{"title":"Dictionary","description":"","products":[{"product_id":"aadalita-padakosha","title":"ಆಡಳಿತ ಪದಕೋಶ","description":"\u003cp\u003eಸ.ರ.  ಸುದರ್ಶನ ಅವರು ಪ್ರಸ್ತುತ ಮೈ. ವಿ. ವಿ. ಯ ಪ್ರಸಾರಂಗದಲ್ಲಿ ಉಪನಿರ್ದೇಶಕ (ಪ್ರಭಾರ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮೈ. ವಿ. ವಿ. ಯ ಇಂಗ್ಲಿಷ್ - ಕನ್ನಡ ನಿಘಂಟು ಪರಿಷ್ಕರಣ ಯೋಜನೆಯಲ್ಲಿ ಸಹಾಯಕ ಸಂಪಾದಕರಾಗಿ ಸುಮಾರು ೧೫ ವರ್ಷಗಳ ಅನುಭವ ಪಡೆದಿದ್ದಾರೆ. ಈ ಅನುಭವದ ಹಿನ್ನಲೆಯಲ್ಲಿ ಪ್ರಸ್ತುತ 'ಆಡಳಿತ ಪದಕೋಶ'ವನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಇಂಗ್ಲಿಷ್‌ನ ಆಡಳಿತ ಶಬ್ದಗಳಿಗೆ ಸೂಕ್ತವಾದ ಕನ್ನಡ ಪದಗಳನ್ನು ವಿವಿಧ ಆಕರಗಳ ನೆರವಿನಿಂದ ಸಂಯೋಜಿಸುವ ಕಾರ್ಯವನ್ನು ಮಾಡಿದ್ದಾರೆ. ಇದರಲ್ಲಿ ಜನಸಾಮಾನ್ಯರಿಗೆ ಹೆಚ್ಚು ಪರಿಚಿತವಾಗಿರುವ ಪದಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದು ಆಡಳಿತದಲ್ಲಿ ಕನ್ನಡ ಬಳಕೆ ಸಂಪೂರ್ಣವಾಗಿ ಆಗಬೇಕಾಗಿರುವ ಈ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗಿದೆ.\u003c\/p\u003e","brand":"S. R. Sudarshan","offers":[{"title":"Default Title","offer_id":42020603232515,"sku":"HB00001888","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_b4c396be-2f79-45bd-b0cd-d68f92a2fd8c.jpg?v=1636356187"},{"product_id":"m-a-raamaanujayyangarya-avara-kabbigara-kaavam","title":"ಮಂ!! ಆ!! ರಾಮಾನುಜಯ್ಯಂಗಾರ‍್ಯ ಅವರ ಕಬ್ಬಿಗರ ಕಾವಂ","description":"\u003cp\u003e\u003cspan style=\"color: #000000;\"\u003eಕ‌ನ್ನಡ ಭಾಷೆಯ ಮೊಟ್ಟ ಮೊದಲನೆಯ ಅಚ್ಚಗನ್ನಡ ಕಾವ್ಯ. ಅಚ್ಚ ಕನ್ನಡದ ಕವಿ ಆಂಡಯ್ಯನ ಕನ್ನಡ ಭಾಷೆಯ ಅಭಿಮಾನ ಲೋಕೋತ್ತರವಾದುದು. ಸಂಸ್ಕೃತದ ಒಂದೂ ಪದವನ್ನು ಬೆರಸದೆ, ಅಚ್ಚ ಕನ್ನಡದಲ್ಲಿ ಕಾವ್ಯ ರಚನೆಯನ್ನು ಮಾಡಿದ ಹೆಗ್ಗಳಿಕೆ ಆಂಡಯ್ಯನದು. ಈ ಕಾವ್ಯದ ಹೆಸರು ಕಬ್ಬಿಗರ ಕಾವಂ - ಕವಿಗಳ ರಕ್ಷಕ ಎಂದು ತನ್ನ ಕೃತಿಗೆ ನಾಮಕರಣ ಮಾಡಿದ್ದಾನೆ. ಇದು ರಮ್ಯವಾಗಿರುವುದರಿಂದ ಇದಕ್ಕೆ ಸೊಬಗಿನ ಸುಗ್ಗಿ ಎಂಬ ಹೆಸರು ಬಂದಿದೆ. ಸಂಸ್ಕೃತ ತಿಳಿದವರು ಇದನ್ನು ಮದನ ವಿಜಯ ಎಂದು ಕರೆಯುತ್ತಾರೆ.\u003c\/span\u003e\u003c\/p\u003e","brand":"Samskriti Subhramanya","offers":[{"title":"Default Title","offer_id":42020603298051,"sku":"HB00001887","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0005.jpg?v=1636356188"},{"product_id":"dravidabhaasha-jnaatipadakosha","title":"ದ್ರಾವಿಡಭಾಷಾ ಜ್ಞಾತಿಪದಕೋಶ","description":"\u003cp\u003e\u003c\/p\u003e","brand":"Dr. Hampa Nagarajayya","offers":[{"title":"Default Title","offer_id":42020634657027,"sku":"HB00001490","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DravidaBhashaJnaatipadakosha.jpg?v=1727696648"},{"product_id":"acchagannadada-nudikosha","title":"ಅಚ್ಚಗನ್ನಡ ನುಡಿಕೋಶ","description":"\u003cp\u003eಹದಿಮೂರನೆಯ ಶತಮಾನದಲ್ಲಿ ಅಚ್ಚಗನ್ನಡದಲ್ಲೇ ಅಂಡಯ್ಯ ಕಬ್ಬಿಗರ ಕಾವ ರಚಿಸಿದ ನಂತರ ಇಪ್ಪತ್ತನೆಯ ಶತಮಾನದಲ್ಲಿ ಕಾಲೂರ ಚೆಲುವೆ ಅನ್ನುವ ಅಪ್ಪಟ ಕನ್ನಡದ ಕಾವ್ಯವನ್ನು ರಚಿಸಿದ ಕೊಳಂಬೆ ಪುಟ್ಟಣಗೌಡರು ರಚಿಸಿರುವ ಈ ಅಚ್ಚಗನ್ನಡದ ನುಡಿಕೋಶ ಬಯಸಿದರೆ ಕನ್ನಡದಲ್ಲೇ ಹೊಸತನ್ನು ಕಟ್ಟುವ ಸಾಧ್ಯತೆಯನ್ನು ಅಚ್ಚುಕಟ್ಟಾಗಿ ತೋರಿಸುತ್ತದೆ.\u003c\/p\u003e","brand":"Vid. Kolambe Puttanna Gowda","offers":[{"title":"Default Title","offer_id":42020668014851,"sku":"HB00001187","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/21.jpg?v=1636357507"},{"product_id":"kannada-nudiya-akara-kosha","title":"ಕನ್ನಡ ನುಡಿಯ ಆಕರ ಕೋಶ","description":"\u003cp\u003eಕನ್ನಡ ನುಡಿಯ ಆಕರ ಕೋಶವು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಮಾಧ್ಯಮದಲ್ಲಿ ಕೆಲಸ ಮಾಡುವವರನ್ನು ಗಮನದಲ್ಲಿರಿಸಿಕೊಂಡು ರೂಪುಗೊಂಡ ಪರಾಮರ್ಶನ ಗ್ರಂಥವಾಗಿದ್ದು, ಇದರಲ್ಲಿ ಕನ್ನಡನುಡಿಯ ಚರಿತ್ರೆ, ಕನ್ನಡ ನುಡಿಯ ರಚನೆ, ಪದಕೋಶ, ಕನ್ನಡ ನುಡಿಯ ಬಳಕೆ, ಕನ್ನಡ ಮತ್ತು ಇತರ ನುಡಿಗಳ ನಡುವಿನ ಸಂಬಂಧ ದ್ವಿಭಾಷಿಕತೆ ಮತ್ತು ಬಹುಭಾಷಿಕತೆಯ ಪರಿಣಾಮಗಳು, ಕನ್ನಡ ನುಡಿಯ ಪ್ರಭೇದಗಳು, ವೃತ್ತಿ ಭಾಷೆ, ಕನ್ನಡ ನುಡಿ ಕಲಿಕೆ ಮತ್ತು ಕಲಿಸುವಿಕೆ, ಕನ್ನಡ ಬರವಣಿಗೆ, ನುಡಿ-ನಾಡು-ನಾಡವರು ಕನ್ನಡ ಮಾತನಾಡುವ ಪ್ರದೇಶಗಳು, ಕನ್ನಡ ಸಂಸ್ಕೃತಿ ಹೀಗೆ ಕನ್ನಡ ನುಡಿ ಚರಿತ್ರೆ, ರಚನೆ ಮತ್ತು ಬಳಕೆಗಳನ್ನು ಪರಿಚಯಿಸುವ ಒಂದು ಅಮೂಲ್ಯ ಕೃತಿಯಾಗಿದೆ.\u003c\/p\u003e","brand":"K. V. Narayan, R. Chalapathi, Meti Mallikarjuna","offers":[{"title":"Default Title","offer_id":42020672700675,"sku":"HB00001144","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3833.jpg?v=1636357606"},{"product_id":"kannadakke-beku-kannadadde-vyakarana","title":"ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ","description":"\u003cp\u003eಇವತ್ತಿನ ದಿನ ಶಾಲೆಗಳಲ್ಲಿ ಕನ್ನಡ ವ್ಯಾಕರಣದ ನಿಯಮಗಳು ಎಂದು ಕಲಿಸಿಕೊಡಲಾಗುತ್ತಿರುವ ನಿಯಮಗಳು ನಿಜವಾದ ಕನ್ನಡ ವ್ಯಾಕರಣ ನಿಯಮಗಳಿಗಿಂತ ಬಹಳಷ್ಟು ಭಿನ್ನವಾಗಿವೆಯಾದ ಕಾರಣ ಕನ್ನಡ ಪದಗಳ ಮತ್ತು ವಾಕ್ಯಗಳ ರಚನೆಯನ್ನು ಸರಿಯಾಗಿ ವಿವರಿಸಲಾರವು. ನಿಜಕ್ಕೂ ಕನ್ನಡದ ವ್ಯಾಕರಣ ನಿಯಮಗಳು ಎಂತಹವು, ಕನ್ನಡ ವ್ಯಾಕರಣಗಳಲ್ಲಿ ಅದರಲ್ಲೂ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ವ್ಯಾಕರಣಗಳಲ್ಲಿ ಬರುವ ನಿಯಮಗಳಿಗಿಂತ ಅವು ಹೇಗೆ ಭಿನ್ನವಾಗಿವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಮತ್ತು ಅದರ ವ್ಯಾಕರಣದಲ್ಲಿ ಆಸಕ್ತಿಯಿರುವವರೆಲ್ಲ ಅವಶ್ಯವಾಗಿ ಓದಬೇಕಾದ ಪುಸ್ತಕವಿದು. \u003cbr\u003eಈ ಪುಸ್ತಕವನ್ನು ಬರೆದಿರುವ ಡಿ. ಎನ್. ಶಂಕರ ಭಟ್ ಅವರು ನೂರಾರು ಭಾಷೆಗಳ ವ್ಯಾಕರಣಗಳನ್ನು ಪರಿಶೀಲಿಸಿ, ಅವುಗಳ ನಡುವೆ ಯಾವ ರೀತಿಯಲ್ಲೆಲ್ಲ ವ್ಯತ್ಯಾಸಗಳು ಕಾಣಿಸಿಕೊಳ್ಳಬಲ್ಲುವು ಎಂಬುದನ್ನು ಕಂಡುಹಿಡಿಯುವುದಕ್ಕಾಗಿ ಅವರು ಸುಮಾರು ನಲವತ್ತು ವರ್ಷಗಳ ಸಂಶೋಧನೆ ಮಾಡಿದ್ದಾರೆ. ಈ ಸಂಶೋಧನೆಯ ಮೂಲಕ ತಾವು ಪಡೆದ ತಿಳುವಳಿಕೆಯನ್ನು ಅವರೀಗ ಕನ್ನಡ ವ್ಯಾಕರಣವನ್ನು ಅರಿಯುವ ಪ್ರಯತ್ನದಲ್ಲಿ ಬಳಸಿಕೊಳ್ಳುತ್ತಿದ್ದಾರೆ.\u003cbr\u003e\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675059971,"sku":"HB00001131","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KannadakkeBekuKannadaddeVyakarana.jpg?v=1715247360"},{"product_id":"english-padagalige-kannadadde-padagalu","title":"ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು","description":"\u003cp\u003eಇದೊಂದು ಹೊಸ ಬಗೆಯ ಪದಕೋಶ. ಇಂಗ್ಲಿಶ್ ನುಡಿಯನ್ನು ಸಾಕಷ್ಟು ತಿಳಿದಿದ್ದು, ಅದರಲ್ಲಿ ಬರುವ ಪದಗಳಿಗೆ ಸಮನಾದ ಕನ್ನಡದ್ದೇ ಆದ ಪದಗಳು ಯಾವುವಿವೆ ಎಂಬುದನ್ನು ತಿಳಿಯಬಯಸುವವರಿಗೆ ಇದನ್ನು ರಚಿಸಲಾಗಿದೆ. \u003cbr\u003eಸಾಮಾನ್ಯವಾಗಿ ಇಂಗ್ಲಿಶ್-ಕನ್ನಡ ಪದಕೋಶಗಳಲ್ಲಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳಿಗಿಂತಲೂ ಸಂಸ್ಕೃತದಿಂದ ಎರವಲಾಗಿ ಪಡೆದ ತತ್ಸಮ ಪದಗಳನ್ನು ಕೊಡುವುದೇ ಜಾಸ್ತಿ. ಹಾಗಾಗಿ ಕನ್ನಡವೇ ಆದ ಪದಗಳಿದ್ದರೂ ಅವು ಅಂತಹ ಪದಕೋಶಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. \u003cbr\u003eಇದರಿಂದಾಗಿ ತಮ್ಮ ಬರಹಗಳಲ್ಲಿ ಕನ್ನಡದವೇ ಆದ ಪದಗಳನ್ನು ಬಳಸಬೇಕೆಂದಿರುವವರಿಗೆ ಅವು ಒತ್ತಾಸೆಯಾಗುವುದಿಲ್ಲ. ಆದರೆ ಈ ಪದಕೋಶದಲ್ಲಿ ಇಂಗ್ಲಿಶ್ ಪದಗಳಿಗೆ ಸಮಾನವಾಗಿರುವಂತಹ ಕನ್ನಡದವೇ ಆದ ಪದಗಳನ್ನು ಕೊಡಲಾಗಿದೆ ಮತ್ತು ಹೊಸಗನ್ನಡ ಪದಗಳನ್ನಲ್ಲದೆ ಹಳೆಗನ್ನಡ ಪದಗಳನ್ನೂ ಕೊಟ್ಟಿದ್ದು ಅವನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ಪದಕಂತೆಗಳ ಮೂಲಕ ಮತ್ತು ಹೊಸಗನ್ನಡ ವಾಕ್ಯಗಳ ಮೂಲಕ ಸೂಚಿಸಲಾಗಿದೆ. \u003cbr\u003eಕನ್ನಡದವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಹೊಸದಾಗಿ ಪದಗಳನ್ನು ಉಂಟುಮಾಡಬೇಕೆಂದಿರುವವರಿಗೂ ಈ ಪದಕೋಶ ಒತ್ತಾಸೆಯಾಗಬಲ್ಲುದು. ಅಂತಹ ಹಲವು ಪದಗಳನ್ನು ಈ ಪದಕೋಶದಲ್ಲಿ ತಯಾರಿಸಿ ಕೊಡಲಾಗಿದೆ. ಅವನ್ನು ತಯಾರಿಸಿಕೊಳ್ಳುವಲ್ಲಿ ಕನ್ನಡದ ಒಲವೇನು ಎಂಬುದನ್ನು ವಿವರಿಸಲಾಗಿದೆ.\u003c\/p\u003e","brand":"Dr. D. N. Shankara Batt","offers":[{"title":"Default Title","offer_id":42020675649795,"sku":"HB00001125","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/3c34bc77-4e86-4c7b-9cab-042b33f39ba6.jpg?v=1700808991"},{"product_id":"sirigannada-arthakosha-kannada-shivaram-karanth","title":"ಸಿರಿಗನ್ನಡ ಅರ್ಥಕೋಶ","description":"ಶಿವರಾಮ ಕಾರಂತರು ಬರೆದಿರುವ ಕನ್ನಡದ ಪದಕೋಶ. ಸುಮಾರು 25,000 ಶಬ್ದಗಳಿಗೆ ವಿವರಣೆ ನೀಡಲಾಗಿದೆ.","brand":"Dr. K. Shivaram Karanth","offers":[{"title":"Default Title","offer_id":42119555121411,"sku":"HB00000535","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-29at4.08.21PM.jpg?v=1638187643"},{"product_id":"eravalu-padakosha-kannada-book","title":"ಎರವಲು ಪದಕೋಶ","description":"\u003cp\u003eಒಂದು ಭಾಷೆಗೆ ಬೇರೊಂದು ಭಾಷೆಯಿಂದ ಎರವಲಾಗಿ ಬಂದು ಬಳಕೆಯಾಗುವ ಪದಗಳ ಕುರಿತ ವ್ಯಾಸಂಗವು ಭಾಷಾಶಾಸ್ತ್ರದ ಬಹು ಮುಖ್ಯವಾದ ಅಂಗವಾಗಿದೆ. ಇದು ಭಾಷೆಯ ದೃಷ್ಟಿಯಿಂದ ಮಾತ್ರವಲ್ಲದೆ ಸಂಸ್ಕೃತಿಯ ದೃಷ್ಟಿಯಿಂದಲೂ ಪ್ರಧಾನವಾಗಿದೆ. ಹಲವು ವರ್ಷಗಳ ಅವಧಿಯಲ್ಲಿ, ಕೆಲವು ಪ್ರಭಾವಗಳಿಂದ ತನ್ನಷ್ಟಕ್ಕೆ ನಡೆದು ಹೋಗುವ ಪದಗಳ ಇಂಥ ಹೊಕ್ಕುಬಳಕೆಯ ರೋಚಕವಾದ ಪ್ರಕ್ರಿಯೆ. ಅರ್ಥವ್ಯಾಪ್ತಿಯು ಅತ್ಯಂತ ರೋಚಕವಾದ ಪ್ರಕ್ರಿಯೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಎರವಲು ಪದಗಳು ಕನ್ನಡದ ಸ್ವಭಾವವನ್ನೂ ಸ್ವರೂಪವನ್ನೂ ಹೇಗೆ ಪಡೆಯುತ್ತವೆ ಎಂಬುದನ್ನು ತಿಳಿದಾಗ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ಜನರು ತಮ್ಮ ಧ್ವನ್ಯಂಗಗಳಿಗೆ ಹೊಂದಿಕೊಳ್ಳುವಂತೆ ಹೊಸ ಶಬ್ದಗಳನ್ನು ಉಚ್ಚರಿಸಿ, ಅವುಗಳಿಗೆ ಸ್ವರೂಪವನ್ನೂ ಉಚ್ಚಾರಣೆಯನ್ನೂ ನಿರ್ಧರಿಸುತ್ತಾರೆ. ಅವು ಹಾಗೇ ನಿಂತುಬಿಡುತ್ತವೆ. ಹೀಗೆ ಮಾಡುವವರು\u003cbr data-mce-fragment=\"1\"\u003eಭಾಷಾಶಾಸ್ತ್ರಜ್ಞರಾಗಲೀ, ವಿದ್ವಾಂಸರಾಗಲೀ ಅಲ್ಲ. ಹೀಗೆ ಹಲವು ಭಾಷೆಗಳಿಂದ ಬಂದು ಕನ್ನಡವನ್ನು ಅಲಂಕರಿಸಿರುವ, ಸಮೃದ್ಧಗೊಳಿಸಿರುವ ಎರವಲು ಪದಗಳ ಮೂಲವನ್ನು ಶೋಧಿಸಲು ಮಾಡಿದ ಪ್ರಯತ್ನದ ಫಲವೇ ಈ ಎರವಲು ಪದಕೋಶ,\u003cbr data-mce-fragment=\"1\"\u003e\u003cbr data-mce-fragment=\"1\"\u003eಎರವಲು ಪದಕೋಶವನ್ನು ರಚಿಸಿಕೊಟ್ಟಿರುವವರು ನಮ್ಮ ಕಾಲದ ಅತ್ಯುತ್ತಮ ನಿಘಂಟುಕಾರರಾದ, ನಿಘಂಟು ರಚನೆಯಲ್ಲಿ ಹಲವು ವರ್ಷಗಳ ಅನುಭವ ಗಳಿಸಿರುವ ಪ್ರೊ| ಜಿ. ವೆಂಕಟಸುಬ್ಬಯ್ಯನವರು. ಇವರ ಮತ್ತೊಂದು ಉಪಯುಕ್ತ ಕೃತಿ 'ಇಗೋ ಕನ್ನಡ' ಸಾಮಾಜಿಕ ನಿಘಂಟನ್ನು ಮೂರು ಸಂಪುಟಗಳಲ್ಲಿ ನವಕರ್ನಾಟಕ ಪ್ರಕಟಿಸಿದೆ. ಈ ಮೂರು ಸಂಪುಟಗಳ ಸಂಯುಕ್ತ ಆವೃತ್ತಿಯೂ ಪ್ರಕಟವಾಗಿದೆ.\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು - ನವಕರ್ನಾಟಕ ಪ್ರಕಾಶನ\u003c\/p\u003e","brand":"Prof. G. Venkatasubbaiah","offers":[{"title":"Default Title","offer_id":42259898401027,"sku":"HB00001928","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/eravalupadakosha_1.jpg?v=1640695078"},{"product_id":"kodava-kannada-nighantu-kannada-dictionary","title":"ಕೊಡವ ಕನ್ನಡ ನಿಘಂಟು","description":"\u003cp\u003eಸುಮಾರು ಮೂರು ಸಾವಿರದೈನೂರಕ್ಕಿಂತ ಹೆಚ್ಚಿನ ಸಂಖ್ಯೆಯ ಕೊಡವಶಬ್ದಗಳು ಅರ್ಥಸಹಿತವಾಗಿ ಇಲ್ಲಿ ದಾಖಲಾಗಿವೆ. ಕನ್ನಡಿಗರ ಸಂಪರ್ಕದಿಂದ ಕೊಡವ ಪದಗಳೊಂದಿಗೆ ಎಷ್ಟೋ ಕನ್ನಡ ಪದಗಳು ಅರ್ಥಸಹಿತವಾಗಿ ಸೇರಿಕೊಂಡು ಅವು ಕೊಡವ ಶಬ್ದಗಳೇ ಎಂಬಷ್ಟರ ಮಟ್ಟಿಗೆ ಬಳಕೆಯಾಗುತ್ತಿರುವುದನ್ನು ಇಲ್ಲಿ ಗಮನಿಸುತ್ತೇವೆ. ಶಬ್ದಗಳಿಗೆ ಅರ್ಥ ಕೊಡುವಾಗಲೇ ಅಲ್ಲಲ್ಲಿ ಆಯಾ ಭಾಗದ ಪದಗಳಿಗೆ ಅನ್ವಯವಾಗುವಂತೆ ಕೊಡವ ಭಾಷೆಯ ಜಾಯಮಾನಕ್ಕೆ ತಕ್ಕ ಕೆಲವು ವಿವರಗಳನ್ನು 'ಸೂಚನೆ'ಯ ಅಡಿಯಲ್ಲಿ ಒದಗಿಸುತ್ತ ಹೋಗಿರುವುದು ಆ ಭಾಷೆಯ ಬಗೆಗೆ ಅವರಿಗಿರುವ ಪಾಂಡಿತ್ಯ ಮತ್ತು ಶ್ರದ್ಧಾಪೂರ್ಣ ಅಭ್ಯಾಸಕ್ಕೆ ಸಾಕ್ಷಿನೀಡುತ್ತವೆ. ಕನ್ನಡ-ಸಂಸ್ಕೃತ ಪದಗಳು ಅಪಭ್ರಂಶವಾಗಿ ಪ್ರಯೋಗವಾಗಿರುವುದು, ಕೊಡವ ಕುಟುಂಬಗಳ ಹೆಸರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರುವುದು ಈ ಕೋಶದ ವೈಶಿಷ್ಟ್ಯವಾಗಿದೆ.\u003c\/p\u003e\n\u003cp\u003e\u003cbr\u003e\u003c\/p\u003e","brand":"I. M. Muttanna","offers":[{"title":"Default Title","offer_id":42278512886019,"sku":"HB00002065","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kodvakannadanighantu_1.jpg?v=1641193150"},{"product_id":"kumbaarike-vrutti-padakosha-kannada-book","title":"ಕುಂಬಾರಿಕೆ ವೃತ್ತಿ ಪದಕೋಶ","description":"\u003cp\u003eವೃತ್ತಿಯಿಂದ ಇಂಜನಿಯರಾದ ಬಸವರಾಜ ಕುಂಚೂರವರು ಕುಂಭಕಲಾ ಸಾಹಿತ್ಯಕ್ಕೆ ಈಗಾಗಲೇ ಮೂರು ಕೃತಿಗಳನ್ನು ನೀಡಿದ್ದಾರೆ. ಅವರು ಬರೆದ 'ಕುಂಬಾರ ಜನಾಂಗ' ಕುಂಭಕಲೆ ಮತ್ತು ಜನಾಂಗೀಯ ಅಧ್ಯಯನ ಕುರಿತಂತೆ ಒಂದು ಮಹತ್ತರವಾದ ಕೃತಿ. ಎರಡು ಪ್ರಶಸ್ತಿಗಳನ್ನು ಪಡೆದು ಎರಡನೆ ಮುದ್ರಣ ಕಂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಂಶಪಾರಂಪರ್ಯವಾಗಿ ಬೆಳೆದು ಬಂದ ಗ್ರಾಮೀಣ ಕುಲವೃತ್ತಿಗಳು ಆಧುನಿಕ ತಂತ್ರಜ್ಞಾನ ಹಾಗೂ ಜಾಗತೀಕರಣದ ಒತ್ತಡಕ್ಕೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಕುಲಕಸುಬನ್ನು ಅವಲಂಬಿಸಿ ನೆಮ್ಮದಿಯಿಂದ ಬದುಕನ್ನು ಸಾಗಿಸುತ್ತಿದ್ದ ಕರಕುಶಲ ವೃತ್ತಿ ಜೀವಿಗಳ ಬದುಕು ನಂದಿ ಹೋಗಿರುವುದು ಮರೆಯಲಾಗದ ಕಹಿ ಇತಿಹಾಸ. ಅವರ ಬದುಕಿನ ಪರಧಿಯ ಸುತ್ತ ಉಪಭಾಷೆಗಳಂತೆ ಬೆಳೆದು ಬಂದ ವೃತ್ತಿಪದಗಳು ಕೂಡ ಹೇಳ ಹೆಸರಿಲ್ಲ ದಂತಾಗುತ್ತಿವೆ. ಭಾಷಾಶಾಸ್ತ್ರಕ್ಕೆ ಇದೊಂದು ದೊಡ್ಡ ಆಘಾತ! ಈ ಸಂದರ್ಭದಲ್ಲಿ ಬಸವರಾಜ ಕುಂಚೂರವರು ರಚಿಸಿದ 'ಕುಂಬಾರಿಕೆ ವೃತ್ತಿ ಪದಕೋಶ' ವೃತ್ತಿ ಪದಕೋಶ ರಚನಾಕಾರರಿಗೆ ಉಪಯುಕ್ತ ಗಂಥವಾಗಬಲ್ಲದು.\u003c\/p\u003e\n\u003cp\u003eಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು\u003c\/p\u003e","brand":"Basavaraja Kanchooru","offers":[{"title":"Default Title","offer_id":42291153928451,"sku":"HB00002088","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kumbaarikevruttipadakosha_1.jpg?v=1641453263"},{"product_id":"igo-kannada-samajika-nighantu-kannada-book","title":"ಇಗೋ ಕನ್ನಡ - ಸಾಮಾಜಿಕ ನಿಘಂಟು","description":"\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv id=\"synopsys\" class=\"col-sm relative\"\u003e\n\u003cp\u003eಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಕನ್ನಡ ಕಳಕಳಿಯ ದ್ಯೋತಕವಾಗಿ ಮೂಡಿ ಬಂದ ಕೃತಿ-ಇಗೋ ಕನ್ನಡ. ಪ್ರಜಾವಾಣಿಯಲ್ಲಿ ಅಂಕಣ ಬರೆಹದಲ್ಲಿ ಕನ್ನಡದ ಪರಿಕಲ್ಪನೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಅಥವಾ ಕನ್ನಡವನ್ನು ಹೇಗೆ ಬಳಸಬೇಕು ಎಂಬ ನಿಟ್ಟಿನಲ್ಲಿ ಹಾಗೂ ಸಾಮಾನ್ಯವಾಗಿ ಮಾಡಬಹುದಾದ ತಪ್ಪುಗಳನ್ನು ಸರಿಪಡಿಸಿ, ಅವುಗಳ ಕಾರಣಗಳನ್ನು ತಿಳಿಸುವ ಸರಳಗನ್ನಡದಲ್ಲಿ ಬರೆದ ಬರೆಹಗಳೆಲ್ಲವೂ ಈ ಪುಸ್ತಕದಲ್ಲಿವೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv id=\"buy_now_section\"\u003e\n\u003csection class=\"synopsys section2\"\u003e\n\u003cdiv id=\"\" class=\"container buylink\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"w-100\"\u003e\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003c\/div\u003e","brand":"Prof. G. Venkatasubbaiah","offers":[{"title":"Default Title","offer_id":42350656160003,"sku":"HB00002151","price":990.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f7cb0556-3493-40a2-9cf0-808469763656.jpg?v=1642491012"},{"product_id":"standard-pocket-dictionary","title":"ಸ್ಟಾಂಡರ್ಡ್ ಪಾಕೆಟ್ ಡಿಕ್ಶನರಿ","description":"ಶಬ್ದಕೋಶ - Dictionary","brand":"D. K. Bharadwaj","offers":[{"title":"Default Title","offer_id":43075890249987,"sku":"HB00003358","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/standardPocketDictionary_1_4.jpg?v=1689233222"},{"product_id":"standard-dictionary-english-english-kannada","title":"ಸ್ಟಾಂಡರ್ಡ್  ಡಿಕ್ಶನರಿ ಇಂಗ್ಲಿಷ್-ಇಂಗ್ಲಿಷ್-ಕನ್ನಡ","description":"ಶಬ್ದಕೋಶ - Dictionary","brand":"D. K. Bharadwaj","offers":[{"title":"Default Title","offer_id":43075891396867,"sku":"HB00003359","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_a8b40c4e-1a40-4339-b968-e76c0e7057b0.jpg?v=1658658001"},{"product_id":"standard-abridged-dictonary-english-english-kannada","title":"ಸ್ಟಾಂಡರ್ಡ್ ಅಬ್ರಿಜ್ಡ್  ಡಿಕ್ಶನರಿ ಇಂಗ್ಲಿಷ್-ಇಂಗ್ಲಿಷ್-ಕನ್ನಡ","description":"ಶಬ್ದಕೋಶ - Dictionary","brand":"D. K. Bharadwaj","offers":[{"title":"Default Title","offer_id":43075895918851,"sku":"HB00003360","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a6032fa0-04b0-42c0-96c5-02991e6c50d5.jpg?v=1658658483"},{"product_id":"kannada-english-shabdakosha-kannada-book","title":"ಕನ್ನಡ-ಇಂಗ್ಲಿಷ್ ಶಬ್ದಕೋಶ","description":"ಶಬ್ದಕೋಶ - Dictionary","brand":"G. Venkatesh","offers":[{"title":"Default Title","offer_id":43075900244227,"sku":"HB00003361","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5fe22a9e-1d37-4472-a85d-d2d14ab153f7.jpg?v=1658658850"},{"product_id":"kannada-kannada-english-nighantu-nudiyarime-kannada-books","title":"ಕನ್ನಡ - ಕನ್ನಡ - ಇಂಗ್ಲಿಷ್ ನಿಘಂಟು","description":"ಈ ನಿಘಂಟಿನ ಮೂವರು ಸಂಪಾದಕರೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೆಸರು ಗಳಿಸಿದವರಾಗಿದ್ದಾರೆ. ನಾಡೋಜ. ಪ್ರೊಫೆಸರ್. ಜಿ. ವೆಂಕಟಸುಬ್ಬಯ್ಯನವರು 40 ವರ್ಷಕ್ಕೂ ಮಿಕ್ಕು ಕನ್ನಡವನ್ನು ಬೋದಿಸಿರುವ ಖ್ಯಾತ ವಿಮರ್ಶಕ ವಿದ್ವಾಂಸರು.ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ- ಕನ್ನಡ ನಿಘಂಟಿನ ಮುಖ್ಯ ಬೃಹತ್ಸಂಪುಟಗಳ ಪ್ರಕಟಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಖಿಲ ಭಾರತ ನಿಘಂಟುಕಾರರ ಸಂಸ್ಥೆಗೂ, ತೆಲುಗು ಅಕಾಡೆಮಿಯ 'ಶಬ್ದಸಾಗರ' ನಿರ್ಮಾಣದಲ್ಲಿಯೂ ಸಲಹೆಗಾರರಾಗಿದ್ದಾರೆ. ಕನ್ನಡ-ಇಂಗ್ಲಿಷ್-ಸಂಸ್ಕೃತ ಈ ಭಾಷೆಗಳ ಅವರ ಅಪಾರವಾದ ಅನುಭವ ಸಹಾಯ ಈ ನಿಘಂಟಿಗೆ ಒದಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಾ. ಎಲ್. ಎಸ್. ಶೇಷಗಿರಿರಾಯರು ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ಪ್ರಸಿದ್ಧ ವಿದ್ವಾಂಸರೂ ಕನ್ನಡ, ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪರಿಣಿತರೂ ಸಾಹಿತ್ಯ ವಿಮರ್ಶನ ಪ್ರಪಂಚದಲ್ಲಿ ಖ್ಯಾತರೂ ಆಗಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಾ. ಎಚ್. ಕೆ. ರಾಮಚಂದ್ರಮೂರ್ತಿಯವರು ನಿವೃತ್ತ ಇಂಗ್ಲಿಷ್ ಅಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣದಲ್ಲಿ ಹಲವು ವರ್ಷ ಶ್ರಮಸಾಧ್ಯವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಕನ್ನಡ- ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ತುಂಬ ವಿದ್ವಾಂಸರು. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲೂ ಪರಿಣಿತರಾಗಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಮೂವರೂ ಸ್ವಂತವಾಗಿ ಅನೇಕ ಕೃತಿಗಳನ್ನು ರಚಿಸಿರುವುದಲ್ಲದೆ ವಿದ್ವತ್ಪ್ರಪಂಚದಲ್ಲಿ ಮಾನ್ಯರಾಗಿದ್ದಾರೆ.","brand":"Pro. G. Venkatasubbayya, Pro. L. S. Sheshagirirao, Pro. H. K. Ramachandramurthy","offers":[{"title":"Default Title","offer_id":43766310666499,"sku":"HB00004028","price":390.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_bbd3a075-625b-4a68-a09f-7ff04af97d6c.jpg?v=1677146906"},{"product_id":"kannada-kannada-english-sankshipta-nighantu-dictionary-v-krishna-kannada-book","title":"ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟು","description":"ಕನ್ನಡ ಸಾರಸ್ವತ ಲೋಕಕ್ಕೆ ವಿವರಣಾತ್ಮಕವಾಗಿರುವ, ಮೂರು ಸಂಪುಟಗಳ ಒಂದು ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ನೀಡಿರುವ ಶ್ರೀ ವಿ. ಕೃಷ್ಣ ಅವರು ವಿದ್ಯಾರ್ಥಿಗಳು, ಅನುವಾದಕರು, ಸಾಮಾನ್ಯ ಭಾಷಾಭ್ಯಾಸಿಗಳು ಹಾಗೂ ಕನ್ನಡ ಮತ್ತು ಇಂಗ್ಲಿಷನ್ನು ಕಲಿಯಬಯಸುವ ಅನ್ಯಭಾಷಿಕರಿಗಾಗಿ ಈ ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟನ್ನು ರಚಿಸಿದ್ದಾರೆ. ಇದು ವಿವರಣಾತ್ಮಕವಾಗಿರುವುದರಿಂದ ಕನ್ನಡ ಪದಗಳ ಅರ್ಥ ಹಾಗೂ ಅದರ ಛಾಯೆಗಳನ್ನು ನಿಖರವಾಗಿ ತಿಳಿಯಲು ಸಹಾಯಕವಾಗಿದೆ. ವಿವರಣೆಗೆ ಸಾಧ್ಯವಾದಷ್ಟೂ ಸರಳ ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ನಿಘಂಟಿಗಾಗಿ ಪದಗಳನ್ನು ಆಯ್ಕೆಮಾಡುವಾಗ ಪ್ರಸ್ತುತ ಬಳಸುತ್ತಿರುವ ಹಾಗೂ ನಡುಗನ್ನಡದ ಪದಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಳ್ಳಲಾಗಿದೆ. ಇದು 18,300 ಮುಖ್ಯೋಲ್ಲೇಖಗಳನ್ನೂ, ಅವುಗಳಿಗೆ 30,000ಕ್ಕೂ ಹೆಚ್ಚು ಅರ್ಥವಿವರಣೆಗಳನ್ನೂ ಒಳಕೊಂಡಿದ್ದು, ಈಗ ಮಾರುಕಟ್ಟೆಯಲ್ಲಿ ದೊರೆಯುವ ಕನ್ನಡ-ಇಂಗ್ಲಿಷ್ ನಿಘಂಟುಗಳಿಗಿಂತ ದೊಡ್ಡದೂ, ವಿಶಾಲಾರ್ಥಗಳನ್ನು ನೀಡುವಂತಹುದೂ ಆಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸಮಾನಾರ್ಥವನ್ನು ನೀಡುವ ಮುಖ್ಯೋಲ್ಲೇಖಗಳು ಪರಸ್ಪರ ಹತ್ತಿರದಲ್ಲಿದ್ದಾಗ ಮಾತ್ರ ಅವುಗಳಲ್ಲಿ ಒಂದಕ್ಕೆ ಅರ್ಥಗಳನ್ನು ನೀಡಿ, ಉಳಿದವುಗಳಿಗೆ ಅರ್ಥವನ್ನು ನೀಡಿರುವ ಮುಖ್ಯೋಲ್ಲೇಖವನ್ನು ನೋಡಿ ಎಂಬ ಸೂಚನೆಯನ್ನು ಕೊಡಲಾಗಿದೆ. ಎರಡು ಪುಟಗಳಿಗೂ ಹೆಚ್ಚು ದೂರದಲ್ಲಿದ್ದರೆ ಅರ್ಥಗಳನ್ನು ಆ ಎಲ್ಲಾ ಪದಗಳಿಗೂ ಅವುಗಳ ಮುಂದೆಯೇ ನೀಡಲಾಗಿದೆ. ಈ ಮೂಲಕ ನಿಘಂಟಿನ ಪುಟಗಳನ್ನು ತಿರುಗಿಸಿ ಹುಡುಕುವ ಶ್ರಮವನ್ನು ತಪ್ಪಿಸಿ ಇದನ್ನು ಬಳಕೆದಾರರ ಸ್ನೇಹಿಯನ್ನಾಗಿಸಲಾಗಿದೆ.","brand":"V. Krishna","offers":[{"title":"Default Title","offer_id":44240529948931,"sku":"HB00004327","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_773d3d49-c627-4a01-8b6e-7b2db7ab1bc6.jpg?v=1695627427"},{"product_id":"best-of-dundi-poems-limerics-haiku-h-dundiraj-kannada-book","title":"ಬೆಸ್ಟ್ ಆಫ್ ಡುಂಡಿ","description":"ಆಯ್ದ ಹನಿಗವನ - ಲಿಮರಿಕ್ - ಸೈಕುಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e","brand":"H. Dundiraj","offers":[{"title":"Default Title","offer_id":44514442707203,"sku":"HB00004507","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_2aa833ef-24e6-417e-af40-c98dfe0ef389.jpg?v=1703156317"},{"product_id":"parisara-nighantu-dictionary-dr-t-s-vivekananda-sheshagiri-jodidaar-kannada-book","title":"ಪರಿಸರ ನಿಘಂಟು","description":"...ಒಂದು ಶಾಸ್ತ್ರನಿರ್ಮಾಣಕ್ಕೆ ನೆರವಾಗಬಲ್ಲ ಪದಗಳ ಪ್ರಪಂಚವನ್ನೇ ಪರಿಚಯ ಮಾಡಿಕೊಡುವ 'ಪರಿಸರ ನಿಘಂಟು' ಇದೀಗ ಇಬ್ಬರು ತರುಣ ಮಿತ್ರರ ಸಾಹಸದ ಪರಿಣಾಮವಾಗಿ ಕನ್ನಡದಲ್ಲಿ ಮೊಟ್ಟಮೊದಲಿಗೆ ಸಿದ್ಧವಾಗಿದೆ.\u003cbr\u003e...ಇದು ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಕೇವಲ ಪಾರಿಭಾಷಿಕ ಪದಗಳ ನಿಘಂಟಲ್ಲ; ಒಟ್ಟಾರೆಯಾಗಿ\u003cbr\u003eಪರಿಸರ ವಿಜ್ಞಾನದ 'ಭಾಷಿಕ ನಿಘಂಟು', ಕನ್ನಡದಲ್ಲಿ ಪರಿಸರ ವಿಜ್ಞಾನವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ,\u003cbr\u003eಬರೆಯಬೇಕೆನ್ನುವವರಿಗೆ ಈ ಕುರಿತ ಜಾಗತಿಕ ತಿಳುವಳಿಕೆಯನ್ನು ಹಿಡಿದಿರಿಸಿದ ಭಾಷೆಯನ್ನು ಪರಿಚಯ ಮಾಡಿಕೊಡುವ ನಿಘಂಟು. ಆದ ಕಾರಣವೇ ಈ ನಿಘಂಟುಕಾರರ ಉದ್ದೇಶ, ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ಪದಕ್ಕೆ ಇರಬಹುದಾದ ಅರ್ಥವನ್ನು ಸೂಚಿಸಿ ವಿರಮಿಸುವಷ್ಟಕ್ಕೆ ಸೀಮಿತವಾಗಿಲ್ಲ..\u003cbr\u003e\u003cbr\u003e-ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ\u003cbr\u003e\u003cbr\u003eಡಾ. ಟಿ.ಎಸ್. ವಿವೇಕಾನಂದ..\u003cbr\u003eಪರಿಸರವಾದವನ್ನು ಸೃಜನಾತ್ಮಕವಾಗಿ ಪುನರಾವಲೋಕನಕ್ಕೊಳಪಡಿಸಿದ ಮಹತ್ವದ ಕೃತಿ 'ಭೂಮಿಗೀತೆ',\u003cbr\u003eತೇಜಸ್ವಿಯವರೊಂದಿಗೆ ಕೂಡಿ ಮಾಡಿದ 'ಕಿರಿಯರಿಗಾಗಿ ಪರಿಸರ', ಭಾರತದ ವೃಕ್ಷಗಳನ್ನು ಕುರಿತು ನಿರ್ಮಿಸಿದ 'ಹಸಿರ ಕೊಳಲು', ಹಂಪಿ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯನ್ನು ದೊರಕಿಸಿಕೊಟ್ಟ ಅಧ್ಯಯನದ ಪುಸ್ತಕರೂಪ 'ಪರಿಸರ ಕಥನ' ಇವರ ಮಹತ್ವದ ಕೃತಿಗಳಲ್ಲಿ ಕೆಲವು. ಹಲವಾರು ಬಹುಮಾನಿತ ಕಥೆ, ಪದ್ಯಗಳೊಂದಿಗೆ ಜಿಮ್ ಕಾರ್ಬೆಟ್‌ರ ಇಡೀ ಶಿಕಾರಿ ಕಥೆಗಳ ಕನ್ನಡ ರೂಪಾಂತರ ಇವರ ಹೆಸರಿನಲ್ಲಿದೆ. ಭೂಮಿಗೀತೆ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರ ಮಹತ್ವಾಕಾಂಕ್ಷೆಯ ಪ್ರಯತ್ನ 'ಪರಿಸರ ನಿಘಂಟು' ಭಾರತೀಯ ಭಾಷೆಗಳಲ್ಲಿಯೇ ಮೊದಲ ಪ್ರಯತ್ನ. ಇದು ಕನ್ನಡದ ಪರಿಸರ ಸಾಹಿತ್ಯದಲ್ಲಿಯೇ ಒಂದು ನಿರ್ಣಾಯಕ ಮೈಲುಗಲ್ಲು ಸಹ ಸಂಪಾದಕರಾದ ಶೇಷಗಿರಿ ಜೋಡಿದಾ‌ರ್ ಈ ಪ್ರಯತ್ನದ ಜೊತೆಗಾರ.\u003cbr\u003e\u003cbr\u003e-ಪ್ರೊ. ಕಿ.ರಂ. ನಾಗರಾಜ,","brand":"Dr. T. S. Vivekananda, Sheshagiri Jodidaar","offers":[{"title":"Default Title","offer_id":44711943635203,"sku":"HB00004632","price":625.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/c9087ccce24fc60a422c742bcb13176a.jpg?v=1707988669"},{"product_id":"idu-kannadadde-vyakarana-linguistic-dr-d-n-shankara-batt-kannada-book","title":"ಇದು ಕನ್ನಡದ್ದೇ ವ್ಯಾಕರಣ","description":"\u003cp\u003eಇದು ಕನ್ನಡದ್ದೇ ವ್ಯಾಕರಣ\u003c\/p\u003e\n\u003cp\u003eಸುಮಾರು ಇಪ್ಪತ್ತಯ್ದು ವರ್ಶ್ಗಳಷ್ಟು ಹಿಂದೆ, ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕವನ್ನು ನಾನು ಬರೆದುದ್ದು, ಆ ಸಮಯದಲ್ಲಿ ಬಳಕೆಯಲ್ಲಿದ್ದ ಕನ್ನಡ ವ್ಯಾಕರಣಗಳೆಲ್ಲ ಸಂಸ್ಕುತ ಇಲ್ಲವೇ ಇಂಗ್ಲಿಶ್ ನಂತಹ ಬೇರೆ ನುಡಿಗಳ ವ್ಯಾಕರಣವನ್ನು ಕನ್ನಡಕ್ಕೆ ಅಳವಡಿಸುವ ಪ್ರಯತ್ನಗಳಾಗಿದ್ದುವಲ್ಲದೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಬರೆಯುವ ಪ್ರಯತ್ನಗಳಾಗಿರಲಿಲ್ಲ ಎಂಬುದನ್ನು ಆ ಪುಸ್ತಕದಲ್ಲಿ ಹಲವಾರು ಎತ್ತುಗೆಗೆಳ ಮೂಲಕ ತೋರಿಸಿಕೊಟ್ಟಿದ್ದೆ. ಇದಲ್ಲದೆ, ಆಮೇಲೆ ಕನ್ನಡದ್ದೇ ಆದ ಒಂದು ವ್ಯಾಕರಣವನ್ನು ಕನ್ನಡ ಬರಹದ ಸೊಲ್ಲರಿಮೆ ಎಂಬ ಹೆಸರಿನ ಒಟ್ಟು ಏಳು ಹೊತ್ತಗೆಗಳಲ್ಲಿ ಬರೆದು ಪ್ರಕಟಿಸಿದ್ದೆ.\u003c\/p\u003e\n\u003cp\u003eಇದೀಗ ಆ ಏಳು ಹೊತ್ತಗೆಗಳನ್ನು ಒಟ್ಟು ಸೇರಿಸಿ ಒಂದೇ ಹೊತ್ತಗೆಯಲ್ಲಿ ಕೊಡುತ್ತಿದ್ದೇನೆ. ಹೀಗೆ ಮಾಡುವಾಗ, ಅದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದೇನೆ. ಎತ್ತುಗೆಗೆ, ಸೊಲ್ಲರಿಮೆ ಎಂಬ ಪದದ ಬದಲು ಕನ್ನಡಿಗರಿಗೆ ಹೆಚ್ಚು ಪರಿಚಿತವಾಗಿರುವ ವ್ಯಾಕರಣ ಎಂಬ ಪದವನ್ನು ಮತ್ತು ಸೊಲ್ಲು ಎಂಬ ಪದದ ಬದಲು ವಾಕ್ಯ ಎಂಬ ಪದವನ್ನು ಬಳಸಿದ್ದೇನೆ. ಇದಲ್ಲದೆ ಬೇರೆಯೂ ಕೆಲವು ಮಾರ್ಪಾಡುಗಳನ್ನು ಮಾಡಿದ್ದೇನೆ.\u003c\/p\u003e\n\u003cp\u003eಈ ಪುಸ್ತಕದಲ್ಲಿ ಕನ್ನಡದ್ದೇ ಆದ ವ್ಯಾಕರಣವನ್ನು ಒಟ್ಟು ಹತ್ತೊಂಬತ್ತು ಪಸುಗೆಗಳಲ್ಲಿ ವಿವರಿಸಲಾಗಿದೆ. ಕನ್ನಡದಲ್ಲಿ ಪದಗಳನ್ನು ಮತ್ತು ಪದರೂಪಗಳನ್ನು ಹೇಗೆ ಕಟ್ಟಲಾಗುತ್ತದೆ, ಮತ್ತು ವಾಕ್ಯಗಳನ್ನು ಕಟ್ಟುವಲ್ಲಿ ಹೆಸರುಪದ (ನಾಮಪದ) ಮತ್ತು ಎಸಕಪದ (ಕ್ರಿಯಾಪದ)ಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಇದಲ್ಲದೆ, ಕನ್ನಡದಲ್ಲಿ ಬಳಕೆಯಾಗುವ ಹಲವು ಬಗೆಯ ವಾಕ್ಯಗಳ ನಡುವಿನ ಸಂಬಂದ ಎಂತಹದು, ಒಂದು ವಾಕ್ಯದಲ್ಲಿ ಇನ್ನೊಂದು ವಾಕ್ಯವನ್ನು ಇರಿಸುವ ಬಗೆ ಹೇಗೆ, ಮತ್ತು ಎರಡು ಇಲ್ಲವೇ ಹೆಚ್ಚು ವಾಕ್ಯಗಳನ್ನು ಜೋಡಿಸುವ ಬಗೆ ಹೇಗೆ ಎಂಬುದನ್ನೂ ಇದರಲ್ಲಿ ವಿವರಿಸಲಾಗಿದೆ.\u003c\/p\u003e\n\u003cp\u003eಇದಲ್ಲದೆ, ಕನ್ನಡದ ವಾಕ್ಯಗಳಲ್ಲಿ ಆಡುಪದ ಮತ್ತು ತೋರುಪದಗಳನ್ನು (ಸತ್ವನಾಮಗಳನ್ನು ಹೇಗೆ ಬಳಸಲಾಗುತ್ತದೆ, ಮತ್ತು ಕನ್ನಡದಲ್ಲಿ ಬಳಕೆಯಾಗುವ ಎಣಿಕೆಪದಗಳ ಒಳರಚನೆ ಎಂತಹದು ಎಂಬುದನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಈ ಎಲ್ಲಾ ಕಡೆಗಳಲ್ಲೂ ಕನ್ನಡದ್ದೇ ಆದ ವ್ಯಾಕರಣ ಎಂತಹದು ಎಂಬುದನ್ನು ಈ ಪುಸ್ತಕ ತೋರಿಸಿಕೊಡುವುದರಿಂದ ಇದಕ್ಕೆ ಇದು ಕನ್ನಡದ್ದೇ ವ್ಯಾಕರಣ ಎಂಬ ಹೆಸರನ್ನು ಕೊಡಲಾಗಿದೆ.\u003c\/p\u003e\n\u003cp\u003eಕನ್ನಡ ಬರಹ ಮೇಲ್ವರಲ್ಲದವರದಾಗಿ ಮಾತ್ರವೇ ಉಳಿಯದೆ ಎಲ್ಲರದಾಗಬೇಕು, ಮತ್ತು ಹಾಗಾಗುವಂತೆ ಅದರಲ್ಲಿ ಕೆಲವು ಮಾರಾಡುಗಳನ್ನು ಮಾಡಿಕೊಳ್ಳಬೇಕು ಎಂಬುದು ನನ್ನ ನಿಲುವು. ಇದಕ್ಕೆ ನೆರವಾಗುವಂತೆ, ಕನ್ನಡ ಬರಹದಿಂದ ಕನ್ನಡಕ್ಕೆ ಬೇಕಿಲ್ಲದ, ಮತ್ತು ಸಂಸ್ಕುತ ಪದಗಳನ್ನು ಸಂಸ್ಕೃುತದಲ್ಲಿರುವ ಹಾಗೆಯೇ ಬರೆಯಲು ಮಾತ್ರವೇ ಬೇಕಾಗುವ, ಹಲವು ಬರಿಗೆ(ಅಕ್ಷರ)ಗಳನ್ನು ಬಳಸದಿರಬೇಕು ಎಂಬುದೂ ನನ್ನ ನಿಲುವು. 'ಹೊಸಬರಹ'ವೆಂದು ಕರೆದಿರುವ ಈ ಬಗೆಯ ಬರಹವನ್ನು ನಾನು ನನ್ನ ಇತ್ತೀಚೆಗಿನ ಬೇರೆ ಹೊತ್ತಗೆಗಳ ಹಾಗೆ ಈ ಹೊತ್ತಗೆಯಲ್ಲೂ ಬಳಸಿದ್ದೇನೆ.\u003cbr\u003e\u003c\/p\u003e","brand":"Dr. D. N. Shankara Batt","offers":[{"title":"Default Title","offer_id":47407121531139,"sku":"HB00005456","price":950.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/IduKannadaddeVyakarana_e3cc473b-58ef-4013-9981-9dd41451102d.jpg?v=1762602419"},{"product_id":"thatsma-thatbhava-kosha-dictionary-m-d-nagaraja-rao-kannada-book","title":"ತತ್ಸಮ - ತದ್ಭವ ಕೋಶ","description":"\u003cp\u003e\u003cstrong\u003e“ತತ್ಸಮ – ತದ್ಭವ ಕೋಶ”\u003c\/strong\u003e ಒಂದು ಸಮಗ್ರ ಕನ್ನಡ ನಿಘಂಟು, ಇದರಲ್ಲಿ ತತ್ಸಮ ಮತ್ತು ತದ್ಭವ ಪದಗಳ ಅರ್ಥಗಳು, ಮೂಲಗಳು ಮತ್ತು ಬಳಕೆ ವಿವರಿಸಲಾಗಿದೆ.\u003c\/p\u003e\n\u003cp\u003eಈ ಕೋಶವು ಕನ್ನಡ ಭಾಷೆಯ ಶಬ್ದಸಂಪತ್ತಿನ ಅಧ್ಯಯನಕ್ಕೆ, ವ್ಯಾಕರಣ ಹಾಗೂ ಸಾಹಿತ್ಯ ಸಂಶೋಧನೆಗೆ ಸಹಾಯ ಮಾಡುವಂತೆ ರೂಪುಗೊಂಡಿದೆ. ತತ್ಸಮ ಪದಗಳು ಸಂಸ್ಕೃತ ಮೂಲದಿಂದ ನೇರವಾಗಿ ಬಂದಿರುವುದು, ಮತ್ತು ತದ್ಭವ ಪದಗಳು ಕನ್ನಡದಲ್ಲಿ ಸ್ವಾಭಾವಿಕವಾಗಿ ರೂಪುಗೊಂಡಿರುವುದು ಈ ನಿಘಂಟಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.\u003c\/p\u003e\n\u003cp\u003eಸರಳ, ಸಧಾರಣೀಯ ಭಾಷೆಯಲ್ಲಿ ಮತ್ತು ಶ್ರೇಣೀಬದ್ಧ ಶೈಲಿಯಲ್ಲಿ ರಚಿಸಲ್ಪಟ್ಟಿರುವ ಈ ಕೋಶವು ವಿದ್ಯಾರ್ಥಿಗಳು, ಶಿಕ್ಷಕರು, ಭಾಷಾಸಾಹಿತ್ಯ ಪ್ರೇಮಿಗಳು ಹಾಗೂ ಸಂಶೋಧಕರು ಉಪಯುಕ್ತವಾಗಿ ಬಳಸಬಹುದಾದ ಸಂಪತ್ತು. ಕನ್ನಡ ಪದಗಳ ಎtymology ಮತ್ತು ಅರ್ಥಾನುಸಾರ ಬಳಕೆಯನ್ನು ಅರಿಯಲು ಆಸಕ್ತರಿಗೆ ಇದು ಅಮೂಲ್ಯ ಸಂಪನ್ಮೂಲವಾಗಿದೆ.\u003c\/p\u003e","brand":"M. V. Nagaraja Rao","offers":[{"title":"Default Title","offer_id":47780184555779,"sku":"HB00006315","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Thatsama-ThatbhavaKosha.jpg?v=1771838612"},{"product_id":"da-ra-bendre-kavyada-nudigattu-kosha-dictionary-of-idioms-dr-b-b-rajapurohita-kannada-book","title":"ದ.ರಾ.ಬೇಂದ್ರೆ ಕಾವ್ಯದ ನುಡಿಕಟ್ಟು ಕೋಶ","description":"\u003cp\u003e\u003cspan data-subtree=\"aimfl,mfl\"\u003eಬಿ.ಬಿ. ರಾಜಪುರೋಹಿತರು ರಚಿಸಿರುವ\u003cspan\u003e \u003c\/span\u003e\u003c\/span\u003e\u003cstrong class=\"Yjhzub\" data-sfc-root=\"c\" data-sfc-cb=\"\"\u003e\"\u003cspan data-sfc-root=\"c\" data-wiz-uids=\"tyrDed_h\" data-sfc-cb=\"\"\u003eಬೇಂದ್ರೆ ಕಾವ್ಯದ ನುಡಿಗಟ್ಟು ಕೋಶ\u003c\/span\u003e\"\u003c\/strong\u003e\u003cspan\u003e ಪುಸ್ತಕವು ದ.ರಾ. ಬೇಂದ್ರೆಯವರ ಕಾವ್ಯದಲ್ಲಿ ಬಳಕೆಯಾದ ವಿಶಿಷ್ಟವಾದ ನುಡಿಗಟ್ಟುಗಳು, ಶೈಲಿ ಮತ್ತು ಭಾಷಾ ಪ್ರಯೋಗಗಳನ್ನು ವಿಶ್ಲೇಷಿಸುವ ಪ್ರಮುಖ ಕೃತಿಯಾಗಿದೆ.\u003c\/span\u003e\u003c\/p\u003e","brand":"Dr. B. B. Rajapurohita","offers":[{"title":"Default Title","offer_id":48042975232259,"sku":"HB00007068","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BendreKavyadaNudighattuKosha.png?v=1777630875"},{"product_id":"da-ra-bendre-samagra-kavya-nighantu-dictionary-of-idioms-dr-b-b-rahapurohita-kannada-book","title":"ದ.ರಾ.ಬೇಂದ್ರೆ ಸಮಗ್ರ ಕಾವ್ಯ ನಿಘಂಟು","description":"\u003cp\u003eವರಕವಿ ದ.ರಾ. ಬೇಂದ್ರೆಯವರ ಕಾವ್ಯವು ಅದರ ಪದಬಳಕೆ ಮತ್ತು ಅರ್ಥವ್ಯಾಪ್ತಿಯಿಂದಾಗಿ ಅತ್ಯಂತ ಸಮೃದ್ಧವಾದುದು. ಬೇಂದ್ರೆಯವರ ಸಮಗ್ರ ಕಾವ್ಯದಲ್ಲಿ ಬರುವ ಕಠಿಣ ಪದಗಳು, ಪ್ರಾದೇಶಿಕ ನುಡಿಗಟ್ಟುಗಳು ಮತ್ತು ಪಾರಿಭಾಷಿಕ ಶಬ್ದಗಳನ್ನು ಅರ್ಥಸಹಿತ ದಾಖಲಿಸಿರುವ ಈ \"ನಿಘಂಟು\" ಸಂಶೋಧಕರಿಗೆ ಹಾಗೂ ಸಾಮಾನ್ಯ ಓದುಗರಿಗೆ ಒಂದು ದಿಕ್ಸೂಚಿಯಂತಿದೆ. ಇದನ್ನು \u003cb data-path-to-node=\"2\" data-index-in-node=\"276\"\u003eಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್\u003c\/b\u003e ಅತ್ಯಂತ ಕಾಳಜಿಯಿಂದ ಪ್ರಕಟಿಸಿದೆ.\u003c\/p\u003e","brand":"Dr. B. B. Rajapurohita","offers":[{"title":"Default Title","offer_id":48043042242819,"sku":"HB00007069","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Da.Ra.BendreSamagraKavyaNighantu.webp?v=1777631705"},{"product_id":"kumaravyasabharata-dictionary-v-krishna-kannada-book","title":"ಕುಮಾರವ್ಯಾಸಭಾತರ ಪದಪ್ರಯೋಗಕೋಶ","description":"\u003cp data-path-to-node=\"9\"\u003e\u003cb data-path-to-node=\"3\" data-index-in-node=\"0\"\u003eಕುಮಾರವ್ಯಾಸಭಾರತ ಪದಪ್ರಯೋಗಕೋಶ\u003c\/b\u003eವು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಅಮೂಲ್ಯವಾದ ಭಾಷಾಶಾಸ್ತ್ರೀಯ (Linguistic) ಆಕರ ಗ್ರಂಥವಾಗಿದೆ. ಮಹಾಕವಿ ಕುಮಾರವ್ಯಾಸನ (ಗದುಗಿನ ನಾರಣಪ್ಪ) ಕಾವ್ಯದ ಭಾಷಾ ಸಂಪತ್ತನ್ನು ಅರಿಯಲು ಇದು ದಾರಿದೀಪವಾಗಿದೆ.\u003c\/p\u003e","brand":"V. Krishna","offers":[{"title":"Default Title","offer_id":48364803064067,"sku":"HB00007221","price":2500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KumaravyasabharataPadaprayogakosha.jpg?v=1781158525"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/2ce9c7caa8195e0c847e8899cdc593f5.png?v=1638532637","url":"https:\/\/harivubooks.com\/collections\/kannada-dictionary.oembed?page=2","provider":"Harivu Books","version":"1.0","type":"link"}