{"title":"Best Selling Horror Books in Kannada","description":"","products":[{"product_id":"horror-stories-fictional-stories-jogi-kannada-book","title":"ಹಾರರ್ ಸ್ಟೋರೀಸ್","description":"ಒಂದೆರಡು ದೆವ್ವದ ಕತೆ ಬರೆದ ನಂತರ 'ನೀವು ದೆವ್ವಗಳನ್ನು ನೋಡಿದ್ದೀರಾ?' ಅಂತ ಅನೇಕರು ನನ್ನನ್ನು ಕೇಳುತ್ತಿದ್ದರು. ಆಗೆಲ್ಲ ನಾನು ಖಚಿತವಾದ ಧ್ವನಿಯಲ್ಲಿ 'ನೋಡಿದ್ದೇನೆ' ಅಂತ ಹೇಳುತ್ತಿದ್ದೆ. ಅವರು 'ನಾವೂ ದೆವ್ವಗಳನ್ನು ನೋಡಬೇಕು' ಅನ್ನುತ್ತಿದ್ದರು. 'ನಮ್ಮೂರಿಗೆ ಬನ್ನಿ, ತೋರಿಸುತ್ತೇನೆ' ಎಂದು ಅವರಿಗೆ ಆಹ್ವಾನ ಕೊಡುತ್ತಿದ್ದೆ. ಹೀಗೆ ಹಲವು ಮಿತ್ರರನ್ನು ನಮ್ಮೂರಿಗೆ ಕರೆದೊಯ್ದು ದೆವ್ವಗಳನ್ನೂ ಪಿಶಾಚಿಗಳನ್ನೂ ತೋರಿಸಿದ್ದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇತ್ತೀಚೆಗೆ ನನ್ನ ಮಗಳು ಖುಷಿಗೆ ದೆವ್ವ ನೋಡುವ ಆಸೆಯಾಯಿತು. ಅವಳನ್ನು ಕರೆದುಕೊಂಡು ನಮ್ಮೂರಿಗೆ ಹೋದೆ. ನಡುರಾತ್ರಿ ದೆವ್ವ ವಾಸ ಮಾಡುತ್ತಿದ್ದ ಮರ ಇದ್ದ ಜಾಗಕ್ಕೆ ಹೋಗಿ ನೋಡಿದರೆ, ದೆವ್ವ ವಾಸಿಸುತ್ತಿದ್ದ ಹುಣಸೇ ಮರವನ್ನು ಯಾರೋ ಕಡಿದು ಹಾಕಿದ್ದರು. ಅದೇ ಜಾಗದಲ್ಲಿ ಯಾವುದೋ ಫ್ಯಾಕ್ಟರಿ ಕಟ್ಟಿದ್ದರು. ದೆವ್ವ ಯಾವುದೋ ಬೇರೆ ಮರ ಹುಡುಕಿಕೊಂಡು ಹೋಗಿರಬೇಕು ಅಂದುಕೊಂಡು ಊರುತುಂಬ ಹುಡುಕಾಡಿದೆವು. ದೆವ್ವ ವಾಸಿಸಲಿಕ್ಕೆ ಅನುಕೂಲಕರವಾದ ಒಂದೇ ಒಂದು ಮರವನ್ನು ನಮ್ಮೂರಿನ ಮಂದಿ ಉಳಿಸಿರಲಿಲ್ಲ. ಎಲ್ಲೆಲ್ಲೂ ಬೀದಿ ದೀಪಗಳನ್ನು ಹಾಕಿ, ದೆವ್ವಕ್ಕೆ ಬೇಕಾದ ಕತ್ತಲನ್ನೂ ಕೂಡ ಕಸಿದುಕೊಂಡಿದ್ದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈಗ ನಿಮಗೆ ದೆವ್ವ ಪಿಶಾಚಿಗಳು ಸಿಗುವುದು ಈ ಪುಸ್ತಕದಲ್ಲಿ ಮಾತ್ರ.\n\u003cdiv id=\"gtx-trans\" style=\"position: absolute; left: 544px; top: 68.6389px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Jogi","offers":[{"title":"Default Title","offer_id":44489862840579,"sku":"HB00004475","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_5_3ad80b5a-3d97-4418-b64a-82e677de5759.jpg?v=1702389561"},{"product_id":"aatmakate-horror-thriller-novel-dheeraj-poyyekanda-kannada-book","title":"ಆತ್ಮಕತೆ","description":"\u003cp\u003eಶವರ್‌ನಿಂದ ನೀರು ಮಳೆಯಂತೆ ತಲೆ ಮೇಲೆ ಸುರಿಯುವಾಗ ಪ್ರತ್ಯೂಷಾ ತನ್ನನ್ನು ತಾನು ಮರೆತುಬಿಡುತ್ತಾಳೆ. ತಲೆಗೆ ಬಿದ್ದ ನೀರು, ಮೈಗಾತುಕೊಂಡೇ, ವೈಯ್ಯಾರದಿಂದ ನಲಿನಲಿದು, ಕಾಲಿನವರೆಗೆ ಇಳಿದು ಹೋದಾಗ ಪ್ರತ್ಯೂಷಾ ಶವರ್‌ಗೆ ಮುಖ ಎತ್ತಿಹಿಡಿದು ಕಣ್ಣು ಮುಚ್ಚಿಕೊಂಡಳು. ನಿದ್ದೆ ಆವರಿಸಿಕೊಂಡ ಹಾಗಾಯಿತು. ದೃಶ್ಯಗಳು ಚಲಿಸತೊಡಗಿದವು. ಕಾಡು, ರಸ್ತೆ, ತೋಳ, ಜಿಂಕೆ... ಕೊನೆಗೊಂದು 'ಅಮ್ಮಾ...' ಅನ್ನುವ ಹೃದಯವಿದ್ರಾವಕ ಕ್ಷೀಣ ಸ್ವರ...\u003c\/p\u003e","brand":"Dheeraj Poyyekanda","offers":[{"title":"Default Title","offer_id":45364911669507,"sku":"HB00004798","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Aatmakate.jpg?v=1715417100"},{"product_id":"shiradi-ghat-terrible-stories-ramesh-shettigar-manjeshwara-kanada-book","title":"ಶಿರಾಡಿ ಘಾಟ್","description":"\u003cp\u003eಭಯಪಡಿಸಲೆಂದೇ ಬರೆದ ಕಥೆಗಳು...!\u003c\/p\u003e\n\u003cp\u003e2019ರಲ್ಲಿ \"ಶಿರಾಡಿ ಘಾಟ್\" ಎಂಬ ಸಣ್ಣಕಥೆ ಭಯಂಕರ ವೈರಲ್ ಆದಾಗ ನಾನು ಓದಿ ಬೆಚ್ಚಿ ಬೆರಗಾಗಿದ್ದೆ. ರಾತ್ರಿಯ ಹೊತ್ತು ಬಿಡಿ, ಹಗಲಲ್ಲೇ ಶಿರಾಡಿ ಘಾಟ್‌ನಲ್ಲಿ ಪಯಣಿಸಲು ಭಯವಾಗುತಿತ್ತು. ಅದೇ ಧಾಟಿಯಲ್ಲೇ ಬರೆದ \"ಅಂಧಕಾರದಲ್ಲೊಂದು ಪಯಣ\" ಕಥೆ ನಾನು ಕಾರಿನಲ್ಲಿ ಒಬ್ಬನೇ ಇದ್ದಾಗ ಓದಿ ಆ ಕಥಾನಾಯಕ ನನ್ನ ಮೈಯಲ್ಲೇ ಬಂದ ಹಾಗೆ ಆಯಿತು. ಹೀಗೆ ಹನ್ನೆರಡು ಕಥೆಗಳು ಒಂದಕ್ಕೊಂದು ವಿಭಿನ್ನವಾಗಿ ಭಯಂಕರವಾಗಿದೆ.\u003c\/p\u003e\n\u003cp\u003eಸಾಮಾನ್ಯವಾಗಿ ಹಾರರ್ ಕಥೆಗಳಲ್ಲಿ ವೈವಿಧ್ಯತೆ ತರುವುದು ಅಷ್ಟು ಸುಲಭವಲ್ಲ. ಆದರೆ ಈ ಕಥಾಸಂಕಲನದಲ್ಲಿ ಲೇಖಕರು ವೈವಿಧ್ಯದ ಜೊತೆಗೆ ಕೆಲವೆಡೆ ತಿಳಿಹಾಸ್ಯ ಸಿಂಪಡಿಸಿ. ಇನ್ನು ಕೆಲವು ಕಥೆಗಳಲ್ಲಿ ಹಾಂಟೆಡ್ ಸ್ಥಳಗಳ ಮಾಹಿತಿಗಳನ್ನು ನೀಡಿದ್ದಾರೆ. ಹಾರರ್ ಡಾರ್ಕ್ ಕಾಮಿಡಿ ಎಂಬ ಹೊಸ ಜಾನರ್ ಅನ್ನು ಕನ್ನಡಕ್ಕೆ ನೀಡುವ ಹಲವು ಕಥೆಗಳು ಇಲ್ಲಿವೆ. ಅಪೂರ್ಣ ಸತ್ಯ, ಮದನಿಕೆ. ಹಾಂಟೆಡ್ ಹೊಸಮನೆ ಹಾಗೂ ಎರಡನೇ ದೇವರು ಕೃತಿಗಳ ಮೂಲಕ ಈಗಾಗಲೇ ಕೌತುಕಮಯ ಕಥನ-ಕೃತಿಗಳನ್ನು ನೀಡಿದ ಶ್ರೀ ರಮೇಶ್ ಶೆಟ್ಟಿಗಾರರು \"ಶಿರಾಡಿ ಘಾಟ್\" ಕಥಾಸಂಕಲನದ ಮೂಲಕವೂ ಓದುಗರನ್ನು ಕಥೆಯೊಳಗೆ ಹಿಡಿದಿಟ್ಟುಕೊಂಡು ರೋಮಾಂಚನಗೊಳಿಸುವಲ್ಲಿ ಸಂದೇಹವಿಲ್ಲ,\u003c\/p\u003e\n\u003cp\u003eಭಯಪಡಿಸಲೆಂದೇ ಅವರು ಬರೆದ ಕಥೆಗಳು ಓದುಗರನ್ನು ಬೆರಗುಗೊಳಿಸುವಲ್ಲಿ ಯಶಸ್ವಿಯಾಗಲಿ ಹಾರೈಕೆಯೊಂದಿಗೆ. ఎంబ\u003c\/p\u003e\n\u003cp\u003e-ವಿಠಲ್ ಶೆಣೈ (ಖ್ಯಾತ ಕಾದಂಬರಿಕಾರರು)\u003c\/p\u003e","brand":"Ramesh Shettygar Manjeshwara","offers":[{"title":"Default Title","offer_id":46281552789763,"sku":"HB00005074","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ShiradiGhat.jpg?v=1735973476"},{"product_id":"atimaanusha-gururaj-kodkani-kannada-horror-novel","title":"ಅತಿಮಾನುಷ","description":"\u003cp\u003eತಾನೊಬ್ಬ  ಅಗ್ನೋಸ್ಟಿಕ್ ,ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ್ಯಾಸವೇನೂ ಆಗದು ಎನ್ನುವ ತರ್ಕ. ಅವನಿದ್ದರೆ ಅವನ ಪಾಡಿಗಿರಲಿ, ನಾನು ನನ್ನ ಪಾಡಿಗೆ ಎಂದುಕೊಂಡವನ ಬದುಕಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದ ಸ್ಥಿತಿ ಅವನಿಗೆ.\u003c\/p\u003e\n\u003cp\u003eಪರಮ ಆಸ್ತಿಕರಾದ ಹೆತ್ತವರು ತನ್ನ ತರ್ಕವನ್ನು ಅಲ್ಲಗಳೆಯುತ್ತಿದ್ದಾರೆ. ಗೆಳೆಯನಿಗೆ ವಿಷಯದ ಗಂಭೀರತೆಯನ್ನು ವಿವರಿಸುವುದು ಕಷ್ಟ. ಚಿಕ್ಕಪ್ಪನಿಗೆ ವಿವರಿಸಿ ಅರ್ಥ ಮಾಡಿಸೋಣ ವೆಂದರೆ ಅವನಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಎಲ್ಲಕ್ಕಿಂತ ಅಚ್ಚರಿಯೆಂದರೆ ಸ್ಮಶಾನದಲ್ಲಿ ಕೊನೆಯವರೆಗೂ ತನ್ನ ಜೊತೆಗೇ ಇದ್ದ ಹೆಂಡತಿಗೆ ಏನೆಂದರೇ ಏನೂ ನೆನಪಿಲ್ಲ. ಆಕೆ ಕೂಡ ಲೋಕಿಯ ಸಾವು ಸಹಜ ಸಾವು ಎನ್ನುತ್ತಾಳೆ. ಅವನ ಸಾವಿಗೆ ಮಾನಸಿಕ ಕಾಯಿಲೆಯೇ ಕಾರಣ ಎಂದು ವಾದಿಸುತ್ತಾಳೆ.\u003c\/p\u003e\n\u003cp\u003eಊಹುಂ..!! ಖಂಡಿತ ಅದು ಸಹಜ ಸಾವಲ್ಲ. ಮೇಲ್ನೋಟಕ್ಕೆ ಸಹವೆನ್ನಿಸಿದರೂ ಅಲ್ಲೊಂದಿಷ್ಟು ಅನುಮಾನಗಳಿಗೆ ಅವಕಾಶವಿದೆ. ಅಲ್ಲೊಂದು ವಿಲಕ್ಷಣತೆಯಿದೆ. ಯಾರ ಗಮನಕ್ಕೂ ಬಾರದ, ಒಂದೇನೋ ಅವ್ಯಕ್ತ ಅಸಹಜತೆಯಿದೆ.\u003c\/p\u003e\n\u003cp\u003eಅದು ನಿಗೂಢ..!! ಅದು ವಿಕ್ಷಿಪ್ತ...!! ಅದು ಮನುಷ್ಯ ಸಹಜವಾದ ಸಾವಲ್ಲ, ಅದು ಅತಿಮಾನುಷ....!!\u003c\/p\u003e","brand":"Gururaj Kodkani","offers":[{"title":"Default Title","offer_id":46313453748483,"sku":"HB00005120","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2025-01-15at11.34.49AM_1.jpg?v=1736921532"},{"product_id":"kerala-matrikara-nigudha-kathegalu-dr-sandhya-s-pai-kannada-book","title":"ಕೇರಳ ಮಾಂತ್ರಿಕರ ನಿಗೂಢ ಕಥೆಗಳು","description":"\u003cp\u003eಪುರಾತನ ಕೇರಳ ಅಂದರೆ ಮಾಂತ್ರಿಕರ ತವರೂರು. ಜೊತೆಗೆ ನಿಗೂಢ ಜನಪದ ಕತೆಗಳಿಗೂ ಇಲ್ಲಿ ಕೊರತೆಯಿಲ್ಲ. ಅಂಥ ಅದ್ಭುತ ಜನಪದ ಕಲಾ ಭಂಡಾರ ನಮ್ಮ ನೆರೆರಾಜ್ಯವಾಗಿರುವ ಕೇರಳ (ಅಂದಿನ 'ಮಲಯಾಳ ದೇಶ)ದಲ್ಲಿದೆ. ಪಶ್ಚಿಮ ಘಟ್ಟಗಳು ಹಾಗೂ ಅರೇಬಿಯನ್ ಸಮುದ್ರದ ಮಟ್ಟದಲ್ಲಿ ಮುದುಡಿ ಮಲಗಿರುವ ಈ ಭೂಪ್ರದೇಶ ಯಕ್ಷ-ಯಕ್ಷಿ, ಕಿನ್ನರ-ಕಿನ್ನರಿಯರು, ಐಂದ್ರಜಾಲಿಕ ಪ್ರಯೋಗದ ಪ್ರಸಂಗಗಳು, ಜೊತೆಗೆ ಪಶು, ಪಕ್ಷಿ, ಪ್ರಾಣಿಗಳನ್ನು ತನ್ನ ಕಥಾ ಪರಂಪರೆಯಲ್ಲಿ ಹೊಂದಿದೆ.\u003c\/p\u003e\n\u003cp\u003eಅದರಿಂದ ಆಯ್ದ ಹಲವು ಕತೆಗಳ ಸಂಗ್ರಹವಿದು.\u003c\/p\u003e\n\u003cp\u003eಕೇರಳದ ಮಾಂತ್ರಿಕರು ಎಂದರೆ ಇಂದಿಗೂ ಎದೆ ಝಲ್ಲೆನ್ನುತ್ತದೆ. ಮಂತ್ರ ತಂತ್ರದ ಕತೆಗಳ ಜೊತೆಗೆ ಅನೇಕ ತಮಾಷೆಯ ಕತೆಗಳೂ ಇಲ್ಲಿವೆ. ಮಂತ್ರಕ್ಕೆ ಅಷ್ಟೊಂದು ಶಕ್ತಿ ಇದೆಯೇ? ಗೊತ್ತಿಲ್ಲ, ಆದರೆ ಇಲ್ಲಿಯ ಕಥೆಗಳಿಗಂತೂ ಆಕರ್ಷಕ ಮಾಂತ್ರಿಕ ಶಕ್ತಿಯಿದೆ. \u003c\/p\u003e","brand":"Dr. Sandhaya S. Pai","offers":[{"title":"Default Title","offer_id":46409700606211,"sku":"HB00005153","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kerala_maantrikara_nigoodha_kathegalu__1.jpg?v=1747196774"},{"product_id":"vikshipta-horror-novel-gururaj-kadkani-kannada-book","title":"ವಿಕ್ಷಿಪ್ತ","description":"\u003cp\u003eಚಿಕ್ಕದ್ದೊಂದು ಆಟಿಕೆಯನ್ನಿಟ್ಟುಕೊಂಡು ಫೇಸ್ ಬುಕ್ಕಿನಲ್ಲಿ ಬರೆಯಲಾರಂಭಿಸಿದ್ದ ಕತೆಯೊಂದು ನಿಧಾನಕ್ಕೆ ತುಂಬ ಜನಪ್ರಿಯವಾಗಲಾರಂಭಿಸಿದ್ದು ನಿಜಕ್ಕೂ ಆಶ್ಚರ್ಯವೇ. ಮೊದಮೊದಲು ಹತ್ತು ಭಾಗಗಳಲ್ಲಿ ಮುಗಿಸಿಬಿಡೋಣವೆಂದುಕೊಂಡಿದ್ದ ಕತೆ ನನ್ನ ಕೈ ಮೀರಿ ಬೆಳೆದರೂ ಓದುಗರಲ್ಲಿ ಕೊಂಚವೂ ಬೇಸರ ಮೂಡಿಸದೇ ಓದಿಸಿಕೊಂಡಿದ್ದು ಹೋಗಿದ್ದು ಸೋಜಿಗ. ಒಂದು ಹಂತಕ್ಕೆ ಓದುಗರು ಇದನ್ನೋದುತ್ತ, ಇದರ ಭಾಗವೇ ಆಗಿ ಹೋಗಿ ಕತೆಯ ಕೆಲವು ಸಾವುನೋವುಗಳು ತಮ್ಮ ವೈಯಕ್ತಿಕವೇ ಏನೋ ಎನ್ನುವಂತೆ ಭಾವಿಸಿ ಹೊತ್ತಿಲ್ಲದ್ದ ಹೊತ್ತಿನಲ್ಲಿ ನನಗೆ ಸಂದೇಶ ಕಳುಹಿಸಿ, 'ನಿಮಗೆ ಕರುಣೆ ಇಲ್ಲವಾ, ಅವರನ್ನೇಕೆ ಕೊಂದಿರಿ.' ಎಂದು ಬಯ್ದು ನನ್ನನ್ನು ಅಪರಾಧಿ ಸ್ಥಾನಕ್ಕೆ ನಿಲ್ಲಿಸಿದ್ದೂ ಇದೆ. ಹಾಗೆ ಓದುಗರು ಅಪರಾಧಿ ಸ್ಥಾನಕ್ಕೆ ನಿಲ್ಲಿಸಿದ್ದರೂ ಓದುಗರಿಗೆ ನನ್ನ ಕತೆಯೊಂದು ತಮ್ಮದೇ ಕತೆಯೆನ್ನುವ ಭಾವ ಕೊಟ್ಟಿದೆ ಎನ್ನುವ ಸಂತೃಪ್ತಿಯೇ ನನಗೆ ಹೆಚ್ಚು ಖುಷಿ ಕೊಟ್ಟಿತ್ತು ಎನ್ನುವುದನ್ನು ವಿವರಿಸಬೇಕಿಲ್ಲ. ಪೂರ್ತಿ ಐವತ್ತು ಕಂತುಗಳಲ್ಲಿ ಈ ಕತೆಯನ್ನು ಮುಗಿಸಿದಾಗ ಅನೇಕ ಓದುಗರು ಕತೆಯನ್ನು ಕಾದಂಬರಿಯಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಕೇಳಿದ್ದರು. ಅಂಥಹ ಹತ್ತಾರು ಓದುಗರ ಕೋರಿಕೆಯ ಫಲವೇ, 'ವಿಕ್ಷಿಪ್ತ' ಎನ್ನುವ ಈ ಕಾದಂಬರಿಯ ಮುದ್ರಣ ರೂಪ.\u003c\/p\u003e","brand":"Gururaj Kodkani","offers":[{"title":"Default Title","offer_id":47311881142531,"sku":"HB00005420","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Vikshipta_58806fa4-3ec5-44f7-9f4e-5ec7fdd79293.jpg?v=1760011268"},{"product_id":"prathijne-horror-novel-gururaj-kodkani-kannada-book","title":"ಪ್ರತಿಜ್ಞೆ","description":"\u003cp\u003eಅತಿವಾಸ್ತವದ ಕಲ್ಪನೆಯೂ ವಿಭಿನ್ನವಾಗಿ ಭಯ, ಪ್ರೀತಿ, ರೋಚಕತೆಯಂಥ ಹತ್ತು ಹಲವು ಭಾವಗಳನ್ನು ಓದುಗನಲ್ಲಿ ಮೂಡಿಸಲು ಸಾಧ್ಯವಾ ಎನ್ನಿಸಿದ್ದು ಸುಳ್ಳಲ್ಲ. ಕಿಂಗ್ನ ಬರಹಗಳಲ್ಲಿ ನಿಜಕ್ಕೂ ಒಂದು ಮಾಂತ್ರಿಕತೆಯಿದೆ. ಅವನ ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಕನ್ನಡದಲ್ಲಿಯೂ ಈ ಧಾಟಿಯ ಕತೆ ಇರಬಾರದಿತ್ತೇ ಎನ್ನುವ ಹಪಾಹಪಿ ನನಗೆ.\u003c\/p\u003e\n\u003cp\u003eಆ ಆಲೋಚನೆಯ ಹಿಂದೆಯೇ ನಾನೇಕೆ ಹೀಗೊಂದು ಕತೆಯನ್ನು, ನಮ್ಮದೇ ಮಣ್ಣಿನ ಸೊಗಡಿಗೆ ಹೊಂದಿಕೊಳ್ಳುವಂತೆ ಬರೆಯಲು ಪ್ರಯತ್ನಿಸಬಾರದು ಎಂಬ ಮತ್ತೊಂದು ಯೋಚನೆ. ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ಸಾಧ್ಯವಾಗಿದ್ದು ಮಾತ್ರ ಹತ್ತು ವರ್ಷಗಳ ನಂತರವೇ.\u003c\/p\u003e\n\u003cp\u003eಮೊದಲ ಬಾರಿಗೆ ಕತೆಯನ್ನು ಫೇಸ್ಟುಕ್ಕಿನಲ್ಲಿ ಪ್ರಕಟಿಸಿದಾಗ ಇದಕ್ಕೆ ಸಿಕ್ಕ ಪ್ರತಿಕ್ರಿಯೆ ಅಭೂತಪೂರ್ವ. ಮೂರನೇಯ ಕಂತಿನ ಹೊತ್ತಿಗಾಗಲೇ ಓದುಗ ಮಿತ್ರರರಲ್ಲೊಂದು ತೀವ್ರ ಕುತೂಹಲ, ಬೆಳಿಗ್ಗೆ ಮತ್ತು ಸಂಜೆ ಎಂದುಕೊಂಡು ದಿನಕ್ಕೆರಡು ಭಾಗಗಳನ್ನು ಪ್ರಕಟಿಸುತ್ತಿದ್ದೆ. ಕೊಂಚ ತಡವಾದರೂ ಸಾಕು, ಇನ್ಬಾಕ್ಸಿಗೆ ಸಂದೇಶ ಕಳಿಸುವ ಕೆಲವು ಸ್ನೇಹಿತರು, 'ಇನ್ನೂ ಯಾಕೆ ಇಂದಿನ ಕಂತು ಪ್ರಕಟವಾಗಿಲ್ಲ' ಎಂದು ಕೇಳುತ್ತಿದ್ದರು. ಒಂದಿಬ್ಬರಂತೂ 'ಇತ್ತೀಚೆಗೆ ತೀರ ತಡ ಮಾಡ್ತಿದ್ದೀರಿ. ಇಷ್ಟು ಆಲಸ್ಯ ಒಳ್ಳೆಯದಲ್ಲ' ಎಂದು ಪ್ರೀತಿಯಿಂದ ಗದರಿದ್ದೂ ಇದೆ.\u003c\/p\u003e","brand":"Gururaj Kodkani","offers":[{"title":"Default Title","offer_id":47311920398595,"sku":"HB00005421","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Prathigne.jpg?v=1760012667"}],"url":"https:\/\/harivubooks.com\/collections\/kannada_horror_collections.oembed","provider":"Harivu Books","version":"1.0","type":"link"}