{"title":"Historical Fiction \u0026 Non-Fiction","description":"","products":[{"product_id":"kari-siri-yaana","title":"ಕರಿಸಿರಿಯಾನ","description":"\u003cp\u003eಇದು ಡಾ. ಕೆ.ಎನ್.ಗಣೇಶಯ್ಯ ರವರ ರೋಚಕ ಕಾದಂಬರಿಗಳಲ್ಲೊಂದು. ಇದರಲ್ಲಿ ವಿಜಯನಗರದ ಅರಸರ ನಿಧಿಯ ಹುಡುಕಾಟ ಇದೆ. ವಿಜಯನಗರ ಸಾಮ್ರಾಜ್ಯದ ಏಳಿಗೆಯ ವಿಶ್ಲೇಷಣೆ, ಪತನದ ಸಮಯದಲ್ಲಿ ವಿಜಯನಗರವನ್ನು ಲೂಟಿ ಮಾಡಿದವರು ಯಾರು , ಅಲ್ಲಿದ್ದ ಸಂಪತ್ತು ಈಗ ಎಲ್ಲಿದೆ, ಎಂಬ ಬಗ್ಗೆ ಊಹಾಪೋಹಗಳೂ ಇಲ್ಲಿವೆ. ವಿಜಯನಗರದ ಅರಸರ ಮನೆತನದ ದೈವವಾದ ಪಂಪಾವಿರೂಪಾಕ್ಷನ ಬದಲಿಗೆ ತಿರುಪತಿಯ ವೆಂಕಟೇಶನನ್ನು ಕುಲದೈವವನ್ನಾಗಿ ಮಾಡಿಕೊಂಡು ಅಲ್ಲಿಗೆ ಕೊಟ್ಟ ದಾನಗಳ ಕುರಿತು, ತಿರುಪತಿಯ ವೆಂಕಟೇಶನ ಮೂರ್ತಿಯ ಕುರಿತು ಕುತೂಹಲಕರ ವಿಷಯಗಳೂ ಇಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಸತ್ಯಸಂಗತಿಗಳನ್ನು ಕಲ್ಪನೆಯೊಂದಿಗೆ ರೋಮಾಂಚಕವಾಗಿಸುವಂತೆ ಸಂಯೋಜಿಸಿದ್ದಾರೆ ಈ ಲೇಖಕರು.\u003c\/p\u003e","brand":"K. N. Ganeshaiah","offers":[{"title":"Default Title","offer_id":42020603691267,"sku":"HB00001882","price":285.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_de538ca5-9c20-4ee3-ac4a-760e95c616bb.jpg?v=1636356196"},{"product_id":"chenna-bhaira-devi","title":"ಚೆನ್ನಭೈರಾದೇವಿ","description":"\u003cp\u003e\u003cspan id=\"freeText5976820997433506772\" data-mce-fragment=\"1\"\u003eಲೇಖಕ ಡಾ. ಗಜಾನನ ಶರ್ಮ ಅವರು ಬರೆದ ಐತಿಹಾಸಿಕ ಕಾದಂಬರಿ \"ಚೆನ್ನಭೈರಾದೇವಿ\". ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿಯ ಅಕಳಂಕ ಚರಿತೆ ಈ ಕೃತಿ. ಸಾಹಿತಿ ಜೋಗಿಯವರು ಈ ಕೃತಿಗೆ ಬೆನ್ನುಡಿ ಬರೆದು,\"ಚೆನ್ನಭೈರಾದೇವಿ\"ಯ ಬದುಕಿನ ಅಪರೂಪದ ಘಟನೆಗಳನ್ನು ತಂದು ಕಾದಂಬರಿಕಾರರು ನಮ್ಮ ಮುಂದಿಟ್ಟಿದ್ದಾರೆ. ಪುಟಪುಟದಲ್ಲೂ ರೋಮಾಂಚನಗೊಳಿಸುವ ವಿವರಗಳ ಜತೆಗೇ ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ, ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇತ್ತಿಚಿನ ಮೂರು ನಾಲ್ಕು ದಶಕಗಳಲ್ಲಿ ನಾನು ಇಷ್ಟು ಸಮೃದ್ಧವಾದ ಪ್ರಾಮಾಣಿಕವಾದ ಐತಿಹಾಸಿಕ ಕಾದಂಬರಿಯನ್ನು ಓದಿಲ್ಲʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.\u003c\/span\u003e\u003cspan data-mce-fragment=\"1\"\u003e \u003cbr\u003e\u003c\/span\u003e\u003c\/p\u003e","brand":"Dr. Gajanana Sharma","offers":[{"title":"Default Title","offer_id":42020613685507,"sku":"HB00001755","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_d09c1a7c-6511-4298-b5a5-e58ed9550ac0.jpg?v=1636356430"},{"product_id":"channa-basava-nayaka","title":"ಚನ್ನಬಸವನಾಯಕ","description":"","brand":"Srinivasa","offers":[{"title":"Default Title","offer_id":42020624826627,"sku":"HB00001623","price":700.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/channabasavanayaka_0001.jpg?v=1636356677"},{"product_id":"shilaakula-valase","title":"ಶಿಲಾಕುಲ ವಲಸೆ","description":"\u003cspan data-mce-fragment=\"1\"\u003eಸಸ್ಯ ವಿಜ್ಞಾನಿಯಾಗಿ ಜೀವ ಸಂಕುಲಗಳ ತೌಲನಿಕ ಅಧ್ಯಯನ ನಡೆಸುವ ಕೆ. ಎನ್. ಗಣೇಶಯ್ಯ ಅವರ ದೇವರ ವಿಕಾಸದ ಕುರಿತ ಕಾದಂಬರಿ ಇದಾಗಿದೆ. ಆರ್ಯ ಮತ್ತು ದ್ರಾವಿಡರ ಸಂಬಂಧಗಳ ಬಗ್ಗೆ ಆಧಾರದ ಅಂಶಗಳನ್ನು ಕತೆಯ ಮೂಲಕ ಇಲ್ಲಿ ನೀಡಿದ್ದಾರೆ.\u003c\/span\u003e","brand":"Dr. K. N. Ganeshaiah","offers":[{"title":"Default Title","offer_id":42020633313539,"sku":"HB00001511","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4093.jpg?v=1636356882"},{"product_id":"raktasikta-ratna","title":"ರಕ್ತಸಿಕ್ತ ರತ್ನ","description":"\u003cp data-mce-fragment=\"1\"\u003eಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗಾನ್ ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ದು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮಾ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮಾ ದೇಶದ ಭೌದ್ಧ ಗುರು, ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.\u003c\/p\u003e\n\u003cp data-mce-fragment=\"1\"\u003eಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ, ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನೀತಾ ಅವರ ಜೊತೆಗೂಡಿ ಕೈಗೊಂಡ ಶೋಧದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ, ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣ ಅಗುವುದರ ಜೊತೆಗೆ ಅತ್ಯಂತ ಬೆಲೆಬಾಳುವ ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗುತ್ತದೆ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020638720259,"sku":"HB00001434","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4051.jpg?v=1636357008"},{"product_id":"kanaka-musuku","title":"ಕನಕ ಮುಸುಕು","description":"\u003cp\u003e'ಕನಕ ಮುಸುಕು' ಕನ್ನಡದ ಮಟ್ಟಿಗೆ ಹೊಸದೊಂದು ಮೈಲುಗಲ್ಲು ಎನ್ನುವಂತೆ ಈ ಕಾದಂಬರಿಯಲ್ಲಿ ಅನೇಕ 'ಹೊಸತು'ಗಳಿವೆ. ಮೊದಲನೆಯದಾಗಿ ಗ್ರಂಥಕರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು. ಇನ್ನೂ ವಿಶೇಷವೆಂದರೆ ಇವರು ಕಾರ್ಯನಿರತ ವಿಜ್ಜಾನಿ. ವಾರಕ್ಕೆ ಏಳು ದಿನ ಸಾಲದೆಂಬಂತೆ ಮೈತುಂಬ ಕೆಲಸ ಕಾರ್ಯಗಳನ್ನು ಪೇರಿಸಿಕೊಂಡು ಕ್ಷೇತ್ರ ಸಂಶೋಧನೆ, ಪ್ರಬಂಧ ರಚನೆ, ವಿಶೇಷ ಉಪನ್ಯಾಸ, 'ಏಟ್ರಿ' ಯಂತ ಜನಪರ ಸಂಘಟನೆಯ ಕೆಲಸ, ಅನೇಕ ಸಂಘ ಸಂಸ್ಥೆಗಳಿಗೆ ಸಲಹಾಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ. \u003cbr\u003e\u003cbr\u003eಸೆಟಲೈಟ್ ಚಾನೆಲ್, ಸೆಲ್‌ಫೋನ್, ಈ-ಮೇಲ್, ನೆಟ್ ಚಾಟ್‌ಗಳ ಈ ಯುಗದಲ್ಲಿ ಕಾದಂಬರಿಯ ನಾಯಕಿಯ ಅಂಥದ್ದೇ ಹೈಟೆಕ್‌ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾಟಿಂಗ್ ಮಾಡುತ್ತ ಭೂತ-ಭವಿಷ್ಯಗಳನ್ನು ಬೆಸೆಯುವ ಹರಿಕಾರ್ತಿಯಾಗಿರುವುದು ಇಂಗ್ಲೀಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೊಸ ಕನ್ನಡ ಪೀಳಿಗೆಗೂ ಆಕರ್ಷಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಅದನ್ನು ಸಮಕಾಲೀನ ವಿಜ್ಞಾನಿ ಡಾ. ಕೆ.ಎನ್. ಗಣೇಶಯ್ಯ ತೋರಿಸಿಕೊಟ್ಟಿದ್ದಾರೆ. ಮಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಯಿಸುವಂತೆ ಹೊಸ ದೀವಿಗೆ ಹಚ್ಚಿದ್ದಾರೆ.\u003cbr\u003e\u003cbr\u003e-ನಾಗೇಶ ಹೆಗಡೆ\u003cbr\u003e\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020638785795,"sku":"HB00001433","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3769.jpg?v=1636357010"},{"product_id":"ballikaala-belli","title":"ಬಳ್ಳಿಕಾಳ ಬೆಳ್ಳಿ","description":"\u003cp\u003eಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬಾರದ ಧೀರ ಮಹಿಳೆ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ ಮತ್ತು ಅಂದಿನ ವೈಭವಯುತ ಚರಿತ್ರೆಗೆ ಸಾಕ್ಷಿಯಾಗಿದೆ. ಚೆನ್ನಭೈರಾದೇವಿಯ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದೇ ಅಲ್ಲದೇ ಅಂದಿನ ಭಾರತದ ಮೆಣಸು ಸಾಂಬಾರ ಪದಾರ್ಥಗಳು ಪಾಶ್ಚಾತ್ಯರನ್ನು ಆಕರ್ಷಿಸಿದ ಬಗ್ಗೆ ಹಾಗೂ ಇಟಲಿಯ ಯಾತ್ರಿಕ ಪೆಟ್ರೊ ಡೆಲ್ಲವೆಲ್ಲನ ಭಾರತದ ಸಂಚಾರದ\u003cspan class=\"text_exposed_show\"\u003eಲ್ಲಿನ ಅವರ ಅನುಭವಗಳು ಇತಿಹಾಸದ ಆಕರಗಳಾಗಿವೆ.\u003c\/span\u003e\u003c\/p\u003e\n\u003cp\u003eಜೊತೆಗೆ ತುಳುನಾಡಿನ ಭೂತಾರಾಧನೆಯ ಬಗ್ಗೆ ವಿಶೇಷವಾದ ಮಾಹಿತಿಗಳೊಂದಿಗೆ ತುಳುನಾಡಿನ ಪಾಡ್ದನಗಳು ಓದುಗರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಪಾಡ್ದನಗಳನ್ನು ಒಗಟಿನ ರೀತಿ ಬಿಚ್ಚುತ್ತಾ ಹೋಗುವ ರೀತಿ ಉಸಿರು ಬಿಗಿಹಿಡಿದು ಓದುವಂತಿದೆ. ಇದಿಷ್ಟೇ ಅಲ್ಲದೇ ಲೇಖಕರು ನೀಡುವ ಪ್ರತಿ ಮಾಹಿತಿಗಳಿಗೂ ಆಕರಗಳನ್ನು ಒದಗಿಸಿರುವುದು ವಿಶಿಷ್ಟವಾಗಿದೆ. ಒಟ್ಟಿನಲ್ಲಿ ಕುತೂಹಲ ಕಾದಂಬರಿ ಎಂಬುದರಲ್ಲಿ ಸಂದೇಹವೇ ಇಲ್ಲ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020639342851,"sku":"HB00001426","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3973.jpg?v=1636357020"},{"product_id":"elu-rottigalu","title":"ಏಳು ರೊಟ್ಟಿಗಳು","description":"\u003cp\u003eಏಳು ರೊಟ್ಟಿಗಳು ಕಿರು ಕಾದಂಬರಿಯಾಗಿ ನಿಧಿಯ ಸುತ್ತ ಕಾಡಿನ ನಡುವೆ ಒಂದು ಅನ್ವೇಷಣೆಯಾಗಿದ್ದು, ಓದಿಯಾದ ಮೇಲೆ ಪುಸ್ತಕ ಇಷ್ಟು ಬೇಗ ಮುಗಿದೇ ಹೋಯಿತೇ ಅಂತ ಅನ್ನಿಸದೇ ಇರದು. ಕಥೆಯಲ್ಲಿನ ರೋಚಕತೆ, ಕೆಲವೊಂದೆಡೆ ಭಯದ ಬಿಗಿಯಾದ ವಾತಾವರಣ, ಪತ್ತೆದಾರಿಕೆ, ಇತಿಹಾಸದ ಅಧ್ಯಯನದೊಂದಿಗೆ ಸಂಕೇತ ಭಾಷೆಯಿಂದಿರುವ ನಕ್ಷೆಯನ್ನು ಬೇಧಿಸುವುದು ಬೆರಗುಗಣ್ಣಿನಿಂದ ಓದಲೇಬೇಕು.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020641014019,"sku":"HB00001406","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3755.jpg?v=1636357051"},{"product_id":"mooka-dhaatu","title":"ಮೂಕ ಧಾತು","description":"\u003cp\u003e\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020641276163,"sku":"HB00001402","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4041.jpg?v=1636357056"},{"product_id":"tejo-tungabhadra","title":"ತೇಜೋ ತುಂಗಭದ್ರಾ","description":"\u003cp\u003eಕೆಲವೆಲ್ಲಾ ಕೃತಿಗಳನ್ನು ಓದಿದ ನಂತರ ಹೇಳಲಿಕ್ಕೆ ಏನೆಂದರೆ ಏನೂ ಉಳಿಯುವುದಿಲ್ಲ. ಹೇಳದ ಮೌನದ ಬೆನ್ನಿಗೇ ಸಾಕಷ್ಟು ಮಾತುಗಳು ನುಗ್ಗಿ ಬರುತ್ತವೆ. ಆ ಥರದ ಕಾದಂಬರಿ ಇದು.\u003c\/p\u003e\n\u003cp\u003eಪುಸ್ತಕದ ಸುಮಾರು ನಾಲ್ಕುನೂರಾ ಐವತ್ತು ಪುಟಗಳು ಮುಗಿದು ಹೋಗುತ್ತಿರುವುದು ಗೊತ್ತಾಗದ ಹಾಗೆ ಸಾಗುತ್ತದೆ. ಪ್ರತಿ ಪುಟದಲ್ಲೂ ಲವಲವಿಕೆಯ ಬರವಣಿಗೆ ಕಥೆಯನ್ನು ಜೀವಂತವಾಗಿರಿಸಿದೆ. ಓದಿನ ಆಯಾಸವಾಗದ ಶೈಲಿಯ ನಿರೂಪಣೆ ಪುಸ್ತಕದ ಮತ್ತೊಂದು ಹೆಗ್ಗಳಿಕೆ.\u003c\/p\u003e","brand":"Vasudhendra","offers":[{"title":"Soft Bind","offer_id":47651443409155,"sku":"HB00001385","price":450.0,"currency_code":"INR","in_stock":true},{"title":"Hard Bind","offer_id":47651443441923,"sku":"HB00001386","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TejoTungabhadra.jpg?v=1768814045"},{"product_id":"himalayan-blunder-thriller-novel-rave-belagere-kannada-book","title":"ಹಿಮಾಲಯನ್ ಬ್ಲಂಡರ್","description":"\u003cp\u003eರವಿ ಬೆಳಗೆರೆ ಅವರು ಬರೆದ \u003cb data-path-to-node=\"0\" data-index-in-node=\"22\"\u003eಹಿಮಾಲಯನ್ ಬ್ಲಂಡರ್ (Himalayan Blunder)\u003c\/b\u003e ಪುಸ್ತಕವು ಭಾವನಾ ಪ್ರಕಾಶನದ ಮೂಲಕ ಹೊರಬಂದಿದೆ. ನೀವು ಇದನ್ನು \"ಥ್ರಿಲ್ಲರ್ ಕಾದಂಬರಿ\" ಎಂದು ಉಲ್ಲೇಖಿಸಿದ್ದರೂ, ವಾಸ್ತವವಾಗಿ ಇದು 1962ರ ಭಾರತ-ಚೀನಾ ಯುದ್ಧದ ಹಿನ್ನೆಲೆಯಲ್ಲಿ ಬರೆದ ಒಂದು ಅತ್ಯಂತ ರೋಚಕವಾದ \u003cb data-path-to-node=\"0\" data-index-in-node=\"229\"\u003eಯುದ್ಧ ವಿಶ್ಲೇಷಣೆ ಮತ್ತು ಐತಿಹಾಸಿಕ ಕೃತಿ\u003c\/b\u003e.\u003c\/p\u003e\n\u003cp\u003eಈ ಪುಸ್ತಕವು ಮೂಲತಃ ಬ್ರಿಗೇಡಿಯರ್ \u003cb data-path-to-node=\"4\" data-index-in-node=\"29\"\u003eಜೆ.ಪಿ. ದಳವಿ\u003c\/b\u003e ಅವರು ಇಂಗ್ಲಿಷ್ನಲ್ಲಿ ಬರೆದ \u003ci data-path-to-node=\"4\" data-index-in-node=\"66\"\u003e\"Himalayan Blunder\"\u003c\/i\u003e ಕೃತಿಯಿಂದ ಪ್ರೇರಿತವಾದುದು. ರವಿ ಬೆಳಗೆರೆ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ಯುದ್ಧದ ಆ ಕಹಿ ಸತ್ಯಗಳನ್ನು ಕನ್ನಡಿಗರಿಗೆ ತಲುಪಿಸಲು ಈ ಪುಸ್ತಕವನ್ನು ರೂಪಿಸಿದ್ದಾರೆ.\u003c\/p\u003e","brand":"Ravi Belagere","offers":[{"title":"Default Title","offer_id":42020643897603,"sku":"HB00001366","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4152.jpg?v=1636357117"},{"product_id":"kambaniya-kuyilu","title":"ಕಂಬನಿಯ ಕುಯಿಲು","description":"\u003cp\u003eಚಿತ್ರದುರ್ಗದ ಇತಿಹಾಸವನ್ನು ವಸ್ತುವನ್ನಾಗಿಟ್ಟುಕೊಂಡು ರಚಿತವಾಗಿರುವ ತ. ರಾ.ಸು ಅವರ ಕಾದಂಬರಿಗಳಲ್ಲಿ ಕಂಬನಿಯ ಕುಯಿಲು ಮೊದಲನೆಯದ್ದು. ಕಾದಂಬರಿಯಲ್ಲಿ ಪಾಳೇಗಾರರ ಆಳ್ವಿಕೆಯ ಕಾಲದ ಭವ್ಯಚಿತ್ರಣವಿದೆ.\u003c\/p\u003e","brand":"Ta. Ra. Su.","offers":[{"title":"Default Title","offer_id":42020646158595,"sku":"HB00001339","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3766.jpg?v=1636357158"},{"product_id":"tirugubaana","title":"ತಿರುಗುಬಾಣ","description":"","brand":"Ta. Ra. Su.","offers":[{"title":"Default Title","offer_id":42020646584579,"sku":"HB00001334","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3903.jpg?v=1636357167"},{"product_id":"vijayanagara-samrajya-2","title":"ವಿಜಯನಗರ ಸಾಮ್ರಾಜ್ಯ ಸಂಪುಟ-೨","description":"\u003cp\u003eಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳುಬೀಳುಗಳಿಗೆ ಸಂಬಂಧಿಸಿದ್ದು. ವಿಜಯನಗರ ಸಾಮ್ರಾಜ್ಯದ ಕುರಿತಂತೆ ಮೂಡಿಬಂದ ಎರಡನೆಯ ಸಂಪುಟ. ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.\u003c\/p\u003e","brand":"Aa. Na. Kru.","offers":[{"title":"Default Title","offer_id":42020646781187,"sku":"HB00001331","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4074.jpg?v=1636357171"},{"product_id":"vijayanagara-samrajya-1","title":"ವಿಜಯನಗರ ಸಾಮ್ರಾಜ್ಯ ಸಂಪುಟ-೧","description":"\u003cp\u003eಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳುಬೀಳುಗಳಿಗೆ ಸಂಬಂಧಿಸಿದ್ದು. ವಿಜಯನಗರ ಸಾಮ್ರಾಜ್ಯದ ಕುರಿತಂತೆ ಮೂಡಿಬಂದ ಮೊದಲ ಸಂಪುಟ. ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.\u003c\/p\u003e","brand":"Aa. Na. Kru.","offers":[{"title":"Default Title","offer_id":42020646846723,"sku":"HB00001330","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4073.jpg?v=1636357172"},{"product_id":"kannada-nadina-charitre-2","title":"ಕನ್ನಡ ನಾಡಿನ ಚರಿತ್ರೆ ಭಾಗ-೨","description":"\u003cp\u003e\u003c\/p\u003e","brand":"Dr. S. C. Nandimatha","offers":[{"title":"Default Title","offer_id":42020661920003,"sku":"HB00001232","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3830.jpg?v=1636357399"},{"product_id":"bengalurina-itihasa","title":"ಬೆಂಗಳೂರಿನ ಇತಿಹಾಸ","description":"\u003cp\u003eಬೆಂಗಳೂರು \"ಬೆಂದಕಾಳೂರು\" ಎಂಬ ಹೆಸರಿಂದಾ ಬಂದಿದ್ದಾ? ಅಥವಾ \"ವೆಂಗಳೂರು\" ಅನ್ನುವ ಹೆಸರಿಂದ ಬಂತಾ? ಬೆಂಗಳೂರಿನ ಇತಿಹಾಸದ ಪ್ರತಿಯೊಂದು ಹೆಜ್ಜೆಯ ಗುರುತನ್ನು ದಾಖಲಿಸಿ ಬೆಂಗಳೂರಿನ ಇತಿಹಾಸದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ \"ಬೆಂಗಳೂರಿನ ಇತಿಹಾಸ\". ರಾಜ್ಯ ಸರ್ಕಾರದ ಪತ್ರಾಗಾರಕ್ಕೆ ಹೋಗಿ ಅಲ್ಲಿ ಬೆಂಗಳೂರು ಕುರಿತ ಪತ್ರವ್ಯವಹಾರವನ್ನೆಲ್ಲ ಪರಿಶೀಲಿಸಿ ಕೆಂಪೇಗೌಡರ ಕಾಲದಿಂದ ಇಂದಿನವರೆಗಿನ ಬೆಂಗಳೂರಿನ ಇತಿಹಾಸವನ್ನು ಇಂದಿನ ತಲೆಮಾರಿಗೆ ಕಟ್ಟಿ ಕೊಡುವ ಸಾರ್ಥಕ ಕೆಲಸವನ್ನು ಬ.ನ.ಸುಂದರರಾವ್ ಅವರು ಮಾಡಿದ್ದಾರೆ. ಬೆಂಗಳೂರಿನ ಕುರಿತು ಬಂದಿರುವ ಮಹತ್ವದ ಪುಸ್ತಕಗಳಲ್ಲಿ ಇದೂ ಒಂದು.\u003c\/p\u003e","brand":"B. N. Sundar Rao","offers":[{"title":"Default Title","offer_id":42020670046467,"sku":"HB00001172","price":595.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3980.jpg?v=1636357544"},{"product_id":"maretu-hoda-maha-saamraajya-vijayanagara","title":"ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ","description":"\u003cp\u003eಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ಬಣ್ಣಿಸುತ್ತದೆ. ರಾಬರ್ಟ್ ಸೆವೆಲ್ ಅವರ ಈ ಕೃತಿ ವಿಜಯನಗರದ ಏಳು ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಟ ಅಧ್ಯಯನಕ್ಕೆ ಮಾದರಿಯಾಗಿರುವ ಈ ಕೃತಿಯನ್ನು ಕನ್ನಡಕ್ಕೆ ಸದಾನಂದ ಕನವಳ್ಳಿಯವರು ಅನುವಾದಿಸಿದ್ದಾರೆ.\u003c\/p\u003e","brand":"Robert sevel | Sadananda Kanavalli","offers":[{"title":"Default Title","offer_id":42020679155971,"sku":"HB00001099","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4004.jpg?v=1636357705"},{"product_id":"kitturu-rudrammana-kathe","title":"ಕಿತ್ತೂರು ರುದ್ರಮ್ಮನ ಕಥೆ","description":"ಪ್ರಸ್ತುತ 'ಕಿತ್ತೂರು ರುದ್ರಮನ ಕಥೆ' ಹೆಸರಿನ ಯಕ್ಷಗಾನ ಕೃತಿಯಲ್ಲಿ ನಾಡಿನ ಚರಿತ್ರೆ, ಕಥೆ, ಕವನ, ಕಾವ್ಯ ರೂಪದಲ್ಲಿ ಸಾಹಿತ್ಯಿಕವಾಗಿ, ಶಾಸನ, ನಿರೂಪ ಇತ್ಯಾದಿ ರೂಪಗಳು ದಾಖಲಾತ್ಮಕವಾಗಿ ನಿರೂಪಿಸಲ್ಪಟ್ಟಿರುತ್ತವೆ. ಇಂಥ ಚಿತ್ರ ನಿರ್ಮಾಣದಲ್ಲಿ ಸಾಹಿತ್ಯ ಕೃತಿಗಳ ಕೊಡುಗೆ ಅನನ್ಯವಾಗಿದ್ದು, ಕಲಾತ್ಮಕವಾಗಿ ರಚನೆಯಾದ ಇವುಗಳಲ್ಲಿನ ಚರಿತ್ರೆಯನ್ನು ವಾಸ್ತವ ನೆಲೆಯಲ್ಲಿ ನಿರೂಪಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.","brand":"Dr. K. Ravindranath","offers":[{"title":"Default Title","offer_id":42113643610371,"sku":"HB00000761","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at2.11.13PM.jpg?v=1638007627"},{"product_id":"kapilipisara-thrilling-novel-kannada-ganeshaiah-ankita","title":"ಕಪಿಲಿಪಿಸಾರ","description":"\u003cp\u003eಭಾರತದ ಸಸ್ಯರಾಶಿಯ ಬಗ್ಗೆ ಮಾಹಿತಿ ಖಜಾನೆಯೊಂದನ್ನು ತಯಾರಿಸುತ್ತಿದ್ದಾಗ, ಭಾರತೀಯರೇ ಆದ ಹಿರಿಯರೊಬ್ಬರು ನಮ್ಮಲ್ಲಿಗೆ ಬಂದು, ಆ ಮಾಹಿತಿಯನ್ನು ಮತ್ತು ಅದರ ಮೇಲಿನ ಸಂಪೂರ್ಣ ಅಧಿಕಾರವನ್ನು ಅಪಾರವಾದ ಬೆಲೆಗೆ ಕೊಳ್ಳುವ ಅಭಿಲಾಷೆ ವ್ಯಕ್ತಪಡಿಸಿದ್ದು, ನಮ್ಮೆಲ್ಲರಲ್ಲೂ ಆತೀವ ಆಶ್ಚರ್ಯ ಉಂಟುಮಾಡಿತ್ತು. ನಾವು ಕಲೆಹಾಕಿ ಸಂಸ್ಕರಿಸುತ್ತಿದ್ದ ಮಾಹಿತಿಯ ಉದ್ದೇಶ ಮತ್ತು ಉಪಯೋಗಗಳ ಅರಿವು ನಮಗಿದ್ದರೂ, ಅದು ಅಷ್ಟು ಬೆಲೆ ಬಾಳುವಂತಹುದೆಂದು ತಿಳಿದು ಖುಷಿಯಾಗಿತ್ತು. ಆದರೆ ಇದರ ಬೆನ್ನಲ್ಲಿಯೇ ಹಲವು ವಿದೇಶೀಯರು, ಅದೇ ಮಾಹಿತಿ ಖಜಾನೆಯ ವಾರಸುತನಕ್ಕೆ ಭಾಗಿಯಾಗುವ ಕುತಂತ್ರ ತೋರಿದ್ದು ನಮ್ಮಲ್ಲಿ ಗಾಬರಿಯನ್ನೂ ಉಂಟುಮಾಡಿತ್ತು.\u003c\/p\u003e\n\u003cdiv\u003eಇವೆಲ್ಲದರ ಹಿನ್ನೆಲೆಯಲ್ಲಿ, 'ಕಪಿಲಿಪಿಸಾರ'ದ ಎಳೆಯೊಂದು ನನ್ನಲ್ಲಿ ಬೆಳೆಯತೊಡಗಿದ್ದಂತೆ, ಈ ಎಳೆಯ ಮತ್ತೊಂದು ಆಯಾಮದ ಸೃಷ್ಟಿಯಾದದ್ದು, ಮಾನವನ ಮತ್ತು ಮಂಗಗಳ ವಿಕಾಸದಲ್ಲಿ ಕಂಡುಬರುವ ಮಾನಸಿಕ ಸರಪಳಿಯ ಬಗ್ಗೆ ನನ್ನ ಸಹಪಾಠಿಯೊಬ್ಬರು ನಡೆಸುತ್ತಿದ್ದ ಸಂಶೋಧನೆಯ ಬಗ್ಗೆ ಚರ್ಚಿಸುತ್ತಿದ್ದಾಗ. ಮಂಗಗಳಲ್ಲೂ, ತಾನು, ತನ್ನದು, ಸಾವು, ಜೀವ ಮತ್ತು ಸಾಮಾಜಿಕ ಒಳಿತು, ಕೆಟ್ಟದ್ದು ಎನ್ನುವ ಭಾವನೆಗಳಿರುವ ಸಾಧ್ಯತೆ ಇದ್ದು, ಅವುಗಳ ನಡವಳಿಕೆ ಈ ಅಂಶಗಳಿಂದ ರೂಪಿಸಲ್ಪಡುವುದರಲ್ಲಿ ಆಶ್ಚರ್ಯವಿಲ್ಲ ಎಂಬ ವಾದ, ರಾಮಾಯಣದ ಹನುಮಂತ ಯಾವ ಜನಾಂಗಕ್ಕೆ ಸೇರಿರಬಹುದು? ಅಂಡಮಾನಿನ ಹೆಸರಲ್ಲಿರುವ ಹನುಮಾನ್ ಈ ಪ್ರಶ್ನೆಗೆ ಉತ್ತರ ಒದಗಿಸಬಲ್ಲುದೆ? ಇಂತ ಹಲವು ಪ್ರಶ್ನೆಗಳು, ಇವೆಲ್ಲವೂ ಸೇರಿ 'ಕಪಿಲಿಪಿಸಾರ'ದ ಕತೆಯನ್ನು ಬೆಳೆಸತೊಡಗಿದವು. \u003c\/div\u003e","brand":"Dr. K. N. Ganeshaiah","offers":[{"title":"Default Title","offer_id":42127361310979,"sku":"HB00000393","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_c06e9fa6-8411-4985-9a3d-72803b6e4789.jpg?v=1642660433"},{"product_id":"modern-indian-history-kannada-navakarnataka","title":"ಆಧುನಿಕ ಭಾರತದ ಇತಿಹಾಸ","description":"ಆಧುನಿಕ ಭಾರತದ ಇತಿಹಾಸದ ಬಗ್ಗೆ ಸಮಗ್ರ ಬರವಣಿಗೆ.","brand":"Prof. Bipin Chandra","offers":[{"title":"Default Title","offer_id":42137830719747,"sku":"HEDU0000074","price":390.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at5.10.29PM_1.jpg?v=1638537258"},{"product_id":"civilisations-of-world-kannada-navakarnataka","title":"ಜಗತ್ತಿನ ಮಹಾನ್‌ ನಾಗರಿಕತೆಗಳು","description":"ಭೂಮಿಯ ಮೇಲೆ ಮಾನವನ ಹೆಜ್ಜೆಗುರುತು ಮೂಡಿದಂದಿನಿಂದ, ಆತ ಒಂದೆಡೆ ನಿಲ್ಲದ ವಿಶಾಲ ಭೂಖಂಡದ ಎಲ್ಲೆಡೆಗೂ ವಲಸೆ ಹೊರಟಿದ್ದ. ಆಹಾರ ಹುಡುಕುತ್ತ ನೀರಿನ ಸೆಲೆ ಕಂಡಲ್ಲಿ ತಾತ್ಕಾಲಿಕ ನೆಲೆ ನಿಂತು, ಅಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಇನ್ನೊಂದೆಡೆಗೆ ಸಾಗುತ್ತ ಇಡೀ ಭೂಮಂಡಲವನ್ನೇ ಸುತ್ತಿದ್ದ. ಬೇಟೆಯ ಹಂತದಿಂದ ಕೃಷಿಗೆ ಪಲ್ಲಟಗೊಂಡಾಗ ಆತನ ಈ ವಲಸೆಗೆ ಒಂದು ಕಡಿವಾಣ ಬಿದ್ದಂತಾಗಿ ಒಂದೆಡೆ ನೆಲೆನಿಂತ, ಭೂಮಿಯನ್ನು ಉತ್ತು-ಬಿತ್ತಿ-ಬೆಳೆದು ಮನೆ ಕಟ್ಟಿ ಒಂದೆಡೆ ಸ್ಥಾಯಿಯಾಗಿ ನಿಂತ. ಜೊತೆಗೆ ಪಶುಪಾಲಕನಾದ. ಸಮುದಾಯವೊಂದು ರೂಪುಗೊಂಡು ಅಲ್ಲಲ್ಲಿ ನೆಲೆ ನಿಂತು, ಭೂ ಒಡೆಯನಾಗಿ ಬದಲಾದ. ತಂತಾನೇ ನಾಗರಿಕತೆಯೊಂದು ಉದಯವಾಯಿತು. ಭೂಮಿಯ ಹಲವು ಭಾಗಗಳನ್ನು ಆಕ್ರಮಿಸುತ್ತಿದ್ದಂತೆ, ಇದು ತನ್ನದೆಂಬ ಮೋಹ ಬೆಳೆಯಿತು. ಬಲಶಾಲಿಯು ಮುಂದೆ ಅರಸನಾಗಿ ಸಾಮ್ರಾಜ್ಯಗಳನ್ನೇ ಕಟ್ಟಿ ಚಕ್ರವರ್ತಿಯಾಗಿ ಮೆರೆದು ಯುದ್ಧಗಳನ್ನು ಸಾರಿದ. ಹಲವು ಪ್ರದೇಶಗಳ ನದಿ ತೀರಗಳಲ್ಲಿ ಹಲವಾರು ನಾಗರಿಕತೆಗಳು ಬೆಳೆದವು. ಕೆಲವು ಅಳಿದು ಹೊಸದಾಗಿ ತಲೆಯೆತ್ತಿದವು. ಹೀಗೆ ಈ ಭೂಮಂಡಲದ ಮಹಾನ್ ನಾಗರಿಕತೆಗಳು ಬೆಳೆದು ಬಂದ ರೋಚಕ ಕಥೆಯನ್ನು ಇಲ್ಲಿ ಪರಿಚಯಿಸಲಾಗಿದೆ.","brand":"D. S. Lingaraju","offers":[{"title":"Default Title","offer_id":42138173473027,"sku":"HB00000157","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at7.32.44PM.jpg?v=1638542160"},{"product_id":"namma-kotegalu-forts-karnataka-kannada-history","title":"ನಮ್ಮ ಕೋಟೆಗಳು","description":"ಕನ್ನಡನಾಡಿನ ಕೋಟೆಗಳ ಬಗ್ಗೆ ಒಂದು ಪುಸ್ತಕ.","brand":"Dr. Santosh Hanagalla","offers":[{"title":"Default Title","offer_id":42140937060611,"sku":"HB00000070","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-04at6.54.03PM_1.jpg?v=1638625137"},{"product_id":"immadi-pulakeshi-kannada-book","title":"ಇಮ್ಮಡಿ ಪುಲಕೇಶಿ","description":"\u003cp\u003e\u003cspan data-mce-fragment=\"1\"\u003eಚಾಲುಕ್ಯ ವಂಶದ ಪ್ರಸಿದ್ಧ ದೊರೆ. (ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು. ಕ್ರಿ.ಶ.ಸು. ೫೦೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು.\u003c\/span\u003e\u003c\/p\u003e\n\u003cp\u003eಇದೊಂದು ಇಮ್ಮಡಿ ಪುಲಕೇಶಿ ಕುರಿತ ಐತಿಹಾಸಿಕ ಕಾದಂಬರಿ. ಇದನ್ನು ಬರೆದವರು ಪ್ರಕಾಶ್ ಹೇಮಾವತಿ.\u003c\/p\u003e","brand":"Prakash Hemavathi","offers":[{"title":"Default Title","offer_id":42246212813059,"sku":"HB00001949","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/immadipulakeshi_1.jpg?v=1640339917"},{"product_id":"kodagina-itihasa-kannad-book","title":"ಕೊಡಗಿನ ಇತಿಹಾಸ","description":"\u003cp\u003eಬ್ರಿಟಿಷರ ಕಾಲದಲ್ಲಿನ ಕೊಡಗಿನ ರಾಜರು ಮತ್ತು ಅವರ ಆಳ್ವಿಕೆಯ ಕುರಿತಾಗಿ ಡಿ. ಎನ್. ಕೃಷ್ಣಯ್ಯರವರು ಸುಂದರವಾಗಿ ಕಟ್ಟಿಕೊಟ್ಟಿರುವ ಪುಸ್ತಕವೇ \"ಕೊಡಗಿನ ಇತಿಹಾಸ\".\u003c\/p\u003e\n\u003cp\u003e\u003cbr\u003e\u003c\/p\u003e","brand":"D. N. Krishnaiah","offers":[{"title":"Default Title","offer_id":42278892372227,"sku":"HB00002069","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kodaginaitihasa_1.jpg?v=1641202617"},{"product_id":"punarvasu-kannada-novel","title":"ಪುನರ್ವಸು - ಕಾದಂಬರಿ","description":"\u003cp\u003eವಿಶ್ವೇಶ್ವರಯ್ಯನವರ ಕಾಲಘಟ್ಟ, ಆ ಕಾಲದ ಕಾಡು, ನಿರ್ಮಾನುಷ ಜೋಗದ ಪರಿಸರ, ಸುತ್ತುಮುತ್ತಲ ಹಳ್ಳಿಗಳು, ಕೃಷ್ಣರಾವ್ ವಸುಧಾರ ದಾಂಪತ್ಯ, ಕಡಾಂಬಿ, ಫೋರ್ಟ್ಸ್ ಮುಂತಾದ ಅಧಿಕಾರಿಗಳ ಶ್ರದ್ಧೆ, ತುಂಗಕ್ಕಯ್ಯ, ದತ್ತಪ್ಪ ಹೆಗಡೆ, ಶರಾವತಿ, ಭವಾನಿಯಂಥ ಪಾತ್ರಗಳು, ಲೇಖಕರು ವಿವರಿಸುವ ಮರಗಿಡಗಳು, ಪರಿಸರ ಇವೆಲ್ಲವೂ ಅನನ್ಯ. ಇಲ್ಲಿ ಅನುಭವ ಮತ್ತು ನೆನಪು ಮಿಳಿತಗೊಂಡು ಕಾಲಾತೀತವಾದ ರಸಾನುಭೂತಿಯನ್ನು ಒದಗಿಸುತ್ತದೆ ಅನ್ನುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕಾದಂಬರಿಯಲ್ಲಿ ಲೇಖಕರು ಎರಡು ಮಹತ್ವದ ಮಜಲುಗಳನ್ನು ದಾಟಿದ್ದಾರೆ. ಒಂದು, ನಮಗೆ ಈವರೆಗೆ ಗೊತ್ತಿದ್ದ ಶರಾವತಿಗಿಂತ ಭಿನ್ನವಾದ ಶರಾವತಿಯನ್ನು ತೋರಿಸಿಕೊಟ್ಟಿದ್ದು, ಎರಡು, ಶರಾವತಿಯ ಪರಿಸರದ ಜೊತೆಗೇ ಬದುಕನ್ನು ಹೆಣೆದದ್ದು. ಇವೆರಡೂ ಅವರನ್ನು ವಿಶಿಷ್ಟವಾದ ಕಥನಕಾರರನ್ನಾಗಿ ಮಾಡಿದೆ. ಇಡೀ ಕತೆಯಲ್ಲಿ ಮನೋಲಹರಿಯಷ್ಟೇ ಗಾಢವಾಗಿ ವ್ಯಾವಹಾರಿಕ ವಿವರಗಳೂ ಬರುತ್ತದೆ. ಆ ವಿವರಗಳ ಒಳಗೆ ಈ ವಿವರಗಳು ಸೇರಿಕೊಳ್ಳುವ ಬಗೆ ಸೊಗಸಾಗಿದೆ. ಇಂಥ ಕತೆಗಳು ಕನ್ನಡದಲ್ಲಿ ಅಪರೂಪ, ಇಂಗ್ಲಿಷಿನಲ್ಲಿ ಅನೇಕರು ಹೀಗೆ ವಾಸ್ತವ ಮತ್ತು ಕಲ್ಪನೆಯನ್ನು ಬೆಳೆಯುವ ಕೆಲಸ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಕಥಾಸಾಕ್ಷ್ಯಚಿತ್ರದಂತಿದೆ.\u003cbr data-mce-fragment=\"1\"\u003e\u003c\/p\u003e\n\u003cp\u003e-ಜೋಗಿ\u003c\/p\u003e","brand":"Dr. Gajanana Sharma","offers":[{"title":"Default Title","offer_id":42486696345859,"sku":"HB00002281","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/50660805.jpg?v=1748518052"},{"product_id":"kaanana-janardana-kannada-novel","title":"ಕಾನನ ಜನಾರ್ದನ - ಕಾದಂಬರಿ","description":"\u003cp\u003eಮೇಘಾಲಯದ ಪರ್ವತಗಳ ಮೇಲೆ ಚರಿತ್ರೆಯ ವಿದ್ಯಾರ್ಥಿಗಳಿಗೆ ಶಿಲಾಯುಗದ ಮಾನವನ ಸಂಸ್ಕೃತಿಯ ಪಳೆಯುಳಿಕೆಯೊಂದನ್ನು ಪರಿಚಯಿಸುತ್ತಿದ್ದ ಪಲ್ಲವಿಗೆ ಬಂದ  ಕರೆಯೊಂದು ಆಕೆಯನ್ನು ತಲ್ಲಣಗೊಳಿಸುತ್ತದೆ. ಅಮೆರಿಕದ ಕಂಪನಿಯೊಂದಿಗೆ ಕೈ ಜೋಡಿಸಿದ ಮುಂಬೈನ ಉದ್ಯಮಿಯೊಬ್ಬ ಭಾರತದ ಧಾರ್ಮಿಕ ಮತ್ತು ಸಂವಿಧಾನದ ನಿಲುವನ್ನ ಬದಲಾಯಿಸುವ ಷಡ್ಯಂತ್ರಕ್ಕೆ ಕೈ ಹಾಕುತ್ತಾನೆ. ಕನ್ನಡದ ಕಾದಂಬರಿಕಾರ ನಾಗಯ್ಯನವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಿಂದಾಗಿ ಅವರು ಮೂರ್ಛಾಸ್ಥಿತಿ ತಲುಪುತ್ತಾರೆ. ಆ ಹಲ್ಲೆಯ ಹಿಂದಿನ ರಹಸ್ಯವು ಅವರು ಬರೆದ ಕಾದಂಬರಿಯಲ್ಲಿಯೇ ಅಡಗಿರಬಹುದು ಎಂಬ ಅನುಮಾನ ಮೂಡುತ್ತದೆ. ಆದರ ಮೂರುಸಾವಿರ ವರ್ಷಗಳ ಹಿಂದಿನ ಮಾನವನ ಬಗೆಗಿನ ಆ ಕಾದಂಬರಿಯ ವಸ್ತುವಿಗೂ ಅವರ ಮೇಲೆ ನಡೆದ ಹಲ್ಲೆಗೂ ಯಾವ ರೀತಿಯ ಸಂಬಂಧ ಇರಲು ಸಾಧ್ಯ?\u003cbr data-mce-fragment=\"1\"\u003e\u003cbr data-mce-fragment=\"1\"\u003eಶಿಲಾಯುಗದಲ್ಲಿ ದಕ್ಷಿಣ ಭಾರತದ ಕಾಡಿನಜನ ಪೂಜಿಸುತ್ತಿದ್ದ ಸ್ಥಾನಿಕ ದೈವಗಳ, ಅವರು ನಿರ್ಮಿಸುತ್ತಿದ್ದ ಶಿಲಾವ್ಯೂಹಗಳ ಸುತ್ತ ಹೆಣೆದ ಕಥಾಹಂದರಕ್ಕೂ, ವರ್ತಮಾನದಲ್ಲಿ ನಡೆಯುತ್ತಿರುವ ಜಾಗತಿಕ ಬೆಳವಣಿಗೆಗಳಿಗೂ ಯಾವ ರೀತಿಯ ನಂಟಿರಲು ಸಾಧ್ಯ? ಆ ನಂಟೇ ನಾಗಯ್ಯನವರ ಮೇಲಿನ ಹತ್ಯೆಯ ಪ್ರಯತ್ನಕ್ಕೆ ಕಾರಣವಾಯಿತೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂಥಹ ಹಲವು ಪ್ರಶ್ನೆಗಳ ಸುತ್ತ ಬೆಳೆದ ಈ ಚಾರಿತ್ರಿಕ ಕಾದಂಬರಿಯು ಮೂರು ಸಾವಿರ ವರ್ಷಗಳ ಹಿಂದೆ ದಕ್ಷಿಣ ಭಾರತದ ಕಾಡುಗಳಲ್ಲಿ ನೆಲೆಯಾಗಿದ್ದ ಶಿಲಾಯುಗದ ಮಾನವನ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳ ವಿಕಾಸದ ಬಗ್ಗೆ ಒಂದು ಕಿರುನೋಟವನ್ನು ಕಟ್ಟಿಕೊಡುತ್ತದೆ. ಕನ್ನಡ ಕಾದಂಬರಿ ಲೋಕದಲ್ಲಿಯೇ ಒಂದು ಅನನ್ಯ ಪ್ರಯತ್ನ 'ಕಾನನ ಜನಾರ್ದನ'.\u003cbr data-mce-fragment=\"1\"\u003e\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42570349248771,"sku":"HB00002326","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_57e47a9a-a6c1-4503-b054-0f88f7163bf2.jpg?v=1647151560"},{"product_id":"aurangazeba-historical-novel-kannada-book","title":"ಔರಂಗಜೇಬ","description":"ಅತ್ಯಂತ ವಿವಾದಸ್ಪದ ವ್ಯಕ್ತಿಯಾಗಿದ್ದ ಔರಂಗಜೇಬ, ತನ್ನ ಕಾಲದಲ್ಲಿ ತಾನು ಯಶದಿಂದ ಯಶದ ಕಡೆಗೆ ಸಾಗುತ್ತಿದ್ದೇನೆಂದು ಭಾವಿಸಿದರೂ ಅವನು ಯಶಸ್ಸಿಗಾಗಿ ಹಿಡಿದ ಹಾದಿ, ತಳೆದ ಧೋರಣೆಗಳು ಮುಘಲ್ ಸಾಮ್ರಾಜ್ಯದ ಅವನತಿಗೆ ಹೇಗೆ ಕಾರಣವಾದುವೆಂಬುದು ಇತಿಹಾಸ ಓದಿದವರಿಗೆಲ್ಲ ತಿಳಿದ ವಿಷಯ. ಪರಮತ ಸಹಿಷ್ಣುವೂ ಉದಾರ ಹೃದಯನೂ ಆದ ದಾರಾ ಶೊಕೋ ಸರ್ವಧರ್ಮ ಸಮನ್ವಯದ ತತ್ವವನ್ನು ಪ್ರತಿಪಾದಿಸುವ ಪುಸ್ತಕವೊಂದನ್ನು ಪ್ರಕಟಿಸಿದಾಗ, ಅವನು ಇಸ್ಲಾಂ ದ್ರೋಹಿ ಎಂದು ಪ್ರಚಾರ ಆರ೦ಭಿಸಿ, ಅವನನ್ನು ಬಗ್ಗು ಬಡಿಯಲು ಮುಘಲ್ ಸೇನಾನಿಗಳೆಲ್ಲರ ನೆರವನ್ನು ಪಡೆಯುವಲ್ಲಿ ಔರಂಗಜೇಬನು ಯಶಸ್ವಿಯಾದ. ಇದು ಇತಿಹಾಸದಲ್ಲಿ ಮೂಡಿಬಂದ ಸತ್ಯ. ದಾರಾನನ್ನು ಬಗ್ಗು ಬಡಿಯಲು ಔರಂಗಜೇಬ ಇದನ್ನೇ ಒಂದು ನೆಪ ಮಾಡಿಕೊಂಡು ಇಸ್ಲಾಂನ ರಕ್ಷಕ ತಾನೆಂಬ ಸೋಗನ್ನು ಹಾಕಿಕೊಂಡನೇ ಎಂಬ ಭಾವನೆಯ ಚಿತ್ರಣವನ್ನು ಕಾದಂಬರಿಕಾರನು ಇಲ್ಲಿ ನೀಡಿರುವುದು ಅವರ ಕಲ್ಪಕತೆಗೆ ಒಳ್ಳೆಯ ಸಾಕ್ಷಿ.","brand":"S. Rudramurthy Shastry","offers":[{"title":"Default Title","offer_id":43055335407875,"sku":"HB00003223","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b37633f7-bbff-43e9-8d12-1563a8d14bdc.jpg?v=1658227361"},{"product_id":"kitturu-karnatakada-waadegalu-history-kannada-books","title":"ಕಿತ್ತೂರು ಕರ್ನಾಟಕದ ವಾಡೆಗಳು","description":"\u003cp\u003eಪ್ರಸ್ತುತ ಕೃತಿಯ ಉದ್ದೇಶ ಕಿತ್ತೂರು ಕರ್ನಾಟಕದ ವಾಡೆಗಳನ್ನು ಪರಿಚಯಿಸುವುದಾದರೂ. ಪೀಠಿಕೆಯಾಗಿ ಉಗಮ, ವಿಸ್ತಾರಗಳನ್ನು ವಿವರಿಸಿ, ನಂತರ ವಾಡೆಗಳ ವಾಸ್ತು ಶಿಲ್ಪ, ಆಡಳಿತ ಸ್ವರೂಪ ಮತ್ತು ವಾಡೆಗಳ ಸಂದೇಶವನ್ನು ಸಂಕ್ಷಿಪ್ತವಾಗಿ ಆದರೆ ಸ್ಪಷ್ಟವಾಗಿ ವಿವರಿಸಿದ್ದಾರೆ. ೧೮ ವಾಡೆಗಳ ಪರಿಚಯವನ್ನು ಆಪ್ತವಾಗಿ ಮನಸೆಳೆಯುವಂತೆ ಮಾಡಿರುವುದು ಮತ್ತು ವಾಡೆಗಳ ಚಿತ್ರ ಮತ್ತು ವಿನ್ಯಾಸಗಳನ್ನು ನೀಡಿದ್ದಾರೆ. ಅನುಬಂಧದಲ್ಲಿ ತಾಲ್ಲೂಕುವಾರು ವಾಡೆಗಳ ವಿವರ ನೀಡಿರುವುದು ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಿದೆ. ಕೋಟೆ, ವಾಡೆಗಳ ಬಗ್ಗೆ ಆಳವಾದ ಆಧ್ಯಯನ ಮಾಡಿರುವ ಡಾ. ಸಂತೋಷ ಹಾನಗಲ್ಲ ಅವರು ಈ ಕೃತಿಯಲ್ಲಿ ಅವುಗಳನ್ನು ಜನಪ್ರಿಯ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಕನ್ನಡ ನಾಡಿನ ಹೆಚ್ಚು ಪರಿಚತವಲ್ಲದ ವಿಶಿಷ್ಟ ಇತಿಹಾಸವನ್ನು (ವಾಡೆಗಳ ಬಗ್ಗೆ) ತಿಳಿಸಿರುವ ಸಂತೋಷ ಅವರಿಗೆ ನಾಡಾಭಿಮಾನಿಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.\u003c\/p\u003e\n\u003cp\u003e--ನಾಡೋಜ ಪ್ರೊ. ಕಮಲಾ ಹಂಪನಾ\u003c\/p\u003e","brand":"Dr. Santhosha Hanagalla","offers":[{"title":"Default Title","offer_id":43585917518083,"sku":"HB00003767","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d8a67d38-0e07-40a7-829f-ed6f47588bad.jpg?v=1670846907"},{"product_id":"gajananasharma-prameya","title":"ಪ್ರಮೇಯ","description":"\u003cp\u003eಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ, ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ, ಅಳೆದವರ ಕತೆ, ಅಳೆದು ಉಳಿದವರ ಕತೆ, ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗೋಮೆಟ್ರಿಕ್ ಸರ್ವೆ ಎ೦ದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಟ್ಸನ್, ಜಾರ್ಜ್ ಎವರೆಸ್ಟ್, ಆಂಡ್ರ ವಾ ಥಾಮಸ್ ಜಾರ್ಜ್ ಮಾಂಟೆಗು ಮತ್ತು ವಿಲಿಯಂ ಜಾನ್ಸನ್‌ರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇಂಥದ್ದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ. ಕ್ಲುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ಧೆ ಮತ್ತು ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಇದು. ನಮಗೆ ಗೊತ್ತಿಲ್ಲದ ಹೊರಜಗತ್ತು ಮತ್ತು ಒಳಜಗತ್ತನ್ನು ಈ ಕಾದ೦ಬರಿ ಅನಾವರಣ ಮಾಡುತ್ತದೆ.\u003c\/p\u003e\n\u003cp\u003e- ಜೋಗಿ\u003c\/p\u003e","brand":"Dr. Gajanana Sharma","offers":[{"title":"Default Title","offer_id":43674046234883,"sku":"HB00003950","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9e873b8c-af92-424a-9995-77b769ce2f63.jpg?v=1674387894"},{"product_id":"vaijayantipura-historical-novel-santhoshkumar-mahendele-kannada-books","title":"ವೈಜಯಂತಿಪುರ","description":"\u003cp\u003eಇತಿಹಾಸವು ದಾರಿದೀಪವಿದ್ದಂತೆ. ತನ್ನನ್ನು ತಾನು ತೋರಿಸಿಕೊಳ್ಳುತ್ತಾ ಸಾಧನಾ ಪಥದಲ್ಲಿ ಮುನ್ನಡೆಯುವವರಿಗೆ ಇತಿಹಾಸವು ಮಾರ್ಗದರ್ಶಕ ದೀಪವಾಗುತ್ತದೆ. ಇತಿಹಾಸದ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಳ್ಳುವವನು ತಾನೂ ಇತಿಹಾಸ ಸೃಷ್ಟಿಸಬಲ್ಲವನಾಗುತ್ತಾನೆ. ನಮ್ಮ ನಾಡಿನ ಹೆಮ್ಮೆಯ ಕದಂಬ ವಂಶದ ಮಹೋನ್ನತ ಇತಿಹಾಸದ ಪ್ರತಿಯೊಂದು ಪುಟದಲ್ಲಿಯೂ ಸ್ವರ್ಣಾಕ್ಷರದಿಂದ ಕಂಗೊಳಿಸಬೇಕಾದ ಹೆಸರು \"ಮಯೂರವರ್ಮ\"\u003cbr\u003e\u003cbr\u003e-ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ\u003cbr\u003e\u003cbr\u003eಮಿತ್ರ ಸಂತೋಷಕುಮಾರ ಮೆಹೆಂದಳೆಯವರ \"ವೈಜಯಂತಿಪುರ\" ಕಾದಂಬರಿಯು ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ. ಕಾದಂಬರಿ ರಚನೆಗೆ ಮುನ್ನ ಮೆಹೆಂದಳೆಯವರು ಸಾಕಷ್ಟು ಸಂಶೋಧನಾತ್ಮಕ ಓದಿಗೆ ತೆರೆದುಕೊಂಡಿರುವುದು ಮಹತ್ವದ ಸಂಗತಿಯಾಗಿದೆ. ಶಾಸನಗಳನ್ನೂ ಒಳಗೊಂಡಂತೆ, ಸಂಶೋಧನಾ ಕೃತಿಗಳನ್ನು ಅಧ್ಯಯನ ಮಾಡಿರುವುದಕ್ಕೆ ಸಾಕ್ಷವೆಂಬಂತೆ ಅಡಿ ಟಿಪ್ಪಣಿಯಲ್ಲಿ ಕೃತಿ ಸೂಚಿಯನ್ನು ಕೊಡಲಾಗಿದೆ. ಅಂದರೆ ಮೂಲ ಎಳೆಯಿಂದಲೇ ಕಾದಂಬರಿ ಬೆಳೆ ಬಂದಿದೆ ಎಂಬುವುದನ್ನೂ ಖಚಿತಪಡಿಸಲಾಗಿದೆ. ಮೆಹೆಂದಳೆಯವರ ನಿರೂಪಣಾ ಶೈಲಿಯಲ್ಲಿ ಅಯಸ್ಕಾಂತದ ಗುಣವೊಂದು ಹಾಸುಹೊಕ್ಕಾಗಿದೆ. ಓದುಗರನ್ನು ಒಳಗೆಳೆದುಕೊಳ್ಳುವ ವಿವರಣಾತ್ಮಕ ಸರಳ ಸ್ಪರ್ಶದಿಂದ, ಕಾದಂಬರಿ ಬೆಳೆಯುತ್ತ ಹೋಗುತ್ತದೆ. ಮೂಲ ಆಕರದೊಂದಿಗೆ ಸಾಹಿತ್ಯ ಸಂಕರವೊಂದು ಇಲ್ಲಿ ಸಾಧ್ಯವಾಗಿದೆ.\u003cbr\u003e\u003cbr\u003e-ಬರಗೂರು ರಾಮಚಂದ್ರಪ್ಪ\u003cbr\u003e\u003cbr\u003eಖ್ಯಾತ ಸಾಹಿತಿಗಳು\u003c\/p\u003e","brand":"Santosh Kumar Mehandele","offers":[{"title":"Default Title","offer_id":43882054189315,"sku":"HB00004084","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_3385b394-0699-497d-bef4-6e2bc801d56e.jpg?v=1681977608"},{"product_id":"gowda-parampare-history-putturu-anantarjagowda-kannada-book","title":"ಗೌಡ ಪರಂಪರೆ","description":"ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನ ವಿಟ್ಲ ಪಾಣೆ ಮಂಗಳೂರು ಹಾಗೂ ಕೊಡಗಿನಲ್ಲಿ ಬಹುಸಂಖ್ಯಾತರಾಗಿ, ಸಾಕಷ್ಟು ಭೂ ಹಿಡುವಳಿ ಹೊಂದಿ ಜೀವಿಸುತ್ತಬಂದಿದ್ದಾರೆ.ಇವರು ಮೂಲತಃ ಕೃಷಿಕರು ಆದರೆ ಈ ಸಮುದಾಯದ ಬೇರುಗಳನ್ನು ಹುಡುಕುತ್ತಾ ಹೋದರೆ ಇವರ ಮೂಲವನ್ನು ಸುಮಾರು ಸಾವಿರದ ಐದುನೂರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇವರ ಮೂಲದ ಬಗ್ಗೆ ಅನೇಕ ಚರ್ಚೆ, ವಾದಗಳಿದ್ದರೂ ಪ್ರಸ್ತುತ ಕೃತಿಯಲ್ಲಿ ಈ ಸಮುದಾಯದ ಮೂಲವನ್ನು ಗಂಗವಂಶದಲ್ಲಿಗುರುತಿಸಲಾಗಿದೆ.\u003cbr\u003e\u003cbr\u003eಕಾಲಗರ್ಭದಲ್ಲಿ ಅಡಗಿರುವ, ಸಾಂಕೇತಿಕ ರೂಪದಲ್ಲಿರುವ ಒಂದು ಸಮುದಾಯದ ಮೂಲ ಚರಿತ್ರೆ, ಸಂಸ್ಕೃತಿ, ಪರಂಪರೆಯನ್ನು ಉತ್ಪನನ ಮಾಡುತ್ತ, ಈಗಿರುವ ಸ೦ಗತಿಗಳೊಂದಿಗೆ ತಳುಕು ಹಾಕುತ್ತ ಸಂಶೋಧನಾತ್ಮಕವಾಗಿ ನಿರೂಪಿತವಾಗಿರುವ ಈ ಕೃತಿ ಸಂಸ್ಕೃತಿ ಅಧ್ಯಯನದ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಸತ್ಯಾನ್ವೇಷಣೆಯೇ ಮೂಲಧಾತುವಾಗಿರುವ ಇಲ್ಲಿನ ಬರೆವಣಿಗೆ ಹೊಸ ಹೊಸ ಅಂಶಗಳನ್ನು ತುಂಬಿಕೊಂಡಿದ್ದು, ಕುತೂಹಲಕಾರಿಯಾಗಿದ್ದು, ಚರಿತ್ರೆ ಪ್ರಿಯರನ್ನೂ ಸಂಸ್ಕೃತಿ ಪ್ರಿಯರನ್ನೂ ಏಕಕಾಲಕ್ಕೆ ಆಕರ್ಷಿಸುತ್ತದೆ. ಅನಂತರಾಜಗೌಡರು ತಾವು ಆಯ್ಕೆಮಾಡಿಕೊಂಡ ವಿಷಯದ ಮಂಡನೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾನು ತಿಳಿದಿದ್ದೇನೆ. ಇಂಥ ವಿಚಾರಗಳ ಬರೆವಣಿಗೆಯನ್ನು ಅವರು ಮುಂದುವರೆಸಲಿ ಎಂದು ಆರೈಸುತ್ತೇನೆ.\u003cbr\u003e\u003cbr\u003e-ಡಾ. ಹಾ.ತಿ. ಕೃಷ್ಣೇಗೌಡ,\u003cbr\u003eಸಂಶೋಧಕರು","brand":"Putturu Anantarajagowda","offers":[{"title":"Default Title","offer_id":44041547743491,"sku":"HB00004167","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_97696f09-24c0-4383-9e42-d6e07e3e7add.jpg?v=1688040667"},{"product_id":"karnatakadalli-smartha-brahmanaru-nele-hinnele","title":"ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ","description":"\u003cp data-mce-fragment=\"1\"\u003eಕರ್ನಾಟಕದಲ್ಲಿರುವ ಸ್ಮಾರ್ತ ಬ್ರಾಹ್ಮಣರ ಎಲ್ಲ ಒಳಪಂಗಡಗಳನ್ನೂ ಕುರಿತ ಸಮಗ್ರ ಮಾಹಿತಿಯುಳ್ಳ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಎಂಬ ಕೃತಿಯನ್ನು ʻಹರಿವು ಬುಕ್ಸ್‌ʼಪ್ರಕಾಶನ ಸಂಸ್ಥೆ, ಬೆಂಗಳೂರು ಹೊರತರುತ್ತಿದೆ. ಸುಮಾರು 600 ಪುಟಗಳ ಈ ಸಂಪುಟದಲ್ಲಿ 28 ಒಳಪಂಗಡಗಳ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಇವೇ ಮುಂತಾದವನ್ನು ಕುರಿತು ಸಂಪೂರ್ಣ ವಿವರಗಳು ಲಭ್ಯ. ಆಯಾ ಪಂಗಡಗಳ ಪರಿಣತರೇ ತಮ್ಮ ತಮ್ಮ ಪಂಗಡಗಳ ಬಗ್ಗೆ ಬರೆದಿದ್ದಾರೆ. ನಿಖರ ಮಾಹಿತಿ, ವಸ್ತುನಿಷ್ಠ ನಿರೂಪಣೆ, ಎಲ್ಲರೂ ಓದಬಹುದಾದ ಭಾಷಾ ಶೈಲಿ ಈ ಸಂಪುಟದ ವೈಶಿಷ್ಟ್ಯ.\u003c\/p\u003e\n\u003col data-mce-fragment=\"1\" start=\"30\"\u003e\u003c\/ol\u003e","brand":"Dr. T R Anantharamu","offers":[{"title":"Default Title","offer_id":45628987506947,"sku":"PHB0000018E","price":840.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/af9023e9-020b-4faa-b881-fbf48cef7b12.jpg?v=1694857826"},{"product_id":"ashoka-history-dr-c-chandrappa-kannada-book","title":"ಅಶೋಕ","description":"\u003cp\u003eಭಾರತೀಯರ ಮನೆ ಮನಗಳಲ್ಲಿ ಜೀವಂತವಾಗಿ ಉಳಿಯುವ ಹಾಗೂ ಎಂದೆಂದಿಗೂ ಆದರ್ಶಪ್ರಾಯವಾದ ರಾಜನೆಂದರೆ ಅಶೋಕ. ಅಶೋಕ ಸ್ತಂಭ ಮತ್ತು ಅಶೋಕ ಚಕ್ರ ಇವು ಭಾರತೀಯ ಪರಂಪರೆಯ ಸಂಕೇತಗಳು. ಭಾರತದ ಇತಿಹಾಸದ ಹೊಸದಿಕ್ಕಿಗೆ ನಾಂದಿ ಹಾಡಿದ ಮಹಾಚೇತನ ಅಶೋಕ. ಇತಿಹಾಸದಲ್ಲಿ ಸರ್ವಕಾಲೀನ ಜನಪ್ರಿಯತೆಗೆ ಕಾರಣ ಎಂಬ ಕುತೂಹಲಕ್ಕೆ ಈ ಸಂಶೋಧನಾ ಗ್ರಂಥದಲ್ಲಿ ಡಾ.ಸಿ.ಚಂದ್ರಪ್ಪ ದಾಖಲಿಸಿದ್ದಾರೆ. ಭಾಷಾಶಾಸ್ತ್ರ, ಶಾಸನಶಾಸ್ತ್ರ, ಭೂಉತ್ಖನನಗಳು, ವಾಸ್ತುಶಿಲ್ಪ ಮುಂತಾದ ಹಲವು ಜ್ಞಾನಶಾಸ್ತ್ರಗಳನ್ನು ಒಳಗೊಂಡ ಅಪರೂಪದ ಕೃತಿಯಾಗಿದೆ. \u003cbr data-mce-fragment=\"1\"\u003e\u003cbr data-mce-fragment=\"1\"\u003eಚಕ್ರವರ್ತಿ ಅಶೋಕನ ಸಮಗ್ರ ಇತಿಹಾಸವು ಕನ್ನಡದ ಕನ್ನಡಿಯಲ್ಲಿ ಮೂಡಿ ಬಂದಿಲ್ಲವಾದರೂ ಇತಿಹಾಸ ಪ್ರಾಧ್ಯಾಪಕರಾದ ಡಾ.ಸಿ.ಚಂದ್ರಪ್ಪನವರ ಈ ಕೃತಿ ಅಂಥ ಗಂಭೀರ ಪ್ರಯತ್ನಗಳಲ್ಲೊಂದು. ಅಖಂಡ ಭಾರತವನ್ನು ಕ್ರಿ.ಪೂ. 3ನೇ ಶತಮಾನದಲ್ಲಿ ಆಳಿದ ಅಶೋಕನ ಚರಿತ್ರೆಯನ್ನು ಸಂಶೋಧನೆಯ ಮೂಲಕ ಕನ್ನಡಕ್ಕೆ ತರುವುದು ಸವಾಲಷ್ಟೆ ಅಲ್ಲ. ಅಸಾಧ್ಯವೂ ಆಗಿದೆ. ಹೀಗಾಗಿ ಚಕ್ರವರ್ತಿ ಅಶೋಕನ ಸಮಗ್ರ ಜೀವನ ಚರಿತ್ರೆಯನ್ನು ಕನ್ನಡದ ಓದುಗರ ಕೈಗಿಟ್ಟಿದ್ದಾರೆ. ಈ ದಿಸೆಯಲ್ಲಿ ಪ್ರಾಧ್ಯಾಪಕರಾದ ಡಾ. ಸಿ. ಚಂದ್ರಪ್ಪನವರು ಚರಿತ್ರೆಯ ಒಳನೋಟಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಹಾಗಾಗಿ ಡಾ.ಸಿ.ಚಂದ್ರಪ್ಪನವರನ್ನು ಮನದುಂಬಿ ಹಾರೈಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ನಾಡೋಜ ಪ್ರೊ. ಹಂಪ ನಾಗರಾಜಯ್ಯ\u003c\/p\u003e","brand":"Dr. C. Chandrappa","offers":[{"title":"Default Title","offer_id":44389549179139,"sku":"HB00004400","price":1500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_b50c4a95-1e9f-4a3d-a58f-e1263b9818dc.jpg?v=1699692931"},{"product_id":"arya-veerya-stories-dr-k-n-ganeshayya-kannada-book","title":"ಆರ್ಯ ವೀರ್ಯ","description":"\u003cp\u003e'ಕಥೆಯ ವಸ್ತು ಮತ್ತು ಮೌಲ್ಯಗಳನ್ನು ಓದುಗನಿಗೆ ಮುಟ್ಟಿಸುವುದೇ ಯಾವುದೇ ಕಥೆಯ ಪ್ರಮುಖ ಉದ್ದೇಶ' ಎಂಬ ನಂಬಿಕೆಯನ್ನಿಟ್ಟುಕೊಂಡು ಅದನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿರುವವರು ಗಣೇಶಯ್ಯನವರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸಮಾರ್ಗವನ್ನು ತೆರೆದ ಮಾರ್ಗ ಪ್ರವರ್ತಕರಿವರು.\u003cbr\u003e\u003cbr\u003eಎಂದಿನಂತೆ ಇಲ್ಲಿರುವ ಮೂರೂ ಕತೆಗಳಲ್ಲಿ ಗಣೇಶಯ್ಯನವರ ವಿಶಿಷ್ಟ ಛಾಪಿದೆ. ಅವರ ಸಂಶೋಧನಾ ದೃಷ್ಟಿ, ಕುತೂಹಲಕರ ಶೈಲಿ, ಭರಪೂರ ಮಾಹಿತಿ ಎಲ್ಲವೂ ಸೇರಿದೆ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":44455750926595,"sku":"HB00004430","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_1_5c0a0b8a-5170-4baa-83a2-ba97b8c926cb.jpg?v=1701437957"},{"product_id":"chitadanta-thriller-novel-dr-k-n-ganeshayya-kannada-book","title":"ಚಿತಾದಂತ","description":"\u003cp\u003eತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾನ ಗಳಿಸಿಕೊಂಡಿರುವ ಡಾ। ಕೆ.ಎನ್. ಗಣೇಶಯ್ಯನವರು ಬರೆಯಲಾರಂಭಿಸಿದ್ದು ತೀರಾ ಈಚೆಗೆ. ಕಳೆದ 3 ವರ್ಷಗಳಲ್ಲಿ ನಾಲ್ಕು ಕಾದಂಬರಿ ಮತ್ತು ಮೂರು ಕಥಾ ಸಂಕಲನ ರಚಿಸಿದ್ದಾರೆ.\u003c\/p\u003e\n\u003cp\u003e'ಚಿತಾದಂತ', ಇತಿಹಾಸದ ಎಳೆಯನ್ನು ಹಿಡಿದು ಬರೆದ ರೋಚಕ ಕಾದಂಬರಿ. ಕ್ರಿಸ್ತಪೂರ್ವದಿಂದ ಹಿಡಿದು ಆಧುನಿಕ ಕಾಲದವರೆಗೆ ಅದರ ವ್ಯಾಪ್ತಿ ಹರಡಿದೆ. ದಿಗ್ಬ್ರಮೆ ಉಂಟು ಮಾಡುವ ಈ ಕಥಾನಕಕ್ಕೆ ಪೂರಕವಾಗಿ ಅವರು ನೀಡುವ ಉಲ್ಲೇಖಗಳು, ನಕ್ಷೆಗಳು, ಚಿತ್ರಗಳು – ಇದು ನೈಜ ಕಥೆಯೇ ಎಂಬಂತೆ ಭಾಸವಾಗುತ್ತದೆ. ಈ ಮೂಲಕ ಗಣೇಶಯ್ಯನವರು ಇತಿಹಾಸವನ್ನು ಹೊಸ ದಿಕ್ಕಿನಲ್ಲಿ ನೋಡುವಂತೆ ಪ್ರೇರೇಪಿಸುತ್ತಾರೆ. ಅನೇಕ ಐತಿಹಾಸಿಕ ಮಿಥ್‌ಗಳನ್ನು ಒಡೆಯುವಲ್ಲಿ ಈ ಕಥಾನಕ ಯಶಸ್ವಿಯಾಗಿದೆ. ಕಥೆ ಮುಂದೇನು? ಮುಂದೇನು? ಎಂದು ಕುತೂಹಲ ಹುಟ್ಟಿಸುತ್ತದೆ. ಕಥಾವಸ್ತುವನ್ನು 'ಇದು ಹೀಗೇ' ಎಂದು ಓದುಗರು ಊಹಿಸಲು ಸಾಧ್ಯವೇ ಇಲ್ಲದಂತೆ ಗಣೇಶಯ್ಯ ನವರು ಕಾದಂಬರಿ ರಚಿಸಿದ್ದಾರೆ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":45327131541763,"sku":"HB00004795","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Chitadanta.jpg?v=1714981853"},{"product_id":"jagattina-bheekara-yuddhagalu-history-dr-m-venkataswamy-kannada-book","title":"ಜಗತ್ತಿನ ಭೀಕರ ಯುದ್ಧಗಳು","description":"\u003cp\u003eಇತಿಹಾಸದ ಉದ್ದಕ್ಕೂ ಯುದ್ಧ ನಿರ್ವಾಕರು (ವಾರ್ ಮಾಂಗರ್ಸ್), ಅಂದರೆ ರಾಜರು, ರಾಜಕೀಯ ನಾಯಕರು, ಸೈನ್ಯ ಪಡೆಗಳ ಅಧಿಕಾರಿಗಳು ಎಲ್ಲರೂ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಾರೆ. ಆದರೆ, ಕುದರೆಗಳು, ಆನೆಗಳು ಮತ್ತು ಕಾಲಾಳುಗಳು ಅಂಕಿಸಂಖ್ಯೆಗಳಲ್ಲಿ ಮಾತ್ರ ದಾಖಲಾಗುತ್ತಾರೆ. ಭೂ- ಇತಿಹಾಸದಲ್ಲಿ ಜಗತ್ತಿನಾದ್ಯಂತ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕಾಗಿ, ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದಕ್ಕಾಗಿ ಯುದ್ಧಗಳು ನಡೆದವು, ಈಗಲೂ ನಡೆಯುತ್ತಿವೆ. ಮುಂದೆಯೂ ನಡೆಯುತ್ತವೆ. ಕೃತಿಯಲ್ಲಿನ ಕೆಲವು ಯುದ್ಧಗಳು ರಾಜರು\/ಸಾಮ್ರಾಜ್ಯಶಾಹಿಗಳು ಮತ್ತು ಸರ್ಕಾರಗಳು ಜನರ ಮೇಲೆ ಹೆಚ್ಚೆಚ್ಚು ತೆರಿಗೆಗಳನ್ನು ಏರಿದ ಕಾರಣಕ್ಕೆ (ಫ್ರಾನ್ಸ್‌ನಲ್ಲಿ) ಆಂತರ್ಯುದ್ಧಗಳು ನಡೆದವು; ಸಾವಿರಾರು, ಲಕ್ಷಾಂತರ ಜನರು ಸತ್ತರು. ಜನರು ರಾಜರನ್ನು ಹಿಡಿದು ಕೊಂದರು. ಮುಂದೆ ಇದೇ ಕಾರಣಗಳಿಗೆ ಯುದ್ಧಗಳು ನಡೆಯಲಿವೆ. ಎಲ್ಲಾ ಕಾಲದಲ್ಲೂ ಜಗತ್ತಿನ ಯಾವುದೇ ಪ್ರದೇಶದ ರಾಜರು, ಧರ್ಮ ಸಂಸ್ಥಾಪಕರು, ವ್ಯಾಪಾರಿಗಳು, ಹಣವಂತರು; ಇತ್ತೀಚೆಗೆ ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟಿಗರು, ಭ್ರಷ್ಟ ಅಧಿಕಾರಿಗಳು ಆರಾಮಾಗಿ ಕುಳಿತು ಐಷಾರಾಮಿ ಬದುಕನ್ನು ಅನುಭವಿಸುತ್ತಿದ್ದಾರೆ.\u003c\/p\u003e\n\u003cp\u003eವಿಪರ್ಯಾಸವೆಂದರೆ ಇವರ್ಯಾರು ಮಣ್ಣು-ಕೆಸರಿನ ಜೊತೆಗೆ, ಕಾರ್ಖಾನೆಗಳ ಜೊತೆಗೆ ಬಿಸಿಲು ಮಳೆ ಗಾಳಿಯಲ್ಲಿ ದುಡಿದವರಲ್ಲ. ಜಗತ್ತನ್ನು ಕಟ್ಟಿದವರು ಮತ್ತು ಕಟ್ಟುತ್ತಿರುವವರೆಂದರೆ ಹೊಟ್ಟೆಗೆ ಅನ್ನ, ಉಡಲು ಬಟ್ಟೆ, ಮಲಗಲು ವಸತಿ ಇಲ್ಲದೆ ದುಡಿದು ಜಗತ್ತನ್ನು ಕಟ್ಟಿದವರು ಬಡವರು ಮತ್ತು ಕಾರ್ಮಿಕರು. ಪಿರಮಿಡ್‌ ಗಳಿಂದ ಹಿಡಿದು ಯಾವುದೇ ನಾಗರಿಕ ತೊಟ್ಟಿಲುಗಳನ್ನು ಕಟ್ಟಿ ಬೆಳೆಸಿದವರು ಬಡವರು, ಕಾರ್ಮಿಕರು, ರೈತರು ಮತ್ತು ಮಹಿಳೆಯರು. ಜೊತೆಗೆ ಕಾಡಿನಿಂದ ಹಿಡಿದು ತಂದು ಪಳಗಿಸಿದ ಮೂಕಪ್ರಾಣಿಗಳು. ಜಗತ್ತಿನಲ್ಲಿ ಮುಂದೆಯೂ ಈ ತಾರತಮ್ಯ ಹೀಗೆ ಮುಂದುವರಿಯುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು ಮಹನಿಯರು ಹುಟ್ಟಿ ಬಂದು ಈ ಅಸಮಾನತೆಯ ಸಮಾಜದ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡರೆ ವಿನಹಃ ಈ ಜಗತ್ತು ಮಾತ್ರ ಬದಲಾಗಲೇ ಇಲ್ಲ.\u003cbr\u003e- ಎಂ. ವೆಂಕಟಸ್ವಾಮಿ\u003cbr\u003e\u003c\/p\u003e\n\u003c!----\u003e","brand":"Dr. M. Venkataswamy","offers":[{"title":"Default Title","offer_id":45615514976515,"sku":"HB00004861","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/JagattinaBheekaraYuddhagalu.jpg?v=1718973442"},{"product_id":"reshme-batte-kannada-novel-vasudhendra","title":"ರೇಷ್ಮೆ ಬಟ್ಟೆ","description":"\u003cp\u003e'ಜಾಗತೀಕರಣ' ಎನ್ನುವ ಸಂಗತಿಯನ್ನು ನಾವು ಇತ್ತೀಚಿನ ದಶಕಗಳಲ್ಲಿ ಜಾಗತಿಕವಾಗಿ ನಡೆಯುತ್ತಿರುವ ವ್ಯಾಪಾರ ವ್ಯವಹಾರಗಳಿಗೆ ಸೀಮಿತವಾಗಿ ಬಳಸುತ್ತೇವೆ. ಆದರೆ ದೇಶ-ದೇಶಗಳ ನಡುವೆ ವ್ಯಾಪಾರವು ಯಾವುದೋ ರೂಪದಲ್ಲಿ ಪ್ರಾರಂಭವಾದರೆ ಸಾಕು, 'ಜಾಗತೀಕರಣ'ವು ಸದ್ದಿಲ್ಲದೆ ನಡೆದಿರುತ್ತದೆ. ಈ ಪ್ರಕ್ರಿಯೆಯನ್ನು ಎಲ್ಲಾ ಕಾಲದಲ್ಲಿಯೂ ಜಗತ್ತು ಹಲವು ರೂಪಗಳಲ್ಲಿ ಕಂಡಿದೆ. ಸಿಹಿ-ಕಹಿಗಳೆರಡನ್ನೂ ಒಟ್ಟಿಗೆ ತಂದೊಡ್ಡುವ ಜಾಗತೀಕರಣವು ಆ ದೇಶ-ಕಾಲದ ಜನಸಾಮಾನ್ಯರ ಬದುಕಿನಲ್ಲಿ ಹಲವು ಗಡಿಗಳನ್ನು ದಾಟುವ ಸವಾಲನ್ನು ಜೀವನ್ಮರಣದ ಸಂಗತಿಯಾಗಿ ಮುಂದಿಡುತ್ತದೆ. ಬದುಕಿನಲ್ಲಿ ಬದಲಾವಣೆಯನ್ನು ಕಡ್ಡಾಯವಾಗಿ ಬೇಡುವ ಈ ವಿದ್ಯಮಾನವು, ತಲೆಮಾರುಗಳ ನಡುವೆ ದೊಡ್ಡ ಕಂದಕವನ್ನು ನಿರ್ಮಿಸುತ್ತದೆ. ಧರ್ಮ, ಸಂಸ್ಕೃತಿ, ಭಾಷೆ, ವಾಣಿಜ್ಯ, ರಾಜಕೀಯ, ನೈತಿಕತೆ - ಎಲ್ಲದರಲ್ಲಿಯೂ ಊಹಿಸಲಾರದ ಸಂಕರವನ್ನು ಸೃಷ್ಟಿಸಿ ಯುಗಸಂಘರ್ಷವನ್ನು ಸೃಷ್ಟಿಸುತ್ತದೆ.\u003c\/p\u003e\n\u003cp\u003eಎರಡನೆಯ ಶತಮಾನದಲ್ಲಿ ಇಂತಹದೊಂದು ದೊಡ್ಡ ಜಾಗತೀಕರಣಕ್ಕೆ ಏಷ್ಯಾಖಂಡದ ಜನರು ಮುಖಾಮುಖಿಯಾದರು. ಕುಶಾನ ಸಾಮ್ರಾಜ್ಯದ ಕಾನಿಷ್ಕನು ವಾಯವ್ಯ ಭಾರತವನ್ನು ಆಳುತ್ತಿರುವ ಹೊತ್ತಿನಲ್ಲಿ, ಚೀನಾ ದೇಶದಿಂದ ರೋಮ್ ದೇಶದ ತನಕ ಕಾಲ್ನಡಿಗೆಯ ವ್ಯಾಪಾರದ ಹಲವು ದಾರಿಗಳು ಉದ್ಭವಿಸಿದವು. ಈ ಕಾಲದಲ್ಲಿ ವಾಹನವನ್ನು ಬಳಸಿಯೂ ಆ ದಾರಿಯನ್ನು ಸಂಪೂರ್ಣವಾಗಿ ಕ್ರಮಿಸಲು ಅಸಾಧ್ಯವಾಗಿದ್ದರೂ, ಹದಿನೆಂಟು ನೂರು ವರ್ಷಗಳ ಹಿಂದೆ ಭೂಪಟದ ಅರಿವಿಲ್ಲದ ನಮ್ಮ ಹಿರಿಯರು ವ್ಯಾಪಾರದ ದೆಸೆಯಿಂದ ಈ ಕ್ಲಿಷ್ಟ ದಾರಿಯುದ್ದಕ್ಕೂ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಸಾವಿರಾರು ಮೈಲುಗಳ ಈ ದಾರಿಯು ಹಲವು ಪರ್ವತ, ಮರುಭೂಮಿ, ನದಿ, ಕೊಳ್ಳ, ಕಾಡು, ನಾಡುಗಳನ್ನು ಹಾದು ಹೋಗುತ್ತಿತ್ತು. ಈ ಕಾಲದ ಭೂಪಟದ ದೇಶಗಳಾದ ಚೀನಾ, ಕಝಕಿಸ್ತಾನ್, ಉಜೈಕಿಸ್ತಾನ್, ಅಫಘನಿಸ್ತಾನ್, ಭಾರತ, ಪಾಕಿಸ್ತಾನ್, ಇರಾನ್, ಇರಾಕ್, ಟರ್ಕಿ - ಹೀಗೆ ಹಲವು ದೇಶಗಳನ್ನು ಹಾದು ಹೋಗುವ ಈ ದಾರಿಯು ವ್ಯಾಪಾರದ ಉದ್ದೇಶಕ್ಕಾಗಿ ಸಂಭವಿಸಿದರೂ ಅದಕ್ಕಾಗಿಯೇ ಸೀಮಿತವಾಗಿ ಉಳಿಯಲಿಲ್ಲ. ಧರ್ಮಗಳು, ಭಾಷೆಗಳು, ಲಿಪಿಗಳು, ಕೌಶಲ್ಯಗಳು, ಕಲಾಪ್ರಕಾರಗಳು, ತಂತ್ರಜ್ಞಾನಗಳು - ಹೀಗೆ ಹಲವು ವಿದ್ಯಮಾನಗಳು ಈ ದಾರಿಯ ಮೂಲಕ ಅತ್ತಿತ್ತ ಚಲಿಸಿದವು. ಆ ಕಾಲದ ಜನರು ಅವೆಲ್ಲವನ್ನೂ ತಮ್ಮ ಆವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಂಡು ಹೊಸ ಜಗತ್ತನ್ನು ಸೃಷ್ಟಿಸಿಕೊಳ್ಳುವುದರಲ್ಲಿ ಸಫಲರಾದರು.\u003c\/p\u003e\n\u003cp\u003eಈ ಕಾದಂಬರಿಯು ಎರಡನೆಯ ಶತಮಾನದ ಏಷ್ಯಾಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಇಟ್ಟುಕೊಂಡು, ಅಂದಿನ ಯುಗಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಕಾಲ್ಪನಿಕವಾದ ಕತೆಯ ಮೂಲಕ ನಿಮ್ಮ ಮುಂದಿಡಲು ಪ್ರಯತ್ನಿಸುತ್ತದೆ. ಹಲವು ದೇಶಗಳ ಮತ್ತು ಹಲವು ಧರ್ಮಗಳ ವಿಸ್ತಾರವಾದ ಅಧ್ಯಯನ ಮಾಡಿ ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ.\u003c\/p\u003e","brand":"Vasudhendra","offers":[{"title":"Default Title","offer_id":45969878319363,"sku":"HB00005198","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ReshmeBatte.jpg?v=1779535156"},{"product_id":"vaatapi-historical-novel-santhoshkumara-mehendale-kannada-book","title":"ವಾತಾಪಿ...","description":"\u003cp\u003eಚಾಲುಕ್ಯರ ಇಮ್ಮಡಿ  ಪುಲಿಕೇಶಿಯ ಸಾಮ್ರಾಜ್ಯೋತ್ಸವದ ವಿಜಯಗಾಥೆಯನ್ನು ಅತ್ಯಂತ ರೋಚಕವಾಗಿ, ಅಷ್ಟೇ ವೈಭವದಿಂದ ರಚಿಸಿದ್ದಾರೆ.  ಅದನ್ನು ಕಣ್ಣಿಗೆ ಕಟ್ಟಿ ಕೊಡುವ ರೀತಿಯಂತೂ ಅತ್ಯದ್ಭುತ.\u003cbr\u003eದಾಯಾದಿಗಳ ಕಲಹದಿಂದ ಅಜ್ಞಾತನಾಗಿದ್ದ ಎರೆಯನು  ಮತ್ತೆ ಸಿಂಹಾಸನ ದಕ್ಕಿಸಿಕೊಂಡು ಇಮ್ಮಡಿ ಪುಲಿಕೇಶಿಯಾಗಿ ಕರ್ನಾಟಕದ ಅತ್ಯಂತ ವಿಶಾಲ‌ ಸಾಮ್ರಾಜ್ಯ‌ ಸ್ಥಾಪಿಸಿದ ರೋಚಕ ಕಥಾನಕ ಇದು. ಅಖಂಡ ಭಾರತವನ್ನಾಳಿದ ದಕ್ಷಿಣದ ಪಲ್ಲವರನ್ನು ಸೋಲಿಸಿ, ಉತ್ತರದ‌ ಪ್ರಬಲ ಮೌರ್ಯ ರನ್ನೇ ಸೋಲಿಸಿ, ಸತತ ಆರು ಮಹಾ ಯುದ್ಧಗಳಲ್ಲಿ ಜಯಭೇರಿ ಭಾರಿಸಿ ಕೊನೆಗೆ ಉತ್ತರಾಪಥೇಶ್ವರ‌ ಹರ್ಷವರ್ದನನ್ನೇ ಹಿಮ್ಮೆಟ್ಟಿಸಿ ಸ್ನೇಹದ ಕಹಳೆ ಮೊಳಗಿಸಿ ಮಾದರಿಯಾಗಿ, ಪ್ರಜೆಗಳು ಅತ್ಯಂತ ಸುಭಿಕ್ಷವಾಗಿರುವಂತೆ ಹಾಗೂ ಸಾಮಂತರೂ ಕೂಡ ಸುರಕ್ಷತೆಯಿಂದಿರುವಂತೆ ಅಖಂಡ ಭಾರತ ಆಢಳಿತ ನಡೆಸಿದ ಇಮ್ಮಡಿ ಪುಲಿಕೇಶಿ.\u003cbr\u003eಭಾರತ ಕಂಡ ಅತ್ಯಂತ ರೋಚಕ ಯುದ್ದಗಳನ್ನು ಕಣ್ಣಿಗೆ ಕಟ್ಟುವ ವರ್ಣನೆಗೆ ಮೆಹಂದಳೆಯವರೇ ಸಾಟಿ. \u003cbr\u003eಇತಿಹಾಸದ ವಿದ್ಯಾರ್ಥಿಗಳಂತೂ ತಪ್ಪದೇ ಓದಲೇಬೇಕಾದ ಅತ್ಯುತ್ತಮ ಸಂಗ್ರಹಾಯೋಗ್ಯ ಕೃತಿ ಇದು.\u003c\/p\u003e","brand":"Santosh Kumar Mehandele","offers":[{"title":"Default Title","offer_id":46210795143427,"sku":"HB00005046","price":449.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Vaatapi.jpg?v=1733736826"},{"product_id":"chalukya-chakravarti-immadi-pulikeshi-historical-novel-dr-lakshman-kounte-kannada-book","title":"ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ","description":"\u003cp\u003e\u003cspan\u003eಉತ್ತರಾಪಥೇಶ್ವರ ಎಂಬ ಬಿರುದಾಂಕಿತ, ಕಾನ್ಯಕುಬ್ಬದ ಸಾಮ್ರಾಟ, ಅಪಾರ ಸೈನ್ಯವನ್ನು ಹೊಂದಿದ ಹರ್ಷವರ್ಧನನಂತಹ ಮಹಾಪ್ರತಾಪಿಯನ್ನು ರಣತಂತ್ರದ ಮೂಲಕವೇ ಬಾದಾಮಿ ಚಾಲುಕ್ಯ ಪುಲಿಕೇಶಿ ಸೋಲಿಸಿದ್ದಲ್ಲದೇ, ಸೌಜನ್ಯ ಮತ್ತು ಸ್ನೇಹ ವಿಶ್ವಾಸಗಳಿಂದ ಅವನ ಹೃದಯವನ್ನು ಗೆದ್ದು ಅವನಿಂದಲೇ ಪರಮೇಶ್ವರ ಪುಲಿಕೇಶಿ ಎಂದು ಹೊಗಳಿಸಿಕೊಂಡ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕುರಿತ ಐತಿಹಾಸಿಕ ಕಾದಂಬರಿ.\u003c\/span\u003e\u003c\/p\u003e","brand":"Dr. Lakshmana Kounte","offers":[{"title":"Default Title","offer_id":46224065790211,"sku":"HB00005054","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ImmadiPulikeshi.jpg?v=1734167247"},{"product_id":"karnataka-gatavaibhava-history-aluru-venkatarayaru-kannada-book","title":"ಕರ್ನಾಟಕ ಗತವೈಭವ","description":"\u003cp\u003eಪ್ರತಿಷ್ಠಾನದ ವತಿಯಿಂದ\u003c\/p\u003e\n\u003cp\u003eಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಪ್ರತಿಷ್ಠಾನ ಧಾರವಾಡ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಾನವು ಸ್ಥಾಪನೆಗೊಂಡಿತು. ಆಗ ಅವರ ಅಳಿಯಂದಿರಾದ ಡಾ. ವರದರಾಜ ಹುಯಿಲಗೊಳ ಈ ಪ್ರತಿಷ್ಠಾನದ ಸ್ಥಾಪಕರು. ಅಂದಿನಿಂದ ಪ್ರತಿಷ್ಠಾನವು ವೆಂಕಟರಾಯರ ವಿಚಾರಧಾರೆಗಳನ್ನು ಏಕೀಕರಣದ ವಿಚಾರಗಳನ್ನು ಪ್ರಚಾರ, ಪ್ರಸಾರ ಮಾಡುತ್ತಾ ಬಂದಿದೆ. ಇದರನ್ವಯ ನಿರಂತರವಾಗಿ ವಿಚಾರ ಸಂಕಿರಣ, ಉಪನ್ಯಾಸ ಹಾಗೂ ವೆಂಕಟರಾಯರ ಸಾಹಿತ್ಯದ ಪ್ರಕಟಣೆಗಳನ್ನು ಮಾಡುತ್ತಿದೆ. ಈಗ ಮತ್ತೆ ಕನ್ನಡಿಗರಿಗೆ ಎಕೀಕರಣದ ಅರಿವು ಮೂಡಿಸಿದ ಮಹತ್ವದ ಗ್ರಂಥ ಕರ್ನಾಟಕ ಗತವೈಭವ ಪ್ರಕಟಿಸುವ ಮೂಲಕ ಮತ್ತೊಮ್ಮೆ ಜನರ ಕೈಗೆ ಈ ಗ್ರಂಥ ಸಿಗಲಿ ಎಂಬ ಆಶಯದೊಂದಿಗೆ ಪ್ರತಿಷ್ಠಾನವು ಇದನ್ನು ಪ್ರಕಟಿಸುತ್ತಿದೆ.\u003c\/p\u003e\n\u003cp\u003e-ಡಾ|| ಪ್ರಮೋದ. ಗಾಯಿ (ಅಧ್ಯಕ್ಷರು ಆಲೂರು ವೆಂಕಟರಾವ ಪ್ರತಿಷ್ಠಾನ ಧಾರವಾಡ)\u003c\/p\u003e","brand":"Aluru Venkatarayaru","offers":[{"title":"Default Title","offer_id":46326892855555,"sku":"HB00005121","price":140.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KarnatakaGatavaibhava.jpg?v=1737195050"},{"product_id":"rakshaka-anaatha-collection-of-essays-vasudhendra-kannada-book","title":"ರಕ್ಷಕ ಅನಾಥ","description":"\u003cp\u003eಇನ್ನೂರಕ್ಕೂ ಹೆಚ್ಚು ಪಟಗಳನ್ನು ಮನೆ ಕೊಂಡವರು ನನಗೆ ತಂದು ಕೊಟ್ಟರು. ಒಂದೊಂದೇ ಪಟವನ್ನು ನೋಡಿದಾಗಲೂ ನುಗ್ಗಿ ಬರುವ ನೆನಪುಗಳು. ಆದರೆ ಅವುಗಳನ್ನು ರಕ್ಷಿಸುವದಾದರೂ ಹೇಗೆ? ನಮ್ಮ ಬದುಕನ್ನು ಅಪ್ಪಣೆ ಕೊಟ್ಟು ನಡೆಸಿದ ಈ ದೇವಾನುದೇವತೆಗಳು, ಹಿರಿಯರು ನನ್ನ ಕಡೆ ಅಸಹಾಯಕ ದೃಷ್ಟಿಯಿಂದ \"ಹೇಗಾದರೂ ಕಾಪಾಡು\" ಎಂದು ಬೇಡಿಕೊಳ್ಳಲಾರಂಭಿಸಿದರು. ಉಗ್ರನರಸಿಂಹನ ಉಗುರುಗಳು ಮೊಂಡಾಗಿದ್ದವು. ಲಕ್ಷ್ಮಿಯ ಕೈಯಿಂದ ಸುರಿಯುವ ಬಂಗಾರದ ನಾಣ್ಯಗಳು ಹೊಳವು ಕಳೆದುಕೊಂಡಿದ್ದವು. ಸತ್ಯನಾರಾಯಣನ ಅಕ್ಕಪಕ್ಕದ ಬಾಳೆ ಎಲೆಗಳು ಬಾಡಿದ್ದವು, ಸೂರ್ಯದೇವರಿಗೆ ಗ್ರಹಣ ಹಿಡಿದಿತ್ತು.\u003c\/p\u003e","brand":"Vasudhendra","offers":[{"title":"Default Title","offer_id":47049571107075,"sku":"HB00005328","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RakshakaAnaatha.jpg?v=1753778408"},{"product_id":"aalu-endare-articles-santhoshkumar-mahendele-kannada-book","title":"ಅವಳು ಎಂದರೆ","description":"\u003cp\u003eಆಕೆ ಸಕಲ ಚರಾಚರಗಳ ನಡೆದಾಡುವ ಜೀವಂತ ದೇವರು..\u003c\/p\u003e\n\u003cp\u003eದೇವರನ್ನು ನೋಡಿದವರಿಲ್ಲ. ಸಾಧ್ಯವೂ ಇಲ್ಲ. ಜೀವಂತ ದೇವರನ್ನು ಆರಾಧಿಸಿದವರು ಮಾತ್ರ ಯಾವತ್ತೂ ನೋಯಲಿಲ್ಲ. ಆ ಪ್ರತಿರೂಪದ ಕೃಪೆಗೆ\u003c\/p\u003e\n\u003cp\u003eಒಳಗಾದವರು ಸ್ವರ್ಗ ಕಂಡಿದ್ದೂ ಸುಳ್ಳಲ್ಲ. ಅಮ್ಮ .. ಎನ್ನುವುದು ಬರೀ ಹೆಣ್ಣು ಅಥವಾ ತಾಯಿ ಸೂಚಕವಲ್ಲ. ಅದೊಂದು ಮನಸ್ಥಿತಿ. ಯಾವ ರೂಪದಲ್ಲೂ ಯಾವ ಕ್ಷಣದಲ್ಲೂ, ಎಂಥವರಲ್ಲೂ\u003c\/p\u003e\n\u003cp\u003eಉದ್ದವಾಗಬಲ್ಲ ಅವಗಾಹನೆಗೆ ಸಿಕ್ಕದ ಆರ್ದ ಮನಸ್ಸಿನ ಪ್ರತಿರೂಪ ಅದು.\u003c\/p\u003e\n\u003cp\u003eಹಾಗೆಂದು ಎಲ್ಲಾ ಹೆಣ್ಣು ಮಕ್ಕಳೂ ಅಮ್ಮಂದಿರಾ..? ಹಡೆದವರೆಲ್ಲರೂ ಅಮ್ಮಂದಿರಾ..? ಮಕ್ಕಳೆ ಆಗದಿದ್ದ ಹೆಣ್ಣೂ ಕೂಡಾ ಅಮ್ಮನೆನಿಸಿದಳಲ್ಲ. ಅವರೆಲ್ಲಾ ಯಾರು...? ಎಲ್ಲಾ ತಾಯಂದಿರೂ ಯಾಕೆ ಅಮ್ಮಂದಿರಾಗಲಿಲ್ಲ..?\u003c\/p\u003e\n\u003cp\u003eಅಮ್ಮಾ.. ಎಂಬ ಧ್ವನಿಸುವಿಕೆಗೆ ಸಮಾನಾರ್ಥಕ ಪದ ಇಲ್ಲವಲ್ಲ..? ಹುಟ್ಟಲೆ\u003c\/p\u003e\n\u003cp\u003eನಾನು ಆಕೆಯನ್ನು ಅಮ್ಮ ಎನ್ನುವುದಕ್ಕಿಂತಲೂ ಮಿಗಿಲಾದ ವ್ಯಾಪ್ತಿಗೊಳಪಡಿಸಿ ಹುಡುಕಲೆತ್ನಿಸಿದ್ದೇನೆ.\u003c\/p\u003e\n\u003cp\u003eಕಾರಣ\u003c\/p\u003e\n\u003cp\u003eಅವಳು ಎಂದರೆ...\u003c\/p\u003e\n\u003cp\u003e-ಸಂತೋಷಕುಮಾರ ಮೆಹೆಂದಳೆ.\u003c\/p\u003e","brand":"Santosh Kumar Mehandele","offers":[{"title":"Default Title","offer_id":47776902480131,"sku":"HB00006259","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AvaluEndare_67ee7527-a41b-49aa-8706-4c51432b3ac4.png?v=1771737489"},{"product_id":"tadavaagi-bidda-male-stories-santhoshkumar-mahendele-kannada-book","title":"ತಡವಾಗಿ ಬಿದ್ದ ಮಳೆ","description":"\u003cp\u003e\u003cstrong\u003eತಡವಾಗಿ ಬಿದ್ದ ಮಳೆ\u003c\/strong\u003e ಪ್ರಕಟಿತ ಕಥೆಗಳ ಸಂಕಲನವಾಗಿದ್ದು, ಮಾನವ ಜೀವನದ ವಿವಿಧ ಮುಖಗಳನ್ನು ಆಳವಾಗಿ ಅನಾವರಣಗೊಳಿಸುವ ಕಥೆಗಳನ್ನೊಳಗೊಂಡಿದೆ. ಈ ಸಂಕಲನದಲ್ಲಿನ ಪ್ರತಿಯೊಂದು ಕಥೆಯೂ ಬದುಕಿನ ನೈಜ ಅನುಭವಗಳು, ಸಾಮಾಜಿಕ ಸಂದರ್ಭಗಳು ಮತ್ತು ಮನಸ್ಸಿನ ಸೂಕ್ಷ್ಮ ಭಾವನೆಗಳನ್ನು ಸ್ಪರ್ಶಿಸುತ್ತದೆ.\u003c\/p\u003e\n\u003cp\u003eಗ್ರಾಮೀಣ ಹಾಗೂ ನಗರ ಜೀವನದ ವೈವಿಧ್ಯಮಯ ಹಿನ್ನೆಲೆಗಳಲ್ಲಿ ಸಾಗುವ ಕಥೆಗಳು ಸಾಮಾನ್ಯ ಜನರ ಹೋರಾಟ, ಆಶೆ, ನಿರಾಸೆ, ಪ್ರೀತಿ, ತ್ಯಾಗ ಮತ್ತು ಮೌಲ್ಯಗಳ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಹೇಳುತ್ತವೆ. “ತಡವಾಗಿ ಬಿದ್ದ ಮಳೆ” ಎಂಬ ಶೀರ್ಷಿಕೆ ಕಥೆಯಂತೆಯೇ, ಬದುಕಿನಲ್ಲಿ ತಡವಾಗಿ ಬಂದರೂ ಆಶೆಯ ಬೆಳಕು ಹೇಗೆ ಮೂಡುತ್ತದೆ ಎಂಬ ಸಂದೇಶವನ್ನು ಸಂಕಲನ ಒಟ್ಟಾರೆಯಾಗಿ ಸಾರುತ್ತದೆ.\u003c\/p\u003e\n\u003cp\u003eಸರಳ ಮತ್ತು ಪರಿಣಾಮಕಾರಿ ಭಾಷಾಶೈಲಿ, ನೈಜ ಘಟನೆಗಳ ಸ್ಪರ್ಶ ಹಾಗೂ ಭಾವನಾತ್ಮಕ ನಿರೂಪಣೆ ಈ ಸಂಕಲನವನ್ನು ಓದುಗರ ಮನದಲ್ಲಿ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ. ಜೀವನದ ಸತ್ಯಗಳನ್ನು ಮನದಟ್ಟು ಮಾಡುವ ಚಿಂತನೆಗೆ ದಾರಿ ಮಾಡುವ ಕಥಾಸಂಕಲನ ಇದಾಗಿದೆ.\u003c\/p\u003e","brand":"Santosh Kumar Mehandele","offers":[{"title":"Default Title","offer_id":47776911196419,"sku":null,"price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1234567115906_170920201147836.jpg?v=1771740381"},{"product_id":"yaava-preetiyu-anaitikavalla-novel-santhoshkumar-mahendele-kannada-book","title":"ಯಾವ ಪ್ರೀತಿಯೂ ಅನೈತಿಕವಲ್ಲ","description":"\u003cp\u003eಯಾವ ಪ್ರೀತಿಯೂ ಅನೈತಿಕವಲ್ಲ ಒಂದು ಮನನೀಯ ಮತ್ತು ಭಾವನಾತ್ಮಕ ಕನ್ನಡ ಕಾದಂಬರಿಯಾಗಿದ್ದು, ಪ್ರೀತಿ, ಸಂಬಂಧಗಳು ಮತ್ತು ಸಮಾಜದ ಮೌಲ್ಯಗಳ ನಡುವಿನ ಸಂಘರ್ಷವನ್ನು ಆಳವಾಗಿ ಪರಿಶೀಲಿಸುತ್ತದೆ. ಈ ಕೃತಿಯಲ್ಲಿ ಲೇಖಕರು ಪ್ರೀತಿಯ ನಿಜಸ್ವರೂಪವನ್ನು ಪ್ರಶ್ನಿಸುತ್ತಾ, “ಅನೈತಿಕ” ಎಂದು ಗುರುತಿಸಲಾಗುವ ಸಂಬಂಧಗಳ ಹಿಂದಿನ ಮಾನವೀಯ ಅಂಶಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತಾರೆ.\u003c\/p\u003e\n\u003cp\u003eಕಥೆ ಸಮಾಜದ ಕಟ್ಟಳೆಗಳು, ಸಂಪ್ರದಾಯಗಳು ಮತ್ತು ವೈಯಕ್ತಿಕ ಭಾವನೆಗಳ ನಡುವೆ ಸಿಲುಕಿರುವ ಪಾತ್ರಗಳ ಬದುಕಿನ ಸುತ್ತ ಹೆಣೆದಿದೆ. ಪ್ರತಿಯೊಬ್ಬ ಪಾತ್ರವೂ ತನ್ನ ಹೃದಯದ ಮಾತು ಮತ್ತು ಸಮಾಜದ ನಿರೀಕ್ಷೆಗಳ ನಡುವೆ ತೊಳಲಾಡುತ್ತಿದ್ದು, ಪ್ರೀತಿಯ ಅರ್ಥವೇನು ಎಂಬ ಪ್ರಶ್ನೆಯನ್ನು ಓದುಗರ ಮುಂದಿಡುತ್ತದೆ.\u003c\/p\u003e\n\u003cp\u003eಸರಳವಾದರೂ ಪರಿಣಾಮಕಾರಿ ಭಾಷಾಶೈಲಿ, ಸಂವೇದನಾಶೀಲ ನಿರೂಪಣೆ ಮತ್ತು ಜೀವನದ ನೈಜ ಚಿತ್ರಣ ಈ ಕಾದಂಬರಿಯನ್ನು ವಿಶೇಷಗೊಳಿಸುತ್ತದೆ. “ಯಾವ ಪ್ರೀತಿಯೂ ಅನೈತಿಕವಲ್ಲ” ಎಂಬ ಶೀರ್ಷಿಕೆ ಪ್ರೀತಿ ಸ್ವತಃ ಪವಿತ್ರವಾದದ್ದು; ಅದನ್ನು ಅನೈತಿಕವೆಂದು ಕರೆಯುವುದು ಸಮಾಜದ ದೃಷ್ಟಿಕೋನವೇ ಹೊರತು ಪ್ರೀತಿಯ ಸ್ವರೂಪವಲ್ಲ ಎಂಬ ಗಾಢ ಸಂದೇಶವನ್ನು ಸಾರುತ್ತದೆ.\u003c\/p\u003e\n\u003cp\u003eಈ ಕಾದಂಬರಿ ಓದುಗರನ್ನು ಆತ್ಮಪರಿಶೀಲನೆಗೆ ಪ್ರೇರೇಪಿಸುವ ಜೊತೆಗೆ, ಪ್ರೀತಿ ಮತ್ತು ನೈತಿಕತೆಯ ಕುರಿತು ಹೊಸದಾಗಿ ಯೋಚಿಸಲು ಪ್ರೇರೇಪಿಸುತ್ತದೆ.Nov\u003c\/p\u003e","brand":"Santosh Kumar Mehandele","offers":[{"title":"Default Title","offer_id":47776934101251,"sku":"HB00006268","price":299.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/YaavaPreetiyuAnaitikavalla_f15c393b-6e20-4eac-b20b-edd1b7f5d086.jpg?v=1771742988"}],"url":"https:\/\/harivubooks.com\/collections\/historical-fictions-and-non-fictions.oembed?page=2","provider":"Harivu Books","version":"1.0","type":"link"}