{"title":"Harivu Thriller Books","description":"","products":[{"product_id":"pathala-garadi-kannada-book","title":"ಪಾತಾಳ ಗರಡಿ","description":"\u003cp\u003e\u003cspan class=\"s1\"\u003e\u003cspan class=\"Apple-converted-space\"\u003eವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ವಾಸುದೇವ್ ಮೂರ್ತಿ ಅವರು, ಒಬ್ಬ ಅತ್ಯುತ್ತಮ ಬರಹಗಾರರೂ ಆಗಿದ್ದಾರೆ. 25 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ದುಡಿದ ಅನುಭವವುಳ್ಳ ಇವರು ಒಬ್ಬ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ನಡವಳಿಕೆ ವಿಶ್ಲೇಷಕರಾಗಿದ್ದಾರೆ. ಕ್ರೈಮ್ ಥ್ರಿಲ್ಲರ್‌ಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ಇವರ ಹಲವಾರು ಕಿರುಗತೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕೃತಿ, “ದಿ ಪರ್ಫೆಕ್ಟ್ ಮರ್ಡರ್” ಬಹಳಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. \u003c\/span\u003e\u003c\/span\u003e\u003c\/p\u003e\n\u003cp\u003e\u003cspan class=\"s1\"\u003e\u003cspan class=\"Apple-converted-space\"\u003eಹರಿವು ಬುಕ್ಸ್‌ನಿಂದ ಪ್ರಕಟವಾದ “ಪಾತಾಳ ಗರಡಿ” ಪುಸ್ತಕವು, 7 ಬಗೆಬಗೆಯ ಥ್ರಿಲ್ಲರ್ ಕತೆಗಳ ಗೊಂಚಲು. ಈ ಕತೆಗಳು ರೋಚಕ ಬರವಣಿಗೆಯ ಶೈಲಿಯಿಂದ ಓದುಗರಿಗೆ ಥ್ರಿಲ್ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ. \u003c\/span\u003e\u003c\/span\u003eಅವರ\u003cspan class=\"s1\"\u003e \u003c\/span\u003eಬರವಣಿಗೆಯ\u003cspan class=\"s1\"\u003e \u003c\/span\u003eಶೈಲಿ\u003cspan class=\"s1\"\u003e \u003c\/span\u003eಓದುಗರನ್ನು\u003cspan class=\"s1\"\u003e \u003c\/span\u003eಮಂತ್ರಮುಗ್ಧಗೊಳಿಸುತ್ತದೆ\u003cspan class=\"s1\"\u003e. \u003c\/span\u003eಅಡಿಗಡಿಗೆ\u003cspan class=\"s1\"\u003e \u003c\/span\u003eಕುತೂಹಲದ\u003cspan class=\"s1\"\u003e \u003c\/span\u003eಕಡಲಿಗೆ\u003cspan class=\"s1\"\u003e \u003c\/span\u003eನೂಕಿ\u003cspan class=\"s1\"\u003e, \u003c\/span\u003eಊಟ\u003cspan class=\"s1\"\u003e \u003c\/span\u003eನಿದ್ದೆ\u003cspan class=\"s1\"\u003e \u003c\/span\u003eಬಿಟ್ಟು\u003cspan class=\"s1\"\u003e \u003c\/span\u003eಓದುವಂತೆ\u003cspan class=\"s1\"\u003e \u003c\/span\u003eಮಾಡುವ\u003cspan class=\"s1\"\u003e \u003c\/span\u003eಗುಣ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಕತೆಗಳಿವೆ\u003cspan class=\"s1\"\u003e. \u003c\/span\u003eಪತ್ತೇದಾರಿ\u003cspan class=\"s1\"\u003e \u003c\/span\u003eಕತೆಗಳನ್ನು\u003cspan class=\"s1\"\u003e \u003c\/span\u003eಓದುವ\u003cspan class=\"s1\"\u003e \u003c\/span\u003eಪ್ರತಿಯೊಬ್ಬರಿಗೂ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಪುಸ್ತಕ\u003cspan class=\"s1\"\u003e \u003c\/span\u003eಖಂಡಿತ\u003cspan class=\"s1\"\u003e \u003c\/span\u003eಇಷ್ಟವಾಗಲಿದೆ\u003cspan class=\"s1\"\u003e.\u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Vasudev Murthy","offers":[{"title":"Default Title","offer_id":47068458516739,"sku":"PHB0000001","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Paatala_Garadi_54dc16a3-4883-4a15-8614-4200475a950c.jpg?v=1777636218"},{"product_id":"the-perfect-murder-kannada-book","title":"ದಿ ಪರ್ಫೆಕ್ಟ್ ಮರ್ಡರ್","description":"\u003cp\u003eಸಣ್ಣ ಕಥೆಗಳ ಪ್ರಾಕಾರವೇ ಹಾಗೆ, ಅಲ್ಪ ಸಮಯದಲ್ಲಿ ಓದುಗರನ್ನು ಉತ್ತುಂಗಕ್ಕೆ ಕರೆದೊಯ್ದು, ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲಿ ಕೆಲವೇ ಕಥಾಪಾತ್ರಗಳಲ್ಲಿ ಒಂದು ಇಡೀ ಕಥೆಯನ್ನು ಹೇಳಬೇಕು. ಆ ಕಥೆಯ ವಿಸ್ತಾರ, ಪಾತ್ರಗಳು, ಅವುಗಳ ಮುಖಾಂತರ ಹೇಳಬೇಕಾದ ವಿಷಯಗಳು, ಎಲ್ಲವೂ ಒಂದು ಚೌಕಟ್ಟಿನಲ್ಲಿಯೇ ಕೂರಿಸಬೇಕು. ಆ ಕಥೆಗಳು, ಪತ್ತೇದಾರಿ ಕಥೆಗಳಾದರೆ ಕಥೆಯಲ್ಲಿನ ಕುತೂಹಲ ಮತ್ತು ಕಥೆಯ ವೇಗ ಮತ್ತು ಕಥೆಯ ಅಂತ್ಯ ಅತೀ ಮುಖ್ಯ\u003cbr data-mce-fragment=\"1\"\u003e\u003cbr data-mce-fragment=\"1\"\u003eಆದರೆ `ದಿ ಪರ್ಫೆಕ್ಟ್ ಮರ್ಡರ್' ನಲ್ಲಿ ಬರುವ ಎಲ್ಲಾ ಕಥೆಗಳನ್ನು ಪತ್ತೇದಾರಿ ಕಥೆಗಳು ಅನ್ನುವ ಬದಲು, ಥ್ರಿಲ್ಲರ್ ಕಥೆಗಳು ಅನ್ನುವ ಪದ ಬಳಸಲಾಗಿದೆ. ಇದರ ಉದ್ದೇಶ ಈ ಕಥಾ ಗುಚ್ಚದಲ್ಲಿ ಇರುವ ಎಲ್ಲಾ ಕಥೆಗಳೂ ಕೊಲೆ ಮಾಡಿದ ಅಪರಾಧಿಯನ್ನು ಕಂಡು ಹಿಡಿಯುವುದು ಎನ್ನುವ ಸೂತ್ರಕ್ಕೆ ಬಂಧಿಸಿಕೊಂಡಿಲ್ಲ. ಇಲ್ಲಿ ಬರೆದಿರುವ ಕಥೆಗಳಲ್ಲಿ, ಅಪರಾಧ ಎನ್ನುವ ತಳಹದಿಯಲ್ಲಿ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹಮದ, ಮಾತ್ಸರ್ಯ ಎಂಬ ಭಾವನೆಗಳೂ ಬೆರೆತುಕೊಂಡಿವೆ.\u003cbr data-mce-fragment=\"1\"\u003e\u003c\/p\u003e\n\u003cp data-mce-fragment=\"1\"\u003e\u003cbr\u003e\u003c\/p\u003e\n\u003cp\u003e\u003cbr data-mce-fragment=\"1\"\u003e-ವಾಸುದೇವ ಮೂರ್ತಿ\u003c\/p\u003e","brand":"Vasudev Murthy","offers":[{"title":"Default Title","offer_id":47404218941699,"sku":"PHB0000020","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/The_Perfect_Murde_Demi_Cover_page-0001_1_1.jpg?v=1771852043"},{"product_id":"baananchina-aache-kannada-books","title":"ಬಾನಂಚಿನ ಆಚೆ","description":"\u003cp\u003eವೈಜ್ಞಾನಿಕ ಕತೆಗಳನ್ನು ಹಲವರು ಕಟ್ಟುಕತೆ, ಭ್ರಮಾಲೋಕದ ವೃತ್ತಾಂತಗಳು ಎಂದು ನಿರ್ಧರಿಸಿರುತ್ತಾರೆ. ಇನ್ನು ಕೆಲವರಿಗೆ ವಿಜ್ಞಾನವನ್ನು ಕಲಿತವರಿಗೆ ಮಾತ್ರ ಈ ಕಥೆಗಳು ಅರ್ಥವಾಗುತ್ತವೆ ಎಂಬ ತಪ್ಪು ಪರಿಕಲ್ಪನೆ ಇದೆ. ಬಹುಶಃ ಈ ಕಾರಣಕ್ಕೆ, ಈ ಪ್ರಕಾರದ ಕತೆಗಳು ಬೆಂಗಾಲಿ ಹಾಗೂ ಮರಾಠಿಯಲ್ಲಿ ಜನಪ್ರಿಯವಾದಷ್ಟು ಕನ್ನಡದಲ್ಲಿ ಆಗಿಲ್ಲವೇನೋ. ನಮ್ಮ ದಿನನಿತ್ಯದ ಜೀವನದಲ್ಲಿ ವಿಜ್ಞಾನದ ಆವಿಷ್ಕಾರಗಳಿಂದ ಅದೆಷ್ಟು ಅನುಕೂಲವಾಗಿದೆ. ಆದರೆ ಅವುಗಳನ್ನು ಬಹಳ ಸಹಜವೆಂದು, ಅದರ ಹಿಂದಿನ ಶ್ರಮ, ಬೆವರು, ತ್ಯಾಗಗಳನ್ನು ಮರೆತೇ ಹೋಗಿದ್ದೇವೆ! ವಿಜ್ಞಾನದ ಸಾಧ್ಯತೆ ಆಗಾಧ. ಪ್ರತಿದಿನವೂ ಹೊಸ ಪರಿಕಲ್ಪನೆ, ಹೊಸ ಆವಿಷ್ಕಾರ ಆಗುತ್ತಲೇ ಇರುತ್ತದೆ. ಹೀಗೆ ನಿರಂತರವಾಗಿ ತನ್ನ ಹರಿವನ್ನು ಹೆಚ್ಚಿಸುತ್ತಾ ಹೋಗುವ ಕ್ಷೇತ್ರದಲ್ಲಿ ಹಲವು ಕೂತುಹಲ ಭರಿತ ಪರಿಕಲ್ಪನೆಗಳು ಮನಸಿಗೆ ಬರುವುದು ಸಹಜ. ಅಂತಹ ಕೆಲವು ಕಲ್ಪನೆಗಳ ಬಗ್ಗೆ ಮತ್ತಷ್ಟು ಚಿಂತಿಸಿ, ಇನ್ನಷ್ಟು ಓದಿ, ತಿಳಿದುಕೊಂಡು, ಕತೆಗಳ ರೂಪದಲ್ಲಿ ತಿಳಿಸಲು ಪ್ರಯತ್ನಿಸಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಭವಿಷ್ಯತ್ತಿನ ಕಥೆಗಳನ್ನು ಬರೆಯುವುದೆಂದರೆ, ದಿಗಂತವನ್ನು ನೋಡಿ, ಅನುಭವಿಸಿದ ಹಾಗೆ! ದಿಗಂತದತ್ತ ನಡೆದಷ್ಟೂ, ಅದು ಮತ್ತಷ್ಟು ದೂರ ಸರಿದು, ಇನ್ನಷ್ಟು ವಿಸ್ತರಿಸಿಕೊಂಡು, ನಮ್ಮನ್ನು ಪ್ರಚೋದಿಸುತ್ತಲೇ ಇರುತ್ತದೆ. ರೋಚಕತೆ, ವಿಸ್ಮಯ ಹಾಗೂ ಜ್ಞಾನಗಳನ್ನು ಹೆಚ್ಚಿಸುವ ತಾಣವೇ ಆ ಬಾನಂಚು!!\u003c\/p\u003e","brand":"Dr. Shantala","offers":[{"title":"Default Title","offer_id":43462250135811,"sku":"PHB000007","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-10-27at10.37.52AM_2.jpg?v=1666848465"},{"product_id":"devaragalu-moore-genu-novel-dr-shantala-harivu-publication","title":"ದೇವರಾಗಲು ಮೂರೇ ಗೇಣು","description":"ಸಾಮಾಜಿಕ, ರೋಚಕ, ಐತಿಹಾಸಿಕ ಕಾದಂಬರಿಗಳು ಕನ್ನಡಕ್ಕೆ ಹೊಸತಲ್ಲ. ಈ ಬಗೆಯ ಕಾದಂಬರಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪರಿ ಮೆಚ್ಚುವಂಥದ್ದು, ಇದೀಗ ವೈಜ್ಞಾನಿಕ ಕಾದಂಬರಿಗಳು ಕನ್ನಡದಲ್ಲಿ ಅಲ್ಲಲ್ಲಿ ಸದ್ದು ಮಾಡುತ್ತಿರುವುದು ಕೂಡ ಸ್ವಾಗತಾರ್ಹ. ಈ ಬಗೆಯ ಕಾದಂಬರಿಗಳು ಕನ್ನಡದಲ್ಲಿ ಹೇರಳವಾಗಿ ಬಂದಷ್ಟು ಹೊಸ ತಲೆಮಾರಿನವರನ್ನು ಓದಿನತ್ತ ಸೆಳೆಯಬಹುದು. ಸದ್ಯಕ್ಕೆ ಈ ಬಗೆಯ ಪುಸ್ತಕಗಳು ಅಪರೂಪದಲ್ಲಿ ಅಪರೂಪ ಎಂಬಂತೆ ಇವೆ. ಆದರೆ ಈ ಕೊರತೆಯನ್ನು ನೀಗಿಸುವ ಒಂದು ಪ್ರಯತ್ನವನ್ನು ಡಾ. ಶಾಂತಲ ಅವರು ಮಾಡಿದ್ದಾರೆ. `ದೇವರಾಗಲು ಮೂರೇ ಗೇಣು' ಒಂದು ಅಪರೂಪದ ವೈಜ್ಞಾನಿಕ ಕಾದಂಬರಿ, ಸುಲಭವಾಗಿ ಓದಿಸಿಕೊಂಡು ಹೋಗುವ, ಕುತೂಹಲವನ್ನು ಕಾಯ್ದುಕೊಳ್ಳುವ, ವಿಜ್ಞಾನದ ಹಿನ್ನೆಲೆ ಇರದ ಸಾಮಾನ್ಯ ಓದುಗನೂ ಸರಳವಾಗಿ ಓದಬಹುದಾದ ಅದ್ಭುತ ಕಾದಂಬರಿ ಇದಾಗಿದೆ. ವಿಷಯವನ್ನಿಟ್ಟುಕೊಂಡು, ಇಷ್ಟೊಂದು ಸರಳವಾಗಿ ಪುಸ್ತಕವೊಂದನ್ನು ಬರೆಯಬಲ್ಲ ಡಾ. ಶಾಂತಲ ಅವರ ಪ್ರತಿಭೆಯನ್ನು ಮೆಚ್ಚಲೇ ಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಐವಿಎಫ್ ತಂತ್ರಜ್ಞಾನವು ಅಗಾಧವಾದ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಈ ಐವಿಎಫ್ ತಂತ್ರಜ್ಞಾನದ ಎಳೆಯನ್ನು ಇಟ್ಟುಕೊಂಡು ಡಾ. ಶಾಂತಲ ಅವರು ಸೊಗಸಾದ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಹೊಸ ಬಗೆಯ ಕಾದಂಬರಿ ಒಂದನ್ನು ನೀವು ಓದಲು ಬಯಸಿದ್ದರೆ, ಹಾಗೂ ಮೊಟ್ಟ ಮೊದಲಬಾರಿಗೆ ಒಂದು ಪುಸ್ತಕವನ್ನು ಓದಬೇಕು ಎಂದು ಮನಸ್ಸು ಮಾಡಿದ್ದರು ದೇವರಾಗಲು ಮೂರೇ ಗೇಣು ನಿಮಗೆ ಹೇಳಿಮಾಡಿಸಿದ ಪುಸ್ತಕವಾಗಿದೆ.\u003cbr\u003e\u003cbr\u003eಡಾ। ಕಾಮಿನಿ. ಎ. ರಾವ್\u003cbr\u003e\u003cbr\u003eಪದ್ಮಶ್ರೀ ಪುರಸ್ಕೃತರು\u003cbr\u003e\u003cbr\u003eಸಂಸ್ಥಾಪಕ ನಿರ್ದೇಶಕರು\u003cbr\u003e\u003cbr\u003eಮೆಡ್‌ಲೈನ್ ಆಕಾಡೆಮಿಕ್ಸ್, ಬೆಂಗಳೂರು","brand":"Dr. Shantala","offers":[{"title":"Default Title","offer_id":43865733398787,"sku":"PHB0000014","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1771575438248-ae1011f2-0f5f-4275-888d-fa82bdb6322d_1_1.png?v=1771575605"},{"product_id":"aralagodu-novel-kannada-books","title":"ಅರಳಗೋಡು - ರೋಚಕ ಕಾದಂಬರಿ","description":"\u003cp\u003e1980ರ ದಶಕದ ಮಲೆನಾಡಿನ ಹಿನ್ನಲೆಯ ರೋಚಕ ಕಾದಂಬರಿ ಇದು. ಕೃಷ್ಣ ಭಟ್ ಕಾಶಿ ಅವರು ಈ ಕಾದಂಬರಿಯನ್ನು ಬರೆದದ್ದು ಕೂಡ ಅದೇ ಕಾಲಘಟ್ಟದಲ್ಲಿ. ತನ್ನ 20ರ ಹರೆಯದಲ್ಲಿ ಬರವಣಿಗೆಯನ್ನು ಆರಂಭಿಸಿದ ಕೃಷ್ಣ ಭಟ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೋಕಿನ ಅರಳಗೋಡು ಊರಿನ ಆಸುಪಾಸಿನಲ್ಲೇ ನೆಲೆಸಿದವರು. ತನ್ನ ನೆಲೆಯೂರಿನ ಪರಿಸರವನ್ನೇ ಕತೆಗೆ ಆಯ್ದುಕೊಂಡು, ಆ ಕಾಲಘಟ್ಟದಲ್ಲಿ ಮಲೆನಾಡನ್ನು ಇನ್ನಿಲ್ಲದಂತೆ ಕಾಡಿದ ಶ್ರೀಗಂಧದ ಕಳ್ಳ ಸಾಗಾಣಿಕೆ ಹಾಗೂ ಒತ್ತುವರಿಯಂತಹ ವಿಷಯಗಳನ್ನು ಬಳಸಿಕೊಂಡು ಮೈನವಿರೇಳಿಸುವಂತಹ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. 1980ರ ಆಸುಪಾಸಿನಲ್ಲಿ ಶರಾವತಿ ಹಿನ್ನೀರಿನ ತಪ್ಪಲ್ಲಿನಲ್ಲಿರುವ ಪುಟ್ಟ ಊರಾದ ‘ಅರಳಗೋಡು’ ಹೇಗಿದ್ದಿರಬಹುದು. ಬೇರೆ ಊರಿನಿಂದ ತನ್ನ ‘ಪತ್ರಮಿತ್ರೆ’ಯನ್ನು ಹುಡುಕಿಕೊಂಡು ಬಂದ 'ಮೂರ್ತಿ' ಅನ್ನುವ ಪಾತ್ರ ಆ ಊರಿನ ಜಾಲವೊಂದರಲ್ಲಿ ಸಿಕ್ಕಿಬೀಳುವುದಾದರೂ ಹೇಗೆ? ಹೀಗೇ ಸಿಕ್ಕಿ ಹಾಕಿಕೊಂಡವನು ಎಲ್ಲವನ್ನೂ ಭೇದಿಸಿ ಹೊರಬಹುತ್ತಾನಾ? ಎಂಬ ರೋಚಕ ಎಳೆಯನ್ನು ಇಟ್ಟುಕೊಂಡು ಹೆಣೆಯಲಾದ ಕತೆಯೇ ‘ಅರಳಗೋಡು’!\u003c\/p\u003e\n\u003cp\u003e80ರ ದಶಕದಲ್ಲಿ, ದೀಪದ ಬೆಳಕಿನಲ್ಲೇ ಈ ಇಡೀ ಕಾದಂಬರಿ ಹಾಳೆಯಲ್ಲಿ ಮೂಡಿಬಂತು ಎನ್ನುವುದೇ ವಿಶೇಷ! ಇಡೀ ಕಾದಂಬರಿಯನ್ನು ನೀವು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು. ಅಷ್ಟು ಸರಾಗವಾಗಿ ಓದಿಸಿಕೊಂಡು ಹೋಗುವುದು, ಜೊತೆಗೆ ಮುಂದೇನಾಗಬಹುದು ಎಂಬ ಕುತೂಹಲ ನಿಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ. ಒಂದು ಪತ್ತೇದಾರಿ ಇಲ್ಲವೇ ರೋಚಕ ಕಾದಂಬರಿಗೆ ಇರಬೇಕಾದ ಎಲ್ಲಾ ಸರಕುಗಳು ನಿಮಗೆ ಕಾದಂಬರಿಯಲ್ಲಿ ಕಂಡುಬರುವುದರಿಂದ ಓದಿನಿಂದ ಸಿಗುವ ಸಂತೃಪ್ತಿಗೆ ಯಾವ ಕಡಿಮೆಯೂ ಆಗದು! ಸುಮಾರು ನಲವತ್ತು ವರ್ಷಗಳ ಬಳಿಕ, ಹಾಳೆಯಲ್ಲಿ ಅರೆ ಮಾಸಿಹೋದ ಅಕ್ಷರಗಳಿಗೆ ಮರುಜೀವ ನೀಡಿ ಪುಸ್ತಕ ರೂಪ ಕೊಡಲಾಗಿದೆ. ಇಷ್ಟು ವರ್ಷಗಳ ಕಾಲ ಹಾಳೆಗಳನ್ನು ಭದ್ರವಾಗಿ ಕಾಪಾಡಿಕೊಂಡು ಬಂದ ಕೈಗಳಿಗೆ ಧನ್ಯವಾದ ಹೇಳಲೇ ಬೇಕು! ಈ ಕಾದಂಬರಿಯನ್ನು ಓದಿ ನೋಡಿ, ನಲವತ್ತು ವರ್ಷಗಳ ಹಿಂದೆ ಸಾಗಿ, ಮಲೆನಾಡಿನ ಒಂದು ರೋಚಕ ಕಥನಕ್ಕೆ ಸಾಕ್ಷಿಯಾಗಿ!       \u003cbr\u003e\u003c\/p\u003e\n\u003cp\u003e \u003c\/p\u003e","brand":"Krishna Bhat Kashi","offers":[{"title":"Default Title","offer_id":47404019777795,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Aralagodu_2nd_Edition.jpg?v=1772444099"},{"product_id":"swapnagiri-diaries-novel-pradachihna-harivu-books-kannada-book","title":"ಸ್ವಪ್ನಗಿರಿ ಡೈರೀಸ್","description":"\u003cp\u003eಒಂದು ಕಾದಂಬರಿಯಲ್ಲಿ ಏನೇನು ಇರಬೇಕು ಅಂತ ಹಸಿದ ಓದುಗನಾಗಿ ನಾನು ಬಯಸುತ್ತೇನೆಯೋ ಅದನ್ನೆಲ್ಲ ಈ ಕೃತಿಯಲ್ಲಿ ಪ್ರಮೋದ್ ತಂದಿದ್ದಾರೆ. ವಿಸ್ಮತಿ ಎಚ್ಚರಗಳ ನಡುವಿನ ಸುಷುಪ್ತಿಯಲ್ಲಿ ಸಾಗುವಂತೆ ಕಾಣುವ ಕಾದಂಬರಿ ನನ್ನನ್ನು ತನ್ಮಯಗೊಳಿಸಿತು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಜೋಗಿ\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ವಪ್ನವೇ ಎಚ್ಚರ ಎಂಬ ನಸುಬೆಚ್ಚಗಿನ ಸತ್ಯವನ್ನು ನಮ್ಮ ಮುಂದಿಡುವ ಕಾದಂಬರಿ ಇದು. ಸೀತೆಯನ್ನು ಹುಡುಕುತ್ತ ಹೋಗುವ ರಾಮ ಹುಡುಕಾಟದ ಅಂತ್ಯದಲ್ಲಿ ತನ್ನನ್ನು ತಾನೇ ಕಂಡುಕೊಳ್ಳುವಂತೆ ಇಲ್ಲಿನ ಕಥಾನಾಯಕ ಸ್ವಪ್ನಗಿರಿಯ ಬೆಟ್ಟದ ಊರಿನಲ್ಲಿ ತನ್ನನ್ನು ಕಂಡುಕೊಳ್ಳುತ್ತಾನೆ. ಮಂಜು ಕವಿದ ಮಸುಕು ಮಸುಕಾದ ಆವರಣದಲ್ಲಿ ನಡೆಯುವ ಇಲ್ಲಿನ ಘಟನೆಗಳು ತಮ್ಮ ಅಸ್ಪಷ್ಟತೆಯಿಂದಲೇ ನಮ್ಮೊಳಗಿನ ಸ್ಪಂದನದ ಬಿಂದುಗಳನ್ನು ಉದ್ದೀಪಿಸುತ್ತವೆ. ಸ್ಲೀಪ್ ಪ್ಯಾರಲಿಸಿಸ್, ಯಕ್ಷಗಾನ, ಅಮ್ಮನ ಕಥೆ, ಮಳೆ, ಕೆಂಪಿರುವೆ ಚಟ್ನಿ, ತುಂಗೆ, ಗಂಗಾವಿಶ್ವೇಶ್ವರ, ಜಾತ್ರೆ ಎಲ್ಲವೂ ಸೇರಿದ ಈ ಕಾದಂಬರಿ ಓದಿದ ನಂತರ ನಮ್ಮಲ್ಲಿ ಮರುಹುಟ್ಟು ಪಡೆಯಬಲ್ಲ ಗಾಢತೆಯನ್ನು ಹೊಂದಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಹರೀಶ ಕೇರ\u003cbr data-mce-fragment=\"1\"\u003e\u003cbr data-mce-fragment=\"1\"\u003eಮನಸ್ಸು ಅರಳಿಸುವ ಅಥವಾ ಕದಡಿಸುವ ಒಂದು ಸಾಲು ಹೊಳೆಯುವುದಕ್ಕೆ, ಕಣ್ಣಲ್ಲಿ ಉಳಿದುಬಿಡುವ ಒಂದು ಮ್ಯಾಜಿಕ್ ಮೊಮೆಂಟ್ ಸಂಭವಿಸುವುದಕ್ಕೆ ಜೀವನವಿಡೀ ಹುಡುಕಾಟ ನಡೆಯುತ್ತಿರುತ್ತದೆ. ಈ ಕಾದಂಬರಿ ಅಂಥದ್ದೊಂದು ಹುಡುಕಾಟದ ಪ್ರಯಾಣ. ಯಾವುದೋ ಒಂದು ಊರನ್ನು ಹುಡುಕುತ್ತಾ ಹೋದಾಗ ಮನಸ್ಸಿನಲ್ಲಿ ಅಡಗಿದ್ದ ಊರೊಂದು ಧುತ್ತನೆ ಎದುರಾಗುವಾಗಿನ ಅಚ್ಚರಿಯನ್ನು ಉಳಿಸಿಹೋಗುವ ಕಥೆ. ಹುಡುಕುತ್ತಾ ಅಲೆಯುತ್ತಾ ಮುಂದೆ ಸಾಗುವಾಗ ಅಂತರಂಗವನ್ನು ತೋರಿಸುವ ಕನ್ನಡಿಗೆ ಮುಖಾಮುಖಿಯಾಗಿಸುವ ಕಥನ, ರೋಚಕತೆ, ವೇಗದ ನಿರೂಪಣೆ, ಆಸಕ್ತಿಕರ ಪಾತ್ರಗಳು, ಹೊಸಕಾಲದ ಪರಿಭಾಷೆ, ಬೆರಗಾಗಿಸುವ ಇಮೇಜ್, ಮಾಯಕದ ದೃಶ್ಯಾವಳಿ, ಹಗುರಗೊಳಿಸುವ ಲವಲವಿಕೆ ಎಲ್ಲವನ್ನೂ ಧರಿಸಿರುವ ಸೊಗಸಾದ ಕಾದಂಬರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರಾಜೇಶ್ ಶೆಟ್ಟಿ\u003c\/p\u003e","brand":"Pramod Mohan Hegde","offers":[{"title":"Default Title","offer_id":44304799138051,"sku":"PHB0000021","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1efcee4b-98ec-4882-bef2-0d34008cb027.jpg?v=1697876282"},{"product_id":"huli-hejje-thriller-novel-vasudev-murthy-harivu-books-kannada-book","title":"ಹುಲಿ ಹೆಜ್ಜೆ","description":"\u003cp\u003e“ನಾನೆಂದೂ ರಾವಣನಾಗಲು ಬಯಸಿರಲಿಲ್ಲ ಸಾಂಬು, ನನ್ನ ಯುದ್ಧ ಯಾವತ್ತಿಗೂ ನನ್ನವರೊಂದಿಗೆ ಇರಲಿಲ್ಲ. ಆದರೆ ನೀನು ವಿಭೀಷಣ ಆದ ದಿನದಿಂದ ನನ್ನನ್ನು ಎಲ್ಲರೂ ರಾವಣ ಎಂದೇ ನೋಡ ತೊಡಗಿದರು. ಅಂದು ವಿಪ್ಲವದ ಮಾತುಗಳು ಮೊದಲ ಬಾರಿಗೆ ಬಂದಾಗ, ನೀನೇ ಸಾಹೇಬ್ ಆಗಬಹುದಿತ್ತು. ನನಗೆ ಅಂದು ಈ 'ಸಾಹೇಬ್' ಎನ್ನುವ ಪದವಿ ಬೇಡವಾಗಿತ್ತು. ನಾನೂ ನಿಮ್ಮಂತೆಯೇ ನನ್ನದೇ ಹೆಸರಿನಿಂದ ಹೋರಾಟ ಮಾಡಲು ಬಯಸಿದ್ದೆ.”\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಲೇಖಕರೊಂದಿಗಿನ ಮಾತುಕತೆ : \u003ca href=\"https:\/\/youtu.be\/KZ3C3mVsMqM\" title=\"Author's Interview\" target=\"_blank\"\u003ehttps:\/\/youtu.be\/KZ3C3mVsMqM\u003c\/a\u003e\u003c\/p\u003e","brand":"Vasudev murthy","offers":[{"title":"Default Title","offer_id":44408374231299,"sku":"PHB0000022","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HuliHejje.jpg?v=1779371075"},{"product_id":"sanchu-vanchanegala-lokadalli-collection-of-crime-articles-dr-mysuru-nagaraja-sharma-kannada-kannada-book","title":"ಸಂಚು ವಂಚನೆಗಳ ಲೋಕದಲ್ಲಿ","description":"\u003cp\u003eಪ್ರಸ್ತುತ ಕೃತಿಯಾದ ʻಸಂಚು ವಂಚನೆಗಳ ಲೋಕದಲ್ಲಿʼ  ಎಂಬ ಈ ಸಂಚಿಕೆಯಲ್ಲಿ ಸಮಾಜಕ್ಕೆ ಪಾಠವಾಗಬಹುದಾದ ಕೆಲವು ಸಂದರ್ಭಗಳನ್ನು ಲೇಖಕರಾದ ಡಾ.  ಮೈಸೂರು ನಾಗರಾಜ ಶರ್ಮಾರವರು ಆಸಕ್ತಿಕರವಾಗಿಯೇ ನಿರೂಪಿಸಿದ್ದಾರೆ ಎನ್ನಬೇಕು. ಸ್ವತ:  ಚಿತ್ರಕಲಾವಿದರು,  ಛಾಯಾಗ್ರಹಕರು ಹಾಗೂ ಲೇಖಕರೂ ಆದ ಡಾ. ಮೈ.ನಾ. ಶರ್ಮಾ ಅವರು ಎಂದಿನಂತೆ, ಈ ಕೃತಿಯಲ್ಲಿಯೂ ತಮ್ಮ ಎಲ್ಲಾ ಪ್ರತಿಭೆಗಳನ್ನೂ ಸಿಂಚನಗೊಳಿಸಿ ಪ್ರಸ್ತುತಪಡಿಸಿದ್ದಾರೆ. ಸತ್ಯಘಟನೆಗಳನ್ನು ನೀರಸವಾಗಿ ವಿವರಿಸದೆ, ಅದನ್ನು ಸ್ವಾರಸ್ಯಕರವಾದ ಒಂದು ಕಥಾರೂಪದಲ್ಲಿಯೇ ಸಮಾಜದ ಮುಂದಿಡುವ ಪ್ರಯತ್ನ ನಡೆಸಿದ್ದಾರೆ. ಪ್ರಾಚೀನ ಭಾರತೀಯ ನಿರೂಪಣೆಗಳಾದ;  ಹಿತೋಪದೇಶ,  ಪಂಚತಂತ್ರ ಹಾಗೂ ಕಾಕೋಲೋಕೀಯ ಮುಂತಾದ ಸಾಹಿತ್ಯಗಳಲ್ಲಿಯೂ ಇಂತಹುದೇ ಪಾಠ ಹಾಗೂ ರಂಜನೆಗಳ ಉಭಯ ಪ್ರಯತ್ನಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.  ಸಮಾಜವನ್ನು ಎಚ್ಚರಿಸುವ ಈ ದಿಸೆಯಲ್ಲಿಯೇ ರಚಿತವಾದ ಒಂದು ವಿಶೇಷ ಕೃತಿ ಡಾ. ಮೈ.ನಾ. ಶರ್ಮಾರಿಂದ ಹೊರಬರುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಲೇಖಕರ ಮಾತಿನಲ್ಲಿಯೇ ಹೇಳುವುದಾದರೆ, ಇದು ತಾವು ನೀಡುವ ʻಎಚ್ಚರಿಕೆಯ ಗಂಟೆಯೂʼ ಹೌದೆನ್ನುತ್ತಾರೆ. ಒಮ್ಮೆ ಜಾರಿಬಿದ್ದ ನೆಲದಲ್ಲಿ ಮತ್ತೊಮ್ಮೆ ಕಾಲೂರದಂತೆ ಎಚ್ಚರ ವಹಿಸಲು ಎಲ್ಲರೂ ಪ್ರಯತ್ನಿಸುತ್ತಾರಾದರೂ, ಸಮಾಜದಲ್ಲಿನ ಪಾಶವೀ ಮನಸ್ಸಿನವರಿಂದ ಇಂತಹ ಹೊಸ ಹೊಸ ʻಜಾರಿಕೆಯ ನೆಲಗಳುʼ ನಿರಂತರವಾಗಿ ರೂಪಿಸಲಾಗುತ್ತಿದ್ದು, ಮುಗ್ಧರನ್ನು ಹಳ್ಳಕ್ಕೆ ಬೀಳಿಸುವುದು ಈ ಅಮಾನವೀಯ ವರ್ಗದ ನಿತ್ಯ ಕಾಯಕವಾಗಿರುತ್ತದೆ. ಅಂತೆಯೇ,  ಈ  “ಜಾರು ಬಜಾರಿನ” ಚಟುವಟಿಕೆಗಳ ಬಗೆಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡುವ ಇಂತಹ ಕೆಲಸಗಳು ನಿರಂತರವಾಗಿ ಸಾಗುತ್ತಲೇ ಇರಬೇಕಾದುದೂ ಅಪೇಕ್ಷಣೀಯ- ಎಂಬುದು ಓರ್ವ ವಿ‍ಶ್ರಾಂತ ಪೋಲೀಸು ಅಧಿಕಾರಿಯಾದ ನನ್ನ ಅನಿಸಿಕೆಯೂ ಹೌದು!.\u003cbr\u003eಜೆ.ಬಿ. ರಂಗಸ್ವಾಮಿ,\u003cbr\u003eವಿಶ್ರಾಂತ ಪೋಲೀಸು ಅಧಿಕಾರಿ. (ಮುನ್ನುಡಿಯಿಂದ)\u003c\/p\u003e","brand":"Dr. Mysuru Nagaraja Sharma","offers":[{"title":"Default Title","offer_id":46085402460419,"sku":"PHB0000046","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/001.jpg?v=1730292136"},{"product_id":"havu-eni-ata-thriller-novel-vasudev-murthy-kannada-book","title":"ಹಾವು ಏಣಿ ಆಟ","description":"\u003cp\u003eಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು \"ಮೆಡಿಕೋ ಲೀಗಲ್ ಥ್ರಿಲ್ಲರ್\" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ, ನಮ್ಮ ಜೀವದ ಜೊತೆ, ಜೀವನದ ಜೊತೆ ಆಟವಾಡುವ ಫಾರ್ಮಾ ಲಾಬಿಯ ದುರಾಸೆಯಿದೆ. ಇದರ ಮಧ್ಯೆ ಅರಿತೊ ಅರಿಯದೆಯೋ ನಲುಗುವ ಜನರ ನೋವಿದೆ. ಆ ನೋವನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಾರ್ಥವಿದೆ. ಇವೆಲ್ಲದರ ವಿರುದ್ಧ ಕೋರ್ಟ್ನಲ್ಲಿ ನಡೆಸುವ ಹೋರಾಟವಿದೆ.\u003c\/p\u003e\n\u003cp\u003eಸತ್ಯ ಅನ್ನುವುದು ನಮ್ಮ ನಮ್ಮ ದೃಷ್ಟಿಕೋನವಷ್ಟೇ. ನಮ್ಮ ಕಣ್ಣಿಗೆ ಕಂಡಿದ್ದು, ನಾವು ತಿಳಿದಿರುವುದು ಅಥವಾ ನಾವು ತಿಳಿಯಲೆಂದೇ ಕೊಡುವ ಮಾಹಿತಿಗಳು ಮಾತ್ರವೇ ಸತ್ಯವಲ್ಲ. ಒಮ್ಮೆ ಶೋಧಿಸಲು ಮುಂದಾದಾಗ ಆ ಸತ್ಯದ ಪರದೆಯ ಹಿಂದೆ ಅಡಗಿರುವ ಇನ್ನೊಂದು ಸತ್ಯ ನಮ್ಮ ಮುಂದೆ ಧುತ್ತನೆ ಬಂದು ನಿಂತಾಗ ಅದು ನಮ್ಮ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿ ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ.\u003c\/p\u003e\n\u003cp\u003e- ಲೇಖಕರು\u003c\/p\u003e","brand":"Vasudev Murthy","offers":[{"title":"Default Title","offer_id":46729190801667,"sku":"PHB0000061","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/111_1_1.png?v=1744033179"},{"product_id":"chaduranga-thriller-novel-vasudev-murthy-kannada-book","title":"ಚದುರಂಗ","description":"\u003cp data-path-to-node=\"2\"\u003e\"ಮನುಷ್ಯ ಬೇಕಾದ ರೀತಿಯಲ್ಲಿ ಮಾಯವಾಗಬಲ್ಲ. ಹೊಸ ಜಾಗ, ಹೊಸ ಗುರುತು (Identity), ಹೊಸ ಪರಿಚಯ - ಹೀಗೆ ಎಲ್ಲರಿಂದ ದೂರವಾಗಿ ಹೊಸ ಜೀವನ ಪ್ರಾರಂಭಿಸಿ ಹಳೆಯದನ್ನೆಲ್ಲಾ ಮುಚ್ಚಿ ಹಾಕಬಲ್ಲ. ಆದರೆ ಹಣ ಹಾಗಲ್ಲ; ಅದು ಒಮ್ಮೆ ತನ್ನ ಪ್ರಯಾಣ ಪ್ರಾರಂಭಿಸಿದರೆ, ಎಲ್ಲಿಂದ ಹೊರಡುತ್ತದೆಯೋ, ಎಲ್ಲೆಲ್ಲಿ ನಿಲ್ಲುತ್ತದೆಯೋ ಅಲ್ಲೆಲ್ಲಾ ತನ್ನ ಛಾಪನ್ನು ಮೂಡಿಸಿಯೇ ಮುಂದೆ ಹೋಗುತ್ತದೆ. ಅದನ್ನು ಹುಡುಕುವ ತೀಕ್ಷ್ಣ ನೋಟ, ತಾಳ್ಮೆ ಹಾಗೂ ಛಲ ಬೇಕು. ಎಲ್ಲರೂ ಹಣ ಬೇಕು ಅಂತ ನಾಗರೆ ಹಿಂದೆ ಬಿದ್ದರು, ಆದರೆ ನಾನು ನಾಗರೆ ಬೇಕು ಅಂತ ಹಣದ ಹಿಂದೆ ಬಿದ್ದೆ. ನಾಲ್ಕು ವರ್ಷ! ಅವನ ಒಂದೊಂದು ವ್ಯವಹಾರವನ್ನೂ ಪರಿಶೀಲಿಸುತ್ತಾ ಅದರ ಮೂಲ ಹುಡುಕಿದಾಗ ಸಾಮಾನ್ಯವಾಗಿ (Common ಆಗಿ) ಕಂಡುಬಂದಿದ್ದು ಬೆಂಗಳೂರು...\"\u003c\/p\u003e\n\u003cp data-path-to-node=\"3\"\u003e\"ಯು ಆರ್ ಜೀನಿಯಸ್ ಭೂಷಣ್!\"\u003c\/p\u003e\n\u003cp data-path-to-node=\"4\"\u003e\"ಜೀನಿಯಸ್ ನಾನಲ್ಲ... ನಾನು ಅವನು ಬಿಟ್ಟು ಹೋದ ಕ್ಯೂಗಳನ್ನು (Clues) ಹುಡುಕಿಕೊಂಡು ಹೋದೆ ಅಷ್ಟೇ. ಆದರೆ 6,500 ಕೋಟಿ ಹಣವನ್ನು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಮಾಯ ಮಾಡಿ, ತಾನೂ ಮಾಯವಾಗಿದ್ದಾನಲ್ಲ... ಅವನು ಜೀನಿಯಸ್. ನನ್ನ ಕೆಲಸ ಅವನನ್ನು ಹಿಡಿಯುವುದು ಮಾತ್ರ.\"\u003c\/p\u003e","brand":"Vasudev Murthy","offers":[{"title":"Default Title","offer_id":47666848334083,"sku":"PHB0000076","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ChadurangaCovercopy_1.jpg?v=1769060835"}],"url":"https:\/\/harivubooks.com\/collections\/harivu-thriller-books.oembed","provider":"Harivu Books","version":"1.0","type":"link"}