{"title":"History Books in Kannada","description":"","products":[{"product_id":"shravanabelagolada-shasanagalu-ondu-samskrutika-adhyayana","title":"ಶ್ರವಣಬೆಳಗೊಳದ ಶಾಸನಗಳು ಒಂದು ಸಾಂಸ್ಕೃತಿಕ ಅಧ್ಯಯನ","description":"\u003cp\u003eಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ, ಒಂದು ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಶ್ರವಣಬೆಳಗೊಳದ ಅತ್ಯಮೂಲ್ಯವಾದ ಶಾಸನಗಳ ಸಾಂಸ್ಕೃತಿಕ ಅಧ್ಯಯನವನ್ನು ಪ್ರಸ್ತುತ ಗ್ರಂಥ \"ಶ್ರವಣಬೆಳಗೊಳದ ಶಾಸನಗಳು: ಒಂದು ಸಾಂಸ್ಕೃತಿಕ ಅಧ್ಯಯನ'’. ಶಾಸನಗಳು ಎಂದೂ ಸಾಂಸ್ಕೃತಿಕ ವಾಹಕಗಳಾಗಿ ಕೆಲಸ ಮಾಡಿವೆ. ಆದರೆ ಅದಕ್ಕಿಂತ ಅವುಗಳ ಮುಖ್ಯ ಉದ್ದೇಶ ಮಾಹಿತಿಯನ್ನು ಅಧಿಕೃತವಾಗಿ ನೀಡುವುದು. ಆ ಮಾಹಿತಿ ಸಂಬಂಧಪಟ್ಟ ಕಾಲದ ನಿಖರ ಪರಿಸ್ಥಿತಿಯನ್ನು ತಿಳಿಸುವುದಕ್ಕೆ ಸಹಕಾರಿಯಾಗಿವೆ. ಶಾಸನಗಳು ಮುಖ್ಯವಾಗಿ ಇತಿಹಾಸವನ್ನು ರಚಿಸಿಕೊಳ್ಳುವುದಕ್ಕೆ, ಪುನರ್ ರಚಿಸಿಕೊಳ್ಳುವುದಕ್ಕೆ ತುಂಬಾ ಸಹಕಾರಿಯಾಗಿವೆ. ಭಾರತೀಯ ದೃಷ್ಟಿಯಲ್ಲಿ ಶಾಸನಗಳು, ದೇವಸ್ಥಾನಗಳು...ಇತಿಹಾಸ ನಿರೂಪಿಸುವ ಆಕರಗಳಾಗಿ ಉಳಿದಿವೆ.\u003c\/p\u003e","brand":"Dr. S. Vimala","offers":[{"title":"Default Title","offer_id":42020603527427,"sku":"HB00001884","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_32ef006a-0f59-46c1-8d52-dcb4696d4476.jpg?v=1636356193"},{"product_id":"pracheena-bharathavemba-adbhuta","title":"ಪ್ರಾಚೀನ ಭಾರತವೆಂಬ ಅದ್ಭುತ","description":"\u003cp\u003e\u003c\/p\u003e","brand":"D. R. Mirji","offers":[{"title":"Default Title","offer_id":42020604215555,"sku":"HB00001874","price":950.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_3d48e711-9597-4705-861a-0f7514a2234e.jpg?v=1636356209"},{"product_id":"chenna-bhaira-devi","title":"ಚೆನ್ನಭೈರಾದೇವಿ","description":"\u003cp\u003e\u003cspan id=\"freeText5976820997433506772\" data-mce-fragment=\"1\"\u003eಲೇಖಕ ಡಾ. ಗಜಾನನ ಶರ್ಮ ಅವರು ಬರೆದ ಐತಿಹಾಸಿಕ ಕಾದಂಬರಿ \"ಚೆನ್ನಭೈರಾದೇವಿ\". ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿಯ ಅಕಳಂಕ ಚರಿತೆ ಈ ಕೃತಿ. ಸಾಹಿತಿ ಜೋಗಿಯವರು ಈ ಕೃತಿಗೆ ಬೆನ್ನುಡಿ ಬರೆದು,\"ಚೆನ್ನಭೈರಾದೇವಿ\"ಯ ಬದುಕಿನ ಅಪರೂಪದ ಘಟನೆಗಳನ್ನು ತಂದು ಕಾದಂಬರಿಕಾರರು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ, ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇತ್ತಿಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.\u003c\/span\u003e\u003cspan data-mce-fragment=\"1\"\u003e \u003cbr\u003e\u003c\/span\u003e\u003c\/p\u003e","brand":"Dr. Gajanana Sharma","offers":[{"title":"Default Title","offer_id":42020613685507,"sku":"HB00001755","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_d09c1a7c-6511-4298-b5a5-e58ed9550ac0.jpg?v=1636356430"},{"product_id":"jaati-bantu-hege","title":"ಜಾತಿ ಬಂತು ಹೇಗೆ?","description":"\u003cp\u003e\u003c\/p\u003e","brand":"G. N. Nagraj","offers":[{"title":"Default Title","offer_id":42020640063747,"sku":"HB00001420","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3870.jpg?v=1636357029"},{"product_id":"nammadidu-itihaasa","title":"ನಮ್ಮದಿದು ಇತಿಹಾಸ","description":"\u003cp\u003e\u003c\/p\u003e","brand":"Dr. H. S. Gopal Rao","offers":[{"title":"Default Title","offer_id":42020641341699,"sku":"HB00001401","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3948.jpg?v=1636357058"},{"product_id":"sadhakana-hejjegalu","title":"ಸಾಧಕನ ಹೆಜ್ಜೆಗಳು","description":"\u003cp\u003eಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಬದುಕು-ಸಾಧನೆ.\u003c\/p\u003e","brand":"Dr. T R Anantharamu","offers":[{"title":"Default Title","offer_id":42020647665923,"sku":"HB00001320","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4115.jpg?v=1636357187"},{"product_id":"navabharata-shilpi-sir-m-v","title":"ನವಭಾರತ ಶಿಲ್ಪಿ ಸರ್ ಎಂ. ವಿಶ್ವೇಶ್ವರಯ್ಯ","description":"\u003cp\u003e\u003c\/p\u003e","brand":"Dr. M. Indira Heggade","offers":[{"title":"Default Title","offer_id":42020656742659,"sku":"HB00001274","price":45.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3951.jpg?v=1636357317"},{"product_id":"mahatashtrada-moola","title":"ಮಹಾರಾಷ್ಟ್ರದ ಮೂಲ","description":"\u003cp\u003e\u003cspan style=\"font-weight: 400;\"\u003eದೇಶೀಯ ಹಾಗೂ ವಿದೇಶೀಯ ಇತಿಹಾಸದ ಸಂಶೋಧಕರ ಕಣ್ಣಲ್ಲಿ ಇಂಗುಹಚ್ಚಿ ತನ್ನ ನೆಲೆಯನ್ನು ನಿಲುಕಗೊಡದ ‘ವರ‍್ಹಾಟ-ಮರಹಟ್ಟದ ಮೂಲ’ವನ್ನು ಅನ್ವೇಷಿಸಿ, ಇಗೋ ಇಲ್ಲಿದೆ ‘ಮಹಾರಾಷ್ಟ್ರದ ಮೂಲ’ ಎಂದು ಖಚಿತವಾಗಿ ಹೇಳಿದ ಶ್ರೇಯಸ್ಸು ಡಾ. ಶಂಬಾ ಜೋಶಿಯವರದು.\u003c\/span\u003e\u003c\/p\u003e\n\n\u003cp\u003e\u003cspan style=\"font-weight: 400;\"\u003eಇಂದಿನ ಮಹಾರಾಷ್ಟ್ರ ಅಂದು ಕರ್ನಾಟಕ, ‘ಗೋದಾವರಿವರಂ ಇರ್ದ… ಕಂನಾಡು ಕಣ್ಮರೆಯಾಗುತ್ತದೆ ವರ‍್ಹಾಟ ಮಹಾರಾಷ್ಟ್ರದ ಮೂಲ’ ಗೋಚರಿಸುತ್ತದೆ.ಕನ್ನಡ ತಾಯಿಯ ಮೊಲೆಹಾಲಿನಿಂದ ಬೆಳೆದ ‘ಮರಹಟ್ಟಿ ಮರ‍್ಹಾಟಿ’ ಸಾಕು ಮಗು ಕೃಷ್ಣ ವರೆಗೂ ವ್ಯಾಪಿಸಿದ ಸಾಂಸ್ಕೃತಿಕ ಸ್ಥಿತ್ಯಂತರದ ಚಿತ್ರಣ ಪ್ರಸ್ತುತ ಕೃತಿಯ ಸಾರ.\u003c\/span\u003e\u003c\/p\u003e","brand":"Dr. Sham. Ba. Jois","offers":[{"title":"Default Title","offer_id":42020659462403,"sku":"HB00001240","price":70.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4011.jpg?v=1636357383"},{"product_id":"kannadada-nele","title":"ಕನ್ನಡದ ನೆಲೆ","description":"\u003cp\u003e\u003cspan style=\"font-weight: 400;\"\u003eಸತ್ವಯುತ ನುಡಿಗಟ್ಟು ಸಮೃದ್ಧ ಸಾಹಿತ್ಯ ಹಾಗೂ ಉಜ್ವಲ ಪರಂಪರೆಯ ವಾರಸುದಾರನಾಗಿದ್ದರೂ ಕನ್ನಡಿಗ ತನ್ನ ನಾಡು-ನುಡಿಯ ಇತಿಹಾಸದ ಅರಿವು-ಅಭಿಮಾನ ಶೂನ್ಯತೆಯಿಂದಾಗಿ ನೆರೆಯವರ ಕಡು ಪ್ರಾಂತೀಯ ಧೋರಣೆಯ ನೆಪದಲ್ಲಿ ದಿನದಿಂದ ದಿನಕ್ಕೆ ಕುಬ್ಜಗೊಳ್ಳುತ್ತಿರುವ ಪರಿ ತೀರಾ ವಿಷಾದನೀಯ. ಸ್ಥಳೀಯ ಒತ್ತಡಗಳೇ ಅಲ್ಲದೆ, ಜಾಗತೀಕರಣದ ಸುನಾಮಿಯಲ್ಲಿ ಎಚ್ಚರ ತಪ್ಪಿ, ಅರವಳಿಕೆಗೆ ಒಳಪಟ್ಟವನಂತೆ ವರ್ತಿಸುತ್ತಾ, ನೂರಾರು ವರ್ಷಗಳಿಂದ ಅನುಭವಿಸಿರುವ ಹಿನ್ನಡೆಯನ್ನು ತಡೆಯದಿದ್ದರೆ, ಜಾರು ದಾರಿಯಲ್ಲಿ ಸಾಗುತ್ತಾ ಸಾಂಸ್ಕೃತಿಕ ಅನನ್ಯತೆಗೆ ಎರವಾಗುವ ಅಪಾಯ ಇಲ್ಲದಿಲ್ಲ.\u003c\/span\u003e\u003c\/p\u003e\n\u003cp\u003e\u003cspan style=\"font-weight: 400;\"\u003eಇಂತಹ ಸಂಧಿಕಾಲದಲ್ಲಿ ಈ ನಾಡವರಿಗೆ ಆವರಿಸಿರುವ ಅಲ್ಪತೃಪ್ತಿ, ಆಲಸ್ಯ, ಆಪ್ತರಲ್ಲಿ ಅಸೂಯೆಯಂತಹ ಸಣ್ಣತನದ ಶಾಪದಿಂದ ಹೊರಬಂದು ವೈಯಕ್ತಿಕ ಹಿರಿಮೆ ಜೊತೆಜೊತೆಗೆ ಭಾಷೆ-ಸಂಸ್ಕೃತಿಯ ಬಳಕೆ-ಉಳಿಕೆಯ ಬಗೆಗೆ ಆದ್ಯತೆ ನೀಡಬೇಕಾಗಿರುವ ಅಗತ್ಯವನ್ನು ಎತ್ತಿ ಹೇಳಬೇಕಾಗಿರುವುದು ಪ್ರಜ್ಞಾವಂತರೆಲ್ಲರ ಕರ್ತವ್ಯವಾಗಿದೆ.\u003c\/span\u003e\u003c\/p\u003e\n\u003cp\u003e\u003cspan style=\"font-weight: 400;\"\u003eಈ ದಿಕ್ಕಿನಲ್ಲಿ ಕನ್ನಡ ನುಡಿ ಮತ್ತು ನಾಡವರ ಸಂಚಲಿತ ಸಾಂಸ್ಕೃತಿಕ ಇತಿಹಾಸದ ಸಮರ್ಥ ಚಿತ್ರಣ ನೀಡಿ ಅಭಿಮಾನವನ್ನು ಉದ್ದೀಪಿಸಿದ ಮಹನೀಯರಲ್ಲಿ ಡಾ. ಶಂ. ಬಾ. ಜೋಶಿ ಪ್ರಮುಖರು. ಇವರ ಚಿಂತನ ಮಂಥನದಲ್ಲಿ ಮೂಡಿ ಬಂದ ಅಪರೂಪದ ಕೃತಿ ‘ಕನ್ನಡದ ನೆಲೆ’.\u003c\/span\u003e\u003c\/p\u003e","brand":"Dr. Sham. Ba. Jois","offers":[{"title":"Default Title","offer_id":42020659527939,"sku":"HB00001239","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannadada-nele_0001.jpg?v=1636357385"},{"product_id":"karnatada-veera-kshatriyaru","title":"ಕರ್ನಾಟಕದ ವೀರಕ್ಷತ್ರಿಯರು ಅಥವಾ ಹಟ್ಟಿಕಾರರು : ದನಗಾರರು","description":"\u003cp\u003eಕನ್ನಡಿಗರ ಮೂಲ ಜನಾಂಗದ ವೇದಕಾಲದ ಇತಿಹಾಸ ಏನು? ಕನ್ನಡಿಗರು ತಾವು ಏನಿದ್ದೆವು, ಏನಾಗಿರುವೆವು, ಮುಂದೆ ಮಾಡಬೇಕಾಗಿರುವುದು ಏನು ಎನ್ನುವ ಸಂಗತಿಗಳ ಸುತ್ತ ಕಣ್ತೆರೆಸುವ ಪುಸ್ತಕ.\u003c\/p\u003e","brand":"Dr. Sham. Ba. Jois","offers":[{"title":"1st Edition","offer_id":48274869158147,"sku":"HB00001238","price":140.0,"currency_code":"INR","in_stock":true},{"title":"2nd Edition","offer_id":48274870731011,"sku":"HB00007145","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/29.jpg?v=1636357387"},{"product_id":"kannada-nadina-charitre-2","title":"ಕನ್ನಡ ನಾಡಿನ ಚರಿತ್ರೆ ಭಾಗ-೨","description":"\u003cp\u003e\u003c\/p\u003e","brand":"Dr. S. C. Nandimatha","offers":[{"title":"Default Title","offer_id":42020661920003,"sku":"HB00001232","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3830.jpg?v=1636357399"},{"product_id":"kanmareyada-kannada","title":"ಕಣ್ಮರೆಯಾದ ಕನ್ನಡ","description":"\u003cp\u003eಇತಿಹಾಸದ ಪುಟಗಳಲ್ಲಿ ನೋಡಿದರೆ ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡನಾಡಿನ ಹರವು ಇತ್ತು. ಇದಕ್ಕೆ ಸಂಬಂಧಿಸಿದ ಹಲವು ಪೂರಕವಾದ ವಿಷಯಗಳು ಈ ಕೃತಿಯಲ್ಲಿವೆ.\u003c\/p\u003e","brand":"Dr. Sham. Ba. Jois","offers":[{"title":"Default Title","offer_id":42020663656707,"sku":"HB00001225","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3768.jpg?v=1636357417"},{"product_id":"hasta-pratigalu-kannadigara-baduku","title":"ಹಸ್ತಪ್ರತಿಗಳು - ಕನ್ನಡಿಗರ ಬದುಕು","description":"\u003cp\u003eಹಸ್ತಪ್ರತಿಗಳಲ್ಲಿನ ಸಾಂಸ್ಕೃತಿಕ ಚಹರೆಯನ್ನು ಗುರುತಿಸುವ ಪ್ರಯತ್ನ, ಅಂದರೆ ಒಂದು ಹಸ್ತಪ್ರತಿಯ ಸಿದ್ಧತೆಯಲ್ಲಿ ಒಂದು ಜನಸಮುದಾಯದ ಕಲಾಬದುಕು, ಅದರಲ್ಲಿಯ ಜ್ಞಾನವನ್ನು ಪ್ರಸಾರಿಸುವ ಲಿಪಿಕಾರನ ವೃತ್ತಿಬದುಕು, ಪೋಷಕರ ಸಂರಕ್ಷಣಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.\u003c\/p\u003e","brand":"Dr. K. Ravindranath","offers":[{"title":"Default Title","offer_id":42020666179843,"sku":"HB00001205","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4140.jpg?v=1636357471"},{"product_id":"prabhutva-mattu-janate","title":"ಪ್ರಭುತ್ವ ಮತ್ತು ಜನತೆ - ರಾಷ್ಟ್ರಕೂಟರಿಂದ ಹೊಯ್ಸಳರವರೆಗೆ","description":"\u003cp\u003eಮಧ್ಯಕಾಲೀನ ಯುಗವಾದ ರಾಷ್ಟ್ರಕೂಟರು ಮತ್ತು ಹೊಯ್ಸಳರ ಅವಧಿಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಮೇಲಾಟದಲ್ಲಿ ಸಾಮಾನ್ಯ ಜನರ ಬದುಕು ಹೇಗಿತ್ತು ಅನ್ನುವುದರ ಕುರಿತ ಅಧ್ಯಯನವಾಗಿದೆ.\u003c\/p\u003e","brand":"Dr. K. Mohankrishna Rai","offers":[{"title":"Default Title","offer_id":42020666605827,"sku":"HB00001203","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3960.jpg?v=1636357474"},{"product_id":"halagannada-bhashe-bhasha-vikasa","title":"ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ","description":"\u003cp\u003e2200 ಹಳಗನ್ನಡದ ಶಾಸನಗಳನ್ನು ಆಕರವನ್ನಾಗಿಟ್ಟುಕೊಂಡು 18 ವಿದ್ವಾಂಸರು 32 ಪ್ರಬಂಧಗಳಲ್ಲಿ ಬರೆದ ವಿಷಯಗಳನ್ನು ಖ್ಯಾತ ಇತಿಹಾಸ ತಜ್ಞ ಷ.ಶೆಟ್ಟರ್ ಅವರು \"ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ\" ಹೆಸರಿನ ಈ ಅದ್ಭುತ ಹೊತ್ತಗೆಯಲ್ಲಿ ಸಂಪಾದಿಸಿದ್ದಾರೆ. ಶತಾಯುಷಿಗಳೂ, ಜ್ಞಾನವೃದ್ಧರೂ, ಜೀವನದ ಬಹುಭಾಗವನ್ನು ಒಂದೊಂದು ಕ್ಷೇತ್ರಕ್ಕೆ ಮೀಸಲಿಟ್ಟ ವಿದ್ವಾಂಸರು ಈ ಕೃತಿಯ ಕೆಲಸದಲ್ಲಿ ಪಾಲ್ಗೊಂಡು ಹಳಗನ್ನಡ ಶಾಸನಗಳ ಬಗ್ಗೆ ಇಂದಿಗೂ ಚರ್ಚಿಸದ ಅನೇಕ ಹೊಸ ವಿಚಾರಗಳ ಬಗ್ಗೆ ಗಮನ ಹರಿಯುವಂತೆ ಮಾಡಿರುವುದು ಈ ಕೃತಿಯ ಹೆಗ್ಗಳಿಕೆ.\u003c\/p\u003e","brand":"S. Shettar","offers":[{"title":"Default Title","offer_id":42020669915395,"sku":"HB00001173","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4142.jpg?v=1636357541"},{"product_id":"karnatakavonde","title":"ಕರ್ನಾಟಕವೊಂದೇ...ಒಡಕು ತರಲಿದೆ ಕೆಡುಕು.","description":"\u003cp\u003eನಮ್ಮ ಹಿರಿಯರ ದಶಕಗಳ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಕನ್ನಡ ನಾಡು ಒಂದಾಯಿತು. ಸರಿ ಸುಮಾರು 750 ವರ್ಷಗಳ ಕಾಲ ಬೇರೆ ಬೇರೆ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಮತ್ತೆ ಒಂದಾದದ್ದು ಕರ್ನಾಟಕದ ಏಕೀಕರಣವಾದ ಮೇಲೆ. ಇಂತಹ ಕನ್ನಡ ನಾಡನ್ನು ಒಡೆಯಬೇಕು ಅನ್ನುವ ದನಿಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿವೆ. ಎಲ್ಲ ಸಮಸ್ಯೆಗಳಿಗೂ ರಾಜ್ಯ ಒಡೆಯುವುದೇ ಪರಿಹಾರ ಅನ್ನುವ ವಾದವೊಂದನ್ನು ಮುನ್ನೆಲೆಗೆ ತರುವ ವ್ಯವಸ್ಥಿತ ಪ್ರಯತ್ನಗಳಾಗುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಯಾಕೆ ಒಂದಾಗಿರಬೇಕು, ಒಡೆದುಕೊಂಡರೆ ಉತ್ತರ, ದಕ್ಷಿಣವೆನ್ನದೆ ಎಲ್ಲ ಭಾಗದ ಕನ್ನಡಿಗರು ಎದುರಿಸಬಹುದಾದ ಸಮಸ್ಯೆಗಳೇನು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದು ದೊಡ್ಡದಾಗಿರಬೇಕಾದ ಅಗತ್ಯವೇನು, ಏಳಿಗೆಗೂ ಜನಪ್ರತಿನಿಧಿಗಳಿಗೂ ಇರುವ ಸಂಬಂಧವೇನು, ತೆಲಂಗಾಣ ರಾಜ್ಯವಾದ ಮೇಲೆ ತೆಲುಗರ ನಡುವೆ ಉಂಟಾಗಿರುವ ತೀವ್ರ ಒಡಕಿನ ಪರಿಣಾಮಗಳೇನು ಅನ್ನುವ ಬಗ್ಗೆ  ಕನ್ನಡಿಗರಲ್ಲಿ ಅರಿವು ಮೂಡಿಸುವ ಪ್ರಯತ್ನ “ಕರ್ನಾಟಕವೊಂದೇ – ಒಡಕು ತರಲಿದೆ ಕೆಡುಕು” ಹೊತ್ತಗೆ.\u003c\/p\u003e","brand":"Vasantha Shetty","offers":[{"title":"Default Title","offer_id":42020676337923,"sku":"HB00001116","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/05_1a6b09b2-4fbb-4a86-ad44-62caeefc2d5b.jpg?v=1636357655"},{"product_id":"karnatakada-sankshipta-itihaasa-education-dr-suryanath-kamath-kannada-book","title":"ಕರ್ನಾಟಕದ ಸಂಕ್ಷಿಪ್ತ ಇತಿಹಾಸ","description":"\u003cp\u003eಕರ್ನಾಟಕದ ಇತಿಹಾಸವನ್ನು ಆಧುನಿಕ ಇತಿಹಾಸದ ಹಿಂದಿನಿಂದ ಇಂದಿನವರೆಗೆ ಕಟ್ಟಿಕೊಟ್ಟ ಬಹು ಜನಪ್ರಿಯ ಪುಸ್ತಕಗಳಲ್ಲಿ ಒಂದಾಗಿರುವ \"ಕರ್ನಾಟಕದ ಸಂಕ್ಷಿಪ್ತ ಇತಿಹಾಸ\"ವನ್ನು ನಾಡಿನ ಖ್ಯಾತ ಇತಿಹಾಸ ತಜ್ಞರಲ್ಲಿ ಒಬ್ಬರಾಗಿದ್ದ ಸೂರ್ಯನಾಥ ಕಾಮತ್ ಅವರು ಬರೆದಿದ್ದಾರೆ.\u003c\/p\u003e","brand":"Dr. Suryanath Kamath","offers":[{"title":"Default Title","offer_id":42020678107395,"sku":"HB00001110","price":275.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KarnatakadaSankshiptaItihasa.jpg?v=1776587191"},{"product_id":"akhanda-karnatakada-hejjegalu-history-dr-krishna-kolharakulkarni-kannada-book","title":"ಅಖಂಡ ಕರ್ನಾಟಕದ ಹೆಜ್ಜೆಗಳು","description":"\u003cp\u003eಅಖಂಡ ಕರ್ನಾಟಕದ ಹೆಜ್ಜೆಗಳು ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಚಳುವಳಿ ಮತ್ತು ಅದರಲ್ಲಿ ಪಾಲ್ಗೊಂಡ ಆದರೆ ಹೆಚ್ಚಾಗಿ ನಾವು ಕೇಳಿರದ ಹಲವರ ಕತೆಗಳನ್ನು ನಮ್ಮ ಮುಂದಿಡುತ್ತದೆ. ಏಕೀಕರಣ ಚಳವಳಿಯನ್ನು ಅರಿಯಲು ಇದೊಂದು ಮುಖ್ಯ ಪುಸ್ತಕವಾಗಿದೆ.\u003c\/p\u003e","brand":"Dr. Krishna Kolharakulkarni","offers":[{"title":"Default Title","offer_id":42020678598915,"sku":"HB00001104","price":330.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_41702944-6ae8-47f7-be3f-6ae980f4c387.jpg?v=1676623638"},{"product_id":"karnataka-samskruti-sameekshe","title":"ಕರ್ಣಾಟಕ ಸಂಸ್ಕೃತಿ ಸಮೀಕ್ಷೆ","description":"\u003cp\u003eಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಈ ಕೃತಿ ಈಗ ಹನ್ನೊಂದನೇ ಮುದ್ರಣ ಕಂಡಿದ್ದು, ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕರ್ಣಾಟಕದ ಇತಿಹಾಸದ ತಿಳಿವಿಗೆ ಈ ಹೊತ್ತಗೆ ಸಹಕಾರಿಯಾಗಿದೆ.\u003c\/p\u003e","brand":"Dr. H. Tipperudra Swamy","offers":[{"title":"Default Title","offer_id":42020679123203,"sku":"HB00001100","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Karnataka-Samskruti-Sameekshe-Front.jpg?v=1636357704"},{"product_id":"maretu-hoda-maha-saamraajya-vijayanagara","title":"ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ","description":"\u003cp\u003eಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ಬಣ್ಣಿಸುತ್ತದೆ. ರಾಬರ್ಟ್ ಸೆವೆಲ್ ಅವರ ಈ ಕೃತಿ ವಿಜಯನಗರದ ಏಳು ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಟ ಅಧ್ಯಯನಕ್ಕೆ ಮಾದರಿಯಾಗಿರುವ ಈ ಕೃತಿಯನ್ನು ಕನ್ನಡಕ್ಕೆ ಸದಾನಂದ ಕನವಳ್ಳಿಯವರು ಅನುವಾದಿಸಿದ್ದಾರೆ.\u003c\/p\u003e","brand":"Robert sevel | Sadananda Kanavalli","offers":[{"title":"Default Title","offer_id":42020679155971,"sku":"HB00001099","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4004.jpg?v=1636357705"},{"product_id":"kannada-kannadiga-karnataka","title":"ಕನ್ನಡ ಕನ್ನಡಿಗ ಕರ್ನಾಟಕ","description":"\u003cp\u003eಕರ್ನಾಟಕವನ್ನು ಆಳಿ ಹೋದ ದೊರೆಗಳಿಂದ ಹಿಡಿದು ಈಗ ಆಡಳಿತ ಮಾಡುತ್ತಿರುವವರವರೆಗೆ ರಾಜ್ಯದ ಇತಿಹಾಸವನ್ನು ಚಿಕ್ಕದಾಗಿ ಕಟ್ಟಿ ಕೊಡುವ ಪ್ರಯತ್ನ ಈ ಹೊತ್ತಗೆಯಲ್ಲಿದೆ. ೧೯೯೦ರಲ್ಲಿ ಪ್ರಕಟಗೊಂಡು ಇಲ್ಲಿಯವರೆಗೆ ಹನ್ನೊಂದು ಮುದ್ರಣ ಕಂಡಿರುವ ಈ ಹೊತ್ತಗೆ ಈಗ ಹಲವು ತಿದ್ದುಪಡಿಗಳೊಂದಿಗೆ ಹನ್ನೆರಡನೇ ಮುದ್ರಣ ಕಂಡಿದೆ. ನೀರಾವರಿ, ಪ್ರವಾಸ, ಸಂಸ್ಕೃತಿ, ಪರಿಸರ, ಹೀಗೆ ನಾಡಿನ ಸಮಗ್ರ ಪರಿಚಯವನ್ನು ಚಿಕ್ಕದಾಗಿ ನೀಡುವ ಈ ಹೊತ್ತಗೆ ೪೫೦ ಪುಟಗಳನ್ನು ಹೊಂದಿದೆ.\u003c\/p\u003e","brand":"Many Authors","offers":[{"title":"Default Title","offer_id":42020679516419,"sku":"HB00001096","price":295.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3821.jpg?v=1636357714"},{"product_id":"amrutamanthana-krishnarao-kannada-novel","title":"ಅಮೃತಮಂಥನ","description":"","brand":"Aa. Na. Kru.","offers":[{"title":"Default Title","offer_id":42090924474627,"sku":"HB00001033","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at2.56.19PM.jpg?v=1637659839"},{"product_id":"yaavudu-charitre-krishnamurthy","title":"ಯಾವುದು ಚರಿತ್ರೆ?","description":"ಜಗತ್ತಿನಲ್ಲಿ ಇರುವುದೆಲ್ಲವೂ ಮಹಾಭಾರತದಲ್ಲಿದೆ. ಮಹಾಭಾರತದಲ್ಲಿ ಇಲ್ಲದ್ದು ಜಗತ್ತಿನಲ್ಲಿಲ್ಲ...' ಎಂಬಂತೆ ಕಾಲಾನುಕಾಲದಲ್ಲಿ ನಿರಂತರವಾಗಿ ಬೆಳೆದು ನಿಂತಿರುವ ಮಹಾಭಾರತದ ಅಸಂಖ್ಯ ಪಾತ್ರ-ಪ್ರಸಂಗಗಳ ವಿವರ ಈ ಕೃತಿಯಲ್ಲಿದೆ. ವಿಖ್ಯಾತ ವಿದ್ವಾಂಸರಾದ ಪ್ರೊ. ಅ.ರಾ. ಮಿತ್ರ ಅವರು ಮುಖ್ಯ ಪಾತ್ರಗಳನ್ನು ಕೈಬಿಟ್ಟು ಸಾಮಾನ್ಯ ಪಾತ್ರಗಳನ್ನು ಪರಿಚಯಿಸುವ ಸಾಹಸದ ಕೆಲಸವನ್ನು ಇಲ್ಲಿ ಮಾಡಿದ್ದಾರೆ. ಈ ಎಲ್ಲ ಉಪಪಾತ್ರಗಳ ಸಂಗತಿ ಮತ್ತು ಪೂರ್ವಾಪರಗಳನ್ನು ಗಮನಿಸುತ್ತಾ ಹೋದಂತೆ ಓದುಗರಿಗೆ ವ್ಯಾಸಭಾರತದ ಸ್ಕೂಲ ಕಥೆಯ ಪರಿಚಯವೇ ಆಗಿಬಿಡುತ್ತದೆ. ಆ ಹಿನ್ನೆಲೆಯಲ್ಲಿ ಅವರು ಕೊಡುವ ವಿಪುಲ, ವಿಶಿಷ್ಟ ಮಾಹಿತಿ ಸಾಹಿತ್ಯಾಸಕ್ತರಿಗೆ, ಸಂಸ್ಕೃತಿ ಚಿಂತಕರಿಗೆ, ಸಂಶೋಧಕರಿಗೆ ನೆರವಾಗುತ್ತದೆ. ಜನರು, ರಾಜರು, ಋಷಿಗಳ ಜೊತೆಗೆ ಪ್ರಾಣಿಕಥೆ, ಭಾರತದ ನದಿಗಳು, ಸಪ್ತಸಾಗರ, ಸ್ಥಳ ಐತಿಹ್ಯ ಇತ್ಯಾದಿಯನ್ನೂ ಲೇಖಕರು ಪರಿಚಯಿಸಿದ್ದಾರೆ. ಹೀಗಾಗಿ ಮಹಾಭಾರತದ ವಿಸ್ಕೃತ ಪಾತ್ರಪ್ರಪಂಚ ಕುರಿತಂತೆ ಇದೊಂದು ವಿಶ್ವಕೋಶವೇ ಆಗಿದ್ದು, ಸಂಗ್ರಾಹ್ಯ ಕೃತಿಯಾಗಿದೆ.","brand":"Babu Krishnamurthy","offers":[{"title":"Default Title","offer_id":42113279197443,"sku":"HB00000792","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at11.03.43AM_6.jpg?v=1637995881"},{"product_id":"vijayanagara-samrajya-chinnaswamy-sosale","title":"ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ  ಚರಿತ್ರೆ","description":"ಭಾರತದ ಚರಿತ್ರೆಯಲ್ಲಿ ನಮ್ಮ ಕರುನಾಡಿಗೆ ವಿಶಿಷ್ಟ ಸ್ಥಾನವಿದೆ. ಇದಕ್ಕೆ ಕಾರಣ ಈ ನಾಡನಾಳ್ವಿಕೆ ಮಾಡಿ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ವಿವಿಧ ಕಾಲಘಟ್ಟದಲ್ಲಿನ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ರಾಜ-ಮಹಾರಾಜರು ಕಾರಣರಾಗಿದ್ದಾರೆ. ಬಹುಮುಖ್ಯವಾಗಿ ಆಯಾಕಾಲದಲ್ಲಿ ಜೀವಿಸಿದ್ದ ಪಂಡಿತರು, ಸಾಹಿತಿಗಳು, ಶಿಲ್ಪ ಹಾಗೂ ಚಿತ್ರ ಕಲಾವಿದರು, ಕೃಷಿಕರು, ವಿಭಿನ್ನ ಶ್ರಮ ವೃತ್ತಿಯ ಜನಸಮುದಾಯದವರ ಕೊಡುಗೆ ಅಪಾರವಾಗಿದೆ. ಇಂದಿನ ಸಂದರ್ಭದಲ್ಲಿ ಚರಿತ್ರೆ ಅಧ್ಯಯನ ಮತ್ತು ರಚನೆ ಬಹುಸೂಕ್ಷ್ಮವಾದದ್ದು. ಆ ಸೂಕ್ಷ್ಮತೆ ಕೈತಪ್ಪಿದರೆ ಅದರ ಸಿದ್ಧಾಂತ ಸೂತ್ರ ಹರಿದ ಪಟದಂತಾಗುತ್ತದೆ ಎಂಬುದಕ್ಕೆ ಅನೇಕ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಸಮಕಾಲೀನ ಚರಿತ್ರೆಯನ್ನು ವಾಸ್ತವದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಸರಳವಾಗಿ ಸ್ನೇಹಮನೋಭಾವನೆಯಿಂದ ಬೆಸೆಯುವ ಉಪಕರಣವಾಗಿ ಬಳಸಬೇಕು ಹಾಗೂ ಆ ಚರಿತ್ರೆಯು ವಾಸ್ತವ ಹಾಗೂ ಭವಿಷ್ಯದ ಬದುಕಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಬೇಕು ಎಂಬುದು ಚರಿತ್ರೆಕಾರರ ಆಶಯವೂ ಆಗಿದೆ. ಕನ್ನಡ ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಮಧ್ಯಕಾಲೀನ ಚರಿತ್ರೆ ರಚನೆಯಲ್ಲಿ ದೇಶ-ವಿದೇಶಗಳ ಚರಿತ್ರೆಕಾರರು ಅತ್ಯಂತ ಹೆಚ್ಚು ಗಮನ ಹರಿಸಿದ್ದು ಈ ಸಂಧರ್ಭದಲ್ಲಿನ ಸಾಂಸ್ಕೃತಿಕ ಪಲ್ಲಟಗಳ ಕುರಿತೇ ಎಂಬುದು ಕಾರಣವಾಗಿದೆ. ಮೇಲಿನ ಆಶಯದೊಂದಿಗೆ ರಚನೆಗೊಂಡಿರುವ ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ ಎಂಬ ಈ ಕೃತಿ ರಾಜ ಕೀಯೇತರವಾಗಿ ವಿಭಿನ್ನ ನಲೆಯಲ್ಲಿ ಸಾಂಸ್ಕೃತಿಕವಾದ ಚಾರಿತ್ರಿಕ ಅಂಶಗಳನ್ನು ಸಮಗ್ರವಾಗಿ ಚರ್ಚಿಸುತ್ತದೆ. ವಿಜಯನಗರ ಸಾಮ್ರಾಜ್ಯ ಹಾಗು ಇಕ್ಕೇರಿ, ಮೈಸೂರು ಸಂಸ್ಥಾನಗಳ ರಾಜಮಹಾರಾಜರ ಬಿರುದು-ಬಾವಲಿಗಳನ್ನು ಅವರ ದಂಡಯಾತ್ರೆ, ಯುದ್ಧ, ದಾಳಿಗಳನ್ನು ಹೊರತುಪಡಿಸಿ ಜನಕೇಂದ್ರಿತ ಸೂಕ್ಷ್ಮಸಂವೇದನೆಯ ಸಾಂಸ್ಕೃತಿಕ ಅಧ್ಯಯನಕ್ಕೆ ಓದುಗರನ್ನು ಈ ಕೃತಿ ತೊಡಗಿಸುತ್ತದೆ. ಇಂಥ ಬಹುಸೂಕ್ಷ್ಮ ವಸ್ತುವಿಷಯವನ್ನು ಕೇಂದ್ರವನ್ನಾಗಿಸಿಕೊಂಡು ಸಂಶೋಧನಾತ್ಮಕ ಕೃತಿಯನ್ನು ಸಿದ್ಧಪಡಿಸಿರುವ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಪ್ರೊ, ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ಅಭಿನಂದನೆಗಳು,\u003cbr\u003e\u003cbr\u003e ಡಾ. ಸ.ಚಿ. ರಮೇಶ","brand":"Prof. N. Chinnaswamy Sosale","offers":[{"title":"Default Title","offer_id":42113398178051,"sku":"HB00000784","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.09PM.jpg?v=1637999689"},{"product_id":"karnataka-charitre-kannada-history-book","title":"ಕರ್ನಾಟಕ ಚರಿತ್ರೆ-ಸಂಪುಟ 1-7","description":"ಕರ್ನಾಟಕ ಚಿತ್ರ\u003cbr data-mce-fragment=\"1\"\u003e\u003cbr data-mce-fragment=\"1\"\u003eಜಾನಪೀಠ ಪ್ರಶಸ್ತಿ ವಿಜೇತರಾದ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾದ ಹೊತ್ತಿನಲ್ಲಿ ಹಾಕಿದ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ ಏಳು ಕರ್ನಾಟಕ ಚರಿತ್ರೆ ಸಂಪುಟಗಳ ಮಾಲಿಕೆಯೂ ಒಂದು, ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಮಹತ್ವವನ್ನು ಬಿಂಬಿಸುತ್ತವೆ. ಇತಿಹಾಸವೆಂಬುದು ಕೇವಲ ಆನೆ, ಕುದುರೆಗಳನ್ನು ಕೂಡಿ ಕಳೆಯುವ ಗಣಿತದ ಸರಳ ಫಾರ್ಮುಲಾ ಅಲ್ಲ. ಮನುಷ್ಯ ಮನುಷ್ಯನೊಂದಿಗೆ ನೆರಳಿನಂತೆ ಹಿಂಬಾಲಿಸಿದ ಅಧಿಕಾರದ ಸರಳರೇಖೆಗಳಲ್ಲದ ನಾನಾ ಚಹರೆಗಳ ಚಿತ್ರಣವೂ ಹೌದು. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ, ಕಲೆ ಎಂಬುವುಗಳೆಲ್ಲ ಚರಿತ್ರೆಯೊಂದಿಗೆ ಸಾಂಗತ್ಯವನ್ನು ಬೆಳೆಸಿವೆ. ಇವು ಕೇವಲ ಗಂಥಸ್ಥಗೊಂಡವುಗಳಲ್ಲ. ಮೌಖಿಕ ಕಥನಗಳು, ಕಲೆಗಳು ಬೆಸೆದುಕೊಂಡ ರೂಪಿತಗೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಿಕೊಳ್ಳಲು ಈ ಸಂಪುಟಗಳು ಮಹತ್ವದ ದಾಖಲೆಗಳು ಎಂಬುದು ಗಂಭೀರ ಸಂಗತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕರ್ನಾಟಕ ಚರಿತ್ರೆ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪನ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರ, ಸಂಪುಟಗಳ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಇತಿಹಾಸತಜ್ಞರಾದ ನಾಡೋಜ ಡಾ. ಬಿ. ಷೇಕ್ ಆಲಿ, ಸಂಪುಟಗಳ ಸಂಪಾದಕರು ಹಾಗೂ ಲೇಖಕರುಗಳಿಗೆ ವಿಶ್ವವಿದ್ಯಾಲಯ ಆಭಾರಿಯಾಗಿರುತ್ತದೆ. ಈ ಮಾಲಿಕೆಯ ಏಳನೇ ಸಂಪುಟವನ್ನು ಇತಿಹಾಸತಜ್ಞರಾದ ಪ್ರೊ. ಎಸ್. ಚಂದ್ರಶೇಖರ್ ಅವರು ಸಂಪಾದಿಸಿದ್ದಾರೆ. ಅವರಿಗೆ ಅಭಿನಂದನೆಗಳು,\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ. ಮಲ್ಲಿಕಾ. ಎಸ್. ಘಂಟಿ\u003cbr data-mce-fragment=\"1\"\u003eಕುಲಪತಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸಾರಾಂಗ\u003cbr data-mce-fragment=\"1\"\u003eಕನ್ನಡ ವಿಶ್ವವಿದ್ಯಾಲಯ, ಹಂಪಿ","brand":"Prof. B. Sheik Ali","offers":[{"title":"Default Title","offer_id":42113453752579,"sku":"HB00000779","price":4000.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/7_1.jpg?v=1638001602"},{"product_id":"kitturu-rudrammana-kathe","title":"ಕಿತ್ತೂರು ರುದ್ರಮ್ಮನ ಕಥೆ","description":"ಪ್ರಸ್ತುತ 'ಕಿತ್ತೂರು ರುದ್ರಮನ ಕಥೆ' ಹೆಸರಿನ ಯಕ್ಷಗಾನ ಕೃತಿಯಲ್ಲಿ ನಾಡಿನ ಚರಿತ್ರೆ, ಕಥೆ, ಕವನ, ಕಾವ್ಯ ರೂಪದಲ್ಲಿ ಸಾಹಿತ್ಯಿಕವಾಗಿ, ಶಾಸನ, ನಿರೂಪ ಇತ್ಯಾದಿ ರೂಪಗಳು ದಾಖಲಾತ್ಮಕವಾಗಿ ನಿರೂಪಿಸಲ್ಪಟ್ಟಿರುತ್ತವೆ. ಇಂಥ ಚಿತ್ರ ನಿರ್ಮಾಣದಲ್ಲಿ ಸಾಹಿತ್ಯ ಕೃತಿಗಳ ಕೊಡುಗೆ ಅನನ್ಯವಾಗಿದ್ದು, ಕಲಾತ್ಮಕವಾಗಿ ರಚನೆಯಾದ ಇವುಗಳಲ್ಲಿನ ಚರಿತ್ರೆಯನ್ನು ವಾಸ್ತವ ನೆಲೆಯಲ್ಲಿ ನಿರೂಪಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.","brand":"Dr. K. Ravindranath","offers":[{"title":"Default Title","offer_id":42113643610371,"sku":"HB00000761","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.13PM.jpg?v=1638007627"},{"product_id":"gandhi-tathva-chinthane-thoughts","title":"ಗಾಂಧೀ ತತ್ವ ಚಿಂತನೆ","description":"ಇಂದಿನ ಜಾಗತೀಕರಣ ಹಾಗೂ ಹಿಂಸೆಯ ವಾತಾವರಣದಲ್ಲಿ, ನಲುಗುತ್ತಿರುವ ಮಾನವೀಯ ಮೌಲ್ಯಗಳನ್ನು ಹುಡುಕುವ ಮತ್ತು ಹುಟ್ಟುಹಾಕುವ ಬರಹಗಳನ್ನು ಪ್ರೋತ್ಸಾಹಿಸುವ ಕೆಲಸವು ಆಗಬೇಕಾಗಿದೆ. ಒಟ್ಟಾರೆಯಾಗಿ ಆಲೋಚನೆಗಳ ಮತ್ತು ಸಿದ್ಧಾಂತಗಳ ಮೌಲೀಕರಣದ ಅಗತ್ಯವನ್ನು ಮನಗಂಡಿರುವ ಕನ್ನಡ ವಿಶ್ವವಿದ್ಯಾಲಯ, ದೇಸಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ನಡುವೆ ಮುಖಾಮುಖಿಯೊಂದನ್ನು ಹುಟ್ಟುಹಾಕುವ ಮೂಲಕ ಸತ್ಯದ ಬೆಳಕಿನೆಡೆಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡುತ್ತಿದೆಯೆಂಬ ಆಶಯ ಲೇಖಕರದ್ದು.","brand":"Neelattahalli Kasturi","offers":[{"title":"Default Title","offer_id":42113657078019,"sku":"HB00000759","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.17PM.jpg?v=1638008543"},{"product_id":"taragatigalalli-kuvempu-biography-dr-s-m-vrushabhendraswami-kannada-book","title":"ತರಗತಿಗಳಲ್ಲಿ ಕುವೆಂಪು (ತೌಲನಿಕ ಕಾವ್ಯಮೀಮಾಂಸೆ)","description":"\u003cp\u003eಕುವೆಂಪುರವರ ಕಾವ್ಯಚಿಂತನೆ ಎಂದರೆ ಜಗತ್ತಿನ ಮಹಾ ಪ್ರತಿಭೆಗಳ ಮೂಲಮಾನದಲ್ಲಿ ನಡೆಯುವ ಒಂದು ರಸಯಾತ್ರೆಯೇ ಸರಿ. ಹೀಗಾಗಿ ಕುವೆಂಪು ಏಕಕಾಲಕ್ಕೆ ಮಹತ್ವದ ಕವಿಯಾಗಿರುವಂತೆ, ಮಹತ್ವದ ಚಿಂತಕರೂ ಆಗಿದ್ದಾರೆ.\u003c\/p\u003e\n\u003cp\u003eಭಾರತೀಯ ಕಾವ್ಯಮೀಮಾಂಸೆಯ ಎಷ್ಟೋ ಸಾಹಿತ್ಯ ತತ್ವಗಳನ್ನು ತಮ್ಮ ಸೃಜನಶೀಲ ಚಿಂತನೆಯಲ್ಲಿ ಮರು ವ್ಯಾಖ್ಯಾನಕ್ಕೆ ಗುರಿಪಡಿಸುವ ಕೌಶಲ, ಪಶ್ಚಿಮದ ಕಾವ್ಯಮಿಮಾಂಸೆ ಮತ್ತು ಸಾಹಿತ್ಯ ವಿಮರ್ಶೆಯ ಪರಿಕಲ್ಪನೆಗಳನ್ನು ಕನ್ನಡದಲ್ಲಿ ಪುನರ್ಭವಗೊಳಿಸಿ, ಸಂವಾದಿ ಪರಿಭಾಷೆಗಳನ್ನು ರೂಪಿಸಿ ನಮ್ಮ ಸಾಹಿತ್ಯದ ಅರ್ಥವಂತಿಕೆಗೆ ಬಳಸುವ ಕ್ರಮ, ಕುವೆಂಪು ಕಾವ್ಯ ಚಿಂತನೆಯ ವೈಶಿಷ್ಟ್ಯಗಳಾಗಿವೆ. \u003c\/p\u003e","brand":"Dr. S. M. Vrushabhendraswami","offers":[{"title":"Default Title","offer_id":42113940685059,"sku":"HB00000728","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at5.41.05PM.jpg?v=1638017932"},{"product_id":"tugalak-kannada-book","title":"ತುಘಲಕ್","description":"ಈ ಕೃತಿಯ ಬಗ್ಗೆ -\u003cbr data-mce-fragment=\"1\"\u003e\u003cbr data-mce-fragment=\"1\"\u003eಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ, ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಾಗಿದ್ದರೂ ವಿವೇಕ-ಅವಿವೇಕಗಳ ದ್ವಂದ್ವವನ್ನು ನಾಟಕೀಯವಾಗಿ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ವಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇ೦ದ್ರವಾಗಿದ್ದಾನೆ. ಕಾಯದೆಗಳಿಗನುಸಾರವಾಗಿ ವೇಷ ಬದಲಿಸುವ ಬೀದಿಗಳರು, ಪ್ರಾರ್ಥನೆಯ ಹೊತ್ತಿನಲ್ಲಿ ಕೊಲೆ ರಾಜಕಾರಣವನ್ನು ದೇವರ ಮಾಡುವ ಕಾರ್ಯವೆಂದು ಸರದಾರರು. ಭ್ರಮಿಸಿದ ಧರ್ಮಗುರುಗಳು, ಇಂಥ ವ್ಯಕ್ತಿಗಳ ದುರ್ದೈವಕ್ಕೆ ಸೂತ್ರಧಾರನಾದ ಮುಹಮ್ಮದ-ಹೀಗೆ ನಾಟಕದ ಮಾನುಷ ಪ್ರಪಂಚ ಜಟಿಲವಾಗಿದೆ. ವೇಷಾಂತರ, ಸ್ಥಳಾಂತರ, ಮತಾಂತರ-ಏನಾದರೂ ಮುಹಮ್ಮದನಿಗೆ ಆಗುವುದು-ಮಾಂಸ ಭಕ್ಷವಾಗಿರುವ ತನ್ನ ಆತ್ಮದ ದರ್ಶನ. ಕಾವ್ಯ, ಧರ್ಮ, ರಾಜಕಾರಣ ಮೊದಲಾದ ತನ್ನ ಸಂಸ್ಕಾರಗಳಿಗೆ ತಾನೇ ಪರಕೀಯನಾಗಿ, ದಿಲ್ಲಿಯಿಂದ ದೌಲತ್ತಾಬಾದಿನವರೆಗೆ ತನ್ನ ರಾಜ್ಯವನ್ನು, ಪ್ರಜೆಗಳನ್ನೂ ನಡೆಸಿಕೊಂಡು ಹೋದ ಆರಸ, 'ಆತ್ಮ-ಹತ್ಯೆ'ಯನ್ನು ಮಾಡಿಕೊಂಡೂ ಜೀವಂತವಾಗಿ ಉಳಿಯುತ್ತಾನೆ. ಇದೇ ಇಲ್ಲಿಯ ಹೊಸ\u003cbr data-mce-fragment=\"1\"\u003e\u003cbr data-mce-fragment=\"1\"\u003eಹತ್ತು ರೀತಿಯ ವೇಷವನ್ನು ತೊಟ್ಟರೂ ತಮ್ಮ ವ್ಯಕ್ತಿತ್ವವನ್ನು ತೆರೆದು ಬಿಸಿಲಿಗೆ ಒಣಗಹಾಕುವ ಪಾತ್ರಗಳು, ಆರಮನೆ, ರಾಜಬೀದಿ, ಮಸೀದೆ, ಕೋಟೆಯ ಬುರುಜು ಹೀಗೆ ಬೇಕಾದಲ್ಲಿ ಪ್ರತ್ಯಕ್ಷವಾಗುವ ಸನ್ನಿವೇಶಗಳು, ಇವೆರಡನ್ನೂ ಬೆಸೆದಂತಿರುವ ನಾಟ್ಯಧ್ವನಿ, ದೃಶ್ಯಕಾವ್ಯದ ಭಾಷೆ-ಹೀಗೆ ನಾಟಕದ ರಚನಾಕೌಶಲ ಅದ್ಭುತವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಕೀರ್ತಿನಾಥ ಕುರ್ತಕೋಟಿ\u003cbr data-mce-fragment=\"1\"\u003e","brand":"Girish Karnad","offers":[{"title":"Default Title","offer_id":42116468408579,"sku":"HB00000635","price":145.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d666c288-4b6d-48a6-a823-259b1841c186.jpg?v=1638107780"},{"product_id":"bharathada-ithihaasa-2nd-puc-kannada-education-book","title":"ಭಾರತದ ಇತಿಹಾಸ-ದ್ವಿತೀಯ ಪಿ. ಯು. ಸಿ.","description":"\u003cp\u003eಕೃತಿಯ ಬಗ್ಗೆ\u003cbr data-mce-fragment=\"1\"\u003e\u003cbr data-mce-fragment=\"1\"\u003e* ಪರೀಕ್ಷಾ ಮಾರ್ಗದರ್ಶಿ\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e*\u003c\/span\u003e  ಸರಳ ಭಾಷೆ ಸಂಕ್ಷಿಪ್ತ ಶೈಲಿ\u003cbr data-mce-fragment=\"1\"\u003e\u003cbr data-mce-fragment=\"1\"\u003e* ಪ್ರತಿ ಅಧ್ಯಾಯಕ್ಕೂ ಪ್ರಶ್ನೆಕೋಶಗಳ ಸೇರ್ಪದ\u003cbr data-mce-fragment=\"1\"\u003e\u003cbr data-mce-fragment=\"1\"\u003eಲೇಖಕರ ಬಗ್ಗೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಕೆ.ಎನ್. ಅಶ್ವತಪ್ಪ ನವರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಂಬಾಲ ಗ್ರಾಮದವರು, ಕೆ.ಎನ್.ಎ. ಎಂದೇ ಈಗಾಗಲೇ ಚಿರಪರಿಚಿತರಾದ ಇವರು 1991ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪ್ರಥಮ ದರ್ಜೆಯಲ್ಲಿ ಮಾಸ್ಟರ್ ಪದವಿ ಪಡೆದಿರುತ್ತಾರೆ. ಜೊತೆಗೆ ಎಂ.ಫಿಲ್., ಶಿಕ್ಷಣ ಹಾಗೂ ಕಾನೂನು ಪದವೀಧರರು. ಶ್ರೀಯುತರು 1991 ರಿಂದಲೇ ಖ್ಯಾತ ಶಿಕ್ಷಣ ತಜ್ಞ ಪದ್ಮಭೂಷಣ ದಿ|| ಡಾ|| ಎಚ್. ನರಸಿಂಹಯ್ಯ ಫೌಂಡೇಷನ್, ದಿ ನ್ಯಾಷನಲ್ ಕಾಲೇಜು, ಬಾಗೇಪಲ್ಲಿ, ಇಲ್ಲಿ ತಮ್ಮ ಅಧ್ಯಾಪನ ವೃತ್ತಿ ಕೈಗೊಂಡು ಎರಡು ದಶಕಗಳಿಗೂ ಮೀರಿ ಇತಿಹಾಸ ಬೋಧಿಸಿದ್ದಾರೆ. ನುರಿತ ಅಧ್ಯಾಪಕರಾದ ಇವರು ರಚಿಸಿರುವ ಪಿ.ಯು. ಪಠ್ಯಪುಸ್ತಕಗಳು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿವೆ. ಜೊತೆಗೆ ವಿವಿಧ ವಿಶ್ವವಿದ್ಯಾಲಯಗಳ ಸೆಮಿಸ್ಟರ್ ಪಠ್ಯಕ್ರಮದಂತೆ ರಚಿಸಿರುವ ಇವರ ಕೃತಿಗಳು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೆಚ್ಚುಗೆ ಪಡೆದಿವೆ. ಆಧುನಿಕ ಯೂರೋಪ್, ಭಾರತದ ಇತಿಹಾಸ (3 ಭಾಗಗಳು) ಸೇರಿದಂತೆ ಇವರ ಒಟ್ಟು 43 ಕೃತಿಗಳು ಪ್ರಕಟವಾಗಿ ಜನಪ್ರಿಯವಾಗಿವೆ. ಪ್ರಸ್ತುತ ಕೃತಿಯು ಸರಳ ಹಾಗೂ ತಿಳಿಯಾದ ಭಾಷೆ ಬಳಸಿ ಆಕರ್ಷಕ ನಿರೂಪಣಾ ಶೈಲಿಯಲ್ಲಿ ಮಂಡಿಸಿದ್ದಾರೆ. ಈ ಕೃತಿ ಓದುಗರ ನಿರೀಕ್ಷೆಗೆ ಖಂಡಿತ ತಲುಪಬಲ್ಲದು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಪ್ರಕಾಶಕರು\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು - ಸಪ್ನ ಬುಕ್ ಹೌಸ್\u003c\/p\u003e","brand":"K. N. A.","offers":[{"title":"Default Title","offer_id":42119539327235,"sku":"HB00000541","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f4e01002-4e19-4115-85e3-1d50903684fe.jpg?v=1638185906"},{"product_id":"short-biography-nalwadi-krishnaraja-wodeyar-navakarnataka","title":"ಎಲ್ಲರೊಳಗೆ ಒಂದಾದ ನಾಲ್ವಡಿ ಕೃಷ್ಣರಾಜ ಒಡೆಯರ್‌","description":"ಮೈಸೂರು ಸಂಸ್ಥಾನದ ಆಳ್ವಿಕೆಯ ಕಾಲದಲ್ಲಿ \u003cstrong\u003eರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌\u003c\/strong\u003e ಅವರ ಆಡಳಿತ. ಅವರ ಪಾತ್ರ ಮತ್ತು ವ್ಯಕ್ತಿತ್ವದ ಪರಿಚಯ.","brand":"T. S. Gopal","offers":[{"title":"Default Title","offer_id":42133218590979,"sku":"HB00000274","price":45.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.17PM.jpg?v=1638449825"},{"product_id":"veera-sangolli-rayanna-short-biography-kannada-navakarnataka","title":"ವೀರ ಸಂಗೊಳ್ಳಿ ರಾಯಣ್ಣ","description":"ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಕಿತ್ತೂರು ಚೆನ್ನಮ್ಮನ ಹೋರಾಟವನ್ನು ಮುಂದುವರೆಸಿದ ಧೀರ. ಇಂದು ನಾವು ಯಾವ ರಣತಂತ್ರವನ್ನು 'ಗೆರಿಲ್ಲ ಯುದ್ಧ'ವೆಂದು ಕರೆಯುತ್ತೇವೆಯೋ ಅದನ್ನು ಸಮರ್ಥವಾಗಿ ಬಳಸಿಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾದ. ಬ್ರಿಟಿಷರು ಭಾರತೀಯರ ದೌರ್ಬಲ್ಯಗಳನ್ನು ಚೆನ್ನಾಗಿ ತಿಳಿದಿದ್ದವರಾದ ಕಾರಣ, ತಂತ್ರದಿಂದ ರಾಯಣ್ಣನನ್ನು ಹೆಡೆಮುರಿ ಕಟ್ಟಿ ನಂದಗಡದಲ್ಲಿ ನೇಣು ಹಾಕಿದ ಕಥೆ ಇಂದಿಗೂ ಕನ್ನಡಿಗರ ಕರುಳನ್ನು ಕತ್ತರಿಸುವ ಕಥೆಯಾಗಿದೆ. ದೇಶಭಕ್ತಿಯನ್ನು ಕೆರಳಿಸುತ್ತದೆ. ರಾಯಣ್ಣ ಏಳು ಅಡಿ ಎತ್ತರದ ಆಳು, ಹಾಗಾಗಿ ಆತನಿಗೆ ಎಂಟು ಅಡಿ ಉದ್ದದ ಸಮಾಧಿಯನ್ನು ನಂದಗಡದ ಬಳಿ ಕಟ್ಟಿದ್ದಾರೆ.","brand":"Pradeep Rokhade","offers":[{"title":"Default Title","offer_id":42137167757571,"sku":"HB00000217","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.16AM.jpg?v=1638529288"},{"product_id":"comprehensive-intro-indian-national-movement","title":"ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು","description":"ಭಾರತೀಯವೆನಿಸುವ ರಾಷ್ಟ್ರೀಯ ಅಸ್ಮಿತೆಗೆ ಗಂಗೆ ಒಂದು ಸಂಕೇತ... ಭಾರತದ ಸ್ವಾತಂತ್ರ್ಯಗಂಗೆಯ ವೈಶಾಲ್ಯ, ಜಲಾಧಿಕ್ಯ, ಸ್ವಚ್ಛತೆಗೆ ಕೂಡು ನದಿಗಳ ಕೊಡುಗೆ, ಇವುಗಳ ಸಮೀಕ್ಷಣೆ ಇವೇ ಈ ಗ್ರಂಥದ ವಸ್ತು. ಪೂರ್ವರಂಗವಾಗಿ ಸ್ವಾತಂತ್ರ್ಯವನ್ನು ಹೇಗೆ ಕಳೆದುಕೊಂಡೆವು ಎಂಬುದೂ ವಿಮರ್ಶೆಗೆ ಒಳಗಾಗಿದೆ. ವಸಾಹತುಶಾಹಿ ಆಕ್ರಮಣದ ಪರಿಣಾಮವಾಗಿ, ಭಾರತದ ಆರ್ಥಿಕ ಬೆನ್ನೆಲುಬು ಹೇಗೆ ಜರ್ಜರಿತಗೊಂಡಿತೆಂದು ತಿಳಿಯದೆ, ಇಲ್ಲಿಯ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸುವುದು ಅಸಮರ್ಪಕವಾದ ವಿಧಾನ. ಹುಟ್ಟಿಕೊಂಡ ಚಳುವಳಿಗಳ ವಿಶ್ಲೇಷಣೆಯನ್ನು ಪದರ ಪದರವಾಗಿ ಲೇಖಕರು ಬಿಡಿಸಿದ್ದಾರೆ. ನಮ್ಮ ದೇಶದ ಮಹಾರೋಗವಾದ ಜಾತೀಯತೆ, ಎಂತೆಂತಹ ಸಮಸ್ಯೆಗಳನ್ನು ಹುಟ್ಟಿಹಾಕಿದವು... ಸ್ವಾತಂತ್ರ್ಯ ಪಡೆಯಬೇಕೆಂಬ ಛಲ - ಉತ್ಕಟ ಬಯಕೆಗಳ ಫಲಗಳ ನೆಲೆಗಳು ಭಾರತದಲ್ಲೂ ಪಜ್ವಲಿಸಿದುವು. ತೊರೆಗಳು ಸೇರಿ ಮಹಾನದಿಯಾಯಿತು...","brand":"N. P. Shankaranarayan Rao","offers":[{"title":"Default Title","offer_id":42137825378563,"sku":"HB00000187","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at5.10.30PM.jpg?v=1638537177"},{"product_id":"modern-indian-history-kannada-navakarnataka","title":"ಆಧುನಿಕ ಭಾರತದ ಇತಿಹಾಸ","description":"ಆಧುನಿಕ ಭಾರತದ ಇತಿಹಾಸದ ಬಗ್ಗೆ ಸಮಗ್ರ ಬರವಣಿಗೆ.","brand":"Prof. Bipin Chandra","offers":[{"title":"Default Title","offer_id":42137830719747,"sku":"HEDU0000074","price":390.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at5.10.29PM_1.jpg?v=1638537258"},{"product_id":"saraswati-nadi-ananth-raam","title":"ಸರಸ್ವತೀ ನದಿ","description":"ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ಪಿತೃತರ್ಪಣಕೊಡುತ್ತ ನಾಗಭೂಷಣ ಪುಣ್ಯದ ಗಂಟು ಕಟ್ಟುತ್ತಿದ್ದಾಗ, ದೂರದಲ್ಲಿ ತೇಲಿಬರುತ್ತಿದ್ದ ವಸ್ತುವೊಂದು ಹತ್ತಿರ ಹತ್ತಿರ ಬರುತ್ತಿದ್ದಂತೆ ನಾನು ಹೌಹಾರಿದ್ದೆ. ಪಂಡಿತರು ಮಾತ್ರ ಎಲೆ ಅಡಿಕೆ ಜಗಿಯುತ್ತ, ಮಂತ್ರ ಹೇಳುತ್ತ, ಧುತ್ತೆಂದು ನದಿಯಲ್ಲಿ ಉಗಿಯುತ್ತ ಪ್ರಯಾಗದ ಪುಣ್ಯ ವಿಶೇಷಗಳನ್ನು ವರದಿ ಮಾಡುತ್ತಿದ್ದರು. 'ಸರಸ್ವತೀ ನದಿ ತೋರಿಸಿ' ಎಂದು ನಾನು ಅವರ ಬೆನ್ನು ಹತ್ತಿದೆ. 'ಹುಚ್ಚಪ್ಪ, ಅದೆಲ್ಲಿ ಕಣ್ಣಿಗೆ ಕಾಣುತ್ತದೆ, ಅದು ಇಲ್ಲಿ ಗುಪ್ತಗಾಮಿನಿ' ಎಂದು ನಕ್ಕರು. ನನಗೆ ನಗು ಬರಲಿಲ್ಲ. ಬದಲು ಈ ನದಿಯ ಬಗ್ಗೆ ನಿಜಕ್ಕೂ ಹುಚ್ಚೇ ಹಿಡಿದಿತ್ತು. ನಾನು ನೋಡುತ್ತಿದ್ದ ರುಂಡವಿಲ್ಲದ ಆಕೃತಿ ಉರುಳಿ ಉರುಳಿ ಹೋಗುತ್ತಿತ್ತು, ನನ್ನ ಮನಸ್ಸು ಮಾತ್ರ ಗುಪ್ತಗಾಮಿನಿಯನ್ನು ಹುಡುಕುತ್ತಿತ್ತು. ಭೂಗೋಳದ ಎಲ್ಲ ಎಲ್ಲೆಗಳನ್ನೂ ಮೀರಿ ಅಲಹಾಬಾದಿನಲ್ಲಿ ಗಂಗಾ ಯಮುನೆಯರನ್ನು ಕೂಡಲು ಸರಸ್ವತೀ ಗುಪ್ತಗಾಮಿನಿಯಾಗಿ ಬರಲು ಸಾಧ್ಯವೆ?","brand":"Dr. T R Anantharamu","offers":[{"title":"Default Title","offer_id":42137858081027,"sku":"HB00000184","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/0f6d1f68-9d8f-4898-85e0-5f47e268dcce.jpg?v=1638537482"},{"product_id":"ancient-india-history-kannada-navakarnataka","title":"ಪ್ರಾಚೀನ ಭಾರತ","description":"ಒಂದು ದೇಶದ ಇತಿಹಾಸವೆಂದರೆ, ಆ ದೇಶವನ್ನು ಆಳಿದ ರಾಜವಂಶಗಳ, ಅವು ನಡೆಸಿದ ದಂಡಯಾತ್ರೆಗಳ, ಸಣ್ಣಪುಟ್ಟ ಯುದ್ಧಗಳ ಅಥವಾ ಅವುಗಳ ಸೋಲು-ಗೆಲುವು, ಅಳಿವು – ಉಳಿವುಗಳ ವರದಿಯಷ್ಟೇ ಅಲ್ಲ, ಇತಿಹಾಸವೆಂದರೆ ಸರಿಯಾದ ಆಧಾರವಿಲ್ಲದ ಕಾಲ್ಪನಿಕ ಭವ್ಯ ಚಿತ್ರಣವೂ ಅಲ್ಲ. ಇತಿಹಾಸದ ಅವಧಿಯಲ್ಲಿ, ಅಲ್ಲಿ ಬದುಕಿದ ಜನರ ಜೀವನ, ಅಲ್ಲಿನ ಆರ್ಥಿಕ ಪರಿಸ್ಥಿತಿ, ಪರದೇಶಗಳೊಂದಿಗಿನ ವಾಣಿಜ್ಯ - ಆರ್ಥಿಕ ಸಂಬಂಧಗಳು, ನಾನಾ ಕಾರಣಗಳಿಂದ ವಲಸೆ ಬಂದು ಅಲ್ಲಿ ನೆಲಸಿದ ಇತರ ಜನರು, ಅಲ್ಲಿ ಹುಟ್ಟಿದ ಮತ ಧಾರ್ಮಿಕ ಚಳವಳಿಗಳು ಹಾಗೂ ಪಂಥಗಳು. ಹೊಸ ಹೊಸ ಆಧಾರಗಳು ಬೆಳಕಿಗೆ ಬಂದಂತೆ ಅದರ ಸ್ವರೂಪವೂ ಬದಲಾಗುತ್ತ ಹೋಗುತ್ತದೆ.","brand":"Translated by N. P. Shankaranarayana Rao","offers":[{"title":"Default Title","offer_id":42137881280771,"sku":"HB00000183","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at5.10.30PM_1.jpg?v=1638537662"},{"product_id":"civilisations-of-world-kannada-navakarnataka","title":"ಜಗತ್ತಿನ ಮಹಾನ್‌ ನಾಗರಿಕತೆಗಳು","description":"ಭೂಮಿಯ ಮೇಲೆ ಮಾನವನ ಹೆಜ್ಜೆಗುರುತು ಮೂಡಿದಂದಿನಿಂದ, ಆತ ಒಂದೆಡೆ ನಿಲ್ಲದ ವಿಶಾಲ ಭೂಖಂಡದ ಎಲ್ಲೆಡೆಗೂ ವಲಸೆ ಹೊರಟಿದ್ದ. ಆಹಾರ ಹುಡುಕುತ್ತ ನೀರಿನ ಸೆಲೆ ಕಂಡಲ್ಲಿ ತಾತ್ಕಾಲಿಕ ನೆಲೆ ನಿಂತು, ಅಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಇನ್ನೊಂದೆಡೆಗೆ ಸಾಗುತ್ತ ಇಡೀ ಭೂಮಂಡಲವನ್ನೇ ಸುತ್ತಿದ್ದ. ಬೇಟೆಯ ಹಂತದಿಂದ ಕೃಷಿಗೆ ಪಲ್ಲಟಗೊಂಡಾಗ ಆತನ ಈ ವಲಸೆಗೆ ಒಂದು ಕಡಿವಾಣ ಬಿದ್ದಂತಾಗಿ ಒಂದೆಡೆ ನೆಲೆನಿಂತ, ಭೂಮಿಯನ್ನು ಉತ್ತು-ಬಿತ್ತಿ-ಬೆಳೆದು ಮನೆ ಕಟ್ಟಿ ಒಂದೆಡೆ ಸ್ಥಾಯಿಯಾಗಿ ನಿಂತ. ಜೊತೆಗೆ ಪಶುಪಾಲಕನಾದ. ಸಮುದಾಯವೊಂದು ರೂಪುಗೊಂಡು ಅಲ್ಲಲ್ಲಿ ನೆಲೆ ನಿಂತು, ಭೂ ಒಡೆಯನಾಗಿ ಬದಲಾದ. ತಂತಾನೇ ನಾಗರಿಕತೆಯೊಂದು ಉದಯವಾಯಿತು. ಭೂಮಿಯ ಹಲವು ಭಾಗಗಳನ್ನು ಆಕ್ರಮಿಸುತ್ತಿದ್ದಂತೆ, ಇದು ತನ್ನದೆಂಬ ಮೋಹ ಬೆಳೆಯಿತು. ಬಲಶಾಲಿಯು ಮುಂದೆ ಅರಸನಾಗಿ ಸಾಮ್ರಾಜ್ಯಗಳನ್ನೇ ಕಟ್ಟಿ ಚಕ್ರವರ್ತಿಯಾಗಿ ಮೆರೆದು ಯುದ್ಧಗಳನ್ನು ಸಾರಿದ. ಹಲವು ಪ್ರದೇಶಗಳ ನದಿ ತೀರಗಳಲ್ಲಿ ಹಲವಾರು ನಾಗರಿಕತೆಗಳು ಬೆಳೆದವು. ಕೆಲವು ಅಳಿದು ಹೊಸದಾಗಿ ತಲೆಯೆತ್ತಿದವು. ಹೀಗೆ ಈ ಭೂಮಂಡಲದ ಮಹಾನ್ ನಾಗರಿಕತೆಗಳು ಬೆಳೆದು ಬಂದ ರೋಚಕ ಕಥೆಯನ್ನು ಇಲ್ಲಿ ಪರಿಚಯಿಸಲಾಗಿದೆ.","brand":"D. S. Lingaraju","offers":[{"title":"Default Title","offer_id":42138173473027,"sku":"HB00000157","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at7.32.44PM.jpg?v=1638542160"},{"product_id":"gurudeva-mahatma-ramanath-nava","title":"ಗುರುದೇವ ಮತ್ತು ಮಹಾತ್ಮ","description":"ರವೀಂದ್ರನಾಥ ಠಾಕೂರ್ ಮತ್ತು ಗಾಂಧೀಜಿ ಇಬ್ಬರೂ ಮೇರು ಸದೃಶ ವ್ಯಕ್ತಿಗಳು, ಒಬ್ಬರು ಗುರುದೇವ, ಮತ್ತೊಬ್ಬರು ಮಹಾತ್ಮ, ಸ್ವಾತಂತ್ರ್ಯ ಗಳಿಸುವುದಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತೀಯರು ಹೋರಾಡುತ್ತಿದ್ದ ಒಂದು ಬಗೆಯ ತಳಮಳದ ಸನ್ನಿವೇಶದಲ್ಲಿ ಈ ಇಬ್ಬರು ರಂಗದ ಮೇಲೆ ಕಾಣಿಸಿಕೊಂಡರು. ತಮ್ಮದೇ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ 6 ಬೆಂಬಲ, ಸ್ಫೂರ್ತಿ ನೀಡಿದರು. ಮಹಾತ್ಮರದು ಕಾಂಗ್ರೆಸಿನ ಮೂಲಕ ರಾಜಕೀಯ ಕ್ಷೇತ್ರದಲ್ಲಿ, ಗುರುದೇವರದು ತಮ್ಮ ಸ್ಫೂರ್ತಿದಾಯಕ ಕೃತಿಗಳ ಮೂಲಕ ಸಾಂಸ್ಕೃತಿಕ ರಂಗದಲ್ಲಿ ಕಾರ್ಯ ಚಟುವಟಿಕೆ.","brand":"G. Ramnath Bhat","offers":[{"title":"Default Title","offer_id":42139904999683,"sku":"HB00000154","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/d3ece242-e2c9-4456-82fb-ab7f55744f45.jpg?v=1638597775"},{"product_id":"namma-kotegalu-forts-karnataka-kannada-history","title":"ನಮ್ಮ ಕೋಟೆಗಳು","description":"ಕನ್ನಡನಾಡಿನ ಕೋಟೆಗಳ ಬಗ್ಗೆ ಒಂದು ಪುಸ್ತಕ.","brand":"Dr. Santosh Hanagalla","offers":[{"title":"Default Title","offer_id":42140937060611,"sku":"HB00000070","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-04at6.54.03PM_1.jpg?v=1638625137"},{"product_id":"huthathma-matoor-balappa-history-novel-sapna","title":"ಹುತಾತ್ಮ ಅಮಟೂರು ಬಾಳಪ್ಪ","description":"ರಾಣಿ ಚೆನ್ನಮ್ಮನವರ ಆಳ್ವಿಕೆಗೆ ಸಾಕ್ಷಿ ಆಗಿದ್ದ ಅಮಟೂರು ಬಾಳಪ್ಪನವರ ಮೇಲೆ ರಚಿಸಲಾಗಿರುವ ಒಂದು ಐತಿಹಾಸಿಕ ಕಾದಂಬರಿ.","brand":"Y. R. Patila","offers":[{"title":"Default Title","offer_id":42140941091075,"sku":"HB00000067","price":260.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-04at6.54.00PM.jpg?v=1638625674"},{"product_id":"alpasankyaataru-mattu-jaati-vyaveste-kannada-book","title":"ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ","description":"\u003cp\u003eಅರಿವಿನ ವಿಸ್ತರಣೆಗಾಗಿ..\u003cbr data-mce-fragment=\"1\"\u003e\u003cbr data-mce-fragment=\"1\"\u003eಧರ್ಮ ಮತ್ತು ಸಂಪ್ರದಾಯಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಸೃಷ್ಟಿಯಾಗುತ್ತಿರುವ ಅಪನಂಬಿಕೆಗಳು ದೂರವಾಗಬೇಕಾದರೆ,\u003cbr data-mce-fragment=\"1\"\u003eಪ್ರೊ ಮುಜಾಫರ್ ಅಸ್ಸಾದಿಯವರ ಇಂಥ ಪುಸ್ತಕಗಳನ್ನು ನಾವು ಹೆಚ್ಚು ಹೆಚ್ಚು ಓದಬೇಕು.\u003cbr data-mce-fragment=\"1\"\u003eಈ ಪುಸ್ತಕದ ಓದು ಮುಸಲ್ಮಾನರ ಬಗೆಗಿನ ನಮ್ಮ ಅರಿವಿನ ಗಡಿಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ ಪುರುಷೋತ್ತಮ ಬಿಆಮಲೆ\u003c\/p\u003e\n\u003cp\u003eಪ್ರಕಾಶಕರು - ಬಹುರೂಪಿ ಪ್ರಕಾಶನ\u003c\/p\u003e","brand":"Dr. Muzafar Assaadi","offers":[{"title":"Default Title","offer_id":42198091301123,"sku":"HB00000012","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/alpasankyaataru_1.jpg?v=1639304613"},{"product_id":"komuvaada-haagu-bharateeya-itihasa-lekana-kannada-book","title":"ಕೋಮುವಾದ ಹಾಗೂ ಭಾರತೀಯ ಇತಿಹಾಸ ಲೇಖನ","description":"\u003cp\u003e\u003cspan\u003e‘ಕೋಮುವಾದ ಹಾಗೂ-ಭಾರತೀಯ ಇತಿಹಾಸ ಲೇಖನ’ ಇಂಗ್ಲಿಷ್ ಕೃತಿಯ ಕನ್ನಡಾನುವಾದ. ಮೂಲಕೃತಿಯನ್ನು ಇತಿಹಾಸ ತಜ್ಞ ರೊಮಿಲ ಥಾಪರ್, ಹರ್ಬನ್ಸ್ ಮುಖಿಯ, ಬಿಪಿನ್ ಚಂದ್ರ ರಚಿಸಿದ್ದಾರೆ. ಕೆ. ಎಲ್. ಗೋಪಾಲಕೃಷ್ಣ ರಾವ್‌ರವರು ಕನ್ನಡಕ್ಕೆ ಇದನ್ನು ಅನುವಾದಿಸಿದ್ದಾರೆ. \u003c\/span\u003e\u003c\/p\u003e\n\u003cp\u003eಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ.\u003cbr data-mce-fragment=\"1\"\u003e\u003c\/p\u003e","brand":"K. L. Gopalkrishna Rao","offers":[{"title":"Default Title","offer_id":42235247362307,"sku":"HB00001979","price":65.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/komuvaadahaagubharateeyaitihaasalekana_1.jpg?v=1640093158"},{"product_id":"raja-kempegowda-kannada-book","title":"ರಾಜಾ ಕೆಂಪೇಗೌಡ","description":"\u003cp data-mce-fragment=\"1\"\u003eಕೆಂಪೇಗೌಡರ ವಂಶಸ್ಥರನ್ನು ಯಲಹಂಕ ಪ್ರಭುಗಳೆಂದೇ ಕರೆಯಲಾಗುತ್ತದೆ. ಯಲಹಂಕ ನಾಡು ವಿಜಯನಗರದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಫಲವಾಗಿ ಉದಯಿಸಿತು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಕ್ರಿ.ಶ. ಸುಮಾರು 1420 ರಿಂದ 1728ರವರೆಗೆ ಆವತಿ, ಯಲಹಂಕ, ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ಪ್ರಮುಖ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಯಲಹಂಕ ನಾಡಪ್ರಭುಗಳು ರಾಜ್ಯದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ.\u003c\/p\u003e\n\u003cp data-mce-fragment=\"1\"\u003eಈ ಕೃತಿಯ ಮೂಲಕ ಲೇಖಕರು ಕೆಂಪೇಗೌಡರನ್ನು ಓದುಗರಿಗೆ ಪರಿಚಯಿಸಿದ್ದಾರೆ.\u003c\/p\u003e","brand":"Manjunatha Huluvagilu","offers":[{"title":"Default Title","offer_id":42259946569987,"sku":"HB00001927","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/rajakempegowda_1.jpg?v=1640696198"},{"product_id":"kodagina-itihasa-kannad-book","title":"ಕೊಡಗಿನ ಇತಿಹಾಸ","description":"\u003cp\u003eಬ್ರಿಟಿಷರ ಕಾಲದಲ್ಲಿನ ಕೊಡಗಿನ ರಾಜರು ಮತ್ತು ಅವರ ಆಳ್ವಿಕೆಯ ಕುರಿತಾಗಿ ಡಿ. ಎನ್. ಕೃಷ್ಣಯ್ಯರವರು ಸುಂದರವಾಗಿ ಕಟ್ಟಿಕೊಟ್ಟಿರುವ ಪುಸ್ತಕವೇ \"ಕೊಡಗಿನ ಇತಿಹಾಸ\".\u003c\/p\u003e\n\u003cp\u003e\u003cbr\u003e\u003c\/p\u003e","brand":"D. N. Krishnaiah","offers":[{"title":"Default Title","offer_id":42278892372227,"sku":"HB00002069","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kodaginaitihasa_1.jpg?v=1641202617"},{"product_id":"edegalu-heluva-kamnaada-kate-kannada-book","title":"ಎಡೆಗಳು ಹೇಳುವ ಕಂನಾಡ ಕತೆ","description":"ನಾಡಿನ ಜನಗಳಿಗೆ ತಮ್ಮ ನಾಡುನುಡಿಯಲ್ಲಿ ಹೆಮ್ಮೆಹಿಗ್ಗುಗಳು ಕಡಿಮೆಯಾಗುವುದು ಆ ನಾಡಿನ ಅಧೋಗತಿಯ ಪೂರ್ವಸಿದ್ಧತೆ. ಇದು ಕಂನಾಡ ಮೊದಲಿಗರಲ್ಲಿ ಎಂದಿನಿಂದಲೇ ನಡೆದುಹೋಗಿತ್ತು. ದೇವಭಾಷೆ, ಧರ್ಮಭಾಷೆ, ರಾಜಭಾಷೆ ಎಂದು ಮು೦ತಾಗಿ ಕ೦ನುಡಿಯಲ್ಲದ ಮಾತಿಗೇ. ಕಾಲಕಾಲಕ್ಕೆ ಮಹತ್ವವು ಬಂದಿತು; ಬಂದಿದೆ. ಕಂನುಡಿ ಗೌಣಸ್ಥಾನದಲ್ಲಿಯೆ ಇರಬೇಕಾಯಿತು. ಅದರ ಫಲವೇ ನಮ್ಮ ಇಂದಿನ ಗೌಣಸ್ಥಿತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಜನಗಳಿಗೆ ತಮ್ಮ ನಾಡಿನ, ನುಡಿಯ ನಿಜಸ್ವರೂಪದ ತಿಳುವಳಿಕೆಯು ಈವರೆಗೆ ಅವಶ್ಯವೆನಿಸಿರಲಿಲ್ಲ. 'ಕನ್ನಡ'ವೆಂಬುದು ಮೂಲದಲ್ಲಿ ದೇಶದ ಹೆಸರೂ, ಭಾಷೆಯ ಹೆಸರೂ ಎಂಬುದೂ ಮರೆತುಹೋಗಿತ್ತು! ರಾಮಾ, ಬಶ್ಯಾ ಎಂದು ಬಹಳ ದಿನಗಳಿಂದ ಕರೆಯಿಸಿಕೊಳ್ಳುತ್ತಿದ್ದವನಿಗೆ ರಾಮ, ಬಸವಂತನೆಂದು ಯಾರಾದರೂ ವಾದ ಹೇಳಿದರೂ ಆತನಿಗೆ ತನ್ನ ಹೆಸರು ರಾಮ, ಬಸವ೦ತನೆ೦ದು ಸರಿಯಾಗಿ ಹೇಳಲೂ ಸಂಕೋಚವೆನಿಸುವಂತಾಗಿದೆ ನಮ್ಮ ನಾಡಿಗರ ನಮ್ಮ ಪಾಡು. ನಮ್ಮ ನಾಡು, ನುಡಿಗಳ ಶುದ್ಧ ಅರ್ಥವತ್ತಾದ ರೂಪಗಳನ್ನು ಬಳಸುವುದಕ್ಕೂ ಮನಸ್ಸಿನ ಸಿದ್ಧತೆಯಾಗಬೇಕಾಗಿದೆ ಇನ್ನೂ! ಇಂತಿದು ಆರ್ಯರು ಗೆದ್ದು ಸೋತ, ಕಂನಾಡ ಮೊದಲಿಗರ ಸೋತು ಗೆದ್ದ ಸಂಕ್ಷಿಪ್ತ ಕತೆ. \n\u003cdiv id=\"gtx-trans\" style=\"position: absolute; left: 409px; top: 208px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. Sham. Ba. Jois","offers":[{"title":"Default Title","offer_id":42330178388227,"sku":"HB00002149","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kamnaadakate_1.jpg?v=1642162511"},{"product_id":"prachina-bharatadalli-jaatigala-ugama-kanna-book","title":"ಪ್ರಾಚೀನ ಭಾರತದಲ್ಲಿ ಜಾತಿಗಳ ಉಗಮ","description":"ಜಾತಿ ಎಂಬುದು ಭಾರತದ ಒಂದು ವಿಶಿಷ್ಟ ಸಾಮಾಜಿಕ ವ್ಯವಸ್ಥೆ. ಅದು ಬೇರೆ ಎಲ್ಲಿಯೂ ಇಲ್ಲದ ಒಂದು ವ್ಯವಸ್ಥೆಯೆಂದೂ ಕೆಲವರು ಹೇಳುತ್ತಾರೆ. ಜಾತಿ ಪದ್ಧತಿಯ ಬಗ್ಗೆ ಬೆಳಕು ಚೆಲ್ಲದ ಭಾರತೀಯ ಇತಿಹಾಸದ ಬರವಣಿಗೆಯು ನಮ್ಮ ನಾಡಿನ ವಾಸ್ತವಿಕತೆಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e* ಲೇಖಕರಾದ ಇರ್ಫಾನ್ ಅವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರು, ಅವರು ಮಧ್ಯಕಾಲೀನ ಭಾರತದ ಐತಿಹಾಸಿಕ-ಆರ್ಥಿಕ ಸಾಮಾಜಿಕ ಪರಿಸ್ಥಿತಿ ಬಗ್ಗೆ ಹಲವು ಸಂಶೋಧನ ಕೃತಿಗಳನ್ನು ರಚಿಸಿದ್ದಾರೆ. ಅವರೊಬ್ಬ ಮಾರ್ಕ್ಸ್‌ವಾದಿ. ಮುಂಬಯಿ ವಿಶ್ವವಿದ್ಯಾನಿಲಯದ ಡಿ. ಡಿ. ಕೊಸಾಂಬಿ ಸ್ಮಾರಕ ಉಪನ್ಯಾಸ ಮಾಲೆಯಲ್ಲಿ ಹಜೀಬ್ ಅವರು 1985ರಲ್ಲಿ ನೀಡಿದ್ದ. Caste and Money in Indian History ಎಂಬ ಉಪನ್ಯಾಸದ ಮೊದಲನೆಯ ಭಾಗ ಇದಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿಯನ್ನು ಅನುವಾದಿಸಿದವರು ದಿವಂಗತ ಬಿ. ವಿ. ಕಕ್ಕಿಲ್ಲಾಯರು, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕ ನಿರ್ದೇಶಕರಲ್ಲೊಬ್ಬರಾಗಿದ್ದ ಇವರು ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ ಹಾಗೂ ಅನುವಾದಿಸಿದ್ದಾರೆ. ಇವರು ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.\u003cbr data-mce-fragment=\"1\"\u003e","brand":"B. V. Kakkillaya","offers":[{"title":"Default Title","offer_id":42372118806787,"sku":"HB00002156","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d001a911-556a-4f93-a926-040ed28b43e4.jpg?v=1642751833"},{"product_id":"shravana-belagola-kannada-book","title":"ಯುಗಯಾತ್ರೀ ಶ್ರವಣಬೆಳಗೊಳ","description":"ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ವಿಚಾರಪಟ್ಟ ಕ್ಷುಲ್ಲಕದೀಕ್ಷೆ ಕೈಗೊಂಡುದು12-12-1969ರಂದು. 12-12-2019ನೆಯ ತೇದಿಗೆ 50 ವರ್ಷ. ಪೂಜ್ಯಶ್ರೀಗಳು ಸಂಸಾರದಿಂದ ಸನ್ಯಾಸಮಾರ್ಗಕ್ಕೆ ಹೊರಳು ದಾರಿಯಲ್ಲಿ ಬಂದು ನಿಂತ ಸ್ಥಿತ್ಯಂತರದ ಸುವರ್ಣ ಮಹೋತ್ಸವವನ್ನು ಸ್ಮರಣೀಯವಾಗಿಸುವ ಪ್ರಯತ್ನದ ಫಲವಾಗಿ ಮೈತಳೆದರು ಈ ಯುಗಯಾತ್ರಿ ಶ್ರವಣಬೆಳಗೊಳ ಸಂಭಾವನ ಗ್ರಂಥ. ವಿಶ್ವವಿಖ್ಯಾತ ಬಾಹುಬಲಿಯ ಬೃಹನ್ಮೂರ್ತಿಗೆ ಅವಿಸ್ಮರಣೀಯ ಮಹಾಮಸ್ತಕಾಭಿಷೇಕವಸಗಿ ಶ್ರವಣಬೆಳಗೊಳವನ್ನು ಜಗತ್ತಿನ ಭೂಪಟದಲ್ಲಿ ಹೊಳೆಯುವಂತೆ ಮಾಡಿದ \u003cspan data-mce-fragment=\"1\"\u003eಸ್ವಸ್ತಿಶ್ರೀ\u003c\/span\u003e \u003cspan data-mce-fragment=\"1\"\u003eಚಾರುಕೀರ್ತಿ\u003c\/span\u003e ಭಟ್ಟಾರಕ ಪಟ್ಟಾಚಾರ್ಯರಿಗೆ ಇದು ಗೌರವ ನಮನ, ಯುಗಪುರುಷರೆನಸಿರುವ 'ಚಾರುಶ್ರೀ'ಗಳಿಗೆ ಯುಗಯಾತ್ರೀ ಶ್ರವಣಬೆಳಗೊಳ ಅಕ್ಷರಾಭಿಷೇಕ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರವಣಬೆಳಗೊಳದ ಹಾಸು ಬೀಸು ಕುರಿತು ಏನು ಹೇಳಿದರೂ ಇನ್ನೂ ತುಸು ಉಳಿದೇ ಇರುತ್ತದೆ. ಬೆಳಗೊಳದಲ್ಲಿ ಕಲ್ಲು ಬಂಡೆಗಳೂ ಮಾತಾಡುತ್ತವೆ. ಅಡಿಯಿಟ್ಟ ಕಡೆ ಅಕ್ಕರಗಳು ಉಲಿಯುತ್ತವೆ. ಸುಳಿದ ಗಾಳಿಯಲ್ಲೂ ಶಾಸನಗಳು ತೇಲಾಡುತ್ತ ಋಷಿಮುನಿ ಕಂತಿಯರ, ರಾಜರಾಣಿ ಸಚಿವ ಸೇನಾನಿಗಳ ಯಶೋಗಾಥೆಯನ್ನು ನಿನದಿಸುತ್ತವೆ. ಬೆಳುಗೊಳ ಒದಗಿಸಿರುವ ಸಾವಿರಾರು ವರ್ಷಗಳ ಸಾಮಗ್ರಿಯನ್ನೂ ಮಹತ್ವವನ್ನೂ ಕುರಿತು ಕಳೆದ ನೂರಾರು ವರ್ಷಗಳಲ್ಲಿ ಅಚ್ಚಾಗಿರುವ ಬಹುಮಟ್ಟಿನ ಲೇಖನಗಳನ್ನು ಇಲ್ಲಿ ಅಳವಡಿಸಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರವಣಬೆಳಗೊಳ ಭಾರತದ, ಅದರಲ್ಲಿಯೂ ದಕ್ಷಿಣ ಭಾರತದ, ಇನ್ನೂ ವಿಶೇಷವಾಗಿ ಕರ್ನಾಟಕದ ಇತಿಹಾಸ, ಧರ್ಮ, ಸಂಸ್ಕೃತಿ, ವಾಸ್ತುಶಿಲ್ಪ, ಶಾಸನ, ಲಿಪಿಶಾಸ್ತ್ರ, ಸಾಹಿತ್ಯ ಕುರಿತ ಮಾಹಿತಿಗಳ ತಲಕಾವೇರಿ. ಸಾವಿರಾರು ವರ್ಷಗಳ ನಿರಂತರ ಚರಿತ್ರೆಯ ಆಯಾಮ, ಅನನ್ಯತೆ ಕುರಿತು ಕೃತಿಗಳೂ ಬಿಡಿಬಿಡಿ ಬರೆಹಗಳೂ ಕನ್ನಡ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಹೊರಬಂದಿವೆ. ಕೆಲವು ಅಮೂಲ್ಯ ಲೇಖನಗಳು ನಾನಾ ಪುಸ್ತಕಗಳಲ್ಲಿ, ಸಂಪುಟಗಳಲ್ಲಿ, ನಿಯತ ಕಾಲಿಕೆಗಳಲ್ಲಿ ಚದರಿ ಹೋಗಿವೆ. ಆಸಕ್ತ ಅಭ್ಯಾಸಿಗಳ ಓದಿಗೆ ಇಂತಹ ಅಲಭ್ಯ ಹಾಗೂ ಅಪರೂಪದ ಬರೆಹಗಳು ಇಲ್ಲಿ ಸುಲಭವಾಗಿ ಸಿಗುತ್ತವೆ.\u003cbr data-mce-fragment=\"1\"\u003e\n\u003cdiv id=\"gtx-trans\" style=\"position: absolute; left: 40px; top: 446px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Sapna Book House","offers":[{"title":"Default Title","offer_id":42400898154755,"sku":"HB00002194","price":650.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_72d67ec8-48de-4fdb-abbb-da5210387e43.jpg?v=1643449443"},{"product_id":"basavasi-mattu-kadambara-itihasa-kannada-book","title":"ಬನವಾಸಿ ಮತ್ತು ಕದಂಬರ ಇತಿಹಾಸ","description":"ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ನಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ' ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ. ಪ್ರಸ್ತುತ ಮಂಗಳೂರಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು 'ಬನವಾಸಿ ಮತ್ತು ಕದಂಬರ ಇತಿಹಾಸ\" ಎಂಬ ಈ ಕೃತಿಯಲ್ಲಿ ಬನವಾಸಿ ಪ್ರದೇಶದ ಐತಿಹಾಸಿಕ ಹಿನ್ನೆಲೆ ಹಾಗೂ ಕನ್ನಡದ ಪ್ರಥಮ ಸಾಮ್ರಾಜ್ಯ ಸ್ಥಾಪಕರೆನಿಸಿದ ಕದಂಬರ ಕುರಿತು ಸಮಗ್ರ ಮಾಹಿತಿಯನ್ನು ವಸ್ತುನಿಷ್ಠವಾಗಿ ಉಲ್ಲೇಖಿಸಿರುತ್ತಾರೆ. ಈ ಕೃತಿಯಲ್ಲಿ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಕುರಿತಾಗಿದ್ದ ಪೂರ್ವಾಗ್ರಹಗಳು, ಗೊಂದಲಗಳನ್ನು ನಿವಾರಿಸಿ ಸ್ಪಷ್ಟತೆಯ ಆವರಣಕ್ಕೊಳಪಡಿಸಿದ್ದಾರೆ. ಅಂತೆಯೇ ಕದಂಬರ ರಾಜಕೀಯ ಇತಿಹಾಸ, ಬನವಾಸಿಯಲ್ಲಿ ನಡೆದ ಉತ್ಪನನಗಳು, ಕದಂಬರ ಶಾಸನಗಳ ಕುರಿತು ಈ ಕೃತಿಯಲ್ಲಿ ಮಾಹಿತಿಗಳಿವೆ. ಕನ್ನಡ ನಾಡನ್ನು ಪ್ರೀತಿಸುವ, ಆರಾಧಿಸುವ ಪ್ರತಿಯೊಬ್ಬರ ಮನೆ ಮತ್ತು ಮನಗಳಲ್ಲಿ ಇರಬೇಕಾದ ಕೃತಿ ಇದಾಗಿದೆ.","brand":"Lakshmish Hegde Sondha","offers":[{"title":"Default Title","offer_id":42500041933059,"sku":"HB00002295","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-02-22at13.20.28.jpg?v=1645516880"},{"product_id":"karnatakada-punyakshetragalu-kannada-book","title":"ಕರ್ನಾಟಕದ ಪುಣ್ಯಕ್ಷೇತ್ರಗಳು","description":"\u003cp\u003eಸಾಹಿತ್ಯ ಪೋಷಣೆ ಹಾಗೂ ಸಾಹಿತ್ಯ ನಿರ್ಮಾಣದ ಮೂಲಕ ಉತ್ಸಾಹಶೀಲ ಶ್ರೀ ದೊಡ್ಡೆಗೌಡರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಪೂರ್ವವಾದದ್ದು. ಈಗ ಪ್ರಕಟವಾಗುತ್ತಿರುವ ಐದು ಗ್ರಂಥಗಳು ನಾಡಿನ ಸಾಂಸ್ಕೃತಿಕ - ಸಾಹಿತ್ಯಿಕ ವೈಭವದ ಕೈಪಿಡಿಗಳಂತಿದ್ದು, ಪ್ರತಿಯೊಬ್ಬ ಕನ್ನಡಿಗನೂ ಅತ್ಯಗತ್ಯವಾಗಿ ತಿಳಿದುಕೊಳ್ಳಬೇಕಾದ ಮೌಲಿಕ ವಿಷಯಗಳು ಅವುಗಳಲ್ಲಿ ಅಡಕಗೊಂಡಿವೆ. ನಾಡನ್ನು ಕಟ್ಟುವಲ್ಲಿ, ತುಂಬು ಜೀವನವನ್ನು ನಡಸುವಲ್ಲಿ ಆಸಕ್ತರಾಗಿರುವ ಯುವಕರಿಗೆ ಇವು ಉಪಯುಕ್ತ ದಾರಿದೀಪಗಳಂತಿವೆ.\u003c\/p\u003e\n\u003cp\u003e-ದೇಜಗೌ\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr\u003e\u003c\/p\u003e\n\u003cdiv id=\"gtx-trans\" style=\"position: absolute; left: -14px; top: 198.75px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"R. D. G.","offers":[{"title":"Default Title","offer_id":42524127887619,"sku":"HB00002313","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1e074a3a-a2b6-4bdd-a927-d998191f5105.jpg?v=1646047448"},{"product_id":"namma-naadu-karnataka-kannada-history-book","title":"ನಮ್ಮ ನಾಡು ಕರ್ನಾಟಕ","description":"\u003cp\u003eಕರ್ನಾಟಕವನ್ನು ಅರಿಯುವುದು ಹೇಗೆ? ಅದಕ್ಕೆ ಒದಗುವ ಸಹಾಯಕ ಸಾಹಿತ್ಯ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭವಲ್ಲ. ಪ್ರತಿಯೊಬ್ಬ ಕನ್ನಡಿಗನೂ ವಿದ್ವಾಂಸನಾಗಿ, ಸಂಶೋಧಕನಾಗಿ ಇರಲು ಸಾಧ್ಯವಿಲ್ಲ. ಹೆಬ್ಬೊತ್ತಿಗೆಗಳನ್ನು ಓದಿ ವಿಷಯಗಳನ್ನು ಸಂಗ್ರಹಿಸುವುದೂ ಸಾಧ್ಯವಿಲ್ಲ. ಪ್ರೌಢಶಾಲೆಯ ಶಿಕ್ಷಣವನ್ನೊ, ಪದವಿಪೂರ್ವ ತರಗತಿಗಳ ಓದನ್ನೂ ಪಡೆದಿರುವ ಕನ್ನಡಿಗನಿಗೆ ತನ್ನನ್ನು ತನ್ನ ಪರಂಪರೆಯನ್ನು ಅರಿತುಕೊಳ್ಳಲು ಇರುವ ಸಾಧನ ಸಂಪತ್ತು ಯಾವಾಗಲೂ ವಿರಳವಾದದ್ದೆ. ಅಂಥ ಸಂಪತ್ತು ಅಧಿಕೃತವೆನ್ನಿಸಿರುವುದು ಇನ್ನೂ ವಿರಳ. ಈ ದಿಸೆಯಲ್ಲಿ ಪ್ರಕಟಗೊಂಡಿರುವ ಒಂದು ಪುಸ್ತಕ 'ನಮ್ಮ ನಾಡು ಕರ್ನಾಟಕ'.\u003c\/p\u003e\n\u003cp\u003eಕರ್ನಾಟಕದ ಪರಂಪರೆ ಎಷ್ಟು ವಿಸ್ತಾರವಾದದ್ದು, ಶ್ರೀಮಂತವಾದದ್ದು ಎಂದರೆ ಅದನ್ನೆಲ್ಲ ಒಂದು ಕೈಪಿಡಿಯನ್ನಾಗಿ ಭಟ್ಟಿ ಇಳಿಸುವುದು ಸುಲಭವಾದ ಕೆಲಸವಲ್ಲ. ಆ ಕೆಲಸಕ್ಕೆ ಕೈ ಹಾಕುವವರಿಗೆಲ್ಲ ಎದುರಾಗುವ ದೊಡ್ಡ ಸಮಸ್ಯೆಯೆಂದರೆ, ಯಾವುದನ್ನು ಬಿಡುವುದು, ಯಾವುದನ್ನು ಹಿಡಿಯುವುದು ಎಂಬ ಆಯ್ಕೆಯದು. ಪರಂಪರೆಯನ್ನು ಪ್ರತಿನಿಧಿಸುವ ಎಲ್ಲ ಮುಖಗಳನ್ನೂ ಚೆನ್ನಾಗಿ ಅರಿತವರು ಮಾತ್ರವೇ ಈ ಕೆಲಸವನ್ನು ಮಾಡಬಲ್ಲರು. ಆಯ್ದುಕೊಂಡದ್ದನ್ನು ಆಕರ್ಷಕವಾಗಿ, ಪರಿಣಾಮಕಾರಿಯಾಗಿ ನಿರೂಪಿಸುವುದು ಮತ್ತೊಂದು ಮಜಲು. ಆದ್ದರಿಂದ ಗ್ರಹಿಕೆಯಲ್ಲಿ ಹಾಗೂ ಅಭಿವ್ಯಕ್ತಿಯಲ್ಲಿ ಪರಿಣತರಾದವರಷ್ಟೇ ಇಂಥ ಕೈಪಿಡಿಗಳನ್ನು ರಚಿಸಬಲ್ಲರು. ನಮ್ಮ ನಾಡಿನ ಬಗೆಗೆ ಸೂಕ್ತ ತಿಳುವಳಿಕೆ ಕೊಡಬಲ್ಲ ಒಂದು ಪುಸ್ತಕವನ್ನು ರಚಿಸಿರುವ ಡಾ|| ಎಚ್. ಎಸ್. ಗೋಪಾಲ ರಾಯರು ಈ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಿದ್ದಾರೆ. ನಮ್ಮ ನಾಡು ಕರ್ನಾಟಕ' ಎಂಬ ಅವರ ಈ ಪುಸ್ತಕ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ತಕ್ಕಷ್ಟು ಚಿಕ್ಕ ವ್ಯಾಪ್ತಿಯಲ್ಲಿ ತುಂಬ ಸಮರ್ಪಕವಾಗಿ ನಿರೂಪಿಸುತ್ತದೆ ಎನ್ನುವುದು ಸಂತೋಷದ ಸಂಗತಿ.\u003cbr\u003e\u003cbr\u003e-ಹಾ. ಮಾ. ನಾಯಕ (ಕರ್ಮವೀರ, 30-1-1994)\u003c\/p\u003e\n\u003cp\u003eಕೃತಿಯ ಲೇಖಕರು ಎಚ್. ಎಸ್. ಗೋಪಾಲ ರಾವ್ : ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಇತಿಹಾಸಕಾರ, ಕರ್ನಾಟಕದ ಇತಿಹಾಸ ಮತ್ತು ಶಾಸನಗಳ ಸಂಶೋಧಕ. ಸುದೀರ್ಘ ಕಾಲ ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ಉದ್ಯೋಗ, ಸ್ವಯಂ ನಿವೃತ್ತಿ ಪಡೆದು ಈಗ ಪೂರ್ಣವಾಗಿ ಶಾಸನಗಳ ಸಂಶೋಧನೆ ಮತ್ತು ಬರವಣಿಗೆಯಲ್ಲಿ ಇವರು ತೊಡಗಿಕೊಂಡಿದ್ದಾರೆ. ಇವರು ಹಲವು ವರ್ಷಗಳ ಕಾಲ ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದರು. 'ರಾಶಿ', 'ಕರ್ನಾಟಕ ಏಕೀಕರಣ ಇತಿಹಾಸ' 'ಸಮಗ್ರ ಕರ್ನಾಟಕ ದರ್ಶನ', ಮುಂತಾದ ಇವರ ಪ್ರಮುಖ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ಪ್ರಮುಖ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಇವರು ಕಾದಂಬರಿಕಾರರೂ ಆಗಿದ್ದಾರೆ.\u003c\/p\u003e","brand":"Dr. H. S. Gopal Rao","offers":[{"title":"Default Title","offer_id":42728841871619,"sku":"HB00002525","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_a9643b8a-281a-48a2-9267-8548d2832d7c.jpg?v=1650549577"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/History.jpg?v=1658921742","url":"https:\/\/harivubooks.com\/collections\/history-books-kannada.oembed?page=8","provider":"Harivu Books","version":"1.0","type":"link"}