ಜತೆ ಮುಖಾಮುಖ ಮಾಡುವಾಗ ಹುಟ್ಟಿದ ಸಮಸ್ತ ತಲ್ಲಣಗಳನ್ನು ಒಳಗೊಂಡಿವೆ.\u003c\/p\u003e\n\u003cp\u003eಪಶ್ಚಿಮದ ಜತೆ ಸೆಣಸಾಟ ಮಾಡಿದ ಎಲ್ಲ ನಾಡುಗಳ ರುದ್ರಾನುಭವವಿದು. ಈ ಸೆಣಸಾಟವು ಒಂದು ಕೈಯಲ್ಲಿ ಪುಸ್ತಕವನ್ನೂ ಮತ್ತೊಂದು ಕೈಯಲ್ಲಿ ಭರ್ಜಿಯನ್ನೂ ಹಿಡಿಯುವ ಲೇರಿಯೊಂಕನ ಚಿತ್ರದಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ.\u003c\/p\u003e\n\u003cp\u003e~ರಹಮತ್ ತರೀಕೆರೆ\u003c\/p\u003e","brand":"Translate by Prashanth Bechi","offers":[{"title":"Default Title","offer_id":42020607131907,"sku":"HB00001835","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_3a904346-3c24-4582-a777-c716763f2a11.jpg?v=1636356277"},{"product_id":"nammamma-andre-nangishta","title":"ನಮ್ಮಮ್ಮ ಅಂದ್ರೆ ನಂಗಿಷ್ಟ","description":"\u003cp\u003e\u003cspan\u003eತಾಯಿ ಮತ್ತು ಮಗನ ನಡುವಿನ ಸೂಕ್ಷ್ಮ ಒಡನಾಟದ ಹೃದ್ಯ ಬರಹಗಳು. ಈ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಬಂದಿದೆ.\u003c\/span\u003e\u003c\/p\u003e","brand":"Vasudhendra","offers":[{"title":"Default Title","offer_id":42020607197443,"sku":"HB00001834","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_59cd740f-470d-4f67-a52a-4d31aa478b93.jpg?v=1636356279"},{"product_id":"5paise-varadakshine","title":"5 ಪೈಸೆ ವರದಕ್ಷಿಣೆ","description":"\u003cp\u003e\u003cspan\u003eಹಲವು ವಿಭಿನ್ನ ಬಗೆಯ ವಿಷಯಗಳ ಕುರಿತ ವಸುಧೇಂದ್ರರ ಸುಲಲಿತ ಪ್ರಬಂಧಗಳು.\u003c\/span\u003e\u003c\/p\u003e","brand":"Vasudhendra","offers":[{"title":"1st Edition","offer_id":49276718121219,"sku":"HB00001833","price":240.0,"currency_code":"INR","in_stock":true},{"title":"2nd Edition","offer_id":49276725756163,"sku":null,"price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_484cafca-f48b-48f7-92e4-edff5ca2af1b.jpg?v=1636356281"},{"product_id":"mohana-swamy","title":"ಮೋಹನಸ್ವಾಮಿ","description":"\u003cp\u003eಹೇ ಕೃಷ್ಣ ನಿನ್ನನ್ನು ಮನಃಪೂರ್ವಕವಾಗಿ ಆರಾಧಿಸಿದ್ದೇನೆ, ಪ್ರೀತಿಸಿದ್ದೇನೆ. ನಿನ್ನ ಈ ಗೋಪಾಲನಿಗೆ ಇಂತಹ ಕಠಿಣ ಶಿಕ್ಷೆ ಕೊಡಬೇಡ, ಕಾಪಾಡು, ಒಂದಿಷ್ಟಾದರೂ ಕರುಣೆ ತೋರು ನೋವಿನ ಮಡುವಿನಲ್ಲಿ ಮುಳುಗುತ್ತಿರುವ ನನಗೆ ನಿನ್ನ ರಕ್ಷಣೆ ಒದಗುವುದು ಬೇಡವೆ. ಇಲ್ಲದಿದ್ದರೆ ನಿನ್ನೆಡೆಗೆ ಕರೆದುಕೊಂಡು ಬಿಡು. ಸತ್ತರೆ ಅಳುವವರು ಯಾರೂ ಇಲ್ಲವೋ ತಂದೆ. ಜೀವ ಹಿಂಡುವ ನೋವು. ಪರರ ಕಣ್ಣಲ್ಲಿ ಹೀನನಾಗಿ ಕಾಣುವುದಕ್ಕಿಂತ ಸಾಯುವುದೇ ಮೇಲು. ನೀನು ಸಹಾಯ ಮಾಡುವುದಿಲ್ಲವಲ್ಲವೆ? ಸುಮ್ಮನೆ ಕೆಲಸಕ್ಕೆ ಬಾರದ ಆ ಕೊಳಲನೂದುತ್ತಿರುವೆಯಲ್ಲವೆ? ನನ್ನ ನೋವಿಗೆ ನಾನೇ ಪರಿಹಾರ ಕಂಡುಕೊಳ್ಳುತ್ತೇನೆ. ನನಗೆ ತಿಳಿದಂತೆ ನಾನು ವರ್ತಿಸುತ್ತೇನೆ. ಇಗೋ ನೋಡಲ್ಲಿ ಫಳ ಫಳ ಹೊಳೆಯುವ ಚಾಕು. ನೀನು ಸೃಷ್ಟಿಸಿದ ದೇಹವನ್ನು ಹೇಗೆ ಕತ್ತರಿಸುತ್ತಿದೆ. ಹೆಬ್ಬರಳಿನ ತುದಿಯನ್ನು ಕತ್ತರಿಸಲು ಅದಕ್ಕೆ ಎಷ್ಟೊಂದು ಉತ್ಸಾಹ ನೋಡಿದೆಯ!...\u003c\/p\u003e\n\u003cp\u003eಈ ರೀತಿ, ರೋಚಕವಾಗಿ ವರ್ಣಿಸುತ್ತ, ತಮ್ಮ ಗೇ ಕಥೆಗಳಲ್ಲಿ ಬೇಕಾದ ವೈಶಿಷ್ಟ್ಯಗಳನ್ನು ತುಂಬುತ್ತ, ಕಥಾ ಗುಚ್ಛವನ್ನು ಲೇಖಕ ವಸುಧೇಂದ್ರ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.\u003c\/p\u003e","brand":"Vasudhendra","offers":[{"title":"Default Title","offer_id":42020607394051,"sku":"HB00001832","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_e4afbfce-ab16-4062-80a9-52e15a3d4f05.jpg?v=1636356282"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/Latest_Kannada_Books.jpg?v=1658914691","url":"https:\/\/harivubooks.com\/collections\/latest-books-kannada.oembed?page=196","provider":"Harivu Books","version":"1.0","type":"link"}